Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BIG NEWS : ರಾಜ್ಯ `ಸರ್ಕಾರಿ ನೌಕರರೇ’ ಗಮನಿಸಿ : ಕೆಲಸದ ವೇಳೆ ಈ ನಿಯಮಗಳ ಪಾಲನೆ ಕಡ್ಡಾಯ!

ರಾಜ್ಯದ ರೈತರಿಗೆ ಗುಡ್ ನ್ಯೂಸ್: `ಕಾಲು ದಾರಿ, ಬಂಡಿದಾರಿ’ ಸಮಸ್ಯೆಗೆ ಸರ್ಕಾರದಿಂದ ಪರಿಹಾರ.!

ಪರಿಷತ್ ಚುನಾವಣೆ ಹಿನ್ನೆಲೆ : ಕಾಂಗ್ರೆಸ್ ನಲ್ಲಿ ಶುರುವಾಯ್ತು ರೆಸಾರ್ಟ್ ರಾಜಕಾರಣ : ನಾಳೆ ಸಿಎಂ ಡಿಕೆಶಿ ನೇತೃತ್ವದಲ್ಲಿ CLP ಸಭೆ!

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ಕೇರಳಂ ವಿಧಾನಸಭೆಯ ನೂತನ ಸ್ಪೀಕರ್‌ ಆಗಿ ಕಾಂಗ್ರೆಸ್‌ ನಾಯಕ ತಿರುವಾಂಚೂರ್ ರಾಧಾಕೃಷ್ಣನ್ ಆಯ್ಕೆ!
INDIA

BIG NEWS : ಕೇರಳಂ ವಿಧಾನಸಭೆಯ ನೂತನ ಸ್ಪೀಕರ್‌ ಆಗಿ ಕಾಂಗ್ರೆಸ್‌ ನಾಯಕ ತಿರುವಾಂಚೂರ್ ರಾಧಾಕೃಷ್ಣನ್ ಆಯ್ಕೆ!

By ಸುರೇಶ್‌

ತಿರುನಂತಪುರಂ: ಕೇರಳ ರಾಜಕಾರಣದ ಹಿರಿಯ ಮುಖಂಡ, ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಶಾಸಕ ತಿರುವನಂಚೂರು ರಾಧಾಕೃಷ್ಣನ್ ಅವರು ಕೇರಳದ 16ನೇ ವಿಧಾನಸಭೆಯ ನೂತನ ಸ್ಪೀಕರ್ ಆಗಿ ಇಂದು ಅಧಿಕೃತವಾಗಿ ಆಯ್ಕೆಯಾಗಿದ್ದಾರೆ. ತೀವ್ರ ಕುತೂಹಲ ಕೆರಳಿಸಿದ್ದ ಸ್ಪೀಕರ್ ಚುನಾವಣೆಯಲ್ಲಿ ಅವರು ಭರ್ಜರಿ ಬಹುಮತದೊಂದಿಗೆ ಜಯಭೇರಿ ಬಾರಿಸುವ ಮೂಲಕ ಈ ಉನ್ನತ ಸಾಂವಿಧಾನಿಕ ಹುದ್ದೆಯನ್ನು ಅಲಂಕರಿಸಿದ್ದಾರೆ.

ಒಟ್ಟು 140 ಸದಸ್ಯ ಬಲದ ಕೇರಳ ವಿಧಾನಸಭೆಯಲ್ಲಿ, ಹಂಗಾಮಿ ಸ್ಪೀಕರ್ ಆಗಿ ಕಾರ್ಯನಿರ್ವಹಿಸಿದ ಜಿ. ಸುಧಾಕರನ್ ಅವರು ಚುನಾವಣಾ ಅಧಿಕಾರಿಯಾಗಿದ್ದ ಹಿನ್ನೆಲೆಯಲ್ಲಿ ಮತದಾನ ಪ್ರಕ್ರಿಯೆಯಿಂದ ದೂರ ಉಳಿದಿದ್ದರು. ಹೀಗಾಗಿ ಸದನದಲ್ಲಿ ಒಟ್ಟು 139 ಮತಗಳು ಚಲಾವಣೆಯಾಗಿದ್ದವು. ಈ ಪೈಕಿ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (UDF) ಮೈತ್ರಿಕೂಟದ ಅಭ್ಯರ್ಥಿಯಾಗಿದ್ದ ರಾಧಾಕೃಷ್ಣನ್ ಅವರು ಬರೋಬ್ಬರಿ 101 ಮತಗಳನ್ನು ಪಡೆಯುವ ಮೂಲಕ ಸುಲಭ ಜಯ ಸಾಧಿಸಿದರು.

ಇನ್ನುಳಿದಂತೆ ಎಡರಂಗ (LDF) ಮೈತ್ರಿಕೂಟದ ಅಭ್ಯರ್ಥಿಯಾಗಿದ್ದ ಎ.ಸಿ. ಮೊಯ್ದೀನ್ ಅವರು 35 ಮತಗಳನ್ನು ಪಡೆಯಲಷ್ಟೇ ಶಕ್ತರಾದರು. ಮತ್ತೊಂದೆಡೆ, ಭಾರತೀಯ ಜನತಾ ಪಾರ್ಟಿ (BJP) ಪರವಾಗಿ ಕಣಕ್ಕಿಳಿದಿದ್ದ ಬಿ.ಬಿ. ಗೋಪಕುಮಾರ್ ಅವರು ಕೇವಲ 3 ಮತಗಳನ್ನು ಪಡೆಯುವ ಮೂಲಕ ತೀವ್ರ ನಿರಾಸೆ ಅನುಭವಿಸಿದರು. ರಾಜಕೀಯ ಪಕ್ಷಗಳ ಬಲಾಬಲವನ್ನು ಈ ಚುನಾವಣಾ ಫಲಿತಾಂಶವು ಮತ್ತೊಮ್ಮೆ ಸ್ಪಷ್ಟಪಡಿಸಿದೆ.

ಪ್ರಸ್ತುತ 76 ವರ್ಷ ಪ್ರಾಯದ ತಿರುವನಂಚೂರು ರಾಧಾಕೃಷ್ಣನ್ ಅವರು ಕೇರಳ ರಾಜಕಾರಣದಲ್ಲಿ ಅಪಾರ ಅನುಭವ ಹೊಂದಿದ್ದಾರೆ. 1991 ರಿಂದಲೇ ಸತತವಾಗಿ ವಿಧಾನಸಭೆಯ ಸದಸ್ಯರಾಗಿ ಆಯ್ಕೆಯಾಗುತ್ತಾ ಬಂದಿರುವ ಅವರು, ಒಟ್ಟು 8 ಬಾರಿ ಶಾಸಕರಾಗಿ ಸೇವೆ ಸಲ್ಲಿಸಿದ ಹೆಗ್ಗಳಿಕೆ ಹೊಂದಿದ್ದಾರೆ. ಈ ಹಿಂದೆ 2011-2016ರ ಅವಧಿಯ ಉಮ್ಮನ್ ಚಾಂಡಿ ನೇತೃತ್ವದ ಸರ್ಕಾರದಲ್ಲಿ ಪ್ರಭಾವಿ ಗೃಹ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. ಆನಂತರದ ದಿನಗಳಲ್ಲಿ ಅರಣ್ಯ, ಸಾರಿಗೆ, ಕ್ರೀಡೆ, ಸಿನಿಮಾ ಮತ್ತು ಪರಿಸರ ಖಾತೆಗಳ ಸಚಿವರಾಗಿಯೂ ಅವರು ಯಶಸ್ವಿಯಾಗಿ ಜವಾಬ್ದಾರಿ ನಿಭಾಯಿಸಿದ್ದರು.

ಇತ್ತೀಚೆಗೆ ನಡೆದ 2026ರ ವಿಧಾನಸಭಾ ಚುನಾವಣೆಯಲ್ಲಿ ಕೊಟ್ಟಾಯಂ ಕ್ಷೇತ್ರದಿಂದ ಸ್ಪರ್ಧಿಸಿದ್ದ ರಾಧಾಕೃಷ್ಣನ್ ಅವರು ಸುಮಾರು 36,000 ಮತಗಳ ಬೃಹತ್ ಅಂತರದಿಂದ ಭರ್ಜರಿ ಗೆಲುವು ದಾಖಲಿಸಿದ್ದರು. ಚುನಾವಣಾ ಅಫಿಡವಿಟ್‌ನಲ್ಲಿ ಅವರು ಘೋಷಿಸಿಕೊಂಡಿರುವ ಮಾಹಿತಿ ಪ್ರಕಾರ, ರಾಧಾಕೃಷ್ಣನ್‌ ಅವರ ಒಟ್ಟು ಆಸ್ತಿ ಮೌಲ್ಯ 3 ಕೋಟಿ ರೂಪಾಯಿಗಳಾಗಿದೆ. ಇದರಲ್ಲಿ 12.8 ಲಕ್ಷ ರೂಪಾಯಿಗಳ ಸಾಲವಿದ್ದು, ತಮ್ಮ ವಾರ್ಷಿಕ ಆದಾಯ 10.1 ಲಕ್ಷ ರೂಪಾಯಿ ಎಂದು ಅವರು ಘೋಷಿಸಿದ್ದಾರೆ. ಸದ್ಯ ಅವರ ಸುದೀರ್ಘ ರಾಜಕೀಯ ಅನುಭವವು ಸದನವನ್ನು ಮುನ್ನಡೆಸಲು ದಿಕ್ಸೂಚಿಯಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

Keralam Speaker election | Pro-tem Speaker G Sudhakaran says, "Thiruvanchoor Radhakrishnan (Congress MLA) is hereby declared elected as the Speaker of the 16th Kerala Legislative Assembly. He secured 101 votes." https://t.co/rBzIpKG4q1

— ANI (@ANI) May 22, 2026

Share. Facebook Twitter LinkedIn WhatsApp Email

Related Posts

​107 ದಿನಗಳ ಅಮೆರಿಕ-ಇರಾನ್ ಯುದ್ಧಕ್ಕೆ ಶಾಶ್ವತ ತೆರೆ: ಜೂನ್ 19 ರಂದು ಸ್ವಿಟ್ಜರ್ಲೆಂಡ್‌ನಲ್ಲಿ ಐತಿಹಾಸಿಕ ಒಪ್ಪಂದಕ್ಕೆ ಸಹಿ; ಜಾಗತಿಕ ಮಾರುಕಟ್ಟೆ ನಿರಾಳ!

4 Mins Read

​ಓಮನ್ ಕರಾವಳಿಯಲ್ಲಿ ಭಾರತೀಯ ನಾವಿಕ ಸಾವು: ಮೃತದೇಹ ಕೊಳೆಯದಂತೆ ಇಡಲು ಐಸ್ ವಾಟರ್ ಬಾಟಲಿಗಳ ಬಳಕೆ! ತುರ್ತು ನೆರವಿಗೆ ಯೂನಿಯನ್ ಮನವಿ!

1 Min Read

​ಫಿಟ್‌ನೆಸ್ ಪ್ರೇಮಿಗಳೇ ಗಮನಿಸಿ: ಮುಂಜಾನೆಯ ವ್ಯಾಯಾಮಕ್ಕೂ ಮುನ್ನ ಹಣ್ಣುಗಳೇ ಅತ್ಯುತ್ತಮ ಆಹಾರ; ಏಕೆ ಗೊತ್ತಾ?

3 Mins Read
Recent News

BIG NEWS : ರಾಜ್ಯ `ಸರ್ಕಾರಿ ನೌಕರರೇ’ ಗಮನಿಸಿ : ಕೆಲಸದ ವೇಳೆ ಈ ನಿಯಮಗಳ ಪಾಲನೆ ಕಡ್ಡಾಯ!

ರಾಜ್ಯದ ರೈತರಿಗೆ ಗುಡ್ ನ್ಯೂಸ್: `ಕಾಲು ದಾರಿ, ಬಂಡಿದಾರಿ’ ಸಮಸ್ಯೆಗೆ ಸರ್ಕಾರದಿಂದ ಪರಿಹಾರ.!

ಪರಿಷತ್ ಚುನಾವಣೆ ಹಿನ್ನೆಲೆ : ಕಾಂಗ್ರೆಸ್ ನಲ್ಲಿ ಶುರುವಾಯ್ತು ರೆಸಾರ್ಟ್ ರಾಜಕಾರಣ : ನಾಳೆ ಸಿಎಂ ಡಿಕೆಶಿ ನೇತೃತ್ವದಲ್ಲಿ CLP ಸಭೆ!

BREAKING : ಹಾಸನದಲ್ಲಿ ಘೋರ ದುರಂತ : ಸ್ನೇಹಿತರ ಕಣ್ಣೆದುರೇ, ನದಿಗೆ ಇಳಿದ ಮೂವರು ಯುವಕರು ನೀರುಪಾಲು!

State News
KARNATAKA

BIG NEWS : ರಾಜ್ಯ `ಸರ್ಕಾರಿ ನೌಕರರೇ’ ಗಮನಿಸಿ : ಕೆಲಸದ ವೇಳೆ ಈ ನಿಯಮಗಳ ಪಾಲನೆ ಕಡ್ಡಾಯ!

By kannadanewsnow57 KARNATAKA 3 Mins Read

ಬೆಂಗಳೂರು: ರಾಜ್ಯ ಸರ್ಕಾರಿ ಸೇವೆಗೆ ಸೇರಿದ ನಂತರ ನೌಕರರು ನಡೆದುಕೊಳ್ಳಬೇಕಾದ ಕಡ್ಡಾಯ ಸೇವಾ ನಿಯಮಗಳನ್ನು ‘ಕರ್ನಾಟಕ ರಾಜ್ಯ ನಾಗರಿಕ ಸೇವಾ…

ರಾಜ್ಯದ ರೈತರಿಗೆ ಗುಡ್ ನ್ಯೂಸ್: `ಕಾಲು ದಾರಿ, ಬಂಡಿದಾರಿ’ ಸಮಸ್ಯೆಗೆ ಸರ್ಕಾರದಿಂದ ಪರಿಹಾರ.!

ಪರಿಷತ್ ಚುನಾವಣೆ ಹಿನ್ನೆಲೆ : ಕಾಂಗ್ರೆಸ್ ನಲ್ಲಿ ಶುರುವಾಯ್ತು ರೆಸಾರ್ಟ್ ರಾಜಕಾರಣ : ನಾಳೆ ಸಿಎಂ ಡಿಕೆಶಿ ನೇತೃತ್ವದಲ್ಲಿ CLP ಸಭೆ!

BREAKING : ಹಾಸನದಲ್ಲಿ ಘೋರ ದುರಂತ : ಸ್ನೇಹಿತರ ಕಣ್ಣೆದುರೇ, ನದಿಗೆ ಇಳಿದ ಮೂವರು ಯುವಕರು ನೀರುಪಾಲು!

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.