Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ರಾಜ್ಯದ ರೈತರಿಗೆ ಗುಡ್ ನ್ಯೂಸ್: `ಕಾಲು ದಾರಿ, ಬಂಡಿದಾರಿ’ ಸಮಸ್ಯೆಗೆ ಸರ್ಕಾರದಿಂದ ಪರಿಹಾರ.!

ಪರಿಷತ್ ಚುನಾವಣೆ ಹಿನ್ನೆಲೆ : ಕಾಂಗ್ರೆಸ್ ನಲ್ಲಿ ಶುರುವಾಯ್ತು ರೆಸಾರ್ಟ್ ರಾಜಕಾರಣ : ನಾಳೆ ಸಿಎಂ ಡಿಕೆಶಿ ನೇತೃತ್ವದಲ್ಲಿ CLP ಸಭೆ!

BREAKING : ಹಾಸನದಲ್ಲಿ ಘೋರ ದುರಂತ : ಸ್ನೇಹಿತರ ಕಣ್ಣೆದುರೇ, ನದಿಗೆ ಇಳಿದ ಮೂವರು ಯುವಕರು ನೀರುಪಾಲು!

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಪರಿಷತ್ ಚುನಾವಣೆ ಹಿನ್ನೆಲೆ : ಕಾಂಗ್ರೆಸ್ ನಲ್ಲಿ ಶುರುವಾಯ್ತು ರೆಸಾರ್ಟ್ ರಾಜಕಾರಣ : ನಾಳೆ ಸಿಎಂ ಡಿಕೆಶಿ ನೇತೃತ್ವದಲ್ಲಿ CLP ಸಭೆ!
KARNATAKA

ಪರಿಷತ್ ಚುನಾವಣೆ ಹಿನ್ನೆಲೆ : ಕಾಂಗ್ರೆಸ್ ನಲ್ಲಿ ಶುರುವಾಯ್ತು ರೆಸಾರ್ಟ್ ರಾಜಕಾರಣ : ನಾಳೆ ಸಿಎಂ ಡಿಕೆಶಿ ನೇತೃತ್ವದಲ್ಲಿ CLP ಸಭೆ!

By ಸುರೇಶ್‌

ಬೆಂಗಳೂರು: ರಾಜ್ಯದಲ್ಲಿ ಪರಿಷತ್ ಚುನಾವಣೆ ಕಾವು ಏರುತ್ತಿದ್ದಂತೆ, ರಾಜಕೀಯ ಪಕ್ಷಗಳಲ್ಲಿ ರೆಸಾರ್ಟ್ ರಾಜಕಾರಣದ ಸದ್ದು ಮತ್ತೆ ಜೋರಾಗಿದೆ. ಜೂನ್ 16 ರಿಂದಲೇ ಕಾಂಗ್ರೆಸ್ ನಾಯಕರ ಬಿಗಿ ಪಾರುಪತ್ಯದಲ್ಲಿ ‘ರೆಸಾರ್ಟ್ ಪಾಲಿಟಿಕ್ಸ್’ ಅಧಿಕೃತವಾಗಿ ಆರಂಭವಾಗಲಿದ್ದು, ಪಕ್ಷದ ಶಾಸಕರನ್ನು ಒಟ್ಟಾಗಿ ಹಿಡಿದಿಟ್ಟುಕೊಳ್ಳಲು ಹೈಕಮಾಂಡ್ ಮಾಸ್ಟರ್ ಪ್ಲಾನ್ ರೂಪಿಸಿದೆ. ನಾಳೆ ಸಂಜೆ 6 ಗಂಟೆಗೆ ಕಾಂಗ್ರೆಸ್ ಶಾಸಕಾಂಗ ಪಕ್ಷದ (CLP) ಮಹತ್ವದ ಸಭೆಯನ್ನು ಕರೆಯಲಾಗಿದೆ.

ವಿಶೇಷವೆಂದರೆ, ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿಯಾದ ಬಳಿಕ ನಡೆಯುತ್ತಿರುವ ಮೊದಲ ಶಾಸಕಾಂಗ ಪಕ್ಷದ ಸಭೆ ಇದಾಗಿದೆ. ಸಿಎಂ ಡಿ.ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ ಬಿಡದಿಯ ಪ್ರಸಿದ್ಧ ವಂಡರ್ಲಾ ರೆಸಾರ್ಟ್‌ನಲ್ಲಿ ಈ ಹೈವೋಲ್ಟೇಜ್ ಸಭೆ ಆಯೋಜನೆಗೊಂಡಿದೆ. ಚುನಾವಣೆಯ ಹಿನ್ನೆಲೆಯಲ್ಲಿ ಯಾವುದೇ ರೀತಿಯ ಮುಜುಗರ ತಪ್ಪಿಸಲು ಕಾಂಗ್ರೆಸ್ ನಾಯಕತ್ವ ಈ ರೆಸಾರ್ಟ್ ತಂತ್ರಕ್ಕೆ ಶರಣಾಗಿದೆ.

ಪರಿಷತ್ ಚುನಾವಣೆಯ ಮತದಾನ ಪ್ರಕ್ರಿಯೆ ಮುಗಿಯುವವರೆಗೆ ಅಂದರೆ ಜೂನ್ 16 ಮತ್ತು 17 ರಂದು ಎರಡು ದಿನಗಳ ಕಾಲ ಕಾಂಗ್ರೆಸ್‌ನ ಎಲ್ಲಾ ಶಾಸಕರು ಇದೇ ರೆಸಾರ್ಟ್‌ನಲ್ಲಿ ವಾಸ್ತವ್ಯ ಹೂಡಲಿದ್ದಾರೆ. ತದನಂತರ, ಜೂನ್ 18ರಂದು ಮತದಾನದ ದಿನದಂದು ರೆಸಾರ್ಟ್‌ನಿಂದ ಶಾಸಕರು ತಂಡ ತಂಡವಾಗಿ ನೇರವಾಗಿ ವಿಧಾನಸೌಧಕ್ಕೆ ಆಗಮಿಸಿ ತಮ್ಮ ಹಕ್ಕನ್ನು ಚಲಾಯಿಸಲಿದ್ದಾರೆ. ಶಾಸಕರು ಚಲ್ಲಾಪಿಲ್ಲಿಯಾಗದಂತೆ ನೋಡಿಕೊಳ್ಳಲು ಈ ಬಿಗಿ ಕ್ರಮ ಕೈಗೊಳ್ಳಲಾಗಿದೆ.

ಕಾಂಗ್ರೆಸ್ ಪಾಳಯದಲ್ಲಿ ಈ ಮಟ್ಟದ ಆತಂಕ ಮೂಡಲು ಪ್ರಮುಖ ಕಾರಣ ‘ಅಡ್ಡ ಮತದಾನ’ (ಕ್ರಾಸ್ ವೋಟಿಂಗ್) ಭೀತಿ. ಜೆಡಿಎಸ್ ನಾಯಕರು ಈಗಾಗಲೇ ಕಾಂಗ್ರೆಸ್‌ನ ಸುಮಾರು 14 ಶಾಸಕರನ್ನು ಹಾಗೂ ಮೂವರು ಪಕ್ಷೇತರ ಶಾಸಕರನ್ನು ರಹಸ್ಯವಾಗಿ ಸಂಪರ್ಕಿಸಿದ್ದಾರೆ ಎಂಬ ಆಘಾತಕಾರಿ ಮಾಹಿತಿ ಕಾಂಗ್ರೆಸ್ ನಾಯಕರಿಗೆ ಲಭ್ಯವಾಗಿದೆ. ಈ ಹಿನ್ನೆಲೆಯಲ್ಲಿ ವಿರೋಧ ಪಕ್ಷಗಳ ಆಮಿಷಕ್ಕೆ ಶಾಸಕರು ಬಲಿಯಾಗದಂತೆ ತಡೆಯಲು ರೆಸಾರ್ಟ್ ರಾಜಕಾರಣ ಅನಿವಾರ್ಯವಾಗಿದೆ.

ರೆಸಾರ್ಟ್ ವಾಸ್ತವ್ಯದ ಅವಧಿಯಲ್ಲಿ ಕೇವಲ ಶಾಸಕರ ರಕ್ಷಣೆ ಅಷ್ಟೇ ಅಲ್ಲದೆ, ಅವರಿಗೆ ಮತದಾನ ಪ್ರಕ್ರಿಯೆಯ ಬಗ್ಗೆ ಹಿರಿಯ ನಾಯಕರಿಂದ ವಿವರವಾದ ತರಬೇತಿ ನೀಡಲಾಗುತ್ತದೆ. ಪರಿಷತ್ ಚುನಾವಣೆಯಲ್ಲಿ ಆದ್ಯತಾ ಮತಗಳ ಎಣಿಕೆ ಇರುವುದರಿಂದ, ಒಂದೇ ಒಂದು ಮತವೂ ಅಸಿಂಧುವಾಗದಂತೆ ತಡೆಯಲು ಪ್ರತಿಯೊಬ್ಬ ಶಾಸಕನಿಗೂ ಪ್ರಾತ್ಯಕ್ಷಿಕೆ ಮೂಲಕ ಎಚ್ಚರಿಕೆಯ ಪಾಠ ಮಾಡಲಾಗುತ್ತದೆ.

ಒಟ್ಟಾರೆಯಾಗಿ ಜೂನ್ 16, 17 ಮತ್ತು 18ರ ಮೂರು ದಿನಗಳ ಕಾಲ ಕಾಂಗ್ರೆಸ್ ಶಾಸಕರು ರೆಸಾರ್ಟ್ ಭದ್ರಕೋಟೆಯಲ್ಲಿ ಕಾಲ ಕಳೆಯಲಿದ್ದಾರೆ. ಜೆಡಿಎಸ್ ಹಾಗೂ ಬಿಜೆಪಿಯ ತಂತ್ರಗಾರಿಕೆಗೆ ಪ್ರತಿತಂತ್ರ ಹೂಡಿರುವ ಕಾಂಗ್ರೆಸ್, ತನ್ನ ಕೋಟೆಯನ್ನು ಭದ್ರವಾಗಿಟ್ಟುಕೊಳ್ಳಲು ನಡೆಸುತ್ತಿರುವ ಈ ಕಸರತ್ತು ರಾಜ್ಯ ರಾಜಕಾರಣದಲ್ಲಿ ತೀವ್ರ ಕುತೂಹಲ ಮೂಡಿಸಿದೆ.

Share. Facebook Twitter LinkedIn WhatsApp Email

Related Posts

ರಾಜ್ಯದ ರೈತರಿಗೆ ಗುಡ್ ನ್ಯೂಸ್: `ಕಾಲು ದಾರಿ, ಬಂಡಿದಾರಿ’ ಸಮಸ್ಯೆಗೆ ಸರ್ಕಾರದಿಂದ ಪರಿಹಾರ.!

2 Mins Read

BREAKING : ಹಾಸನದಲ್ಲಿ ಘೋರ ದುರಂತ : ಸ್ನೇಹಿತರ ಕಣ್ಣೆದುರೇ, ನದಿಗೆ ಇಳಿದ ಮೂವರು ಯುವಕರು ನೀರುಪಾಲು!

2 Mins Read

BREAKING : ಕೆಂಪೇಗೌಡ ಏರ್ಪೋರ್ಟ್ ನಲ್ಲಿ 13.14 ಕೋಟಿ ರೂ ಮೌಲ್ಯದ 38.34 ಕೆಜಿ ಗಾಂಜಾ ವಶ : 6 ಜನ ಅರೆಸ್ಟ್!

1 Min Read
Recent News

ರಾಜ್ಯದ ರೈತರಿಗೆ ಗುಡ್ ನ್ಯೂಸ್: `ಕಾಲು ದಾರಿ, ಬಂಡಿದಾರಿ’ ಸಮಸ್ಯೆಗೆ ಸರ್ಕಾರದಿಂದ ಪರಿಹಾರ.!

ಪರಿಷತ್ ಚುನಾವಣೆ ಹಿನ್ನೆಲೆ : ಕಾಂಗ್ರೆಸ್ ನಲ್ಲಿ ಶುರುವಾಯ್ತು ರೆಸಾರ್ಟ್ ರಾಜಕಾರಣ : ನಾಳೆ ಸಿಎಂ ಡಿಕೆಶಿ ನೇತೃತ್ವದಲ್ಲಿ CLP ಸಭೆ!

BREAKING : ಹಾಸನದಲ್ಲಿ ಘೋರ ದುರಂತ : ಸ್ನೇಹಿತರ ಕಣ್ಣೆದುರೇ, ನದಿಗೆ ಇಳಿದ ಮೂವರು ಯುವಕರು ನೀರುಪಾಲು!

​107 ದಿನಗಳ ಅಮೆರಿಕ-ಇರಾನ್ ಯುದ್ಧಕ್ಕೆ ಶಾಶ್ವತ ತೆರೆ: ಜೂನ್ 19 ರಂದು ಸ್ವಿಟ್ಜರ್ಲೆಂಡ್‌ನಲ್ಲಿ ಐತಿಹಾಸಿಕ ಒಪ್ಪಂದಕ್ಕೆ ಸಹಿ; ಜಾಗತಿಕ ಮಾರುಕಟ್ಟೆ ನಿರಾಳ!

State News
KARNATAKA

ರಾಜ್ಯದ ರೈತರಿಗೆ ಗುಡ್ ನ್ಯೂಸ್: `ಕಾಲು ದಾರಿ, ಬಂಡಿದಾರಿ’ ಸಮಸ್ಯೆಗೆ ಸರ್ಕಾರದಿಂದ ಪರಿಹಾರ.!

By kannadanewsnow57 KARNATAKA 2 Mins Read

ಬೆಂಗಳೂರು: ರಾಜ್ಯದಲ್ಲಿ ರೈತರು ತಮ್ಮ ಕೃಷಿ ಚಟುವಟಿಕೆಗಳಿಗಾಗಿ ಮತ್ತು ಬೆಳೆದ ಫಸಲನ್ನು ಸಾಗಿಸಲು ಪಕ್ಕದ ಖಾಸಗಿ ಜಮೀನುಗಳಲ್ಲಿನ ಕಾಲುದಾರಿ ಅಥವಾ…

ಪರಿಷತ್ ಚುನಾವಣೆ ಹಿನ್ನೆಲೆ : ಕಾಂಗ್ರೆಸ್ ನಲ್ಲಿ ಶುರುವಾಯ್ತು ರೆಸಾರ್ಟ್ ರಾಜಕಾರಣ : ನಾಳೆ ಸಿಎಂ ಡಿಕೆಶಿ ನೇತೃತ್ವದಲ್ಲಿ CLP ಸಭೆ!

BREAKING : ಹಾಸನದಲ್ಲಿ ಘೋರ ದುರಂತ : ಸ್ನೇಹಿತರ ಕಣ್ಣೆದುರೇ, ನದಿಗೆ ಇಳಿದ ಮೂವರು ಯುವಕರು ನೀರುಪಾಲು!

BREAKING : ಕೆಂಪೇಗೌಡ ಏರ್ಪೋರ್ಟ್ ನಲ್ಲಿ 13.14 ಕೋಟಿ ರೂ ಮೌಲ್ಯದ 38.34 ಕೆಜಿ ಗಾಂಜಾ ವಶ : 6 ಜನ ಅರೆಸ್ಟ್!

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.