ಬೆಂಗಳೂರು : ನಿರ್ಮಲಾನಂದನಾಥ ಶ್ರೀಗಳ ಬಗ್ಗೆ ಅವಹೇಳನಕಾರಿ ಹೇಳಿಕೆ ಆರೋಪದ ಹಿನ್ನೆಲೆಯಲ್ಲಿ ಕನ್ನಡ ಚೇತನ್ ಗೌಡ ಎಂಬಾತನ ವಿರುದ್ಧ ಇದೀಗ ಎಫ್ಐಆರ್ ದಾಖಲಾಗಿದೆ. ಬೆಂಗಳೂರಿನ ವಿಜಯನಗರ ಪೊಲೀಸ್ ಠಾಣೆಯಲ್ಲಿ ಚೇತನ್ ಗೌಡ ಎಂಬಾತನ ವಿರುದ್ಧ FIR ದಾಖಲಾಗಿದೆ.
ಪುಟ್ಟರಾಜು ಎಂಬುವವರು ಈ ವಿಚಾರವಾಗಿ ದೂರು ನೀಡಿದರು. ಅವರ ದೂರನ್ನು ಆಧರಿಸಿ ಪೊಲೀಸರು ಇದೀಗ ಚೇತನ್ ಗೌಡನ ವಿರುದ್ಧ ಕೆಎಸ್ ದಾಖಲಿಸಿದ್ದಾರೆ. ಅಶ್ಲೀಲ ಪದ ಬಳಕೆ ಮಾಡಿ ಶ್ರೀಗಳ ತೇಜೋವಧೆ ಮಾಡಿರುವ ಹಿನ್ನೆಲೆಯಲ್ಲಿ ದೂರು ನೀಡಲಾಗಿದೆ. ಸ್ವಾಮೀಜಿಯ ಬಗ್ಗೆ ವಿದೇಶ ಪ್ರವಾಸದ ಫೋಟೋ ಬಳಸಿ ಅವಹೇಳನಕಾರಿ ಪದ ಬಳಕೆ ಮಾಡಿದನೆಂದು ಆರೋಪಿಸಿದ್ದು ಎಫ್ಐಆರ್ ನಲ್ಲಿ ರಾಜೇಶ್ ಎಂಬತನ ಹೆಸರು ಕೂಡ ಪುಟ್ಟರಾಜು ಉಲ್ಲೇಖಿಸಿದ್ದಾರೆ.








