Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಮೋದಿ ಕ್ಲಾಸ್‌ನಲ್ಲಿ ಸಚಿವರಿಗೆ ‘ರಿಪೋರ್ಟ್ ಕಾರ್ಡ್‌’ ಭೀತಿ; ಯಾರು ಬೆಸ್ಟ್? ಯಾರಿಗೆ ಕಮ್ಮಿ ಮಾರ್ಕ್ಸ್?

ALERT : ರಾತ್ರಿ ಪೂರ್ತಿ ಮಲಗಿದ್ರೂ ಬೆಳಗ್ಗೆ ಎದ್ದ ತಕ್ಷಣ ಸುಸ್ತು ಕಾಡ್ತಾ ಇದೆಯಾ? ಈ ಡೇಂಜರಸ್ ಲಕ್ಷಣಗಳನ್ನ ನಿರ್ಲಕ್ಷಿಸಬೇಡಿ!

ವಾಹನ ಚಾಲಕರಿಗೆ ಸರಣಿ ಶಾಕ್: 8 ದಿನಗಳಲ್ಲಿ 3ನೇ ಬಾರಿ ಇಂಧನ ದರ ಏರಿಕೆ; ಪೆಟ್ರೋಲ್ 87 ಪೈಸೆ, ಡೀಸೆಲ್ 91 ಪೈಸೆ ದುಬಾರಿ!

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಸಾಮಾನ್ಯ ವ್ಯಕ್ತಿಯಾಗಿದ್ದ ನನ್ನನ್ನು ಈ ಮಟ್ಟಕ್ಕೆ ಬೆಳೆಸಿದ್ದು ಬಂಗಾರಪ್ಪಾಜಿ: ಶಾಸಕ ಗೋಪಾಲಕೃಷ್ಣ ಬೇಳೂರು ಭಾವುಕ ನುಡಿ
KARNATAKA

ಸಾಮಾನ್ಯ ವ್ಯಕ್ತಿಯಾಗಿದ್ದ ನನ್ನನ್ನು ಈ ಮಟ್ಟಕ್ಕೆ ಬೆಳೆಸಿದ್ದು ಬಂಗಾರಪ್ಪಾಜಿ: ಶಾಸಕ ಗೋಪಾಲಕೃಷ್ಣ ಬೇಳೂರು ಭಾವುಕ ನುಡಿ

By ವಸಂತ ಬಿ ಈಶ್ವರಗೆರೆ

ಶಿವಮೊಗ್ಗ: ಸಾಮಾನ್ಯ ವ್ಯಕ್ತಿಯಾಗಿದ್ದ ನನ್ನನ್ನು ನೀನು ಬೆಳೆಯಬೇಕು. ರಾಜಕೀಯಕ್ಕೆ ಬರಬೇಕು ಎಂಬುದಾಗಿ ಕರೆದು, ಸ್ಪೂರ್ತಿ ತುಂಬಿ, ಶಾಸಕನನ್ನಾಗಿ ಮಾಡೇ ಬಿಟ್ಟಿದ್ದು ಎಸ್.ಬಂಗಾರಪ್ಪನವರು. ನಾನೊಬ್ಬ ಅವರ ಶಿಷ್ಯನೆಂಬ ಹೆಮ್ಮೆ ನನಗಿದೆ ಎಂಬುದಾಗಿ ಶಾಸಕ ಗೋಪಾಲಕೃಷ್ಣ ಬೇಳೂರು ಭಾವುಕರಾಗಿ ನುಡಿದರು.

ಇಂದು ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ಬಂಗಾರ ಧಾಮದಲ್ಲಿ ದಿವಂಗತ ಎಸ್.ಬಂಗಾರಪ್ಪ ಅವರ 93ನೇ ಹುಟ್ಟು ಹಬ್ಬದ ನಿಮಿತ್ತ ಆಯೋಜಿಸಿದ್ದಂತ ಕಾರ್ಯಕ್ರಮದಲ್ಲಿ ಭಾಗಿಯಾಗಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಬಂಗಾರಪ್ಪ ಅವರಿಂದ ಸ್ವಾಗತ ಕಂಡು ಅವರಿಗೆ ಕೈಮುಗಿಯುವಂತೆ ಮನಸ್ಸಾಯಿತು. ಇಂದು 93ನೇ ವರ್ಷದ ದಿವಂಗತ ಎಸ್.ಬಂಗಾರಪ್ಪ ಅವರ ಹುಟ್ಟಿದ ಹಬ್ಬ ಆಚರಿಸಲಾಗುತ್ತಿದೆ. ಬಂಗಾರ ಧಾಮವನ್ನು ಪ್ರವಾಸಿ ತಾಣವಾಗಿ ಘೋಷಿಸಿದಂತ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಧನ್ಯವಾದ ತಿಳಿಸಿದರು.

1 ಕೋಟಿಗೂ ಹೆಚ್ಚು ಜನರಿಗೆ ಪಂಪ್ ಸೆಟ್ ಬಳಕೆ ಮಾಡಿ, ಬೆಳಕು, ಬದುಕು ಕಂಡಿದ್ದಾರೆ ಎಂದರೇ ಅದು ಬಂಗಾರಪ್ಪನವರ ಕೊಡುಗೆ. ಶಿಕ್ಷಕರು ಹಳ್ಳಿಗರು ಪಟ್ಟಣದ ವ್ಯತ್ಯಾಸ ಕಂಡಿದ್ದು ಬಂಗಾರಪ್ಪ ಅವರ ಚಿಂತನೆಯಾಗಿದೆ. ಆ ಕಾಲದಲ್ಲೇ ಗ್ರಾಮೀಣ ಕೃಪಾಂಕದಲ್ಲಿ ಲಕ್ಷಾಂತರ ಜನರು ಉದ್ಯೋಗ ಪಡೆದುಕೊಂಡಿದ್ದಾರೆ ಅಂದ್ರೆ ಅದಕ್ಕೆ ಕಾರಣ ಎಸ್.ಬಂಗಾರಪ್ಪ. ಈ ನಾಡಿಗೆ ಆಶ್ರಯ ಮನೆ, ಆರಾಧನ ಎಲ್ಲಾ ಕೊಟ್ಟು ಇಡೀ ರಾಜ್ಯದಲ್ಲಿ ಬಡವರ ಬಂಧು ಎನಿಸಿಕೊಂಡವರು ಅದು ಬಂಗಾರಪ್ಪನವರು ಮಾತ್ರವೇ ಎಂಬುದಾಗಿ ಹೇಳಿದರು.

ಎಸ್ ಬಂಗಾರಪ್ಪ ಅವರು ಯಾವತ್ತೂ ಸರಳ ವ್ಯಕ್ತಿಯಾಗಿದ್ದರು. ಮನೆಯಿಂದ ಗೇಟಿನವರೆಗೆ ಬಂದಂತ ಗಣ್ಯರನ್ನು ಕಳುಹಿಸಿಕೊಡೋದಕ್ಕೆ ಬರುತ್ತಿದ್ದರು. ಆ ಕಾಲದಲ್ಲಿ ಮಕ್ಕಳು ಶಾಲೆಗೆ ಬರಬೇಕು ಅಂತ 1 ರೂ ನೀಡಿ ಶಿಕ್ಷಣದ ಕ್ರಾಂತಿ ಮಾಡಿದ್ದು ಎಸ್ ಬಂಗಾರಪ್ಪ ಅವರ ಕೊಡುಗೆಯಾಗಿದೆ. ಇಂದು ಶಿಕ್ಷಣ ಸಚಿವರಾಗಿ ಮಧು ಬಂಗಾರಪ್ಪ ಅವರು ಸೇವೆ ಸಲ್ಲಿಸುತ್ತಿದ್ದಾರೆ ಎಂದರು.

ನಾನು ಸಾಮಾನ್ಯ ವ್ಯಕ್ತಿಯಾಗಿದ್ದಂತ ಸಂದರ್ಭದಲ್ಲಿ ಗೋಪಾಲಕೃಷ್ಣ ನೀನು ನಿಲ್ಲಬೇಕು. ರಾಜಕೀಯಕ್ಕೆ ಬರಬೇಕು ಎಂಬುದಾಗಿ ತಂದು ಈ ಮಟ್ಟಕ್ಕೆ ಬೆಳೆಸಿದ್ದು ಎಸ್ ಬಂಗಾರಪ್ಪ ಅವರು. ನನ್ನ ಒಬ್ಬನನ್ನು ಅಲ್ಲ ನನ್ನಂತ ಸಾವಿರಾರು ಜನರನ್ನು ಬಂಗಾರಪ್ಪನವರು ಬೆಳೆಸಿದ್ದಾರೆ. ಅವರ ಶಿಷ್ಟ ಇಂದು, ಎಂದು, ಮುಂದು ಎಂಬುದಾಗಿ ನೆನಪಿಸಿಕೊಂಡರು.

ಸಾಮಾನ್ಯರಲ್ಲಿ, ಬಡವರಲ್ಲಿ, ಎಲ್ಲಾ ವರ್ಗದವರಲ್ಲಿ ಜಾತಿಯನ್ನೇ ನೋಡದೇ ಅವರ ಕೆಲಸ ಮಾಡಿಕೊಟ್ಟಂತವರು ಎಸ್.ಬಂಗಾರಪ್ಪನವರು. ಆ ಕಾರಣಕ್ಕೇ ಅವರು ಇಂದಿಗೂ ಜನಮಾನಸದಲ್ಲಿ ನೆಲೆಯಾಗಿದ್ದಾರೆ. ಅವರ ನೆನಪು 93 ವರ್ಷವಾದರೂ ನೆನಪು ಮಾಡಿಕೊಳ್ಳುತ್ತಿರುವುದರ ಹಿಂದೆ ಅವರ ಸೇವೆಯೇ ಕಾರಣ ಎಂದರು.

ನಾನೊಬ್ಬ ಅವರ ಶಿಷ್ಯ. ಅವರ ಅಭಿಮಾನಿಯಾಗಿ, ಅವರ ಶಿಷ್ಟನಾಗಿ ಅವರಂತೆ ಡ್ರೆಸ್ ಧರಿಸುತ್ತೇನೆ. ಆದರೇ ಅವರಿಗೆ ಅವರೇ ಸರಿಸಾಟಿ. ಅವರು ನಾನು ಆಗಲು ಸಾಧ್ಯವಿಲ್ಲ. ಅವರ ಶಿಷ್ಟ ನಾನು ಮಾತ್ರ ಎಂಬುದಾಗಿ ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.

ವರದಿ; ವಸಂತ ಬಿ ಈಶ್ವರಗೆರೆ…, ಸಂಪಾದಕರು

ನಾನು ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿ, ಸಿಗುವ ವಿಶ್ವಾಸವಿದೆ: ಸಾಗರ ಶಾಸಕ ಗೋಪಾಲಕೃಷ್ಣ ಬೇಳೂರು

ಇಂದು ಬಂಗಾರಪ್ಪ ಜನ್ಮದಿನ ಹಿನ್ನಲೆ: ಸಾಗರದಲ್ಲಿ ರೋಗಿಗಳಿಗೆ ಶಾಸಕ ಗೋಪಾಲಕೃಷ್ಣ ಬೇಳೂರು ಹಣ್ಣು-ಹಂಪಲು ವಿತರಣೆ

Share. Facebook Twitter LinkedIn WhatsApp Email

Related Posts

ALERT : ರಾತ್ರಿ ಪೂರ್ತಿ ಮಲಗಿದ್ರೂ ಬೆಳಗ್ಗೆ ಎದ್ದ ತಕ್ಷಣ ಸುಸ್ತು ಕಾಡ್ತಾ ಇದೆಯಾ? ಈ ಡೇಂಜರಸ್ ಲಕ್ಷಣಗಳನ್ನ ನಿರ್ಲಕ್ಷಿಸಬೇಡಿ!

2 Mins Read

ಲವ್ ಸೀಸನ್ಸ್ ಚಿತ್ರದ ‘ಹೊಸದೊಂದು ಪ್ರೀತಿಯಾನ’ ಲಿರಿಕಲ್ ಸಾಂಗ್ ಬಿಡುಗಡೆ!

2 Mins Read

ALERT : ಮೊಬೈಲ್ ಬಳಸುವವರು ತಪ್ಪದೇ ಓದಿ: ಬೇಸಿಗೆಯಲ್ಲಿ `ಮೊಬೈಲ್ ಬ್ಲಾಸ್ಟ್’ ಆಗದಂತೆ ತಡೆಯಲು ಈ 8 ಟಿಪ್ಸ್ ಫಾಲೋ ಮಾಡಿ.!

2 Mins Read
Recent News

ಮೋದಿ ಕ್ಲಾಸ್‌ನಲ್ಲಿ ಸಚಿವರಿಗೆ ‘ರಿಪೋರ್ಟ್ ಕಾರ್ಡ್‌’ ಭೀತಿ; ಯಾರು ಬೆಸ್ಟ್? ಯಾರಿಗೆ ಕಮ್ಮಿ ಮಾರ್ಕ್ಸ್?

ALERT : ರಾತ್ರಿ ಪೂರ್ತಿ ಮಲಗಿದ್ರೂ ಬೆಳಗ್ಗೆ ಎದ್ದ ತಕ್ಷಣ ಸುಸ್ತು ಕಾಡ್ತಾ ಇದೆಯಾ? ಈ ಡೇಂಜರಸ್ ಲಕ್ಷಣಗಳನ್ನ ನಿರ್ಲಕ್ಷಿಸಬೇಡಿ!

ವಾಹನ ಚಾಲಕರಿಗೆ ಸರಣಿ ಶಾಕ್: 8 ದಿನಗಳಲ್ಲಿ 3ನೇ ಬಾರಿ ಇಂಧನ ದರ ಏರಿಕೆ; ಪೆಟ್ರೋಲ್ 87 ಪೈಸೆ, ಡೀಸೆಲ್ 91 ಪೈಸೆ ದುಬಾರಿ!

ಲವ್ ಸೀಸನ್ಸ್ ಚಿತ್ರದ ‘ಹೊಸದೊಂದು ಪ್ರೀತಿಯಾನ’ ಲಿರಿಕಲ್ ಸಾಂಗ್ ಬಿಡುಗಡೆ!

State News
KARNATAKA

ALERT : ರಾತ್ರಿ ಪೂರ್ತಿ ಮಲಗಿದ್ರೂ ಬೆಳಗ್ಗೆ ಎದ್ದ ತಕ್ಷಣ ಸುಸ್ತು ಕಾಡ್ತಾ ಇದೆಯಾ? ಈ ಡೇಂಜರಸ್ ಲಕ್ಷಣಗಳನ್ನ ನಿರ್ಲಕ್ಷಿಸಬೇಡಿ!

By kannadanewsnow57 KARNATAKA 2 Mins Read

ಇತ್ತೀಚಿನ ಜಟಾಪಟಿಯ ಜೀವನಶೈಲಿಯಲ್ಲಿ ಅದೆಷ್ಟೋ ಜನರು ಎದುರಿಸುತ್ತಿರುವ ಅತಿ ದೊಡ್ಡ ಸಮಸ್ಯೆಯೆಂದರೆ ನಿರಂತರ ಆಯಾಸ. ರಾತ್ರಿ 7 ರಿಂದ 8…

ಲವ್ ಸೀಸನ್ಸ್ ಚಿತ್ರದ ‘ಹೊಸದೊಂದು ಪ್ರೀತಿಯಾನ’ ಲಿರಿಕಲ್ ಸಾಂಗ್ ಬಿಡುಗಡೆ!

ALERT : ಮೊಬೈಲ್ ಬಳಸುವವರು ತಪ್ಪದೇ ಓದಿ: ಬೇಸಿಗೆಯಲ್ಲಿ `ಮೊಬೈಲ್ ಬ್ಲಾಸ್ಟ್’ ಆಗದಂತೆ ತಡೆಯಲು ಈ 8 ಟಿಪ್ಸ್ ಫಾಲೋ ಮಾಡಿ.!

ರಾಜ್ಯದ ಜನತೆಗೆ ಗುಡ್ ನ್ಯೂಸ್; ಸೆ.30ರವರೆಗೆ ನಮೂನೆ-11ಬಿ ಪಡೆಯಲು ಮೇಲ್ಮನವಿ ಅವಧಿ ವಿಸ್ತರಣೆ

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.