Subscribe to Updates
Get the latest creative news from FooBar about art, design and business.
Author: kannadanewsnow57
ಬೆಂಗಳೂರು: ಇಂದಿನ ಓಟದ ಬದುಕಿನಲ್ಲಿ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಒಂದು ದೊಡ್ಡ ಸವಾಲಾಗಿದೆ. ದೈಹಿಕವಾಗಿ ಸದೃಢರಾಗಿರಲು ವ್ಯಾಯಾಮ ಮಾಡುವುದು ಅತಿ ಅಗತ್ಯ. ಜಿಮ್‌ಗೆ ಹೋಗಲು ಸಮಯವಿಲ್ಲದವರು ಕನಿಷ್ಠ ಪಕ್ಷ ಪ್ರತಿದಿನ ನಿಯಮಿತವಾಗಿ ನಡಿಗೆಯನ್ನು ರೂಢಿಸಿಕೊಳ್ಳುವುದು ಉತ್ತಮ ಎಂದು ಆರೋಗ್ಯ ತಜ್ಞರು ಸಲಹೆ ನೀಡುತ್ತಾರೆ. ಹಾಗಾದರೆ, ದಿನಕ್ಕೆ ಎಷ್ಟು ಕಿಲೋಮೀಟರ್ ನಡೆಯುವುದು ಸೂಕ್ತ? ಇಲ್ಲಿದೆ ಈ ಬಗ್ಗೆ ಸಂಪೂರ್ಣ ಮಾಹಿತಿ. ದಿನಕ್ಕೆ ಎಷ್ಟು ಹೆಜ್ಜೆಗಳು ಅಥವಾ ಕಿಲೋಮೀಟರ್? ಸಾಮಾನ್ಯವಾಗಿ ಒಬ್ಬ ವ್ಯಕ್ತಿಯು ದಿನಕ್ಕೆ 10,000 ಹೆಜ್ಜೆಗಳನ್ನು ನಡೆಯುವುದು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂದು ಪರಿಗಣಿಸಲಾಗಿದೆ. ಅಂದರೆ ಇದು ಸರಿಸುಮಾರು 7 ರಿಂದ 8 ಕಿಲೋಮೀಟರ್‌ಗಳಿಗೆ ಸಮನಾಗಿರುತ್ತದೆ. ಆದರೆ, ಪ್ರತಿಯೊಬ್ಬರ ದೇಹಸ್ಥಿತಿ ಮತ್ತು ವಯಸ್ಸಿಗೆ ಅನುಗುಣವಾಗಿ ಈ ದೂರವು ಬದಲಾಗಬಹುದು. ವಿವಿಧ ವಯೋಮಾನದವರಿಗೆ ನಡಿಗೆಯ ಪ್ರಮಾಣ: ಮಕ್ಕಳು ಮತ್ತು ಹದಿಹರೆಯದವರು: ಇವರು ದಿನಕ್ಕೆ ಕನಿಷ್ಠ 10,000 ದಿಂದ 12,000 ಹೆಜ್ಜೆಗಳನ್ನು ನಡೆಯುವುದು ಅವಶ್ಯಕ. ವಯಸ್ಕರು (18 ರಿಂದ 60 ವರ್ಷ): ದಿನಕ್ಕೆ 7,000 ದಿಂದ 10,000…
ಬಾಗಲಕೋಟೆ: ಚಿಕಿತ್ಸೆಗಾಗಿ ಬರಬೇಕಾದ ಆಸ್ಪತ್ರೆಯೇ ಮಹಿಳೆಯೊಬ್ಬರ ಪಾಲಿಗೆ ನರಕವಾದ ಘಟನೆ ಬಾಗಲಕೋಟೆ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ. ಆಸ್ಪತ್ರೆಯ ಶೌಚಾಲಯದಲ್ಲಿ ವಿಧವೆ ಮಹಿಳೆಯ ಮೇಲೆ ಹೊರಗುತ್ತಿಗೆ ನೌಕರನೊಬ್ಬ ಅತ್ಯಾಚಾರ ಎಸಗಿದ್ದು, ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆಸ್ಪತ್ರೆಯಲ್ಲಿ ಡಿ-ದರ್ಜೆ ನೌಕರನಾಗಿ ಕೆಲಸ ಮಾಡುತ್ತಿದ್ದ ಫರೀದ್ ಸಾಬ್ ಡಾಂಗಿ ಅತ್ಯಾಚಾರ ಎಸಗಿದ ಆರೋಪಿ. ಸಂತ್ರಸ್ತ 34 ವರ್ಷದ ಮಹಿಳೆಯು, ಕಳೆದ ಒಂದು ತಿಂಗಳಿನಿಂದ ಅನಾರೋಗ್ಯ ಪೀಡಿತರಾಗಿರುವ ತನ್ನ ಸಹೋದರನ ಆರೈಕೆಗಾಗಿ ಆಸ್ಪತ್ರೆಯಲ್ಲಿದ್ದರು. ಈ ಸಮಯದಲ್ಲಿ ಆರೋಪಿ ಫರೀದ್ ಸಾಬ್ ಮಹಿಳೆಯೊಂದಿಗೆ ಪರಿಚಯ ಬೆಳೆಸಿಕೊಂಡಿದ್ದ ಎನ್ನಲಾಗಿದೆ. ಮೇ 4ರ ಮಧ್ಯರಾತ್ರಿ ಅಂದಾಜು 12 ರಿಂದ 2 ಗಂಟೆಯ ಸುಮಾರಿಗೆ ಮಹಿಳೆಗೆ ಬೆದರಿಕೆಯೊಡ್ಡಿದ ಆರೋಪಿ, ಆಕೆಯನ್ನು ಶೌಚಾಲಯಕ್ಕೆ ಎಳೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದಾನೆ. ಅಷ್ಟೇ ಅಲ್ಲದೆ, ಕೃತ್ಯದ ಬಳಿಕ ಸಂತ್ರಸ್ತೆಯನ್ನು ಶೌಚಾಲಯದ ಒಳಗಡೆಯೇ ಲಾಕ್ ಮಾಡಿ ಪರಾರಿಯಾಗಿದ್ದ ಎಂದು ತಿಳಿದುಬಂದಿದೆ. ಪೊಲೀಸ್ ದೂರು ಮತ್ತು ಕ್ರಮ: ಘಟನೆ ಬೆಳಕಿಗೆ ಬರುತ್ತಿದ್ದಂತೆ ಆಕ್ರೋಶಗೊಂಡ ಸಂತ್ರಸ್ತೆಯ ಕುಟುಂಬಸ್ಥರು ಆರೋಪಿಯನ್ನು ಹಿಡಿದು ತರಾಟೆಗೆ…
ಸಂಬಳವಾದ ತಕ್ಷಣ ಮೊಬೈಲ್‌ಗೆ ಬರುವ ಆ ಒಂದು ಮೆಸೇಜ್ ನೀಡುವ ಖುಷಿಯೇ ಬೇರೆ. ಆದರೆ ಆ ಸಂಭ್ರಮದಲ್ಲಿ ನಾವು ಮಾಡುವ ಸಣ್ಣ ತಪ್ಪುಗಳು ತಿಂಗಳ ಕೊನೆಯಲ್ಲಿ ಹಣವಿಲ್ಲದೆ ಕೈಚಾಚುವಂತೆ ಮಾಡುತ್ತವೆ. ನಿಮ್ಮ ಹಣಕಾಸಿನ ಪರಿಸ್ಥಿತಿ ಸುಧಾರಿಸಲು ಮತ್ತು ಉಳಿತಾಯ ಮಾಡಲು ಇಲ್ಲಿವೆ ಕೆಲವು ಸ್ಮಾರ್ಟ್ ಟಿಪ್ಸ್: 1. ಮೊದಲು ನಿಮಗಾಗಿ ಉಳಿಸಿ (Pay Yourself First) ಹೆಚ್ಚಿನವರು ಮೊದಲು ಖರ್ಚು ಮಾಡಿ, ಉಳಿದರೆ ಮಾತ್ರ ಉಳಿತಾಯ ಮಾಡುತ್ತಾರೆ. ಆದರೆ ಇದು ತಪ್ಪು. ಸಂಬಳ ಬಂದ ತಕ್ಷಣ ಕನಿಷ್ಠ 20% ಹಣವನ್ನು ನಿಮ್ಮ ಭವಿಷ್ಯಕ್ಕಾಗಿ ಪಕ್ಕಕ್ಕೆ ಎತ್ತಿಡಿ. ಆ ನಂತರವಷ್ಟೇ ಉಳಿದ ಹಣದಲ್ಲಿ ಇತರ ಖರ್ಚುಗಳನ್ನು ನಿಭಾಯಿಸಿ. ಈ ಶಿಸ್ತು ನಿಮ್ಮನ್ನು ಆರ್ಥಿಕವಾಗಿ ಸದೃಢಗೊಳಿಸುತ್ತದೆ. 2. ಖರ್ಚುಗಳ ಮೇಲೆ ನಿಗಾ ಇರಲಿ ಹಿಂದಿನ ಕಾಲದಲ್ಲಿ ಪ್ರತಿಯೊಂದು ಪೈಸೆಗೂ ಲೆಕ್ಕ ಬರೆಯುವ ಪದ್ಧತಿ ಇತ್ತು. ಈಗಿನ ಡಿಜಿಟಲ್ ಯುಗದಲ್ಲಿ ನಾವು ಅದನ್ನು ಮರೆತಿದ್ದೇವೆ. ಒಂದು ಸಣ್ಣ ಡೈರಿ ಅಥವಾ ಆಪ್ ಮೂಲಕ ನಿಮ್ಮ ದಿನನಿತ್ಯದ…
ಭಾರತೀಯ ಸೈನಿಕ ಇತಿಹಾಸದಲ್ಲಿ ಸುವರ್ಣಾಕ್ಷರಗಳಿಂದ ಬರೆಯಲ್ಪಡುವ ‘ಆಪರೇಷನ್ ಸಿಂಧೂರ್’ ಕಾರ್ಯಾಚರಣೆ ನಡೆದು ಇಂದಿಗೆ ಸರಿಯಾಗಿ ಒಂದು ವರ್ಷ ಪೂರೈಸಿದೆ. ಗಡಿಯಾಚೆ ಕುಳಿತು ಭಾರತದ ವಿರುದ್ಧ ಸಂಚು ರೂಪಿಸುತ್ತಿದ್ದ ಉಗ್ರಗಾಮಿಗಳಿಗೆ ಸಿಂಹಸ್ವಪ್ನವಾದ ಈ ಮಿಂಚಿನ ದಾಳಿ, ಜಗತ್ತಿನ ಎದುರು ಭಾರತದ ತಾಕತ್ತನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. ಈ ವರ್ಷಾಚರಣೆಯ ಪ್ರಯುಕ್ತ ಭಾರತೀಯ ಸೇನೆ ಮತ್ತು ವಾಯುಪಡೆ ಬಿಡುಗಡೆ ಮಾಡಿರುವ ಹೊಸ ವಿಡಿಯೋಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಮೂಡಿಸಿವೆ. ರಕ್ತಪಾತಕ್ಕೆ ಸಿಕ್ಕಿದ ಸೇಡು! ಈ ಆಪರೇಷನ್ ಹಿಂದೆ ಒಂದು ಅತ್ಯಂತ ನೋವಿನ ಹಿನ್ನೆಲೆಯಿದೆ. 2025ರ ಏಪ್ರಿಲ್ 22ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ಸಮೀಪದ ಬೈಸಾರನ್ ಕಣಿವೆಯಲ್ಲಿ ಉಗ್ರರು ರಕ್ತಪಾತ ನಡೆಸಿದ್ದರು. ಪ್ರವಾಸಿ ತಾಣವಾದ ಆ ಕಣಿವೆಯಲ್ಲಿ ಅಮಾಯಕ ಜನರ ಧರ್ಮವನ್ನು ಕೇಳಿ ತಿಳಿದು, ಬರೋಬ್ಬರಿ 26 ಜನರನ್ನು ಬರ್ಬರವಾಗಿ ಗುಂಡಿಕ್ಕಿ ಕೊಂದಿದ್ದರು. ಈ ಅಮಾನುಷ ಕೃತ್ಯಕ್ಕೆ ತಕ್ಕ ಪಾಠ ಕಲಿಸಲು ಭಾರತ ಸರ್ಕಾರ ಮುಂದಾಯಿತು. ಅದರ ಫಲವೇ ಕಳೆದ ವರ್ಷ ಮೇ 7ರಂದು…
ಮದ್ಯಪಾನ ಮಾಡುವವರಲ್ಲಿ ಕೆಲವರು ಬಾಟಲಿ ಓಪನ್ ಮಾಡಿದರೆ ಅದು ಖಾಲಿಯಾಗುವವರೆಗೂ ಬಿಡುವುದಿಲ್ಲ. ಒಂದೇ ಸಿಟ್ಟಿಂಗ್‌ನಲ್ಲಿ ಪೂರ್ತಿ ಬಾಟಲಿ ಮುಗಿಸುವವರಿದ್ದಾರೆ. ಆದರೆ, ಕೇವಲ ವಿಶೇಷ ಸಂದರ್ಭಗಳಲ್ಲಿ ಮಾತ್ರ ಸ್ವಲ್ಪ ಮದ್ಯ ಸೇವಿಸಿ, ಉಳಿದಿದ್ದನ್ನು ಹಾಗೆಯೇ ಎತ್ತಿಡುವ ‘ಅಕೇಷನಲ್ ಡ್ರಿಂಕರ್ಸ್’ ಕೂಡ ಇದ್ದಾರೆ. ಆದರೆ, ಹೀಗೆ ಒಮ್ಮೆ ತೆರೆದ ಬಾಟಲಿಯನ್ನು ಎಷ್ಟು ದಿನಗಳವರೆಗೆ ಇಡಬಹುದು? ಅದರ ರುಚಿ ಬದಲಾಗುತ್ತದೆಯೇ? ಅದು ವಿಷವಾಗಿ ಬದಲಾಗುತ್ತದೆಯೇ? ಎಂಬ ಆತಂಕ ಅನೇಕರಲ್ಲಿರುತ್ತದೆ. ಅದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ. ವೈನ್ ಮತ್ತು ಬೀರ್‌ಗೆ ಎಕ್ಸ್‌ಪೈರಿ ದಿನಾಂಕ ಉಂಟು! ವೈನ್ ಮತ್ತು ಬೀರ್‌ಗಳಲ್ಲಿ ಆಲ್ಕೋಹಾಲ್ ಪ್ರಮಾಣ ಕಡಿಮೆ ಇರುತ್ತದೆ. ಹೀಗಾಗಿ ಇವು ಬೇಗನೆ ಹಾಳಾಗುತ್ತವೆ (Expire). ಆದರೆ ವೋಡ್ಕಾ, ಟಕಿಲಾ ಮತ್ತು ವಿಸ್ಕಿಯಂತಹ ಪಾನೀಯಗಳಲ್ಲಿ ಆಲ್ಕೋಹಾಲ್ ಪ್ರಮಾಣ ಹೆಚ್ಚಿರುವುದರಿಂದ ಇವು ದೀರ್ಘಕಾಲದವರೆಗೆ ಕೆಡದಂತೆ ಇರುತ್ತವೆ. ಸಾಮಾನ್ಯವಾಗಿ ವಿಸ್ಕಿಯಂತಹ ಹಾರ್ಡ್ ಲಿಕ್ಕರ್‌ಗಳಿಗೆ ಎಕ್ಸ್‌ಪೈರಿ ದಿನಾಂಕ ಇರುವುದಿಲ್ಲ. ಬಾಟಲಿಯನ್ನು ಸರಿಯಾದ ರೀತಿಯಲ್ಲಿ ಸ್ಟೋರ್ ಮಾಡಿದರೆ ವರ್ಷಗಳ ಕಾಲ ಇಡಬಹುದು. ಬಾಟಲಿ ಓಪನ್ ಮಾಡಿದ…
ಎಲೆಕ್ಟ್ರಾನಿಕ್ ಟೋಲ್ ಸಂಗ್ರಹ ವ್ಯವಸ್ಥೆಯನ್ನು ಇನ್ನಷ್ಟು ಪಾರದರ್ಶಕ ಹಾಗೂ ಸುಗಮಗೊಳಿಸಲು NHAI ನಿಯಮಗಳನ್ನು ಬಿಗಿಗೊಳಿಸಿದೆ. ಫಾಸ್ಟ್ಯಾಗ್ ಅನ್ನು ಸರಿಯಾದ ರೀತಿಯಲ್ಲಿ ಬಳಸದ ವಾಹನ ಸವಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಪ್ರಾಧಿಕಾರ ಎಚ್ಚರಿಸಿದೆ. ಕೈಯಲ್ಲಿ ಹಿಡಿದು ಫಾಸ್ಟ್ಯಾಗ್ ತೋರಿಸುವುದು ಇನ್ಮುಂದೆ ನಡೆಯಲ್ಲ! ಟೋಲ್ ಪ್ಲಾಜಾಗಳಲ್ಲಿ ಕೆಲವು ಚಾಲಕರು ಫಾಸ್ಟ್ಯಾಗ್ ಅನ್ನು ಗಾಜಿಗೆ ಅಂಟಿಸುವ ಬದಲು ಕೈಯಲ್ಲಿ ಹಿಡಿದು ಸ್ಕ್ಯಾನರ್‌ಗೆ ತೋರಿಸುವುದನ್ನು NHAI ಗಮನಿಸಿದೆ. ಇದು ನಿಯಮಬಾಹಿರವಾಗಿದ್ದು, ಇಂತಹ ವರ್ತನೆ ಕಂಡುಬಂದಲ್ಲಿ ಆ ಫಾಸ್ಟ್ಯಾಗ್ ಅನ್ನು ತಕ್ಷಣವೇ ಬ್ಲಾಕ್‌ಲಿಸ್ಟ್ ಮಾಡಲಾಗುವುದು ಎಂದು ತಿಳಿಸಲಾಗಿದೆ. ವಿಂಡ್‌ಸ್ಕ್ರೀನ್‌ಗೆ ಅಂಟಿಸುವುದು ಕಡ್ಡಾಯ ಫಾಸ್ಟ್ಯಾಗ್ ಅನ್ನು ಯಾವಾಗಲೂ ವಾಹನದ ಮುಂಭಾಗದ ವಿಂಡ್‌ಸ್ಕ್ರೀನ್ (ಗಾಜು) ಮೇಲೆ ಸರಿಯಾಗಿ ಫಿಕ್ಸ್ ಮಾಡಬೇಕು. ಇದರಿಂದ: RFID ರೀಡರ್‌ಗಳು ಟ್ಯಾಗ್ ಅನ್ನು ತಕ್ಷಣವೇ ಸ್ಕ್ಯಾನ್ ಮಾಡಲು ಸಾಧ್ಯವಾಗುತ್ತದೆ. ವಾಹನಗಳು ಟೋಲ್‌ನಲ್ಲಿ ಕಾಯದೆ ವೇಗವಾಗಿ ಚಲಿಸಬಹುದು. ಸಿಸ್ಟಮ್ ದುರುಪಯೋಗವನ್ನು ತಡೆಯಬಹುದು. ವಂಚನೆಗೆ ಬೀಳಲಿದೆ ಬ್ರೇಕ್ ಫಾಸ್ಟ್ಯಾಗ್ ಅನ್ನು ಗಾಜಿಗೆ ಅಂಟಿಸದೆ ಇದ್ದರೆ, ಒಂದೇ ಟ್ಯಾಗ್ ಅನ್ನು…
ನವದೆಹಲಿ: ದೇಶಾದ್ಯಂತ ಇರುವ ಅಂಚೆ ಕಚೇರಿಗಳಲ್ಲಿ (Post Offices) ಉಳಿತಾಯ ಖಾತೆ ಹಾಗೂ ಹೂಡಿಕೆ ಹೊಂದಿರುವ ಗ್ರಾಹಕರಿಗೆ ಕೇಂದ್ರ ಸರ್ಕಾರ ಮಹತ್ವದ ಸುದ್ದಿಯೊಂದನ್ನು ನೀಡಿದೆ. ಇನ್ನು ಮುಂದೆ ಅಂಚೆ ಕಚೇರಿಯ ಬ್ಯಾಂಕಿಂಗ್ ವ್ಯವಹಾರಗಳಲ್ಲಿ ಪಾರದರ್ಶಕತೆ ತರಲು ಪಾನ್ ಕಾರ್ಡ್ (PAN Card) ಅನ್ನು ಕಡ್ಡಾಯಗೊಳಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಕೇಂದ್ರ ಸರ್ಕಾರದ ಆದೇಶ ಸಂಖ್ಯೆ 02/2026 ರ ಪ್ರಕಾರ, ಅಂಚೆ ಇಲಾಖೆಯ ಈ ಕೆಳಗಿನ ಸೇವೆಗಳಿಗೆ ಪಾನ್ ವಿವರಗಳನ್ನು ನೀಡುವುದು ಕಡ್ಡಾಯವಾಗಿದೆ: ಹೊಸ ಉಳಿತಾಯ ಖಾತೆ ತೆರೆಯಲು. ವಿವಿಧ ಡೆಪಾಸಿಟ್ ಸ್ಕೀಮ್‌ಗಳಲ್ಲಿ ಹೂಡಿಕೆ ಮಾಡಲು. ನಗದು ಹಿಂಪಡೆಯುವಿಕೆ ಮತ್ತು ಟೈಮ್ ಡೆಪಾಸಿಟ್ ವ್ಯವಹಾರಗಳಿಗೆ. ಆದಾಯ ತೆರಿಗೆ ನಿಯಮಗಳಾದ 159, 160, 161, 211 ಮತ್ತು 237ರ ಅಡಿಯಲ್ಲಿ ಈ ಹೊಸ ನಿಬಂಧನೆಗಳನ್ನು ಜಾರಿಗೆ ತರಲಾಗಿದೆ. ಪಾನ್ ಕಾರ್ಡ್ ಇಲ್ಲದಿದ್ದರೆ ಏನು ಮಾಡಬೇಕು? ಒಂದು ವೇಳೆ ಗ್ರಾಹಕರ ಬಳಿ ಪಾನ್ ಕಾರ್ಡ್ ಲಭ್ಯವಿಲ್ಲದಿದ್ದರೆ ಆತಂಕಪಡುವ ಅಗತ್ಯವಿಲ್ಲ. ಅಂತಹ ಸಂದರ್ಭಗಳಲ್ಲಿ ಗ್ರಾಹಕರು ‘ಫಾರ್ಮ್…
ಬೆಂಗಳೂರು : ಬೆಂಗಳೂರು ನಗರ ಜಿಲ್ಲೆಯಲ್ಲಿ ಗೋವುಗಳ ಅಕ್ರಮ ಸಾಗಣೆ ಅಥವಾ ಹತ್ಯೆ ಮಾಡಿದಲ್ಲಿ ಏಳು ವರ್ಷ ಜೈಲು, ಹಾಗೂ ರೂ 10 ಲಕ್ಷ ಗಳ ವರೆಗೆ ದಂಡ ವಿಧಿಸಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ ಅವರು ಎಚ್ಚರಿಕೆ ನೀಡಿದ್ದಾರೆ. ಬಕ್ರೀದ್ ಸಂದರ್ಭದಲ್ಲಿ ಒಂಟೆ, ಗೋವುಗಳ ಅಕ್ರಮ ಸಾಗಣೆ ಮತ್ತು ಹತ್ಯೆ ಮಾಡುವುದನ್ನು ತಡೆಗಟ್ಟುವ ಬಗ್ಗೆ ಇಂದು ತಮ್ಮ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು. ಜಿಲ್ಲೆಗೆ ಬರುವ ಸಾಗಣೆ ವಾಹನಗಳ ತಪಾಸಣೆ ನಡೆಸಿ ಗೋವು, ಒಂಟೆಗಳ ಅಕ್ರಮ ಸಾಗಣೆ ಕಂಡುಬಂದಲ್ಲಿ ಯಾವುದೇ ಮುಲಾಜಿಲ್ಲದೆ ಸೂಕ್ತ ಕಾನೂನುಕ್ರಮ ಜರುಗಿಸುವಂತೆ ಪೊಲೀಸ್ ಮತ್ತು ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ ಜಿಲ್ಲಾಧಿಕಾರಿಗಳು ತಪಾಸಣೆ ನಡೆಸಿದ ವಾಹನಗಳು ಅನಧಿಕೃತವಾಗಿ ಗೋವು / ಒಂಟೆಗಳನ್ನು ಸಾಗಿಸುತ್ತಿದ್ದಲ್ಲಿ ಅವುಗಳನ್ನು ವಶಪಡಿಸಿಕೊಂಡು ಅಗತ್ಯ ಕಾನೂನು ಕ್ರಮ ಕೈಗೊಳ್ಳುವುದು ಮಾತ್ರವಲ್ಲದೆ ವಾಹನದಲ್ಲಿರುವ ಗೋವುಗಳನ್ನು ಪಶುಪಾಲನಾ ಇಲಾಖೆಯ ಸಹಯೋಗದೊಂದಿಗೆ ಗೋಶಾಲೆಗಳಿಗೆ ಅದೇ ವಾಹನದಲ್ಲಿ ಸಾಗಿಸಿ ಸುರಕ್ಷಿತಗೊಳಿಸುವಂತೆ ಸೂಚನೆ ನೀಡಿದರು. ‘ಒಂಟೆ, ಗೋವುಗಳ…
ಬೆಂಗಳೂರು: ಮಾರಣಾಂತಿಕ ಹಾಗೂ ದೀರ್ಘಕಾಲದ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳ ನೋವು ನಿವಾರಣೆ ಮತ್ತು ಅವರಿಗೆ ಮಾನಸಿಕ ಸ್ಥೈರ್ಯ ತುಂಬುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮಹತ್ವದ ಹೆಜ್ಜೆ ಇರಿಸಿದೆ. ಬೆಂಗಳೂರಿನ ಮಲ್ಲೇಶ್ವರದ ಕೆ.ಸಿ. ಜನರಲ್ ಆಸ್ಪತ್ರೆಯಲ್ಲಿ ನೂತನ ‘ಪ್ಯಾಲಿಯೇಟಿವ್ ಕೇರ್’ (ಉಪಶಮನಕಾರಿ ಆರೈಕೆ) ವಿಭಾಗವನ್ನು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಇಂದು ಉದ್ಘಾಟಿಸಿದರು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ‘ಶರಣಂ ಇಂಡಿಯಾ’ ಸಂಸ್ಥೆಯ ಸಹಭಾಗಿತ್ವದಲ್ಲಿ ಈ ನೂತನ ವಿಭಾಗವನ್ನು ಆರಂಭಿಸಲಾಗಿದೆ. ಚಿಕಿತ್ಸೆಗೆ ಸ್ಪಂದಿಸದ, ಅಸಾಧಾರಣ ನೋವು ಹಾಗೂ ತೀವ್ರ ಮಾನಸಿಕ ಒತ್ತಡ ಅನುಭವಿಸುತ್ತಿರುವ ರೋಗಿಗಳಿಗೆ ಈ ಕೇಂದ್ರವು ಸಂಜೀವಿನಿಯಾಗಲಿದೆ. ರಾಜ್ಯಾದ್ಯಂತ ವಿಸ್ತರಣೆಯ ಗುರಿ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವ ದಿನೇಶ್ ಗುಂಡೂರಾವ್ ಅವರು, “ಉಪಶಮನ ಆರೈಕೆಯನ್ನು ರಾಜ್ಯಾದ್ಯಂತ ಪ್ರಾರಂಭಿಸುವ ಗುರಿ ಹೊಂದಲಾಗಿದೆ. ಈಗಾಗಲೇ ಬೆಂಗಳೂರಿನ 4-5 ಕಡೆಗಳಲ್ಲಿ ಇಂತಹ ಕೇಂದ್ರಗಳನ್ನು ಆರಂಭಿಸಿದ್ದೇವೆ. ಇದು ಅನಗತ್ಯ ಆಸ್ಪತ್ರೆ ಭೇಟಿಗಳನ್ನು ಕಡಿಮೆ ಮಾಡುವುದಲ್ಲದೆ, ಸಂಕಷ್ಟದಲ್ಲಿರುವ ರೋಗಿಗಳ ಕುಟುಂಬಗಳಿಗೆ ದೊಡ್ಡ ಆಸರೆಯಾಗಲಿದೆ,” ಎಂದು ತಿಳಿಸಿದರು. ಲಭ್ಯವಿರುವ…
ನವದೆಹಲಿ: ರಾಷ್ಟ್ರಗೀತೆ ‘ವಂದೇ ಮಾತರಂ’ ಹಾಡುವುದಕ್ಕೆ ಅಡ್ಡಿಪಡಿಸುವುದು ಅಥವಾ ಗೀತೆಯನ್ನು ಅವಮಾನಿಸುವುದನ್ನು ಇನ್ಮುಂದೆ ಶಿಕ್ಷಾರ್ಹ ಅಪರಾಧವೆಂದು ಪರಿಗಣಿಸಲು ಕೇಂದ್ರ ಸಚಿವ ಸಂಪುಟವು ಮಹತ್ವದ ತೀರ್ಮಾನ ಕೈಗೊಂಡಿದೆ. ಇದಕ್ಕಾಗಿ ‘ರಾಷ್ಟ್ರೀಯ ಗೌರವಕ್ಕೆ ಅವಮಾನ ತಡೆ ಕಾಯ್ದೆ, 1971’ ಕ್ಕೆ ತಿದ್ದುಪಡಿ ತರುವ ಪ್ರಸ್ತಾವನೆಗೆ ಅನುಮೋದನೆ ನೀಡಲಾಗಿದೆ. ಈವರೆಗೆ ರಾಷ್ಟ್ರಗೀತೆ ‘ಜನ ಗಣ ಮನ’, ರಾಷ್ಟ್ರಧ್ವಜ ಮತ್ತು ಸಂವಿಧಾನಕ್ಕೆ ಮಾತ್ರ ಇದ್ದ ಕಾನೂನಾತ್ಮಕ ರಕ್ಷಣೆಯನ್ನು ಈಗ ‘ವಂದೇ ಮಾತರಂ’ಗೂ ವಿಸ್ತರಿಸಲಾಗುತ್ತಿದೆ. ರಾಷ್ಟ್ರಧ್ವಜ ಅಥವಾ ಸಂವಿಧಾನದ ಪ್ರತಿಯನ್ನು ಸುಡುವುದು, ವಿರೂಪಗೊಳಿಸುವುದು ಅಥವಾ ರಾಷ್ಟ್ರಗೀತೆ ಹಾಡುವಾಗ ಉದ್ದೇಶಪೂರ್ವಕವಾಗಿ ಅಡ್ಡಿಪಡಿಸುವವರಿಗೆ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ಅಥವಾ ದಂಡ, ಅಥವಾ ಎರಡನ್ನೂ ವಿಧಿಸಬಹುದಾಗಿದೆ. ಸರ್ಕಾರಿ ಕಾರ್ಯಕ್ರಮಗಳಲ್ಲಿ ವಂದೇ ಮಾತರಂನ 3 ನಿಮಿಷ 10 ಸೆಕೆಂಡ್‌ಗಳ ಆರು ಚರಣಗಳನ್ನು ಹಾಡುವುದನ್ನು ಕಡ್ಡಾಯಗೊಳಿಸಿ ಈಗಾಗಲೇ ಆದೇಶ ಹೊರಡಿಸಲಾಗಿದೆ. ನಿಯಮಗಳೇನು? ಕೇಂದ್ರ ಗೃಹ ಸಚಿವಾಲಯದ ಆದೇಶದಂತೆ, ಕಾರ್ಯಕ್ರಮಗಳಲ್ಲಿ ರಾಷ್ಟ್ರಗೀತೆಯನ್ನು ಮೊದಲು ಹಾಡಬೇಕು ಅಥವಾ ನುಡಿಸಬೇಕು. ಗೀತೆ ಹಾಡುವ ಸಂದರ್ಭದಲ್ಲಿ ಸಭಿಕರೆಲ್ಲರೂ ಎದ್ದು ನಿಂತು…














