Subscribe to Updates
Get the latest creative news from FooBar about art, design and business.
Author: ವಸಂತ ಬಿ ಈಶ್ವರಗೆರೆ
ವಸಂತ ಬಿ ಈಶ್ವರಗೆರೆ (Vasantha B Eshwaragere) ಅವರು ಕರ್ನಾಟಕದ ಪತ್ರಕರ್ತರು ಮತ್ತು ಕವಿ. ಉದಯ ನ್ಯೂಸ್, ಟಿವಿ5 ಕನ್ನಡ ಸೇರಿದಂತೆ ವಿವಿಧ ಸುದ್ದಿ ಮಾಧ್ಯಮಗಳಲ್ಲಿ ಸುಮಾರು 15 ವರ್ಷಗಳ ಅನುಭವವನ್ನು ಹೊಂದಿದ್ದಾರೆ. ಪ್ರಸ್ತುತ ಅವರು Kannada News Now ಡಿಜಿಡಿಲ್ ಮಾಧ್ಯಮದಲ್ಲಿ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ತಾಜಾ ಸುದ್ದಿ, ಸಾಹಿತ್ಯ, ಸಾಮಾಜಿಕ ವರದಿಗಾರಿಕೆ, ನ್ಯಾಯಾಂಗ ಸಂಬಂಧಿತ ವರದಿ ಮತ್ತು ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದ ಸುದ್ದಿಗಳ ವರದಿಯಲ್ಲಿ ಸಕ್ರಿಯರಾಗಿದ್ದಾರೆ. ಗುಡವಿ ಪಕ್ಷಿಧಾಮದಂತಹ ಪ್ರವಾಸಿ ತಾಣಗಳ ಕುರಿತು ಲೇಖನಗಳನ್ನು ಬರೆದಿದ್ದಾರೆ.
ರಾಯಚೂರು: ಜಿಲ್ಲೆಯ ಸಿಂಧನೂರಿನಲ್ಲಿ ನಡೆಯುತ್ತಿರುವ ಸಾಮೂಹಿಕ ವಿವಾಹ ಕಾರ್ಯಕ್ರಮಕ್ಕೆ ಆಗಮಿಸಿದ ಗಣ್ಯರ ಹೆಲಿಕಾಪ್ಟರ್ ಲ್ಯಾಂಡಿಂಗ್ ವಿಚಾರದಲ್ಲಿ ಪೈಲಟ್ ಮಾಡಿದ ಸಣ್ಣ ಎಡವಟ್ಟು, ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಯಲ್ಲಿ ಕೆಲಕಾಲ ಆತಂಕ ಮತ್ತು ಗೊಂದಲ ಮೂಡಿಸಿದ ಘಟನೆ ನಡೆದಿದೆ. ನಡೆದಿದ್ದೇನು? ಸಿಂಧನೂರಿನ ಜ್ಯೂನಿಯರ್ ಕಾಲೇಜು ಮೈದಾನದಲ್ಲಿ ಒಂದೇ ಕಡೆ ಮೂರು ಹೆಲಿಪ್ಯಾಡ್‌ಗಳನ್ನು ಸಿದ್ಧಪಡಿಸಲಾಗಿತ್ತು. ಸಾಮೂಹಿಕ ವಿವಾಹ ಕಾರ್ಯಕ್ರಮಕ್ಕೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ನಟ ಕಿಚ್ಚ ಸುದೀಪ್ ಅವರು ಪ್ರತ್ಯೇಕ ಹೆಲಿಕಾಪ್ಟರ್‌ಗಳಲ್ಲಿ ಆಗಮಿಸಿದ್ದರು. ಈ ವೇಳೆ ಸುದೀಪ್ ಅವರಿದ್ದ ಹೆಲಿಕಾಪ್ಟರ್‌ನ ಪೈಲಟ್, ತಮಗೆ ನಿಗದಿಪಡಿಸಿದ್ದ ಹೆಲಿಪ್ಯಾಡ್ ಬಿಟ್ಟು, ಡಿ.ಕೆ. ಶಿವಕುಮಾರ್ ಅವರು ಇಳಿಯಬೇಕಿದ್ದ ಹೆಲಿಪ್ಯಾಡ್‌ನಲ್ಲಿ ಹೆಲಿಕಾಪ್ಟರ್ ಲ್ಯಾಂಡ್ ಮಾಡಿದರು. ಅಧಿಕಾರಿಗಳ ಆತಂಕ: ಗಣ್ಯರ ಸುರಕ್ಷತೆ ಮತ್ತು ಶಿಷ್ಟಾಚಾರದ (Protocol) ದೃಷ್ಟಿಯಿಂದ ನಿಗದಿತ ಹೆಲಿಪ್ಯಾಡ್‌ನಲ್ಲಿಯೇ ಲ್ಯಾಂಡಿಂಗ್ ಆಗಬೇಕಿತ್ತು. ಆದರೆ ಸ್ಥಳ ಬದಲಾವಣೆಯಿಂದಾಗಿ ತಬ್ಬಿಬ್ಬಾದ ಪೊಲೀಸ್ ಅಧಿಕಾರಿಗಳು ತಕ್ಷಣವೇ ಪೈಲಟ್ ಅತಾರಾಟೆ ತೆಗೆದುಕೊಂಡರು. ನಂತರ ಅಧಿಕಾರಿಗಳ ಸೂಚನೆ ಮೇರೆಗೆ ಹೆಲಿಕಾಪ್ಟರ್ ಅನ್ನು ಪುನಃ ಮೇಲೆಬ್ಬಿಸಿ, ನಿಗದಿಪಡಿಸಿದ…
ರಾಯಚೂರು: ಜಿಲ್ಲೆಯ ಸಿಂಧನೂರಿನಲ್ಲಿ ಆಯೋಜಿಸಲಾಗಿದ್ದ ದೈತ್ಯ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಬೆಂಕಿ ಅವಘಡ ಸಂಭವಿಸಿದೆ. ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಹಾಗೂ ರಾಜ್ಯದ ಹಲವು ಸಚಿವರು ವೇದಿಕೆಯ ಮೇಲಿರುವಾಗಲೇ ಈ ಘಟನೆ ನಡೆದಿದ್ದು, ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಘಟನೆಯ ವಿವರ: ಸಿಂಧನೂರಿನ ತಾಲೂಕು ಕ್ರೀಡಾಂಗಣದಲ್ಲಿ ವಿಧಾನ ಪರಿಷತ್ ಸದಸ್ಯ ಬಸನಗೌಡ ಬಾದರ್ಲಿ ಫೌಂಡೇಶನ್ ವತಿಯಿಂದ 151 ಜೋಡಿಗಳ ಸಾಮೂಹಿಕ ವಿವಾಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮ ಅದ್ದೂರಿಯಾಗಿ ನಡೆಯುತ್ತಿದ್ದ ಸಂದರ್ಭದಲ್ಲಿ, ವೇದಿಕೆಯ ಒಂದು ಭಾಗದಲ್ಲಿ ಹಠಾತ್ ಶಾರ್ಟ್ ಸರ್ಕ್ಯೂಟ್ ಸಂಭವಿಸಿದೆ. ಬೆಂಕಿಯ ಕಿಡಿಗಳು ವೈಯರ್, ಸ್ಪೀಕರ್ ಹಾಗೂ ವೇದಿಕೆಯ ಅಲಂಕಾರಿಕ ಬಟ್ಟೆಗಳಿಗೆ ತಗುಲಿದ ಪರಿಣಾಮ ಕ್ಷಣಾರ್ಧದಲ್ಲಿ ಬೆಂಕಿ ಕಾಣಿಸಿಕೊಂಡಿತು. ಗಣ್ಯರ ಸಮ್ಮುಖದಲ್ಲೇ ಆತಂಕ: ಈ ಅವಘಡ ಸಂಭವಿಸಿದಾಗ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸ್ಯಾಂಡಲ್‌ವುಡ್ ನಟ ಸುದೀಪ್ ಹಾಗೂ ಸರ್ಕಾರದ ಹಲವು ಸಚಿವರು ವೇದಿಕೆಯ ಮೇಲಿದ್ದರು. ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು…
ಕಾರವಾರ: ಆತ ಕೇವಲ ವೈದ್ಯನಾಗಿರಲಿಲ್ಲ, ಆ ಕುಗ್ರಾಮದ ಪಾಲಿನ ಆಪದ್ಬಾಂಧವ. ವ್ಯವಸ್ಥೆಗಳೇ ಮರೆತುಹೋದ ದಟ್ಟ ಅರಣ್ಯದ ನಡುವಿನ ಹಳ್ಳಿಗೆ ಆತನೇ ಸಂಜೀವಿನಿಯಾಗಿದ್ದ. ಆದರೆ, ಸಾವಿರಾರು ಜನರ ಎದೆಯ ದವಡಿತ ಅಳೆದ ಆ ಜೀವ, ತನ್ನ ಎದೆಯಲ್ಲಿ ಏಳುವ ನೋವನ್ನು ಯಾರಿಗೂ ತಿಳಿಸಲಾಗದೆ, ನೆಟ್‌ವರ್ಕ್ ಇಲ್ಲದ ಊರಿನಲ್ಲಿ ಸಹಾಯಕ್ಕಾಗಿ ಹಲುಬುತ್ತಾ ಕೊನೆಯುಸಿರೆಳೆದಿದೆ. ಇದು ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ಡಿಗ್ಗಿ ಗ್ರಾಮದ ಜನಮನ ಗೆದ್ದಿದ್ದ ಡಾ. ಲೆನ್ವರ್ ಲೋಬೋ ಅವರ ಹೃದಯವಿದ್ರಾವಕ ಕಥೆ. ಶಾಪವಾದ ಕೂಗ್ರಾಮದ ಒಂಟಿತನ ಉತ್ತರ ಕನ್ನಡ ಮತ್ತು ಗೋವಾ ಗಡಿಭಾಗದ ಡಿಗ್ಗಿ ಎನ್ನುವುದು ಹೊರಜಗತ್ತಿನಿಂದ ಸಂಪೂರ್ಣ ಕಡಿದುಹೋದ ಪ್ರದೇಶ. ಅಲ್ಲಿ ಸರಿಯಾದ ರಸ್ತೆಯಿಲ್ಲ, ಮೊಬೈಲ್ ನೆಟ್‌ವರ್ಕ್ ಅಂತೂ ಕನಸಿನ ಮಾತು. ಇಂತಹ ಕಠಿಣ ಪರಿಸ್ಥಿತಿಯ ನಡುವೆಯೂ ಡಾ. ಲೆನ್ವರ್ ಲೋಬೋ ಕಳೆದ ಮೂರು ವರ್ಷಗಳಿಂದ ಸ್ಕೋಡಾ ವೇಸ್ ಸಂಸ್ಥೆಯ ಮೂಲಕ ಜನರ ಸೇವೆ ಮಾಡುತ್ತಿದ್ದರು. ಅದೆಷ್ಟೋ ಸಂಕಷ್ಟದ ಪರಿಸ್ಥಿತಿಯಲ್ಲಿ ಜನರ ಪ್ರಾಣ ಉಳಿಸಿದ್ದ ಲೋಬೋ ಅವರು, ಡಿಗ್ಗಿ…
ಚಿಕ್ಕಮಗಳೂರು: ಹೈಕೋರ್ಟ್ ನಿರ್ದೇಶನದಂತೆ ನಡೆದ ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಗಳ ಮರು ಎಣಿಕೆ ಪ್ರಕ್ರಿಯೆಯು ರಾಜ್ಯ ರಾಜಕೀಯದಲ್ಲಿ ಭಾರಿ ಸಂಚಲನ ಮೂಡಿಸಿದೆ. 2023ರ ವಿಧಾನಸಭಾ ಚುನಾವಣೆಯ ಫಲಿತಾಂಶದ ಲೆಕ್ಕಾಚಾರವು ಈ ಮರು ಎಣಿಕೆಯಲ್ಲಿ ಸಂಪೂರ್ಣವಾಗಿ ಅದಲುಬದಲಾಗಿದ್ದು, ಬಿಜೆಪಿ ಅಭ್ಯರ್ಥಿ ಡಿ.ಎನ್. ಜೀವರಾಜ್ ಅವರ ಪರವಾಗಿ ಫಲಿತಾಂಶ ವಾಲುವ ಸಾಧ್ಯತೆಗಳು ದಟ್ಟವಾಗಿವೆ. ಮರು ಎಣಿಕೆಯಲ್ಲಿ ಕಂಡುಬಂದ ಪ್ರಮುಖ ಬದಲಾವಣೆಗಳು ಚುನಾವಣಾಧಿಕಾರಿ ಗೌರವ್ ಕುಮಾರ್ ಶೆಟ್ಟಿ ಅವರು ನೀಡಿರುವ ಮಾಹಿತಿಯಂತೆ, ಒಟ್ಟು 1,822 ಅಂಚೆ ಮತಗಳ ಮರು ಪರಿಶೀಲನೆ ನಡೆಸಲಾಯಿತು. ಮರು ಎಣಿಕೆಯ ನಂತರದ ಅಂಕಿ-ಅಂಶಗಳು ಹೀಗಿವೆ: ಡಿ.ಎನ್. ಜೀವರಾಜ್ (ಬಿಜೆಪಿ): 2023ರಲ್ಲಿ ಇವರು 692 ಮತಗಳನ್ನು ಪಡೆದಿದ್ದರು. ಈಗಿನ ಎಣಿಕೆಯಲ್ಲಿ ಇವರಿಗೆ 690 ಮತಗಳು ಲಭಿಸಿದ್ದು, ಕೇವಲ 2 ಮತಗಳ ಇಳಿಕೆಯಾಗಿದೆ. ಟಿ.ಡಿ. ರಾಜೇಗೌಡ (ಕಾಂಗ್ರೆಸ್): ಈ ಹಿಂದೆ ಇವರು 569 ಮತಗಳನ್ನು ಪಡೆದಿದ್ದರು. ಆದರೆ ಮರು ಎಣಿಕೆಯಲ್ಲಿ ಇವರು ಪಡೆದ ಮತಗಳ ಸಂಖ್ಯೆ 314ಕ್ಕೆ ಕುಸಿದಿದೆ. ಅಂದರೆ ಬರೋಬ್ಬರಿ 251…
ಬಾಗಲಕೋಟೆ: ಹಿರಿಯ ನಾಯಕ ಹೆಚ್.ವೈ. ಮೇಟಿ ಅವರ ನಿಧನದಿಂದ ತೆರವಾಗಿದ್ದ ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಫಲಿತಾಂಶಕ್ಕೆ ಕ್ಷಣಗಣನೆ ಆರಂಭವಾಗಿದೆ. ಏಪ್ರಿಲ್ 9 ರಂದು ನಡೆದಿದ್ದ ಮತದಾನದ ಅಂತಿಮ ತೀರ್ಪು ನಾಳೆ (ಮೇ 4, ಸೋಮವಾರ) ಪ್ರಕಟವಾಗಲಿದ್ದು, ಇಡೀ ರಾಜ್ಯದ ಕುತೂಹಲ ಬಾಗಲಕೋಟೆಯತ್ತ ನೆಟ್ಟಿದೆ. ಚುನಾವಣಾ ಕಣದ ಚಿತ್ರಣ ಈ ಬಾರಿಯ ಹಣಾಹಣಿ ನೇರ ಹಾಗೂ ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿದೆ: ಕಾಂಗ್ರೆಸ್: ದಿವಂಗತ ಹೆಚ್.ವೈ. ಮೇಟಿ ಅವರ ಪುತ್ರ ಉಮೇಶ ಮೇಟಿ ಅವರು ಅನುಕಂಪದ ಅಲೆಯ ಮೇಲೆ ಕಣಕ್ಕಿಳಿದಿದ್ದಾರೆ. ಬಿಜೆಪಿ: ಕಳೆದ ಬಾರಿ ಸೋಲು ಕಂಡಿದ್ದ ಹಿರಿಯ ನಾಯಕ ವೀರಣ್ಣ ಚರಂತಿಮಠ ಅವರು ಬಿಜೆಪಿಯಿಂದ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಮತದಾನದ ಅಂಕಿ-ಅಂಶಗಳು ಕ್ಷೇತ್ರದಲ್ಲಿ ಒಟ್ಟು 1,78,273 (ಶೇ. 68) ಮತಗಳು ಚಲಾವಣೆಯಾಗಿವೆ. ವಿಶೇಷವೆಂದರೆ ಪುರುಷ ಮತದಾರರಿಗಿಂತ (88,241) ಮಹಿಳಾ ಮತದಾರರು (90,024) ಹೆಚ್ಚಿನ ಸಂಖ್ಯೆಯಲ್ಲಿ ತಮ್ಮ ಹಕ್ಕು ಚಲಾಯಿಸಿರುವುದು ಯಾವುದಾದರೂ ಒಂದು ಪಕ್ಷಕ್ಕೆ ಪ್ಲಸ್ ಪಾಯಿಂಟ್ ಆಗುವ ಸಾಧ್ಯತೆಯಿದೆ. ಅಬ್ಬರದ ಪ್ರಚಾರದ…
ಮಹಾರಾಷ್ಟ್ರ: ಪುಣೆ ಜಿಲ್ಲೆಯಲ್ಲಿ ನಡೆದ ನಾಲ್ಕು ವರ್ಷದ ಹೆಣ್ಣು ಮಗುವಿನ ಮೇಲಿನ ಅತ್ಯಾಚಾರ ಮತ್ತು ಬರ್ಬರ ಹತ್ಯೆ ರಾಜ್ಯವನ್ನೇ ಬೆಚ್ಚಿಬೀಳಿಸಿದೆ. ಹಸಿವಿನ ಆಸೆಯನ್ನೇ ಬಂಡವಾಳ ಮಾಡಿಕೊಂಡು, ಅಮಾಯಕ ಮಗುವಿನ ಜೀವ ಕಸಿದುಕೊಂಡ 65 ವರ್ಷದ ವೃದ್ಧನ ಈ ಹೇಯ ಕೃತ್ಯಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ಆರೋಪಿಗೆ ಗಲ್ಲು ಶಿಕ್ಷೆ ನೀಡಬೇಕೆಂಬ ಕೂಗು ಎಲ್ಲೆಡೆಯಿಂದ ಕೇಳಿಬರುತ್ತಿದೆ. ಘಟನೆಯ ಭೀಕರತೆ ಪುಣೆಯ ಭೋರ್ ತಹಸಿಲ್‌ನಲ್ಲಿ ನಡೆದ ಈ ಘಟನೆಯ ವಿವರಗಳು ಎಂಥವರನ್ನೂ ಕಣ್ಣೀರು ಹಾಕುವಂತೆ ಮಾಡುತ್ತದೆ. ಆಮಿಷ ಮತ್ತು ಕೃತ್ಯ: ಕೂಲಿ ಕೆಲಸ ಮಾಡುತ್ತಿದ್ದ ಮತ್ತು ಕ್ರಿಮಿನಲ್ ಹಿನ್ನೆಲೆ ಹೊಂದಿದ್ದ 65 ವರ್ಷದ ವೃದ್ಧ, ನಾಲ್ಕು ವರ್ಷದ ಬಾಲಕಿಗೆ ಆಹಾರದ ಆಮಿಷವೊಡ್ಡಿ ಕರೆದೊಯ್ದಿದ್ದಾನೆ. ಅತ್ಯಾಚಾರ ಮತ್ತು ಕೊಲೆ: ನಿರ್ಜನ ಪ್ರದೇಶದ ದನಗಳ ಶೆಡ್‌ಗೆ ಕರೆದೊಯ್ದು ಅತ್ಯಾಚಾರ ಎಸಗಿ, ಕಲ್ಲಿನಿಂದ ಜಜ್ಜಿ ಬರ್ಬರ ಹತ್ಯೆ ಮಾಡಿದ್ದಾನೆ. ಶವದ ವಿಲೇವಾರಿ: ಕೊಲೆಯ ನಂತರ ಬಾಲಕಿಯ ಮೃತದೇಹವನ್ನು ಸಗಣಿಯಲ್ಲಿ ಎಸೆದು ಆರೋಪಿ ಪರಾರಿಯಾಗಲು ಯತ್ನಿಸಿದ್ದನು. ಮುಂಬೈ-ಬೆಂಗಳೂರು ಹೆದ್ದಾರಿ ತಡೆದು…
ಕೋಲ್ಕತ್ತಾ: ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣ ಜಿಲ್ಲೆಯ ಫಾಲ್ಟಾ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ಅಕ್ರಮಗಳು ನಡೆದ ಹಿನ್ನೆಲೆಯಲ್ಲಿ, ಕೇಂದ್ರ ಚುನಾವಣಾ ಆಯೋಗವು ಕ್ಷೇತ್ರದ ಎಲ್ಲಾ 285 ಮತಗಟ್ಟೆಗಳಲ್ಲಿ ಮೇ 21ರಂದು ಮರು ಮತದಾನ ನಡೆಸುವಂತೆ ಶನಿವಾರ ಆದೇಶಿಸಿದೆ. ಏನಿದು ಪ್ರಕರಣ? ಏಪ್ರಿಲ್ 29ರಂದು ನಡೆದ ಎರಡನೇ ಹಂತದ ಮತದಾನದ ವೇಳೆ ಗಂಭೀರ ಸ್ವರೂಪದ ಚುನಾವಣಾ ಅಪರಾಧಗಳು ಮತ್ತು ಪ್ರಜಾಪ್ರಭುತ್ವ ಪ್ರಕ್ರಿಯೆಯನ್ನು ಬುಡಮೇಲು ಮಾಡುವಂತಹ ಕೃತ್ಯಗಳು ನಡೆದಿರುವ ದೂರುಗಳು ಕೇಳಿಬಂದಿದ್ದವು. ಈ ಹಿನ್ನೆಲೆಯಲ್ಲಿ ಆಯೋಗವು ಅಂದಿನ ಮತದಾನವನ್ನು ‘ಅನೂರ್ಜಿತ’ ಎಂದು ಘೋಷಿಸಿದೆ. ಆಯೋಗದ ಪ್ರಮುಖ ನಿರ್ಧಾರಗಳು: ಮರು ಮತದಾನದ ಸಮಯ: ಮೇ 21ರಂದು ಬೆಳಿಗ್ಗೆ 7ರಿಂದ ಸಂಜೆ 6ರವರೆಗೆ ಎಲ್ಲಾ ಮತಗಟ್ಟೆಗಳಲ್ಲಿ ಹಾಗೂ ಸಹಾಯಕ ಮತಗಟ್ಟೆಗಳಲ್ಲಿ ಮತದಾನ ನಡೆಯಲಿದೆ. ವರದಿಗಳ ಆಧಾರ: ಮುಖ್ಯ ಚುನಾವಣಾಧಿಕಾರಿ, ಜಿಲ್ಲಾ ಚುನಾವಣಾಧಿಕಾರಿ ಮತ್ತು ಚುನಾವಣಾ ವೀಕ್ಷಕರು ನೀಡಿದ ವರದಿಗಳನ್ನು ಪರಿಶೀಲಿಸಿದ ನಂತರ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ. ಗಂಭೀರ ಆರೋಪ: ಮತದಾರರಿಗೆ ಬೆದರಿಕೆ ಹಾಕುವುದು, ಮತಗಟ್ಟೆಗಳೊಳಗೆ ಅನಧಿಕೃತ…
ಶಿವಮೊಗ್ಗ: ಸಾಗರ ಪೊಲೀಸ್ ಉಪವಿಭಾಗದಲ್ಲಿ ಸಂಚಾರ ನಿಯಮಗಳ ಜಾರಿಯನ್ನು ಹೆಚ್ಚಿಸಲು ಕಳೆದ 2 ತಿಂಗಳಿಂದ ಐಟಿಎಂಎಸ್ (ITMS) ತಂತ್ರಜ್ಞಾನದ ಪರಿಚಯಿಸಲಾಗಿದೆ. ಆದರೇ ನೋ ಪಾರ್ಕಿಂಗ್ ಪ್ರದೇಶದಲ್ಲಿದ್ದಂತ ಕಾರಿಗೆ ದಂಡ ವಿಧಿಸೋ ನಿಟ್ಟಿನಲ್ಲಿ ಮಾಡಿದಂತ ಎಡವಟ್ಟಿನಿಂದಾಗಿ ಕಾರಿನಲ್ಲಿ ತೆರಳೋರಿಗೆ ಹೆಲ್ಮೆಟ್ ದಂಡದ ವಿವಾದ ಸೃಷ್ಠಿಯಾಗಿದೆ ಎಂಬುದಾಗಿ ಎಎಸ್ಪಿ ಡಾ. ಬೆನಕ ಪ್ರಸಾದ್ ಅವರು ಮಹತ್ವದ ಸ್ಪಷ್ಟಪಡಿಸಿದ್ದಾರೆ. ಇಂದು ಅವರು ಸಾಗರ ಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇತ್ತೀಚೆಗೆ ನಡೆದ ಚಲನ್ ದೋಷದ ಘಟನೆಯ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಘಟನೆಯ ವಿವರ ದಿನಾಂಕ 01/05/2026 ರಂದು ಸಾಗರ ಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಾರಿನ (4 ಚಕ್ರದ ವಾಹನ) ಮಾಲೀಕರೊಬ್ಬರಿಗೆ ಹೆಲ್ಮೆಟ್ ಧರಿಸದಿದ್ದಕ್ಕಾಗಿ ದಂಡ ವಿಧಿಸಲಾಗಿತ್ತು. ವಾಸ್ತವವಾಗಿ ಇದು ನೋ-ಪಾರ್ಕಿಂಗ್ (ನಿಲುಗಡೆ ನಿಷೇಧಿತ) ವಲಯದಲ್ಲಿ ವಾಹನವನ್ನು ನಿಲ್ಲಿಸಿದ್ದ ಪ್ರಕರಣವಾಗಿತ್ತು. ಐಟಿಎಂಎಸ್ ತಂತ್ರಾಂಶದಲ್ಲಿ ವಾಹನ ಮಾಲೀಕರು ಮಾಡಿದ ಉಲ್ಲಂಘನೆಯ ಬಗೆಯನ್ನು ನಮೂದಿಸುವಾಗ ಸಿಬ್ಬಂದಿಯೊಬ್ಬರು ಮಾಡಿದ ಸಣ್ಣ ಕೈತಪ್ಪಿನಿಂದಾಗಿ ಈ ಪ್ರಮಾದ ಸಂಭವಿಸಿದೆ. ಚಲನ್…
ನವದೆಹಲಿ: ರಾಷ್ಟ್ರ ರಾಜಧಾನಿಯ ವಿವೇಕ್ ವಿಹಾರ್ ಪ್ರದೇಶದ ನಾಲ್ಕು ಅಂತಸ್ತಿನ ವಸತಿ ಸಂಕೀರ್ಣವೊಂದರಲ್ಲಿ ಭಾನುವಾರ ಮುಂಜಾನೆ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ ಒಂದು ಮಗು ಸೇರಿದಂತೆ ಒಂಬತ್ತು ಜನರು ಸಜೀವ ದಹನವಾಗಿದ್ದಾರೆ. ಪ್ರಾಥಮಿಕ ತನಿಖೆಯ ಪ್ರಕಾರ, ಎಸಿ (Air Conditioner) ಸ್ಫೋಟಗೊಂಡಿದ್ದೇ ಈ ಭೀಕರ ದುರಂತಕ್ಕೆ ಕಾರಣ ಎನ್ನಲಾಗಿದೆ. ಘಟನೆಯ ವಿವರ: ಭಾನುವಾರ ಮುಂಜಾನೆ ಸುಮಾರು 3:47 ರ ಹೊತ್ತಿಗೆ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಗಾಢ ನಿದ್ರೆಯಲ್ಲಿದ್ದ ನಿವಾಸಿಗಳು ಹೊರಬರಲಾಗದೆ ಕಟ್ಟಡದೊಳಗೆ ಸಿಲುಕಿಕೊಂಡಿದ್ದರು. ಘಟನಾ ಸ್ಥಳಕ್ಕೆ ತಕ್ಷಣವೇ 12 ಅಗ್ನಿಶಾಮಕ ವಾಹನಗಳು ಧಾವಿಸಿ ಸತತ ಕಾರ್ಯಾಚರಣೆ ನಡೆಸಿದವು. ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಕಟ್ಟಡದಲ್ಲಿದ್ದ 10 ರಿಂದ 15 ಜನರನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮೃತಪಟ್ಟವರ ವಿವರ: ಬೆಂಕಿಯ ಕೆನ್ನಾಲಿಗೆಗೆ ಒಟ್ಟು ನಾಲ್ವರು ಪುರುಷರು, ನಾಲ್ವರು ಮಹಿಳೆಯರು ಹಾಗೂ ಒಂದು ವರ್ಷದ ಮಗು ಬಲಿಯಾಗಿದೆ. ಕಟ್ಟಡದ ವಿವಿಧ ಅಂತಸ್ತುಗಳಲ್ಲಿ ಮೃತದೇಹಗಳು ಪತ್ತೆಯಾಗಿವೆ: ಮೊದಲ ಅಂತಸ್ತು: ನವೀನ್ ಎಂಬುವವರ ಪತ್ನಿ ಶಿಖಾ ಜೈನ್…
ಹರಿಯಾಣ: ಇಲ್ಲಿನ ಗುರುಗ್ರಾಮದಲ್ಲಿ ಮನಕಲಕುವ ಘಟನೆಯೊಂದು ನಡೆದಿದ್ದು, ವ್ಯಕ್ತಿಯೊಬ್ಬ ತನ್ನ ಪತ್ನಿ ಹಾಗೂ ನಾಲ್ವರು ಮಕ್ಕಳನ್ನು ಬರ್ಬರವಾಗಿ ಕೊಲೆ ಮಾಡಿ, ತಾನೂ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಬೆಳಕಿಗೆ ಬಂದಿದೆ. ಘಟನೆಯ ವಿವರ: ಗುರುಗ್ರಾಮದ ಉಪ್ಪಲ್ ಸೌತ್ ಎಂಡ್ (Uppal South End) ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಆರೋಪಿಯು ತನ್ನ ಪತ್ನಿ ಮತ್ತು ನಾಲ್ವರು ಮಕ್ಕಳನ್ನು ಹತ್ಯೆ ಮಾಡಿದ ನಂತರ ತಾನೂ ಪ್ರಾಣ ಕಳೆದುಕೊಳ್ಳಲು ಯತ್ನಿಸಿದ್ದಾನೆ ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ. ಪ್ರಮುಖ ಅಂಶಗಳು: ಬಲಿಪಶುಗಳು: ಆರೋಪಿಯ ಪತ್ನಿ ಹಾಗೂ ಆತನ ನಾಲ್ವರು ಮಕ್ಕಳು ಘಟನೆಯಲ್ಲಿ ಸಾವನ್ನಪ್ಪಿದ್ದಾರೆ. ಆರೋಪಿಯ ಸ್ಥಿತಿ: ಕುಟುಂಬವನ್ನು ಹತ್ಯೆ ಮಾಡಿದ ಬಳಿಕ ಆರೋಪಿಯು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಪ್ರಸ್ತುತ ಆತನನ್ನು ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಪೊಲೀಸ್ ತನಿಖೆ: ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ವಿಧಿವಿಜ್ಞಾನ ತಂಡ (Forensic Team) ಸಾಕ್ಷ್ಯಗಳನ್ನು ಸಂಗ್ರಹಿಸುತ್ತಿದೆ. ಕಾರಣ ಇನ್ನೂ ನಿಗೂಢ: ಇಷ್ಟು ದೊಡ್ಡ ಮಟ್ಟದ…














