Subscribe to Updates
Get the latest creative news from FooBar about art, design and business.
Author: kannadanewsnow09
ಮಂಡ್ಯ: ಚಾಕೊಲೇಟ್ ಕೊಡಿಸುವುದಾಗಿ ಆಸೆ ತೋರಿಸಿದಂತ ವ್ಯಕ್ತಿಯೊಬ್ಬ 4 ವರ್ಷದ ಮಗುವಿನ ಮೇಲೆ ಅತ್ಯಾಚಾರ ಎಸದಿರುವಂತ ಘಟನೆ ಮಂಡ್ಯದಲ್ಲಿ ನಡೆದಿದೆ. ಮಂಡ್ಯದಲ್ಲಿ 4 ವರ್ಷದ ಮಗುವಿನ ಮೇಲೆ ಕಾಮುಕನೊಬ್ಬ ಚಾಕೋಲೇಟ್ ಆಸೆ ತೋರಿಸಿ ಕರೆದೊಯ್ದು ಅತ್ಯಾಚಾರವೆಸಗಿದ್ದಾನೆ. ಈ ಸಂಬಂಧ 21 ವರ್ಷದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಸಂತ್ರಸ್ತ ಬಾಲಕಿಯ ಪೋಷಕರು ಬಿಹಾರ ಮೂಲದವರಾಗಿದ್ದು, ಫ್ಲೈವುಡ್ ಫ್ಯಾಕ್ಟರಿಯಲ್ಲಿ ಕಳೆದ ಒಂದು ವರ್ಷದಿಂದ ಕೆಲಸ ಮಾಡುತ್ತಿದ್ದರು. ಈ ಘಟನೆಯ ಬಗ್ಗೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ. https://kannadanewsnow.com/kannada/an-elderly-woman-from-dharwad-falls-victim-to-a-heart-attack-abroad/ https://kannadanewsnow.com/kannada/did-you-score-more-than-95-in-sslc-exam-apply-for-scholarship-now/
ರಾತ್ರಿ ಮಲಗುವಾಗ ಯಾವ ದಿಕ್ಕಿಗೆ ತಲೆ ಇಟ್ಟುಕೊಂಡು ಮಲಗಬೇಕು ?. ಶಾಸ್ತ್ರಾನುಸಾರ ಪ್ರಾಕ್ ಶಿರಾ ಶಯನೇ ವಿಂದ್ಯಾತ್ ಧನಮಾಯುಶ್ಚ ದಕ್ಷಿಣೇ| ಪಶ್ಚಿಮೇ ಪ್ರಬಲಾ ಚಿಂತಾ ಹಾನಿಮೃತ್ಯುರಥೋತ್ತರೇ || ಪೂರ್ವಕ್ಕೆ ತಲೆ ಇಟ್ಟುಕೊಂಡು ಮಲಗಿದರೆ ಧನ ಪ್ರಾಪ್ತಿಯಾಗುವುದು.ಲೌಕಿಕ ಐಶ್ವರ್ಯ ಬಯಸಿದರೆ ಆ ಪ್ರಕಾರ ಸಂಕಲ್ಪ ಮಾಡಿಕೊಂಡು ಪೂರ್ವಕ್ಕೆ ನಿತ್ಯ ರಾತ್ರಿಯಲ್ಲಿ ಮಲಗುವಾಗ ತಲೆಯನ್ನು ಹಾಕಬಹುದು. ದಕ್ಷಿಣಕ್ಕೆ ತಲೆ ಇಟ್ಟುಕೊಂಡು ಮಲಗಿದರೆ ಆಯುಸ್ಸು, ಮಾನಸಿಕ ನೆಮ್ಮದಿ, ಶಾಂತಿ ಹೆಚ್ಚುತ್ತದೆ. ಪಶ್ಚಿಮಕ್ಕೆ ತಲೆ ಮಾಡಿ ಮಲಗಿದರೆ,ಪ್ರಬಲವಾದ ಚಿಂತೆಗಳು ಯಾವಾಗಲೂ ಎಲ್ಲಾ ವಿಭಾಗಗಳಲ್ಲಿಯೂ ಬರುತ್ತಲೇ ಇರುತ್ತವೆ. ಉತ್ತರಕ್ಕೆ ತಲೆ ಇಟ್ಟು ಮಲಗಿದರೆ,ಧನ ನಷ್ಟ ಮತ್ತು ಮರಣ ಸಂಭವಿಸುತ್ತದೆ, ಅಂದರೆ ಆಯುಷ್ಯ ಹಾನಿಯಾಗುತ್ತದೆ. ಪೂರ್ವ ದಿಕ್ಕು ಸೂರ್ಯೋದಯದ ದಿಕ್ಕು. ಆರೋಗ್ಯಂ ಭಾಸ್ಕರಾದಿಚ್ಛೇತ್, ಸೂರ್ಯನಿಂದ ಆರೊಗ್ಯವನ್ನು ಬಯಸಿ, ಎಂಬುದು ಸ್ಮೃತಿ ವಾಕ್ಯ. ಸೂರ್ಯನು ಐಶ್ವರ್ಯಕ್ಕೆ, ಆರೋಗ್ಯಕ್ಕೆ ಪ್ರಧಾನ ದೇವತೆ. ಪೂರ್ವಕ್ಕೆ ತಲೆ ಮಾಡಿ ಮಲಗಿದರೆ, ಐಶ್ವರ್ಯ ಮತ್ತು ಆರೋಗ್ಯ ಸಿದ್ಧಿಸುತ್ತದೆ. ದಕ್ಷಿಣವು ಪಿತೃದೇವತೆಗಳು ಮತ್ತು ಯಮನ ದಿಕ್ಕು. ದಕ್ಷಿಣಕ್ಕೆ ತಲೆಮಾಡಿ…
ಧಾರವಾಡ: ವಿದೇಶಕ್ಕೆ ತೆರಳಿದ್ದಂತ ಧಾರವಾಡದ ವೃದ್ಧೆಯೊಬ್ಬರು ಹೃದಯಾಘಾತದಿಂದ ಅಲ್ಲಿಯೆ ಸಾವನ್ನಪ್ಪಿರುವಂತ ಘಟನೆ ಓಮನ್ ದೇಶದಲ್ಲಿ ನಡೆದಿದೆ. ಧಾರವಾಡ ಜಿಲ್ಲೆಯ ಹುಬ್ಬಳ್ಳಿ ತಾಲ್ಲೂಕಿನ ಕುಸುಗಲ್ ನಿವಾಸಿ ಮಲ್ಲವ್ವ ಸಂಗಟ(74) ಎಂಬ ವೃದ್ಧೆ ಓಮನ್ ದೇಶದ ಮಸ್ಕತ್ ಗೆ ತೆರಳಿದ್ದರು. ಪುತ್ರ ಮಸ್ಕತ್ ನಲ್ಲಿ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರಿಂದ ಆತನ ಬಳಿಗೆ ಕಳೆದ ಬುಧವಾರದಂದು ತೆರಳಿದ್ದರು. ಪುತ್ರಿ, ಸೊಸೆಯೊಂದಿಗೆ ಮಸ್ಕತ್ ಗೆ ಮಲ್ಲವ್ವ ತೆರಳಿದ್ದರು. ನಿನ್ನೆ ರಾತ್ರಿ ಎದೆನೋವು ಕಾಣಿಸಿಕೊಂಡು ಹೃದಯಾಘಾತದಿಂದ ಮಲ್ಲವ್ವ ಮಸ್ಕತ್ ನಲ್ಲಿ ಸಾವನ್ನಪ್ಪಿದ್ದಾರೆ. ಅವರ ಮೃತದೇಹವು ನಾಳೆ ಬೆಳಗ್ಗೆ ಕುಸುಗಲ್ ಗೆ ಆಗಮಿಸಲಿದೆ. https://kannadanewsnow.com/kannada/court-order-for-the-formation-of-a-new-committee-in-3-months-sagar-marikamba-protection-committee-director-anand/ https://kannadanewsnow.com/kannada/did-you-score-more-than-95-in-sslc-exam-apply-for-scholarship-now/
ಶಿವಮೊಗ್ಗ : ಮೂರು ತಿಂಗಳಿನೊಳಗೆ ಹೊಸ ಸಮಿತಿ ರಚಿಸಿ ನ್ಯಾಯಾಲಯಕ್ಕೆ ಮಾಹಿತಿ ನೀಡಲು ಸಾಗರದ ಮಾರಿಕಾಂಬಾ ವ್ಯವಸ್ಥಾಪಕ ಸಮಿತಿ ಜಿಲ್ಲಾ ನ್ಯಾಯಾಲಯ ಸ್ಪಷ್ಟ ಸೂಚನೆ ನೀಡಿದೆ ಎಂದು ಮಾರಿಕಾಂಬಾ ಹಿತರಕ್ಷಣಾ ಸಮಿತಿ ಸಂಚಾಲಕ ಎಂ.ಡಿ.ಆನಂದ್ ತಿಳಿಸಿದರು. ಇಂದು ಶಿವಮೊಗ್ಗ ಜಿಲ್ಲೆಯ ಸಾಗರದ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದಂತ ಅವರು, ಹಾಲಿ ವ್ಯವಸ್ಥಾಪಕ ಸಮಿತಿ ಟ್ರಸ್ಟ್ ರಚನೆ ನೆಪದಲ್ಲಿ ತಾವೇ ಖಾಯಂ ಆಗಿ ಉಳಿಯುವ ಬೈಲಾವನ್ನು ಸಿದ್ದಪಡಿಸಿ ಸದಸ್ಯರ ಒಪ್ಪಿಗೆಯನ್ನು ಸಹ ಪಡೆಯದೆ ವಂಚಿಸುವ ಪ್ರಯತ್ನ ನಡೆಸಿತ್ತು. ಸಮಿತಿಯ ಈ ಧೋರಣೆಗೆ ನ್ಯಾಯಾಲಯದ ತೀರ್ಪು ತೀವೃ ಮುಖಭಂಗ ಉಂಟು ಮಾಡಿದೆ ಎಂದರು. 1968 ರಿಂದ ಈತನಕ ಟ್ರಸ್ಟ್ ರಚನೆಗೆ ಸಾಕಷ್ಟು ಹೋರಾಟ ನಡೆದಿದೆ. ಕಳೆದ 10 ವರ್ಷದಿಂದ ನಮ್ಮ ಹಿತರಕ್ಷಣಾ ಸಮಿತಿ ಟ್ರಸ್ಟ್ ರಚನೆ ಜೊತೆಗೆ ಸಮಿತಿಯಲ್ಲಿ ಖಾಯಂ ಪದಾಧಿಕಾರಿಗಳಾಗಿ ಕುಳಿತವರನ್ನು ಇಳಿಸಲು ಹೋರಾಟ ನಡೆಸಿತ್ತು. ಇದೀಗ ನಮ್ಮ ಹೋರಾಟಕ್ಕೆ ಜಯ ಸಿಕ್ಕಿದೆ. ನನ್ನನ್ನು ತಟಸ್ಥಗೊಳಿಸಲು ಸಾಕಷ್ಟು ಪ್ರಯತ್ನ…
ಶಿವಮೊಗ್ಗ: ಐತಿಹಾಸಿಕ ಅಂಬಾರಗೋಡ್ಲು-ಕಳಸವಳ್ಳಿ ಸೇತುವೆಗೆ ಈಗಾಗಲೆ ಸಿಗಂದೂರು ಚೌಡೇಶ್ವರಿ ಕೇಬಲ್ ಸೇತುವೆ ಎಂದು ನಾಮಕರಣ ಮಾಡಲು ಪ್ರಸ್ತಾವನೆ ಸಲ್ಲಿಸಲಾಗಿದೆ. ರಾಜ್ಯದಿಂದ ಹೆಸರು ಅಂತಿಮಗೊಳಿಸಿ ಕೇಂದ್ರಕ್ಕೆ ಸಲ್ಲಿಸಿದರೆ ನಾನು ಇದನ್ನು ಅನುಮೋದಿಸುವ ನಿಟ್ಟಿನಲ್ಲಿ ಪ್ರಯತ್ನಿಸುತ್ತೇನೆ. ಸೇತುವೆಗೆ ರಾಣಿ ಚನ್ನಬೈರಾದೇವಿ, ಕೆಳದಿ ರಾಣಿ ಚೆನ್ನಮ್ಮಾಜಿ, ಶರಾವತಿ ಸೇತುವೆ, ಅಂಬಾರಗೋಡ್ಲು ಕಳಸವಳ್ಳಿ ಸೇರಿದಂತೆ ಬೇರೆಬೇರೆ ಹೆಸರಿನ ಚರ್ಚೆ ನಡೆಯುತ್ತಿದೆ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹೆಸರು ಇರಿಸಲು ನ್ಯಾಯಾಲಯಕ್ಕೂ ಹೋಗಿದ್ದಾರೆ ಸಂಸದ ಬಿವೈ ರಾಘವೇಂದ್ರ ತಿಳಿಸಿದ್ದಾರೆ. ಇಂದು ಶಿವಮೊಗ್ಗದ ಸಾಗರ ನಗರದ ನೆಹರೂ ಮೈದಾನದಲ್ಲಿ ಶನಿವಾರ ಕಳಸವಳ್ಳಿ-ಅಂಬಾರಗೋಡ್ಲು ಸೇತುವೆ ಲೋಕಾರ್ಪಣೆ ಸಭಾ ಕಾರ್ಯಕ್ರಮದ ಸ್ಥಳಕ್ಕೆ ಭೇಟಿ ನೀಡಿ ಪತ್ರಕರ್ತರ ಜೊತೆ ಮಾತನಾಡಿದ ಅವರು, ಎಂತಹ ಮಳೆ ಬಂದರೂ ಸೇತುವೆ ಲೋಕಾರ್ಪಣೆ ಕಾರ್ಯ ನಿರ್ವಿಘ್ನವಾಗಿ ನಡೆಯುತ್ತದೆ. ಅಂಬಾರಗೋಡ್ಲು ಕಳಸವಳ್ಳಿ ಸೇತುವೆ ಲೋಕಾರ್ಪಣೆಗೆ ದೇವಿಗೆ ಸಮರ್ಪಣೆ ಮಾಡುವ ಶ್ರೇಷ್ಟ ಕಾರ್ಯವಾಗಿದೆ. ಇಂತಹ ಕಾರ್ಯಕ್ಕೆ ಅಪಚಾರ ಎಸಗಿ ಅಪಪ್ರಚಾರ ಮಾಡುವುದು ಸರಿಯಲ್ಲ ಎಂದರು. ಕೇಂದ್ರ ಸಚಿವರಾದ ನಿತಿನ್ ಗಡ್ಕರಿ ಸೇತುವೆ ಲೋಕಾರ್ಪಣೆ…
ಶಿವಮೊಗ್ಗ: ಕಳೆದ ಕೆಲವು ದಿನಗಳ ಹಿಂದೆ ಸಾಗರದಲ್ಲಿ ಪತ್ರಕರ್ತರೊಬ್ಬರಿಗೆ ಕೆಲವರು ಅವಾಚ್ಯ ನಿಂದನೆ ಹಾಗೂ ಬೆದರಿಕೆ ಹಾಕಿರುವ ಘಟನೆ ಅತ್ಯಂತ ಖಂಡನೀಯವಾಗಿದೆ. ಪತ್ರಕರ್ತರನ್ನು ಬೆದರಿಸುವ ಯಾರೇ ಆಗಿರಲಿ ಅಂತಹವರ ವಿರುದ್ಧ ಕಠಿಣ ಕ್ರಮಕ್ಕೆ ಒಳಪಡಿಸುತ್ತೇವೆ. ನನ್ನ ಅಧಿಕಾರದ ಅವಧಿಯಲ್ಲಿ ಬೆದರಿಕೆ ಹಲ್ಲೆಯಂತಹ ಘಟನೆಗೆ ಅವಕಾಶ ನೀಡುವುದಿಲ್ಲ ಎಂಬುದಾಗಿ ಸಾಗರ ವಿಧಾನಸಭಾ ಕ್ಷೇತ್ರದ ಶಾಸಕ ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕೆ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ತಿಳಿಸಿದ್ದಾರೆ. ಇಂದು ಶಿವಮೊಗ್ಗ ಜಿಲ್ಲೆಯ ಸಾಗರದ ಪತ್ರಿಕಾ ಭವನದಲ್ಲಿ ಪ್ರೆಸ್ ಟ್ರಸ್ಟ್ ಆಫ್ ಸಾಗರ್ ಮತ್ತು ಕಾರ್ಯನಿರತ ಪತ್ರಕರ್ತರ ಸಂಘ,ಸಾಗರ ಇವರುಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ಪತ್ರಿಕಾ ದಿನಾಚರಣೆ ಸಮಾರಂಭದಲ್ಲಿ ಪತ್ರಕರ್ತರುಗಳಿಗೆ ಗುರುತಿನ ಚೀಟಿ ಹಾಗೂ ಪತ್ರಕರ್ತರು, ಪತ್ರಿಕಾ ವಿತರಕರುಗಳಿಗೆ 15 ಲಕ್ಷ ರೂಗಳ ವಿಮಾ ಬಾಂಡ್‌ಗಳ ವಿತರಿಸಿ, ಹಿರಿಯ ಪತ್ರಕರ್ತರನ್ನು ಸನ್ಮಾನಿಸಿ ಮಾತನಾಡಿದರು. ಪ್ರೆಸ್ ಟ್ರಸ್ಟ್ ಕಾರ್ಯ ಮೆಚ್ಚುಗೆಗೆ ಪಾತ್ರವಾಗಿದೆ. ಕಳೆದ ವರ್ಷ ಪತ್ರಿಕಾ ವಿತರಕರುಗಳಿಗೆ ಸೈಕಲ್‌ಗಳು ಮತ್ತು ರಿಪ್ಲೆಕ್ಟ್ ಆಗುವಂತಹ ಸುರಕ್ಷತೆಯ ಉದ್ದೇಶಿತ ಜಾಕೇಟ್‌ಗಳ…
ಬಳ್ಳಾರಿ : ದೇಶದಲ್ಲಿ ಮೋದಿ ಸರಕಾರ ಆಡಳಿತಕ್ಕೆ ಬಂದಾಗಿನಿಂದ ರೈಲ್ವೇ ಇಲಾಖೆಯಲ್ಲಿ ಕ್ರಾಂತಿಕಾರ ಅಭಿವೃದ್ಧಿ ನಡೆದಿವೆ. ನಾನು ಅಧಿಕಾರ ವಹಿಸಿಕೊಂಡ ಕಡಿಮೆ ಅವಧಿಯಲ್ಲಿ ರಾಜ್ಯ ಸೇರಿ ಹಲವು ಕಡೆಗಳಲ್ಲಿ ಹೆಚ್ಚಿನ ರೈಲುಗಳನ್ನು ಮಂಜೂರು ಮಾಡಲಾಗಿದೆ ಎಂದು ಕೇಂದ್ರ ರಾಜ್ಯ ರೈಲ್ವೇ ಖಾತೆ ಮಂತ್ರಿ ವಿ.ಸೋಮಣ್ಣ ಅವರು ಹೇಳಿದರು. ಶುಕ್ರವಾರ, ಬಳ್ಳಾರಿಯ ರೈಲ್ವೇ ಸ್ಟೇಷನ್‌ನ ವಿವಿಧ ಅಭಿವೃದ್ಧಿ ಕಾಮಗಾರಿಗಳ ಪಟಿಶೀಲನೆ ನಡೆಸಿ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು. ನರೇಂದ್ರ ಮೋದಿ ಅವರ ಕನಸಿನಂತೆ ರೈಲ್ವೆ ಇಲಾಖೆಯಿಂದ ಕ್ರಾಂತಿಕಾರ ಕೆಲಸಗಳು ಆಗುತ್ತಿವೆ. 10 ವಂದೇಭಾರತ ರೈಲು ಓಡಿಸಲಾಗುತ್ತಿದೆ. ಇನ್ನು ಹೆಚ್ಚು ಮಾಡಲಾಗುತ್ತಿದ್ದು, ಸ್ಲೀಪರ್ ವಂದೇಭಾರತ ರೈಲು ಶೀಘ್ರ ಆರಂಭಿಸಲಾಗುತ್ತದೆ. ಯುಪಿಎ ಸರಕಾರದಲ್ಲಿ ನೆನೆಗುದಿಗೆ ಬಿದ್ದ ಎಲ್ಲ ಯೋಜನೆಗಳನ್ನು ಪೂರ್ಣಗೊಳಿಸಲಾಗುತ್ತಿದೆ. ಯುಪಿಎ ಸರಕಾರದಲ್ಲೇ ಕೇವಲ 3300 ಕೆಳ, ಮೇಲ್ಸೆತುವೆಗಳನ್ನು ನಿರ್ಮಾಣ ಮಾಡಿದ್ದರು. ನಾವು ಅಧಿಕಾರಕ್ಕೆ ಬಂದ ಬಳಿಕ 6600 ಕ್ಕೂ ಹೆಚ್ಚು ಬ್ರಿಜ್ ಕಟ್ಟಿದ್ದೇವೆ. ಇದರಿಂದ ಬಹುತೇಕ ರೈಲ್ವೆ ಸಮಸ್ಯೆಗಳು ಮುಗಿಯುತ್ತಿವೆ. ಇಂದು ಚಿಕ್ಕಮಗಳೂರು ತಿರುಪತಿ…
ಚಿತ್ರದುರ್ಗ: ದೇಶದಲ್ಲೇ ಪ್ರಥಮ ಬಾರಿಗೆ ಕರ್ನಾಟಕ ರಾಜ್ಯ ಸರ್ಕಾರ ಇ-ಕಾಮರ್ಸ್ ಫ್ಲಾಟ್ ಫಾರ್ಮ್ ಆಧಾರಿತ ಗಿಗ್ ಕಾರ್ಮಿಕರು, ಸಿನಿಮಾ ಮತ್ತು ಸಾಂಸ್ಕøತಿಕ ಕ್ಷೇತ್ರದಲ್ಲಿ ದುಡಿಯುತ್ತಿರುವ ಕಲಾ ಕಾರ್ಮಿಕರು ಹಾಗೂ ಮನೆಗೆಲಸದಲ್ಲಿ ತೊಡಗಿರುವ ಗೃಹ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಒದಗಿಸಲು ಪ್ರತ್ಯೇಕ ಅಧಿನಿಯಮಗಳನ್ನು ರೂಪಿಸಿದೆ. ಮುಂಬರುವ ದಿನಗಳಲ್ಲಿ ಸದನದಲ್ಲಿ ಈ ಅಧಿಸೂಚನೆಗಳನ್ನು ಮಂಡಿಸಿ, ಅನುಮೋದನೆ ಪಡೆದು, ಕಾಯ್ದೆಗಳನ್ನಾಗಿ ಜಾರಿ ಮಾಡುವುದಾಗಿ ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದರು. ಕಾರ್ಮಿಕ ಇಲಾಖೆ, ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕ ಸಾಮಾಜಿಕ ಭದ್ರತಾ ಮಂಡಳಿ, ಸಾರಿಗೆ ಇಲಾಖೆ, ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್ ಸಹಯೋಗದಲ್ಲಿ ಶನಿವಾರ ನಗರದ ಚಳ್ಳಕೆರೆ ರಸ್ತೆಯ ಎಸ್.ಜಿ.ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾದ ಜಿಲ್ಲೆಯ ವಿವಿಧ ವರ್ಗಗಳ ಅಸಂಘಟಿತ ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ವಿತರಣೆ ಹಾಗೂ ವಿವಿಧ ಯೋಜನೆಗಳ ಕುರಿತು ಅರಿವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ರಾಜ್ಯ ಸರ್ಕಾರ ಅಸಂಘಟಿತ ಕಾರ್ಮಿಕರ ಕಲ್ಯಾಣಕ್ಕಾಗಿ ಶ್ರಮಿಸುತ್ತಿದೆ. ಈಗಾಗಲೇ ಇ-ಕಾಮರ್ಸ್ ವಲಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಗಿಗ್ ಕಾರ್ಮಿಕರಿಗೆ ವಿಮಾ ಯೋಜನೆ…
ತಿರುವನಂತಪುರಂ: ಆ ಯುವಕ ಕೊಲೆ ಪ್ರಕರಣದಲ್ಲಿ ಜೈಲುಪಾಲಾಗಿದ್ದನು. ಜೀವಾವಧಿ ಶಿಕ್ಷೆ ವಿಧಿಸಿದ್ದಂತ ಆತನನ್ನೇ ಮದುವೆಯಾಗಬೇಕು ಎಂಬುದಾಗಿ ಯುವತಿ ಹಠ ಹಿಡಿದಿದ್ದರು. ಈ ಪ್ರಕರಣದ ವಿಚಾರಣೆ ನಡೆಸಿದಂತ ಕೇರಳ ಹೈಕೋರ್ಟ್, ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದಂತ ಅಪರಾಧಿಗೆ ಮದುವೆಯಾಗಲು 15 ದಿನಗಳು ಪರೋಲ್ ನೀಡಿ ಆದೇಶಿಸಿದೆ. ಪ್ರಶಾಂತ್ ಎಂಬಾತ ಕೊಲೆ ಪ್ರಕರಣದಲ್ಲಿ ವಿಯ್ಯರು ಜೈಲು ಪಾಲಾಗಿದ್ದರು. ಆತನಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು. ಇಂತಹ ಅಪರಾಧಿಯೊಂದಿಗೆ ಯುವತಿಯೊಬ್ಬರ ನಿಶ್ಚಯವು ಕೊಲೆ ಪ್ರಕರಣಕ್ಕೂ ಮುನ್ನ ನಿಶ್ಚಯವಾಗಿತ್ತು. ಹೀಗಾಗಿ ಪರೋಲ್ ಮೂಲಕ ಮದುವೆಗೆ ಅವಕಾಶ ನೀಡುವಂತೆ ಜೈಲು ಅಧೀಕ್ಷಕರಿಗೆ ಪ್ರಶಾಂತ್ ಅರ್ಜಿ ಸಲ್ಲಿಸಿದ್ದನು. ಆದರೇ ಈ ಅರ್ಜಿಯನ್ನು ವಜಾಗೊಳಿಸಲಾಗಿತ್ತು. ಜೈಲು ಅಧೀಕ್ಷಕರ ನಿರ್ಧಾರ ಪ್ರಶ್ನಿಸಿ ಕೇರಳ ಹೈಕೋರ್ಟ್ ಗೆ ಅರ್ಜಿಯನ್ನು ಪ್ರಶಾಂತ್ ತಾಯಿ ಸಲ್ಲಿಸಿದ್ದರು. ಅದರಲ್ಲಿ ಜುಲೈ.13ರಂದು ಪ್ರಶಾಂತ್ ಮದುವೆ ನಿಶ್ಚಯವಾಗಿದೆ. ಯುವತಿ ಕೂಡ ಆತನೊಂದಿಗೆ ಮದುವೆಯಾಗುವುದಾಗಿ ಹಠ ಹಿಡಿದಿದ್ದಾಳೆ. ದಯವಿಟ್ಟು ಪರೋಲ್ ಮೇಲೆ ಮದುವೆಗೆ ಅವಕಾಶ ನೀಡುವಂತೆ ಮನವಿ ಮಾಡಿದ್ದರು. ಈ ಮನವಿ ಪರಿಗಣಿಸಿದಂತ ಕೇರಳ ಹೈಕೋರ್ಟ್…
ಬೆಂಗಳೂರು: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ರಾಜ್ಯದ ಮಹಾನಗರ ಪಾಲಿಕೆ ನೌಕರರು ಪ್ರತಿಭಟನೆ ನಡೆಸುತ್ತಿದ್ದರು. ಈ ಬೇಡಿಕೆ ಈಡೇರಿಕೆ ಸಂಬಂಧ ಮಂಗಳವಾರ ಸಚಿವ ಬಿಎಸ್ ಸುರೇಶ್ ನೇತೃತ್ವದಲ್ಲಿ ಸಭೆ ನಿಗದಿಯಾಗಿದೆ. ಈ ಹಿನ್ನಲೆಯಲ್ಲಿ ತಾತ್ಕಾಲಿಕವಾಗಿ ಪ್ರತಿಭಟನೆಯನ್ನು ಹಿಂಪಡೆಯಲಾಗಿದೆ. ಈ ಕುರಿತಂತೆ ಕರ್ನಾಟಕ ರಾಜ್ಯ ಮಹಾನಗರ ಪಾಲಿಕೆ ನೌಕರರ ಸಂಘದ ರಾಜ್ಯಾಧ್ಯಕ್ಷ ಎ ಅಮೃತ್ ರಾಜ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಹಮ್ಮಿಕೊಂಡಿರುವ ಪ್ರತಿಭಟನೆ/ಮುಷ್ಕರಕ್ಕೆ ಸನ್ಮಾನ್ಯ ಮುಖ್ಯಮಂತ್ರಿಗಳು ನಿರ್ದೇಶನದ ಮೇರೆಗೆ ತಮ್ಮ ಪತ್ರದ ಟಿಪ್ಪಣಿ ದಿನಾಂಕ:11-07-2025 ರಲ್ಲಿ ತಿಳಿಸಿರುವಂತೆ, ದಿನಾಂಕ: 15-07-2025 ಮಂಗಳವಾರ ಸಂಘದ ಪದಾಧಿಕಾರಿಗಳ ಜೊತೆ ಸಭೆ ಕರೆದು ಚರ್ಚಿಸಿ/ತೀರ್ಮಾನಿಸಿ ನಿಯಮಾನುಸಾರ ಸೂಕ್ತ ತೀರ್ಮಾನವನ್ನು ತೆಗೆದುಕೊಳ್ಳುವುದಾಗಿ ತಿಳಿಸಿ ಇಂದೇ ಪ್ರತಿಭಟನೆ ಮುಷ್ಕರವನ್ನು ಅಂತ್ಯಗೊಳಿಸಿ ಈ ಕೂಡಲೇ ಕರ್ತವ್ಯಕ್ಕೆ ಹಾಜರಾಗಬೇಕೆಂದು ತಿಳಿಸಿದ್ದಾರೆ ಎಂದು ಹೇಳಿದ್ದಾರೆ. ಈ ಹಿನ್ನಲೆಯಲ್ಲಿ ಇಂದು ಕರ್ನಾಟಕ ರಾಜ್ಯ ಮಹಾನಗರ ಪಾಲಿಕೆ ನೌಕರರ ಸಂಘದ ಪಧಾದಿಕಾರಿಗಳೊಂದಿಗೆ ಗೂಗಲ್ ಮೀಟ್ ಮೂಲಕ ಸಭೆಮಾಡಿ ಸಭೆಯ…