Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

​’ನೀಟ್ ಪೇಪರ್ ಲೀಕ್’ ತನಿಖೆ ಚುರುಕು: ಮಹಾರಾಷ್ಟ್ರದ ನಾಂದೇಡ್‌ನಲ್ಲಿ ಸಿಬಿಐ ಮೆಗಾ ದಾಳಿ, ತೀವ್ರಗೊಂಡ ಶೋಧ ಕಾರ್ಯ!

ಬಂದೂಕು ತೋರಿಸಿ ಬೆದರಿಸಿದ ದರೋಡೆಕೋರರು: ಪ್ರಾಣದ ಹಂಗು ತೊರೆದು ಕಳ್ಳರನ್ನೇ ಓಡಿಸಿದ ನಾಸಿಕ್ ಜ್ವೆಲ್ಲರಿ ಅಂಗಡಿ ಸಿಬ್ಬಂದಿ!

ವಯಸ್ಸು ಕೇವಲ ಸಂಖ್ಯೆಯಷ್ಟೇ: 97ನೇ ವಯಸ್ಸಿನಲ್ಲಿ ಜೀರೋ ಗುರುತ್ವಾಕರ್ಷಣೆಯಲ್ಲಿ ತೇಲಿ ವಿಶ್ವ ದಾಖಲೆ ಬರೆದ ವೃದ್ಧ!

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಮಂಡ್ಯ: ಮದ್ದೂರಲ್ಲಿ ವಿದ್ಯುತ್ ಖಾಸಗೀಕರಣ ವಿರೋಧಿಸಿ ‘ಚೆಸ್ಕಾಂ ನೌಕರ’ರಿಂದ ಪ್ರತಿಭಟನೆ
KARNATAKA

ಮಂಡ್ಯ: ಮದ್ದೂರಲ್ಲಿ ವಿದ್ಯುತ್ ಖಾಸಗೀಕರಣ ವಿರೋಧಿಸಿ ‘ಚೆಸ್ಕಾಂ ನೌಕರ’ರಿಂದ ಪ್ರತಿಭಟನೆ

By ವಸಂತ ಬಿ ಈಶ್ವರಗೆರೆ

ಮಂಡ್ಯ : ಇಂಧನ ಇಲಾಖೆಯನ್ನು ಹೊರಗುತ್ತಿಗೆ ಮತ್ತು ಖಾಸಗೀಕರಣಗೊಳಿಸಲು ಮುಂದಾಗಿರುವ ಕೇಂದ್ರ ಸರ್ಕಾರದ ನಡೆಯನ್ನು ಖಂಡಿಸಿ ಕರ್ನಾಟಕ ವಿದ್ಯುತ್ ಪ್ರಸರಣ ನೌಕರರ ಸಂಘದ – 659 ಮತ್ತು ನೌಕರರ ಒಕ್ಕೂಟ ಗುರುವಾರ ಮದ್ದೂರು ಚೆಸ್ಕಾಂ ಕಛೇರಿಯ ಆವರಣದಲ್ಲಿ ಪ್ರತಿಭಟನೆ ನಡೆಸಿದರು.

ಮದ್ದೂರು ನಗರದ ಚೆಸ್ಕಾಂ ಕಛೇರಿಯ ಆವರಣದಲ್ಲಿ ಕೇಂದ್ರ ಸರ್ಕಾರದ ವಿದ್ಯುತ್ ಖಾಸಗಿಕರಣ ಹಾಗೂ ಹೊರಗುತ್ತಿಗೆಯನ್ನು ವಿರೋಧಿಸಿ ಅಧಿಕಾರಿಗಳು, ನೌಕರರು ಘೋಷಣೆಗಳನ್ನು ಕೂಗಿ ಆಕ್ರೋಶ ಹೊರ ಹಾಕಿದರು.

ಚೆಸ್ಕಾಂ ಕಛೇರಿಯ ಕಾರ್ಯ ನಿರ್ವಾಹಕ ಅಧಿಕಾರಿ ಕೆ.ಎನ್.ಶಿವಕುಮಾರ್ ಮಾತನಾಡಿ, ಕೇಂದ್ರ ಸರ್ಕಾರ ವಿದ್ಯುತ್ ಇಲಾಖೆಯನ್ನು ಖಾಸಗೀಕರಣ ಮಾಡುತ್ತಿರುವುದರಿಂದ ಮುಂದಿನ ದಿನದಲ್ಲಿ ಪ್ರತಿಯೊಬ್ಬರಿಗೂ ತೊಂದರೆಯಾಗಲಿದೆ. ಸಾರ್ವಜನಿಕ ವಲಯದ ಸಂಸ್ಥೆಗಳನ್ನು ಖಾಸಗಿಯವರಿಗೆ ನೀಡುವುದರಿಂದ ಗ್ರಾಹಕರು ಮತ್ತು ಕಾರ್ಮಿಕರ ಹಿತಾಸಕ್ತಿಗೆ ಧಕ್ಕೆಯಾಗಲಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಕಳೆದ ವರ್ಷವೇ ಕೇಂದ್ರ ಸರ್ಕಾರ ಅಧಿವೇಶನದಲ್ಲಿ ಬಿಲ್ ಪಾಸ್ ಮಾಡಲು ಮುಂದಾಗಿತ್ತು. ಆಗ ದೇಶದ ವಿವಿಧ ಎಸ್ಕಾಂ ಗಳು ತೀವ್ರ ಸ್ವರೂಪದ ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಕೈ ಬಿಡಲಾಗಿತ್ತು. ಆದರೆ, ಮತ್ತೆ ಈ ವರ್ಷವೂ ಅಧಿವೇಶನದಲ್ಲಿ ಕಾಯ್ದೆ ತರಲು ಮುಂದಾಗಿದ್ದು, ಇದರಿಂದ ಗ್ರಾಹಕರಿಗೆ ಎಷ್ಟು ಅನಾನುಕೂಲವಾಗುತ್ತದೆಯೇ ಅದರ ಹತ್ತರಷ್ಟು ನಮ್ಮ ಇಲಾಖೆಗೆ ನಷ್ಟವಾಗಲಿದೆ ಎಂದರು.

ಇಲಾಖೆಯೂ ಸಾಕಷ್ಟು ನಷ್ಟದಲ್ಲಿದೆ ಎಂಬ ನೆಪವೊಡ್ಡಿ ಖಾಸಗೀಕರಣ ಮಾಡಲು ಕೇಂದ್ರ ಸರ್ಕಾರ ಮುಂದಾಗಿದ್ದು, ಹೀಗಾಗಿ ಇಲಾಖೆಯನ್ನು ಲಾಭದಾಯಕವಾಗಿ ಕೊಂಡ್ಡೋಯ್ಯಲು ನಿಮ್ಮೆಲ್ಲರ ಸಹಕಾರ ಅತ್ಯಗತ್ಯವಾಗಿದ್ದು, ಆಗ ಮಾತ್ರ ಖಾಸಗೀಕರಣದ ವಿರುದ್ಧ ಹೋರಾಟ ಮಾಡಲು ಸಾಧ್ಯವಾಗಲಿದೆ ಎಂದು ಹೇಳಿದರು.

ಕೇಂದ್ರ ಕಾರ್ಯಕಾರಿ ಸಮಿತಿ ಸದಸ್ಯ ಮಹದೇವು ಮಾತನಾಡಿ, ಇಂಧನ ಇಲಾಖೆಯು ಹಲವಾರು ನೌಕರರ ಬಲಿದಾನದಿಂದ ಕಷ್ಟಪಟ್ಟು ಕಟ್ಟಿರುವ ಬೃಹತ್ ಸಂಸ್ಥೆಯಾಗಿದ್ದು, ಈ ಸಂಸ್ಥೆಯನ್ನು ಖಾಸಗಿಕರಣ ಮತ್ತು ಹೊರಗುತ್ತಿಗೆ ಮಾಡಲು ಹೊರಟಿರುವ ಕೇಂದ್ರ ಸರ್ಕಾರದ ವಿರುದ್ಧ ಶಾಂತಿಯುತ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಈ ಕೂಡಲೇ ಕೇಂದ್ರ ಸರ್ಕಾರ ಈ ಕಾಯ್ದೆಯನ್ನು ವಾಪಸ್ ಪಡೆದುಕೊಳ್ಳಬೇಕು. ಯಾವುದೇ ಕಾರಣಕ್ಕೂ ಖಾಸಗೀಕರಣ ಮಾಡಲು ಬಿಡುವುದಿಲ್ಲ. ವಿರೋಧದ ನಡುವೆಯೂ ಲೋಕಸಭೆಯಲ್ಲಿ ಕಾಯ್ದೆ ಮಂಡನೆಯಾದರೆ ಒಕ್ಕೂಟವು ಉಗ್ರ ಹೋರಾಟಕ್ಕೆ ಸಜ್ಜಾಗ ಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ಎಇಇ ಹೆಚ್.ಈ ಮಹದೇವು, ಲೆಕ್ಕಾಧಿಕಾರಿ ಸುನೀತಾ, ಅಧ್ಯಕ್ಷರಾದ ಸುರೇಶ್ ಕೆ.ಎ. ಕಾರ್ಯದರ್ಶಿ ಸಿ.ಎಸ್. ಶ್ರೀಧರ್, ಉಪಾಧ್ಯಕ್ಷ ಚನ್ನೇಗೌಡ, ಪದಾಧಿಕಾರಿಗಳಾದ ವಾಸುದೇವ, ವೆಂಕಟೇಶ್, ಗಿರೀಶ್, ಸುಜಿತ್ ಕುಮಾರ್, ನಾಗರಾಜ್, ಉಷಾ, ಸೌಮ್ಯ, ಮಹದೇವಯ್ಯ ಹಾಗೂ ಶಾಖಾಧಿಕಾರಿಗಳು, ನೌಕರರು ಇದ್ದರು.

ವರದಿ : ಗಿರೀಶ್ ರಾಜ್, ಮಂಡ್ಯ

ರಾಜ್ಯದ ಜನತೆಗೆ ಮತ್ತೊಂದು ಗುಡ್‌ನ್ಯೂಸ್ : ಮನೆ ಬಾಗಿಲಿಗೆ ಬರಲಿದೆ ಪೌತಿ ಖಾತೆ

ಬೆಂಗಳೂರು ಜನತೆ ಗಮನಕ್ಕೆ: ಫೆ.14ರ ಶನಿವಾರದಂದು ಈ ಪ್ರದೇಶಗಳಲ್ಲಿ ‘ವಿದ್ಯುತ್ ವ್ಯತ್ಯಯ’ | Power Cut

Share. Facebook Twitter LinkedIn WhatsApp Email

Related Posts

BIG NEWS: ‘ಸಾರಿಗೆ ನೌಕರ’ರೇ ಮುಷ್ಕರ ಒಂದೇ ಪರಿಹಾರವಲ್ಲ: ಅದಕ್ಕೂ ಮೊದಲು ಈ ಸುದ್ದಿ ಓದಿ!

5 Mins Read

BIG NEWS : 2208ಕ್ಕೆ ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಸರ್ಕಾರ ಅಧಿಕಾರಕ್ಕೆ : HD ಕುಮಾರಸ್ವಾಮಿ ಭವಿಷ್ಯ

2 Mins Read

BIG NEWS : ಮೈಸೂರಲ್ಲಿ ನಡೆದ ಜೆಡಿಎಸ್ ಸಮಾವೇಶದಲ್ಲಿ HD ರೇವಣ್ಣ, ಜಿಟಿ ದೇವೇಗೌಡ ಫೋಟೋಗೆ ಕೊಕ್‌!

2 Mins Read
Recent News

​’ನೀಟ್ ಪೇಪರ್ ಲೀಕ್’ ತನಿಖೆ ಚುರುಕು: ಮಹಾರಾಷ್ಟ್ರದ ನಾಂದೇಡ್‌ನಲ್ಲಿ ಸಿಬಿಐ ಮೆಗಾ ದಾಳಿ, ತೀವ್ರಗೊಂಡ ಶೋಧ ಕಾರ್ಯ!

ಬಂದೂಕು ತೋರಿಸಿ ಬೆದರಿಸಿದ ದರೋಡೆಕೋರರು: ಪ್ರಾಣದ ಹಂಗು ತೊರೆದು ಕಳ್ಳರನ್ನೇ ಓಡಿಸಿದ ನಾಸಿಕ್ ಜ್ವೆಲ್ಲರಿ ಅಂಗಡಿ ಸಿಬ್ಬಂದಿ!

ವಯಸ್ಸು ಕೇವಲ ಸಂಖ್ಯೆಯಷ್ಟೇ: 97ನೇ ವಯಸ್ಸಿನಲ್ಲಿ ಜೀರೋ ಗುರುತ್ವಾಕರ್ಷಣೆಯಲ್ಲಿ ತೇಲಿ ವಿಶ್ವ ದಾಖಲೆ ಬರೆದ ವೃದ್ಧ!

ರಷ್ಯಾ ಮೇಲೆ ಉಕ್ರೇನ್ ಭೀಕರ ಡ್ರೋನ್ ದಾಳಿ: ನಾಲ್ವರ ಸಾವು, ಮೃತರ ಪೈಕಿ ಓರ್ವ ಭಾರತೀಯ ಕಾರ್ಮಿಕ!

State News
KARNATAKA

BIG NEWS: ‘ಸಾರಿಗೆ ನೌಕರ’ರೇ ಮುಷ್ಕರ ಒಂದೇ ಪರಿಹಾರವಲ್ಲ: ಅದಕ್ಕೂ ಮೊದಲು ಈ ಸುದ್ದಿ ಓದಿ!

By ವಸಂತ ಬಿ ಈಶ್ವರಗೆರೆ KARNATAKA 5 Mins Read

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳು (KSRTC, BMTC, NWKRTC, KKRTC) ರಾಜ್ಯದ ರಕ್ತನಾಳಗಳಿದ್ದಂತೆ. ಪ್ರತಿದಿನ ಲಕ್ಷಾಂತರ ಜನಸಾಮಾನ್ಯರನ್ನು,…

BIG NEWS : 2208ಕ್ಕೆ ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಸರ್ಕಾರ ಅಧಿಕಾರಕ್ಕೆ : HD ಕುಮಾರಸ್ವಾಮಿ ಭವಿಷ್ಯ

BIG NEWS : ಮೈಸೂರಲ್ಲಿ ನಡೆದ ಜೆಡಿಎಸ್ ಸಮಾವೇಶದಲ್ಲಿ HD ರೇವಣ್ಣ, ಜಿಟಿ ದೇವೇಗೌಡ ಫೋಟೋಗೆ ಕೊಕ್‌!

ಬೆಂಗಳೂರಲ್ಲಿ ಪ್ರೇಯಸಿ ಕೊಂದು ಕೆರೆಗೆ ಶವ ಎಸೆದು ಪರಾರಿ : ಪ್ರಿಯಕರ ಅರೆಸ್ಟ್!

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.