ಬೆಂಗಳೂರು : ಬೆಂಗಳೂರಲ್ಲಿ ಪ್ರೇಯಸಿಯನ್ನ ಕೊಂದು ಶವವನ್ನು ಕೆರೆಗೆ ಎಸೆದು ಪರಾರಿಯಾಗಿದ್ದ ಪ್ರಿಯಕರನನ್ನ ಇದೀಗ ಬೆಂಗಳೂರಿನ ಹೆಬ್ಬಗೋಡಿ ಠಾಣೆ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಬಂಧಿತನನ್ನ ರತನ್ ದಾಸ್ (37) ಎಂದು ತಿಳಿದುಬಂದಿದೆ.ಅಸ್ಸಾಂ ಮೂಲದ ಅಂಜಲಿ ನಾಥ್ (47) ಎಂಬಾಕೆಯನ್ನ ರತನ್ ದಾಸ್ ಕೊಲೆ ಮಾಡಿದ್ದ. ಮೇ 8 ರಂದು ತಿರುಪಾಳ್ಯ ಕೆರೆಯಲ್ಲಿ ಅಂಜಲಿ ನಾಥ್ ಹತ್ಯೆಯಾಗಿತ್ತು.
ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ತಿರುಪಾಳ್ಯ ಕೆರೆ ಹತ್ಯೆಗು ಮುನ್ನ ಲೈಂಗಿಕ ಕ್ರಿಯೆಗೆ ಸಹಕರಿಸುವಂತೆ ಒತ್ತಾಯಿಸಿದ್ದ. ಮದುವೆ ಮಾಡಿಕೊಳ್ಳುವಂತೆ ರತನ್ ದಾಸ್ ಗೆ ದುಂಬಾಲು ಬಿದ್ದಿದ್ದ. ಈ ವೇಳೆ ರತನ್ ದಾಸ್, ಅಂಜಲಿ ನಾಥ್ ನಡುವೆ ಜಗಳ ಆಗಿದೆ. ಜಗಳ ವಿಕೋಪಕ್ಕೆ ಹೋಗಿ ಅಂಜಲಿ ನಾಥ್ ಕೊಂದಿದ್ದ ರತನ್ ದಾಸ್.
ಉಸಿರುಗಟ್ಟಿಸಿ ಕೊಂದು ಶವ ಕೆರೆಗೆ ಎಸೆದು ಎಸ್ಕೇಪ್ ಆಗಿದ್ದ. ಮರುದಿನ ವಾಕಿಂಗ್ ಹೋಗುವವರು ಶವ ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಅನುಮಾನಸ್ಪದ ಸಾವು ಎಂದು ಕೇಸ್ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ. CDR ಹಾಗು ಟವರ್ ಲೊಕೇಶನ್ ಆಧರಿಸಿ ರತನ್ ನನ್ನ ಅರೆಸ್ಟ್ ಮಾಡಿದ್ದಾರೆ.








