Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಪ್ರಧಾನಿ ಮೋದಿಯವರ 12 ವರ್ಷದ ಆಡಳಿತದಲ್ಲಿ ದೇಶದ ಸರ್ವಾಂಗೀಣ ಅಭಿವೃದ್ಧಿ: ಸಂಸದ ಬಿ.ವೈ.ರಾಘವೇಂದ್ರ

ಸಾಗರದ ಉಳ್ಳೂರು-ತ್ಯಾಗರ್ತಿ ವಿದ್ಯುತ್ ಲೈನ್ ಕಾಮಗಾರಿ ತ್ವರಿತವಾಗಿ ಮುಗಿಸಿ: MP ಬಿವೈ ರಾಘವೇಂದ್ರಗೆ ಗ್ರಾಮಸ್ಥರ ಮನವಿ

ಪ್ರಧಾನಿ ಮೋದಿ ಸಾಧನೆ ಅನನ್ಯ, ಶಿವಮೊಗ್ಗ ಜಿಲ್ಲೆಗೆ ರೈಲ್ವೆ ಅಭಿವೃದ್ಧಿಗೆ ಸಿಂಹಪಾಲು: ಸಂಸದ ಬಿ.ವೈ.ರಾಘವೇಂದ್ರ

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ದಲಿತ ಜನಾಂಗಕ್ಕೆ ದೇಗುಲ ಪ್ರವೇಶ ನಿರಾಕರಣೆ : ಮದ್ದೂರು ತಹಶೀಲ್ದಾರ್ ನೇತೃತ್ವದಲ್ಲಿ ಸಂಧಾನ ಸಭೆ ಯಶಸ್ವಿ
KARNATAKA

ದಲಿತ ಜನಾಂಗಕ್ಕೆ ದೇಗುಲ ಪ್ರವೇಶ ನಿರಾಕರಣೆ : ಮದ್ದೂರು ತಹಶೀಲ್ದಾರ್ ನೇತೃತ್ವದಲ್ಲಿ ಸಂಧಾನ ಸಭೆ ಯಶಸ್ವಿ

By ವಸಂತ ಬಿ ಈಶ್ವರಗೆರೆ

ಮಂಡ್ಯ :- ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳಾದರೂ ಅಸ್ಪೃಶ್ಯತೆ ಆಚರಣೆಯಂತಹ ಅನಿಷ್ಠ ಪದ್ಧತಿ ಮಾತ್ರ ತೊಲಗಿಲ್ಲ. ಮದ್ದೂರು ತಾಲೂಕಿನ ಹುಲಿಕೆರೆ ಗ್ರಾಮದ ಬಸವೇಶ್ವರ ದೇವಸ್ಥಾನಕ್ಕೆ ಪರಿಶಿಷ್ಟ ಜಾತಿಯವರು ಎಂಬ ಕಾರಣಕ್ಕೆ ದೇಗುಲದ ಅರ್ಚಕರೊಬ್ಬರು ಪ್ರವೇಶ ನಿರಾಕರಿಸಿದ್ದಾರೆ ಎಂದು ಅರೋಪಿಸಿ ಗ್ರಾಮದ ಸತೀಶ್ ಕುಮಾರ್ ಎಂಬುವರು ಸಮಾಜ ಕಲ್ಯಾಣ ಇಲಾಖೆಗೆ ದೂರು ನೀಡಿದ್ದಾರೆ.

ಮಾರ್ಚ್ 10 ರಂದು ಸತೀಶ್ ಕುಮಾರ್, ಪತ್ನಿ ಶ್ವೇತ, ಮಕ್ಕಳಾದ ಯಶಿಕಾ, ಗೋಕುಲ್ ಕುಟುಂಬ ಸಮೇತ ಬಸವೇಶ್ವರ ದೇವಸ್ಥಾನಕ್ಕೆ ಹೋಗಿ ಪೂಜೆ ಮಾಡಿಕೊಡಿ ಎಂದು ಅರ್ಚಕ ಯಶ್ವಂತ್ ಅವರನ್ನು ಕೇಳಿದ್ದಾರೆ. ಈ ವೇಳೆ ಅರ್ಚಕ ಯಶ್ವಂತ್ ನೀವು ಪರಿಶಿಷ್ಟ ಜಾತಿಯವರು ಎಂದು ಕೀಳಾಗಿ ಕಂಡು ನಾನು ಸ್ನಾನ ಮಾಡಿ ಬರುವುದಾಗಿ ಸುಳ್ಳು ಹೇಳಿ ಹೋದವರು ವಾಪಾಸ್ ದೇಗುಲಕ್ಕೆ ಬರಲಿಲ್ಲ. ಇದರಿಂದ ಕಾದು ಕಾದು ಸುಸ್ತಾಗಿ ಮನನೊಂದು ನಾನು ಮತ್ತು ಕುಟುಂಬ ಸದಸ್ಯರು ಮನೆಗೆ ವಾಪಸ್ ಬಂದೆವು ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಗ್ರಾಮದಲ್ಲಿ ಸುಮಾರು 56 ಪರಿಶಿಷ್ಟ ಜಾತಿ ಕುಟುಂಬಗಳಿದ್ದು, ಮುಜರಾಯಿ ಇಲಾಖೆಗೆ ಸೇರಿದ್ದ ಬಸವೇಶ್ವರಸ್ವಾಮಿ, ಮಹದೇಶ್ವರಸ್ವಾಮಿ ಹಾಗೂ ಮಾರಮ್ಮ ದೇವಸ್ಥಾನಗಳಿಗೆ ಪರಿಶಿಷ್ಟ ಜನಾಂಗದವರನ್ನು ಸೇರಿಸುತ್ತಿಲ್ಲ. ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಹಾಗೂ ತಾಲೂಕು ಆಡಳಿತ ಮಧ್ಯಪ್ರವೇಶ ಮಾಡಿ ದೇವಸ್ಥಾನಕ್ಕೆ ನಮ್ಮ ಜನಾಂಗದವರು ಹೋಗಲು ಮುಕ್ತ ಅವಕಾಶ ನೀಡಬೇಕೆಂದು ಮನವಿ ಪತ್ರದಲ್ಲಿ ಮನವಿ ಮಾಡಿದ್ದರು.

ಈ ದೂರಿನನ್ವಯ ಶುಕ್ರವಾರ ಗ್ರಾಮಕ್ಕೆ ಮದ್ದೂರು ತಹಶೀಲ್ದಾರ್ ಪರಶುರಾಮ್ ಸತ್ತಿಗೇರಿ, ಡಿವೈಎಸ್ಪಿ ಯಶವಂತ್ ಕುಮಾರ್, ಸಿಪಿಐ ನವೀನ್, ಮಹೇಶ್ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಆಗಮಿಸಿ ಶಾಂತಿ ಸಭೆ ನಡೆಸಿ ಗ್ರಾಮದಲ್ಲಿರುವ ದೇಗುಲಗಳಿಗೆ ಎಲ್ಲಾ ಜನಾಂಗದವರಿಗೆ ಮುಕ್ತವಾಗಿ ಪ್ರವೇಶ ಮಾಡಲು ಅವಕಾಶ ಕೊಡಬೇಕು. ಇದರಲ್ಲಿ ಯಾವುದೇ ತಾರತಮ್ಯ ಮಾಡಬಾರದು ಎಂದು ದೇಗುಲದ ಅರ್ಚಕರಿಗೆ ಹಾಗೂ ಗ್ರಾಮಸ್ಥರಿಗೆ ತಿಳುವಳಿಕೆ ನೀಡಿ ಇಂತಹ ಘಟನೆಗಳು ಮತ್ತೆ ನಡೆಯದಂತೆ ಮನವಿ ಮಾಡಿದರು. ಬಳಿಕ ಸತೀಶ್ ಕುಮಾರ್ ಅವರ ಕುಟುಂಬ ಸದಸ್ಯರು ಹಾಗೂ ಗ್ರಾಮಸ್ಥರ ಸಮ್ಮುಖದಲ್ಲಿ ದೇಗುಲ ಪ್ರವೇಶ ಮಾಡಿ ಪೂಜೆ ಸಲ್ಲಿಸಲಾಯಿತು.

ವರದಿ : ಗಿರೀಶ್ ರಾಜ್, ಮಂಡ್ಯ

Share. Facebook Twitter LinkedIn WhatsApp Email

Related Posts

ಪ್ರಧಾನಿ ಮೋದಿಯವರ 12 ವರ್ಷದ ಆಡಳಿತದಲ್ಲಿ ದೇಶದ ಸರ್ವಾಂಗೀಣ ಅಭಿವೃದ್ಧಿ: ಸಂಸದ ಬಿ.ವೈ.ರಾಘವೇಂದ್ರ

2 Mins Read

ಸಾಗರದ ಉಳ್ಳೂರು-ತ್ಯಾಗರ್ತಿ ವಿದ್ಯುತ್ ಲೈನ್ ಕಾಮಗಾರಿ ತ್ವರಿತವಾಗಿ ಮುಗಿಸಿ: MP ಬಿವೈ ರಾಘವೇಂದ್ರಗೆ ಗ್ರಾಮಸ್ಥರ ಮನವಿ

2 Mins Read

ಪ್ರಧಾನಿ ಮೋದಿ ಸಾಧನೆ ಅನನ್ಯ, ಶಿವಮೊಗ್ಗ ಜಿಲ್ಲೆಗೆ ರೈಲ್ವೆ ಅಭಿವೃದ್ಧಿಗೆ ಸಿಂಹಪಾಲು: ಸಂಸದ ಬಿ.ವೈ.ರಾಘವೇಂದ್ರ

2 Mins Read
Recent News

ಪ್ರಧಾನಿ ಮೋದಿಯವರ 12 ವರ್ಷದ ಆಡಳಿತದಲ್ಲಿ ದೇಶದ ಸರ್ವಾಂಗೀಣ ಅಭಿವೃದ್ಧಿ: ಸಂಸದ ಬಿ.ವೈ.ರಾಘವೇಂದ್ರ

ಸಾಗರದ ಉಳ್ಳೂರು-ತ್ಯಾಗರ್ತಿ ವಿದ್ಯುತ್ ಲೈನ್ ಕಾಮಗಾರಿ ತ್ವರಿತವಾಗಿ ಮುಗಿಸಿ: MP ಬಿವೈ ರಾಘವೇಂದ್ರಗೆ ಗ್ರಾಮಸ್ಥರ ಮನವಿ

ಪ್ರಧಾನಿ ಮೋದಿ ಸಾಧನೆ ಅನನ್ಯ, ಶಿವಮೊಗ್ಗ ಜಿಲ್ಲೆಗೆ ರೈಲ್ವೆ ಅಭಿವೃದ್ಧಿಗೆ ಸಿಂಹಪಾಲು: ಸಂಸದ ಬಿ.ವೈ.ರಾಘವೇಂದ್ರ

ಸಾಗರದ ಮಾರಿಕಾಂಬೆ ಸನ್ನಿಧಿಗೆ ಮಂಗಳೂರು ಡಿಆರ್ ರಮೇಶ್ ಭೇಟಿ, ವಿಶೇಷ ಪೂಜೆ ಸಲ್ಲಿಕೆ: ಪ್ರತಿಷ್ಠಾನದಿಂದ ಸನ್ಮಾನ

State News
KARNATAKA

ಪ್ರಧಾನಿ ಮೋದಿಯವರ 12 ವರ್ಷದ ಆಡಳಿತದಲ್ಲಿ ದೇಶದ ಸರ್ವಾಂಗೀಣ ಅಭಿವೃದ್ಧಿ: ಸಂಸದ ಬಿ.ವೈ.ರಾಘವೇಂದ್ರ

By ವಸಂತ ಬಿ ಈಶ್ವರಗೆರೆ KARNATAKA 2 Mins Read

ಶಿವಮೊಗ್ಗ: ಕೇಂದ್ರ ಸರ್ಕಾರದ ಸಾಲು ಸಾಲು ಅಭಿವೃದ್ಧಿ ಕೆಲಸಗಳು ಜನರನ್ನು ತಲುಪಬೇಕು. ಪ್ರಧಾನಿ ನರೇಂದ್ರ ಮೋದಿ ಅವರ ಹನ್ನೆರಡು ವರ್ಷಗಳ…

ಸಾಗರದ ಉಳ್ಳೂರು-ತ್ಯಾಗರ್ತಿ ವಿದ್ಯುತ್ ಲೈನ್ ಕಾಮಗಾರಿ ತ್ವರಿತವಾಗಿ ಮುಗಿಸಿ: MP ಬಿವೈ ರಾಘವೇಂದ್ರಗೆ ಗ್ರಾಮಸ್ಥರ ಮನವಿ

ಪ್ರಧಾನಿ ಮೋದಿ ಸಾಧನೆ ಅನನ್ಯ, ಶಿವಮೊಗ್ಗ ಜಿಲ್ಲೆಗೆ ರೈಲ್ವೆ ಅಭಿವೃದ್ಧಿಗೆ ಸಿಂಹಪಾಲು: ಸಂಸದ ಬಿ.ವೈ.ರಾಘವೇಂದ್ರ

ಸಾಗರದ ಮಾರಿಕಾಂಬೆ ಸನ್ನಿಧಿಗೆ ಮಂಗಳೂರು ಡಿಆರ್ ರಮೇಶ್ ಭೇಟಿ, ವಿಶೇಷ ಪೂಜೆ ಸಲ್ಲಿಕೆ: ಪ್ರತಿಷ್ಠಾನದಿಂದ ಸನ್ಮಾನ

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.