Subscribe to Updates
Get the latest creative news from FooBar about art, design and business.
Author: kannadanewsnow09
ಮಂಡ್ಯ: ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಹೆಬ್ಬಾಡಿ ಗ್ರಾಮದಲ್ಲಿ ವಿದ್ಯುತ್ ಕಂಬದ ಮೇಲೆ ಕೆಲಸ ಮಾಡುತ್ತಿದ್ದ ವೇಳೆ ವಿದ್ಯುತ್ ಪ್ರವಹಿಸಿ ಲೈನ್‌ಮನ್ ಒಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ. ಘಟನೆಯ ವಿವರ: ಮಲ್ಲಿಗೆರೆ ಗ್ರಾಮದ ನಿವಾಸಿ ವಿಶ್ವ (55) ಮೃತ ದುರ್ದೈವಿ. ಇವರು ಖಾಸಗಿ ಗುತ್ತಿಗೆದಾರರ ಬಳಿ ಲೈನ್‌ಮನ್ ಆಗಿ ಕೆಲಸ ಮಾಡುತ್ತಿದ್ದರು. ಇಂದು ಹೆಬ್ಬಾಡಿ ಗ್ರಾಮದಲ್ಲಿ ವಿದ್ಯುತ್ ಕಂಬವನ್ನೇರಿ ದುರಸ್ತಿ ಕಾರ್ಯದಲ್ಲಿ ತೊಡಗಿದ್ದಾಗ, ಆಕಸ್ಮಿಕವಾಗಿ ವಿದ್ಯುತ್ ಪ್ರವಹಿಸಿದೆ. ತೀವ್ರವಾದ ವಿದ್ಯುತ್ ಶಾಕ್ ತಗುಲಿದ ಪರಿಣಾಮ ವಿಶ್ವ ಅವರು ಕಂಬದ ಮೇಲೆಯೇ ಪ್ರಾಣ ಬಿಟ್ಟಿದ್ದಾರೆ. ಸ್ಥಳದಲ್ಲಿ ಆತಂಕ: ವಿದ್ಯುತ್ ತಗುಲಿದ ಭೀಕರತೆಗೆ ವಿಶ್ವ ಅವರ ಮೃತದೇಹ ಕಂಬದ ಮೇಲೆಯೇ ನೇತಾಡುತ್ತಿತ್ತು. ಈ ಭೀಕರ ದೃಶ್ಯವನ್ನು ಕಂಡ ಸ್ಥಳೀಯ ಗ್ರಾಮಸ್ಥರು ತೀವ್ರ ಆತಂಕಕ್ಕೊಳಗಾದರು. ವಿಷಯ ತಿಳಿಯುತ್ತಿದ್ದಂತೆ ಸೆಸ್ಕ್ (CESC) ಅಧಿಕಾರಿಗಳು ಹಾಗೂ ಅರಕೆರೆ ಪೊಲೀಸ್ ಠಾಣೆಯ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ್ದಾರೆ. ಪೊಲೀಸ್ ತನಿಖೆ: ಲೈನ್‌ಮನ್ ಕಂಬದ ಮೇಲೆ ಕೆಲಸ ಮಾಡುತ್ತಿರುವಾಗ ವಿದ್ಯುತ್ ಸಂಪರ್ಕ…
ಢಾಕಾ: ಐಪಿಎಲ್ 2026ರ (IPL 2026) ಆರಂಭದ ಬೆನ್ನಲ್ಲೇ ಬಾಂಗ್ಲಾದೇಶ ಸರ್ಕಾರವು ಒಂದು ಮಹತ್ವದ ನಿರ್ಧಾರ ಕೈಗೊಂಡಿದೆ. ಈ ಹಿಂದೆ ಭಾರತೀಯ ಪ್ರೀಮಿಯರ್ ಲೀಗ್ (IPL) ಪ್ರಸಾರದ ಮೇಲೆ ಹೇರಲಾಗಿದ್ದ ಸಂಪೂರ್ಣ ನಿಷೇಧವನ್ನು ಬಾಂಗ್ಲಾದೇಶ ಹಿಂಪಡೆದಿದೆ. ಈ ಕುರಿತು ಬಾಂಗ್ಲಾದೇಶದ ನೂತನ ಮಾಹಿತಿ ಮತ್ತು ಪ್ರಸಾರ ಸಚಿವ ಜಹೀರ್ ಉದ್ದೀನ್ ಸ್ವಪನ್ ಅವರು ಶನಿವಾರ ಅಧಿಕೃತ ಮಾಹಿತಿ ನೀಡಿದ್ದಾರೆ. ಹಿನ್ನೆಲೆ: ಕೆಲವು ತಿಂಗಳ ಹಿಂದೆ ಕೋಲ್ಕತ್ತಾ ನೈಟ್ ರೈಡರ್ಸ್ (KKR) ತಂಡವು ಬಾಂಗ್ಲಾದೇಶದ ವೇಗಿ ಮುಸ್ತಫಿಜುರ್ ರೆಹಮಾನ್ ಅವರನ್ನು ಬಿಡುಗಡೆ ಮಾಡಿದ ನಂತರ ಉಭಯ ದೇಶಗಳ ಕ್ರಿಕೆಟ್ ಮಂಡಳಿಗಳ ನಡುವೆ ಬಿರುಕು ಉಂಟಾಗಿತ್ತು. ಬಾಂಗ್ಲಾದೇಶದಲ್ಲಿ ಹಿಂದೂ ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯದ ಹಿನ್ನೆಲೆಯಲ್ಲಿ ಬಿಸಿಸಿಐ (BCCI) ಸೂಚನೆಯಂತೆ ಮುಸ್ತಫಿಜುರ್ ಅವರನ್ನು ತಂಡದಿಂದ ಕೈಬಿಡಲಾಗಿತ್ತು ಎನ್ನಲಾಗಿತ್ತು. ಇದಕ್ಕೆ ಪ್ರತಿಕ್ರಿಯೆಯಾಗಿ ಬಾಂಗ್ಲಾದೇಶವು ಐಪಿಎಲ್ ಪ್ರಸಾರವನ್ನು ನಿಷೇಧಿಸಿತ್ತು ಮತ್ತು 2026ರ ಟಿ20 ವಿಶ್ವಕಪ್‌ನಿಂದಲೂ ಹೊರಗುಳಿಯುವುದಾಗಿ ಘೋಷಿಸಿತ್ತು. ಸಚಿವರ ಹೇಳಿಕೆ: “ನಾವು ಕ್ರೀಡೆಯೊಂದಿಗೆ ರಾಜಕೀಯವನ್ನು ಬೆರೆಸಲು ಇಚ್ಛಿಸುವುದಿಲ್ಲ. ಇದನ್ನು…
ಉತ್ತರ ಪ್ರದೇಶ: ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷದಿಂದ ಉಂಟಾಗಬಹುದಾದ ಸವಾಲುಗಳನ್ನು ಭಾರತವು ದಿಟ್ಟವಾಗಿ ಎದುರಿಸುತ್ತಿದೆ. ಈ ಯುದ್ಧದ ಪರಿಣಾಮ ದೇಶದ ಸಾಮಾನ್ಯ ಕುಟುಂಬಗಳು ಮತ್ತು ರೈತರ ಮೇಲೆ ಬೀರದಂತೆ ಸರ್ಕಾರವು ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ ಭರವಸೆ ನೀಡಿದ್ದಾರೆ. ಉತ್ತರ ಪ್ರದೇಶದ ಜೇವರ್‌ನಲ್ಲಿ ನಿರ್ಮಿಸಲಾದ ನೋಯ್ಡಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು (Noida International Airport) ಉದ್ಘಾಟಿಸಿ ಮಾತನಾಡಿದ ಅವರು, ದೇಶದ ಆರ್ಥಿಕತೆ ಮತ್ತು ಸುರಕ್ಷತೆಯ ಕುರಿತು ಹಲವು ಮಹತ್ವದ ವಿಷಯಗಳನ್ನು ಹಂಚಿಕೊಂಡರು. ತೈಲ ಬೆಲೆ ಏರಿಕೆಯ ಆತಂಕ ಬೇಡ: ಪಶ್ಚಿಮ ಏಷ್ಯಾದಲ್ಲಿ ಸಂಘರ್ಷ ಆರಂಭವಾಗಿ ಒಂದು ತಿಂಗಳಿಗೂ ಹೆಚ್ಚು ಸಮಯ ಕಳೆದಿದೆ. ಭಾರತವು ಕಚ್ಚಾ ತೈಲ ಮತ್ತು ಅನಿಲಕ್ಕಾಗಿ ಈ ಪ್ರದೇಶದ ಮೇಲೆ ಅವಲಂಬಿತವಾಗಿದೆ. ಯುದ್ಧದ ಕಾರಣದಿಂದಾಗಿ ಇಂಧನ ಬೆಲೆ ಏರಿಕೆಯಾಗುವ ಆತಂಕವಿದ್ದರೂ, ಸರ್ಕಾರವು ಈ ಹೊರೆ ಜನಸಾಮಾನ್ಯರ ಮೇಲೆ ಬೀಳದಂತೆ ನೋಡಿಕೊಳ್ಳುತ್ತಿದೆ ಎಂದು ಪ್ರಧಾನಿ ತಿಳಿಸಿದರು. “ಸವಾಲುಗಳು ಎಷ್ಟೇ ಇದ್ದರೂ, ಭಾರತವು ಅವುಗಳನ್ನು…
ಬೆಂಗಳೂರು: ಕರ್ನಾಟಕ ಪಬ್ಲಿಕ್ ಶಾಲೆ, ಪಿಎಂಶ್ರೀ ಮತ್ತು 15 ಜಿಲ್ಲೆಗಳ ಸರ್ಕಾರಿ ಶಾಲೆಗಳಲ್ಲಿ ದ್ವಿಭಾಷಾ ಬೋಧನೆಯನ್ನು ಸರ್ಕಾರ ಆರಂಭಿಸಲಿದೆ. ಇದಕ್ಕಾಗಿ ಶಿಕ್ಷಕರಿಗೆ ಮಾರ್ಚ್.-ಏಪ್ರಿಲ್ ನಲ್ಲಿಯೇ ತರಬೇತಿ ನೀಡಲಿದೆ. ಈ ಕುರಿತು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯಿಂದ ಮಾಹಿತಿ ನೀಡಲಾಗಿದ್ದು, ರಾಜ್ಯದ ಸರ್ಕಾರಿ ಶಾಲಾ ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟವನ್ನು ಹೆಚ್ಚಿಸಲು ಮತ್ತು ಜಾಗತಿಕ ಸ್ಪರ್ಧೆಗೆ ಸಜ್ಜುಗೊಳಿಸಲು ಶಿಕ್ಷಣ ಇಲಾಖೆಯು ಮಹತ್ವದ ಹೆಜ್ಜೆ ಇರಿಸಿದೆ. ಬರುವ 2026-27ನೇ ಶೈಕ್ಷಣಿಕ ಸಾಲಿನಿಂದ ಆಯ್ದ ಸರ್ಕಾರಿ ಶಾಲೆಗಳಲ್ಲಿ ‘ಮೊನೋಗ್ರೇಡ್ ದ್ವಿಭಾಷಾ’ (Monograde Bilingual) ತರಗತಿಗಳನ್ನು ಪ್ರಾರಂಭಿಸಲು ಸರ್ಕಾರ ನಿರ್ಧರಿಸಿದೆ. ಯಾವ ಶಾಲೆಗಳಲ್ಲಿ ಜಾರಿ? ಈ ಹೊಸ ಯೋಜನೆಯು ಮೊದಲ ಹಂತದಲ್ಲಿ ಈ ಕೆಳಗಿನ ಶಾಲೆಗಳಲ್ಲಿ ಅನುಷ್ಠಾನಗೊಳ್ಳಲಿದೆ: ರಾಜ್ಯದ ಎಲ್ಲಾ ಕರ್ನಾಟಕ ಪಬ್ಲಿಕ್ ಶಾಲೆಗಳು (KPS). ಎಲ್ಲಾ ಪಿಎಂಶ್ರೀ (PM SHRI) ಶಾಲೆಗಳು. ರಾಜ್ಯದ ಆಯ್ದ 15 ಜಿಲ್ಲೆಗಳ ಎಲ್ಲಾ ಸರ್ಕಾರಿ ಪ್ರಾಥಮಿಕ ಶಾಲೆಗಳು. ಏನಿದು ದ್ವಿಭಾಷಾ ಬೋಧನೆ? ದ್ವಿಭಾಷಾ ತರಗತಿಗಳಲ್ಲಿ ವಿದ್ಯಾರ್ಥಿಗಳಿಗೆ ಕನ್ನಡದ ಜೊತೆಗೆ ಇಂಗ್ಲಿಷ್ ಮಾಧ್ಯಮದಲ್ಲೂ…
ಬೆಂಗಳೂರು: ಐಪಿಎಲ್ 2026ರ (IPL 2026) ಉದ್ಘಾಟನಾ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿರುವ ಬೆನ್ನಲ್ಲೇ, ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಮಾಜಿ ಮಾಲೀಕ ವಿಜಯ್ ಮಲ್ಯ ಅವರು ತಂಡಕ್ಕೆ ವಿಶೇಷವಾಗಿ ಶುಭ ಹಾರೈಸಿದ್ದಾರೆ. ಈ ಬಾರಿ ಅವರು ಪೂರ್ಣ ಪ್ರಮಾಣದಲ್ಲಿ ಕನ್ನಡದಲ್ಲೇ ಟ್ವೀಟ್ ಮಾಡುವ ಮೂಲಕ ಬೆಂಗಳೂರು ಅಭಿಮಾನಿಗಳ ಗಮನ ಸೆಳೆದಿದ್ದಾರೆ. ಕನ್ನಡದಲ್ಲಿ ಮಲ್ಯ ಸಂದೇಶ: ಸನ್‌ರೈಸರ್ಸ್ ಹೈದರಾಬಾದ್ (SRH) ವಿರುದ್ಧದ ಮೊದಲ ಪಂದ್ಯಕ್ಕೂ ಮುನ್ನ ತಮ್ಮ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಪೋಸ್ಟ್ ಮಾಡಿರುವ ಮಲ್ಯ, “ಬೆಂಗಳೂರಿನ ಸಿಂಹಗಳ ಪಾಲಿನ ದಿನ ಕೊನೆಗೂ ಬಂದೇ ಬಿಟ್ಟಿತು. ನಮ್ಮ ಸಿಂಹಗಳು… ಐಪಿಎಲ್ ಚಾಂಪಿಯನ್ಸ್. ಗುಡ್ ಲಕ್ ಅಂಡ್ ಪ್ಲೇ ಬೋಲ್ಡ್, ಧೈರ್ಯವಾಗಿ ಆಟವಾಡಿ” ಎಂದು ಬರೆದುಕೊಂಡಿದ್ದಾರೆ. ಅವರ ಈ ‘ಧೈರ್ಯವಾಗಿ ಆಟವಾಡಿ’ ಎಂಬ ಅಪ್ಪಟ ಕನ್ನಡದ ಸಾಲುಗಳು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ. https://twitter.com/TheVijayMallya/status/2037699650946232674 ಬದಲಾದ ಮಾಲೀಕತ್ವ – ಸ್ಥಿರವಾದ ಪ್ರೀತಿ: ಇತ್ತೀಚೆಗಷ್ಟೇ ಆರ್‌ಸಿಬಿ ತಂಡದ ಮಾಲೀಕತ್ವದಲ್ಲಿ ದೊಡ್ಡ ಬದಲಾವಣೆಯಾಗಿದ್ದು, ಆದಿತ್ಯ…
ಬೆಂಗಳೂರು: ರಾಜ್ಯ ಸರ್ಕಾರದಲ್ಲಿ ಮನೆ ಮಾಡಿರುವ ‘ವಿಐಪಿ ಸಂಸ್ಕೃತಿ’ ಹಾಗೂ ಶಾಸಕರಿಗೆ ಐಪಿಎಲ್ ಟಿಕೆಟ್ ನೀಡುವ ಸರ್ಕಾರದ ನಿರ್ಧಾರದ ವಿರುದ್ಧ ಮಾಜಿ ಸಚಿವ ಎಸ್. ಸುರೇಶ್ ಕುಮಾರ್ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಜನಸಾಮಾನ್ಯರ ಸಮಸ್ಯೆಗಳಿಗಿಂತ ಶಾಸಕರ ಸೌಲಭ್ಯಕ್ಕೇ ಸರ್ಕಾರ ಆದ್ಯತೆ ನೀಡುತ್ತಿದೆ ಎಂದು ಅವರು ಚಾಟಿ ಬೀಸಿದ್ದಾರೆ. ಈ ಕುರಿತು ವಿಧಾನಸಭೆಯ ಸಭಾಧ್ಯಕ್ಷರಿಗೆ ಪತ್ರ ಬರೆದಿರುವಂತ ಅವರು, ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ನಡೆಯನ್ನು ಕಟುವಾಗಿ ಟೀಕಿಸಿದ್ದಾರೆ. ಸಮಾಜವಾದಿ ಸರ್ಕಾರದಲ್ಲಿ ವಿಐಪಿ ಮೋಹ! “ರಾಜ್ಯದಲ್ಲಿ ತಾವು ‘ಸಮಾಜವಾದಿ’ ಎಂದು ಕರೆದುಕೊಳ್ಳುವ ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರವಿದೆ. ಆದರೆ, ಇಂತಹ ಆಡಳಿತದಲ್ಲೂ ವಿಐಪಿ ಸಂಸ್ಕೃತಿ ಮುಂದುವರಿಯುತ್ತಿರುವುದು ಅಚ್ಚರಿ ಮತ್ತು ದುರಂತ” ಎಂದು ಸುರೇಶ್ ಕುಮಾರ್ ಕಿಡಿಕಾರಿದ್ದಾರೆ. ಕಳೆದ ವರ್ಷ ಆರ್.ಸಿ.ಬಿ ವಿಜಯೋತ್ಸವದ ವೇಳೆ ಮುಖ್ಯಮಂತ್ರಿಗಳು ತಮ್ಮ ಮೊಮ್ಮಗನನ್ನು ವೇದಿಕೆಗೆ ಕರೆತಂದಿದ್ದನ್ನು ನೆನಪಿಸಿದ ಅವರು, ಅಧಿಕಾರವನ್ನು ವೈಯಕ್ತಿಕ ಪ್ರತಿಷ್ಠೆಗೆ ಬಳಸಿಕೊಳ್ಳಲಾಗುತ್ತಿದೆ ಎಂದು ಟೀಕಿಸಿದ್ದಾರೆ. ಸದನದಲ್ಲಿ ಜನಸಾಮಾನ್ಯರ ಧ್ವನಿ ಎಲ್ಲಿ? ಮಾರ್ಚ್ 26ರಂದು ವಿಧಾನಸಭೆಯಲ್ಲಿ ನಡೆದ ವಿದ್ಯಮಾನಗಳ…
ಬೆಂಗಳೂರು: ದಿನಾಂಕ 28.03.2026 ಮತ್ತು 05.04.2026 ಗಳಂದು ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ 2026-IPL T20 ಕ್ರಿಕೆಟ್ ಪಂದ್ಯಾವಳಿಗಳ ವೀಕ್ಷಣೆಗೆ ಬಂದು ಹೋಗುವ ಸಾರ್ವಜನಿಕ ಪ್ರಯಾಣಿಕರಿಗೆ ಸಾರಿಗೆ ಸೌಲಭ್ಯ ಒದಗಿಸಲು ಬಿಎಂಟಿಸಿ ವ್ಯವಸ್ಥೆ ಮಾಡಿದೆ. ಈ ಬಗ್ಗೆ ಪತ್ರಿಕಾ ಪ್ರಕಟಣೆಯಲ್ಲಿ ಬಿಎಂಟಿಸಿ ಮಾಹಿತಿ ನೀಡಿದ್ದು, ದಿನಾಂಕ: 28.03.2026 & 05.04.2026 ಗಳಂದು ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ TATA Indian Premier League 2026-IPL T20 ಕ್ರಿಕೆಟ್ ಪಂದ್ಯಾವಳಿಗಳು ನಡೆಯಲಿದ್ದು, ಸದರಿ ಕ್ರಿಕೆಟ್ ಪಂದ್ಯಾವಳಿಗಳ ವೀಕ್ಷಣೆಗೆ ಬಂದು-ಹೋಗುವ ವೀಕ್ಷಕರಿಗೆ ದಟ್ಟಣೆಗನುಗುಣವಾಗಿ ಬೆಂ.ಮ.ಸಾ.ಸಂಸ್ಥೆಯಿಂದ ಸಾರಿಗೆಗಳನ್ನು ಕಾರ್ಯಾಚರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದಿದೆ. ಎಂ. ಚಿನ್ನಸ್ವಾಮಿ ಕ್ರೀಡಾಂಗಣದಿಂದ ವಿವಿಧ ಪ್ರದೇಶಗಳಿಗೆ ನಡುವೆ ಕಾರ್ಯಾಚರಿಸಲಾಗುವ ಸಾರಿಗೆಗಳ ವಿವರ ಕೆಳಕಂಡಂತಿದೆ: ಕ್ರ ಸಂ. ಮಾರ್ಗ ಸಂಖ್ಯೆ ಎಲ್ಲಿಂದ ಎಲ್ಲಿಗೆ 1 ಎಸ್.ಬಿ. ಎಸ್-1ಕೆ ಎಂ. ಚಿನ್ನಸ್ವಾಮಿ ಕ್ರೀಡಾಂಗಣ ಕಾಡುಗೋಡಿಬಸ್ ನಿಲ್ದಾಣ ಹೆಚ್.ಎ.ಎಲ್‌ರಸ್ತೆ 2 ಜಿ-2 ಸರ್ಜಾಪುರ 3 ಜಿ-3 ಎಲೆಕ್ಟ್ರಾನಿಕ್ ಸಿಟಿ (ಹೊಸೂರುರಸ್ತೆ) 4 ಜಿ-4 ಬನ್ನೇರುಘಟ್ಟ ನ್ಯಾಷನಲ್ ಪಾರ್ಕ್ 5 ಜಿ-7 ಜನಪ್ರಿಯ …
ಬೆಂಗಳೂರು: ಪ್ರತಿಷ್ಠಿತ ವಿದ್ಯಾಸಂಸ್ಥೆಯಾದ ಪಿ.ಇ.ಎಸ್. ವಿಶ್ವವಿದ್ಯಾಲಯದ (PES University) ಉಪನ್ಯಾಸಕರೊಬ್ಬರು ತರಗತಿಯಲ್ಲೇ ವಿದ್ಯಾರ್ಥಿಯೊಬ್ಬನನ್ನು ‘ಭಯೋತ್ಪಾದಕ’ (Terrorist) ಎಂದು ಕರೆದು ಅವಮಾನಿಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಸದ್ಯ ಸದರಿ ಉಪನ್ಯಾಸಕನನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ. ಘಟನೆಯ ಹಿನ್ನೆಲೆ: ವರದಿಗಳ ಪ್ರಕಾರ, ವಿಶ್ವವಿದ್ಯಾಲಯದ ಬಿಬಿಎ ಅನಾಲಿಟಿಕ್ಸ್ ವಿಭಾಗದ ಅಡ್ಜಂಕ್ಟ್ ಫ್ಯಾಕಲ್ಟಿ ಆಗಿ ಕಾರ್ಯನಿರ್ವಹಿಸುತ್ತಿದ್ದ ಡಾ. ಮುರಳೀಧರ್ ದೇಶಪಾಂಡೆ ಎಂಬುವವರು ಈ ಕೃತ್ಯ ಎಸಗಿದ್ದಾರೆ. ತರಗತಿಯಲ್ಲಿ ಪಾಠ ಮಾಡುತ್ತಿದ್ದ ಸಂದರ್ಭದಲ್ಲಿ ವಿದ್ಯಾರ್ಥಿಯೊಬ್ಬನ ಧರ್ಮ ಅಥವಾ ಹೆಸರನ್ನು ಗುರಿಯಾಗಿಸಿಕೊಂಡು ಸುಮಾರು 13ಕ್ಕೂ ಹೆಚ್ಚು ಬಾರಿ ಆತನನ್ನು “ಉಗ್ರ” ಎಂದು ಕರೆದಿದ್ದಾರೆ ಎನ್ನಲಾಗಿದೆ. ಈ ಸಂದರ್ಭದಲ್ಲಿ ಉಪನ್ಯಾಸಕರು, “ನಿನಗೆ ನಾಚಿಕೆಯಾಗುವುದಿಲ್ಲವೇ? ನೀನೊಬ್ಬ ನಿರುಪಯುಕ್ತ ವ್ಯಕ್ತಿ, ನೀನೊಬ್ಬ ಭಯೋತ್ಪಾದಕ” ಎಂಬರ್ಥದ ಮಾತುಗಳನ್ನು ಆಡಿದ್ದಾರೆ. ಅಲ್ಲದೆ, ಇರಾನ್ ಯುದ್ಧ ಮತ್ತು ಅಮೆರಿಕದ ಮಾಜಿ ಅಧ್ಯಕ್ಷ ಟ್ರಂಪ್ ಅವರ ಹೆಸರನ್ನು ಪ್ರಸ್ತಾಪಿಸಿ ವಿದ್ಯಾರ್ಥಿಯನ್ನು ಮಾನಸಿಕವಾಗಿ ಕುಗ್ಗಿಸುವ ಪ್ರಯತ್ನ ನಡೆಸಿದ್ದಾರೆ ಎಂದು ಹೇಳಲಾಗಿದೆ. ವೈರಲ್ ಆದ ವಿಡಿಯೋ – ಆಕ್ರೋಶ: ತರಗತಿಯಲ್ಲಿದ್ದ ಇತರ ವಿದ್ಯಾರ್ಥಿಗಳು…
ವಿಜಯಪುರ: ಜಿಲ್ಲೆಯ ತಿಕೋಟಾ ತಾಲೂಕಿನ ಕೋಟ್ಯಾಳ ಗ್ರಾಮದಲ್ಲಿ ಮದ್ಯವ್ಯಸನಿಯೊಬ್ಬ ಮೊಬೈಲ್ ಟವರ್ ಹತ್ತಿ ವಿಚಿತ್ರ ಬೇಡಿಕೆ ಇಡುವ ಮೂಲಕ ಸಾರ್ವಜನಿಕರನ್ನು ಹಾಗೂ ಪೊಲೀಸರನ್ನು ತಲ್ಲಣಗೊಳಿಸಿದ ಘಟನೆ ನಡೆದಿದೆ. ಏನಿದು ಘಟನೆ? ಕೋಟ್ಯಾಳ ಗ್ರಾಮದ ನಿವಾಸಿಯಾಗಿರುವ ಶ್ರೀಶೈಲ್ ಎಂಬ ವ್ಯಕ್ತಿ ಮದ್ಯದ ಅಮಲಿನಲ್ಲಿ ಗ್ರಾಮದ ಮೊಬೈಲ್ ಟವರ್ ಹತ್ತಿದ್ದಾನೆ. ಕೆಳಗೆ ಇಳಿಯುವಂತೆ ಗ್ರಾಮಸ್ಥರು ಎಷ್ಟೇ ವಿನಂತಿಸಿದರೂ ಕೇಳದ ಆತ, “ನನಗೆ ಒಂದು ಬಾಟಲ್ ಮದ್ಯ ಕೊಟ್ಟರೆ ಮಾತ್ರ ನಾನು ಕೆಳಗೆ ಬರುತ್ತೇನೆ” ಎಂದು ಪಟ್ಟು ಹಿಡಿದು ಕೂತಿದ್ದಾನೆ. ಹಳೆಯ ಚಾಳಿ: ವರದಿಗಳ ಪ್ರಕಾರ, ಶ್ರೀಶೈಲ್ ಈ ರೀತಿ ಟವರ್ ಹತ್ತುವುದು ಇದೇ ಮೊದಲೇನಲ್ಲ. ಕಳೆದ ಎರಡು ವರ್ಷಗಳಲ್ಲಿ ಈತ ಎರಡನೇ ಬಾರಿಗೆ ಈ ಸಾಹಸಕ್ಕೆ ಕೈ ಹಾಕಿದ್ದಾನೆ. ಮದ್ಯದ ಅಮಲಿನಲ್ಲಿ ಪದೇ ಪದೇ ಮೊಬೈಲ್ ಟವರ್ ಹತ್ತಿ ಈ ರೀತಿ ಹುಚ್ಚಾಟ ಮೆರೆಯುವುದು ಈತನಿಗೆ ಒಂದು ಚಾಳಿಯಾಗಿ ಬಿಟ್ಟಿದೆ ಎಂದು ಹೇಳಲಾಗುತ್ತಿದೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ತಿಕೋಟಾ ಪೊಲೀಸರು ಮತ್ತು ಅಗ್ನಿಶಾಮಕ…
ಶಿವಮಾಗ್ಗ; ಸಾಗರದ ಮಾರಿಕಾಂಬಾ ನ್ಯಾಸ ಸಮಿತಿಯ ಚುನಾವಣೆಯ ಘೋಷಣೆಗೂ ಮುನ್ನವೇ ಸಮಿತಿಗೆ ಪದಾಧಿಕಾರಿಗಳ ಆಯ್ಕೆ ಫೈನಲ್ ಆಗಿದೆ. ಇಂದು ಚುನಾವಣೆಗೆ ನಾಮಪತ್ರ ಸಲ್ಲಿಸೋ ಮುನ್ನವೇ ಖಾಸಗಿ ಹೋಟೆಲ್ ನಲ್ಲಿ ನಡೆದಂತ ಸಭೆಯಲ್ಲಿ ಪಟ್ಟಿಯನ್ನು ಅಂತಿಮಗೊಳಿಸಲಾಗಿದೆ. ಮಾರಿಗುಡಿ ಸಮಿತಿಗೆ ಅಧ್ಯಕ್ಷರಾಗಿ ಪವಿತ್ರ ನಾಗರಾಜ್, ಉಪಾಧ್ಯಕ್ಷರಾಗಿ ಶ್ರೀನಿವಾಸ್ ಮೇಸ್ತ್ರಿ, ಪ್ರಧಾನ ಕಾರ್ಯದರ್ಶಿಯಾಗಿ ಎಂ.ಡಿ ಆನಂದ್ ಆಯ್ಕೆ ಮಾಡಲಾಗಿದೆ. ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಇತಿಹಾಸ ಪ್ರಸಿದ್ಧ ಸಾಗರದ ಶ್ರೀ ಮಾರಿಕಾಂಬಾ ನ್ಯಾಸ ಸಮಿತಿಯ ಪದಾಧಿಕಾರಿಗಳ ಆಯ್ಕೆಯ ಸಂಬಂಧ ಹಿತರಕ್ಷಣಾ ಸಮಿತಿ ಹಾಗೂ ವ್ಯವಸ್ಥಾಪನ ಸಮಿತಿಯ ಸದಸ್ಯರು ಒಟ್ಟುಗೂಡಿ ಖಾಸಗಿ ಹೋಟೆಲ್ ನಲ್ಲಿ ಸಭೆ ನಡೆಸಿದರು. ಈ ಸಭೆಯಲ್ಲಿ ಚುನಾವಣೆಗೆ ನಾಮಪತ್ರ ಸಲ್ಲಿಕೆಗೂ ಮುನ್ನವೇ ಪದಾಧಿಕಾರಿಗಳ ಪಟ್ಟಿಯನ್ನು ಅಂತಿಮಗೊಳಿಸಲಾಗಿದೆ. ಹೀಗಿದೆ ಮಾರಿಗುಡಿ ಸಮಿತಿ ಪದಾಧಿಕಾರಿಗಳ ಪೈನಲ್ ಪಟ್ಟಿ 1. ಪವಿತ್ರಾ ನಾಗರಾಜ್, ಅಧ್ಯಕ್ಷರು 2. ಶ್ರೀನಿವಾಸ್ ಮೇಸ್ತ್ರಿ, ಉಪಾಧ್ಯಕ್ಷರು 3. ಎಂ.ಡಿ ಆನಂದ್, ಪ್ರಧಾನ ಕಾರ್ಯದರ್ಶಿಗಳು 4. ಪುರುಷೋತ್ತಮ್(ಪುಚ್ಚಿ) ಹಾಗೂ ವಿ.ಗುರು, ಕಾರ್ಯದರ್ಶಿಗಳು 5. ವಿ.ಶಂಕರ್(ಮಾಸ್ಟರ್…














