Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಚುನಾವಣಾ ಆಯೋಗ, ಬಿಜೆಪಿ ನಡುವಿನ ಒಳಸಂಚಿನಿಂದ ಮೀನಾಕ್ಷಿ ನಟರಾಜನ್ ನಾಮಪತ್ರ ತಿರಸ್ಕಾರ: MLC ರಮೇಶ್ ಬಾಬು ಗಂಭೀರ ಆರೋಪ

ಕಲಬುರ್ಗಿ ಜನತೆಗೆ ಗುಡ್ ನ್ಯೂಸ್ : ಇಂದಿನಿಂದ ಬೆಂಗಳೂರು-ಕಲ್ಬುರ್ಗಿ ನಡುವೆ ಸ್ಟಾರ್ ಏರ್ ವಿಮಾನ ಸೇವೆ ಪುನಾರಂಭ

ಬಸ್ ಇದ್ದರೂ ನಿಲ್ಲಲ್ಲ! ಶಾಲಾ ಮಕ್ಕಳು, ಗ್ರಾಮಸ್ಥರ ಪರದಾಟ: ಸಾಗರದ ಉಳ್ಳೂರಲ್ಲಿ KSRTC ಬಸ್ ನಿಲ್ಲಿಸಲು ಒತ್ತಾಯ

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಬಸ್ ಇದ್ದರೂ ನಿಲ್ಲಲ್ಲ! ಶಾಲಾ ಮಕ್ಕಳು, ಗ್ರಾಮಸ್ಥರ ಪರದಾಟ: ಸಾಗರದ ಉಳ್ಳೂರಲ್ಲಿ KSRTC ಬಸ್ ನಿಲ್ಲಿಸಲು ಒತ್ತಾಯ
KARNATAKA

ಬಸ್ ಇದ್ದರೂ ನಿಲ್ಲಲ್ಲ! ಶಾಲಾ ಮಕ್ಕಳು, ಗ್ರಾಮಸ್ಥರ ಪರದಾಟ: ಸಾಗರದ ಉಳ್ಳೂರಲ್ಲಿ KSRTC ಬಸ್ ನಿಲ್ಲಿಸಲು ಒತ್ತಾಯ

By ವಸಂತ ಬಿ ಈಶ್ವರಗೆರೆ

ಶಿವಮೊಗ್ಗ: ಜಿಲ್ಲೆಯ ಸಾಗರ ತಾಲ್ಲೂಕಿನ ಪ್ರಮುಖ ಗ್ರಾಮಗಳಾದ ಉಳ್ಳೂರು, ಕಾಸ್ಪಾಡಿ, ಐಗಿನ್ ಬೈಲು ಮತ್ತು ಹೊಸೂರು ಮುಂತಾದ ಕಡೆಗಳಲ್ಲಿ ಸಾರಿಗೆ ಇಲಾಖೆಯ ಬಸ್ಸುಗಳು ನಿಲ್ಲದೆ ಹಾಗೇ ಸಾಗುತ್ತಿರುವುದನ್ನು ಖಂಡಿಸಿ, ಗ್ರಾಮಸ್ಥರು ಸಾಗರ ಕೆಎಸ್‌ಆರ್‌ಟಿಸಿ (KSRTC) ಡಿಪೋಗೆ ಭೇಟಿ ನೀಡಿ ಅಧಿಕಾರಿಗಳಿಗೆ ತೀವ್ರ ಆಕ್ರೋಶದೊಂದಿಗೆ ಮನವಿ ಸಲ್ಲಿಸಿದರು.

​ಶಾಲಾ ಮಕ್ಕಳು ಹಾಗೂ ಗ್ರಾಮಸ್ಥರ ಪರದಾಟ:

ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಈ ಭಾಗದ ಗ್ರಾಮಸ್ಥರಿಗೆ ಹಾಗೂ ದಿನನಿತ್ಯ ಶಾಲೆ-ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳಿಗೆ ಸಾರಿಗೆ ಸಂಸ್ಥೆಯ ಬಸ್ಸುಗಳೇ ಏಕೈಕ ಆಸರೆಯಾಗಿದೆ. ಆದರೆ, ಚಾಲಕರು ಮತ್ತು ನಿರ್ವಾಹಕರು ನಿಗದಿತ ನಿಲ್ದಾಣಗಳಿದ್ದರೂ ಬಸ್‌ಗಳನ್ನು ನಿಲ್ಲಿಸದೇ ನಿರ್ಲಕ್ಷ್ಯದಿಂದ ಮುನ್ನಡೆಯುತ್ತಿದ್ದಾರೆ. ಇದರಿಂದಾಗಿ ಶಾಲಾ ಮಕ್ಕಳು ಸಮಯಕ್ಕೆ ಸರಿಯಾಗಿ ಶಾಲೆ ತಲುಪಲಾಗದೆ ಹಾಗೂ ಗ್ರಾಮಸ್ಥರು ತುರ್ತು ಕೆಲಸಗಳಿಗೆ ಹೋಗಲಾಗದೆ ನಿತ್ಯ ನರಕಯಾತನೆ ಅನುಭವಿಸುವಂತಾಗಿದೆ.

​ಹಲವಾರು ಬಾರಿ ಮನವಿ ನೀಡಿದರೂ ಇಲ್ಲದ ಕ್ರಮ:

ಈ ಹಿಂದೆಯೂ ಈ ಕುರಿತು ಅಧಿಕಾರಿಗಳ ಗಮನಕ್ಕೆ ತಂದು ಹಲವಾರು ಬಾರಿ ಲಿಖಿತ ಮನವಿಗಳನ್ನು ನೀಡಲಾಗಿದ್ದರೂ, ಸಾರಿಗೆ ಇಲಾಖೆ ಯಾವುದೇ ಸೂಕ್ತ ಕ್ರಮ ಕೈಗೊಂಡಿಲ್ಲ. ಇಲಾಖೆಯ ಈ ಸರಣಿ ನಿರ್ಲಕ್ಷ್ಯ ಧೋರಣೆಯಿಂದ ಬೇಸತ್ತ ಗ್ರಾಮಸ್ಥರು ಇಂದು ನೇರವಾಗಿ ಡಿಪೋಗೆ ಧಾವಿಸಿ, ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಇನ್ನಾದರೂ ಇಲಾಖೆ ಎಚ್ಚೆತ್ತುಕೊಂಡು ವಿದ್ಯಾರ್ಥಿಗಳ ಹಾಗೂ ಸಾರ್ವಜನಿಕರ ಹಿತದೃಷ್ಟಿಯಿಂದ ಬಸ್ಸುಗಳು ಕಡ್ಡಾಯವಾಗಿ ನಿಲ್ಲುವಂತೆ ಕ್ರಮ ಜರುಗಿಸಬೇಕು, ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಗ್ರಾಮಸ್ಥರು ಎಚ್ಚರಿಸಿದ್ದಾರೆ.

​ಈ ಸಂದರ್ಭದಲ್ಲಿ ಗ್ರಾಮದ ಪ್ರಮುಖರಾದ ವಸೀಮ್, ಶರತ್, ದುರ್ಗಪ್ಪ, ಹರಿದ್ರ ಕುಮಾರ್, ಚೌಡಪ್ಪಣ್ಣ, ಹರೀಶ್ ಗೌಡ, ಲೋಕೇಶ್, ದಿನೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ವರದಿ; ವಸಂತ ಬಿ ಈಶ್ವರಗೆರೆ, ಸಂಪಾದಕರು..

Share. Facebook Twitter LinkedIn WhatsApp Email

Related Posts

ಚುನಾವಣಾ ಆಯೋಗ, ಬಿಜೆಪಿ ನಡುವಿನ ಒಳಸಂಚಿನಿಂದ ಮೀನಾಕ್ಷಿ ನಟರಾಜನ್ ನಾಮಪತ್ರ ತಿರಸ್ಕಾರ: MLC ರಮೇಶ್ ಬಾಬು ಗಂಭೀರ ಆರೋಪ

1 Min Read

ಕಲಬುರ್ಗಿ ಜನತೆಗೆ ಗುಡ್ ನ್ಯೂಸ್ : ಇಂದಿನಿಂದ ಬೆಂಗಳೂರು-ಕಲ್ಬುರ್ಗಿ ನಡುವೆ ಸ್ಟಾರ್ ಏರ್ ವಿಮಾನ ಸೇವೆ ಪುನಾರಂಭ

1 Min Read

ಉದ್ಯೋಗವಾರ್ತೆ : ‘ಶಿಕ್ಷಕ ಹುದ್ದೆ’ ಆಕಾಂಕ್ಷಿಗಳಿಗೆ ಗುಡ್ ನ್ಯೂಸ್ : 15,000 ಶಿಕ್ಷಕರ ನೇಮಕಾತಿಗೆ ರಾಜ್ಯ ಸರ್ಕಾರ ಅನುಮೋದನೆ

1 Min Read
Recent News

ಚುನಾವಣಾ ಆಯೋಗ, ಬಿಜೆಪಿ ನಡುವಿನ ಒಳಸಂಚಿನಿಂದ ಮೀನಾಕ್ಷಿ ನಟರಾಜನ್ ನಾಮಪತ್ರ ತಿರಸ್ಕಾರ: MLC ರಮೇಶ್ ಬಾಬು ಗಂಭೀರ ಆರೋಪ

ಕಲಬುರ್ಗಿ ಜನತೆಗೆ ಗುಡ್ ನ್ಯೂಸ್ : ಇಂದಿನಿಂದ ಬೆಂಗಳೂರು-ಕಲ್ಬುರ್ಗಿ ನಡುವೆ ಸ್ಟಾರ್ ಏರ್ ವಿಮಾನ ಸೇವೆ ಪುನಾರಂಭ

ಬಸ್ ಇದ್ದರೂ ನಿಲ್ಲಲ್ಲ! ಶಾಲಾ ಮಕ್ಕಳು, ಗ್ರಾಮಸ್ಥರ ಪರದಾಟ: ಸಾಗರದ ಉಳ್ಳೂರಲ್ಲಿ KSRTC ಬಸ್ ನಿಲ್ಲಿಸಲು ಒತ್ತಾಯ

ಉದ್ಯೋಗವಾರ್ತೆ : ‘ಶಿಕ್ಷಕ ಹುದ್ದೆ’ ಆಕಾಂಕ್ಷಿಗಳಿಗೆ ಗುಡ್ ನ್ಯೂಸ್ : 15,000 ಶಿಕ್ಷಕರ ನೇಮಕಾತಿಗೆ ರಾಜ್ಯ ಸರ್ಕಾರ ಅನುಮೋದನೆ

State News
KARNATAKA

ಚುನಾವಣಾ ಆಯೋಗ, ಬಿಜೆಪಿ ನಡುವಿನ ಒಳಸಂಚಿನಿಂದ ಮೀನಾಕ್ಷಿ ನಟರಾಜನ್ ನಾಮಪತ್ರ ತಿರಸ್ಕಾರ: MLC ರಮೇಶ್ ಬಾಬು ಗಂಭೀರ ಆರೋಪ

By ವಸಂತ ಬಿ ಈಶ್ವರಗೆರೆ KARNATAKA 1 Min Read

ಬೆಂಗಳೂರು: ಚುನಾವಣೆಗಳಲ್ಲಿ ರಾಜಕೀಯ ಸ್ಪರ್ಧೆಯನ್ನು ಹತ್ತಿಕ್ಕಲು ಹಾಗೂ ಪ್ರಜಾಪ್ರಭುತ್ವದ ತತ್ವಗಳನ್ನು ಗಾಳಿಗೆ ತೂರಲು ಭಾರತೀಯ ಚುನಾವಣಾ ಆಯೋಗ (ECI) ಮತ್ತು…

ಕಲಬುರ್ಗಿ ಜನತೆಗೆ ಗುಡ್ ನ್ಯೂಸ್ : ಇಂದಿನಿಂದ ಬೆಂಗಳೂರು-ಕಲ್ಬುರ್ಗಿ ನಡುವೆ ಸ್ಟಾರ್ ಏರ್ ವಿಮಾನ ಸೇವೆ ಪುನಾರಂಭ

ಬಸ್ ಇದ್ದರೂ ನಿಲ್ಲಲ್ಲ! ಶಾಲಾ ಮಕ್ಕಳು, ಗ್ರಾಮಸ್ಥರ ಪರದಾಟ: ಸಾಗರದ ಉಳ್ಳೂರಲ್ಲಿ KSRTC ಬಸ್ ನಿಲ್ಲಿಸಲು ಒತ್ತಾಯ

ಉದ್ಯೋಗವಾರ್ತೆ : ‘ಶಿಕ್ಷಕ ಹುದ್ದೆ’ ಆಕಾಂಕ್ಷಿಗಳಿಗೆ ಗುಡ್ ನ್ಯೂಸ್ : 15,000 ಶಿಕ್ಷಕರ ನೇಮಕಾತಿಗೆ ರಾಜ್ಯ ಸರ್ಕಾರ ಅನುಮೋದನೆ

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.