Author: ವಸಂತ ಬಿ ಈಶ್ವರಗೆರೆ

ವಸಂತ ಬಿ ಈಶ್ವರಗೆರೆ (Vasantha B Eshwaragere) ಅವರು ಕರ್ನಾಟಕದ ಪತ್ರಕರ್ತರು ಮತ್ತು ಕವಿ. ಉದಯ ನ್ಯೂಸ್, ಟಿವಿ5 ಕನ್ನಡ ಸೇರಿದಂತೆ ವಿವಿಧ ಸುದ್ದಿ ಮಾಧ್ಯಮಗಳಲ್ಲಿ ಸುಮಾರು 15 ವರ್ಷಗಳ ಅನುಭವವನ್ನು ಹೊಂದಿದ್ದಾರೆ. ಪ್ರಸ್ತುತ ಅವರು Kannada News Now ಡಿಜಿಡಿಲ್‌ ಮಾಧ್ಯಮದಲ್ಲಿ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ತಾಜಾ ಸುದ್ದಿ, ಸಾಹಿತ್ಯ, ಸಾಮಾಜಿಕ ವರದಿಗಾರಿಕೆ, ನ್ಯಾಯಾಂಗ ಸಂಬಂಧಿತ ವರದಿ ಮತ್ತು ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದ ಸುದ್ದಿಗಳ ವರದಿಯಲ್ಲಿ ಸಕ್ರಿಯರಾಗಿದ್ದಾರೆ. ಗುಡವಿ ಪಕ್ಷಿಧಾಮದಂತಹ ಪ್ರವಾಸಿ ತಾಣಗಳ ಕುರಿತು ಲೇಖನಗಳನ್ನು ಬರೆದಿದ್ದಾರೆ.

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರು ಈಗ ‘ವಾಟರ್ ಟೆಕ್ ಸಿಟಿ’ಯಾಗಿಯೂ ಜಾಗತಿಕ ಭೂಪಟದಲ್ಲಿ ಗುರುತಿಸಿಕೊಳ್ಳಲು ಸಜ್ಜಾಗಿದೆ. ಜಪಾನ್‌ನ ಜೈಕಾ (JICA) ಸಂಸ್ಥೆಯ ಆರ್ಥಿಕ ನೆರವಿನೊಂದಿಗೆ ಅನುಷ್ಠಾನಗೊಳ್ಳುತ್ತಿರುವ ಕಾವೇರಿ 5ನೇ ಹಂತದ ಯೋಜನೆಯ ಭಾಗವಾಗಿ, ಏಷ್ಯಾದಲ್ಲೇ ಅತಿದೊಡ್ಡದಾದ ಅತ್ಯಾಧುನಿಕ ‘ಸಮಗ್ರ ಜಲ ಮತ್ತು ಒಳಚರಂಡಿ ನಿರ್ವಹಣಾ ಕೇಂದ್ರ’ (SCADA) ಉದ್ಘಾಟನೆಗೆ ಸಿದ್ಧವಾಗಿದೆ. ಇತ್ತೀಚೆಗಷ್ಟೇ ಜಲಮಂಡಳಿ ಅಧ್ಯಕ್ಷರಾದ ಡಾ. ರಾಮ್ ಪ್ರಸಾತ್ ಮನೋಹರ್ ಅವರು ಜಯನಗರದ ಶಿಂಶಾ ಭವನದಲ್ಲಿರುವ ಈ ಬೃಹತ್ ಕೇಂದ್ರಕ್ಕೆ ಭೇಟಿ ನೀಡಿ ಪ್ರಗತಿ ಪರಿಶೀಲನೆ ನಡೆಸಿದ್ದಾರೆ. ಶೀಘ್ರದಲ್ಲೇ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಈ ತಾಂತ್ರಿಕ ವಿಸ್ಮಯವನ್ನು ಜನಾರ್ಪಣೆ ಮಾಡಲಿದ್ದಾರೆ. ಏನಿದು ಸ್ಕಾಡಾ (SCADA) ಕಮಾಂಡ್ ಸೆಂಟರ್? ಇದು ಕೇವಲ ಒಂದು ಕಚೇರಿಯಲ್ಲ; ಇಡೀ ಬೆಂಗಳೂರು ನಗರದ ರಕ್ತನಾಳಗಳಂತಿರುವ ಕುಡಿಯುವ ನೀರಿನ ಪೈಪ್‌ಲೈನ್‌ಗಳು ಮತ್ತು ಒಳಚರಂಡಿ ಜಾಲವನ್ನು ನಿಯಂತ್ರಿಸುವ ‘ಮೆದುಳು’. ಒಂದೇ ಸೂರಿನಡಿ ಇಡೀ ನಗರದ ಜಲಮೂಲಗಳನ್ನು ನೈಜ ಸಮಯದಲ್ಲಿ (Real-time) ಕಣ್ಗಾವಲಿಡುವ ಏಷ್ಯಾದ ಅತಿದೊಡ್ಡ ಕೇಂದ್ರ ಇದಾಗಿದೆ. ಈ…

Read More

ಬೆಂಗಳೂರು: ಸಿಲಿಕಾನ್ ಸಿಟಿಯ ರಸ್ತೆಗಳಲ್ಲಿ ಸಂಚಾರಿ ನಿಯಮಗಳನ್ನು ಗಾಳಿಗೆ ತೂರಿ, ಪ್ರಾಣಕ್ಕೆ ಸಂಚಕಾರ ತರುವಂತೆ ಸವಾರಿ ಮಾಡುವುದು ಇತ್ತೀಚಿನ ದಿನಗಳಲ್ಲಿ ಮಾಮೂಲಿಯಾಗಿದೆ. ಇದಕ್ಕೆ ಪುಷ್ಠಿ ನೀಡುವಂತೆ, ಒಂದೇ ಸ್ಕೂಟರ್‌ನಲ್ಲಿ ಆರು ಮಂದಿ ಅಪ್ರಾಪ್ತ ಬಾಲಕರು ಅಪಾಯಕಾರಿ ರೀತಿಯಲ್ಲಿ ಪ್ರಯಾಣಿಸುತ್ತಿರುವ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದು, ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಘಟನೆಯ ವಿವರ ಬೆಂಗಳೂರಿನ ಪಾದರಾಯನಪುರ ಮುಖ್ಯ ರಸ್ತೆಯ ಗೌರಿಪಾಳ್ಯ ಬಳಿ ಇರುವ ಆಟೋ ಗ್ಯಾಸ್ ಎದುರು ಈ ಘಟನೆ ನಡೆದಿದೆ. ಏಪ್ರಿಲ್ 26 ರಂದು ಬೆಳಿಗ್ಗೆ ಸುಮಾರು 10:45 ರ ಸಮಯದಲ್ಲಿ, KA05-JZ-9065 ನೋಂದಣಿ ಸಂಖ್ಯೆಯ ಸ್ಕೂಟರ್‌ನಲ್ಲಿ ಆರು ಮಂದಿ ಬಾಲಕರು ಒಟ್ಟಾಗಿ ಸವಾರಿ ಮಾಡುತ್ತಿದ್ದರು. ಇದನ್ನು ಗಮನಿಸಿದ ಸಾರ್ವಜನಿಕರೊಬ್ಬರು ಫೋಟೋ ಕ್ಲಿಕ್ಕಿಸಿ ಎಕ್ಸ್ (X) ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ನಿಯಮಗಳ ಉಲ್ಲಂಘನೆ ವೈರಲ್ ಆಗಿರುವ ಫೋಟೋದಲ್ಲಿ ಕಂಡುಬರುವ ಪ್ರಮುಖ ಅಂಶಗಳೆಂದರೆ: ಅತೀ ಹೆಚ್ಚು ಸವಾರರು: ಕೇವಲ ಇಬ್ಬರು ಸವಾರಿ ಮಾಡಬೇಕಾದ ಸ್ಕೂಟರ್‌ನಲ್ಲಿ ಆರು ಮಂದಿ ಕುಳಿತಿದ್ದರು. ಹೆಲ್ಮೆಟ್…

Read More

ಬೆಂಗಳೂರು: ನಮ್ಮ ಮೆಟ್ರೋ ರೈಲಿನಲ್ಲಿ ಪ್ರಯಾಣಿಸುವ ಮಹಿಳೆಯರ ವಿಡಿಯೋಗಳನ್ನು ಗುಟ್ಟಾಗಿ ಚಿತ್ರೀಕರಿಸಿ, ಆಕ್ಷೇಪಾರ್ಹ ರೀತಿಯಲ್ಲಿ ‘Bangalore Metro Chicks’ ಎಂಬ ಇನ್‌ಸ್ಟಾಗ್ರಾಮ್ ಪುಟದಲ್ಲಿ ಹಂಚಿಕೊಳ್ಳುತ್ತಿದ್ದ ಪ್ರಕರಣದ ಆರೋಪಿಗೆ ಕರ್ನಾಟಕ ಹೈಕೋರ್ಟ್ ಭಾರಿ ಹಿನ್ನಡೆ ನೀಡಿದೆ. ತನ್ನ ವಿರುದ್ಧದ ಎಫ್‌ಐಆರ್ (FIR) ರದ್ದುಗೊಳಿಸುವಂತೆ ಆರೋಪಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯವು ವಜಾಗೊಳಿಸಿದೆ. ನ್ಯಾಯಾಲಯದ ಕಟುವಾದ ಟೀಕೆ: ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠವು ಆರೋಪಿಯ ನಡೆಯನ್ನು ತೀವ್ರವಾಗಿ ಖಂಡಿಸಿತು. “ಮಹಿಳೆಯರು ಸಾರ್ವಜನಿಕ ಸಾರಿಗೆಯಲ್ಲೂ ಸುರಕ್ಷಿತವಾಗಿರಲು ಬಿಡುತ್ತಿಲ್ಲ. ನೀವು ಮಹಿಳೆಯರಿಗೆ ಎಲ್ಲಿಯೂ ಸುರಕ್ಷಿತವಾದ ಜಾಗವನ್ನೇ ಉಳಿಸುತ್ತಿಲ್ಲ” ಎಂದು ನ್ಯಾಯಾಧೀಶರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಪ್ರಕರಣದ ಹಿನ್ನೆಲೆ: ಘಟನೆ: ‘Bangalore Metro Chicks’ ಎಂಬ ಹೆಸರಿನ ಇನ್‌ಸ್ಟಾಗ್ರಾಮ್ ಖಾತೆಯು ಬೆಂಗಳೂರು ಮೆಟ್ರೋದಲ್ಲಿ ಪ್ರಯಾಣಿಸುವ ಮಹಿಳೆಯರ ಮುಖ ಕಾಣುವಂತೆ ಅವರ ಅನುಮತಿಯಿಲ್ಲದೆ ವಿಡಿಯೋಗಳನ್ನು ರೆಕಾರ್ಡ್ ಮಾಡುತ್ತಿತ್ತು. ಈ ವಿಡಿಯೋಗಳನ್ನು “ಚೆಲುವೆಯರು” ಎಂಬಂತಹ ಪದಗಳನ್ನು ಬಳಸಿ ಆಕ್ಷೇಪಾರ್ಹವಾಗಿ ಅಪ್‌ಲೋಡ್ ಮಾಡಲಾಗುತ್ತಿತ್ತು. ದೂರು: ಈ ವಿಷಯ…

Read More

ಚೆನ್ನೈ: ತಮಿಳುನಾಡು ವಿಧಾನಸಭೆ ಚುನಾವಣೆ 2026ರ ಹಿನ್ನೆಲೆಯಲ್ಲಿ, ‘ತಮಿಳಗ ವೆಟ್ರಿ ಕಳಗಂ’ (TVK) ಪಕ್ಷದ ಸಂಸ್ಥಾಪಕ ಹಾಗೂ ನಟ ವಿಜಯ್ ಅವರ ವಿರುದ್ಧ ಸಲ್ಲಿಕೆಯಾಗಿದ್ದ ಹೊಸ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮದ್ರಾಸ್ ಹೈಕೋರ್ಟ್ ಸೋಮವಾರ ವಜಾಗೊಳಿಸಿದೆ. ಏನಿದು ಪ್ರಕರಣ? ಚೆನ್ನೈ ನಿವಾಸಿ ಎಂ.ಪಿ. ವೆಂಕಟೇಶ್ ಎಂಬುವವರು ಈ ಅರ್ಜಿ ಸಲ್ಲಿಸಿದ್ದರು. ವಿಜಯ್ ಅವರು ಪೆರಂಬೂರ್ ಕ್ಷೇತ್ರದಿಂದ ಸ್ಪರ್ಧಿಸಲು ಸಲ್ಲಿಸಿರುವ ನಾಮಪತ್ರದ (Form 26) ಅಫಿಡವಿಟ್‌ನಲ್ಲಿ ತಮ್ಮ ನೈಜ ಆರ್ಥಿಕ ವಿವರಗಳನ್ನು ಮರೆಮಾಚಿದ್ದಾರೆ ಮತ್ತು ತಪ್ಪು ಮಾಹಿತಿಯನ್ನು ನೀಡಿದ್ದಾರೆ ಎಂದು ಅರ್ಜಿದಾರರು ಆರೋಪಿಸಿದ್ದರು. ಅರ್ಜಿದಾರರ ಪ್ರಮುಖ ಆರೋಪಗಳು: ವಿಜಯ್ ಅವರು ತಮ್ಮ ಕುಟುಂಬ ಸದಸ್ಯರಿಗೆ ಮತ್ತು ಕೆಲವು ಸಂಸ್ಥೆಗಳಿಗೆ ಕೋಟ್ಯಂತರ ರೂಪಾಯಿ ಸಾಲ ನೀಡಿದ್ದಾರೆ ಎಂದು ಅಫಿಡವಿಟ್‌ನಲ್ಲಿ ತೋರಿಸಿದ್ದಾರೆ, ಆದರೆ ಅದೇ ಸಮಯದಲ್ಲಿ ತಮ್ಮ ಮೇಲೆ ಯಾವುದೇ ಹೊಣೆಗಾರಿಕೆ (Liabilities) ಇಲ್ಲ ಎಂದು ಘೋಷಿಸಿಕೊಂಡಿದ್ದಾರೆ. ಇದು ಪರಸ್ಪರ ವಿರೋಧಾಭಾಸವಾಗಿದೆ. ತಮ್ಮ ಪತ್ನಿಗೆ ನೀಡಲಾದ 12 ಕೋಟಿ ರೂಪಾಯಿ ಸಾಲ ಮತ್ತು ಒಂದು ಟ್ರಸ್ಟ್‌ಗೆ…

Read More

ನವದೆಹಲಿ: ಕೇಂದ್ರೀಯ ಪ್ರೌಢಶಿಕ್ಷಣ ಮಂಡಳಿಯು (CBSE) 2026ರ 12ನೇ ತರಗತಿಯ ಫಲಿತಾಂಶವನ್ನು ಶೀಘ್ರದಲ್ಲೇ ಅಧಿಕೃತವಾಗಿ ಪ್ರಕಟಿಸಲಿದೆ. ಈ ವರ್ಷ ಸುಮಾರು 18 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ತಮ್ಮ ಫಲಿತಾಂಶಕ್ಕಾಗಿ ಕಾತರದಿಂದ ಕಾಯುತ್ತಿದ್ದಾರೆ. ವರದಿಗಳ ಪ್ರಕಾರ, ಏಪ್ರಿಲ್ ಅಂತ್ಯದೊಳಗೆ ಅಥವಾ ಮೇ ಮೊದಲ ವಾರದಲ್ಲಿ ಫಲಿತಾಂಶ ಹೊರಬೀಳುವ ಸಾಧ್ಯತೆಯಿದೆ. ಫಲಿತಾಂಶ ವೀಕ್ಷಿಸಲು ಲಭ್ಯವಿರುವ ವೆಬ್‌ಸೈಟ್‌ಗಳು: ವಿದ್ಯಾರ್ಥಿಗಳು ಈ ಕೆಳಗಿನ ಅಧಿಕೃತ ಪೋರ್ಟಲ್‌ಗಳ ಮೂಲಕ ತಮ್ಮ ಅಂಕಪಟ್ಟಿಯನ್ನು ವೀಕ್ಷಿಸಬಹುದು: cbse.gov.in results.cbse.nic.in cbseresults.nic.in ವೆಬ್‌ಸೈಟ್ ಮಾತ್ರವಲ್ಲದೆ, ತಾಂತ್ರಿಕ ತೊಂದರೆಗಳನ್ನು ತಪ್ಪಿಸಲು DigiLocker ಮತ್ತು UMANG ಆಪ್‌ಗಳ ಮೂಲಕವೂ ಫಲಿತಾಂಶ ಪಡೆಯಲು ಮಂಡಳಿಯು ವ್ಯವಸ್ಥೆ ಮಾಡಿದೆ. ಫಲಿತಾಂಶ ವೀಕ್ಷಿಸುವುದು ಹೇಗೆ? (ಹಂತ-ಹಂತದ ಮಾಹಿತಿ) ನಿಮ್ಮ ಫಲಿತಾಂಶವನ್ನು ಸುಲಭವಾಗಿ ಪರಿಶೀಲಿಸಲು ಈ ಕೆಳಗಿನ ಹಂತಗಳನ್ನು ಅನುಸರಿಸಿ: ಹಂತ 1: ಮೊದಲಿಗೆ CBSE ಅಧಿಕೃತ ವೆಬ್‌ಸೈಟ್ cbseresults.nic.in ಗೆ ಭೇಟಿ ನೀಡಿ. ಹಂತ 2: ಮುಖಪುಟದಲ್ಲಿ ಕಾಣಿಸುವ ‘CBSE Class 12 Result 2026’ ಲಿಂಕ್…

Read More

ಶಿವಮೊಗ್ಗ: ಜಿಲ್ಲೆಯ ಸೊರಬ ತಾಲ್ಲೂಕಿನ ಉಳವಿಯಲ್ಲಿ ಕಳೆದ ರಾತ್ರಿ ಸುರಿದಂತ ಭಾರೀ ಮಳೆಯಿಂದಾಗಿ ತೀವ್ರ ತರಹದ ಹಾನಿ ಉಂಟಾಗಿದೆ. ಉಳವಿಯ ಜನತಾ ಕಾಲೋನಿಯಲ್ಲಿ ಅತೀ ಹೆಚ್ಚು ಮನೆಗಳು ಹಾನಿಗೊಂಡಿವೆ. ಸುಮಾರು 20ಕ್ಕೂ ಹೆಚ್ಚು ಮನೆಗಳು ಹಾನಿಗೊಂಡಿದ್ದರೇ, ಹಲವೆಡೆ ವಿದ್ಯುಕ್ ಕಂಬಗಳು ಮುರಿದು ಬಿದ್ದ, ರಾತ್ರಿಯಿಂದಲೂ ಪವರ್ ಕಟ್ ಆಗಿದೆ. ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ಉಳಿವಿಯ ದೂಗೂರು ಗ್ರಾಮ ಪಂಚಾಯ್ತಿಯಲ್ಲಿ  ವ್ಯಾಪ್ತಿಯ ಜನತಾ ಕಾಲೋನಿಯಲ್ಲಿ ಮಮತಾ ಎಂಬುವರಿಗೆ ಸೇರಿದಂತಂ ಕೊಟ್ಟಿಗೆ ಮನೆಯ ಸೀಟುಗಳು ಹಾರಿ ಬಂದು ರಸ್ತೆಗೆ ಬಿದ್ದಿದ್ದರೇ, ಕರಿಯಪ್ಪ ಎಂಬುವರಿಗೆ ಸೇರಿದಂತ ಮನೆಯ ಎಂಚುಗಳೇ ಹಾರಿ ಹೋಗಿ ಹಾನಿಯಾಗಿದೆ. ನಿನ್ನೆ ಸುರಿದಂತ ಬಿರುಗಾಳಿ ಸಹಿತ ಮಳೆಯಿಂದಾಗಿ ಯಾರೆಲ್ಲ ಮನೆ, ಗೋಡೌನ್ ಹಾನಿ? ಇಲ್ಲಿದೆ ಪಟ್ಟಿ ವಿನೋದ ಕೋಂ ವೆಂಕಟೇಶ್ ನಿಸಾರ್ ಅಹ್ಮದ್ ಬಿನ್ ಗೌಸಾಬ್ ಎಂಬುವರ ಶುಂಠಿ ಗೋಡೌನ್ ಹಾನಿ ಜಿಯಾವುಲ್ಲಾ ಬಿನ್ ಹುಸೇನ್ ಸಾಬ್ ಎಂಬುವರ ಶುಂಠಿ ಫಾರ್ಮ್ ಹೌಸ್ ಸಂಪೂರ್ಣ ನಾಶ ರಹ್ಮತ್ ಉನ್ನೀಸ್ ಕೋಂ ಅಕ್ಬರ್…

Read More

ಶಿವಮೊಗ್ಗ: ಪುಸ್ತಕಗಳು ಕೇವಲ ದಾಖಲೆಗಳಾಗಿ ಉಳಿಯದೆ, ಜೀವನ ಸಂಸ್ಕೃತಿಯ ಪ್ರತೀಕವಾಗಿವೆ. ಪುಸ್ತಕ ಓದುವ ಹವ್ಯಾಸವು ಮನುಷ್ಯನ ಜೀವನದ ದೃಷ್ಟಿಕೋನವನ್ನೇ ಬದಲಿಸುವ ಶಕ್ತಿ ಹೊಂದಿದೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಅಭಿಪ್ರಾಯಪಟ್ಟರು. ​ಸಾಗರದ ಹುಲಿದೇವರಬನದ ‘ಭುವಿ’ ನಿವಾಸದಲ್ಲಿ ಆಯೋಜಿಸಲಾಗಿದ್ದ ಗೃಹಪ್ರವೇಶ ಕಾರ್ಯಕ್ರಮದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು. ಲೇಖಕ ವಿ.ಟಿ. ಸ್ವಾಮಿ ಅವರು ರಚಿಸಿದ ‘ರಾಜಣ್ಣ’ (ಕೆ.ಹೆಚ್. ರಾಜಪ್ಪಗೌಡರ ಹೆಜ್ಜೆ ಮೂಡಿಸಿದ ಹಾದಿ) ಎಂಬ ಕೃತಿಯನ್ನು ಬಿಡುಗಡೆಗೊಳಿಸಿ, ಲೇಖಕರನ್ನು ಸನ್ಮಾನಿಸಿ ಅವರು ಮಾತನಾಡಿದರು. ​ಹಿರಿಯರ ಜೀವನಾದರ್ಶ ಯುವಪೀಳಿಗೆಗೆ ಅಗತ್ಯ ​”ಜೀವನದ ಅನೇಕ ನೋವುಗಳನ್ನು ಮೆಟ್ಟಿ ನಿಂತು ಸಾಧನೆ ಮಾಡಿದ ರಾಜಪ್ಪ ಗೌಡರ ಜೀವನದ ವಿಚಾರಧಾರೆಗಳನ್ನು ಪುಸ್ತಕ ರೂಪದಲ್ಲಿ ಹೊರತಂದಿರುವುದು ಶ್ಲಾಘನೀಯ. ಇಂದಿನ ಯುವ ಪೀಳಿಗೆಗೆ ಹಿರಿಯರ ಜೀವನಾದರ್ಶಗಳ ಅಗತ್ಯವಿದ್ದು, ಇಂತಹ ಕೃತಿಗಳು ಸಮಾಜಕ್ಕೆ ಮಾರ್ಗದರ್ಶನ ನೀಡುತ್ತವೆ. ಮನೆ ಕಟ್ಟುವ ಜೊತೆಗೆ ಮನಸ್ಸನ್ನು ಕಟ್ಟುವ ಇಂತಹ ಸಾಂಸ್ಕೃತಿಕ ಕಾರ್ಯಕ್ರಮಗಳು ಎಲ್ಲರಿಗೂ ಮಾದರಿ,” ಎಂದು ಬೇಳೂರು ತಿಳಿಸಿದರು. ​ಓದುವ ಸಂಸ್ಕೃತಿ ಬೆಳೆಯಲಿ:…

Read More

ನವದೆಹಲಿ: ಐಪಿಎಲ್ 2026ರ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಪಂಜಾಬ್ ಕಿಂಗ್ಸ್ ನಡುವಿನ ಶನಿವಾರದ ಪಂದ್ಯದಲ್ಲಿ ಭೀಕರ ಅಪಘಾತವೊಂದು ಸಂಭವಿಸಿದೆ. ಕ್ಯಾಚ್ ಹಿಡಿಯಲು ಪ್ರಯತ್ನಿಸುವಾಗ ತಲೆಗೆ ಬಲವಾದ ಪೆಟ್ಟು ಬಿದ್ದ ಕಾರಣ ಡೆಲ್ಲಿ ಕ್ಯಾಪಿಟಲ್ಸ್ ತಂಡದ ವೇಗಿ, ದಕ್ಷಿಣ ಆಫ್ರಿಕಾದ ಲುಂಗಿ ಎನ್ಗಿಡಿ ಅವರನ್ನು ಮೈದಾನದಿಂದಲೇ ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಘಟನೆಯ ವಿವರ: ಪಂದ್ಯದ ವೇಳೆ ಪಂಜಾಬ್ ಕಿಂಗ್ಸ್ ಬ್ಯಾಟರ್ ನೀಡಿದ ಕ್ಯಾಚ್ ಹಿಡಿಯಲು ಎನ್ಗಿಡಿ ಅವರು ಹಿಂದಕ್ಕೆ ಓಡುತ್ತಿದ್ದರು (Back-pedalling). ಈ ವೇಳೆ ಕ್ಯಾಚ್ ಜಡ್ಜ್ ಮಾಡುವಲ್ಲಿ ವಿಫಲರಾದ ಅವರು, ನಿಯಂತ್ರಣ ತಪ್ಪಿ ಹಿಂದಕ್ಕೆ ಬಿದ್ದರು. ಈ ರಭಸಕ್ಕೆ ಅವರ ತಲೆ ಮೈದಾನದ ನೆಲಕ್ಕೆ (Turf) ಬಲವಾಗಿ ಅಪ್ಪಳಿಸಿತು. ತಕ್ಷಣವೇ ಮೈದಾನದಲ್ಲಿ ಕುಸಿದು ಬಿದ್ದ ಅವರ ಸ್ಥಿತಿ ಕಂಡು ಆಟಗಾರರು ಮತ್ತು ಅಭಿಮಾನಿಗಳು ಆತಂಕಕ್ಕೊಳಗಾದರು. 15 ನಿಮಿಷ ಪಂದ್ಯ ಸ್ಥಗಿತ: ಘಟನೆಯ ಗಂಭೀರತೆಯನ್ನು ಅರಿತ ವೈದ್ಯಕೀಯ ತಂಡ ತಕ್ಷಣವೇ ಮೈದಾನಕ್ಕೆ ಧಾವಿಸಿತು. ಪರಿಸ್ಥಿತಿ ತುರ್ತಾಗಿದ್ದರಿಂದ ಮೈದಾನಕ್ಕೇ ಆಂಬ್ಯುಲೆನ್ಸ್ ಅನ್ನು ಕರೆಸಲಾಯಿತು.…

Read More

ಬೆಂಗಳೂರು: ರಾಜ್ಯದಾದ್ಯಂತ, ವಿಶೇಷವಾಗಿ ಉತ್ತರ ಕರ್ನಾಟಕ ಭಾಗದಲ್ಲಿ ತಾಪಮಾನವು ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ, ಸಾರ್ವಜನಿಕರ ಆರೋಗ್ಯ ಮತ್ತು ಹಿತದೃಷ್ಟಿಯಿಂದ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದ್ದಾರೆ. ಜಿಲ್ಲಾ ಪಂಚಾಯತ್ ಸಿಇಒಗಳು, ತಾಲ್ಲೂಕು ಮತ್ತು ಗ್ರಾಮ ಪಂಚಾಯತಿ ಅಧಿಕಾರಿಗಳಿಗೆ ಈ ಕುರಿತು ಸೂಚನೆ ನೀಡಿರುವ ಅವರು, ತಾಪಮಾನದ ಪ್ರತಿಕೂಲ ಪರಿಣಾಮಗಳನ್ನು ತಗ್ಗಿಸಲು ಸ್ಥಳೀಯ ಆಡಳಿತಗಳು ಸನ್ನದ್ಧವಾಗಬೇಕು ಎಂದು ತಿಳಿಸಿದ್ದಾರೆ. ಕುಡಿಯುವ ನೀರು ಮತ್ತು ಸೌಲಭ್ಯಗಳಿಗೆ ಆದ್ಯತೆ ಸಚಿವರ ಸೂಚನೆಯಂತೆ ಗ್ರಾಮ ಪಂಚಾಯತಿಗಳು ಈ ಕೆಳಗಿನ ಕ್ರಮಗಳನ್ನು ಖಾತ್ರಿಪಡಿಸಿಕೊಳ್ಳಬೇಕಿದೆ: ಶುದ್ಧ ಕುಡಿಯುವ ನೀರು: ಗ್ರಾಮಗಳ ಎಲ್ಲಾ ನಿವಾಸಿಗಳಿಗೆ ತಡೆರಹಿತವಾಗಿ ಮತ್ತು ಸಾಕಷ್ಟು ಪ್ರಮಾಣದಲ್ಲಿ ಶುದ್ಧ ಕುಡಿಯುವ ನೀರು ಪೂರೈಕೆಯಾಗಬೇಕು. ಸಾರ್ವಜನಿಕ ಸ್ಥಳಗಳಲ್ಲಿ ವ್ಯವಸ್ಥೆ: ಪಂಚಾಯತ್ ಕಚೇರಿಗಳು, ತಾಲ್ಲೂಕು ಕಚೇರಿಗಳು ಮತ್ತು ಗ್ರಾಮ ಪಂಚಾಯತಿ ಅರಿವು ಕೇಂದ್ರಗಳಿಗೆ (ಗ್ರಂಥಾಲಯ) ಭೇಟಿ ನೀಡುವ ಜನರಿಗೆ ಕುಡಿಯುವ ನೀರು ಹಾಗೂ ನೆರಳಿನಲ್ಲಿ ಆಸನದ ವ್ಯವಸ್ಥೆ ಮಾಡಬೇಕು.…

Read More

ಇಂದಿನ ಡಿಜಿಟಲ್ ಯುಗದಲ್ಲಿ ಮಕ್ಕಳು ಮೊಬೈಲ್ ಅಥವಾ ಟ್ಯಾಬ್ಲೆಟ್‌ಗಳ ದಾಸರಾಗುತ್ತಿರುವುದು ಸಾಮಾನ್ಯವಾಗಿದೆ. ಆದರೆ, ಆಟಿಸಂ ಸ್ಪೆಕ್ಟ್ರಮ್ ಡಿಸಾರ್ಡರ್ (ASD) ಅಥವಾ ಆಟಿಸಂ ಪೀಡಿತ ಮಕ್ಕಳ ವಿಷಯಕ್ಕೆ ಬಂದರೆ, ಈ ‘ಸ್ಕ್ರೀನ್ ಟೈಮ್’ ಕೇವಲ ಹವ್ಯಾಸವಾಗಿ ಉಳಿಯದೆ ಅವರ ಬೆಳವಣಿಗೆಯ ಮೇಲೆ ಗಂಭೀರ ಪ್ರಭಾವ ಬೀರುತ್ತಿದೆ ಎಂದು ತಜ್ಞ ವೈದ್ಯರು ಎಚ್ಚರಿಸಿದ್ದಾರೆ. 1. ನಿದ್ರೆಯ ಮೇಲೆ ಭೀಕರ ಪರಿಣಾಮ ಆಟಿಸ್ಟಿಕ್ ಮಕ್ಕಳಲ್ಲಿ ಈಗಾಗಲೇ ನಿದ್ರೆಯ ಸಮಸ್ಯೆಗಳು ಸಾಮಾನ್ಯವಾಗಿರುತ್ತವೆ. ಸ್ಕ್ರೀನ್‌ನಿಂದ ಹೊರಬರುವ ‘ನೀಲಿ ಬೆಳಕು’ (Blue Light) ಮೆಲಟೋನಿನ್ ಎಂಬ ನಿದ್ರೆಯ ಹಾರ್ಮೋನ್ ಉತ್ಪಾದನೆಯನ್ನು ಕುಂಠಿತಗೊಳಿಸುತ್ತದೆ. ಇದರಿಂದ ಮಕ್ಕಳು ತಡರಾತ್ರಿಯವರೆಗೂ ಎಚ್ಚರವಿದ್ದು, ಅವರ ನಿದ್ರೆಯ ಚಕ್ರ ಸಂಪೂರ್ಣವಾಗಿ ಅಸ್ತವ್ಯಸ್ತಗೊಳ್ಳುತ್ತದೆ. ಸರಿಯಾದ ನಿದ್ರೆ ಇಲ್ಲದಿರುವುದು ಅವರಲ್ಲಿ ಹಗಲಿನಲ್ಲಿ ಅತಿಯಾದ ಸುಸ್ತು ಮತ್ತು ಕಿರಿಕಿರಿಗೆ ಕಾರಣವಾಗುತ್ತದೆ. 2. ನಡವಳಿಕೆಯಲ್ಲಿನ ಏರುಪೇರು (Behavioral Changes) ಅತಿಯಾದ ಸ್ಕ್ರೀನ್ ಬಳಕೆ ಆಟಿಸ್ಟಿಕ್ ಮಕ್ಕಳಲ್ಲಿ ಹಠಮಾರಿತನ ಮತ್ತು ಆಕ್ರಮಣಕಾರಿ ಗುಣವನ್ನು ಹೆಚ್ಚಿಸಬಹುದು. ಡಿಜಿಟಲ್ ಪರದೆಯ ಮೇಲಿನ ಅತಿವೇಗದ ದೃಶ್ಯಗಳು ಅವರ ಮೆದುಳನ್ನು…

Read More