Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಸಾಗರದ ಹಲಸು, ಮಾವು ಮೇಳಕ್ಕೆ ಪ್ರಹ್ಲಾದ್ ಜೋಷಿ ಭೇಟಿ: ಹಣ್ಣಿನ ರುಚಿ ಸವಿದ ಕೇಂದ್ರ ಸಚಿವರು, ನಾಳೆ ಕೊನೆ ದಿನ

​ಯು18 ಏಷ್ಯಾ ಕಪ್ 2026: ಭಾರತೀಯ ಹಾಕಿ ತಂಡಗಳ ಸಾಧನೆಗೆ ಪ್ರಧಾನಿ ಮೋದಿ ಅಭಿನಂದನೆ

​ಫ್ರೆಂಚ್ ಓಪನ್ ಚಾಂಪಿಯನ್: ಮಾಯಾ ಚ್ವಾಲಿನ್ಸ್ಕ ವಿರುದ್ಧ ಭರ್ಜರಿ ಜಯ ಸಾಧಿಸಿ ಪ್ರಶಸ್ತಿ ಮುಡಿಗೇರಿಸಿಕೊಂಡ ಮಿರಾ ಆಂಡ್ರೀವಾ

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಶಿವಮೊಗ್ಗ: ಸೊರಬದ ಉಳವಿಯಲ್ಲಿ ಬಿರುಗಾಳಿ ಸಹಿತ ಮಳೆಗೆ 20ಕ್ಕೂ ಹೆಚ್ಚು ಮನೆಗಳಿಗೆ ಹಾನಿ, ಮುರಿದು ಬಿದ್ದ ವಿದ್ಯುತ್ ಕಂಬಗಳು
KARNATAKA

ಶಿವಮೊಗ್ಗ: ಸೊರಬದ ಉಳವಿಯಲ್ಲಿ ಬಿರುಗಾಳಿ ಸಹಿತ ಮಳೆಗೆ 20ಕ್ಕೂ ಹೆಚ್ಚು ಮನೆಗಳಿಗೆ ಹಾನಿ, ಮುರಿದು ಬಿದ್ದ ವಿದ್ಯುತ್ ಕಂಬಗಳು

By ವಸಂತ ಬಿ ಈಶ್ವರಗೆರೆ

ಶಿವಮೊಗ್ಗ: ಜಿಲ್ಲೆಯ ಸೊರಬ ತಾಲ್ಲೂಕಿನ ಉಳವಿಯಲ್ಲಿ ಕಳೆದ ರಾತ್ರಿ ಸುರಿದಂತ ಭಾರೀ ಮಳೆಯಿಂದಾಗಿ ತೀವ್ರ ತರಹದ ಹಾನಿ ಉಂಟಾಗಿದೆ. ಉಳವಿಯ ಜನತಾ ಕಾಲೋನಿಯಲ್ಲಿ ಅತೀ ಹೆಚ್ಚು ಮನೆಗಳು ಹಾನಿಗೊಂಡಿವೆ. ಸುಮಾರು 20ಕ್ಕೂ ಹೆಚ್ಚು ಮನೆಗಳು ಹಾನಿಗೊಂಡಿದ್ದರೇ, ಹಲವೆಡೆ ವಿದ್ಯುಕ್ ಕಂಬಗಳು ಮುರಿದು ಬಿದ್ದ, ರಾತ್ರಿಯಿಂದಲೂ ಪವರ್ ಕಟ್ ಆಗಿದೆ.

ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ಉಳಿವಿಯ ದೂಗೂರು ಗ್ರಾಮ ಪಂಚಾಯ್ತಿಯಲ್ಲಿ  ವ್ಯಾಪ್ತಿಯ ಜನತಾ ಕಾಲೋನಿಯಲ್ಲಿ ಮಮತಾ ಎಂಬುವರಿಗೆ ಸೇರಿದಂತಂ ಕೊಟ್ಟಿಗೆ ಮನೆಯ ಸೀಟುಗಳು ಹಾರಿ ಬಂದು ರಸ್ತೆಗೆ ಬಿದ್ದಿದ್ದರೇ, ಕರಿಯಪ್ಪ ಎಂಬುವರಿಗೆ ಸೇರಿದಂತ ಮನೆಯ ಎಂಚುಗಳೇ ಹಾರಿ ಹೋಗಿ ಹಾನಿಯಾಗಿದೆ.

ನಿನ್ನೆ ಸುರಿದಂತ ಬಿರುಗಾಳಿ ಸಹಿತ ಮಳೆಯಿಂದಾಗಿ ಯಾರೆಲ್ಲ ಮನೆ, ಗೋಡೌನ್ ಹಾನಿ? ಇಲ್ಲಿದೆ ಪಟ್ಟಿ

  • ವಿನೋದ ಕೋಂ ವೆಂಕಟೇಶ್
  • ನಿಸಾರ್ ಅಹ್ಮದ್ ಬಿನ್ ಗೌಸಾಬ್ ಎಂಬುವರ ಶುಂಠಿ ಗೋಡೌನ್ ಹಾನಿ
  • ಜಿಯಾವುಲ್ಲಾ ಬಿನ್ ಹುಸೇನ್ ಸಾಬ್ ಎಂಬುವರ ಶುಂಠಿ ಫಾರ್ಮ್ ಹೌಸ್ ಸಂಪೂರ್ಣ ನಾಶ
  • ರಹ್ಮತ್ ಉನ್ನೀಸ್ ಕೋಂ ಅಕ್ಬರ್
  • ಮಂಜಮ್ಮ ಕೋಂ ಕೆರೆಯಪ್ಪ ಕೈಸೋಡಿ ವಾಸದ ಮನೆ ಮೇಲೆ ತೆಂಗಿನ ಮರ ಬಿದ್ದು ಹಾನಿ
  • ಅಕ್ಬರ್ ಬಿನ್ ಹುಸೇನ್ ಸಾಬ್ ಮನೆ ಹಾನಿ
  • ಸವಿತಾ ಕೋಂ ನಾಗರಾಜ್ ಎಂಬುವರ ವಾಸದ ಮನೆ ಹಾನಿ
  • ಹಷ್ಮತ್ ಬಿನ್ ಮಕ್ಭುಲ್ ಸಾಬ್
  • ಸಾಜಿದಾ ಫರ್ವಿನ್ ವಾಸದ ಮನೆ ಹಾನಿ
  • ದಸ್ತಗಿರ್ ಸಾಬ್ ಬಿನ್ ಮೋದಿನ್ ಸಾಬ್
  • ಫಯಿಮಾ ಕೋ ಮಮದ್ ರಫಿಕ್
  • ಜಿಯಾವುಲ್ಲಾ ಬಿನ್ ಹುಸೇನ್ ಸಾಬ್
  • ಆಸೀಫ್ ಬಿನ್ ಅಕ್ಬರ್ ಎಂಬುವರ ಮನೆ ಎಂಚುಗಳು ಹಾರಿ ಹೋಗಿವೆ
  • ತಂಗಪ್ಪ ಬಿನ್ ಕೃಷ್ಣಪ್ಪ ಮನೆಯ ಎಂಚು
  • ಟಿ ಆರ್ ಸೀತಾರಾಮ್ ಬಿನ್ ರಾಮಚಂದ್ರ
  • ಮಮತಾ ಕಂ ಶಿವಕುಮಾರ್
  • ಜೈಗುನ್ನಿಸಾ ಕಂ ಜಬ್ಬರ್ ಸಾಬ್
  • ತಾರಾ ಕೋಂ ಕೃಷ್ಣ ಮೂರ್ತಿ
  • ಶೇಕ್ ಅಲಿಖಾನ್ ಬಿನ್ ಜಬ್ಬಾರ್
  • ಯಲ್ಲಮ್ಮ ಕೋಂ ರಜನಿ
  • ನಜೀರ್ ಅಹಮದ್ ಬಿನ್ ಅಬ್ದುಲ್ ಇಮಾಮ್ ಸಾಬ್

ಇನ್ನೂ ಉಳವಿಯ ಜನತಾ ಕಾಲೋನಿಯ ಎಣ್ಣೆ ಗಾಣದ ರಸ್ತೆಯಲ್ಲಿ ಮೂರಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಮುರಿದು ಬಿದ್ದಿದ್ದರೇ, ಹೋರಿಹೊಳೆ ಬಸವೇಶ್ವರ ಹೋಟೆಲ್ ಮುಭಾಗದಲ್ಲಿ ಮರ ಬಿದ್ದ ಪರಿಣಾಮ ಮರದ ಕೆಳಗೆ ನಿಲ್ಲಿಸಿದ್ದಂತ ಗುರು ಕಾರು ಅಚ್ಚರಿಯ ರೀತಿಯಲ್ಲಿ ಹಾನಿಯಿಂದ ಪಾರಾಗಿದೆ. ಕೈಸೋಡಿ ರಸ್ತೆಯಲ್ಲಿ ಜಿಯಾವುಲ್ಲಾ ಗೋಡೌನ್ ಬಳಿಯಲ್ಲಿ ಮರ ಮುರಿದು ಬಿದ್ದು ವಿದ್ಯುತ್ ತಂತಿಯ ಮೇಲೆ ಬಿದ್ದ ಪರಿಣಾಮ, ಮೂರು ನಾಲ್ಕು ವಿದ್ಯುತ್ ಕಂಬಗಳು ಹಾನಿಯಾಗಿವೆ.

ಇಂದು ಮುಂಜಾನೆಯಿಂದಲೇ ವಿದ್ಯುತ್ ತಂತಿಯ ಮೇಲೆ ಮುರಿದು ಬಿದ್ದ ಮರಗಳನ್ನು ತೆರವುಗೊಳಿಸಿ, ವಿದ್ಯುತ್ ದುರಸ್ಥಿ ಕಾರ್ಯದಲ್ಲಿ ತೊಡಗಿದ್ದಾರೆ. ಮುರಿದು ಬಿದ್ದಿರುವಂತ ವಿದ್ಯುತ್ ಕಂಬಗಳನ್ನು ದುರಸ್ಥಿ ಮಾಡುವಂತ ಕಾರ್ಯವು ಬಹುತೇಕ ಅಂತಿಮ ಹಂತಕ್ಕೆ ತಲುಪಿದ್ದು 7 ರಿಂದ 8 ಗಂಟೆಯ ಒಳಗೆ ಕರೆಂಟ್ ಬರಲಿದೆ ಎಂಬುದಾಗಿ ಸೊರಬ ಎಇಇ ಸತ್ಯಪ್ರಕಾಶ್ ಕನ್ನಡ ನ್ಯೂಸ್ ನೌಗೆ ಮಾಹಿತಿ ನೀಡಿದ್ದಾರೆ.

ಸಚಿವ ಮಧು ಬಂಗಾರಪ್ಪ ಸೂಚನೆಯ ಮೇರೆಗೆ ಕಾಂಗ್ರೆಸ್ ಮುಖಂಡರ ತಂಡ ಹಾನಿ ಸ್ಥಳಗಳಿಗೆ ಭೇಟಿ

ನಿನ್ನೆ ಸುರಿದಂತ ಬಿರುಗಾಳಿ ಸಹಿತ ಮಳೆಯಿಂದಾಗಿ ಅಪಾರ ಪ್ರಮಾಣದ ಹಾನಿಯಾದಂತ ವಿಚಾರವನ್ನು ತಿಳಿದಂತ ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ್ ಅವರು ಸೊರಬ ಕಾಂಗ್ರೆಸ್ ಮುಖಂಡರಿಗೆ ಸ್ಥಳಕ್ಕೆ ಭೇಟಿ ಪರಿಶೀಲಿಸಿ, ಸಂತ್ರಸ್ತ್ರರಿಗೆ ಸಾಂತ್ವಾನ ಹೇಳುವಂತೆ ಸೂಚಿಸಿದ್ದರು. ಅದರಂತೆ ಮಾಜಿ ತಾಲ್ಲೂಕು ಪಂಚಾಯ್ತಿ ಅಧ್ಯಕ್ಷರಾದಂತ ಗಣಪತಿ ಹೆಚ್ ಹುಲ್ತಿಕೊಪ್ಪ ಅವರ ನೇತೃತ್ವದ ಕಾಂಗ್ರೆಸ್ ಮುಖಂಡರ ನಿಯೋಗವು ಉಳವಿ ಗ್ರಾಮಕ್ಕೆ ಭೇಟಿ ನೀಡಿತು.

ಮಧು ಬಂಗಾರಪ್ಪ ಅವರ ಪಿಎ ಶ್ರೀಪಾದ್, ಸೊರಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಣ್ಣಪ್ಪ ಹಾಲಘಟ್ಟ, ವಕೀಲರು ಹಾಗೂ ಬಗರ್ ಹುಕುಂ ಕಮಿಟಿಯ ಅಧ್ಯಕ್ಷರಾದಂತ ಶೇಖರ್ ಎಂ.ಡಿ, ಕಾಂಗ್ರೆಸ್ ಮುಖಂಡರಾದಂತ ಶಿವಮೂರ್ತಿ, ಪ್ರಶಾಂತ್ ಕೈಸೋಡಿ ಸೇರಿದಂತೆ ಇತರರು ಗಣಪತಿ ಹೆಚ್ ಹುಲ್ತಿಕೊಪ್ಪ ಅವರಿಗೆ ಸಾಥ್ ನೀಡಿ, ಹಾನಿಯಾದ ಸಂತ್ರಸ್ತರ ಮನೆಗಳಿಗೆ ಭೇಟಿ ನೀಡಿ, ಸಾಂತ್ವಾನ ಹೇಳಿ, ಸಕಾಲದಲ್ಲಿ ಸರ್ಕಾರದಿಂದ ಪರಿಹಾರದ ಭರವಸೆಯನ್ನು ನೀಡಿದರು.

ಈ ವೇಳೆ ಮಾತನಾಡಿದಂತ ಗಣಪತಿ ಹೆಚ್ ಹುಲ್ತಿಕೊಪ್ಪ ಅವರು, ಸಚಿವ ಮಧು ಬಂಗಾರಪ್ಪ ಅವರ ಸೂಚನೆಯ ಮೇರೆಗೆ ಮಳೆಹಾನಿಯಾದ ಉಳವಿಯ ಜನತಾ ಕಾಲೋನಿ, ಕೈಸೋಡಿಯ ಜಿಯಾವುಲ್ಲಾ ಅವರ ಗೋಡೌನ್ ಗೆ ಭೇಟಿ ನೀಡಿ ಪರಿಶೀಲಿಸಲಾಗಿದೆ. ಕಂದಾಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಹಾನಿಯ ಮಾಹಿತಿಯನ್ನು ಕಲೆ ಹಾಕಿದ್ದಾರೆ. ಸರ್ಕಾರಕ್ಕೆ ವರದಿ ನೀಡಿ, ಶೀಘ್ರವೇ ಸೂಕ್ತ ಪರಿಹಾರವನ್ನು ಸಂತ್ರಸ್ತರಿಗೆ ಕೊಡಿಸುವುದಾಗಿ ಭರವಸೆ ನೀಡಿದರು.

ತಹಶೀಲ್ದಾರ್ ಪುರಂದರ, ಇಓ ಶಶಿಧರ್ ನೇತೃತ್ಪದಲ್ಲಿ ಕಂದಾಯ ಅಧಿಕಾರಿಗಳ ತಂಡ ಭೇಟಿ

ಉಳವಿಯ ಜನತಾ ಕಾಲೋನಿ ಸೇರಿದಂತೆ ಹಲವೆಡೆ ಬಿರುಗಾಳಿ ಸಹಿತ ಮಳೆಯಿಂದಾಗಿ ಹಾನಿಯಾಗಿರುವಂತ ಮನೆಗಳಿಗೆ ಸೊರಬ ತಹಶೀಲ್ದಾರ್ ಪುರಂದರ.ಕೆ, ಇಒ ಶಶಿಧರ್, ದೂಗೂರು ಗ್ರಾಮ ಪಂಚಾಯ್ತಿ ಪಿಡಿಓ ನಾಗರಾಜ್, ವಿಎಓ ಶ್ರೀಶೈಲ ಬಗಲಿ, ಆರ್ ಐ ಮೇಘರಾಜ್ ತಂಡ ಭೇಟಿ ನೀಡಿತು. ಮನೆ ಹಾನಿಯ ಬಗ್ಗೆ ಸಂತ್ರಸ್ತರಿಂದ ಮಾಹಿತಿ ಪಡೆಯಲಾಯಿತು.

ಈ ವೇಳೆ ಮಾತನಾಡಿದಂತ ಸೊರಬ ತಹಶೀಲ್ದಾರ್ ಪುರಂದರ.ಕೆ ಅವರು ನಿನ್ನೆ ಸುರಿದಂತ ಬಿರುಗಾಳಿ ಸಹಿತ ಮಳೆಯಿಂದಾಗಿ ಉಳವಿ ಭಾಗದಲ್ಲಿ ಅಪಾರ ಪ್ರಮಾಣದ ಹಾನಿಯಾಗಿವೆ. ಅಲ್ಲಲ್ಲಿ ಮನೆಯ ಎಂಚುಗಳು ಹಾರಿ ಹೋಗಿದ್ದರೇ, ಕೆಲವೆಡೆ ಮರಗಳು ಮನೆಯ ಮೇಲೆ ಮುರಿದು ಬಿದ್ದ ಪರಿಣಾಮ ಹಾನಿಯಾಗಿದೆ. ಸಾರ್ವನಿಕರು ಅಪಾಯದ ಸ್ಥಿತಿಯಲ್ಲಿರುವಂತ ಮನೆಯ ಪಕ್ಕದಲ್ಲಿನ ಮರಗಳನ್ನು ಕಡಿತಲೆ ಮಾಡಿ, ಮುಂಜಾಗ್ರತೆ ವಹಿಸಬೇಕು ಎಂಬುದಾಗಿ ಮನವಿ ಮಾಡಿದರು.

ಇಂದು ಕಂದಾಯ ಅಧಿಕಾರಿಗಳ ತಂಡವು ಮಳೆಹಾನಿಯ ಮಾಹಿತಿಯನ್ನು ಕಲೆ ಹಾಕಲಾಗಿದೆ. ಸರ್ಕಾರಕ್ಕೆ ವರದಿಯನ್ನು ಸಲ್ಲಿಸಿ ಸಂತ್ರಸ್ತರಿಗೆ ಸೂಕ್ತ ಪರಿಹಾರವನ್ನು ಶೀಘ್ರವೇ ದೊರಕಿಸಿ ಕೊಡುವ ಕೆಲಸ ಮಾಡುವುದಾಗಿ ತಿಳಿಸಿದರು.

ನಾಳೆ ಸಚಿವ ಮಧು ಬಂಗಾರಪ್ಪ ಉಳವಿಗೆ ಭೇಟಿ ಸಾಧ್ಯತೆ

ಅಪಾರ ಪ್ರಮಾಣದಲ್ಲಿ ಬಿರುಗಾಳಿ ಸಹಿತ ಮಳೆಯಿಂದಾಗಿ ಉಳವಿಯ ಅನೇಕ ಕಡೆಯಲ್ಲಿ ಮನೆ, ಬೆಳೆ ಹಾನಿಯಾಗಿರುವಂತ ವಿಚಾರವನ್ನು ತಿಳಿದಂತ ಸಚಿವ ಹಾಗೂ ಕ್ಷೇತ್ರದ ಶಾಸಕ ಮಧು ಬಂಗಾರಪ್ಪ ಅವರು ಉಳವಿಗೆ ನಾಳೆ ಮಧ್ಯಾಹ್ನ ಭೇಟಿ ನೀಡಿ ಪರಿಶೀಲಿಸಲಿದ್ದಾರೆ ಎನ್ನಲಾಗುತ್ತಿದೆ. ಆ ಮೂಲಕ ಸಂತ್ರಸ್ತ ಜನರನ್ನು ಸಂತೈಸಿ, ಸಕಾಲದಲ್ಲಿ ಪರಿಹಾರವನ್ನು ಒದಗಿಸಿಕೊಡುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಲಿದ್ದಾರೆ ಎನ್ನಲಾಗುತ್ತಿದೆ. ಆ ಬಗ್ಗೆ ಖಚಿತವಾಗಬೇಕಿದೆ.

ಒಟ್ಟಾರೆಯಾಗಿ ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ಉಳಿವಿಯ ದೂಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಳೆದ ರಾತ್ರಿಯ ಬಿರುಗಾಳಿ ಸಹಿತ ಮಳೆಯಿಂದಾಗಿ ಲಕ್ಷಾಂತರ ಪ್ರಮಾಣದ ಹಾನಿ ಉಂಟಾಗಿದೆ. ಕಣದಲ್ಲಿ ಒಣಗಿಸಲು ಹಾಕಿದ್ದಂತ ಶುಂಠಿ ಕೂಡ ಕೊಚ್ಚಿಕೊಂಡು ಹೋಗಿದೆ ವ್ಯಾಪಾರಿಗಳನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಸಂತ್ರಸ್ತರಾದಂತ ಜನರಿಗೆ ಕಂದಾಯ ಇಲಾಖೆಯಿಂದ ಸಕಾಲದಲ್ಲಿ ಸರ್ವೆ ಮಾಡಿ, ಸರ್ಕಾರಕ್ಕೆ ವರದಿಯನ್ನು ಸಲ್ಲಿಸಿ, ಪರಿಹಾರ ದೊರಕಿಸುವ ಕೆಲಸವಾಗಲಿ.

ವರದಿ; ವಸಂತ ಬಿ ಈಶ್ವರಗೆರೆ, ಸಂಪಾದರು..

Share. Facebook Twitter LinkedIn WhatsApp Email

Related Posts

ಸಾಗರದ ಹಲಸು, ಮಾವು ಮೇಳಕ್ಕೆ ಪ್ರಹ್ಲಾದ್ ಜೋಷಿ ಭೇಟಿ: ಹಣ್ಣಿನ ರುಚಿ ಸವಿದ ಕೇಂದ್ರ ಸಚಿವರು, ನಾಳೆ ಕೊನೆ ದಿನ

2 Mins Read

ರಾಮನಗರದ ಬಿಡದಿ ಬಳಿ ಸರಣಿ ಅಪಘಾತ: ಪ್ರಾಣಾಪಾಯದಿಂದ ಕೆ.ಆರ್.ಪೇಟೆ ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್ ಪಾರು

1 Min Read

BREAKING: ಸಚಿವ ಸ್ಥಾನಕ್ಕೆ ನೀಡಿದ್ದ ರಾಜೀನಾಮೆ ವಾಪಾಸ್ ಪಡೆದ ರಾಮಲಿಂಗಾರೆಡ್ಡಿ

1 Min Read
Recent News

ಸಾಗರದ ಹಲಸು, ಮಾವು ಮೇಳಕ್ಕೆ ಪ್ರಹ್ಲಾದ್ ಜೋಷಿ ಭೇಟಿ: ಹಣ್ಣಿನ ರುಚಿ ಸವಿದ ಕೇಂದ್ರ ಸಚಿವರು, ನಾಳೆ ಕೊನೆ ದಿನ

​ಯು18 ಏಷ್ಯಾ ಕಪ್ 2026: ಭಾರತೀಯ ಹಾಕಿ ತಂಡಗಳ ಸಾಧನೆಗೆ ಪ್ರಧಾನಿ ಮೋದಿ ಅಭಿನಂದನೆ

​ಫ್ರೆಂಚ್ ಓಪನ್ ಚಾಂಪಿಯನ್: ಮಾಯಾ ಚ್ವಾಲಿನ್ಸ್ಕ ವಿರುದ್ಧ ಭರ್ಜರಿ ಜಯ ಸಾಧಿಸಿ ಪ್ರಶಸ್ತಿ ಮುಡಿಗೇರಿಸಿಕೊಂಡ ಮಿರಾ ಆಂಡ್ರೀವಾ

​ಕುಟುಂಬದ ನಿರ್ವಹಣೆಗೆ ‘ಉದ್ಯೋಗವಿಲ್ಲ’ ಎಂಬ ನೆಪ ನಡೆಯದು: ಪತಿಯ ಹೊಣೆಗಾರಿಕೆಯನ್ನು ಎತ್ತಿ ಹಿಡಿದ ದೆಹಲಿ ನ್ಯಾಯಾಲಯ

State News
KARNATAKA

ಸಾಗರದ ಹಲಸು, ಮಾವು ಮೇಳಕ್ಕೆ ಪ್ರಹ್ಲಾದ್ ಜೋಷಿ ಭೇಟಿ: ಹಣ್ಣಿನ ರುಚಿ ಸವಿದ ಕೇಂದ್ರ ಸಚಿವರು, ನಾಳೆ ಕೊನೆ ದಿನ

By ವಸಂತ ಬಿ ಈಶ್ವರಗೆರೆ KARNATAKA 2 Mins Read

ಶಿವಮೊಗ್ಗ: ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗ ಜಿಲ್ಲೆಯ ಸಾಗರ ನಗರದಲ್ಲಿ ಹಲಸು ಮತ್ತು ಮಾವು ಪ್ರಿಯರಿಗಾಗಿ ಹಮ್ಮಿಕೊಳ್ಳಲಾಗಿರುವ ‘ಬೃಹತ್ ಹಲಸು ಮತ್ತು…

ರಾಮನಗರದ ಬಿಡದಿ ಬಳಿ ಸರಣಿ ಅಪಘಾತ: ಪ್ರಾಣಾಪಾಯದಿಂದ ಕೆ.ಆರ್.ಪೇಟೆ ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್ ಪಾರು

BREAKING: ಸಚಿವ ಸ್ಥಾನಕ್ಕೆ ನೀಡಿದ್ದ ರಾಜೀನಾಮೆ ವಾಪಾಸ್ ಪಡೆದ ರಾಮಲಿಂಗಾರೆಡ್ಡಿ

ಸಿಎಂ ಡಿ.ಕೆ ಶಿವಕುಮಾರ್ ಆಪ್ತ ಕಾರ್ಯದರ್ಶಿಯಾಗಿ ಕೆಎಎಸ್ ಅಧಿಕಾರಿ ಡಾ. ರಾಜೇಂದ್ರ ಪ್ರಸಾದ್ ನೇಮಕ

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.