Author: ವಸಂತ ಬಿ ಈಶ್ವರಗೆರೆ

ವಸಂತ ಬಿ ಈಶ್ವರಗೆರೆ (Vasantha B Eshwaragere) ಅವರು ಕರ್ನಾಟಕದ ಪತ್ರಕರ್ತರು ಮತ್ತು ಕವಿ. ಉದಯ ನ್ಯೂಸ್, ಟಿವಿ5 ಕನ್ನಡ ಸೇರಿದಂತೆ ವಿವಿಧ ಸುದ್ದಿ ಮಾಧ್ಯಮಗಳಲ್ಲಿ ಸುಮಾರು 15 ವರ್ಷಗಳ ಅನುಭವವನ್ನು ಹೊಂದಿದ್ದಾರೆ. ಪ್ರಸ್ತುತ ಅವರು Kannada News Now ಡಿಜಿಡಿಲ್‌ ಮಾಧ್ಯಮದಲ್ಲಿ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ತಾಜಾ ಸುದ್ದಿ, ಸಾಹಿತ್ಯ, ಸಾಮಾಜಿಕ ವರದಿಗಾರಿಕೆ, ನ್ಯಾಯಾಂಗ ಸಂಬಂಧಿತ ವರದಿ ಮತ್ತು ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದ ಸುದ್ದಿಗಳ ವರದಿಯಲ್ಲಿ ಸಕ್ರಿಯರಾಗಿದ್ದಾರೆ. ಗುಡವಿ ಪಕ್ಷಿಧಾಮದಂತಹ ಪ್ರವಾಸಿ ತಾಣಗಳ ಕುರಿತು ಲೇಖನಗಳನ್ನು ಬರೆದಿದ್ದಾರೆ.

ಪುಣೆ: ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್‌ನಿಂದ (CSMT) ಸೋಲಾಪುರಕ್ಕೆ ತೆರಳುತ್ತಿದ್ದ ‘ವಂದೇ ಭಾರತ್ ಎಕ್ಸ್‌ಪ್ರೆಸ್’ ರೈಲು ಸೋಮವಾರ ಪುಣೆ ರೈಲ್ವೆ ನಿಲ್ದಾಣವನ್ನು ಪ್ರವೇಶಿಸುವ ವೇಳೆ ಹಳಿ ತಪ್ಪಿದೆ. ಅದೃಷ್ಟವಶಾತ್, ಈ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಅಥವಾ ಗಾಯಗಳಾದ ಬಗ್ಗೆ ವರದಿಯಾಗಿಲ್ಲ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. ಘಟನೆ ವಿವರ: ಮುಂಬೈನಿಂದ ಹೊರಟಿದ್ದ ರೈಲು ಪುಣೆ ನಿಲ್ದಾಣದ ಪ್ಲಾಟ್‌ಫಾರ್ಮ್ ಪ್ರವೇಶಿಸುತ್ತಿದ್ದಾಗ ಒಂದು ಬೋಗಿ ಹಳಿ ತಪ್ಪಿದೆ. ರೈಲು ನಿಧಾನಗತಿಯಲ್ಲಿ ಚಲಿಸುತ್ತಿದ್ದ ಕಾರಣ ಭಾರಿ ಅನಾಹುತವೊಂದು ತಪ್ಪಿದಂತಾಗಿದೆ. ಕೂಡಲೇ ಸ್ಥಳಕ್ಕೆ ಧಾವಿಸಿದ ರೈಲ್ವೆ ತಾಂತ್ರಿಕ ತಂಡವು ದುರಸ್ತಿ ಕಾರ್ಯ ಕೈಗೊಂಡಿತು. ಅಪಘಾತಕ್ಕೆ ಕಾರಣವೇನು? ರೈಲ್ವೆ ಇಲಾಖೆಯ ಪ್ರಾಥಮಿಕ ತನಿಖೆಯ ಪ್ರಕಾರ, ನಿಲ್ದಾಣದ ಪ್ರವೇಶ ದ್ವಾರದಲ್ಲಿದ್ದ ‘ನಾನ್-ಸ್ಟ್ಯಾಂಡರ್ಡ್ ಡೈಮಂಡ್ ಕ್ರಾಸಿಂಗ್’ (Non-standard Diamond Crossing) ಈ ಅಪಘಾತಕ್ಕೆ ಮುಖ್ಯ ಕಾರಣ ಎನ್ನಲಾಗಿದೆ. ಹಳಿಗಳ ಈ ವಿಶಿಷ್ಟ ವಿನ್ಯಾಸವು ತಾಂತ್ರಿಕವಾಗಿ ಸೂಕ್ತವಾಗಿಲ್ಲದ ಕಾರಣ ರೈಲಿನ ಚಕ್ರಗಳು ಹಳಿ ಬಿಟ್ಟು ಹೊರಬಂದಿವೆ ಎಂದು ಅಧಿಕಾರಿಗಳು ಶಂಕಿಸಿದ್ದಾರೆ. ಅಧಿಕಾರಿಗಳ…

Read More

ಶಿವಮೊಗ್ಗ: ಹಸಿರು ಸಿರಿಯ ಮಲೆನಾಡು ಈಗಾಗಲೇ ಶರಾವತಿ ಮತ್ತು ವರಾಹಿ ಅಣೆಕಟ್ಟುಗಳ ಮುಳುಗಡೆಯಿಂದಾಗಿ ಹಸಿಯಾಗಿರುವ ಗಾಯಗಳನ್ನು ಹೊತ್ತು ಕುಳಿತಿದೆ. ಹೀಗಿರುವಾಗ, ಸಾಗರ ತಾಲ್ಲೂಕಿನ ಬೇಸೂರು ಗ್ರಾಮದಲ್ಲಿ ಅಣು ವಿದ್ಯುತ್ ಸ್ಥಾವರ ನಿರ್ಮಾಣದ ಪ್ರಸ್ತಾವನೆ ಕೇಳಿಬರುತ್ತಿರುವುದು ಈ ಭಾಗದ ಜನರಲ್ಲಿ ಮರಣಶಾಸನದಂತೆ ಭಾಸವಾಗುತ್ತಿದೆ. ಈ ಯೋಜನೆಯ ವಿರುದ್ಧ ಈಗ ಸಾರ್ವಜನಿಕರು ಮತ್ತು ರಾಜಕೀಯ ನಾಯಕರು ಪಕ್ಷಾತೀತವಾಗಿ ಬೀದಿಗಿಳಿಯಲು ಸಜ್ಜಾಗುತ್ತಿದ್ದಾರೆ. ಇಂದು ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಹುಲಿದೇವರಬನ ಗ್ರಾಮ ಪಂಚಾಯ್ತಿ ಸಭಾಂಗಣದಲ್ಲಿ ನಡೆದ ಸಮಾಲೋಚನಾ ಸಭೆಯಲ್ಲಿ ಸರ್ಕಾರಕ್ಕೆ ಮತ್ತು ಜನಪ್ರತಿನಿಧಿಗಳಿಗೆ ಸ್ಪಷ್ಟ ಎಚ್ಚರಿಕೆಯನ್ನು ರವಾನಿಸಿದೆ. ನಮಗೆ ಅಣು ಸ್ಥಾವರ ಬೇಡ, ಬದುಕಲು ಬಿಡಿ ಸಭೆಯಲ್ಲಿ ಪಾಲ್ಗೊಂಡಿದ್ದ ಮಾಜಿ ಸಚಿವ ಹರತಾಳು ಹಾಲಪ್ಪ ಅವರು ಯೋಜನೆಯ ಗಂಭೀರತೆಯನ್ನು ಬಿಚ್ಚಿಟ್ಟರು. “ಅಣು ವಿದ್ಯುತ್ ಸ್ಥಾವರ ಸ್ಥಾಪನೆಯಾದರೆ ಸುತ್ತಮುತ್ತಲಿನ 80 ಕಿ.ಮೀ. ವ್ಯಾಪ್ತಿಯಲ್ಲಿ ಜನಜೀವನ ಅಸ್ತವ್ಯಸ್ತವಾಗಲಿದೆ. ಕೇವಲ ಮನುಷ್ಯರಷ್ಟೇ ಅಲ್ಲ, ಪ್ರಾಣಿ-ಪಕ್ಷಿ, ಪವಿತ್ರ ನದಿಗಳು ಮತ್ತು ಮಣ್ಣು ಕೂಡ ವಿಕಿರಣದ ಸಂಕಷ್ಟಕ್ಕೆ ಸಿಲುಕಲಿವೆ. ಇದರ ವಿರುದ್ಧ ತಾಂತ್ರಿಕ…

Read More

ನವದೆಹಲಿ: ‘ಪುಷ್ಪ’ ಖ್ಯಾತಿಯ ತೆಲುಗು ಚಿತ್ರರಂಗದ ಖ್ಯಾತ ನಟ ಅಲ್ಲು ಅರ್ಜುನ್ ಅವರ ವ್ಯಕ್ತಿತ್ವದ ಹಕ್ಕುಗಳನ್ನು (Personality Rights) ರಕ್ಷಿಸುವ ಮಹತ್ವದ ಮಧ್ಯಂತರ ಆದೇಶವನ್ನು ದೆಹಲಿ ಹೈಕೋರ್ಟ್ ನೀಡಿದೆ. ನಟನ ಅನುಮತಿಯಿಲ್ಲದೆ ಅವರ ಹೆಸರು, ಚಿತ್ರ, ಧ್ವನಿ ಅಥವಾ ಅವರ ವ್ಯಕ್ತಿತ್ವಕ್ಕೆ ಸಂಬಂಧಿಸಿದ ಯಾವುದೇ ಅಂಶಗಳನ್ನು ವಾಣಿಜ್ಯ ಉದ್ದೇಶಗಳಿಗಾಗಿ ಬಳಸದಂತೆ ವಿವಿಧ ಸಂಸ್ಥೆಗಳಿಗೆ ನ್ಯಾಯಾಲಯವು ನಿರ್ಬಂಧ ಹೇರಿದೆ. ‘ಐಕಾನಿಕ್ ಸ್ಟೇಟಸ್’ ಗುರುತಿಸಿದ ನ್ಯಾಯಾಲಯ ಏಪ್ರಿಲ್ 17 ರಂದು ಈ ಆದೇಶ ನೀಡಿದ ನ್ಯಾಯಮೂರ್ತಿ ತುಷಾರ್ ರಾವ್ ಗೆಡೆಲಾ ಅವರು, “ಅಲ್ಲು ಅರ್ಜುನ್ ಅವರು ಚಿತ್ರರಂಗದಲ್ಲಿ ಅತ್ಯಂತ ಯಶಸ್ವಿ ವೃತ್ತಿಜೀವನವನ್ನು ನಿರ್ಮಿಸಿದ್ದಾರೆ. ಅವರ ಜನಪ್ರಿಯ ಸಂಭಾಷಣೆಗಳು ಮತ್ತು ವಿಶಿಷ್ಟ ಶೈಲಿಯು ಅವರ ‘ಐಕಾನಿಕ್ ಸ್ಟೇಟಸ್’ ಅನ್ನು ಪ್ರತಿಬಿಂಬಿಸುತ್ತವೆ” ಎಂದು ಅಭಿಪ್ರಾಯಪಟ್ಟಿದ್ದಾರೆ. ನಟನ ಹೆಸರು, ನೋಟ ಮತ್ತು ಧ್ವನಿಯನ್ನು ವಾಣಿಜ್ಯಿಕವಾಗಿ ಬಳಸುವ ವಿಶೇಷ ಹಕ್ಕು ಕೇವಲ ಅವರಿಗೆ ಮಾತ್ರ ಸೇರಿದ್ದು ಎಂದು ಕೋರ್ಟ್ ಸ್ಪಷ್ಟಪಡಿಸಿದೆ. AI ಮತ್ತು ಡೀಪ್ ಫೇಕ್ ತಂತ್ರಜ್ಞಾನಕ್ಕೂ ಕಡಿವಾಣ ತಂತ್ರಜ್ಞಾನದ…

Read More

ನವದೆಹಲಿ: ಹಿಂದಿ ಚಿತ್ರರಂಗದ ಖ್ಯಾತ ಪೋಷಕ ನಟ, ವಿಲನ್ ಪಾತ್ರಗಳ ಮೂಲಕ ಮನೆಮಾತಾಗಿದ್ದ ಭರತ್ ಕಪೂರ್ (80) ಅವರು ಸೋಮವಾರ ಮುಂಬೈನಲ್ಲಿ ನಿಧನರಾದರು. ಕಳೆದ ಮೂರು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು, ಮುಂಬೈನ ಸಿಯೋನ್‌ ಆಸ್ಪತ್ರೆಯಲ್ಲಿ ಮಧ್ಯಾಹ್ನ 3:30ರ ಸುಮಾರಿಗೆ ಕೊನೆಯುಸಿರೆಳೆದರು. ಅವರ ಆಪ್ತ ಮಿತ್ರ ಮತ್ತು ಸಹನಟ ಅವತಾರ್ ಗಿಲ್ ಈ ಸುದ್ದಿಯನ್ನು ಖಚಿತಪಡಿಸಿದ್ದಾರೆ. “ಕಳೆದ ಮೂರು ದಿನಗಳಿಂದ ಅವರ ಆರೋಗ್ಯ ಕ್ಷೀಣಿಸಿತ್ತು, ಅಂಗಾಂಗ ವೈಫಲ್ಯದಿಂದ ಅವರು ಮೃತಪಟ್ಟಿದ್ದಾರೆ” ಎಂದು ಗಿಲ್ ನೋವಿನಿಂದ ನುಡಿದಿದ್ದಾರೆ. ಸೋಮವಾರ ಸಂಜೆ 6:30ಕ್ಕೆ ಕುಟುಂಬಸ್ಥರು ಮತ್ತು ಆಪ್ತರ ಸಮ್ಮುಖದಲ್ಲಿ ಅಂತ್ಯಕ್ರಿಯೆ ನೆರವೇರಿತು. ಮೂರು ದಶಕಗಳ ಕಾಲ ಸಿನಿರಂಗದ ಸಾರಥ್ಯ 70, 80 ಮತ್ತು 90ರ ದಶಕಗಳಲ್ಲಿ ಭರತ್ ಕಪೂರ್ ಬಾಲಿವುಡ್‌ನ ಅನಿವಾರ್ಯ ನಟರಾಗಿ ಗುರುತಿಸಿಕೊಂಡಿದ್ದರು. ಕೇವಲ ನಟನೆಯಷ್ಟೇ ಅಲ್ಲದೆ, ತಮ್ಮ ಗಂಭೀರ ಧ್ವನಿ ಮತ್ತು ವ್ಯಕ್ತಿತ್ವದಿಂದ ಅವರು ನಿರ್ವಹಿಸುತ್ತಿದ್ದ ಪೊಲೀಸ್ ಅಧಿಕಾರಿ ಹಾಗೂ ವಕೀಲರ ಪಾತ್ರಗಳು ಪ್ರೇಕ್ಷಕರ ಮನಸ್ಸಿನಲ್ಲಿ ಅಚ್ಚಳಿಯದಂತೆ ಉಳಿದಿವೆ. ಗಮನಾರ್ಹ ಚಿತ್ರಗಳು…

Read More

ಬೆಂಗಳೂರು: “ಕುಮಾರಸ್ವಾಮಿ ತಮ್ಮ ಅನುಭವದ ಲೆಕ್ಕಾಚಾರದ ಮೇಲೆ ಮಾತನಾಡಿರಬೇಕು. ಅವರಲ್ಲಿ ಏನೋ ಸಮಸ್ಯೆ ಇರಬೇಕು” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿರುಗೇಟು ನೀಡಿದರು. ಬೆಂಗಳೂರಿನ ಕೆಎಎಸ್ ಅಧಿಕಾರಿಗಳ ಸಂಘದ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಸೋಮವಾರ ಪ್ರತಿಕ್ರಿಯಿಸಿದರು. ಹೆಬ್ಬೆಟ್ಟು ಒತ್ತಿಸಿಕೊಳ್ಳಲು ಸಚಿವ ಸುಧಾಕರ್ ಆರೋಗ್ಯದ ವಿಚಾರ ಮುಚ್ಚಿಡಲಾಗಿದೆ ಎಂಬ ಕುಮಾರಸ್ವಾಮಿ ಅವರ ಆರೋಪದ ಬಗ್ಗೆ ಕೇಳಿದಾಗ, “ಯಾವ ಹೆಬ್ಬೆಟ್ಟು, ಏನು ಎಂದು ಗೊತ್ತಿದ್ದರೆ ಅವರೇ ಹೇಳಬೇಕು. ಅವರ ಕುಟುಂಬದವರಿಗೆ ಹೇಳಬೇಕು. ಕುಮಾರಸ್ವಾಮಿ ಅವರು ರಾಜಕೀಯ ಲಾಭಕ್ಕೆ ಮಾತನಾಡುತ್ತಿದ್ದಾರೆ. ಇದರಿಂದ ಅವರ ಘನತೆಗೆ, ಹಿರಿತನಕ್ಕೆ ಗೌರವ ಬರುವುದಿಲ್ಲ” ಎಂದು ಹರಿಹಾಯ್ದರು. https://kannadanewsnow.com/kannada/is-eating-cardamom-before-going-to-bed-really-a-health-elixir-heres-the-information/

Read More

ತುಮಕೂರು: ಕುಡಿತದ ನಶೆ ಮತ್ತು ಕ್ಷುಲ್ಲಕ ಕಾರಣಕ್ಕೆ ಶುರುವಾದ ಜಗಳವೊಂದು ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಜಿಲ್ಲೆಯ ಮಧುಗಿರಿ ತಾಲ್ಲೂಕಿನ ನಿಟ್ಟರಹಳ್ಳಿ ಗ್ರಾಮದಲ್ಲಿ ನಡೆದಿದೆ. ಸ್ವಂತ ಅಣ್ಣನೇ ತನ್ನ ತಮ್ಮನನ್ನು ಕಲ್ಲು ಎತ್ತಿ ಹಾಕಿ ಬರ್ಬರವಾಗಿಯೇ ಹತ್ಯೆ ಮಾಡಿದ್ದಾನೆ. ಘಟನೆಯ ಹಿನ್ನೆಲೆ: ನಿಟ್ಟರಹಳ್ಳಿಯ ನಿವಾಸಿ ಗಂಗಾರಾಜು (36) ಕೊಲೆಯಾದ ದುರ್ದೈವಿ. ಗಂಗಾರಾಜು ಮತ್ತು ಈತನ ಅಣ್ಣ ನರಸಿಂಹಮೂರ್ತಿ ಇಬ್ಬರ ನಡುವೆ ಕಳೆದ ರಾತ್ರಿ ಕ್ಷುಲ್ಲಕ ವಿಚಾರಕ್ಕೆ ಸಂಬಂಧಿಸಿದಂತೆ ಮಾತಿನ ಚಕಮಕಿ ಆರಂಭವಾಗಿತ್ತು. ಇಬ್ಬರೂ ಮದ್ಯ ಸೇವಿಸಿದ್ದರಿಂದ ಜಗಳ ವಿಕೋಪಕ್ಕೆ ತಿರುಗಿದೆ. ಕಲ್ಲುನಿಂದ ಜಜ್ಜಿದ ನರಸಿಂಹಮೂರ್ತಿ: ಮದ್ಯದ ಅಮಲಿನಲ್ಲಿದ್ದ ಅಣ್ಣ ನರಸಿಂಹಮೂರ್ತಿ ಆಕ್ರೋಶದ ಭರದಲ್ಲಿ ಮನೆಯಲ್ಲಿದ್ದ ಕಲ್ಲನ್ನು ಎತ್ತಿ ತಮ್ಮ ಗಂಗಾರಾಜುವಿನ ಮೇಲೆ ಹಾಕಿದ್ದಾನೆ. ತಲೆಗೆ ಬಲವಾದ ಪೆಟ್ಟು ಬಿದ್ದ ಪರಿಣಾಮ ರಕ್ತದ ಮಡುವಿನಲ್ಲಿ ಬಿದ್ದ ಗಂಗಾರಾಜು ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾನೆ. ಮನೆಯ ಆವರಣದಲ್ಲೇ ನಡೆದ ಈ ಭೀಕರ ದೃಶ್ಯ ಗ್ರಾಮಸ್ಥರನ್ನು ಬೆಚ್ಚಿಬೀಳಿಸಿದೆ. ಸ್ಥಳಕ್ಕೆ ಪೊಲೀಸರ ಭೇಟಿ: ಘಟನೆಯ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆಯೇ ಕೊಡಿಗೇನಹಳ್ಳಿ…

Read More

ಬೆಂಗಳೂರು: ಕರ್ನಾಟಕ ರಾಜ್ಯ ಸರ್ಕಾರದ ಸಚಿವ ಸಂಪುಟದ 2026ನೇ ಸಾಲಿನ 11ನೇ ಸಭೆಯನ್ನು ಇದೇ ಬರುವ ಗುರುವಾರ ಕರೆಯಲಾಗಿದೆ. ಈ ಕುರಿತು ಸರ್ಕಾರದ ಅಪರ ಕಾರ್ಯದರ್ಶಿಗಳು (ಸಚಿವ ಸಂಪುಟ) ಇಂದು ಅಧಿಕೃತ ಸೂಚನಾ ಪತ್ರವನ್ನು ಹೊರಡಿಸಿದ್ದಾರೆ. ಸಭೆಯ ವಿವರಗಳು: ದಿನಾಂಕ: 30.04.2026, ಗುರುವಾರ. ಸಮಯ: ಸಂಜೆ 4:00 ಗಂಟೆಗೆ. ಸ್ಥಳ: ವಿಧಾನಸೌಧದ ಸಚಿವ ಸಂಪುಟ ಸಭಾಮಂದಿರ. ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಸಭೆಯಲ್ಲಿ ಉಪಮುಖ್ಯಮಂತ್ರಿಗಳು ಹಾಗೂ ಸಂಪುಟದ ಎಲ್ಲಾ ಸಚಿವರು ಭಾಗವಹಿಸಲಿದ್ದಾರೆ. ಸಭೆಯ ಕಾರ್ಯಸೂಚಿಯನ್ನು (Agenda) ಪ್ರತ್ಯೇಕವಾಗಿ ಕಳುಹಿಸಿಕೊಡಲಾಗುವುದು ಎಂದು ಪತ್ರದಲ್ಲಿ ತಿಳಿಸಲಾಗಿದೆ. ಕುತೂಹಲ ಮೂಡಿಸಿದ ಸಭೆ: ರಾಜ್ಯದಲ್ಲಿನ ಪ್ರಸಕ್ತ ರಾಜಕೀಯ ಬೆಳವಣಿಗೆಗಳು, ಮಳೆ-ಬೆಳೆ ಹಾನಿ ಅಥವಾ ಹೊಸ ಯೋಜನೆಗಳ ಅನುಷ್ಠಾನದ ಕುರಿತು ಈ ಸಭೆಯಲ್ಲಿ ಚರ್ಚಿಸಿ ಮಹತ್ವದ ನಿರ್ಧಾರಗಳನ್ನು ಕೈಗೊಳ್ಳುವ ಸಾಧ್ಯತೆ ಇದೆ. ಸಂಪುಟ ಸಭೆಯ ಬೆನ್ನಲ್ಲೇ ಸರ್ಕಾರವು ಕೆಲವು ಪ್ರಮುಖ ಘೋಷಣೆಗಳನ್ನು ಮಾಡುವ ನಿರೀಕ್ಷೆಯಿದೆ. ಸಭೆಯ ಹಿನ್ನೆಲೆಯಲ್ಲಿ ವಿಧಾನಸೌಧದ ಆವರಣದಲ್ಲಿ ಬಿಗಿ ಭದ್ರತೆ ಹಾಗೂ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲು…

Read More

ಯಾದಗಿರಿ: ಜಿಲ್ಲೆಯ ಗುರುಮಠಕಲ್ ತಾಲ್ಲೂಕಿನ ಬೂದುರು ಗ್ರಾಮದ ಬಳಿ ಸಂಭವಿಸಿದ ಭೀಕರ ಸಿಡಿಲು ಅವಘಡದಲ್ಲಿ 50ಕ್ಕೂ ಹೆಚ್ಚು ಕುರಿಗಳು ಸಾವನ್ನಪ್ಪಿರುವ ಘಟನೆ ನಡೆದಿದೆ. ಘಟನೆಯ ವಿವರ: ಗ್ರಾಮದ ಕುರಿಗಾಹಿಗಳಾದ ಮಲ್ಲಪ್ಪ, ಆಶಪ್ಪ, ಜಾಲಪ್ಪ ಮತ್ತು ಹನುಮಂತ ಎಂಬುವವರು ಎಂದಿನಂತೆ ತಮ್ಮ ಕುರಿಗಳನ್ನು ಮೇಯಿಸಲು ಕಾಡಿಗೆ ಕರೆದುಕೊಂಡು ಹೋಗಿದ್ದರು. ಈ ಸಂದರ್ಭದಲ್ಲಿ ಹಠಾತ್ ಆಗಿ ಕಾಣಿಸಿಕೊಂಡ ಗುಡುಗು ಸಹಿತ ಮಳೆಯ ವೇಳೆ ಸಿಡಿಲು ಬಡಿದ ಪರಿಣಾಮ, ಕುರಿಗಳು ಸ್ಥಳದಲ್ಲೇ ಸಾವನ್ನಪ್ಪಿವೆ. ಕುರಿಗಾಹಿಗಳಿಗೆ ಭಾರೀ ನಷ್ಟ: ತಮ್ಮ ಜೀವನಕ್ಕೆ ಆಧಾರವಾಗಿದ್ದ ಕುರಿಗಳನ್ನು ಕಳೆದುಕೊಂಡ ಕುರಿಗಾಹಿಗಳು ಕಣ್ಣೀರು ಹಾಕುತ್ತಿದ್ದಾರೆ. ಮೃತಪಟ್ಟ ಕುರಿಗಳ ಸಂಖ್ಯೆ 50ಕ್ಕೂ ಹೆಚ್ಚಿದ್ದು, ಇದರಿಂದ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ. ಈ ಕುರಿತು ಗುರುಮಠಕಲ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುವಂತೆ ಮತ್ತು ನಷ್ಟ ಅನುಭವಿಸಿದ ಕುರಿಗಾಹಿಗಳಿಗೆ ಸೂಕ್ತ ಪರಿಹಾರ ನೀಡುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ. https://kannadanewsnow.com/kannada/high-court-justice-sunil-dutt-yadav-inaugurated-the-caal-website-in-bengaluru/ https://kannadanewsnow.com/kannada/four-members-of-a-family-die-after-eating-watermelon-after-eating-biryani/

Read More

ಬೆಂಗಳೂರು : ಬೆಂಗಳೂರಿನ ಕೃಷಿ ಮತ್ತು ಸಂಬಂಧಿಕತ ಕಾನೂನುಗಳ ಅಧ್ಯಯನ ಕೇಂದ್ರ (ಸಿಎಎಎಲ್) ಇಂದು ತನ್ನ ಅಧಿಕೃತ ವೆಬ್‌ಸೈಟ್ ಬಿಡುಗಡೆಗೊಳಿಸಿತು. ಹೆಬ್ಬಾಳದ ಹಯಾತ್ ಸೆಂಟ್ರಿಕ್‌ನಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಹೈಕೋರ್ಟ್ ನ್ಯಾಯಮೂರ್ತಿ ಎಸ್. ಸುನೀಲ್ ದತ್ ಯಾದವ್ ಅವರು ವೆಬ್‌ಸೈಟ್ (https://www.caal.in.net) ಉದ್ಘಾಟಿಸಿದರು. ಈ ವೇಳೆ ಮಾತನಾಡಿದ ಅವರು, ಭಾರತ ಕೃಷಿ ಪ್ರಧಾನ ದೇಶ. ಬಹುಸಂಖ್ಯಾತ ಜನರು ಕೃಷಿ ಮತ್ತು ಕೃಷಿ ಸಂಬಂಧಿತ ಚಟುವಟಿಕೆಗಳನ್ನು ಅವಲಂಬಿಸಿದ್ದು, ಅದನ್ನೇ ತಮ್ಮ ಜೀವನೋಪಾಯ ಮಾಡಿಕೊಂಡಿದ್ದಾರೆ. ಹೀಗಾಗಿ ರೈತರು, ಕೃಷಿ, ಪರಿಸರ ವಿಜ್ಞಾನ ಮತ್ತು ಕೃಷಿ ವ್ಯವಹಾರಗಳು ಸುಸ್ಥಿರ ಆಗುವ ಬಗ್ಗೆ ದೃಷ್ಟಿಕೋನದಿಂದ ಕಾನೂನು ಸಹ ತನ್ನ ಕರ್ತವ್ಯ ನಿರ್ವಹಿಸಬೇಕಿದೆ ಎಂದು ಹೇಳಿದರು. ಕೃಷಿ ಮತ್ತು ಅದಕ್ಕೆ ಪೂರಕವಾದ ಕಾನೂನುಗಳ ಬಗ್ಗೆ ಅಧ್ಯಯನ ನಡೆಸಲು ಕೇಂದ್ರ ಆರಂಭಿಸಿರುವುದೇ ದೊಡ್ಡ ಪ್ರಯತ್ನ. ಇದರಿಂದ ಕೃಷಿ ಕ್ಷೇತ್ರಕ್ಕೆ ಸಾಕಷ್ಟು ಕಾನೂನಾತ್ಮಕ ಬೆಂಬಲ ನೀಡಿದಂತಾಗುತ್ತದೆ. ಈ ಸಿಎಎಎಲ್ ಕೇಂದ್ರವನ್ನು ಯಶಸ್ವಿಯಾಗಿ ನಡೆಸುತ್ತಾ, ಈಗ ಅದನ್ನು ಮತ್ತಷ್ಟು ಜನರಿಗೆ ತಲುಪಿಸಲು ವೆಬ್‌ಸೈಟ್ ರೂಪಿಸಿ…

Read More

ಶಿವಮೊಗ್ಗ: ಜಿಲ್ಲೆಯ ಸೊರಬ ತಾಲ್ಲೂಕಿನ ಉಳವಿಯಲ್ಲಿ ಕಳೆದ ಶನಿವಾರದಂದು ಸುರಿದಂತ ಬಿರುಗಾಳಿ ಸಹಿತ ಮಳೆಯಿಂದಾಗಿ ಅಪಾರ ಆಸ್ತಿ-ಪಾಸ್ತಿ ನಷ್ಟವಾಗಿತ್ತು. ಈ ವಿಷಯ ತಿಳಿದಂತ ಸಚಿವ ಮಧು ಬಂಗಾರಪ್ಪ ಅವರು, ಇಂದು ಹಾನಿಗೊಂಡ ಸ್ಥಳಗಳಿಗೆ ಭೇಟಿ ನೀಡಿ, ಸಂತ್ರಸ್ತರಿಗೆ ಧೈರ್ಯ ತುಂಬಿದರು. ಏಪ್ರಿಲ್.25ರಂದು ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ದೂಗೂರು ಗ್ರಾಮ ಪಂಚಾಯ್ತಿಯ ಉಳವಿಯ ಜನತಾ ಕಾಲೋನಿಯಲ್ಲಿ ಬಿರುಗಾಳಿ ಸಹಿತ ಮಳೆಯಿಂದಾಗಿ ಮರಗಳ ಮನೆಯ ಮೇಲೆ ಉರುಳಿ ಬಿದ್ದು ಹಾನಿಗೊಂಡಿತ್ತು. ಹಂಚುಗಳು ಹಾರಿ ಹೋಗಿದ್ದರೇ, ಸಿಮೆಂಟ್ ಸೀಟು, ಕೊಟ್ಟಿಗೆ ಮನೆಗಳು ಬಿರುಗಾಳಿ ಮಳೆಯಿಂದಾಗಿ ಹಾನಿಯಾಗಿದ್ದವು. ಈ ಹಿನ್ನಲೆಯಲ್ಲಿ ಇಂದು ಸಚಿವ ಮಧು ಬಂಗಾರಪ್ಪ ಅವರು ಉಳವಿಯ ಕೈಸೋಡಿ ರಸ್ತೆಯಲ್ಲಿರುವಂತ ಹನೀಫ್ ಸಾಬ್ ಅವರ ಹಾನಿಗೊಂಡ ಗೋಡೌನ್ ವೀಕ್ಷಿಸಿದರು. ಆ ಬಳಿಕ ಜಿಯಾವುಲ್ಲಾ ಎಂಬುವರಿಗೆ ಸೇರಿದಂತ ಶುಂಠಿ ಒಣಗಿಸಲು ನಿರ್ಮಿಸಿದ್ದಂತ ಫಾಲಿ ಹೌಸ್ ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಲ್ಲದೇ ಸರ್ಕಾರದಿಂದ, ಎನ್ ಡಿ ಆರ್ ಎಫ್ ನಿಧಿಯಿಂದ ಪರಿಹಾರ ಕೊಡಿಸುವ ಭರವಸೆ…

Read More