Subscribe to Updates
Get the latest creative news from FooBar about art, design and business.
Author: kannadanewsnow05
ನವದೆಹಲಿ : ದುಷ್ಕರ್ಮಿಗಳಿಂದ ದೆಹಲಿಯ ನಾಲ್ಕು ಕೋರ್ಟ್ ಗಳಿಗೆ ಹಾಗೂ ಎರಡು ಸಿಆರ್ಪಿಎಫ್ ಶಾಲೆಗಳಿಗೆ ಬಾಂಬ್ ಸಂದೇಶ ಬಂದಿದೆ. ದುಷ್ಕರ್ಮಿಗಳು ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಇ-ಮೇಲ್ ಸಂದೇಶ ಕಳುಹಿಸಿದ್ದಾರೆ.ಜೈಶ್ ಉಗ್ರ ಸಂಘಟನೆ ಹೆಸರಲ್ಲಿ ದುಷ್ಕರ್ಮಿಗಳು ಬಾಂಬ್ ಬೆದರಿಕೆ ಸಂದೇಶ ಕಳುಹಿಸಿದ್ದಾರೆ. ನಾಲ್ಕು ಕೋರ್ಟ್ ಗಳಿಗೆ ಹಾಗೂ ಎರಡು ಸಿಆರ್ ಪಿಎಫ್ ಶಾಲೆಗಳಿಗೆ ಬಾಂಬ್ ಸಂದೇಶ ಬಂದಿದೆ.ಕೂಡಲೇ ತಕ್ಷಣ ಸ್ಥಳಕ್ಕೆ ಪೊಲೀಸರು ದೌಡಾಯಿಸಿದ್ದಾರೆ. ಶ್ವಾನದಳ ಹಾಗೂ ಬಾಂಬ್ ನಿಷ್ಕ್ರಿಯ ದಳ ಸಿಬ್ಬಂದಿಗಳು ಸ್ಥಳಕ್ಕೆ ದೌಡಾಶಿ ಪರಿಶೀಲನೆ ಮಾಡುತ್ತಿದ್ದು, ಈ ಕುರಿತು ಇನ್ನಷ್ಟು ಮಾಹಿತಿಯನ್ನು ನಿರೀಕ್ಷಿಸಲಾಗುತಿದೆ.
ತಮಿಳುನಾಡು : ಪಟ್ಟಿವೀರನಪಟ್ಟಿ ಬಳಿ ಅಯ್ಯಪ್ಪ ಭಕ್ತರನ್ನು ಹೊತ್ತೊಯ್ಯುತ್ತಿದ್ದ ವ್ಯಾನ್ಗೆ ಹಾಲಿನ ವ್ಯಾನ್ ಡಿಕ್ಕಿ ಹೊಡೆದು ಅಯ್ಯಪ್ಪ ಭಕ್ತರೊಬ್ಬರು ಮೃತಪಟ್ಟು ಇಬ್ಬರಿಗೆ ಗಾಯವಾಗಿರುವ ಘಟನೆ ತಮಿಳುನಾಡಿನ ದಿಂಡುಗಲ್ ಎಂಬಲ್ಲಿ ನಡೆದಿದೆ. ಸುಂದರರಾಜಪುರಂ ಪೆಟ್ರೋಲ್ ಪಂಪ್ ಹತ್ತಿರ, ಪಟ್ಟಿವೀರನ್ಪಟ್ಟಿ ಪಕ್ಕ, ದಿಂಡುಗಲ್ ಜಿಲ್ಲೆಯಲ್ಲಿ ಶಬರಿಮಲೆ ದರ್ಶನ ಮುಗಿಸಿ ಕರ್ನಾಟಕಕ್ಕೆ ತೆರಳುತ್ತಿದ್ದ ಕರ್ನಾಟಕದ ಅಯ್ಯಪ್ಪ ಭಕ್ತರು ತೆರಳುತ್ತಿದ್ದ ವ್ಯಾನ್ಗೆ ಹಾಲಿನ ವ್ಯಾನ್ ಡಿಕ್ಕಿ ಹೊಡೆದಿದೆ. ಈ ಅಪಘಾತದಲ್ಲಿ ಕರ್ನಾಟಕದ ಅಯ್ಯಪ್ಪ ಭಕ್ತರೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇಬ್ಬರು ಅಯ್ಯಪ್ಪ ಭಕ್ತರು ಗಂಭೀರ ಗಾಯಗೊಂಡು ಸರ್ಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆ ಕುರಿತು ವಟ್ಟಲಕುಂದ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಹಾಸನ : ಮನೆಯಲ್ಲಿ ಅಡುಗೆ ಮಾಡುವಾಗ ಅನೀಲ ಸೋರಿಕೆಯಾಗಿ ಅವಘಡ ಸಂಭವಿಸಿದ್ದು ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ಹೇಂಟಗೆರೆಯಲ್ಲಿ ಈ ಒಂದು ದುರಂತ ಸಂಭವಿಸಿದೆ. ಅಸ್ಸಾಂ ಮೂಲದ ನಾಲ್ವರು ಕಾರ್ಮಿಕರಿಗೆ ಗಂಭೀರವಾದ ಗಾಯಗಳಾಗಿವೆ. ದೊಡ್ಡೇಗೌಡ ಎಂಬ ವರ ಮನೆಯಲ್ಲಿ ಕಾರ್ಮಿಕರು ವಾಸವಿದ್ದರು. ಮನೆಯಲ್ಲಿದ್ದ ಅಲೀಮ್ ಬೇಗಮ್ (23) ರೋಹಿತ್ ಕಥನ್ (19) ಇಸ್ತರ್ ಉಲ್ಲಾ (23) ಹಾಗೂ ಅಹಿಸ್ಲಂ (25) ಎಂಬವರಿಗೆ ಗಂಭೀರವಾದ ಗಾಯಗಳಾಗಿವೆ. ಗಾಯಳುಗಳನ್ನು ಅರಕಲಗೂಡು ತಾಲೂಕು ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಹಾಸನ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ.
ಬೆಂಗಳೂರು, ನ.18: “ಬೆಂಗಳೂರು ದಕ್ಷಿಣದ ಬಿಡದಿಯಲ್ಲಿ ನೂತನ ಐಟಿ ನಗರ ನಿರ್ಮಾಣಕ್ಕೆ ಆಲೋಚಿಸಲಾಗಿದೆ. ಬೆಂಗಳೂರಿನಲ್ಲಿ ಬಿಲಿಯನ್ ಡಾಲರ್ ಗಟ್ಟಲೆ ಬಂಡವಾಳ ಹೂಡಿಕೆಗೆ ನಾನಾ ದೇಶದ ನಾಯಕರುಗಳು ಮುಂದೆ ಬಂದಿದ್ದಾರೆ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ತಿಳಿಸಿದರು. ಸದಾಶಿವನಗರದ ನಿವಾಸದ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಪ್ರತಿಕ್ರಿಯೆ ನೀಡಿದರು. ಬೆಂಗಳೂರಿನಲ್ಲಿ ಟೆಕ್ ಸಮ್ಮಿಟ್ ನಡೆಯುತ್ತಿರುವ ಬಗ್ಗೆ ಕೇಳಿದಾಗ “ಜಗತ್ತಿನ ನಾನಾ ದೇಶದ ನಾಯಕರುಗಳು ಪ್ರತಿದಿನ ನನ್ನನ್ನು ಭೇಟಿ ಮಾಡುತ್ತಿರುತ್ತಾರೆ. ಅನೇಕರು ಬೆಂಗಳೂರಿನಲ್ಲಿ ಉದ್ದಿಮೆ ಆರಂಭಕ್ಕೆ ಉತ್ಸುಕರಾಗಿದ್ದಾರೆ. ನಾವು ಎಷ್ಟು ಸಾಧ್ಯವೋ ಅಷ್ಟು ಅವರೆಲ್ಲರ ಬೆಂಬಲಕ್ಕೆ ನಿಂತಿದ್ದೇವೆ. 60 ದೇಶಗಳ ಪ್ರತಿನಿಧಿಗಳು, ದೇಶದ ಎಲ್ಲಾ ರಾಜ್ಯಗಳ ಪ್ರಮುಖರು ಸುಮಾರು 50 ಸಾವಿರ ಮಂದಿ ಇದರಲ್ಲಿ ಭಾಗವಹಿಸಲಿದ್ದಾರೆ. 1,500 ದೊಡ್ದ ಕಂಪೆನಿಗಳು ಭಾಗವಹಿಸುತ್ತಿವೆ. ಇವರುಗಳು ಉದ್ಯೋಗ ನೀಡಬೇಕು, ಸಂಪಾದನೆ ಮಾಡಬೇಕು. ಅದಕ್ಕೆ ನಮ್ಮ ಪ್ರೋತ್ಸಾಹ” ಎಂದರು. “ಪ್ರೋತ್ಸಾಹ ನೀಡಿದರೆ ಇಲ್ಲಿನ ಪ್ರತಿಭೆಗಳು, ಹೊಸ ಆವಿಷ್ಕಾರ, ತಂತ್ರಜ್ಞಾನ, ಸ್ಟಾರ್ಟ್ ಅಪ್ ಗಳು ಕರ್ನಾಟಕವನ್ನು ಹೊಸ ದಿಕ್ಕಿನೆಡೆಗೆ…
ಬೆಂಗಳೂರು : ನಮ್ಮ ಮೆಟ್ರೋದಲ್ಲಿ ಕೇವಲ 7 ನಿಮಿಷದಲ್ಲಿ ಯಶಸ್ವಿಯಾಗಿ ಹೃದಯ ಶಿಫ್ಟ್ ಮಾಡಲಾಗಿದೆ. ಹೌದು ರಾಗಿಗುಡ್ಡ ನಿಲ್ದಾಣದಿಂದ ಬೊಮ್ಮಸಂದ್ರಕ್ಕೆ ಹೃದಯ ಶಿಫ್ಟ್ ಮಾಡಲಾಗಿದೆ ಇದು ಐದನೇ ಬಾರಿಗೆ ಮೆಟ್ರೋ ಟ್ರೈನಲ್ಲಿ ಅಂಗಾಂಗ ರವಾನೆ ಮಾಡಿರುವ ಘಟನೆ ನಡೆದಿದೆ. ಖಾಸಗಿ ಆಸ್ಪತ್ರೆಯಿಂದ ನಾರಾಯಣ ಹೃದಯಾಲಯ ಆಸ್ಪತ್ರೆಗೆ ಹೃದಯ ಶಿಫ್ಟ್ ಮಾಡಲಾಗಿದೆ. ನಿನ್ನೆ 7 ಗಂಟೆ 32 ನಿಮಿಷಕ್ಕೆ ರಾಗಿ ಗುಡ್ಡ ಸ್ಟೇಷನ್ ನಿಂದ ಹೊರಟು 7:39 ನಿಮಿಷಕ್ಕೆ ಬೊಮ್ಮಸಂದ್ರ ನಿಲ್ದಾಣಕ್ಕೆ ತಲುಪಿ ನಾರಾಯಣ ಹೃದಯಾಲಯಕ್ಕೆ ಹೃದಯ ಶಿಫ್ಟ್ ಮಾಡಲಾಗಿದೆ. ಮೆಟ್ರೋ ರೈಲು ಯಾವ ರೀತಿ ಉಪಯೋಗ ಬರುತ್ತೆ ಅಂತ ಈ ಘಟನೆ ಮೂಲಕ ತಿಳಿಯುತ್ತದೆ ಆರೋಗ್ಯ ಸಮಸ್ಯೆ ಬಂದಾಗಲೂ ಕೂಡ ಮೆಟ್ರೋ ತುಂಬಾ ಸಹಕಾರಿಯಾಗಿದೆ.
ಬೆಂಗಳೂರು : ಸಚಿವ ಸಂಪುಟ ಪುನಾರಚನೆಯ ಬಗ್ಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಒಲವು ತೋರಿಸಿದ್ದು, ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ ಸಿಂಗ್ ಸುರ್ಜೆವಾಲ ಜೊತೆಗೆ ಚರ್ಚಿಸಿ ಈ ಕುರಿತು ತೀರ್ಮಾನಿಸೋಣ ನೀವು ಮತ್ತೊಮ್ಮೆ ಬರಬೇಕಾಗುತ್ತದೆ ಅಂತ ಮಲ್ಲಿಕಾರ್ಜುನ ಖರ್ಗೆ ಸಿಎಂ ಸಿದ್ದರಾಮಯ್ಯ ಅವರಿಗೆ ತಿಳಿಸಿದ್ದಾರೆ. ನಿನ್ನೆ ವರಿಷ್ಠರನ್ನು ಭೇಟಿಯಾಗಲು ಸಿಎಂ ಸಿದ್ದರಾಮಯ್ಯ ದೆಹಲಿಗೆ ತೆರಳಿದರು. ಈ ವೇಳೆ ಸಂಪುಟ ಪುನಾರಚನೆ ಕುರಿತು ಸುದೀರ್ಘವಾಗಿ ಚರ್ಚಿಸಿದ್ದಾರೆ. ನಾವೆಲ್ಲ ಸೇರಿ ಚರ್ಚೆ ಮಾಡಿ ರಾಹುಲ್ ಗಾಂಧಿ ಅವರಿಗೆ ವರದಿ ಕೊಡೋಣ ಅಂತಿಮ ತೀರ್ಮಾನ ಅವರೇ ತೆಗೆದುಕೊಳ್ಳಲಿ. ಸಂಪುಟ ಪುನಾರಚನೆಯ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರು ತಯಾರಿ ಮಾಡಿಕೊಂಡಿರುವ ಕುರಿತು ಖರ್ಗೆ ಕೇಳಿದ್ದಾರೆ. ಎಷ್ಟು ಸ್ಥಾನ ಬದಲಾವಣೆ ಮಾಡಬೇಕು? ಹಾಗೂ ಯಾರನ್ನು ಕೈಬಿಡಬಹುದು? ಯಾರನ್ನು ಸೇರ್ಪಡೆ ಮಾಡಬಹುದು? ಎಂಬುವುದರ ಕುರಿತು ಮಲ್ಲಿಕಾರ್ಜುನ ಖರ್ಗೆ ಸಿದ್ದರಾಮಯ್ಯ ಅವರಿಂದ ಮಾಹಿತಿ ಪಡೆದಿದ್ದಾರೆ ಮಾಹಿತಿ ಪಡೆದ ಬಳಿಕ ಚರ್ಚಿಸಿ ತಿಳಿಸುವುದಾಗಿ ಖರ್ಗೆ ಭರವಸೆ…
ಮೈಸೂರು : ವ್ಯಕ್ತಿಯ ಮೇಲೆ ಕೆ ಆರ್ ನಗರ ಶಾಸಕ ರವಿಶಂಕರ್ ಹಲ್ಲೆ ಮಾಡಿರುವ ಆರೋಪ ಪ್ರಕರಣಕ್ಕೆ ಸಂಬಂಧಪಟ್ಟಂತೆ ಶಾಸಕರು ಹೊಡೆದಿಲ್ಲ ಬೆನ್ನಿಗೆ ತಟ್ಟಿ ಪಕ್ಕಕ್ಕೆ ಕರೆದು ಕೂರಿಸಿದ್ದಾರೆ ಎಂದು ಶಾಸಕರಿಂದ ಹೊಡೆಸಿಕೊಂಡ ಎನ್ನಲಾದ ವ್ಯಕ್ತಿ ಇದೀಗ ಈ ಕುರಿತು ಸ್ಪಷ್ಟನೆ ನೀಡಿದ್ದಾರೆ. ಈ ವಿಚಾರವಾಗಿ ಕೆ ಆರ್ ನಗರದ ಮಹದೇವ್ ಎನ್ನುವವರು ವಿಡಿಯೋ ಮಾಡಿ ಸ್ಪಷ್ಟನೆ ನೀಡಿದ್ದು ಎಂದು ಸಭೆಯಲ್ಲಿ ನಾನು ಡೈರಿ ವಿಚಾರವಾಗಿ ಸಮಸ್ಯೆ ಹೇಳುತ್ತಿದ್ದೆ ಬೇರೆಯವರು ಬೇರೆ ಬೇರೆ ಸಮಸ್ಯೆ ಹೇಳುತ್ತಿದ್ದರು ಎಲ್ಲವೂ ಗೊಂದಲಮಯವಾಗಿತ್ತು ಶಾಸಕರಿಗೆ ಏನು ಕೇಳಿಸುತ್ತಿರಲಿಲ್ಲ. ನಾನು ಪಕ್ಕದಲ್ಲಿ ನಿಂತಿದ್ದೆ ಆಗ ನನಗೆ ಬೆನ್ನು ತಟ್ಟಿ ಕುಳಿತುಕೊಳ್ಳಲು ಹೇಳಿದರು. ಯಾವುದೇ ಹಲ್ಲೆ ಮಾಡಿಲ್ಲ ಅದು ಸತ್ಯಕ್ಕೆ ದೂರವಾದ ಆರೋಪ ಬೆನ್ನಿಗೆ ತಟ್ಟಿ ಪಕ್ಕಕ್ಕೆ ಕೂರಿಸಿದ್ದನ್ನ ಬಿಟ್ಟರೆ ಯಾವಾಗಲಾಟೆಯು ಆಗಿಲ್ಲ ಎಂದು ಹಲ್ಲಿಗೆ ಒಳಗಾದ ಮಹದೇವ್ ವಿಡಿಯೋ ಮೂಲಕ ಸ್ಪಷ್ಟನೆ ನೀಡಿದ್ದಾರೆ. ಘಟನೆ ಹಿನ್ನೆಲೆ? ಮೈಸೂರು ಜಿಲ್ಲೆಯ ಕೆಆರ್ ನಗರ ಶಾಸಕ ರವಿಶಂಕರ್ ಅವರು ಗ್ರಾಮ…
ಬೆಂಗಳೂರು : ಬೆಂಗಳೂರಿನ ಕೆಂಪೇಗೌಡ ಏರ್ಪೋರ್ಟ್ ನಲ್ಲಿ 14 ಕೋಟಿ ಮೌಲ್ಯದ ಗಾಂಜಾ ಜಪ್ತಿ ಮಾಡಲಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಬಳಿ ಇರುವ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಒಟ್ಟು 14 ಕೋಟಿ ಗಾಂಜಾ ಜಪ್ತಿ ಮಾಡಲಾಗಿದೆ. ಕಳೆದ 18 ದಿನಗಳಲ್ಲಿ 14 ಕೋಟಿ 22 ಲಕ್ಷ ವಶಕ್ಕೆ ಪಡೆದಿದ್ದಾರೆ. ವಿದೇಶದಿಂದ ಅಕ್ರಮವಾಗಿ ಸಾಗಿಸುತ್ತಿದ್ದರು ಪ್ರತ್ಯೇಕ ಪ್ರಕರಣಗಳಲ್ಲಿ 10 ಆರೋಪಿಗಳಿಂದ 38.64 ಕೆಜಿ ಗಾಂಜಾ ಜಪ್ತಿ ಮಾಡಿಕೊಳ್ಳಲಾಗಿದೆ 2.38 ಲಕ್ಷ ಮೌಲ್ಯದ ಇ-ಸಿಗರೇಟ್ 8 ಬಗೆಯ ವಿವಿಧ ಪ್ರಾಣಿಗಳು ವಶಕ್ಕೆ ಪಡೆಯಲಾಗಿದೆ. ಏರ್ಪೋರ್ಟ್ ನಲ್ಲಿ ಪ್ರಯಾಣಿಕರ ತಪಾಸಣೆಯ ವೇಳೆ ಈ ವಸ್ತುಗಳು ಸಿಕ್ಕಿವೆ. 10 ಆರೋಪಿಗಳ ವಿರುದ್ಧ ಕಸ್ಟಮ್ಸ್ ಅಧಿಕಾರಿಗಳು ಪ್ರಕರಣ ದಾಖಲಿಸಿದ್ದಾರೆ.
ಬೆಂಗಳೂರು : ಕನ್ನಡ ಸೇರಿದಂತೆ ವಿವಿಧ ಭಾಷೆಗಳಲ್ಲಿ ಜನಪ್ರಿಯಗೊಂಡಿದ್ದ ದೃಶ್ಯ ಸಿನಿಮಾ ಯಾರಿಗೆ ಗೊತ್ತಿಲ್ಲ ಹೇಳಿ. ತನ್ನ ಕುಟುಂಬ ರಕ್ಷಿಸಿಕೊಳ್ಳಲು ನಿರ್ಮಾಣ ಹಂತದ ಪೊಲೀಸ್ ಠಾಣೆಯಲ್ಲಿಯೇ ಹೆಣ ಹೂತು ಹಾಕುತ್ತಾನೆ. ಈಗ ಅದೇ ಮಾದರಿಯಲ್ಲಿ ಇದೀಗ ಬೆಂಗಳೂರಿನಲ್ಲಿ ಇಂಜಿನಿಯರ್ ನನ್ನ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಬೆಂಗಳೂರಲ್ಲಿ ನಡೆದಿದೆ. ಹೌದು ಆನೇಕಲ್ ತಾಲೂಕಿನ ಅತ್ತಿಬೆಲೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಕೊಲೆ ನಡೆದಿದೆ. ಕೊಟ್ಟ ಸಾಲ ವಾಪಸ್ ಕೇಳಿದ್ದಕ್ಕೆ ಆರೋಪಿ ಕೊಲೆ ಮಾಡಿ ನಾಟಕ ಮಾಡಿದ್ದಾನೆ.ಇಂಜಿನಿಯರನ್ನು ಕೊಲೆಗೈದು ಮೃತ ದೇಹವನ್ನು ಮನೆಯಲ್ಲಿಯೇ ಹಂತಕ ಹೂತು ಹಾಕಿದ್ದ. ಅತ್ತಿಬೆಲೆ ಪೊಲೀಸರ ತನಿಖೆಯ ವೇಳೆ ಕೊಲೆ ರಹಸ್ಯ ಇದೀಗ ಬಯಲಾಗಿದೆ. ಆಂಧ್ರಪ್ರದೇಶದ ಕುಪ್ಪಂ ಮೂಲದ ಶ್ರೀನಾಥ್ ಎನ್ನುವವರನ್ನು ಕೊಲೆ ಮಾಡಲಾಗಿದೆ. ಅತ್ತಿಬೆಲೆಯಲ್ಲಿ ನೆರಳೂರಿನಲ್ಲಿ ಪತ್ನಿ ಮತ್ತು ಮಗುವಿನೊಂದಿಗೆ ಶ್ರೀನಾಥ್ ವಾಸವಿದ್ದರು. ಹಣ ಡಬಲ್ ಮಾಡಿಕೊಡುವುದಾಗಿ ಹಂತಕ ಪ್ರಭಾಕರ್ ಶ್ರೀನಾಥ್ ಗೆ ಹೇಳಿದ್ದಾನೆ. ಈ ವೇಳೆ ಸೋದರ ಸಂಬಂಧಿತರಿಂದ ಶ್ರೀನಾಥ್ ಪ್ರಭಾಕರ್ ಗೆ 40,00,000 ಹಣ…
ಯಾದಗಿರಿ : ಯಾದಗಿರಿಯಲ್ಲಿ ಭೀಕರ ಅಗ್ನಿ ಅವಘಡ ಒಂದು ಸಂಭವಿಸಿದ್ದು ಶಾರ್ಟ್ ಸರ್ಕ್ಯೂಟ್ ನಿಂದ ಕಾಟನ್ ಮಿಲ್ ಒಂದು ಸಂಪೂರ್ಣವಾಗಿ ಹೊತ್ತಿ ಉರಿದಿದೆ. ಈ ವೇಳೆ ಮಿಲ್ ನಲ್ಲಿ ಇದ್ದಂತಹ ಕೋಟ್ಯಾಂತರ ರೂಪಾಯಿ ಮೌಲ್ಯದ ವಸ್ತುಗಳು ಸಂಪೂರ್ಣವಾಗಿ ಸುಟ್ಟು ಕರಕಲಾಗಿರುವ ಘಟನೆ ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಹುಲಕಲ್ ನಲ್ಲಿ ನಡೆದಿದೆ. ಶಹಾಪುರ ತಾಲೂಕಿನ ಹುಲಕಲ್ ನಲ್ಲಿ ಶ್ರೀ ಮಣಿಕಂಠ ಕಾಟನ್ ಜಿನ್ನಿಂಗ್ ಇಂಡಸ್ಟ್ರೀಸ್ ನಲ್ಲಿ ಬೆಂಕಿ ಅವಘಡ ಸಂಭವಿಸಿದೆ. ಬೆಂಕಿ ಅವಘಡದಿಂದ ಕೋಟ್ಯಂತರ ರೂಪಾಯಿ ಮೌಲ್ಯದ ಹತ್ತಿ ಸುಟ್ಟು ಭಸ್ಮವಾಗಿದೆ. ಈ ಒಂದು ಕಾಟನ್ ಮಿಲ್ , ಗುರು ಮಣಿಕಂಠ ಎಂಬುವವರಿಗೆ ಸೇರಿದೆ. ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಹತ್ತಿಕೊಂಡಿದೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ. ಘಟನೆಯಲ್ಲಿ ಸುಮಾರು 15 ಕೋಟಿಗೂ ಹೆಚ್ಚು ಯಂತ್ರೋಪಕರಣಗಳು ಹಾಗೂ ಹತ್ತಿ ಸುಟ್ಟು ಕರಕಲಾಗಿದೆ, ಘಟನಾ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿಗಳು ದೌಡಾಯಿಸಿ ಬೆಂಕಿ ನಂದಿಸಿದ್ದಾರೆ. ಈ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ…














