Subscribe to Updates
Get the latest creative news from FooBar about art, design and business.
Author: kannadanewsnow05
ಉತ್ತರಕನ್ನಡ : ರಾಜ್ಯದಲ್ಲಿ ವರುಣನ ಆರ್ಭಟ ಮುಂದುವರೆದಿದ್ದು, ಬೆಂಗಳೂರು ಸೇರಿದಂತೆ ಉತ್ತರ ಕರ್ನಾಟಕ, ಕರಾವಳಿ ಭಾಗದಲ್ಲಿ ಭಾರಿ ಮಳೆ ಆಗುತ್ತಿದೆ. ಇದೀಗ ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ಚಿಕನ್ ಅಂಗಡಿಗೆ ಚರಂಡಿ ನೀರು ನುಗ್ಗೆ ಸುಮಾರು 50ಕ್ಕೂ ಹೆಚ್ಚು ಕೋಳಿಗಳು ಸಾವನ್ನಪ್ಪಿವೆ. ಹೌದು ಉತ್ತರ ಕನ್ನಡ ಜಿಲ್ಲೆಯಲ್ಲಿ ಧಾರಾಕಾರ ಮಳೆಯಿಂದ ಬರಿ ಅವಾಂತರ ಸೃಷ್ಟಿಯಾಗಿದ್ದು, ಕಾರವಾರದಲ್ಲಿ ರಾತ್ರಿ ಇಡೀ ಸುರಿದ ಮಳೆಯಿಂದ ಜನ ಜೀವನ ಸಂಪೂರ್ಣವಾಗಿ ಅಸ್ತವ್ಯಸ್ತವಾಗಿದೆ.ಚಿಕನ್ ಅಂಗಡಿಗೆ ಚರಂಡಿ ನೀರು ನುಗ್ಗಿದ ಪರಿಣಾಮ 50ಕ್ಕೂ ಹೆಚ್ಚು ಕೋಳಿಗಳು ಸಾವನ್ನಪ್ಪಿವೆ ಅನುಮಾನ ದೇವಸ್ಥಾನದ ಬಳಿಯ ಚಿಕ್ಕನಂಗಡಿಯಲ್ಲಿ ಈ ಒಂದು ಘಟನೆ ನಡೆದಿದೆ. ಬಾಗಲಕೋಟೆಯಲ್ಲಿ ಪೆಟ್ರೋಲ್ ಬಂಕ್ ಜಲಾವೃತ! ಭಾರಿ ಮಳೆಗೆ ಪೆಟ್ರೋಲ್ ಬಂಕ್ ಸಹ ಜಲಾವೃತವಾಗಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಗುಳೇದಗುಡ್ಡ ತಾಲೂಕಿನಲ್ಲಿ ನಡೆದಿದೆ. ಪೆಟ್ರೋಲ್ ಬಂಕ್ ಭಾರಿ ಮಳೆಯಿಂದಾಗಿ ಸಂಪೂರ್ಣವಾಗಿ ಕೆರೆಯಂತಾಗಿದೆ. ಯಾವುದೇ ವಾಹನಗಳು ಓಡಾಡದಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು ಸೇತುವೆ ಮೇಲೆ ಭಾರಿ ಪ್ರಮಾಣದಲ್ಲಿ…
ಚಿಕ್ಕಬಳ್ಳಾಪುರ : ಜಮೀನು ವಿವಾದಕ್ಕೆ ಸಂಬಂಧಪಟ್ಟಂತೆ ಮಗನ ಮೇಲೆ ಮಚ್ಚಿನಿಂದ ಭೀಕರವಾಗಿ ಹಲ್ಲೆ ನಡೆಸಲಾಗಿತ್ತು. ಈ ವಿಚಾರ ತಿಳಿದು ಅಲ್ಲಿಗೆ ಒಳಗಾದ ಯುವಕನ ತಾಯಿಯೊಬ್ಬರು ಹೃದಯಘಾತದಿಂದ ಸಾವನಪ್ಪಿರುವ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ಕೋರೆನಹಳ್ಳಿ ಎಂಬಲ್ಲಿ ನಡೆದಿದೆ. ಹೌದು ಜಮೀನು ವಿವಾದ ಸಂಬಂಧ ಯುವಕನ ಮೇಲೆ ಹಲ್ಲೆನಡೆಸಿದ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ಕೋರಿನಹಳ್ಳಿ ನಡೆದಿತ್ತು, ಕೊಲೆ ಆರೋಪಿ ಶಿವಣ್ಣ ಅಲಿಯಾಸ್ ಶಿವಶಂಕರ ರೆಡ್ಡಿ ಅರೆಸ್ಟ್ ಆಗಿದ್ದಾನೆ. ಪೇರೆಸಂದ್ರ ಠಾಣೆಯ ಪೊಲೀಸರಿಂದ ಆರೋಪಿ ಶಿವಣ್ಣ ಬಂಧನವಾಗಿದೆ. ಜಮೀನು ವಿವಾದ ಸಂಬಂಧ ಯುವಕ ನವೀನ್ ಎನ್ನುವವನ ಮೇಲೆ ಮಚ್ಚಿನಿಂದ ಆರೋಪಿ ಶಿವಣ್ಣ ಅಲಿಯಾಸ್ ಶಿವಶಂಕರ ದಾಳಿ ನಡೆಸಿದ್ದ. ಮಗನ ಮೇಲಿನ ದಾಳಿ ವಿಚಾರ ಕೇಳಿ ನವೀನ್ ತಾಯಿ ಯಶೋದಮ್ಮ ಮೃತಪಟ್ಟಿದ್ದರು. ಸದ್ಯ ಆರೋಪಿ ಶಿವಣ್ಣನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಬೆಂಗಳೂರು : ವಿಧಾನ ಪರಿಷತ್ ಗೆ ನೇಮಕ ಮಾಡದಂತೆ ತಮ್ಮ ವಿರುದ್ಧದ ಆರೋಪಗಳ ಸಂಬಂಧ ದಿನೇಶ್ ಅಮೀನ್ ಮಟ್ಟು ಅವರು ರಾಜ್ಯಪಾಲರಿಗೆ ಪತ್ರ ಬರೆಯುವ ಮೂಲಕ ಸ್ಪಷ್ಟೀಕರಣ ನೀಡಿದ್ದಾರೆ. ಜಿ ಎಮ್ ಗಾಡ್ಕರ್ ತಮ್ಮ ವಿರುದ್ಧ ಮಾಡಿರುವ ಆರೋಪಕ್ಕೆ ಸ್ಪಷ್ಟೀಕರಣ ನೀಡಿದ್ದು, ಜಿಎಂ ಗಾಡ್ಕರ್ ವಿರುದ್ಧ ಕೇಸ್ ದಾಖಲಿಸಲು ಆದೇಶ ನೀಡುವಂತೆ ದಿನೇಶ್ ಅಮೀನ್ ಮಟ್ಟು ರಾಜ್ಯಪಾಲರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ. ಪತ್ರದಲ್ಲಿ ನನಗೆ ಅಪರಿಚಿತನಾದ ಜಿ.ಎಂ.ಗಾಡ್ಕರ್ ಎಂಬ ವ್ಯಕ್ತಿ ನನ್ನ ಮೇಲೆ ಸುಳ್ಳು ಆರೋಪಗಳನ್ನು ಹೊರಿಸಿ ತಮಗೆ ನೀಡಿರುವ ದೂರು ಕೆಲವು ಪತ್ರಿಕೆಗಳು, ಚಾನೆಲ್ ಗಳು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟ/ಪ್ರಸಾರವಾಗಿರುವ ಹಿನ್ನೆಲೆಯಲ್ಲಿ ಈ ಸ್ಪಷ್ಟಿಕರಣ ಎಂದು ಉಲ್ಲೆಖಿಸಿದ್ದಾರೆ. ಮೊದಲನೆಯದಾಗಿ, ನಾನು ತುಮಕೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಸುಳ್ಳು ದಾಖಲೆಗಳನ್ನು ಸಲ್ಲಿಸಿ ನಿವೇಶನ ಪಡೆದಿದ್ದೇನೆ ಎನ್ನುವ ಆರೋಪ ಸಂಪೂರ್ಣವಾಗಿ ಸತ್ಯಕ್ಕೆ ದೂರವಾಗಿದ್ದು ಮತ್ತು ನಿರಾಧಾರವಾದುದು. ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ನಾನು ಯಾವುದೇ ನಿದೇಶನ ಪಡೆದಿಲ್ಲ. ಕೇಂದ್ರ ಸರ್ಕಾರದ ಯೋಜನೆಯಾದ ಐಡಿಎಸ್…
ತೀರ್ಥಹಳ್ಳಿ : ಕಳೆದ ಕೆಲವು ದಿನಗಳ ಹಿಂದೆ ಅಷ್ಟೇ ಕಾಮಿಡಿ ಕಿಲಾಡಿಗಳು ಖ್ಯಾತಿಯ ಹಾಗೂ ಕಾಂತರಾ ಸಿನಿಮಾದಲ್ಲಿ ನಟಿಸುತ್ತಿದ್ದ ರಾಕೇಶ್ ಪೂಜಾರಿ ಹೃದಯಾ ಘಾತದಿಂದ ಸಾವನ್ನಪ್ಪಿದ್ದರು. ಇದೀಗ ಕಾಂತಾರ ಚಲನಚಿತ್ರದ ಮತ್ತೋರ್ವ ಕಲಾವಿದನೋಬ್ಬ ಹೃದಯಾಘಾತದಿಂದ ಮೃತಪಟ್ಟ ಘಟನೆ ತೀರ್ಥಹಳ್ಳಿಯ ಆಗುಂಬೆ ಬಳಿ ಬುಧವಾರ ರಾತ್ರಿ ನಡೆದಿದೆ. ಹೌದು ಹೃದಯಾಘಾತದಿಂದ ಸಾವನಪ್ಪಿದ ಮಿಮಿಕ್ರಿ ಕಲಾವಿದನನ್ನು ವಿಜು ವಿ. ಕೆ ಎಂದು ತಿಳಿದುಬಂದಿದೆ. ವಿಜು ಕೇರಳದ ತ್ರಿಶೂರ್ ಮೂಲದ ಮಿಮಿಕ್ರಿ ಕಲಾವಿದ ಕಾಂತರ ಚಲನಚಿತ್ರಕ್ಕಾಗಿ ಆಗುಂಬೆ ಸಮೀಪದ ಹೋಂ ಸ್ಟೇ ಒಂದರಲ್ಲಿ ತಂಗಿದ್ದರು. ಅವರಿಗೆ ನಿನ್ನೆ ರಾತ್ರಿ ಏಕಾಏಕಿ ಎದೆ ನೋವು ಕಾಣಿಸಿಕೊಂಡಿದೆ. ತಕ್ಷಣವೇ ಅವರನ್ನ ತೀರ್ಥಹಳ್ಳಿಯ ಆಸ್ಪತ್ರೆಗೆ ರವಾನಿಸುವಾಗ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾರೆ. ತೀರ್ಥಹಳ್ಳಿಯ ಜೆ.ಸಿ ಆಸ್ಪತ್ರೆಯಲ್ಲಿ ಮೃತ ದೇಹ ಇರಿಸಲಾಗಿದೆ. ಕೇರಳದಿಂದ ಕುಟುಂಬಸ್ಥರು ಆಗಮಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ಹುಬ್ಬಳ್ಳಿ : ರಾಜ್ಯದಲ್ಲಿ ಭಾರಿ ಮಳೆ ಆಗುತ್ತಿದ್ದು, ಬೆಂಗಳೂರು ಮಹಾನಗರ ಸೇರಿದಂತೆ ಇತರೆ ಜಿಲ್ಲೆಗಳಲ್ಲಿ ವರುಣ ಅಬ್ಬರಿಸುತ್ತಿದ್ದಾನೆ. ಇದೀಗ ಹುಬ್ಬಳ್ಳಿಯಲ್ಲಿ ಹೊಲದಿಂದ ಮನೆಗೆ ತೆರಳುವಾಗ ಭಾರಿ ಮಳೆಯಿಂದ ನೀರಿನಲ್ಲಿ ಕೊಚ್ಚಿ ಹೋಗಿರುವ ಘಟನೆ ಹುಬ್ಬಳ್ಳಿಯ ಬೆಳಗಲಿ ಕ್ರಾಸ್ ಬಳಿ ಈ ಒಂದು ಘಟನೆ ನಡೆದಿದೆ. ಹೌದು ಹುಬ್ಬಳ್ಳಿಯಲ್ಲಿ ಮಳೆಯಲ್ಲಿ ವ್ಯಕ್ತಿ ಒಬ್ಬ ಕೊಚ್ಚಿ ಹೋಗಿರುವ ಘಟನೆ ನಡೆದಿದೆ. ಬೆಳಗಲಿ ಕ್ರಾಸ್ ರಸ್ತೆ ಪಕ್ಕದಲ್ಲಿರುವ ಚರಂಡಿಯಲ್ಲಿ ಈ ಒಂದು ಘಟನೆ ನಡೆದಿದೆ. ಹುಸೇನ್ ಎನ್ನುವ ವ್ಯಕ್ತಿ ಕೊಚ್ಚಿ ಹೋಗಿದ್ದಾನೆ. ಹೊಲದಿಂದ ಮನೆಗೆ ತೆರಳುವಾಗ ಹುಸೇನ್ ಕೊಚ್ಚಿ ಹೋಗಿದ್ದಾನೆ. ನಿನ್ನೆ ರಾತ್ರಿ 10 ಗಂಟೆ ಸುಮಾರಿಗೆ ನೀರಿನಲ್ಲಿ ಕಾಲು ಜಾರಿ ಬಿದ್ದು ಹುಸೇನ್ ಕೊಚ್ಚಿ ಹೋಗಿದ್ದಾನೆ. ಸದ್ಯ ಹುಸೇನ್ ಗಾಗಿ ಪೊಲೀಸರು ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿಗಳು ಹುಡುಕಾಟ ನಡೆಸುತ್ತಿದ್ದಾರೆ.
ಗೌರಿಬಿದನೂರು : ಜೂ.11: ಕುಸುಮ್- ಸಿ ಯೋಜನೆಯಿಂದಾಗಿ ರೈತರ ಕೃಷಿ ಪಂಪ್‌ಸೆಟ್‌ಗಳಿಗೆ ಇನ್ನು ಮುಂದೆ ಹಗಲಿನ ವೇಳೆಯೇ 7 ಗಂಟೆಗಳ ಕಾಲ ಸಮರ್ಪಕ ವಿದ್ಯುತ್ ಪೂರೈಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಇಂಧನ ಇಲಾಖೆ ಮತ್ತು ಬೆಸ್ಕಾಂ ವತಿಯಿಂದ ತೊಂಡೇಬಾವಿ ಹೋಬಳಿ ಹನುಮೇನಹಳ್ಳಿಯಲ್ಲಿ ಸ್ಥಾಪಿಸಿರುವ ಸೋಲಾರ್ ಘಟಕವನ್ನು ಬುಧವಾರ ಲೋಕಾರ್ಪಣೆಗೊಳಿಸಿದ ಬಳಿಕ ಪಟ್ಟಣದ ನೇತಾಜಿ ತಾಲೂಕು ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಮಾತನಾಡಿದ ಅವರು, “ರೈತರಿಗೆ ಹಗಲು ವೇಳೆ ಸಮರ್ಪಕ ವಿದ್ಯುತ್ ಪೂರೈಸುವುದೇ ಕುಸುಮ್- ಸಿ ಯೋಜನೆಯ ಉದ್ದೇಶವಾಗಿದೆ,” ಎಂದರು. “ಕುಸುಮ್- ಸಿ ಯೋಜನೆಯನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿತ್ತು. 2021ರಲ್ಲಿ ರಾಜ್ಯದಲ್ಲೂ ಇದನ್ನು ಜಾರಿಗೊಳಿಸುವ ಸಂಬಂಧ ಆಗಿನ ಬಿಜೆಪಿ ಸರ್ಕಾರ ಸಚಿವ ಸಂಪುಟದಲ್ಲಿ ತೀರ್ಮಾನ ಕೈಗೊಂಡಿತ್ತು. ಆದರೆ, ನಂತರ 2 ವರ್ಷ ಅಧಿಕಾರದಲ್ಲಿದ್ದರೂ ಯೋಜನೆ ಜಾರಿಗೊಳಿಸುವ ಪ್ರಯತ್ನ ಮಾಡಲಿಲ್ಲ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದು ಕೆ.ಜೆ.ಜಾರ್ಜ್ ಅವರು ಸಚಿವರಾದ ಮೇಲೆ ರಾಜ್ಯದಲ್ಲಿ ಕುಸುಮ್- ಸಿ ಯೋಜನೆ ಅನುಷ್ಠಾನ ಆರಂಭಿಸಲಾಯಿತು,” ಎಂದರು. “ಕುಸುಮ್-ಸಿ…
ಬೆಂಗಳೂರು : ಬೆಂಗಳೂರಿನಲ್ಲಿ ಭೀಕರವಾದ ಅಪಘಾತ ಸಂಭವಿಸಿದ್ದು, ಕೆಎಸ್ಆರ್ಟಿಸಿ ಬಸ್ ಚಕ್ರಕ್ಕೆ ಸಿಲುಕಿ ಬೈಕ್ ಸವಾರ ಸಾವನಪ್ಪಿದ್ದಾರೆ. ರಾಜಕುಮಾರ್ ರಸ್ತೆಯ ಪಂಜಾಬ್ ನ್ಯಾಷನಲ್ ಬ್ಯಾಂಕ್ ಬಳಿ ನಿನ್ನೆ ಸಂಜೆ ಈ ಒಂದು ಭೀಕರ ಅಪಘಾತ ಸಂಭವಿಸಿದೆ. ಮೃತ ಬೈಕ್ ಸವಾರರನ್ನು ನಿವೃತ್ತ ಸಿ ಎ ಆರ್ ಸಿಬ್ಬಂದಿ ಹನುಮಂತರಾಯಪ್ಪ (71) ಎಂದು ತಿಳಿದುಬಂದಿದೆ. ಹನುಮಂತರಾಯಪ್ಪ ಬಾಗಲಕುಂಟೆಯಿಂದ ಕೆಲಸದ ನಿಮಿತ್ಯ ರಾಜಾಜಿನಗರಕ್ಕೆ ಬಂದಿದ್ದರು. ನಿನ್ನೆ ಸಂಜೆ 4:30ಗೆ ಹನುಮಂತರಾಯಪ್ಪ ಬೈಕ್ ನಲ್ಲಿ ಮನೆಗೆ ಹೋಗುತ್ತಿದ್ದರು. ಈ ವೇಳೆ ಪಕ್ಕದಲ್ಲಿ ಹೋಗುತ್ತಿದ್ದ ಕೆ ಎಸ್ ಆರ್ ಟಿ ಸಿ ಬಸ್ ಕೆಳಗೆ ಸಿಲುಕಿ ಬಿದ್ದಿದ್ದಾರೆ. ಗಾಯಗೊಂಡಿದ್ದ ಹನುಮಂತ ರಾಯಪ್ಪನನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಆದರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗಿದೆ ಹನುಮಂತ ರಾಯಪ್ಪ ಸಾವನ್ನಪ್ಪಿದ್ದಾರೆ. ರಾಜಾಜಿನಗರ ಸಂಚಾರ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.
ಬೆಂಗಳೂರು : 18 ವರ್ಷಗಳ ಬಳಿಕ ಚೊಚ್ಚಲ ಐಪಿಎಲ್ ಟ್ರೋಫಿ ಗೆದ್ದ ಆರ್ಸಿಬಿ ತಂಡದ ಆಟಗಾರರಿಗೆ ಬೆಂಗಳೂರಿನ ವಿಧಾನಸೌಧದ ಬಳಿ ಅಭಿನಂದನಾ ಸಮಾರಂಭ ಹಮ್ಮಿಕೊಳ್ಳಲಾಗಿತ್ತು. ಕಳೆದ ಜೂನ್ 4ರಂದು ಈ ಒಂದು ಸಮಾರಂಭ ವೇಳೆ ಕಾಲ್ತುಳಿತದಲ್ಲಿ 11 ಜನರು ಸಾವನ್ನಪ್ಪಿದ್ದರು. ಇದೀಗ ಈ ಒಂದು ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಂದು ಹೈ ಕೋರ್ಟ್ ಸ್ವಯಂ ಪ್ರೇರಿತವಾಗಿ ಪಿಐಎಲ್ ವಿಚಾರಣೆ ನಡೆಸಲಿದೆ. ಹೌದು ಕಾಲ್ತುಳಿತ ಪ್ರಕರಣದಲ್ಲಿ 11 ಜನರು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಂದು ಹೈಕೋರ್ಟ್ ಸ್ವಯಂ ಪ್ರೇರಿತ ಪಿಐಎಲ್ ವಿಚಾರಣೆ ನಡೆಸಲಿದೆ ನ್ಯಾ.ವಿ ಕಾಮೇಶ್ವರರಾವ್ ಹಾಗು ನ್ಯಾ. ಸಿಎಂ ಜೋಶಿ ಅವರ ಪೀಠದಲ್ಲಿ ವಿಚಾರಣೆ ನಡೆಯಲಿದೆ. ಸರ್ಕಾರಕ್ಕೆ ಹೈಕೋರ್ಟ್ ಸಾಲು ಸಾಲು ಪ್ರಶ್ನೆ ಕೇಳಿತ್ತು. ಹಾಗಾಗಿ ಇಂದು ಮುಚ್ಚಿದ ಲಕೋಟೆಯಲ್ಲಿ ಸರ್ಕಾರ ಹೈಕೋರ್ಟಿಗೆ ಉತ್ತರ ನೀಡಲಿದೆ. ವಿಜಯೋತ್ಸವ ಆಚರಣೆಗೆ ನಿರ್ಧರಿಸಿದವರು ಯಾರು? ಪ್ರಕ್ರಿಯೆ ಹೇಗಿತ್ತು? ಟ್ರಾಫಿಕ್ ನಿಯಂತ್ರಿಸಲು ಅನುಸರಿಸಿದ ಕ್ರಮಗಳೇನು? ಜನರ ಗುಂಪನ್ನು ನಿಯಂತ್ರಿಸಲು ಕೈಗೊಂಡ ಕ್ರಮಗಳೇನು? ಸ್ಥಳದಲ್ಲಿ ಒದಗಿಸಿದ್ದ ವೈದ್ಯಕೀಯ ಮತ್ತು…
ಬೆಂಗಳೂರು : 2025 ಹೊಸ ವರ್ಷ ಆರಂಭವಾದಾಗಿನಿಂದ ಸರ್ಕಾರ KSRTC ಪ್ರಯಾಣದ ದರ, ಮೆಟ್ರೋ ಟಿಕೆಟ್ ಪ್ರಯಾಣದ ದರ ಹಾಗು ಹಾಲಿನ ದರ ಏರಿಕೆ ಮಾಡಿತ್ತು. ಇದೀಗ ಬೆಂಗಳೂರು ಜನತೆಗೆ ಮತ್ತೊಂದು ಶಾಕ್ ಎದುರಾಗಿದ್ದು, ಶೀಘ್ರದಲ್ಲೇ ಆಟೋ ಪ್ರಯಾಣದ ದರ 18 ರೂಪಾಯಿಗೆ ಏರಿಕೆ ಆಗುವ ಸಾಧ್ಯತೆ ಇದೆ ಎನ್ನಲಾಗಿದೆ. ಹೌದು ರಾಜ್ಯದ ಜನತೆ ಹಲವು ಬೆಲೆ ಏರಿಕೆಗಳಿಂದ ತತ್ತರಿಸಿರುವ ನಡುವೆಯೇ ಆಟೋ ಪ್ರಯಾಣ ದರ ಕೂಡ ಏರಿಕೆಯಾಗುವ ಸಾಧ್ಯತೆಯಿದೆ. ಆಟೋರಿಕ್ಷಾ ದರವು ಈಗಿರುವ 30 ರೂ.ಗಳಿಂದ 36 ರೂ.ಗಳಿಗೆ ಮತ್ತು ನಂತರದ ಪ್ರತಿ ಕಿಲೋಮೀಟರ್ ಶುಲ್ಕವು 15 ರೂ.ಗಳಿಂದ 18 ರೂ.ಗಳಿಗೆ ಏರಿಕೆಯಾಗುವ ನಿರೀಕ್ಷೆಯಿದೆ ಎಂದು ಉನ್ನತ ಮೂಲಗಳು ತಿಳಿಸಿವೆ. ಬೆಂಗಳೂರು ನಗರ ಡಿಸಿ ಕಚೇರಿಯ ಮೂಲಗಳ ಪ್ರಕಾರ, ಪರಿಷ್ಕೃತ ದರಗಳು ರೂ 36 ಮತ್ತು ರೂ 18 ಆಗಿದ್ದು, ಬೆಂಗಳೂರು ನಗರ ಡಿಸಿ ಜಗದೀಶ ಜಿ ಅವರ ಅನುಮೋದನೆಗಾಗಿ ಕಾಯುತ್ತಿವೆ. ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಡೆದ ಕಾಲ್ತುಳಿತದ ತನಿಖೆಯ…
ಬೆಂಗಳೂರು : ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ ವೀಕ್ಷಕರು ಅಂದುಕೊಂಡತೇ ಹನುಮಂತ ಗೆದ್ದು ಬೀಗಿದ್ದಾನೆ. ತ್ರಿವಿಕ್ರಮ್ ರನ್ನರ್ ಅಪ್ ಆಗಿದ್ದಕ್ಕೆ ಖುಷಿಯಾಗಿದ್ದಾರೆ. ಎಲ್ಲ ಖುಷಿ ಖುಷಿಯಾಗಿರುವಾಗಲೇ ಕಿಚ್ಚ ಸುದೀಪ್ ಅಭಿಮಾನಿಗಳು ಮಾತ್ರ ಬೇಸರದಲ್ಲಿದ್ದಾರೆ. ಈ ಹಿಂದೆ ಕಿಚ್ಚ ಸುದೀಪ್ ಬಿಗ್ ಬಾಸ್ ನಿರೂಪಣೆ ಮಾಡುವುದು ಇದೇ ಕೊನೆ ಎಂದು ಈಗಾಗಲೇ ಹೇಳಿದ್ದಾರೆ. ಹೌದು ಬಿಗ್ ಬಾಸ್ 11 ಸೀಸನ್ ಬಳಿಕ ಕಿಚ್ಚ ಸುದೀಪ್ ಅವರು ವಿದಾಯ ಹೇಳಿದ್ದು, ಅಭಿಮಾನಿಗಳು ತೀವ್ರ ನೋವಿನಲ್ಲಿದ್ದಾರೆ. ಕಿಚ್ಚ ಸುದೀಪ್ ಅವರೇ ನಿರೂಪಣೆ ಮಾಡ್ಬೇಕು ಎಂದು ಅಭಿಮಾನಿಗಳು ಬಹಿರಂಗವಾಗಿ ಹೇಳಿಕೆ ನೀಡಿದ್ದು, ಇದೀಗ ಬಿಗ್ ಬಾಸ್ ಕನ್ನಡ 12 ಶೋ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಆರಂಭವಾಗಿದೆ. ಕಲರ್ಸ್ ಕನ್ನಡ ಫಿನಾಲೆಯಲ್ಲಿದ್ದ ಮೊದಲ ಮೂವರು ಸ್ಪರ್ಧಿಗಳನ್ನು ಇಟ್ಟುಕೊಂಡು ಪತ್ರಿಕಾಗೋಷ್ಠಿಯನ್ನು ನಡೆಸಿತ್ತು. ಅದರಲ್ಲಿ ಮುಂದಿನ ಸೀಸನ್‌ಗೆ ಯಾರು ಹೋಸ್ಟ್ ಅನ್ನೋ ಚಿಕ್ಕದೊಂದು ಸುಳಿವನ್ನು ಬಿಟ್ಟುಕೊಟ್ಟಿದ್ದಾರೆ. ಮುಂದಿನ ಸೀಸನ್ ಬಗ್ಗೆ ಕಲರ್ಸ್ ಕನ್ನಡ ಕೊಟ್ಟ ಸುಳಿವು ನೀಡಿತ್ತು.…












