Author: kannadanewsnow05

ನವದೆಹಲಿ : ಇತ್ತೀಚಿನ ದಿನಗಳಲ್ಲಿ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಅತ್ಯಾಚಾರ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ಅದರಲ್ಲೂ ಕಳೆದ ಕೆಲವು ತಿಂಗಳ ಹಿಂದೆ ಕಲ್ಕತ್ತಾದಲ್ಲಿ ಟ್ರೇನಿ ವೈದ್ಯೆಯ ಮೇಲೆ ನಡೆಡ್ಸ್ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿತ್ತು. ಇದೀಗ ಭಾರತದಲ್ಲಿ 18 ವರ್ಷ ತುಂಬೋಕು ಮುನ್ನ ಶೇ.30 ರಷ್ಟು ಹೆಣ್ಣು ಮಕ್ಕಳಿಗೆ ಲೈಂಗಿಕ ಕಿರುಕುಳ ನೀಡಲಾಗುತ್ತೆ ಎಂದು ತಿಳಿದುಬಂದಿದೆ. ಹೌದು ದಿ ಲ್ಯಾನ್ಸೆಟ್ ಜರ್ನಲ್‌ನಲ್ಲಿ ಪ್ರಕಟವಾದ ವಿಶ್ಲೇಷಣೆಯ ಪ್ರಕಾರ, 2023 ರಲ್ಲಿ ಭಾರತದಲ್ಲಿ ಶೇಕಡಾ 30 ಕ್ಕೂ ಹೆಚ್ಚು ಹುಡುಗಿಯರು ಮತ್ತು ಶೇಕಡಾ 13 ಕ್ಕೂ ಹೆಚ್ಚು ಹುಡುಗರು 18 ವರ್ಷ ತುಂಬುವ ಮೊದಲು ಲೈಂಗಿಕ ದೌರ್ಜನ್ಯವನ್ನು ಅನುಭವಿಸಿದ್ದಾರೆ. 1990 ರಿಂದ 2023 ರ ನಡುವೆ 200 ಕ್ಕೂ ಹೆಚ್ಚು ದೇಶಗಳಲ್ಲಿ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯದ ಹರಡುವಿಕೆಯನ್ನು ಅಂದಾಜಿಸಿದಾಗ, ದಕ್ಷಿಣ ಏಷ್ಯಾದಲ್ಲಿ ಹುಡುಗಿಯರಿಗೆ ಅತಿ ಹೆಚ್ಚು ದರಗಳು ದಾಖಲಾಗಿವೆ ಎಂದು ಅಧ್ಯಯನವು ಕಂಡುಹಿಡಿದಿದೆ. ಬಾಂಗ್ಲಾದೇಶದಲ್ಲಿ ಶೇ.…

Read More

ಬೆಂಗಳೂರು : ಮೇ 10 ರವರೆಗೆ ಕರ್ನಾಟಕದ ಉತ್ತರ ಒಳನಾಡು ಮತ್ತು ಕರ್ನಾಟಕದ ದಕ್ಷಿಣ ಒಳನಾಡುಗಳಲ್ಲಿ ಗುಡುಗು, ಮಿಂಚು ಮತ್ತು ಬಿರುಗಾಳಿ ಬೀಸುವ ಸಾಧ್ಯತೆ ಇದೆ. ಮುಂದಿನ ದಿನಗಳಲ್ಲಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆ ಆಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಭಾರತ ಹವಾಮಾನ ಇಲಾಖೆ (IMD) ನ ಪ್ರಕಾರ, ರಾಜ್ಯದಲ್ಲಿ ಮತ್ತೆ ಮಳೆಯ ಮುನ್ಸೂಚನೆಗಳು ಕೇಳಿಬರುತ್ತಿದ್ದು, ಬಂಗಾಳಕೊಲ್ಲಿಯ ಚಂಡಮಾರುತದ ಪರಿಣಾಮವಾಗಿ ಹಲವು ಜಿಲ್ಲೆಗಳಲ್ಲಿ ವಾತಾವರಣ ಬದಲಾಗುತ್ತಿದೆ. ಬೆಂಗಳೂರಿನಲ್ಲಿ ಬರುವ ದಿನಗಳಲ್ಲಿ ಗುಡುಗು ಸಹಿತ ಮಳೆಯ ಸಾಧ್ಯತೆ ಇದೆ. ಬಂಗಾಳಕೊಲ್ಲಿಯಲ್ಲಿ ಚಂಡಮಾರುತ ಉಂಟಾಗಿದ್ದು, ಕ್ರಮೇಣ ಕರ್ನಾಟಕ ಮತ್ತು ತಮಿಳುನಾಡು ಕಡೆಗೆ ಚಲಿಸುತ್ತಿದ್ದು, ಬೆಂಗಳೂರು, ಕೋಲಾರ, ರಾಮನಗರ, ಚಿಕ್ಕಬಳ್ಳಾಪುರ, ಮೈಸೂರು, ಚಾಮರಾಜನಗರ, ಹಾಸನ, ತುಮಕೂರು, ದಾವಣಗೆರೆ, ಶಿವಮೊಗ್ಗ, ಬಳ್ಳಾರಿ, ಚಿತ್ರದುರ್ಗ, ಮಂಡ್ಯ ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗುವ ಸಾಧ್ಯತೆ ಇದೆ. https://twitter.com/KarnatakaSNDMC/status/1919946136758190102?t=GI_O4pMwesGWxgurRAA70Q&s=19

Read More

ಉತ್ತರಾಖಂಡ : ಉತ್ತರಾಖಂಡದಲ್ಲಿ ಘೋರವಾದ ದುರಂತ ಸಂಭವಿಸಿದ್ದು, ಉತ್ತರಕಾಶಿ ಜಿಲ್ಲೆಯ ಗಂಗಾನನಿ ಬಳಿ ಹೆಲಿಕಾಪ್ಟರ್ ಅಪಘಾತದಲ್ಲಿ ಐವರು ಪ್ರಯಾಣಿಕರು ಸಾವನ್ನಪ್ಪಿದ್ದಾರೆ, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಗರ್ವಾಲ್ ವಿಭಾಗೀಯ ಆಯುಕ್ತ ವಿನಯ್ ಶಂಕರ್ ಪಾಂಡೆ ದೃಢಪಡಿಸಿದ್ದಾರೆ. ಬೆಳಿಗ್ಗೆ ಉತ್ತರಾಖಂಡದ ಉತ್ತರಕಾಶಿ ಬಳಿ ಸಂಭವಿಸಿದ ಹೆಲಿಕಾಪ್ಟರ್ ಅಪಘಾತದಲ್ಲಿ ಐವರು ಪ್ರಯಾಣಿಕರು ಸಾವನ್ನಪ್ಪಿದ್ದಾರೆ. ಹೆಲಿಕಾಪ್ಟರ್‌ನಲ್ಲಿ ಸುಮಾರು ಆರು ಜನರಿದ್ದರು, ಅದರಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ ಮತ್ತು ಇಬ್ಬರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಪ್ರಯಾಣಿಕರಿಂದ ತುಂಬಿದ್ದ ಹೆಲಿಕಾಪ್ಟರ್ ಡೆಹ್ರಾಡೂನ್‌ನಿಂದ ಹರ್ಸಿಲ್ ಹೆಲಿಪ್ಯಾಡ್‌ಗೆ ತೆರಳುತ್ತಿತ್ತು. ಪೊಲೀಸರು, ಸೇನಾ ಪಡೆ, ವಿಪತ್ತು ನಿರ್ವಹಣಾ ತಂಡ ಮತ್ತು ಆಂಬ್ಯುಲೆನ್ಸ್‌ಗಳು ಉತ್ತರಕಾಶಿ ಬಳಿಯ ಘಟನಾ ಸ್ಥಳಕ್ಕೆ ತೆರಳಿವೆ. ಅಪಘಾತದ ಕುರಿತಂತೆ ಮತ್ತಷ್ಟು ಮಾಹಿತಿಯನ್ನು ನಿರೀಕ್ಷಿಸಲಾಗುತ್ತಿದೆ. https://twitter.com/PyaraUKofficial/status/1920334595469214138?t=u67v5l1Pj5FYTUJ4xd59Vg&s=19

Read More

ಬೆಂಗಳೂರು : ಭಾರತೀಯ ಸೇನೆಯಿಂದ ಆಪರೇಷನ್ ಸಿಂಧೂರ್ ಹಿನ್ನೆಲೆಯಲ್ಲಿ ಇದೀಗ ರಾಜ್ಯಾದ್ಯಂತ ಮುಜರಾಯಿ ಇಲಾಖೆ ದೇವಸ್ಥಾನಗಳಲ್ಲಿ ಪೂಜೆ ಸಲ್ಲಿಸಲಾಯಿತು. ಮುಜರಾಯಿ ಇಲಾಖೆಯ ಸೂಚನೆಯಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ದೇವಸ್ಥಾನಗಳಲ್ಲಿ ಪೂಜೆ ಸಲ್ಲಿಸಲಾಯಿತು. ಗಡಿಯಲ್ಲಿ ಪಾಕಿಸ್ತಾನ ವಿರುದ್ಧ ಹೋರಾಡುತ್ತಿರುವ ವೀರ ಯೋಧರಿಗಾಗಿ ಪ್ರಾರ್ಥಿಸಿ ದೇವಸ್ಥಾನಗಳಲ್ಲಿ ಇದೀಗ ವಿಶೇಷ ಪೂಜೆ ಸಲ್ಲಿಕೆ ಮಾಡಲಾಯಿತು. ಬೆಂಗಳೂರಿನ ಗವಿ ಗಂಗಾಧರೇಶ್ವರ ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಅದೇ ರೀತಿಯಾಗಿ ಕೊಪ್ಪಳ ತಾಲೂಕಿನ ಹುಲಿಗೆಮ್ಮ ದೇವಸ್ಥಾನ, ಕಲ್ಬುರ್ಗಿ ಜಿಲ್ಲೆಯ ಆಫಜಲ್ಪುರ ತಾಲೂಕಿನ ಗಾಣಗಾಪುರದ ದತ್ತಾತ್ರೇಯ ದೇವಸ್ಥಾನ, ಮೈಸೂರಿನ ಚಾಮುಂಡಿ ಬೆಟ್ಟ, ನಂಜನಗೂಡು ಸೇರಿದಂತೆ ಹಲವು ದೇಗುಲದಲ್ಲಿ ಸೈನಿಕರ ಹೆಸರಲ್ಲಿ ಪೂಜೆ ಸಲ್ಲಿಸಲಾಯಿತು

Read More

ಬೆಂಗಳೂರು : ಬೆಂಗಳೂರಲ್ಲಿ ಮತ್ತೊಂದು ಕೊಲೆಯಾಗಿದ್ದು, ಯುವಕನನ್ನು ಕೊಂದ ಬಳಿಕ ಶವಕ್ಕೆ ಬೆಂಕಿ ಹಚ್ಚಿ ದುಷ್ಕರ್ಮಿಗಳು ಪರಾರಿಯಾಗಿರುವ ಘಟನೆ ಬೆಂಗಳೂರು ನಗರ ಆನೇಕಲ್ ತಾಲೂಕಿನ ಶೀಲಿಂದ್ರದೊಡ್ಡಿ ಎಂಬಲ್ಲಿ ನಡೆದಿದೆ. ಶಿಲೀಂದ್ರದೊಡ್ಡಿ ಬಳಿ ಸುಮಾರು 25 ವರ್ಷದ ಯುವಕನ ಶವ ಪತ್ತೆಯಾಗಿದ್ದು, ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಶಿಲೀಂದ್ರದೊಡ್ಡಿ ಬಳಿ ಯುವಕನನ್ನು ಕೊಲೆಗೈದು ಬಳಿಕ ಬೆಂಕಿ ಹಚ್ಚಿ ಹಂತಕರು ಪರಾರಿ ಆಗಿದ್ದಾರೆ.ಮೃತದೇಹ ಪತ್ತೆಯಾದ ಸಮೀಪ ಟಿವಿಎಸ್ ಎನ್ ಕೋರ್ಟ್ ಕಾರ್ಟ್ ಬೈಕ್ ಸಹ ಪತ್ತೆಯಾಗಿದೆ. ಘಟನಾ ಸ್ಥಳಕ್ಕೆ ಬನ್ನೇರುಘಟ್ಟ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

Read More

ಬೆಂಗಳೂರು : ಬೆಂಗಳೂರಲ್ಲಿ ಅನಧಿಕೃತವಾಗಿ ಪಿಜಿ ನಡೆಸುತ್ತಿರುವವರಿಗೆ ಪಾಲಿಕೆ ಈಗ ಶಾಕ್ ನೀಡಲು ಮುಂದಾಗಿದ್ದು, ನಗರದ ಪಿಜಿಗಳಿಗೆ ಕಡಿವಾಣ ಹಾಕುವುದಕ್ಕೆ ಹೊರಟಿರುವ ಬಿಬಿಎಂಪಿ, ಇದೀಗ ರೂಲ್ಸ್ ಪಾಲಿಸದ ಪಿಜಿಗಳನ್ನ ಬಂದ್ ಮಾಡುವುದಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದೆ. ಹೌದು ಇತ್ತೀಚೆಗೆ ಬೆಂಗಳೂರಿನ ಹೆಚ್​ಎಸ್​ಆರ್ ಲೇಔಟ್​ನ ಲೇಡೀಸ್ ಪಿಜಿಯ ಓರ್ವ ಯುವತಿ ನಗ್ನವಾಗಿ ಓಡಾಡಿದ್ದ ವಿಡಿಯೋ ವೈರಲ್​ ಆಗಿತ್ತು. ಪಿಜಿಯಿಂದ ಅಕ್ಕಪಕ್ಕದ ಜನರಿಗೆ ತೊಂದರೆಯಾಗುತ್ತಿದೆ ಎಂಬ ಮಾತು ಕೇಳಿಬಂದಿತ್ತು. ಹಾಗಾಗಿ ಇದೀಗ ಅನಧಿಕೃತ ಪಿಜಿಗಳು ಮತ್ತು ಅವುಗಳಿಂದ ಉಂಟಾಗುತ್ತಿರುವ ಸಮಸ್ಯೆಗಳಿಂದಾಗಿ ಬಿಬಿಎಂಪಿ ಕಠಿಣ ಕ್ರಮಕ್ಕೆ ಮುಂದಾಗಿದೆ. ರಾಜಧಾನಿಯ ಪಿಜಿಗಳಿಗೆ ಈಗಾಗಲೇ ಕೆಲ ಮಾರ್ಗಸೂಚಿಗಳನ್ನ ಹೊರಡಿಸಿದ್ದ ಪಾಲಿಕೆ, ಇದೀಗ ರೂಲ್ಸ್ ಬ್ರೇಕ್ ಮಾಡುತ್ತಿರುವ ಪಿಜಿಗಳನ್ನ ಬಂದ್ ಮಾಡಿಸುವುದಕ್ಕೆ ಸಜ್ಜಾಗಿವೆ. ಸದ್ಯ ಈಗಾಗಲೇ 1200 ಅನಧಿಕೃತ ಪಿಜಿಗಳನ್ನ ಗುರುತಿಸಿರುವ ಪಾಲಿಕೆ, ರೂಲ್ಸ್ ಮೀರಿದ ಪಿಜಿಗಳಿಗೆ ಬೀಗ ಜಡಿಯೋಕೆ ಪ್ಲಾನ್ ಮಾಡಿದೆ. ಬಿಬಿಎಂಪಿಯ ವಿವಿಧ ವಲಯಗಳಲ್ಲಿ ಈಗಾಗಲೇ ನಿಯಮ ಮೀರಿದ ಪಿಜಿಗಳಿಗೆ ಬೀಗ ಜಡಿಯೋದಾಗಿ ಎಚ್ಚರಿಕೆ ನೀಡಿದೆ.

Read More

ಲಾಹೋರ್ : ಆಪರೇಷನ್ ಸಿಂಧೂರ್ ಬಳಿಕ ಸಹಜವಾಗಿ ಪಾಕಿಸ್ತಾನ ಭಾರತಕ್ಕೆ ಬೆಚ್ಚಿ ಬಿದ್ದಿದೆ ಈಗಾಗಲೇ ಪಾಕಿಸ್ತಾನದ ಉಗ್ರರ ಕ್ಯಾಂಪ್ ಗಳ ಮೇಲೆ ಭಾರತೀಯ ಸೇನೆ ಕ್ಷಿಪಣಿ ದಾಳಿ ನಡೆಸಿದ್ದು ನೂರಕ್ಕೂ ಹೆಚ್ಚು ಉಗ್ರರು ಸಾವನ್ನಪ್ಪಿದ್ದಾರೆ ಇದೀಗ ಪಾಕಿಸ್ತಾನದ ಲಾಹೋರ್ ನಲ್ಲಿ ಮೂರು ಸರಣಿ ಸ್ಫೋಟ ಸಂಭವಿಸಿದೆ. ಹೌದು ಪಾಕಿಸ್ತಾನದ ಲಾಹೋರ್ ನಗರದ ಮೂರು ಕಡೆಗೆ ಭಾರಿ ಸರಣಿ ಸ್ಫೋಟ ಸಂಭವಿಸಿದೆ. ಸ್ಫೋಟದಿಂದ ಲಾಹೋರ್ ನಿವಾಸಿಗಳು ಬೆಚ್ಚಿ ಬಿಚ್ಚಿದ್ದಾರೆ. ಸೈರನ್ ಮೊಳಗಿದ ಬಳಿಕ ಏಕಾಏಕಿ ಸ್ಪೋಟದ ಸದ್ದು ಕೇಳಿಸಿದೆ. ಲಾಹೋರ್ ಓಲ್ಡ್ ಏರ್ಪೋರ್ಟ್ ಸೇರಿದಂತೆ ಮೂರು ಕಡೆ ಸರಣಿ ಸ್ಫೋಟ ಸಂಭವಿಸಿದೆ.

Read More

ಬೆಂಗಳೂರು : ಇತ್ತೀಚಿಗೆ ಬೆಂಗಳೂರಿನಲ್ಲಿ ಕ್ಷುಲ್ಲಕ ಕಾರಣಕ್ಕೆ ಗಲಾಟೆ ನಡೆದು ಕೊಲೆಯಲ್ಲಿ ಅಂತ್ಯವಾಗುತ್ತಿರುವ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ಇದೀಗ ಪಕ್ಕದ ಮನೆಯವರ ಮೇಲಿನ ದ್ವೇಷಕ್ಕೆ ಬಾಲಕನನ್ನು ಅಪಹರಿಸಿ, ಕೊಲೆಗೈದಿರುವ ಘಟನೆ ಬೆಂಗಳೂರಿನ ಪರಪ್ಪನ ಅಗ್ರಹಾರ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ. ಬಾಲಕ ರಮಾನಂದ (8) ನನ್ನು ಕಿಡ್ನಾಪ್ ಮಾಡಿ ಭೀಕರವಾಗಿ ಕೊಲೆ ಮಾಡಲಾಗಿದೆ. ಪಕ್ಕದ ಮನೆಯ ನಿವಾಸಿ ಮತ್ತೂರು ಎಂಬಾತನಿಂದ ಈ ಒಂದು ಕೃತ್ಯ ನಡೆದಿದೆ. ಬಾಲಕ ರಮಾನಂದ ಕುಟುಂಬ ಮತ್ತು ಮತ್ತೂರು ಕುಟುಂಬದ ನಡುವೆ ಗಲಾಟೆ ಆಗಿತ್ತು. ಗಲಾಟೆ ಹಿನ್ನೆಲೆಯಲ್ಲಿ ಬಾಲಕ ರಮಾನಂದನ್ನು ಅಪಹರಿಸಿ ಕೊಲೆಗಯ್ಯಲಾಗಿದೆ. ಕೊಲೆಯ ಬಳಿಕ ಆರೋಪಿ ಮತ್ತೂರು ಮೃತದೇಹವನ್ನು ಚೀಲದಲ್ಲಿ ಕಟ್ಟಿ ಕೆರೆಯಲ್ಲಿ ಬಿಸಾಕಿದ್ದಾನೆ. ನೆನ್ನೆ ರಾಯಸಂದ್ರ ಕೆರೆಯ ಬಳಿ ಬಾಲಕನ ಮೃತದೇಹ ಪತ್ತೆಯಾಗಿದೆ. ಆರೋಪಿ ಮತ್ತೂರನ್ನು ಬಂಧಿಸಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

2 ನಿಮಿಷಗಳಲ್ಲಿ ಒಳ್ಳೆಯದನ್ನು ಮಾಡಲು ಏಂಜಲ್ ಸಂಖ್ಯೆ ನಿಮ್ಮ ಜೀವನದ ಸಣ್ಣ ಅಗತ್ಯಗಳನ್ನು ಪೂರೈಸುವುದರಿಂದ ಹಿಡಿದು ದೊಡ್ಡ ಅಗತ್ಯಗಳನ್ನು ಪೂರೈಸುವವರೆಗೆ, ನೀವು ಈ ಹಾಸಿಗೆಯನ್ನು ಪ್ರಯತ್ನಿಸಬಹುದು. ನೀವು ಈ ಪರಿಹಾರವನ್ನು ನಿಮ್ಮ ಜೀವನದ ಒಳಿತಿಗಾಗಿ ಮಾತ್ರ ಬಳಸಬೇಕು. ಇತರರಿಗೆ ಹಾನಿ ಮಾಡುವ ಉದ್ದೇಶದಿಂದ ಅಥವಾ ಅದು ಇತರರಿಗೆ ಹಾನಿ ಮಾಡುತ್ತದೆ ಎಂದು ಅವರು ಭಾವಿಸಿದರೆ ಯಾರೂ ಈ ಪರಿಹಾರವನ್ನು ಪ್ರಯತ್ನಿಸಬಾರದು. ಈ ಪರಿಹಾರವನ್ನು ಒಳ್ಳೆಯದಕ್ಕಾಗಿ ಮಾತ್ರ ಬಳಸಬೇಕು. ನಮ್ಮ ದೈನಂದಿನ ಜೀವನದಲ್ಲಿ ಸಮಸ್ಯೆಗಳು ಸ್ವಲ್ಪ ಸ್ವಲ್ಪವಾಗಿ ಬರುತ್ತವೆ. ಸಣ್ಣಪುಟ್ಟ ತಪ್ಪುಗಳು ಸಂಭವಿಸುತ್ತವೆ. ಈ ಪರಿಹಾರವು ನಿಮ್ಮ ದೈನಂದಿನ ಅಗತ್ಯಗಳನ್ನು ಪೂರೈಸಲು, ತಪ್ಪುಗಳನ್ನು ಸರಿಪಡಿಸಲು ಮತ್ತು ಸಮಸ್ಯೆಗಳನ್ನು ನಿವಾರಿಸಲು ಖಂಡಿತವಾಗಿಯೂ ಸಹಾಯ ಮಾಡುತ್ತದೆ. ಉದಾಹರಣೆಗೆ, ಅವರು ತಮ್ಮ ಬೈಸಿಕಲ್ ಕೀಲಿಗಳನ್ನು ಆತುರದಲ್ಲಿ ಕಳೆದುಕೊಳ್ಳುತ್ತಾರೆ. ಅವರು ಆತುರದಲ್ಲಿ ತಮ್ಮ ಎಟಿಎಂ ಕಾರ್ಡ್ ಅನ್ನು ಕಳೆದುಕೊಳ್ಳುತ್ತಾರೆ. ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್ ತಂತ್ರಿ ಜ್ಯೋತಿಷ್ಯರ ಮೊಬೈಲ್ ಸಂಖ್ಯೆ 9686268564 ಇವರು…

Read More

ಗದಗ : ಜಿಲ್ಲೆಯ ಸುಮಾರು 15ಕ್ಕೂ ಹೆಚ್ಚು ರೌಡಿಶೀಟರ್ ಗಳ ಮನೆಗಳ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಬೆಳ್ಳಂ ಬೆಳಿಗ್ಗೆ ಗದಗ ಸೇರಿದಂತೆ ಗದಗ ತಾಲೂಕಿನ ಸುತ್ತಮುತ್ತಲು ಪೊಲೀಸರು ರೌಡಿಶೀಟರ್ ಗಳ ಮನೆಯ ಮೇಲೆ ದಾಳಿ ಮಾಡಿ ಪರಿಶೀಲನೆ ನಡೆಸುತ್ತಿದ್ದಾರೆ. ಗದಗ-ಬೆಟಗೇರಿ ಅವಳಿ ನಗರ, ಗದಗ ಗ್ರಾಮೀಣ, ನರಗುಂದ, ರೋಣ ಹಾಗು ಲಕ್ಷ್ಮೇಶ್ವರ ಸೇರಿದಂತೆ ಜಿಲ್ಲೆಯ ರೌಡಿ ಶೀಟರ್ ಗಳ ಮನೆಗಳಲ್ಲಿ ಪೊಲೀಸರು ದಾಳಿ ಮಾಡಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೇ ಬೆಟಗೇರಿ ಜಿಲ್ಲಾ ಕಾರಾಗೃಹದ ಮೇಲೂ ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದ್ದಾರೆ ಎಂದು ಗದಗ ಎಸ್ಪಿ ಬಿ.ಎಸ್ ನೇಮಗೌಡರ್ ಮಾಹಿತಿ ನೀಡಿದ್ದಾರೆ.

Read More