Subscribe to Updates
Get the latest creative news from FooBar about art, design and business.
Author: kannadanewsnow05
ಮೈಸೂರು : ಮೈಸೂರಲ್ಲಿ ಘೋರವಾದ ದುರಂತ ಸಂಭವಿಸಿದ್ದು ಬಂಡಿ ಓಡಿಸುವಾಗ ಕೆಳಗೆ ಬಿದ್ದು ಯುವಕ ದುರ್ಮರಣ ಹೊಂದಿದ್ದಾನೆ. ಮೈಸೂರು ಜಿಲ್ಲೆಯ ತಲಕಾಡು ಗ್ರಾಮದಲ್ಲಿ ಈ ಒಂದು ದುರಂತ ಸಂಭವಿಸಿದೆ 22 ವರ್ಷದ ಪ್ರವೀಣ್ ಮೃತ ಯುವಕ ಎಂದು ತಿಳಿದುಬಂದಿದೆ. ಸ್ಥಳೀಯರ ಮೊಬೈಲ್ ನಲ್ಲಿ ಈ ಒಂದು ದೃಶ್ಯ ಸೆರೆಯಾಗಿದೆ. ಗ್ರಾಮದಲ್ಲಿ ಬಂಡರಸಮ್ಮ ಹಬ್ಬದ ಉತ್ಸವ ನಡೆಯುತ್ತಿತ್ತು ಈ ವೇಳೆ ಪ್ರವೀಣ್ ಬಂಡಿ ಓಡಿಸುತ್ತಿದ್ದ. ಈ ವೇಳೆ ಬಂಡೆ ಆಯತಪ್ಪಿ ಕೆಳಗೆ ಬಿದ್ದ ಪ್ರವೀಣ್ ಗಂಭೀರವಾಗಿ ಗಾಯಗೊಂಡಿದ್ದ. ತಕ್ಷಣವೇ ಆತನನ್ನು ಜಿಲಾಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಗಂಭೀರವಾಗಿ ಗಾಯಗೊಂಡಿದ್ದ ಪ್ರವೀಣ್ ಸಾವು ಬದುಕಿನ ಮಧ್ಯೆ ಹೋರಾಟ ಮಾಡುತ್ತಿದ್ದ. ಇಂದು ಚಿಕಿತ್ಸೆ ಫಲಕಾರಿಯಾಗದೆ ಇಂದು ಪ್ರವೀಣ್ ಸಾವನ್ನಪ್ಪಿದ್ದಾನೆ.
ಬಳ್ಳಾರಿ : ಮಂಗಳಮುಖಿ ಜೊತೆ ಆಟೋ ಡ್ರೈವರ್ ಒಬ್ಬ ಲವ್ ಮಾಡುತ್ತಿದ್ದ. ಇದೀಗ ಅನುಮಾನ ರೀತಿಯಲ್ಲಿ ಪ್ರೇಮಿಗಳ ಸಾವಾಗಿದೆ. ಬಳ್ಳಾರಿಯ ಡೈರಿ ಕ್ರಾಸ್ ನಲ್ಲಿರುವ ಮನೆಯಲ್ಲಿ ಇಬ್ಬರು ಶವಗಳು ಪತ್ತೆಯಾಗಿದೆ. ಮನೆಯ ಕಿಟಕಿಗೆ ನೇಣು ಬಿಗಿದ ಸ್ಥಿತಿಯಲ್ಲಿ ಇಬ್ಬರ ಶವ ಪತ್ತೆಯಾಗಿದ್ದು ಮಂಗಳಮುಖಿ, ಸುಹಾಸಿನಿ ಮತ್ತು ಶೇಖರ್ ಮತ್ತು ತಿಳಿದು ಬಂದಿದೆ. ಇವರಿಬ್ಬರದು ಆತ್ಮಹತ್ಯೆ ಅಥವಾ ಕೊಲೆಯು ಎನ್ನುವುದು ತನಿಖೆಯ ನಂತರ ತಿಳಿದು ಬರಲಿದೆ ಬಳ್ಳಾರಿಯ ಬಿಮ್ಸ್ ಆಸ್ಪತ್ರೆಗೆ ಇಬ್ಬರ ಮೃತ ದೇಹ ಶಿಫ್ಟ್ ಮಾಡಲಾಗಿದೆ. ಶೇಖರ್ ಗೆ ಸುಹಾಸಿನಿ ಮಂಗಳಮುಖಿ ಅಂತ ಗೊತ್ತಿದ್ದರೂ ಕೂಡ ಸುಹಾಸಿನಿಯ ಹಿಂದೆ ಬಿದ್ದಿದ್ದ. ಹೊಸಪೇಟೆ ತಾಲೂಕಿನ ಮಲ್ಲಪ್ಪನಗುಡಿ ನಿವಾಸಿ ಆಗಿರುವ ಶೇಖರ್, ಬಳ್ಳಾರಿ ತಾಲೂಕಿನ ಚಾಗನೂರು ನಿವಾಸಿಯಾಗಿರುವ ಸುಹಾಸಿನಿ ಇಬ್ಬರು ಕೂಡ ಪ್ರೀತಿಸುತ್ತಿದ್ದರು ಎಂದು ತಿಳಿದುಬಂದಿದೆ.
ಬೆಂಗಳೂರು : ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಾರಿಗೆ ನೌಕರರು ಮುಷ್ಕರ ಕೈಗೊಂಡಿದ್ದು, ನಾಳೆ ಸಂಜೆ ಬಳಿಕ ಬಿಎಂಟಿಸಿ ಕೆಎಸ್‌ಆರ್‌ಟಿಸಿ ಸಂಚಾರದಲ್ಲಿ ವ್ಯತ್ಯಯ ಆಗುವ ಸಾಧ್ಯತೆ ಇದೆ. ಸಾರಿಗೆ ಸಿಬ್ಬಂದಿಗಳು ಮುಷ್ಕರದಲ್ಲಿ ಪಾಲ್ಗೊಳ್ಳುವ ಹಿನ್ನೆಲೆಯಲ್ಲಿ ಸಾರಿಗೆ ಸಿಬ್ಬಂದಿಗಳಿಗೆ ನೋ ವರ್ಕ್ ನೋ ಪೆ, ಆದೇಶ ಜಾರಿಯಾಗಿದೆ. ಸಾರಿಗೆ ನೌಕರರು ನಾಳೆ ‘ಬೆಂಗಳೂರು ಚಲೋ’ ಕೈಗೊಳ್ಳಲಿದ್ದಾರೆ. ಫ್ರೀಡಂ ಪಾರ್ಕ್ನಲ್ಲಿ ಪ್ರತಿಭಟನೆ ನಡೆಸಲಿದ್ದಾರೆ. ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಸೇರಿ 4 ನಿಗಮದ ನೌಕರರು ಪ್ರತಿಭಟನೆಯಲ್ಲಿ ಭಾಗಿಯಾಗಲಿದ್ದಾರೆ.ನಾಳೆ ಸಂಜೆ 4 ಗಂಟೆವರೆಗೆ ಸರ್ಕಾರಕ್ಕೆ ಡೆಡ್‌ಲೈನ್ ನೀಡಲಾಗಿದೆ. ಬೇಡಿಕೆ ಸಂಬಂಧ ನಿರ್ಣಯ ಕೈಗೊಳ್ಳದಿದ್ದರೆ ಸಾರಿಗೆ ಬಂದ್ ಆಗಲಿದೆ. ಸರ್ಕಾರದಿಂದ ಅಧಿಕೃತ ನಿರ್ಧಾರ ಬಾರದಿದ್ದರೆ ಬಂದ್ ಮಾಡುವುದಾಗಿ ಸಾರಿಗೆ ನೌಕರರು ಎಚ್ಚರಿಸಿದ್ದಾರೆ. ಮುಷ್ಕರ ನಡೆಸುತ್ತಿರುವ ಸಾರಿಗೆ ನೌಕರರಿಗೆ ಕೆಎಸ್‌ಆರ್‌ಟಿಸಿ ಶಿಸ್ತು ಕ್ರಮದ ಎಚ್ಚರಿಕೆ ನೀಡಿದೆ. ಕೆಲಸಕ್ಕೆ ಹಾಜರಾಗದಿದ್ದರೆ ನೋ ಪೇಮೆಂಟ್. ನೌಕರರು ಕಡ್ಡಾಯವಾಗಿ ಕರ್ತವ್ಯಕ್ಕೆ ಹಾಜರಾಗುವಂತೆ ಸೂಚನೆ ನೀಡಿದೆ, ಪ್ರತಿಭಟನೆಯಲ್ಲಿ ಭಾಗಿಯದರೆ ಸೇವಾ ನಿಯಮದ ಅನ್ವಯ ಕಠಿಣ ಕ್ರಮ ಜರುಗಿಸಲಾಗುವುದು…
ಬೆಂಗಳೂರು : ಹಿಂದಿನ ಬಿಜೆಪಿ ಸರ್ಕಾರಕ್ಕಿಂತಲೂ ಕಾಂಗ್ರೆಸ್ ಸರ್ಕಾರದಲ್ಲಿ ಹೆಚ್ಚಿನ ಕಮಿಷನ್ ಕೊಡಬೇಕಾಗಿದೆ ಎಂದು ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಆರ್ ಮಂಜುನಾಥ್ ಗಂಭೀರವಾಗಿ ಆರೋಪಿಸಿದ್ದಾರೆ. ಹಿಂದೆ ಅಧ್ಯಕ್ಷರಾಗಿದ್ದ ಕೆಂಪಣ್ಣ ಅವರನ್ನು ಬಳಸಿಕೊಂಡು ಸಿಎಂ ಸಿದ್ದರಾಮಯ್ಯ ಅಧಿಕಾರಕ್ಕೆ ಬಂದರು. ಈಗ ಹಳೆಯ ಸರ್ಕಾರಕ್ಕಿಂತ ಹೆಚ್ಚು ಕಮಿಷನ್ ಕೊಡುವ ಪರಿಸ್ಥಿತಿ ಇದೆ. ಸರ್ಕಾರದಿಂದ ಬರೋಬ್ಬರಿ 37 ಸಾವಿರ ಕೋಟಿ ಬರಬೇಕಿದೆ. ಹಳೆಯ ಬಿಲ್ ಗಳಿಗೆ ಕಮಿಷನ್ ಪಡೆದೆ ಹಣ ಬಿಡುಗಡೆ ಮಾಡುತ್ತಿದ್ದಾರೆ. ನಗರಾಭಿವೃದ್ಧಿ ಇಲಾಖೆಯಲ್ಲಿ ಮಧ್ಯವರ್ತಿಗಳ ಮೂಲಕ ಕೆಲಸ ಆಗುತ್ತದೆ. ತಮಗೆ ಬೇಕಾದವರಿಗೆ ಟೆಂಡರ್ ಕೊಡುತ್ತಿದ್ದಾರೆ.ಇಂಜಿನಿಯರ್ ಗಳ ಖಾಸಗಿ ಕಚೇರಿಗೆ ಕರೆಸಿಕೊಂಡು ಟೆಂಡರ್ ಕೊಡುತ್ತಿದ್ದಾರೆ. ಇಂತಹವರನ್ನು ಸಿಎಂ ಸಿದ್ದರಾಮಯ್ಯ ಹೇಗೆ ಸಹಿಸಿಕೊಂಡಿದ್ದಾರೆ ಎನ್ನುವುದು ದೇವರಿಗೆ ಗೊತ್ತು. ಇದ್ದಿದ್ದರಲ್ಲಿ ಸಚಿವ ಸತೀಶ್ ಜಾರಕಿಹೊಳಿ ಕಷ್ಟಕ್ಕೆ ಸ್ಪಂದಿಸುತ್ತಾರೆ ಎಂದು ತಿಳಿಸಿದರು.
ಬೆಂಗಳೂರು : ಬೆಂಗಳೂರು ಗ್ರಾಮಾಂತರ ಜಿಲ್ಲೆಯದೇವನಹಳ್ಳಿ ತಾಲೂಕು ಕಚೇರಿ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಬೆಂಗಳೂರು ಗ್ರಾಮಾಂತರ ಲೋಕಾಯುಕ್ತ ಡಿ ವೈ ಎಸ್ ಬಿ ಗಿರೀಶ್ ನೇತೃತ್ವದಲ್ಲಿ ಈ ಒಂದು ದಾಳಿ ನಡೆದಿದೆ. ಸರ್ವೆ ಇಲಾಖೆಯ ರೆಕಾರ್ಡ್ ನೀಡುವ ಕಚೇರಿಯ ಬಗ್ಗೆ ಹಲವು ದೂರು ಬಂದ ಹಿನ್ನೆಲೆಯಲ್ಲಿ ದಾಳಿ ನಡೆಸಲಾಗಿದೆ. ದಾಖಲೆಗಳನ್ನು ಪಡೆದು ತಹಶೀಲ್ದಾರ ಸಮ್ಮುಖದಲ್ಲಿ ಲೋಕಾಯುಕ್ತ ಅಧಿಕಾರಿಗಳು ಪರಿಶೀಲನೆ ನಡೆಸಿದರು ಸರಿಯಾದ ಸಮಯಕ್ಕೆ ಬಾರದ ಅಧಿಕಾರಿಗಳ ಬಗ್ಗೆ ಮಾಹಿತಿ ಕಲೆಹಾಕಿದ್ದಾರೆ. ತಾಲೂಕು ಕಚರಿಯ ಎಲ್ಲಾ ಕಚೇರಿಗಳಲ್ಲಿ ದಾಖಲೆಗಳ ಪರಿಶೀಲನೆ ನಡೆಸಿದರು.
ಯಾದಗಿರಿ : ಇತ್ತೀಚಿಗೆ ಶಾಲಾ ಬಸ್ ಹರಿದು ಬೆಂಗಳೂರಿನಲ್ಲಿ ಇಬ್ಬರು ಕಂದಮ್ಮಗಳು ಬಲಿಯಾಗಿದ್ದರು. ಇದೀಗ ಯಾದಗಿರಿಯಲ್ಲಿ ಮತ್ತೊಂದು ದುರಂತ ಸಂಭವಿಸಿದ್ದು ಖಾಸಗಿ ಶಾಲಾ ಬಸ್ ಹರಿದು 4 ವರ್ಷದ ಮಗು ಸ್ಥಳದಲ್ಲಿ ಸಾವನ್ನಪ್ಪಿರುವ ಘಟನೆ ಯಾದಗಿರಿ ಜಿಲ್ಲೆಯ ಗುರುಮಠಕಲ್ ತಾಲೂಕಿನ ಗಾಜರಕೋಟದಲ್ಲಿ ನಡೆದಿದೆ. ನಿನ್ನೆ ಈ ಒಂದು ಘಟನೆ ನಡೆದಿದ್ದು ಬಸ್ನಿಂದ ಕೆಳಗೆ ಇಳಿಯುತ್ತಿದ್ದಂತೆ ಶಾಲಾ ಬಸ್ ಚಾಲಕ ಬಸ್ ರಿವರ್ಸ್ ತೆಗೆದುಕೊಂಡಿದ್ದಾನೆ. ಈ ವೇಳೆ ಬಸ್ಸಿನ ಚಕ್ರಕ್ಕೆ ಸಿಲುಕಿ 4 ವರ್ಷದ ಪುನೀತ್ ಎಂಬ ಬಾಲಕ ಸಾವನಪ್ಪಿದ್ದಾನೆ. ಗಾಜರ್ ಕೋಟ ಗ್ರಾಮದ ವಿಸಡಂ ಶಾಲೆಯ ವಿದ್ಯಾರ್ಥಿ ಪುನೀತ್ ಸಾವನಪ್ಪಿದ್ದಾನೆ. ಮಗನನ್ನು ಕಳೆದುಕೊಂಡು ಇದೀಗ ಕುಟುಂಬದ ಸದಸ್ಯರ ಆಕ್ರಂದನ ಮುಗಿಲು ಮುಟ್ಟಿದೆ. ಗ್ರಾಮಸ್ಥರು ಮಗುವಿನ ಶವ ಇಟ್ಟು ಪ್ರತಿಭಟನೆ ನಡೆಸುತ್ತಿದ್ದಾರೆ. ಬಸ್ ಚಾಲಕನಿಗೆ ಜೀವಾವಧಿ ಶಿಕ್ಷೆ ನೀಡುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ. ಪೊಲೀಸರ ಮನವೊಲಿಕೆಯ ಬಳಿಕ ಪ್ರತಿಭಟನೆ ಕೈಬಿಟ್ಟರು. ಗುರುಮಠಕಲ್ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.
ಮೈಸೂರು : ರಾಜ್ಯದಲ್ಲಿ ಕಾಡಾನೆ ದಾಳಿಗೆ ಮತ್ತೊಂದು ಬಲಿಯಾಗಿದೆ. ಕಾಡಾನೆ ದಾಳಿಯಿಂದ ರೈತನೋರ್ವ ಮೃತಪಟ್ಟಿರುವ ಘಟನೆ ಮೈಸೂರು ಜಿಲ್ಲೆಯ ಟಿ.ನರಸೀಪುರ ತಾಲೂಕಿನ ತಲಕಾಡು ಹೋಬಳಿಯ ಪರಿಣಾಮಿಪುರ ಗ್ರಾಮದಲ್ಲಿ ಮಂಗಳವಾರ ಸಂಜೆ ನಡೆದಿದೆ. ಪರಿಣಾಮಿಪುರ ಗ್ರಾಮದ ಗುರುಮಲ್ಲಪ್ಪ (70) ಆನೆ ದಾಳಿಗೆ ಸಿಲುಕಿ ಮೃತ ರೈತ ಎಂದು ತಿಳಿದುಬಂದಿದೆ.ಗುರುಮಲ್ಲಪ್ಪ ಕಬ್ಬಿನ ಗದ್ದೆಗೆ ನೀರು ಹಾಯಿಸುವ ವೇಳೆ ಹಿಂದಿನಿಂದ ಬಂದ ಕಾಡಾನೆ ದಾಳಿ ಮಾಡಿ ತುಳಿದು ಸಾಯಿಸಿದೆ ಎಂದು ಕುಟುಂಬಸ್ಥರು ಹೇಳುತ್ತಿದ್ದು, ಈ ಒಂಟಿ ಸಲಗ ಶಿವನಸಮುದ್ರ, ಸತ್ಯ ಮಂಗಲ ಭಾಗದ ಅರಣ್ಯ ಪ್ರದೇಶದಿಂದ ತಪ್ಪಿಸಿಕೊಂಡು ಬಂದಿರುವ ಸಾಧ್ಯತೆ ಇದೆ ಎಂದು ಅರಣ್ಯಾಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ. ಕಾಡಾನೆ ಕಾಣಿಸಿಕೊಂಡ ಬಳಿಕ ಗ್ರಾಮಸ್ಥರು ದೂರವಾಣಿ ಮೂಲಕ ಅರಣ್ಯ ಇಲಾಖೆಗೆ ಮಾಹಿತಿ ನೀಡಿದರೂ ಅವರು ಸಕಾಲಕ್ಕೆ ಬಾರದಿದ್ದರಿಂದಲೇ ಈ ದುರ್ಘಟನೆ ನಡೆದಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಿರ್ಲಕ್ಷ್ಯ ವಹಿಸಿದ ಅರಣ್ಯ ಇಲಾಖೆಯವರ ಮೇಲೆ ಕ್ರಮ ಜರುಗಿಸಿ ಹಾಗೂ ಮೃತಪಟ್ಟ ವ್ಯಕ್ತಿಯ ಕುಟುಂಬದವರಿಗೆ ಹೆಚ್ಚಿನ ಪರಿಹಾರ ನೀಡಿ…
ಬೆಂಗಳೂರು : ಬೆಂಗಳೂರಿನಲ್ಲಿ ಮತ್ತೊಂದು ಭೀಕರವಾದ ಕೊಲೆಯಾಗಿದ್ದು ಮಚ್ಚಿನಿಂದ ಕೊಚ್ಚಿ ಪತಿ ಪತ್ನಿಯನ್ನು ಭೀಕರವಾಗಿ ಕೊಲೆ ಮಾಡಿದ್ದಾನೆ. ಬೆಂಗಳೂರಿನ ಗೋವಿಂದರಾಜನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಒಂದು ಕೊಲೆ ನಡೆದಿದೆ. ಮಚ್ಚಿನಿಂದ ಕೊಚ್ಚಿ ದೇವಿಕ (50) ಪತ್ನಿಯನ್ನು ಪತಿ ಕುಮಾರ್ ಕೊಲೆ ಕೊಲೆ ಮಾಡಿದ್ದಾನೆ. ಇತ್ತೀಚಿಗೆ ಕುಟುಂಬದ ಸಮೇತ ಕೇರಳ ಪ್ರವಾಸಕ್ಕೆ ತೆರಳಿದ್ದರು. ಈ ವೇಳೆ ಚಾಲಕನ ಜೊತೆಗೆ ಪತ್ನಿ ಮಾತನಾಡಿದ್ದಕ್ಕೆ ಅನುಮಾನ ವ್ಯಕ್ತಪಡಿಸಿದ್ದಾನೆ. ಪತ್ನಿಯ ಮೇಲೆ ಅನುಮಾನ ಹೊಂದಿದ್ದ ಆರೋಪಿ ಪತಿ ಕುಮಾರ್ ನಿನ್ನೆ ರಾತ್ರಿ ಮಲಗಿದ ವೇಳೆ ಮಚ್ಚಿನಿಂದ ಕೊಚ್ಚಿ ದೇವಿಕಾಳನ್ನು ಕೊಲೆ ಮಾಡಿದ್ದಾನೆ ಬಳಿಕ ತಾನು ಕೂಡ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಕೂಡಲೇ ಆರೋಪಿ, ಕುಮಾರ್ನನ್ನು ಮಕ್ಕಳು ತಡೆದಿದ್ದಾರೆ ಸದ್ಯ ಕೊಲೆ ಆರೋಪಿ ಕುಮಾರರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಗೋವಿಂದರಾಜನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಂಡ್ಯ :- ಜನರ ನಂಬಿಕೆ ವಿಶ್ವಾಸಕ್ಕೆ ಕಳಂಕ ಬಾರದಂತೆ ಸಂಘದ ಮೂಲಕ ಸದಸ್ಯರಿಗೆ ಸಿಗಬಹುದಾದ ಎಲ್ಲಾ ಬಗೆಯ ಸಾಲ ಸೌಲಭ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುವಂತೆ ನೂತನ ನಿರ್ದೇಶಕರಿಗೆ ಶಾಸಕ ಕೆ.ಎಂ.ಉದಯ್ ಕಿವಿಮಾತು ಹೇಳಿದರು. ಮದ್ದೂರು ತಾಲೂಕಿನ ಬೆಳತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಅವಿರೋಧವಾಗಿ ಆಯ್ಕೆಯಾದ ಕಾಂಗ್ರೆಸ್ ಪಕ್ಷದ 11 ಅಭ್ಯರ್ಥಿಗಳನ್ನು ಅಭಿನಂದಿಸಿ ಮಾತನಾಡಿದರು. ಕೇಂದ್ರ ಮತ್ತು ರಾಜ್ಯ ಸರ್ಕಾರ ರೈತರ ಆರ್ಥಿಕಾಭಿವೃದ್ಧಿಗೆ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದು, ಅವುಗಳನ್ನು ಗ್ರಾಮದ ಜನರ ನಂಬಿಕೆ ವಿಶ್ವಾಸಕ್ಕೆ ಕಳಂಕ ಬಾರದಂತೆ ಸಂಘದ ಮೂಲಕ ಸದಸ್ಯರಿಗೆ ಸಿಗಬಹುದಾದ ಎಲ್ಲಾ ಬಗೆಯ ಸಾಲ ಸೌಲಭ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಬೇಕೆಂದು ತಿಳಿಸಿದರು. ಸಂಘದ ಷೇರುದಾರರು ರಾಜಕೀಯ ಬೆರೆಸದೆ ಒಗ್ಗಟ್ಟಿನಿಂದ 11 ಮಂದಿ ಅಭ್ಯರ್ಥಿಗಳನ್ನು ಅವಿರೋಧವಾಗಿ ಆಯ್ಕೆ ಮಾಡಿರುವುದು ಸಂತಸದ ಸಂಗತಿಯಾಗಿದ್ದು, ನೂತನ ಆಡಳಿತ ಮಂಡಳಿ ಸಂಘದ ಮತ್ತಷ್ಟು ಉನ್ನತಿಕರಣಕ್ಕೆ ಶ್ರಮಿಸಬೇಕೆಂದರು. ಸಂಘದ ಐದು ವರ್ಷಗಳ ಅವಧಿಗೆ ನಡೆದ ಚುನಾವಣೆ ವೇಳೆ…
ತುಮಕೂರು : ತುಮಕೂರಿನಲ್ಲಿ ಬೆಳ್ಳಂ ಬೆಳಗ್ಗೆ ಸರಗಳ್ಳರು ಅಟ್ಟಹಾಸ ಮೆರೆದಿದ್ದು ವೃದ್ಧೆಯ ಕತ್ತಿನಲ್ಲಿ ಇದ್ದ ಚಿನ್ನದ ಸರಕದ್ದು ಪರಾರಿಯಾಗಿರುವ ಘಟನೆ ತುಮಕೂರಿನ ಮೈದಾಳ ರಸ್ತೆಯಲ್ಲಿ ನಡೆದಿದೆ. ಬೆಳಿಗ್ಗೆ 6:30ಕ್ಕೆ ಈ ಒಂದು ಘಟನೆ ನಡೆದಿದೆ ತುಮಕೂರಿನ ಮೈದಾಳ ರಸ್ತೆಯಲ್ಲಿ ವೃದ್ದೆ ಚಿಲ್ಲರೆ ಅಂಗಡೇ ಇಟ್ಟು ವ್ಯಾಪಾರ ಮಾಡುತ್ತಿದ್ದರು. ಗುಟ್ಕಾ ಕೇಳೋ ನೆಪದಲ್ಲಿ ಬಂದು ಏಕಾಏಕಿ ವೃದ್ದೆಯ ಕತ್ತಿಗೆ ಕೈ ಹಾಕಿ ಚಿನ್ನದ ಸರವನ್ನು ಕಿತ್ತು ಅಲ್ಲಿಂದ ಪರಾರಿಯಾಗಿದ್ದಾರೆ. ಬೆಳಗ್ಗೆ ಆದುದರಿಂದ ವೃದ್ದೆ ಪಾರ್ವತಮ್ಮ ಎಷ್ಟೇ ಕೂಗಾಡಿದರು ಅಲ್ಲಿ ಯಾರು ಜನ ಇರಲಿಲ್ಲ.














