Subscribe to Updates
Get the latest creative news from FooBar about art, design and business.
Author: ಸುರೇಶ್
"ಕನ್ನಡ ನ್ಯೂಸ್ ನೌ ಜಾಲತಾಣದ ಮುಖ್ಯ ಸಂಪಾದಕರಾದ ಸುರೇಶ್ ಅವರು ಕಳೆದ 4 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದಾರೆ. ಸರ್ಕಾರದ ಯೋಜನೆಗಳು, ಶಿಕ್ಷಣ ಮತ್ತು ಪ್ರಚಲಿತ ವಿದ್ಯಮಾನಗಳನ್ನು ಸಾಮಾನ್ಯ ಜನರಿಗೂ ಅರ್ಥವಾಗುವಂತೆ ವಿವರಿಸುವುದು ಇವರ ವಿಶೇಷತೆ. ಈ ಮೊದಲು ವಿವಿಧ ವೆಬ್‌ಸೈಟ್‌ಗಳಲ್ಲಿ ನಾಗರಿಕ ಸಮಸ್ಯೆಗಳ ಬಗ್ಗೆ ವರದಿಗಾರರಾಗಿ ಕೆಲಸ ಮಾಡಿರುವ ಇವರು, ಸಮಯೋಚಿತ ಹಾಗೂ ವಿಶ್ವಾಸಾರ್ಹ ಮಾಹಿತಿ ನೀಡುವ ಮೂಲಕ ಓದುಗರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಡಿಜಿಟಲ್ ಸಾಕ್ಷರತೆ ಇವರ ನೆಚ್ಚಿನ ವಿಷಯಗಳಲ್ಲೊಂದು
ಬೆಂಗಳೂರು : ಬೆಂಗಳೂರಿನಲ್ಲಿ ಮತ್ತೊಂದು ಬೀಖರವಾದ ಅಪಘಾತ ಸಂಭವಿಸಿದ್ದು ಗೂಡ್ಸ್ ಆಟೋ ಡಿಕ್ರಿಯಾಗಿ ಬೈಕ್ ನಲ್ಲಿ ಇದ್ದಂತಹ ಇಬ್ಬರು ಸವಾರರು ಸ್ಥಳದಲ್ಲಿ ಸಾವನ್ನಪ್ಪಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಅವಧಿ ಕೊಡಗುರ್ಕಿ ರಸ್ತೆಯಲ್ಲಿ ಒಂದು ಅಪಘಾತ ಸಂಭವಿಸಿದೆ. ಮೃತ ಬೈಕ್ ಸವಾರರನ್ನು ಜೆ. ವೆಂಕಟಪುರ ಗ್ರಾಮದ ನಿವಾಸಿ ವಿನೋದ್ ಕುಮಾರ್ (22) ಹಾಗೂ ನಂದಿಗುಂದ ಗ್ರಾಮದ ನಿವಾಸಿ ನಿಖಿಲ್ (7) ದುರ್ಮರಣ ಹೊಂದಿದ್ದಾರೆ. ನಂದಿಗುಂದದಿಂದ ಬೈಕ್ ನಲ್ಲಿ ವೆಂಕಟಪುರಕ್ಕೆ ತೇರಳುತ್ತಿದ್ದಾಗ ಈ ಒಂದು ಭೀಕರ ಅಪಘಾತ ಸಂಭವಿಸಿದೆ. ಅಪಘಾತದ ಕುರಿತು ವಿಶ್ವನಾಥಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರು : ಬೆಂಗಳೂರಿನಲ್ಲಿ ಬೆಚ್ಚಿ ಬೀಳಿಸೋ ಘಟನೆಯೊಂದು ನಡೆದಿದ್ದು, ಯುವತಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಅಮೃತ ಹಳ್ಳಿಯ ಠಾಣೆ ಪೊಲೀಸರು ಮಂಜುನಾಥ್ ಎಂಬ ಆರೋಪಿಯನ್ನು ಅರೆಸ್ಟ್ ಮಾಡಿದ್ದಾರೆ. ಸೆಪ್ಟೆಂಬರ್ 7 ರಾತ್ರಿ 11:50 ರಲ್ಲಿ ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಕಾರು ನಿಲ್ಲಿಸಿ ಯುವತಿ ಶ್ವಾನದ ರಕ್ಷಣೆಗೆ ಮುಂದಾಗಿದ್ದಾಳೆ. ಈ ವೇಳೆ ಬೈಕ್ ನಲ್ಲಿ ಬಂದು ಆರೋಪಿ bad ಟಚ್ ಮಾಡಿ ತೆರಳಿದ್ದ. ಈ ವೇಳೆ ಕೈಗೆ ರಕ್ತ ಆಗಿದ್ದರಿಂದ ಯುವತಿ ಪೆಟ್ರೋಲ್ ಬಂಕ್ ಬಳಿ ಕೈ ತೊಳೆದುಕೊಳ್ಳುತ್ತಿದ್ದಳು. ಸ್ವಲ್ಪ ಹೊತ್ತಿನ ಬಳಿಕ ಮತ್ತೆ ಬಂದು ಯುವತಿಯ ಖಾಸಗಿ ಅಂಗ ಮುಟ್ಟಿ ಪರಾರಿಯಾಗಿದ್ದಾನೆ. ಘಟನೆ ಬಗ್ಗೆ ಅಮೃತಹಳ್ಳಿ ಠಾಣೆಯಲ್ಲಿ ಯುವತಿ ದೂರು ದಾಖಲಿಸಿದ್ದಾಳೆ. ಸದ್ಯ ಆರೋಪಿ ಮಂಜುನಾಥನನ್ನು ಅಮೃತಹಳ್ಳಿ ಠಾಣೆ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ದಾವಣಗೆರೆ : ಇತ್ತೀಚಿಗೆ ಮಂಡ್ಯ ಜಿಲ್ಲೆಯ ಮದ್ದೂರು ಪಟ್ಟಣದಲ್ಲಿ ಗಣೇಶ ಮೆರವಣಿಗೆ ಮೇಲೆ ಕಲ್ಲು ತೂರಾಟ ನಡೆಸಲಾಗಿತ್ತು. ಅಲ್ಲದೆ ಶಿವಮೊಗ್ಗ ಜಿಲ್ಲೆ ಭದ್ರಾವತಿಯಲ್ಲಿ ಕೂಡ ಈದ್ ಮಿಲಾದ್ ಹಬ್ಬದ ವೇಳೆ ಪಾಕಿಸ್ತಾನ ಜಿಂದಾಬಾದ್ ಎಂದು ಕಿಡಿಗೇಡಿಗಳು ಘೋಷಣೆ ಕೂಗಿದ್ದರು. ಈ ವಿಚಾರವಾಗಿ ಬಿಜೆಪಿ ಮಾಜಿ ಶಾಸಕ ಎಂ ಪಿ ರೇಣುಕಾಚಾರ್ಯ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ದಾವಣಗೆರೆಯಲ್ಲಿ ಮಾತನಾಡಿದ ಅವರು, ಮಾತು ಎತ್ತಿದರೆ ಸಾಕು ಬಿಜೆಪಿಯವರು ಬೆಂಕಿ ಹಚ್ಚುತ್ತಾರೆ ಎಂದು ಹೇಳುತ್ತಾರೆ. ಧರ್ಮಸ್ಥಳ, ಚಾಮುಂಡಿ ವಿಚಾರದಲ್ಲಿ ಬೆಂಕಿ ಹಚ್ಚಿದ್ದು ಯಾರು? ಗಣೇಶ ಮೆರವಣಿಗೆಯಲ್ಲಿ ಕಲ್ಲೆಸೆದವರಿಗೆ ಬೆಂಬಲ ಕೊಡುತ್ತೀರಿ, ವೋಟ್ ಬ್ಯಾಂಕ್ ರಾಜಕಾರಣ ಮಾಡುತ್ತಿದ್ದೀರಿ. ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯ ದರ್ಪ ದೌಲತ್ತು ಮುಂದುವರಿದರೆ ನಿಮಗೆ ಕರ್ನಾಟಕದ ಜನತೆಗೆ ತಕ್ಕ ಪಾಠ ಕಲಿಸುತ್ತಾರೆ. ಕೋಮು ಗಲಭೆಗೆ ಇಡೀ ಸರ್ಕಾರವೇ ಕಾರಣ ಕಲ್ಲು ತೂರಾಟ, ಬೆಂಕಿ ಹಚ್ಚುವವರನ್ನು ಪಾಕಿಸ್ತಾನಕ್ಕೆ ಕಳುಹಿಸಿ ಎಂದು ಮಾಜಿ ಶಾಸಕ ರೇಣುಕಾಚಾರ್ಯ ಆಗ್ರಹಿಸಿದರು.
ಗದಗ : ಪಾಕಿಸ್ತಾನ ಜಿಂದಾಬಾದ್ ಅನ್ನುವ ಕಿಡಿಗೇಡಿ ಗೂಂಡಾ ಮುಸ್ಲಿಮರಿಗೆ ಹೇಳ್ತೇನೆ. ನಿಮಗೆ ಪಾಕಿಸ್ತಾನದ ಬಗ್ಗೆ ಪ್ರೀತಿ ಇದ್ರೆ. ಬಾಗಿಲು ಓಪನ್ ಇದೆ, ನಾವೇ ಟಿಕೆಟ್ ಕೊಟ್ಟು ಕಳುಹಿಸುತ್ತೇವೆ ಅಲ್ಲಿಗೆ ಓಡಿ. ನಮ್ಮ ದೇಶದಲ್ಲಿ ಹುಟ್ಟಿ, ನಮ್ಮದೇ ಅನ್ನ ತಿಂದು, ಸೌಲಭ್ಯಗಳನ್ನು ಪಡೆದು ಪಾಕಿಸ್ತಾನ ಜಿಂದಾಬಾದ್ ಅಂದ್ರೆ ಅಂತಹವರ ಮನೆಗೆ ನುಗ್ಗಿ ಹೊಡೆಯುತ್ತೇವೆ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಕಿಡಿಕಾರಿದ್ದಾರೆ. ಗಜೇಂದ್ರಗಡ ಪಟ್ಟಣದಲ್ಲಿ ಏರ್ಪಡಿಸಿದ್ದ ಹಿಂದೂ ಮಹಾ ಗಣೇಶ ಉತ್ಸವ ಧರ್ಮ ಸಭೆ ಕಾರ್ಯಕ್ರಮದಲ್ಲಿ ಭಾಷಣ ಮಾಡಿದ ಅವರು, ಹಿಂದೂ ವಿರೋಧಿಗಳು, ದ್ರೋಹಿಗಳು ಯಾರಿದ್ದಾರೆ. ನಮ್ಮ ದೇಶದಲ್ಲಿ ಹುಟ್ಟಿ, ಅನ್ನ ತಿಂದು, ನಮ್ಮ ದೇಶದ ಸೌಲಭ್ಯ ಪಡೆದು ಪಾಕಿಸ್ತಾನ ಜಿಂದಾಬಾದ್ ಅನ್ನುವ ಹರಾಮ್ ಕೋರ್ ಇದ್ದಾರೆ. ಅಂತವರ ವಿರುದ್ಧ ಹೋರಾಟ ನಮ್ಮದು ಎಂದಿದ್ದಾರೆ. ಹಿಂದೂ ಸಮಾಜ ಶಾಂತವಾಗಿ ಸಮಾಧಾನದಿಂದ ಇದೆ. ಅಣ್ಣ, ತಮ್ಮಂದಿರ ಹಾಗೆ ಬದುಕಬೇಕು ಅಂತ 78 ವರ್ಷದಿಂದ ಸಹನೆಯಿಂದ ಇದ್ದೇವೆ. ಈ ದೇಶವನ್ನು ಇಸ್ಲಾಂ, ಕ್ರಿಶ್ಚಿಯನ್…
ಬೆಂಗಳೂರು : ಇನ್ನೇನು ಕೆಲವೇ ಕ್ಷಣಗಳಲ್ಲಿ ಭಾರತ ಮತ್ತು ಪಾಕಿಸ್ತಾನ ಏಷ್ಯಾ ಕಪ್ ಪಂದ್ಯ ಆರಂಭವಾಗಲಿದ್ದು ಇಡೀ ದೇಶಾದ್ಯಂತ ಭಾರತ ಗೆಲ್ಲಲಿ ಎಂದು ಅಭಿಮಾನಿಗಳು ದೇವಸ್ಥಾನಗಳಲ್ಲಿ ಹರಕೆ ಪೂಜೆಗಳನ್ನು ನಡೆಸುತ್ತಿದ್ದಾರೆ. ಆದರೆ ಕಾಂಗ್ರೆಸ್ ಸೇರಿದಂತೆ ಕೆಲವು ಪಕ್ಷಗಳು ಈ ಒಂದು ಪಂದ್ಯಾವಳಿಗೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಇದೀಗ ಬೆಂಗಳೂರಿನಲ್ಲಿ ಕೆಪಿಸಿಸಿ ಮಹಿಳಾ ಕಾಂಗ್ರೆಸ್ ಘಟಕದ ರಾಜ್ಯಾಧ್ಯಕ್ಷೆ ಸೌಮ್ಯ ರೆಡ್ಡಿ ಅವರು ಒಂದು ಕೈಯಲ್ಲಿ ಸಿಂಧೂರ ಹಾಗೂ ಒಂದು ಕೈಯಲ್ಲಿ ಮೇಣದಬತ್ತಿ ಹಿಡಿದು ಪಂದ್ಯಾವಳಿ ವಿರೋಧಿಸಿ ಪ್ರತಿಭಟನೆ ನಡೆಸಿದರು. ಈ ವೇಳೆ ಮಾತನಾಡಿದ ಅವರು ಪೈಲ್ಗಾಮ್ ನಲ್ಲಿ ಉಗ್ರವಾದಿಗಳು ಅಮಾಯಕರನ್ನು ಕೊಂದರು. ಈ ಒಂದು ಘಟನೆ ನಡೆದು ಇನ್ನು ಐದಾರು ತಿಂಗಳು ಸಹ ಆಗಿಲ್ಲ. ಕಣ್ಣೀರು ಇನ್ನು ಹರಿತಾ ಇದೆ. ಮೃತರ ಕುಟುಂಬದಲ್ಲಿ ಕಣ್ಣೀರು ಹಾಕುತ್ತಿದ್ದಾರೆ. ಇಂದು 8 ಗಂಟೆಗೆ ಇಂಡಿಯಾ ಮತ್ತು ಪಾಕಿಸ್ತಾನ ನಡುವೆ ಕ್ರಿಕೆಟ್ ಪಂದ್ಯ ನಡೆಸುತ್ತಿದ್ದಾರೆ. ಕೇಂದ್ರ ಗೃಹಮಂತ್ರಿ ಮಗ ಅಮಿತ್ ಷಾ ಅವರ ಮಗ ಜಯ್ ಶಾ…
ಬೆಂಗಳೂರು : ಹಿಂದೂ ಸಮಾಜದಲ್ಲಿ ಅಸಮಾನತೆ ಇದೆ ಎಂದು ಮೈಸೂರಿನಲ್ಲಿ ಹೇಳಿಕೆ ನೀಡಿದ ಸಿಎಂ ಸಿದ್ದರಾಮಯ್ಯ ಅವರಿಗೆ ಸಿ.ಟಿ.ರವಿ ಬಹಿರಂಗ ಪತ್ರ ಬರೆದು, ಅಸಮಾನತೆ ಹಿಂದೂ ಸಮಾಜದಲ್ಲಿ ಮಾತ್ರ ಇದೆಯೇ? ನಿಮ್ಮ ಕಾಂಗ್ರೆಸ್ ಪಕ್ಷದೊಳಗೆಯೇ ಅಸಮಾನತೆ ಇಲ್ವೇ? ಎಂಬ ಪ್ರಶ್ನೆ ಕೇಳಿದ್ದಾರೆ. ಅಸಮಾನತೆ ಬರೀ ಹಿಂದೂ ಸಮಾಜದಲ್ಲಿ ಮಾತ್ರ ಇದೆಯಾ? ಉಳಿದ ಕಡೆಗಳಿಗೆ ಇಲ್ವಾ? ಅಸಮಾನತೆ ಶ್ರೀಮಂತ–ಬಡವರ ನಡುವೆಯೂ ಇದೆ. ವಿದ್ಯಾವಂತ–ಅವಿದ್ಯಾವಂತರ ನಡುವೆಯೂ ಇದೆ. ಒಂದೇ ಜಾತಿಯಲ್ಲಿ ಇದ್ದರೂ ವಿವಿಧ ಅಧಿಕಾರದ ಹುದ್ದೆಯಲ್ಲಿದ್ದವರ ನಡುವೆಯೂ ಇದೆ. ಅಸಮಾನತೆಗೆ ಹಲವು ಮುಖಗಳಿವೆ. ಆರ್ಥಿಕ ಅಸಮಾನತೆ, ಸಾಮಾಜಿಕ ಅಸಮಾನತೆ, ಶೈಕ್ಷಣಿಕ ಅಸಮಾನತೆ, ಅಧಿಕಾರದ ಅಸಮಾನತೆ, ಮತೀಯ ಅಸಮಾನತೆ. ಕ್ರಿಶ್ಚಿಯನ್, ಮುಸ್ಲಿಮರಲ್ಲೂ ಅಸಮಾನತೆ ಇದೆ. ಅಮೆರಿಕದಲ್ಲಿ ವೈಟ್ ಅಂಡ್ ಬ್ಲಾಕ್ ಅನ್ನುವಂತಹ ಅಸಮಾನತೆ ಇದೆ. ಹಿಂದೂ ಸಮಾಜದಲ್ಲಿ ಅಸ್ಪೃಶ್ಯತೆಯ ಅಸಮಾನತೆ ಇದೇ ಅನ್ನುವ ಏಕೈಕ ಕಾರಣ ಕೊಟ್ಟು ಲಕ್ಷಾಂತರ ಸಂಖ್ಯೆಯಲ್ಲಿ ಹಿಂದೂಗಳನ್ನು ಮತಾಂತರ ಮಾಡಲಾಗಿದೆ. ಏಸು ಕ್ರಿಸ್ತರ ಎದುರು ಸಮಾನವಾಗಿ, ಗೌರವಯುತವಾಗಿ ನಡೆಸಿಕೊಳ್ಳುತ್ತೇವೆ ಅಂದವರು ಹಿಂದೂ…
ಮೈಸೂರು : ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವ-2025ರ ಪ್ರಮುಖ ಆಕರ್ಷಣೆಗಳಲ್ಲಿ ಒಂದಾದ ವಿದ್ಯುತ್ ದೀಪಾಲಂಕಾರ ಹಾಗೂ ಡ್ರೋನ್ ಪ್ರದರ್ಶನದ ಪೋಸ್ಟರ್ ಹಾಗೂ ದೀಪಾಲಂಕಾರದ ಟೀಸರ್ ಅನ್ನು ಇಂದು ಬಿಡುಗಡೆಗೊಳಿಸಲಾಯಿತು. ಅರಮನೆ ಆಡಳಿತ ಮಂಡಳಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಅವರು, ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ (ಸೆಸ್ಕ್)ದ ವತಿಯಿಂದ ನಡೆಸಲಾಗುವ ದಸರಾ ದೀಪಾಲಂಕಾರ ಹಾಗೂ ಡ್ರೋನ್ ಪ್ರದರ್ಶನದ ಪೋಸ್ಟರ್ ಬಿಡುಗಡೆಗೊಳಿಸಿ, ಟೀಸರ್ ಅನಾವರಣಗೊಳಿಸಿದರು. ದಸರಾ ಮಹೋತ್ಸವದ ಸಂಭ್ರಮಕ್ಕೆ ಹೊಸದಾಗಿ ಸೇರ್ಪಡೆಯಾಗಿರುವ ಡ್ರೋನ್ ಪ್ರದರ್ಶನ ಈ ಬಾರಿ ಮತ್ತಷ್ಟು ಆಕರ್ಷಣೀಯವಾಗಿರಲಿದೆ. ಬನ್ನಿಮಂಟಪದ ಪಂಜಿನ ಕವಾಯತು ಮೈದಾನದಲ್ಲಿ ಸೆ.28, 29 ಮತ್ತು ಅಕ್ಟೋಬರ್ 1 ಮತ್ತು 2ರಂದು ಡ್ರೋನ್ ಪ್ರದರ್ಶನ ನಡೆಸಲಾಗುತ್ತಿದೆ. ಕಳೆದ ಬಾರಿ 1500 ಡ್ರೋನ್ ಬಳಸಿಕೊಂಡು ಡ್ರೋನ್ ಪ್ರದರ್ಶನ ನಡೆಸಲಾಗಿತ್ತು, ಈ ಬಾರಿ 3000 ಡ್ರೋನ್ ಬಳಸಿಕೊಂಡು ಪ್ರದರ್ಶನ ನಡೆಸಲಾಗುತ್ತಿದೆ. ಎಂದಿನಂತೆ ಈ ಬಾರಿಯೂ ಸೆಸ್ಕ್ ವತಿಯಿಂದ ದೀಪಾಲಂಕಾರ ಮಾಡಲಾಗುತ್ತಿದ್ದು, ನಗರದ 135 ಕಿ.ಮೀ…
ಕೋಲಾರ : ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಮಲ್ಲಪ್ಪನಹಳ್ಳಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಬಾಲಕಿಯ ಶವ ಪತ್ತೆಯಾಗಿದೆ. ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಮಲ್ಲಪ್ಪನಹಳ್ಳಿಯಲ್ಲಿ ಈ ಒಂದು ಘಟನೆ ನಡೆದಿದ್ದು, ಶವ ಸಂಸ್ಕಾರಕ್ಕೆ ಬಾಲಕಿಯ ಶವ ತೆಗೆದುಕೊಂಡ ಹೋದಾಗ ಪೊಲೀಸರು ಮರಣೋತ್ತರ ಪರೀಕ್ಷೆಗಾಗಿ ಬಾಲಕಿಯ ಶವ ಶಿಫ್ಟ್ ಮಾಡಿದ್ದಾರೆ. ಹೌದು ಶವ ಸಂಸ್ಕಾರಕ್ಕೆ ಪೋಷಕರು ಮತ್ತು ಸಂಬಂಧಿಕರು ಕೊಂಡೊಯ್ದಿದ್ದರು. ಸ್ಮಶಾನದಲ್ಲಿ ಶವ ಸಂಸ್ಕಾರ ವೇಳೇ ಪೊಲೀಸರು ತಡೆದು ಶವಾಗಾರಕ್ಕೆ ಶಿಫ್ಟ್ ಮಾಡಿದ್ದಾರೆ. ಮರಣೋತ್ತರ ಪರೀಕ್ಷೆಗಾಗಿ ಅರ್ಚನಾ (17) ಎನ್ನುವ ಬಾಲಕಿಯ ಶವ ಶಿಫ್ಟ್ ಮಾಡಲಾಯಿತು. ಪೊಲೀಸರು ಮುಳಬಾಗಿಲು ಸರ್ಕಾರಿ ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ ಮುಳಬಾಗಿಲು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.
ಧಾರವಾಡ : ಧಾರವಾಡ ದಲ್ಲಿ ಲಾರಿ ಕಾರಿನ ಮಧ್ಯ ಭೀಕರವಾದ ಅಪಘಾತ ಸಂಭವಿಸಿದ್ದು, ಕಾರಿನಲ್ಲಿದ್ದ ಓರ್ವ ವ್ಯಕ್ತಿ ಸಾವನಪ್ಪಿದ್ದು, ಮೂವರಿಗೆ ಗಂಭೀರವಾದ ಗಾಯಗಳಾಗಿರುವ ಘಟನೆ ಧಾರವಾಡ ತಾಲೂಕಿನ ಅಮ್ಮಿನಭಾವಿ ಬಳಿ ಸಂಭವಿಸಿದೆ. ಮೂಡಲಗಿ ತಾಲೂಕಿನ ವಿಠಲ ಗಾಣಿಗೇರ (40) ಎನ್ನುವ ವ್ಯಕ್ತಿ ಸಾವನ್ನಪ್ಪಿದ್ದು, ಧಾರವಾಡ ಕೃಷಿ ಮೇಳಕ್ಕೆ ಆಗಮಿಸುತ್ತಿದ್ದಾಗ ಅಪಘಾತ ಸಂಭವಿಸಿದೆ. ಧಾರವಾಡ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಇನ್ನು ಗಾಯಗೊಂಡ ಮೂವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಕೊಪ್ಪಳ : ಬಿಜೆಪಿ ನಾಯಕರ ಪ್ರಚೋದನಾಕಾರಿ ಭಾಷಣ ಹೇಳಿಕೆ ಕುರಿತು ಸಚಿವ ಶಿವರಾಜ್ ತಂಗಡಿಗೆ ಆಕ್ರೋಶ ವ್ಯಕ್ತಪಡಿಸಿದ್ದು, ಮಾಜಿ ಸಂಸದ ಪ್ರತಾಪ್ ಸಿಂಹ ಅಷ್ಟೆ ಅಲ್ಲ ಎಲ್ಲ ಬಿಜೆಪಿ ನಾಯಕರನ್ನು ಗಡಿಪಾರು ಮಾಡಬೇಕು ಎಂದು ಕೊಪ್ಪಳದಲ್ಲಿ ಸಚಿವ ಶಿವರಾಜ್ ತಂಗಡಗಿ ಕಿಡಿಕಾರಿದರು. ಕೊಪ್ಪಳದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಬಿಜೆಪಿಯವರ ಮಕ್ಕಳು ಗಣೇಶ ಉತ್ಸವದಲ್ಲಿ ಕುಣಿಯುತ್ತಾರಾ? ಯಾವ ನಾಯಕರು ಮಕ್ಕಳು ಪ್ರತಿಭಟನೆಯಲ್ಲಿ ಭಾಗಿಯಾಗುತ್ತಾರೆ? ಬಡವರ ಮಕ್ಕಳನ್ನು ಪ್ರಚೋದಿಸಿ ಜಗಳ ಮಾಡಿಸುತ್ತಾರೆ. ಕೊನೆಗೆ ಅನಾಹುತಕ್ಕೀಡಾಗುವುದು ಹಿಂದೂಗಳ ಮಕ್ಕಳು ಎಂದು ಬಿಜೆಪಿ ನಾಯಕರ ವಿರುದ್ಧ ಆಕ್ರೋಶ ಹೊರ ಹಾಕಿದರು








