Author: ಸುರೇಶ್‌

"ಕನ್ನಡ ನ್ಯೂಸ್ ನೌ ಜಾಲತಾಣದ ಮುಖ್ಯ ಸಂಪಾದಕರಾದ ಸುರೇಶ್ ಅವರು ಕಳೆದ 4 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದಾರೆ. ಸರ್ಕಾರದ ಯೋಜನೆಗಳು, ಶಿಕ್ಷಣ ಮತ್ತು ಪ್ರಚಲಿತ ವಿದ್ಯಮಾನಗಳನ್ನು ಸಾಮಾನ್ಯ ಜನರಿಗೂ ಅರ್ಥವಾಗುವಂತೆ ವಿವರಿಸುವುದು ಇವರ ವಿಶೇಷತೆ. ಈ ಮೊದಲು ವಿವಿಧ ವೆಬ್‌ಸೈಟ್‌ಗಳಲ್ಲಿ ನಾಗರಿಕ ಸಮಸ್ಯೆಗಳ ಬಗ್ಗೆ ವರದಿಗಾರರಾಗಿ ಕೆಲಸ ಮಾಡಿರುವ ಇವರು, ಸಮಯೋಚಿತ ಹಾಗೂ ವಿಶ್ವಾಸಾರ್ಹ ಮಾಹಿತಿ ನೀಡುವ ಮೂಲಕ ಓದುಗರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಡಿಜಿಟಲ್ ಸಾಕ್ಷರತೆ ಇವರ ನೆಚ್ಚಿನ ವಿಷಯಗಳಲ್ಲೊಂದು

ಬೆಂಗಳೂರು : ರಾಜ್ಯದಲ್ಲಿ ಬರೋಬ್ಬರಿ 8 ಲಕ್ಷ ಬಿಪಿಎಲ್ ಕಾರ್ಡ್ ರದ್ದಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.ಅಕ್ರಮವಾಗಿ ಬಿಪಿಎಲ್ ಕಾರ್ಡ್ ಪಡೆದವರಿಗೆ ಸರ್ಕಾರ ಬಿಗ್ ಶಾಕ್ ನೀಡಲು ಮುಂದಾಗಿದೆ. ಸುಮಾರು 8 ಲಕ್ಷಕ್ಕೂ ಅಧಿಕ ಕಾರ್ಡ್ ಇದೀಗ ರದ್ದಾಗುವ ಆಗುವ ಸಾಧ್ಯತೆ ಇದೆ. ಅಕ್ರಮ ಬಿಪಿಎಲ್ ಕಾರ್ಡ್ ಇರುವುದು ಪತ್ತೆಯಾಗಿದೆ. ಅನರ್ಹರು ಪಡೆದಿರುವ ಬಿಪಿಎಲ್ ಕಾರ್ಡ್ ಗಳ ಮೇಲೆ ಇದೀಗ ಹದ್ದಿನ ಕಣ್ಣು ಇಡಲಾಗಿದೆ. ಆಹಾರ ಇಲಾಖೆಯ ವಿಶೇಷ ಕಾರ್ಯಚರಣೆಯಲ್ಲಿ ಇದು ಬಹಿರಂಗವಾಗಿದೆ ಒಟ್ಟು 12,68,097 ಅನುಮಾನಾಸ್ಪದ ರೇಷನ್ ಕಾರ್ಡ್ ಪತ್ತೆಯಾಗಿದೆ. 8 ಲಕ್ಷ ರೇಷನ್ ಕಾರ್ಡ್ ರದ್ದಾಗುವ ಸಾಧ್ಯತೆ ಇದೆ ಶೀಘ್ರದಲ್ಲಿ ಆಹಾರ ಇಲಾಖೆ ಸರ್ಕಾರಕ್ಕೆ ವರದಿ ಸಲ್ಲಿಸಲಿದೆ. 19690 ಮಂದಿ ಕಾನೂನು ಬಾಹಿರವಾಗಿ ಬಿಪಿಎಲ್ ಕಾರ್ಡ್ ಪಡೆದಿದ್ದಾರೆ. 25 ಲಕ್ಷಕ್ಕಿಂತ ಅಧಿಕ ವಹಿವಾಟು ಮೀರಿರುವವರು 2684 ಇದ್ದಾರೆ. ಇ- ಕೆ ವೈ ಸಿ ಮಾಡಿಸದೆ ಇರುವವರ ಸಂಖ್ಯೆ 6,16,196 ಇದ್ದಾರೆ 1. 20 ಲಕ್ಷಕ್ಕಿಂತ ಹೆಚ್ಚು ಆದಾಯ ಹೊಂದಿರುವವರು 5,13,613…

Read More

ರಾಮನಗರ : ನಗರದ ಬಸ್ ನಿಲ್ದಾಣದಲ್ಲಿ ಕೆಎಸ್​ಆರ್​ಟಿಸಿ ವತಿಯಿಂದ ಆಯೋಜಿಸಲಾಗಿದ್ದ ನಗರ ಬಸ್ ಸಂಚಾರ ಪ್ರಾರಂಭೋತ್ಸವಕ್ಕೆ ಸಚಿವ ರಾಮಲಿಂಗಾರೆಡ್ಡಿ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ರಾಮನಗರ ಬಸ್ ನಿಲ್ದಾಣಕ್ಕೆ ಅಗತ್ಯ ಜಮೀನು ಒದಗಿಸಿದ್ದಲ್ಲಿ ಹೊಸ ಬಸ್ ನಿಲ್ದಾಣವನ್ನು ನಿರ್ಮಿಸಿಕೊಡಲಾಗುವುದು. ಈಗಿರುವ ಬಸ್ ನಿಲ್ದಾಣವನ್ನು ಶೀಘ್ರದಲ್ಲಿಯೇ ನವೀಕರಣ ಮಾಡಲಾಗುವುದು ಎಂದು ಭರವಸೆ ನೀಡಿದರು. ರಾಮನಗರದಲ್ಲಿ ನಗರ ಬಸ್ ಸಂಚಾರ ಆರಂಭಗೊಂಡಿದ್ದು, ಇದರ ಸದುಪಯೋಗ ಪಡೆದುಕೊಳ್ಳಬೇಕು.ಬೆಂಗಳೂರಿನ ಸುತ್ತಮುತ್ತ ಇರುವ ಜಿಲ್ಲೆಗಳಿಗೆ ಬೆಂಗಳೂರು ನಗರ ಸಾರಿಗೆ (ಬಿಎಂಟಿಸಿ) ಬಸ್‌ಗಳನ್ನು ಸಂಚಾರಕ್ಕೆ ಕ್ರಮ ವಹಿಸಲಾಗಿದೆ. ಅಂತೆಯೇ ರಾಮನಗರಕ್ಕೂ ಸಹ ಪ್ರಸ್ತುತ ಸುಗ್ಗನಹಳ್ಳಿಯವರೆಗೆ ಬೆಂಗಳೂರು ನಗರ ಬಸ್ ಸಾರಿಗೆ ಸಂಚರಿಸಲಾಗುತ್ತಿದ್ದು, ಅದನ್ನು ರಾಮನಗರಕ್ಕೆ ವಿಸ್ತರಣೆ ಮಾಡಲಾಗುವುದು ಎಂದು ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು. ಸಾರಿಗೆ ಸಂಸ್ಥೆಗೆ ಹೊಸದಾಗಿ 5,800 ಬಸ್‌ಗಳನ್ನು ಖರೀದಿಸಲಾಗಿದೆ ಹಾಗೂ ಚಾಲಕರು, ನಿರ್ವಾಹಕರು, ಮೆಕಾನಿಕ್‌ಗಳು ಸೇರಿದಂತೆ 10,000 ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳಲು ಕ್ರಮ ಕೈಗೊಳ್ಳಲಾಗಿದ್ದು, ಇದರಿಂದ ಹೆಚ್ಚು ಬಸ್​ಗಳು ಸಂಚಾರ ಆರಂಭಿಸಲು ಅನುಕೂಲಕರವಾಗಲಿದೆ. ಶಕ್ತಿ ಯೋಜನೆಯಿಂದ…

Read More

ಬೀದರ್ : ಬೀದರ್ ತಾಲೂಕಿನ ಗೋರನಹಳ್ಳಿ ಬಳಿ ರಸ್ತೆ ಪಕ್ಕ ಗಾಂಜಾ ಇಟ್ಟುಕೊಂಡು ಮಾರಾಟ ಮಾಡುತ್ತಿದ್ದ ಮಹಿಳೆಯನ್ನು ಬಂಧಿಸಿ ಮಹಿಳೆಯಿಂದ ಸುಮಾರು 43.47 ಲಕ್ಷ ಮೌಲ್ಯದ ಗಾಂಜಾ ವನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಬೀದರ್ ತಾಲೂಕಿನ ಗೊರನಳ್ಳಿ ಬಳಿ ಪೊಲೀಸರು ಮಹಿಳೆಯನ್ನು ಬಂಧಿಸಿದ್ದಾರೆ. ಬಂಧಿತ ಮಹಿಳೆಯ ಬಳಿ ಇದ್ದ ಸುಮಾರು 43 ಕೆಜಿ 479 ಗ್ರಾಂ ಗಾಂಜಾ ವಶಕ್ಕೆ ಪಡೆದುಕೊಂಡಿದ್ದಾರೆ. ರಸ್ತೆ ಪಕ್ಕ ನಿಂತಿದ್ದಾಗ ಅನುಮಾನ ಗೊಂಡ ಗಸ್ತು ತಿರುಗುವ ಪೊಲೀಸರು ಆಕೆಯನ್ನು ಪರಿಶೀಲಿಸಿದಾಗ ಗಾಂಜಾ ಮಾರಾಟ ಮಾಡುತ್ತಿರುವುದು ಪತ್ತೆಯಾಗಿದೆ.

Read More

ಕೊಪ್ಪಳ : ದಸರಾ ಉದ್ಘಾಟನೆಗೆ ಸಾಹಿತಿ ಬಾನು ಮುಷ್ತಾಕ್ ಅವರ ಆಯ್ಕೆ ವಿರೋಧಿಸಿ ಮಾಜಿ ಸಂಸದ ಪ್ರತಾಪ್ ಸಿಂಹ ಹೈಕೋರ್ಟಿಗೆ ಅರ್ಜಿ ಸಲ್ಲಿಸಿದ್ದರು.ಇಂದು ಹೈಕೋರ್ಟ್ ಪ್ರತಾಪ್ ಸಿಂಹ ಅರ್ಜಿ ವಜಾಗೊಳಿಸಿ ಆದೇಶ ಹೊರಡಿಸಿದೆ. ಈ ವಿಚಾರವಾಗಿ ಶಿವರಾಜ್ ತಂಗಡಗಿ ಪ್ರತಾಪ್ ಸಿಂಹಗೆ ಬಿಜೆಪಿಯವರೇ ಟಿಕೆಟ್ ಕೊಟ್ಟಿಲ್ಲ ಟಿಕೆಟ್ ತಪ್ಪಿದೆ ಅಂದರೆ ಅವರ ಯೋಗ್ಯತೆ ಏನೆಂದು ಗೊತ್ತಾಗುತ್ತದೆ ಎಂದು ವಾಗ್ದಾಳಿ ನಡೆಸಿದರು. ಬಾನು ಮುಷ್ತಾಕ್ ಕನ್ನಡದ ಹೆಮ್ಮೆ, ನಾಡಹಬ್ಬ ದಸರಾಗೆ ಎಲ್ಲಾ ಸಮುದಾಯದ ಜನರು ಬರುತ್ತಾರೆ. ಮುಂದಿನ ಜನ್ಮದಲ್ಲಿ ಮುಸ್ಲಿಂ ಆಗಿ ಹುಟ್ಟುತ್ತೇನೆ ಎಂದ ದೇವೇಗೌಡರನ್ನು ಬಿಜೆಪಿ ಯಾಕೆ ತಮ್ಮ ಪಕ್ಷಕ್ಕೆ ಕರೆದುಕೊಂಡಿದೆ? ಪ್ರತಾಪ್ ಸಿಂಹಗೆ ಬಿಜೆಪಿಯವರೇ ಟಿಕೆಟ್ ಕೊಟ್ಟಿಲ್ಲ ಟಿಕೆಟ್ ತಪ್ಪಿದೆ ಅಂದರೆ ಅವರ ಯೋಗ್ಯತೆ ಏನೆಂದು ಗೊತ್ತಾಗುತ್ತದೆ. ಬಿಜೆಪಿಯವರಿಗೆ ಯಾವ ನೈತಿಕತೆ ಇದೆ? ಬಿಜೆಪಿ ನಾಯಕರ ಮಕ್ಕಳೆಲ್ಲ ವಿದೇಶದಲ್ಲಿ ಇದ್ದಾರೆ. ಬಿಜೆಪಿಯವರು ಬಡವರ ಮಕ್ಕಳನ್ನು ಹೋರಾಟಕ್ಕೆ ಕಳುಹಿಸುತ್ತಾರೆ. ಬಿಜೆಪಿಯವರು ತಮ್ಮ ಮಕ್ಕಳ ಜೊತೆ ಹೋರಾಟಕ್ಕೆ ಬನ್ನಿ. ಭಾರತ ಪಾಕಿಸ್ತಾನ ಕ್ರಿಕೆಟ್…

Read More

ಬೆಂಗಳೂರು : ಕರ್ನಾಟಕ ಕೆರೆ ಸಂರಕ್ಷಣ ಮತ್ತು ಅಭಿವೃದ್ಧಿ ಪ್ರಾಧಿಕಾರ ವಿಧೇಯಕವನ್ನು ರಾಜ್ಯಪಾಲ ಥಾವರ್ ಚಂದ್ ಗೆಹ್ಲೊಟ್ ವಾಪಸ್ ಕಳುಹಿಸಿದ್ದಾರೆ. ಕೆರೆ ವಿಸ್ತೀರ್ಣ ಅನುಗುಣವಾಗಿ ಬಫರ್ ಜೋನ್ ನಿಗದಿಗೊಳಿಸಿದ ಬಿಲ್, ರಾಜಪಾಲರ ಅಂಕಿತಕ್ಕೆ ಕಳುಹಿಸಲಾಗಿದ್ದ ವಿಧೇಯಕವನ್ನು ಗವರ್ನರ್ ವಾಪಸ್ ಕಳುಹಿಸಿದ್ದಾರೆ. ಕೆಲವು ಸ್ಪಷ್ಟನೆ ಕೇಳಿ ರಾಜಪಾಲರು ರಾಜ್ಯ ಸರ್ಕಾರಕ್ಕೆ ವಿದೇಕವನ್ನು ವಾಪಸ್ ಕಳುಹಿಸಿದ್ದಾರೆ. ಕರ್ನಾಟಕ ಟ್ಯಾಂಕ್ ಸುರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರ ಕಾಯ್ದೆ-2014 ಕಾಯ್ದೆಯ ಸೆಕ್ಷನ್ -12 ತಿದ್ದುಪಡಿ ಮಾಡಲು ಪ್ರಸ್ತಾಪಿಸಿದೆ. ಬಿಲ್ಗೆ ಒಪ್ಪಿಗೆ ನೀಡಿದಂತೆ ರಾಜಪಾಲರ ಕಚೇರಿಗೆ ಆಕ್ಷೇಪಣೆ ಸಲ್ಲಿಸಲಾಗಿದೆ. ಬೆಂಗಳೂರು ಟೌನ್ ಹಾಲ್ ಅಸೋಸಿಯೇಷನ್ ಆಕ್ಷೆಪಣೆ ಸಲ್ಲಿಸಿದೆ. ತಜ್ಞರ ಅಭಿಪ್ರಾಯದ ಪ್ರಕಾರ 30 ಮೀಟರ್ ಬಫರ್ ಜೋನ್ ಸಾಕಾಗುವುದಿಲ್ಲ. ಪರಿಸರ ವ್ಯವಸ್ಥೆ ಸಮತೋಲನಕ್ಕಾಗಿ 300 ಮೀಟರ್ ಅವಶ್ಯಕತೆ ಇದೆ. ರಾಜ್ಯ ಸರ್ಕಾರ ಬಫರ್ ಜೋನ್ ಕಡಿಮೆ ಮಾಡದೆ ಹೆಚ್ಚಳ ಮಾಡಬೇಕು. ರಾಜ್ಯ ಸರ್ಕಾರವು ತಜ್ಞರ ಸಮಿತಿಯೊಂದಿಗೆ ಸಮಾಲೋಚನೆ ನಡೆಸಿಲ್ಲ. ತಿದ್ದುಪಡಿ ಪರಿಣಾಮಗಳ ಬಗ್ಗೆ ಸಾರ್ವಜನಿಕರ ಜೊತೆಗೆ ಚರ್ಚೆ ನಡೆಸಿಲ್ಲ…

Read More

ಕೊಡಗು : ರಾಜ್ಯದಲ್ಲಿ ಕುರುಬ ಸಮಾಜವನ್ನು ಎಸ್ಟಿಗೆ ಸೇರಿಸಲು ನಾಳೆ ಕುರುಬ ಸಮಾಜದ ಮುಖಂಡರ ಜೊತೆಗೆ ಸಿಎಂ ಸಿದ್ದರಾಮಯ್ಯ ಮಹತ್ವದ ಸಭೆ ನಡೆಸಲಿದ್ದಾರೆ. ಇದರ ಮಧ್ಯ ಜಾತಿ ಜನಗಣತಿ ಕಾಲಂನಲ್ಲಿ ತಾವಾಗಿಯೇ ಮತಾಂತರ ಆಗುವವರಿಗೆ ಅವಕಾಶ ಇದೆ ಎಂದು ಸಚಿವ ಎನ್‌.ಎಸ್‌ ಬೋಸರಾಜು ಹೇಳಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಜಾತಿ ಜನಗಣತಿ ಮರು ಸಮೀಕ್ಷೆ ಕುರಿತು ಮಾತನಾಡಿ, ಜಾತಿಗಣತಿ ಕಾಲಂನಲ್ಲಿ ತಾವಾಗಿಯೇ ಮತಾಂತರ ಆಗುವುದಕ್ಕೆ ಅವಕಾಶ ಇದೆ. ಒತ್ತಾಯವಾಗಿ ಯಾರನ್ನೂ ಸೇರಿಸಲ್ಲ. ಈ ಬಗ್ಗೆ ಸಿದ್ದರಾಮಯ್ಯ ಅವರು ಈಗಾಗಲೇ ಸ್ಪಷ್ಟನೆ ನೀಡಿದ್ದಾರೆ. ಆದ್ರೂ ಬಿಜೆಪಿಯವರು ತಪ್ಪು ಹುಡುಕುವ ಕೆಲಸ ಮಾಡ್ತಿದ್ದಾರೆ, ಅದೇ ಅವರ ಅಜೆಂಡಾ ಆಗಿದೆ. ಅಲ್ಲದೇ ಉತ್ತಮ ಆಡಳಿತದ ವಿರುದ್ಧ ಜನರಲ್ಲಿ ಗೊಂದಲ ಸೃಷ್ಟಿಮಾಡೋದು ಅವರ ಕೆಲಸವಾಗಿಬಿಟ್ಟಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.

Read More

ಹಾಸನ : ಕಳೆದ ಎರಡು ದಿನಗಳ ಹಿಂದೆ ಹಾಸನ ತಾಲೂಕಿನ ಮೊಸಳೆಹೊಸಳ್ಳಿ ಎಂಬಲ್ಲಿ ಗಣೇಶ ಮೆರವಣಿಗೆ ವೇಳೆ ಲಾರಿಯ ನಿರಂತರಣ ತಪ್ಪಿ ಮೆರವಣಿಗೆ ವೇಳೆ ಡ್ಯಾನ್ಸ್ ಮಾಡುತ್ತಿದ್ದವರ ಮೇಲೆ ಹರಿದು 10 ಜನರು ಸಾವನ್ನಪ್ಪಿರುವ ಘಟನೆ ನಡೆದಿತ್ತು. ಇದೀಗ ಈ ಒಂದು ಘಟನೆಗೆ ಪೊಲೀಸ್ ಇಲಾಖೆಯ ವೈಫಲ್ಯವೇ ಕಾರಣ ಎಂದು ಶಾಸಕ ಎಚ್ ಡಿ ರೇವಣ್ಣ ಗಂಭೀರವಾಗಿ ಆರೋಪಿಸಿದ್ದಾರೆ. ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹತ್ತು ಜನರ ಸಾವಿಗೆ ಪೊಲೀಸ್ ಇಲಾಖೆಯ ವೈಫಲ್ಯವೇ ಕಾರಣವಾಗಿದೆ. ಉಸ್ತುವಾರಿ ಸಚಿವರು ತನಿಖೆ ನಡೆಸಿ ಕ್ರಮ ಕೈಗೊಳ್ಳುವುದಾಗಿ ಹೇಳಿದರು. ಘಟನೆಯ ದಿನ 500 ಮೀಟರ್ ಇರೋದು ಹಿಂದೆ ಬ್ಯಾರಿಕೆಡ್ ಹಾಕಬಹುದಾಗಿತ್ತು. ಸೂಕ್ತ ಕ್ರಮ ಕೈಗೊಂಡಿದ್ದರೆ, 10 ಜನರ ಜೀವ ಉಳಿಯುತ್ತಿತ್ತು. ಮೃತ ಕುಟುಂಬಕ್ಕೆ ರಾಜ್ಯ ಸರ್ಕಾರ ಪರಿಹಾರ ಕೊಡಲಿ 10 ರಿಂದ 15 ಲಕ್ಷ ಪರಿಹಾರ ಕೊಡಬೇಕು. ಗೃಹ ಸಚಿವರು ಬೇಕಿದ್ದರೆ ಸ್ಥಳ ಪರಿಶೀಲನೆ ನಡೆಸಲಿ ಎಲ್ಲೆಂದರಲ್ಲಿ ಮದ್ಯದ ಅಂಗಡಿಗೆ ಓಪನ್ ಮಾಡಲು ಲೈಸೆನ್ಸ್…

Read More

ಹುಬ್ಬಳ್ಳಿ : ಇತ್ತೀಚಿಗೆ ಗುಜರಾತಿನ ಅಹಮದಾಬಾದ್ ನಲ್ಲಿ ವಿಮಾನ ದುರಂತದಲ್ಲಿ 275 ಹೆಚ್ಚು ಜನರು ಸಾವನ್ನಪ್ಪಿರುವ ಘಟನೆ ನಡೆದಿತ್ತು. ಅದಾದ ಬಳಿಕ ಇದೀಗ ಹುಬ್ಬಳ್ಳಿಯಲ್ಲಿ ಭಾರಿ ಅನಾಹುತ ಒಂದು ತಪ್ಪಿದೆ. ಪ್ರಯಾಣಿಕನೋರ್ವ ವಿಮಾನದ ತುರ್ತು ನಿರ್ಗಮನ ಬಾಗಿಲು ತೆರೆದು ಸಹಪ್ರಯಾಣಿಕರಲ್ಲಿ ಆತಂಕ ಸೃಷ್ಟಿಸಿದ ಘಟನೆ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ನಡೆದಿದೆ. ಹೌದು ಕಳೆದ ಶುಕ್ರವಾರ ಸಂಜೆ ಪ್ರಯಾಣಿಕನೊಬ್ಬ ವಿಮಾನದ ತುರ್ತು ನಿರ್ಗಮನ ಬಾಗಿಲು ತೆರೆದು ಸಹಪ್ರಯಾಣಿಕರಲ್ಲಿ ಆತಂಕ ಸೃಷ್ಟಿಸಿದ ಘಟನೆ ನಡೆದಿದೆ. ಹುಬ್ಬಳ್ಳಿ ವಿಮಾನ ನಿಲ್ದಾಣದ ಅಪ್ರೊನ್ ರ‍್ಯಾಂಪ್ ಬೇನಲ್ಲಿ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಬೆಳಗಾವಿಯ ಶಹಾಪುರದ ನಿರಂಜನ ಎಂಬಾತ ವಿಮಾನದ ತುರ್ತು ನಿರ್ಗಮನ ಬಾಗಿಲು ತೆರೆದು ಆತಂಕ ಸೃಷ್ಟಿಸಿದ ಪ್ರಯಾಣಿಕ. ನಿರಂಜನ ಹುಬ್ಬಳ್ಳಿಯಿಂದ ಪುಣೆಗೆ ಹೊರಟಿದ್ದ. ಹುಬ್ಬಳ್ಳಿ ವಿಮಾನ ‌ನಿಲ್ದಾಣದಲ್ಲಿ ಇಂಡಿಗೋ ವಿಮಾನ ಏರಿ, ತನ್ನ ಆಸನದ ಪಕ್ಕದಲ್ಲೇ ಇದ್ದ ತುರ್ತು ನಿರ್ಗಮನ ಬಾಗಿಲನ್ನು ತೆರೆದಿದ್ದಾನೆ. ಇದರಿಂದ ಸಹಪ್ರಯಾಣಿಕರು ಕೆಲಕಾಲ ಆತಂಕಕ್ಕೊಳಗಾಗುವಂತಾಯಿತು ಎಂದು ವಿಮಾನ ನಿಲ್ದಾಣದ ಸಿಬ್ಬಂದಿ…

Read More

ಬೆಂಗಳೂರು : ಈ ಬಾರಿ ಮೈಸೂರು ದಸರಾ ಉದ್ಘಾಟನೆಗೆ ಖ್ಯಾತ ಸಾಹಿತಿ ಬಾನು ಮುಷ್ತಾಕ್ ಅವರನ್ನು ಆಹ್ವಾನಿಸಿದ್ದು, ರಾಜ್ಯ ಸರ್ಕಾರದ ವಿರುದ್ಧ ಇದೀಗ ವಿಪಕ್ಷಗಳು ತೀವ್ರ ಅಕ್ರೋಶ ವ್ಯಕ್ತಪಡಿಸಿವೆ. ಇದೀಗ ಇದೇ ವಿಚಾರವಾಗಿ ವಿಪಕ್ಷ ನಾಯಕ ಆರ್ ಅಶೋಕ್ ದಸರಾ ಉದ್ಘಾಟನೆ, ಮುಲ್ಲಾರ ಪ್ರಕಾರ ನಡೆಯುತ್ತಿದೆ ಎಂದು ಹೇಳಿಕೆ ನೀಡಿದ್ದಾರೆ. ಬೆಂಗಳೂರಿನಲ್ಲಿ ಇದೆ ವಿಚಾರವಾಗಿ ಮಾತನಾಡಿದ ಅವರು, ದಸರಾ ಉದ್ಘಾಟನೆ ಮುಳ್ಳಾರ ಪ್ರಕಾರ ನಡೆಯುತ್ತಿದೆ , ಮುಸ್ಲಿಮರ ಹಬ್ಬವನ್ನು ಹಿಂದುಗಳ ಕೈಯಲ್ಲಿ ಮಾಡಿಸಲಿ ಬಲವಂತವಾಗಿ ಮುಸ್ಲಿಮರಿಂದ ಯಾಕೆ ಉದ್ಘಾಟಿಸಬೇಕು? ಉದ್ಘಾಟನೆಗೆ ಭಾನುಮಷ್ಟಾಕ್ ಅವರನ್ನು ಕರೆಯುವುದು ಸರ್ಕಾರದ ಅಧಿಕಾರ ಅಂತ ಮಾಡಿರಬಹುದು ಏನೋ ಕಾನೂನು ಇರಲಿಲ್ಲ ಹಾಗಾಗಿ ಕೋರ್ಟ್ ನಲ್ಲಿ ಪ್ರತಾಪ್ ಸಿಂಹ ಸಲ್ಲಿಸಿದ ಅರ್ಜಿ ವಜಾ ಆಗಿದೆ. ದಸರಾ ಹಬ್ಬ ಹಿಂದೂ ಸಂಪ್ರದಾಯ ಹಿಂದೂ ಪಂಚಾಂಗದ ಪ್ರಕಾರ ನಡೆದುಕೊಂಡು ಬಂದಿದೆ. ಸಿದ್ದರಾಮಯ್ಯ ಅವರು ಬಂದ ಮೇಲೆ ಒಂದು ರೀತಿ ಮುಲ್ಲಾ lಗಳ ಸರ್ಕಾರ ತಾliಬಾನ್ ಸರ್ಕಾರ ಆಗಿರುವುದರಿಂದ ಪಂಚಾಂಗ ತೆಗೆದು ಪಕ್ಕಕ್ಕೆ…

Read More

ಬೆಂಗಳೂರು : ದೇಶದ ಬಹುತೇಕ ರಾಜ್ಯಗಳಲ್ಲಿ ಹಿಂದಿ ಹೇರಿಕೆ ವಿರುದ್ಧ ಪ್ರತಿಭಟನೆಗಳು ನಡೆಯುತ್ತಿವೆ ಇದೀಗ, ಬೆಂಗಳೂರಿನಲ್ಲಿ ರೈಲ್ವೆ ಇಲಾಖೆಯಿಂದ ಹಿಂದಿ ದಿವಸ್ ಕಾರ್ಯಕ್ರಮ ಆಚರಣೆ ಮಾಡಲಾಗುತ್ತಿದ್ದು, ಈ ವೇಳೆ ಕಾರ್ಯಕ್ರಮಕ್ಕೆ ನುಗ್ಗಿ ಕರವೇ ಕಾರ್ಯಕರ್ತರು ಆಕ್ರೋಶ ಹೊರ ಹಾಕಿದ್ದಾರೆ. ನಗರದ ಗಾಂಧಿನಗರ ಒಳಿಯ ಖಾಸಗಿ ಹೋಟೆಲ್ ನಲ್ಲಿ ಹಿಂದಿ ದಿವಸ್ ಕಾರ್ಯಕ್ರಮ ಆಚರಣೆ ಮಾಡಲಾಗಿತ್ತು. ಈ ವೇಳೆ ಏಕಾಏಕಿ ಕಾರ್ಯಕ್ರಮಜಕ್ಕೆ ನುಗ್ಗಿ ಬ್ಯಾನರ್ ಹರಿದು ಕರವೇ ಮಹಿಳಾ ಕಾರ್ಯಕರ್ತರು ಆಕ್ರೋಶ ಹೊರಹಕಿದ್ದಾರೆ. ಬೆಂಗಳೂರರಿನ ಗಾಂಧಿನಗರ ಬಳಿಯ ಖಾಸಗಿ ಹೋಟೆಲ್ ನಲ್ಲಿ ರೈಲ್ವೆ ಇಲಾಖೆಯವರು ಈ ಒಂದು ಹಿಂದಿ ದಿವಸ್ ಕಾರ್ಯಕ್ರಮ ಯೋಜನೆ ಮಾಡಿದ್ದರು ಏಕಾಏಕಿ ಕರವೇ ಮಹಿಳಾ ಕಾರ್ಯಕರ್ತೆಯರು ಕಾರ್ಯಕ್ರಮದ ಸ್ಥಳಕ್ಕೆ ನುಗ್ಗಿ ಕಾರ್ಯಕ್ರಮದಲ್ಲಿ ಶೀಲ್ಡ್ ಎಲ್ಲ ಒಡೆದು ಹಾಕಿ ಆಕ್ರೋಶ ಹೊರಹಾಕಿದ್ದಾರೆ ಈ ವೇಳೆ ಪೊಲೀಸರು ಬಂದು ಕರವೇ ಕಾರ್ಯಕರ್ತೆಯರನ್ನು ವಶಕ್ಕೆ ಪಡೆದುಕೊಂಡರು.

Read More