Subscribe to Updates
Get the latest creative news from FooBar about art, design and business.
Author: kannadanewsnow05
BREAKING : ರೌಡಿಶೀಟರ್ ಬಿಕ್ಲು ಶಿವ ಕೊಲೆ ಕೇಸ್ : ಬಿಜೆಪಿ ಶಾಸಕ ಭೈರತಿ ಬಸವರಾಜ್ ಗೆ ಫೆ.26 ರವರೆಗೆ ನ್ಯಾಯಾಂಗ ಬಂಧನ!
ಬೆಂಗಳೂರು : ರೌಡಿಶೀಟರ್ ಬಿಕ್ಲು ಶಿವ ಕೋಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಬಿಜೆಪಿ ಶಾಸಕ ಭೈರತಿ ಬಸವರಾಜ್ ಗೆ 5 ದಿನಗಳ ಕಾಲ ಅಂದರೆ ಫೆಬ್ರವರಿ 26 ರವರೆಗೆ ನ್ಯಾಯಾಂಗ ಬಂಧನ ವಿಧಿಸಿ ಬೆಂಗಳೂರಿನ 42ನೇ ACJM ಕೋರ್ಟ್ ಆದೇಶ ಹೊರಡಿಸಿದೆ. ರೌಡಿಶೀಟರ್ ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ ಇತ್ತೀಚಿಗೆ ಶಾಸಕ ಭೈರತಿ ಬಸವರಾಜ್ ತಲೆಮರೆಸಿಕೊಂಡಿದ್ದರು. ಬಳಿಕ ಅವರಾಗಿಯೇ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದರು. ಬಳಿಕ ಕೋರ್ಟ್ ಪೊಲೀಸ್ ಕಸ್ಟಡಿಗೆ ನೀಡಿ ಆದೇಶ ಹೊರಡಿಸಿತ್ತು. ಇದೀಗ ಇಂದು ಪೊಲೀಸ್ ಕಸ್ಟಡಿ ಅಂತ್ಯವಾದ ಹಿನ್ನೆಲೆಯಲ್ಲಿ ಪೊಲೀಸರು ಬೈರತಿ ಬಸವರಾಜ್ ಅವರನ್ನು ಕೋರ್ಟಿಗೆ ಹಾಜರುಪಡಿಸಿದಾಗ ವಿಚಾರಣೆ ನಡೆಸಿದ ನ್ಯಾಯಾಧೀಶರು ಭೈರತಿ ಬಸವರಾಜ್ ಗೆ ಫೆಬ್ರವರಿ 26 ರವರೆಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶ ಹೊರಡಿಸಿದ್ದಾರೆ.
ಕೊಪ್ಪಳ : ಬೀಗರು ತಂದಿದ್ದ ಉಪಹಾರ ಸೇವಿಸಿ ಐವತ್ತಕ್ಕೂ ಹೆಚ್ಚು ಜನ ಅಸ್ವಸ್ಥರಾಗಿದ್ದಾರೆ. ಬುತ್ತಿ ಊಟ ಸೇವಿಸಿ 50 ಕ್ಕೂ ಹೆಚ್ಚು ಜನರು ಅಸ್ವಸ್ಥಗೊಂಡಿರುವ ಘಟನೆ ಕೊಪ್ಪಳ ತಾಲೂಕಿನ ಗುನ್ನಾಳ ಗ್ರಾಮದಲ್ಲಿ ನಡೆದಿದೆ. ವಧುವನ್ನು ಮನೆತೊಂಬಿಸಿಕೊಳ್ಳುವ ದಿನ ಬೀಗರು ಬುತ್ತಿ ತಂದಿದ್ದರು. ಈ ವೇಳೆ ಬುತ್ತಿ ಉಪಹಾರ ಸೇವಿಸಿ 50 ಕ್ಕು ಹೆಚ್ಚು ಜನ ಅಸ್ವಸ್ಥರಾಗಿದ್ದು, ಸದ್ಯ ಅಸ್ವಸ್ಥರನ್ನು ಗುನ್ನಾಳ ಮತ್ತು ಹಿರೇವಂಕಲಕುಂಟ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಚಿಕಿತ್ಸೆ ಬಳಿಕ ಗುಣಮುಖರಾಗಿ ಎಲ್ಲರೂ ಮನೆಗೆ ತೆರಳಿದ್ದಾರೆ ಎಂದು ಹಿರೇವಂಕಲಕುಂಟ ವೈದ್ಯಾಧಿಕಾರಿ ದಯಾನಂದ ಸ್ವಾಮಿ ಮಾಹಿತಿ ನೀಡಿದರು.
ಬೆಂಗಳೂರು : ಬೆಂಗಳೂರಲ್ಲಿ ಜಾಮೀನು ಪಡೆದು ತಲೆಮರಿಸಿಕೊಂಡಿದ್ದ ಶಂಕಿತ ಉಗ್ರನನ್ನು ಇದೀಗ NIA ಅಧಿಕಾರಿಗಳು ಅರೆಸ್ಟ್ ಮಾಡಿದ್ದಾರೆ. ಬೆಂಗಳೂರಿನಲ್ಲಿ ಹರ್ಷದ್ ಖಾನ್ ನನ್ನು NIA ಅರೆಸ್ಟ್ ಮಾಡಿದೆ. ಈ ಹಿಂದೆ ಅರ್ಷದ್ ಖಾನ್ ಅನ್ನು ಸಿಸಿಬಿ ಪೊಲೀಸರು ಅರೆಸ್ಟ್ ಮಾಡಿದ್ದರು. ಗ್ರೀನೆಟ್ ಸಿಕ್ಕಿದ ಪ್ರಕರಣದಲ್ಲಿ ಹರ್ಷದ್ ನನ್ನು ಸಿಸಿಬಿ ಪೊಲೀಸರು ಅರೆಸ್ಟ್ ಮಾಡಿದ್ದರು ಆತನ ಬಂಧನದ ಬಳಿಕ ಕೇಸ್ NIA ಗೆ ವರ್ಗಾವಣೆ ಮಾಡಲಾಗಿತ್ತು ಈ ವೇಳೆ ಜಾಮೀನು ಪಡೆದು ಅರ್ಷದ್ ಖಾನ್ ಜೈಲಿನಿಂದ ಬಿಡುಗಡೆಯಾಗಿದ್ದ. ಜಾಮೀನು ಪಡೆದ ನಂತರ ನ್ಯಾಯಾಲಯಕ್ಕೆ ಹಾಜರಾಗುತ್ತಿರಲಿಲ್ಲ. ನ್ಯಾಯಾಲಯವು ವಾರಂಟ್ ಮತ್ತು ಪ್ರಕ್ಲೊಮೇಷನ್ ಹೊರಡಿಸಿತ್ತು. ನ್ಯಾಯಾಲಯದ ಆದೇಶದಂತೆ ಆರೋಪಿಯನ್ನು ವಿಧಿಗೆ ಬಂದಿಸಿದೆ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಬೆಂಗಳೂರು : ರಾಜ್ಯದಲ್ಲಿ ಮತ್ತೊಂದು ಬೆಚ್ಚಿ ಬೀಳಿಸುವಂತಹ ಘಟನೆ ನಡೆದಿದ್ದು, ಚಾಕೊಲೇಟ್ ನೀಡುವುದಾಗಿ ಬಾಲಕಿಯನ್ನು ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿರುವ ಘಟನೆ ಬೆಂಗಳೂರಿನ ಆನೇಕಲ್ ಪೊಲೀಸ್ ಅಣಾ ವ್ಯಾಪ್ತಿಯಲ್ಲಿ ನಡೆದಿದೆ. ಅಷ್ಟೆ ಅಲ್ಲದೇ 9 ಶಾಲಾ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯಸಿದ ಆರೋಪ ಕೇಳಿ ಬಂದಿದೆ. ಹೌದು 9 ವಿದ್ಯಾರ್ಥಿಗಳಿಗೆಗಳ ಜೊತೆಗೆ ಅಸಭ್ಯವಾಗಿ ವರ್ತನೆ ಆರೋಪ ಕೇಳಿ ಬಂದಿದ್ದು, ಕೃಷ್ಣಮೂರ್ತಿ ಅಲಿಯಾಸ್ ಕಿಟ್ಟಿ ಎಂಬಾತನಿಂದ ಈ ಒಂದು ದುಷ್ಕೃತ್ಯ ನಡೆದಿದೆ. ಶಾಲಾ ಆವರಣ ಮತ್ತು ಶೌಚಾಲಯದಲ್ಲಿ ಲೈಂಗಿಕ ದೌರ್ಜನ್ಯ ಎಸಗಿದ್ದು, ಆರೋಪಿ ಕೃತ್ಯದ ಬಗ್ಗೆ ಪೋಷಕರ ಬಳಿ ಮಕ್ಕಳು ಎಲ್ಲ ವಿಚಾರ ತಿಳಿಸಿದ್ದಾರೆ. ನಿನ್ನೆ ಬೆಳಿಗ್ಗೆ ಆರೋಪಿ ಕೃಷ್ಣ ಮೂರ್ತಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಆನೇಕಲ್ ಪೊಲೀಸ್ ಠಾಣೆಯಲ್ಲಿ ಆರೋಪಿ ವಿರುದ್ಧ ಪೋಕ್ಸೋ ಕೇಸ್ ದಾಖಲಾಗಿದೆ.
ಬೆಂಗಳೂರು : ಬಾಗಲಕೋಟೆಯಲ್ಲಿ ಶಿವಾಜಿ ಮೆರವಣಿಗೆ ಸಂದರ್ಭದಲ್ಲಿ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಈಗಾಗಲೇ ಬಾಗಲಕೋಟೆ ಪೊಲೀಸರು 8 ಆರೋಪಿಗಳನ್ನು ಅರೆಸ್ಟ್ ಮಾಡಿ ಎಫ್ಐಆರ್ ಕೂಡ ದಾಖಲಿಸಿದ್ದಾರೆ. ಈ ಕುರಿತು ಗೃಹ ಸಚಿವ ಜಿ ಪರಮೇಶ್ವರ್ ಅವರು ಕೂಡ ಮಾತನಾಡಿದ್ದಾರೆ. ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಈಗಾಗಲೇ ಅಲ್ಲಿ 8 ಜನರನ್ನು ಬಂಧಿಸಲಾಗಿದೆ ಸದ್ಯ ಎಲ್ಲವೂ ಸಹಜ ಸ್ಥಿತಿಯತ್ತ ಮರಳುತ್ತಿದೆ. ಎಲೆಕ್ಷನ್ ಬರುತ್ತದೆಯಲ್ಲ ಆ ರೀತಿ ತಿಮ್ಮಾಪುರವರು ಆ ರೀತಿ ಹೇಳಿಕೆ ನೀಡಿರಬಹುದು ನಾವು ಕೂಡ ಅಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಸಿಬ್ಬಂದಿ ಯೋಜನೆ ಮಾಡಲಾಗಿದೆ ಎಂದು ಅವರು ತಿಳಿಸಿದರು. ಬಿಜೆಪಿ ನಾಯಕರು ಓಲೈಕೆ ರಾಜಕಾರಣ ಮಾಡುತ್ತಿದ್ದಾರೆ ಎಂದು ಕೇಳಿದ ಪ್ರಶ್ನೆಗೆ ಬಿಜೆಪಿ ನಾಯಕರು ಅದನ್ನೇ ಹೇಳಬೇಕಲ್ಲ ಇನ್ನೇನ್ ಮಾಡೋಕಾಗುತ್ತೆ. ನಾವು ಒಂದು ವರ್ಗಕ್ಕೆ ಕಾನೂನು ಸೀಮಿತ ಮಾಡಲ್ಲ ಯಾರೇ ಇದ್ದರೂ ಕೂಡ ಕಾನೂನು ಎಲ್ಲರಿಗೂ ಒಂದೇ ಭಾರತೀಯ ಜನತಾ ಪಾರ್ಟಿಯವರಿಗೆ ಓಲೈಕೆ ಮಾಡುತ್ತಾರೆ ಮೈನಾರಿಟಿ, ದಲಿತ ವರ್ಗಕ್ಕೆ…
ವಿಜಯಪುರ : ಕಳೆದ ಕೆಲ ತಿಂಗಳುಗಳ ಹಿಂದೆ ಬಳ್ಳಾರಿ ಸಿರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಸರಣಿ ಬಾನಂತಿ ಸಾವು ಪ್ರಕರಣಗಳು ನಡೆದಿದ್ದವು ಇದೀಗ ವಿಜಯಪುರದಲ್ಲಿ ವೈದ್ಯರ ನಿರ್ಲಕ್ಷಕ್ಕೆ ಬಾಣಂತಿ ಒಬ್ಬರು ಸಾವನಪ್ಪಿದ್ದಾರೆ ಅಲ್ಲದೆ ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗದೇ ಆಗ ತಾನೆ ಹುಟ್ಟಿದ ಮಗು ಕೂಡ ಸಾವನ್ನಪ್ಪಿರುವ ಘಟನೆ ವಿಜಯಪುರ ಜಿಲ್ಲೆಯ ಸಿಂದಗಿಯಲ್ಲಿ ನಡೆದಿದೆ. ಜಿಲ್ಲೆಯ ಸಿಂದಗಿ ತಾಲೂಕಿನ ಢವಳಾರ ಗ್ರಾಮದ ನಿವಾಸಿ ಮೈತ್ರಾ ಸುಂಗಠಾಣ (30) ಮೃತ ಬಾಣಂತಿ. ಮೈತ್ರಾಗೆ ಹೆರಿಗೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ, ಕುಟುಂಬಸ್ಥರು ಅವರನ್ನು ಕಾರಿನ ಮೂಲಕ ಮೊದಲು ಯಂಕಂಚಿ ಗ್ರಾಮದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಅಲ್ಲಿನ ಸಿಬ್ಬಂದಿ ಹೆಚ್ಚಿನ ಚಿಕಿತ್ಸೆಗಾಗಿ ಸಿಂದಗಿ ತಾಲೂಕು ಆಸ್ಪತ್ರೆಗೆ ಕರೆದೊಯ್ಯುವಂತೆ ಸೂಚಿಸಿದ್ದರು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಬಳ್ಳಾರಿ : ಬಳ್ಳಾರಿಯಲ್ಲಿ ಘೋರವಾದ ದುರಂತ ಒಂದು ಸಂಭವಿಸಿದ್ದು ಕಂಪ್ಲಿ ಕೋಟೆಯ ತುಂಗಭದ್ರಾ ನದಿ ಸೇತುವೆ ಬಳಿ ಕಬ್ಬಿಣದ ಸ್ವಾಗತ ಕಮಾನು ಅಳವಡಿಸುತ್ತಿದ್ದ ಸಂದರ್ಭದಲ್ಲಿ ಸಿಂಗಲ್ ಚೈನ್ ತುಂಡಾಗಿ ಕೆಳಗೆ ಬಿದ್ದ ಪರಿಣಾಮ ಓರ್ವ ವ್ಯಕ್ತಿ ಮೃತಪಟ್ಟು, ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಗುರುವಾರ ನಡೆದಿದೆ.ಕಂಪ್ಲಿಯ 4ನೇ ವಾರ್ಡ್ ನಿವಾಸಿ ವೆಲ್ಡಿಂಗ್ ಲೇಬರ್ ಶೇಕ್ಷಾವಲಿ (35) ಮೃತಪಟ್ಟ ದುರ್ದೈವಿ. ತುಂಗಭದ್ರಾ ನದಿ ಸೇತುವೆ ಹತ್ತಿರದಲ್ಲಿರುವ ಸ್ವಾಗತ ಕಮಾನು ನವೀಕರಣ ಕಾರ್ಯ ನಡೆದಿದೆ. ಮಧ್ಯಾಹ್ನದ ಸಮಯದಲ್ಲಿ ಕ್ರೇನ್ನಿಂದ ಚೈನಿನ ಮೂಲಕ ಕಮಾನನ್ನು ಮೇಲೆತ್ತಿ ಕೂರಿಸುವ ವೇಳೆ ಚೈನ್ ಕಟ್ಟಾಗಿ ಕಮಾನು ಕೆಳಗೆ ಬಿದ್ದಿದೆ. ಕೆಳಗೆ ನಿಂತಿದ್ದ ಶೇಕ್ಷಾವಲಿ ಮೇಲೆ ಕಮಾನು ಬಿದ್ದ ಪರಿಣಾಮ ತಲೆಗೆ ಬಲವಾದ ಪೆಟ್ಟಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಗಂಗಾವತಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ಆಸ್ಪತ್ರೆಯಲ್ಲಿ ಆತ ಸಾವನ್ನಪ್ಪಿದ್ದಾನೆ. ಗಂಭೀರವಾಗಿ ಗಾಯಗೊಂಡಿರುವ ಇನಾಯತ್‌ಗೆ ಗಂಗಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕರೀಂ ಎಂಬ ವ್ಯಕ್ತಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಕಂಪ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಯಾವುದೇ…
ತುಮಕೂರು : ತುಮಕೂರಿನಲ್ಲಿ ಅಮಾನವೀಯ ಘಟನೆ ಒಂದು ನಡೆದಿದ್ದು ದೇವರು ಬಂದಂತೆ ನಾಟಕವಾಡಿ ನವದಂಪತಿಗಳನ್ನು ದೇವಸ್ಥಾನದಿಂದ ಗ್ರಾಮಸ್ಥರು ಹೊರಗಡೆ ಕಳಿಸಿರುವ ಘಟನೆ ವರದಿಯಾಗಿದೆ. ಗೋಣಿ ತುಮಕೂರಿನ ಅರಸಮ್ಮ ದೇಗುಲದಲ್ಲಿ ಈ ಒಂದು ಘಟನೆ ನಡೆದಿದೆ. ತುಮಕೂರು ಜಿಲ್ಲೆಯ ತುರುವೇಕೆರೆ ತಾಲೂಕಿನ ಗೋಣಿ ತುಮಕೂರು ಗ್ರಾಮದಲ್ಲಿ ನವ ದಂಪತಿಗಳು ದೇಗುಲಕ್ಕೆ ಹೋಗಿದ್ದಾಗ ಗ್ರಾಮಸ್ಥರು ಹೊರ ಕಳುಹಿಸಿದ್ದಾರೆ. ದೇವಾಲಯದ ಒಳಗಿದ್ದ ಮೇಲ್ಜಾತಿ ವ್ಯಕ್ತಿ ದೇವರು ಬಂದಂತೆ ನಟಿಸಿದ್ದಾನೆ. ದೇವಾಲಯಕ್ಕೆ ಬಂದ ದಲಿತ ಕುಟುಂಬವನ್ನು ಹೊರ ಕಳುಹಿಸಿ ಅವಮಾನ ಮಾಡಿದ್ದಾನೆ. ದಲಿತರಿಗೆ ಪ್ರವೇಶವಿಲ್ಲ ಎಂದು ಗದರಿ ನಾರಾಯಣಪ್ಪ ಹೊರ ಕಳುಹಿಸಿದ್ದಾನೆ. ಗ್ರಾಮಸ್ಥರ ನಡವಳಿಕೆಗೆ ಬೇಸತ್ತು ದಂಪತಿಗಳು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಘಟನೆ ಸಂಭಂದ ತುರುವೇಕೆರೆ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಪ್ರಭಾ, ಕಾಂತಣ್ಣ, ಅಮೂಲ್ಯ, ಪುಟ್ಟೇಗೌಡ ಸೇರಿ ಹಲವರ ವಿರುದ್ಧ FIR ದಾಖಲಾಗಿದೆ. ದೇವರ ಬಂದಂತೆ ನಾಟಕವಾಡಿದ ನಾರಾಯಣಪ್ಪನನ್ನು ಅರೆಸ್ಟ್ ಮಾಡಲಾಗಿದೆ ಉಳಿದ ಆರೋಪಿಗಳಿಗಾಗಿ ತುರುವೇಕೆರೆ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
ಕಲಬುರ್ಗಿ : ಕಲ್ಬುರ್ಗಿಯಲ್ಲೂ ಶಿವಾಜಿ ಮೆರವಣಿಗೆ ವೇಳೆ ಗಲಾಟೆ ನಡೆದಿದೆ ಡ್ಯಾನ್ಸ್ ಮಾಡುವಾಗ ಎಲ್ಲೂ ಸಮುದಾಯದ ನಡುವೆ ಮಾರಮಾರಿ ಆಗಿದೆ ಗ್ರಾಮದಲ್ಲಿ ಈ ಒಂದು ಘಟನೆ ನಡೆದಿದೆ. ರಾವುರ್ ಗ್ರಾಮದ ಗೋಕುಲ್ ನಗರದ ಗಣೇಶ್ ಕಟ್ಟಿ ಮೇಲೆ ಶಿವಾಜಿ ಮಹಾರಾಜರ ಫೋಟೋ ಇಟ್ಟು ಆಚರಣೆ ಮಾಡಲಾಗಿತ್ತು. ಸೌಂಡ್ ಬಾಕ್ಸ್ ಹಚ್ಚಿ ಡಾನ್ಸ್ ಮಾಡುವಾಗ, ಮತ್ತೊಂದು ಸಮುದಾಯ ಕಿರಿಕ್ ಮಾಡಿದೆ. ಸೌಂಡ್ ಬಾಕ್ಸ್ ಸೌಂಡ್ ಕಡಿಮೆ ಮಾಡಿ ಎಂದಿದ್ದಕ್ಕೆ ಗಲಾಟೆ ಆಗಿದ್ದ. 2 ಸಮುದಾಯದ ಜನ ಕಟ್ಟಿಗೆ ಕಲ್ಲು ಗಳಿಂದ ಗಲಾಟೆ ಮಾಡಿದ್ದಾರೆ. ವಿಡಿಯೋ ಇದೀಗ ವೈರಲ್ ಆಗಿದೆ.ಆದರೆ ಘಟನೆ ಸಂಭಂದ ಯಾವುದೇ ಸಮುದಾಯವಾಗಲಿ ಇದುವರೆಗೂ ಪೊಲೀಸ್ ಠಾಣೆಗೆ ದೂರು ನೀಡಿಲ್ಲ ಎಂದು ತಿಳಿದುಬಂದಿದೆ.
ಗದಗ : ಲಕ್ಕುಂಡಿ ನಿಧಿ ರಹಸ್ಯ ಬೆನ್ನಲ್ಲೇ 2022 ರಲ್ಲಿ ನಡೆದ ಒಂದು ವಂಚನೆ ಇದೀಗ ಬಯಲಾಗಿದೆ. 2022 ರಲ್ಲಿ ನಿಧಿ ಹುಡುಕಿ ಕೊಡುವುದಾಗಿ ವಂಚನೆ ಇದ್ದ ಆರೋಪಿಯನ್ನು ಅರೆಸ್ಟ್ ಮಾಡಲಾಗಿದೆ ಉತ್ತರಾಖಂಡನ ಕಾಶಿಪುರದ ಹಜರತ್ ಮೌಲ್ವಿ ಬಂದಿದ ಆರೋಪಿ ಎಂದು ತಿಳಿದುಬಂದಿದೆ. ನಿಧಿ ಪತ್ತೆ ಆಗಿದೆ ಎಂದು ಲಕ್ಕುಂಡಿ ಗ್ರಾಮದಾದ್ಯಂತ ವಿಷಯ ಹಬ್ಬಿತ್ತು. ಜಮೀನು ಮಾಲೀಕರನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಾರೆ. ವಿಚಾರಣೆ ಮಾಡಿದಾಗ ನಿಧಿ ಹುಡುಕುವ ಮೋಸದಾಟ ಇದೀಗ ಬಯಲಾಗಿದೆ. ಸಣ್ಣಬಸಪ್ಪ ಮತ್ತು ದೊಡ್ಡಬಸಪ್ಪಗೆ ಹಾಜರತ್ ಮಾಲ್ವಿ, ವಂಚನೆ ಎಸಗಿದ್ದ ಎನ್ನುವುದು ತನಿಖೆಯ ವೇಳೆ ತಿಳಿದುಬಂದಿದೆ. 2022 ರಲ್ಲಿ ಇಬ್ಬರ ಜಮೀನಿನಲ್ಲಿ ನಿಧಿ ಪತ್ತೆಯಾಗಿದೆ ಎಂದು ವದಂತಿ ಹಬ್ಬಿತ್ತು. ಸಣ್ಣ ಬಸಪ್ಪ ಮತ್ತು ದೊಡ್ಡಬಸಪ್ಪ ಎಂಬುವವರ ಜಮೀನಿನಲ್ಲಿ ನಿಧಿಪತ್ತೆಯಾಗಿದೆ ಎಂದು ಹಬ್ಬಿತ್ತು. ಇದೀಗ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದ ವಿಚಾರಣೆ ನಡೆಸಿದಾಗ ವಂಚನೆ ಕೃತಿಯ ಬಯಲಾಗಿದೆ ಹಾರೋಡಿ ಗುಂಡಿಯೊಳಗೆ ಹಂಡೆಯಲ್ಲಿ ಚಿನ್ನವಿಟ್ಟು ಹಿತ ನಂಬಿಸಿದ್ದ ನಿಧಿ ಸಿಕ್ಕಿದೆ…














