Subscribe to Updates
Get the latest creative news from FooBar about art, design and business.
Author: ಸುರೇಶ್
"ಕನ್ನಡ ನ್ಯೂಸ್ ನೌ ಜಾಲತಾಣದ ಮುಖ್ಯ ಸಂಪಾದಕರಾದ ಸುರೇಶ್ ಅವರು ಕಳೆದ 4 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದಾರೆ. ಸರ್ಕಾರದ ಯೋಜನೆಗಳು, ಶಿಕ್ಷಣ ಮತ್ತು ಪ್ರಚಲಿತ ವಿದ್ಯಮಾನಗಳನ್ನು ಸಾಮಾನ್ಯ ಜನರಿಗೂ ಅರ್ಥವಾಗುವಂತೆ ವಿವರಿಸುವುದು ಇವರ ವಿಶೇಷತೆ. ಈ ಮೊದಲು ವಿವಿಧ ವೆಬ್‌ಸೈಟ್‌ಗಳಲ್ಲಿ ನಾಗರಿಕ ಸಮಸ್ಯೆಗಳ ಬಗ್ಗೆ ವರದಿಗಾರರಾಗಿ ಕೆಲಸ ಮಾಡಿರುವ ಇವರು, ಸಮಯೋಚಿತ ಹಾಗೂ ವಿಶ್ವಾಸಾರ್ಹ ಮಾಹಿತಿ ನೀಡುವ ಮೂಲಕ ಓದುಗರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಡಿಜಿಟಲ್ ಸಾಕ್ಷರತೆ ಇವರ ನೆಚ್ಚಿನ ವಿಷಯಗಳಲ್ಲೊಂದು
ಬೆಂಗಳೂರು : ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಬಳಿ ಇರುವ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಏರ್ಪೋರ್ಟ್ ನ ರನ್ ವೇ ನಲ್ಲಿ ಏಕಾಏಕಿ ಬೃಹತ್ ಬಲೂನ್ ಹಾರಿ ಬಂದಿದೆ. ವಿಮಾನ ಟೇಕ್ ಅಪ್ ಮತ್ತು ಲ್ಯಾಂಡಿಂಗ್ ಪ್ರದೇಶಕ್ಕೆ ಬೃಹತ್ ಬಲೂನ್ ಹಾರಿ ಬಂದಿದೆ. ಬಿ ಸಿ ಡಿ ಕನ್ಸ್ಟ್ರಕ್ಷನ್ ಎಂಬ ಕಂಪನಿ ಗೆ ಈ ಬೃಹತ್ ಬಲೂನ್ ಸೇರಿದ್ದು ರನ್ ವೇ ನಲ್ಲಿ ವಿಮಾನಗಳ ಹಾರಾಟವಿಲ್ಲದ ಕಾರಣ ಭಾರಿ ಅನಾಹುತ ತಪ್ಪಿದೆ. ಫೆಬ್ರವರಿ 5 ರಂದು ನಡೆದಿರುವ ಘಟನೆ ತಡವಾಗಿ ಬಳಕೆಗೆ ಬಂದಿದೆ. ದಾರ ಕಟ್ ಆಗಿ ರನ್ ವೇ ಕಡೆಗೆ ಬಲೂನ್ ಹಾರಿ ಬಂದಿರುವ ಶಂಕೆ ವ್ಯಕ್ತವಾಗಿದೆ. ಬಿ ಸಿ ಡಿ ಕನ್ಸ್ಟ್ರಕ್ಷನ್ ವಿರುದ್ಧ ಏರ್ಪೋರ್ಟ್ ಭದ್ರತಾ ಸಿಬ್ಬಂದಿ ದೂರು ನೀಡಿದ್ದು ಕೆಂಪೇಗೌಡ ಏರ್ಪೋರ್ಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಜಯಪುರ : ಬೆಂಗಳೂರಿನಲ್ಲಿ ಇಂದು ಬೆಳಿಗ್ಗೆ ತಾನೇ ಸರ ಕಳ್ಳತನ ನಡೆದಿದ್ದು ಸರಗಳ್ಳರಿಂದ ಬಿಡಿಸಿಕೊಳ್ಳಲು ಹೋದಾಗ ಕುಸಿದು ಬಿದ್ದು ಮಹಿಳೆ ಒಬ್ಬರು ಸಾವನ್ನಪ್ಪಿದ್ದ ಘಟನೆ ನಡೆದಿದೆ. ಅದರ ಬೆನ್ನಲ್ಲೆ ಇದೀಗ ವಿಜಯಪುರ ಜಿಲ್ಲೆಯಲ್ಲಿ ಹಾಡಹಗಲೇ ಬಸ್ ನಿಲ್ದಾಣದಲ್ಲಿ ನಿಂತಿದ್ದ ಮಹಿಳೆಯರ ಚಿನ್ನದ ಕದ್ದು ಪರಾರಿ ಆಗಿದ್ದಾರೆ. ಹೌದು ವಿಜಯಪುರ ಜಿಲ್ಲೆಯಲ್ಲಿ ಕಳ್ಳರ ಹಾವಳಿ ಮತ್ತೆ ಮುಂದುವರೆದಿದೆ. ಬಸ್ ನಿಲ್ದಾಣದಲ್ಲಿ ಇದ್ದಂತಹ ಮಹಿಳೆಯರ ಚಿನ್ನದ ಸರ ಕಿತ್ತುಕೊಂಡು ಪರಾರಿಯಾಗಿದ್ದಾರೆ. ವಿಜಯಪುರ ಜಿಲ್ಲೆಯ ಇಂಡಿ ಹಾಗೂ ಆಲಮೇಲದಲ್ಲಿ ಪ್ರತ್ಯೇಕ ಘಟನೆಗಳು ನಡೆದಿವೆ. ಬಸ್ ಏರುವಾಗ ಮಹಿಳೆಯರ ಚಿನ್ನದ ಸರ ಕಿತ್ತುಕೊಂಡು ಸರಗಳ್ಳರು ರಪರಾರಿಯಾಗಿದ್ದಾರೆ. ಬೈಕ್ ನಲ್ಲಿ ಬಂದಂತಹ ದುಷ್ಕರ್ಮಿಗಳು ಹಾಡಹಗಲೇ ಚಿನ್ನ ಸರ ಕಿತ್ತುಕೊಂಡು ಪರಾಗಿದ್ದಾರೆ. ಇಂಡಿಷ ಹಾರ ಹಾಗು ಅಲ್ಮೆಲ್ ಪೋಲಿಸ್ ಅಣ್ಣ ವ್ಯಾಪ್ತಿಯಲ್ಲಿ ಈ ಘಟನೆಗಳು ನಡೆದಿದೆ.
ಬೆಂಗಳೂರು : ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ನಲ್ಲಿ ಆರ್‌ಸಿಬಿ ಮ್ಯಾಚ್ ನಡೆಸುವ ವಿಚಾರವಾಗಿ ಇಂದು ಕೆ ಎಸ್ ಇ ಎ ಹಾಗೂ ಆರ್‌ಸಿಬಿ ನಿಯೋಗ ಬೆಂಗಳೂರಿನಲ್ಲಿ ಗೃಹ ಸಚಿವ ಜಿ ಪರಮೇಶ್ವರ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿತು. KSCA ಅಧ್ಯಕ್ಷ ವೆಂಕಟೇಶ್ ಪ್ರಸಾದ ಹಾಗೂ RCB ಯ ರಾಜೇಶ್ ಮೆನನ್ ಭೇಟಿ ಮಾಡಿ ಚರ್ಚಿಸಿದರು. ಇನ್ನು ಇದೇ ವಿಚಾರವಾಗಿ ಗೃಹ ಸಚಿವ ಜಿ ಪರಮೇಶ್ವರ್ ಅವರು ಮಾತನಾಡಿದ್ದು ನ್ಯಾ.ಕುನ್ಹಾ ವರದಿಯ ಶಿಫಾರಸು ಪಾಲಿಸಬೇಕು ಅಂತ ಹೇಳಿದ್ದೇವೆ. ಈ ಕುರಿತು ಸಮಿತಿ ಸಹ ರಚನೆಯಾಗಿತ್ತು. ಸಮಿತಿಯು ಕೂಡ ಒಂದಷ್ಟು ಶಿಫಾರಸು ಮಾಡಿದೆ. ಐಪಿಎಲ್ ಕೂಡ ಬರುತಿದೆ ಬುಧವಾರ ನಾನು ಮತ್ತೆ ಸಭೆ ಕರೆದಿದ್ದೇನೆ ಎಂದರು. ಸರ್ಕಾರದಿಂದ ಏನು ಸೂಚನೆ ಕೊಡಬೇಕು ಆ ಕುರಿತು ಪರಿಶೀಲಿಸುತ್ತೇವೆ. ಸಿಎಂ ಸಿದ್ದರಾಮಯ್ಯ ಅವರ ಜೊತೆಗೆ ಕೂಡ ಈ ವಿಚಾರವಾಗಿ ಚರ್ಚೆ ಮಾಡಬೇಕಾಗಿದೆ. ಬೆಂಗಳೂರಿನಲ್ಲಿ ಆರ್‌ಸಿಬಿ ಮ್ಯಾಚ್ ಆಗಬೇಕು ಎಂದು ಅಭಿಮಾನಿಗಳು ಬಯಸುತ್ತಿದ್ದಾರೆ. ಹಾಗಾಗಿ ಎಲ್ಲವನ್ನು ನೋಡಿ ಒಂದು…
ಬೆಳಗಾವಿ : ಮಹಿಳಾ ಅಧಿಕಾರಿಯ ಮನೆಯಲ್ಲಿ ಕ್ಯಾಮೆರಾ ಇಟ್ಟಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮತ್ತೊರ್ವ ಸರ್ಕಾರಿ ಅಧಿಕಾರಿಯಿಂದ ಖತರ್ನಾಕ್ ಸ್ಕೆಚ್ ಹಾಕಲಾಗಿತ್ತು. ವೃತ್ತಿ ವೈಷಮ್ಯ ಹಿನ್ನೆಲೆಯಲ್ಲಿ ಮಹಿಳಾ ಅಧಿಕಾರಿಯ ತೇಜೋವಧೆಗೆ ಈ ಒಂದು ಕ್ಯಾಮೆರಾ ಫಿಕ್ಸ್ ಮಾಡಲಾಗಿದೆ ಎಂದು ತಿಳಿದುಬಂದಿದೆ. ಇದೀಗ ಮಾಳ ಮಾರುತಿ ಪೊಲೀಸರಿಂದ ಟಿ.ವಿನೋದ ಎಂಬಾತನನ್ನು ಬಂಧಿಸಲಾಗಿದೆ. ಮಹಿಳಾ ಅಧಿಕಾರಿಯ ವಿರುದ್ಧ ಸೇಡು ತೀರಿಸಿಕೊಳ್ಳಲು ಮತ್ತೋರ್ವ ಅಧಿಕಾರಿ ಅಡ್ಡದಾರಿ ಹಿಡಿದಿದ್ದಾನೆ. ಖಾಸಗಿ ವಿಡಿಯೋ ದುರ್ಬಳಕೆ ಮಾಡಿಕೊಳ್ಳಲು ಸ್ಕೆಚ್ ಹಾಕಿದ್ದಾನೆ. ಟಿ ವಿನೋದ್ ಎಂಬಾತನನ್ನು ಮಹಿಳಾ ಅಧಿಕಾರಿ ವರ್ಗಾವಣೆ ಮಾಡಿದ್ದರು. ಹಾಗಾಗಿ ಆತ ಸೇಡು ತೀರಿಸಿಕೊಳ್ಳಲು ಈ ರೀತಿ ಅಡ್ಡದಾರಿ ಹಿಡಿದಿದ್ದಾನೆ. ಪೊಲೀಸರಿಂದ ವಿನೋದ್ ಮೊಬೈಲ್ ಪರಿಶೀಲನೆ ಆಗಿದ್ದು ಮಹಿಳಾ ಅಧಿಕಾರಿ ವಿರುದ್ಧ ನಕಲಿ ಪತ್ರಕರ್ತರನ್ನು ಛೂ ಬಿಟ್ಟಿದ್ದಾನೆ. ಮಹಿಳಾ ಅಧಿಕಾರಿಗೆ ಹೆದರಿಸಿ ಹಣ ಲಪಟಾಯಿಸಲು ಪ್ಲಾನ್ ಮಾಡಿದ್ದಾರೆ. ಬಂದಲ್ಲಿ ಇಬ್ಬರಿಗೂ ಪಾಲು ಎಂದು ನಿರ್ಧಾರವಾಗಿತ್ತಂತೆ. ನಕಲಿ ಪತ್ರಕರ್ತರು ಹಾಗೂ ವಿನೋದನೀಗೆ ಪಾಲು ಇತ್ತು ಮಹಿಳಾಧಿಕಾರಿ ಖಾಸಗಿ ದೃಶ್ಯವನ್ನು ಸಂಗ್ರಹಿಸಿ ಬ್ಲಾಕ್…
ಬೆಂಗಳೂರು : ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ನಲ್ಲಿ RCB ಮ್ಯಾಚ್ ನಡೆಸುವ ವಿಚಾರವಾಗಿ ಗೃಹ ಸಚಿವ ಜಿ ಪರಮೇಶ್ವರ್ ಅವರನ್ನು ಕೆ ಎಸ್ ಎಸ್ ಸಿ ಎ ನಿಯೋಗ ಮತ್ತು ಆರ್‌ಸಿಬಿ ನಿಯೋಗ ಭೇಟಿ ಮಾಡಿದೆ. ಕೆಎಸ್‌ಸಿ ಅಧ್ಯಕ್ಷ ವೆಂಕಟೇಶ ಪ್ರಸಾದ್ ಆರ್ಸಿಬಿಯ ರಾಜೇಶ್ ಮೆನನ್ ನೇತೃತ್ವದ ನಿಯೋಗ ಇಂದು ಬೆಂಗಳೂರಿನಲ್ಲಿ ಗೃಹ ಸಚಿವ ಜಿ ಪರಮೇಶ್ವರ್ ಅವರನ್ನು ಭೇಟಿ ಮಾಡಿ, ಚಿನ್ನಸ್ವಾಮಿ ಸ್ಟೇಡಿಯಂ ನಲ್ಲಿ ಆರ್ ಸಿ ಬಿ ಮ್ಯಾಚ್ ನಡೆಸುವ ವಿಚಾರವಾಗಿ ಚರ್ಚಿಸಿದ್ದಾರೆ. ಇದೆ 12 rNdu ಮತ್ತೊಂದು ಸುತ್ತಿನ ಸಭೆ ನಡೆಸಲಾಗುತ್ತೆ. ಅಂತಿಮ ತೀರ್ಮಾನ ಕೈಗೊಳ್ಳುವ ಬಗ್ಗೆ ಗೃಹ ಸಚಿವರು ಭರವಸೆ ನೀಡಿದ್ದಾರೆ ಎಂದು ಬಲ್ಲಮೂಲಗಳಿಂದ ತಿಳಿದು ಬಂದಿದೆ.
ಬೆಂಗಳೂರು: ಸ್ನಾತಕೋತ್ತರ ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕೆ 3ನೇ ಸುತ್ತಿನ ಸೀಟು ಹಂಚಿಕೆಗೆ ಆಪ್ಷನ್ಸ್ ದಾಖಲಿಸಲು ಫೆ.10ರಂದು ಬೆಳಗ್ಗೆ 8 ಗಂಟೆವರೆಗೆ ದಿನಾಂಕ ವಿಸ್ತರಿಸಲಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (KEA) ಆಡಳಿತಾಧಿಕಾರಿ ಇಸ್ಲಾವುದ್ದೀನ್ ಗದ್ಯಾಳ ತಿಳಿಸಿದ್ದಾರೆ. ಸೀಟು ಹಂಚಿಕೆಯಾದವರು ಫೆ.12ರಿಂದ 13ರವರೆಗೆ ಶುಲ್ಕ ಪಾವತಿಸಿ, ಪ್ರವೇಶ ಪತ್ರ ಡೌನ್‌ಲೋಡ್ ಮಾಡಿಕೊಳ್ಳಬೇಕು. ಫೆ.14ರೊಳಗೆ ಕಾಲೇಜುಗಳಿಗೆ ವರದಿ ಮಾಡಿಕೊಳ್ಳಬೇಕು. ಹೆಚ್ಚಿನ ವಿವರಗಳಿಗೆ ಮೇಲಿಂದ ಮೇಲೆ ಕೆಇಎ ವೆಬ್‌ಸೈಟ್ ನೋಡಬೇಕು ಎಂದು ಅವರು ಸಲಹೆ ನೀಡಿದ್ದಾರೆ. ತಾತ್ಕಾಲಿಕ ಸೀಟು ಹಂಚಿಕೆಯನ್ನು ಫೆ.10ರಂದು ಸಂಜೆ 5 ಗಂಟೆ ಹಾಗೂ ಅಂತಿಮ ಸೀಟು ಹಂಚಿಕೆ ಫಲಿತಾಂಶವನ್ನು ಫೆ.11ರಂದು ಮಧ್ಯಾಹ್ನ 1 ಗಂಟೆ ನಂತರ ಪ್ರಕಟಿಸಲಾಗುತ್ತದೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಬೆಂಗಳೂರು : ರಾಜ್ಯದಲ್ಲಿ ಬೆಚ್ಚಿ ಬೀಳಿಸುವಂತಹ ಘಟನೆ ನಡೆದಿದ್ದು, ಪಾಪಿ ಮಗಳೋಬ್ಬಳು ಪ್ರಿಯಕರಣಿಗೆ ತನ್ನ ತಾಯಿ ಹಾಗೂ ಸಂಬಂಧಿಕರ ಖಾಸಗಿ ಫೋಟೋ ಕಳುಹಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಈ ಹಿನ್ನೆಲೆ ತಾಯಿ ಮಗಳು ಮತ್ತು ಆಕೆ ಪ್ರಿಯಕರನ ವಿರುದ್ಧ ಬೆಂಗಳೂರಿನ ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಇಬ್ಬರ ವಿರುದ್ಧ ಪ್ರಕರಣ ದಾಖಲಾಗಿದೆ. ವಿದ್ಯಾಭ್ಯಾಸಕ್ಕೆ ಎಂದು ಯುವತಿ ಪೋಷಕರ ಬಳಿ ಮೊಬೈಲ್ ಪಡೆದಿದ್ದಳು. ತಿಂಗಳ ಹಿಂದೆ ಯುವಕನ ಜೊತೆ ಮಾತನಾಡಿ ಯುವತಿ ಸಿಕ್ಕಿಬಿದ್ದಿದ್ದಾಳೆ. ಆದರೆ ಮೊಬೈಲ್ ಮತ್ತು ಪಾಸ್ವರ್ಡ್ ನೀಡಿದ 23 ವರ್ಷದ ಮಗಳು, ಇತ್ತೀಚಿಗೆ ತಂದೆಗೆ ವಿಷಯ ತಿಳಿಸಿ ತಾಯಿ ಪಾಸ್ವರ್ಡ್ ಪಡೆದಿದ್ದಳು. ಮೊಬೈಲ್ ಪರಿಶೀಲನೆ ಮಾಡಿದಾಗ ಮಗಳ ಈ ಒಂದು ಕೃತ್ಯ ಬೆಳಕಿಗೆ ಬಂದಿದೆ. ತಾಯಿ ಮತ್ತು ಆಂಟಿ ಮಲಗಿದ್ದಾಗ ಖಾಸಗಿ ಫೋಟೋ ತೆಗೆದು ಮಗಳು ಪ್ರಿಯಕರನಿಗೆ ಕಳುಹಿಸಿದ್ದಾಳೆ. ಈ ಕುರಿತು ಪ್ರಶ್ನೆ ಮಾಡಿದಾಗ ಆತನನ್ನೇ ಮದುವೆಯಾಗುವುದಾಗಿ ಮಗಳು ಹಠಕ್ಕೆ ಬಿದ್ದಿದ್ದಾಳೆ. ಮಗಳಿಗೆ ಬುದ್ಧಿ ಹೇಳಿ ತಾಯಿ ಫೋಟೋಗಳನ್ನು…
ಬೆಂಗಳೂರು : ಸರಗಳ್ಳರಿಂದ ಬಿಡಿಸಿಕೊಳ್ಳುವಾಗ ಕುಸಿದು ಬಿದ್ದು ಮಹಿಳೆ ಒಬ್ಬರು ಸಾವನಪ್ಪಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಹುಸ್ಕೂರು ಗ್ರಾಮದಲ್ಲಿ ನಡೆದಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಹುಸ್ಕೂರು ಗ್ರಾಮದಲ್ಲಿ ಮನೆಯ ಮುಂದೆ ಕಸ ಗುಡಿಸುತ್ತಿದ್ದಾಗ ಸರಗಳ್ಳರು ಮಹಿಳೆಯ ಮಾಂಗಲ್ಯ ಸರ ಕಸಿದು ಪರಾರಿಯಾಗುತ್ತಿದ್ದರು. ಕಳ್ಳರು ಸ್ಪ್ರೇ ಸಿಂಪಡಿಸಿದ್ದರಿಂದ ಕುಸಿದು ಬಿದ್ದು ಜ್ಯೋತಿ (45) ಸಾವನ್ನಪ್ಪಿದ್ದರೆ. ಮಾದನಾಯಕನಹಳ್ಳಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ಕೊಪ್ಪಳ : ಶಾಲಾ ಕಟ್ಟಡ ನಿರ್ಮಾಣಕ್ಕೆ ಜಮೀನು ನೀಡಿದರೆ ವೈಯಕ್ತಿಕವಾಗಿ ಒಂದು ಲಕ್ಷ ರೂಪಾಯಿ ನೀಡುತ್ತೇನೆ ಎಂದು ಗ್ರಾಮಸ್ಥರಿಗೆ ಮುಖ್ಯಮಂತ್ರಿ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಹೀಗೆ ಒಂದು ಆಫರ್ ನೀಡಿದ್ದಾರೆ. ಪ್ರತೀ ಎಕರೆಗೆ ರೂ. 1 ಲಕ್ಷ ನೀಡುವುದಾಗಿ ಬಸವರಾಜ ರಾಯರೆಡ್ಡಿ ಆಫರ್ ನೀಡಿದ್ದಾರೆ. ಶಾಲಾ ಕಟ್ಟಡ ನಿರ್ಮಾಣಕ್ಕೆ ಜಮೀನು ನೀಡಬೇಕು ಎಂದು ಬಸವರಾಜ್ ರೆಡ್ಡಿ ಮನವಿ ಮಾಡಿದ್ದು, ಕೊಪ್ಪಳ ಜಿಲ್ಲೆಯ ಯಲಬುರ್ಗಾ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹುಲಿಗುಡ್ಡ ಗ್ರಾಮಸ್ಥರಿಗೆ ಮನವಿ ಮಾಡಿದ್ದಾರೆ. ಕುಕನೂರ ತಾಲೂಕಿನ ನೆಲಜೇರಿ ಸೋಂಪುರದಲ್ಲಿ ಶಾಲಾ ಕಟ್ಟಡ ನಿರ್ಮಾಣ ಮಾಡಲಾಗುತ್ತಿದ್ದು, ಪ್ರೌಢಶಾಲಾ ಕಟ್ಟಡ ನಿರ್ಮಾಣಕ್ಕೆ ಸರ್ಕಾರದಿಂದ ಎರಡು ಕೋಟಿ ರೂಪಾಯಿ ಮಂಜೂರಾಗಿದೆ. ಆದರೆ ಜಮೀನು ಲಭ್ಯವಿರದ ಕಾರಣ ಕಟ್ಟಡ ಪ್ರಾರಂಭ ಮಾಡಲು ಆಗುತ್ತಿಲ್ಲ. ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಗ್ರಾಮಸ್ಥರು ಜಮೀನು ನೀಡಬೇಕು ಸರಕಾರ ಪ್ರತ್ಯೇಕವಾಗಿ ಅಂದಾಜು ಆರರಿಂದ ಏಳು ಲಕ್ಷ ರೂಪಾಯಿ ನೀಡುತ್ತದೆ. ನಾನು ಕೂಡ ವಯಕ್ತಿಕವಾಗಿ ಒಂದು ಲಕ್ಷ ನೀಡುತ್ತೇನೆ. ಕೂಡಲೇ ಗ್ರಾಮಸ್ಥರು ಜಮೀನು ನೀಡಬೇಕು…
ಮಂಡ್ಯ : ದಳವಾಯಿ ಕೋಡಿಹಳ್ಳಿ ಗ್ರಾಮದಲ್ಲಿ ತಾಯಿ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ದಳವಾಯಿ ಕೋಡಿಹಳ್ಳಿ ಈ ಒಂದು ಘಟನೆ ನಡೆದಿದ್ದು ನೇಣು ಬಿಗಿದುಕೊಂಡು ಶಂಕುತಲಾದೇವಿ (46) ಪ್ರಿಯಾಂಕ (19) ಆತ್ಮಹತ್ಯೆಗೆ ಶರಣಾಗಿದ್ದಾರೆ. ಪ್ರಿಯಾಂಕಾಳ ಮದುವೆಗೆ ಕುಟುಂಬದ ಸದಸ್ಯರು ಸಿದ್ಧತೆ ನಡೆಸಿದರು ಮದುವೆ ಸಿದ್ಧತೆ ನಡುವೆ ತಾಯಿ ಮತ್ತು ಮಗಳು ನೇಣಿಗೆ ಶರಣಾಗಿದ್ದಾರೆ. ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಘಟನೆ ಕುರಿತಂತೆ ಹಲಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.














