Author: ಸುರೇಶ್‌

"ಕನ್ನಡ ನ್ಯೂಸ್ ನೌ ಜಾಲತಾಣದ ಮುಖ್ಯ ಸಂಪಾದಕರಾದ ಸುರೇಶ್ ಅವರು ಕಳೆದ 4 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದಾರೆ. ಸರ್ಕಾರದ ಯೋಜನೆಗಳು, ಶಿಕ್ಷಣ ಮತ್ತು ಪ್ರಚಲಿತ ವಿದ್ಯಮಾನಗಳನ್ನು ಸಾಮಾನ್ಯ ಜನರಿಗೂ ಅರ್ಥವಾಗುವಂತೆ ವಿವರಿಸುವುದು ಇವರ ವಿಶೇಷತೆ. ಈ ಮೊದಲು ವಿವಿಧ ವೆಬ್‌ಸೈಟ್‌ಗಳಲ್ಲಿ ನಾಗರಿಕ ಸಮಸ್ಯೆಗಳ ಬಗ್ಗೆ ವರದಿಗಾರರಾಗಿ ಕೆಲಸ ಮಾಡಿರುವ ಇವರು, ಸಮಯೋಚಿತ ಹಾಗೂ ವಿಶ್ವಾಸಾರ್ಹ ಮಾಹಿತಿ ನೀಡುವ ಮೂಲಕ ಓದುಗರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಡಿಜಿಟಲ್ ಸಾಕ್ಷರತೆ ಇವರ ನೆಚ್ಚಿನ ವಿಷಯಗಳಲ್ಲೊಂದು

ಉತ್ತರಪ್ರದೇಶ : ಕಳೆದ ಕೆಲವು ದಿನಗಳ. ಹಿಂದೆ ಉತ್ತರಪ್ರದೇಶದ ಅಯೋಧ್ಯೆ ರಾಮಮಂದಿರವನ್ನು ಸ್ಫೋಟ ಮಾಡುವ ಕುರಿತು ಪ್ಲಾನ್ ರೂಪಿಸಿದ್ದ ಕೈದಿಯನ್ನು ಜೈಲಿನಲ್ಲಿಯೇ ಸಹಕೈದಿ ಒಬ್ಬ ಕೊಲೆ ಮಾಡಿರುವ ಆಘಾತಕಾರಿ ಘಟನೆ ವರದಿಯಾಗಿದೆ. ಹೌದು ಅಯೋಧ್ಯೆಯ ರಾಮ ಮಂದಿರದ ಮೇಲೆ ದಾಳಿ ನಡೆಸಲು ಸಂಚು ರೂಪಿಸಿದ ಆರೋಪದ ಮೇಲೆ ಬಂಧನಗೊಂಡಿದ್ದ ಆರೋಪಿಯನ್ನು ಫರಿದಾಬಾದ್ ಜೈಲಿನಲ್ಲೇ ಸಹ ಕೈದಿಯೊಬ್ಬ ಕೊಲೆ ಮಾಡಿದ್ದಾನೆ ಅಬ್ದುಲ್ ರೆಹಮಾನ್(20) ಕೊಲೆಯಾದ ಆರೋಪಿಯಾಗಿದ್ದು, ಜೈಲಿನಲ್ಲಿದ್ದ ಕಾಶ್ಮೀರಿ ಯುವಕ ಅರುಣ್ ಚೌಧರಿ ಹರಿತವಾದ ವಸ್ತುವಿನಿಂದ ಹಲ್ಲೆ ನಡೆಸಿ ಹತ್ಯೆ ಎಸಗಿದ್ದಾನೆ. ಅಬ್ದುಲ್ ರೆಹಮಾನ್ ಮತ್ತು ಅರುಣ್ ಚೌಧರಿ ಮಧ್ಯೆ ಭಾನುವಾರ ಜಗಳ ನಡೆದಿದೆ. ಜಗಳ ವಿಕೋಪಕ್ಕೆ ತಿರುಗಿ ರಾತ್ರಿ 8 ಗಂಟೆಯ ವೇಳೆಗೆ ಅರುಣ್‌ ಚೌಧರಿ ಹರಿತವಾದ ವಸ್ತುವಿನಿಂದ ತಲೆಗೆ ಹೊಡೆದಿದ್ದಾನೆ. ಗಂಭೀರವಾಗಿ ಗಾಯಗೊಂಡಿದ್ದ ರೆಹಮಾನ್‌ನ್ನು ಜಿಲ್ಲಾಸ್ಪತ್ರೆಗೆ ತರಲಾಗಿತ್ತು. ಪರೀಕ್ಷೆ ನಡೆಸಿದ ವೈದ್ಯರು ರೆಹಮಾನ್ ಮೃತಪಟ್ಟಿದ್ದಾನೆ ಎಂದು ಹೇಳಿದ್ದಾರೆ. ಈಗ ಈ ಪ್ರಕರಣ ಸಂಬಂಧ ತನಿಖೆಗೆ ಆದೇಶಿಸಲಾಗಿದೆ.

Read More

ಮಂಗಳೂರು : ಮಂಗಳೂರು ವಿದ್ಯಾರ್ಥಿನಿ ಕಿಡ್ನ್ಯಾಪ್ ಕೇಸ್ಗೆ ಇದೀಗ ಬಿಗ್ ಟ್ವಿಸ್ಟ್ ಸಿಕ್ಕಿದೆ. ಕಾಲೇಜು ವಿದ್ಯಾರ್ಥಿನಿಯ ಕಿಡ್ನಾಪ್ ಡ್ರಾಮ ಬಯಲಾಗಿದೆ. ಮಂಗಳೂರಿನ ಕಾಲೇಜಿಗೆ ಸೇರಲು ವಿದ್ಯಾರ್ಥಿನಿ ಈ ಒಂದು ಅಪಹರಣದ ನಾಟಕ ಮಾಡಿದ್ದು ಬಯಲಾಗಿದೆ. ಹೌದು ನಿನ್ನ ಬೆಳ್ತಂಗಡಿಯಲ್ಲಿ ವಿದ್ಯಾರ್ಥಿನಿ ಅಪಹರಣದ ನಾಟಕವಾಡಿದ್ದು ಮಂಗಳೂರಿನ ಕಾಲೇಜಿಗೆ ಸೇರಲು ಯುವತಿ ಖತರ್ನಾಕ್ ಪ್ಲಾನ್ ಮಾಡಿದ್ದಾಳೆ. ಕಿಡ್ನಾಪ್ ಡ್ರಾಮ ಮಾಡಿದ್ದು, ಮಂಗಳೂರು ಕಾಲೇಜು ಸೇರಿಸುತ್ತಾರೆ ಎಂದು ಯುವತಿ ಪ್ಲಾನ್ ಮಾಡಿದ್ದಾಳೆ. ನಿನ್ನೆ ಬೆಳ್ತಂಗಡಿ ಠಾಣೆಯಲ್ಲಿ ಕಿಡ್ನ್ಯಾಪ್ ಯತ್ನ ಕೇಸ್ ದಾಖಲಾಗಿತ್ತು. ಖತರ್ನಾಕ್ ಐಡಿಯಾ! ಕಾಲೇಜಿಗೆ ಹೋಗೋಕು ಮುನ್ನ ವಿದ್ಯಾರ್ಥಿನಿ ಪುಸ್ತಕಗಳನ್ನು ಮನೆಯಲ್ಲಿ ಸುಟ್ಟು ಹಾಕಿದ್ದಾಳೆ. ಬಳಿಕ ಬ್ಯಾಗ್ ಅನ್ನು ದಾರಿಯಲ್ಲೇ ಬಿಸಾಕಿದ್ದಾಳೆ. ರಸ್ತೆ ಬದಿಯಲ್ಲಿ ಸ್ಕೂಟಿಯನ್ನು ನಿಲ್ಲಿಸಿದ್ದಾಳೆ. ಬಳಿಕ ಕಿಡ್ನ್ಯಾಪ್ ನಾಟಕ ಮಾಡಿದ್ದಾಳೆ. ಘಟನೆ ನಡೆದ ಬಳಿಕ ಶಾಸಕ ಹರೀಶ್ ಪೂಂಜಾ ಬಾಲಕಿಯನ್ನ ಭೇಟಿಯಾಗಿದ್ದಾರೆ. ಅಲ್ಲದೇ ಹಿರಿಯ ಪೊಲೀಸ್ ಅಧಿಕಾರಿಗಳು ಮಂಗಳೂರಿನಿಂದ ದೌಡಾಸಿದ್ದರು. ತನಿಖೆ ಮೇಲೆ ತನಿಖೆ ನಡೆಸಿದ್ದು, ಕೊನೆಗೆ ಪೊಲೀಸರ ಮುಂದೆ ವಿದ್ಯಾರ್ಥಿನಿ …

Read More

ಉತ್ತರಕನ್ನಡ : ಅಕ್ರಮ ಸಂಬಂಧ ಬಯಲಾಗಿದಕ್ಕೆ ಸಿದ್ದಾಪುರದ ವಸಂತ ನಾಯ್ಕ ಹತ್ಯೆ ಪ್ರಕರಣಕ್ಕೆ ಟ್ವಿಸ್ಟ್‌ ಸಿಕ್ಕಿದ್ದು ಸುಚಿತ್ರಾ ಕಮಲಾಕರ ಭಟ್‌ಗೆ ಹನಿಟ್ರ್ಯಾಪ್ ಮಾಡಿ ಬೆದರಿಕೆ ಹಾಕಿದ್ದಾಳೆ ಎಂದು ಸುಚಿತ್ರಾ ಪತಿ ಮಹೇಶ್ ನಾಯ್ಕ ಗಂಭೀರ ಆರೋಪ ಮಾಡಿದ್ದಾರೆ. ಹೌದು ಆರೋಪಿ ಸುಚಿತ್ರಾ, ಜ್ಯೋತಿಷಿ ಕಮಲಾಕರ ಭಟ್‌ಗೆ ಹನಿಟ್ರ್ಯಾಪ್ ಮಾಡಿ ಖಾಸಗಿ ಕ್ಷಣಗಳ ವಿಡಿಯೋಗಳನ್ನು ಮಾಡಿಟ್ಟುಕೊಂಡು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದಳು ಎಂದು ಈ ವಿಚಾರವನ್ನು ನನ್ನ ಮಗಳು ಈಗ ತಿಳಿಸಿದ್ದಾಳೆ. ಮೊದಲು ಭಯದಿಂದ ಮಗಳು ಈ ವಿಚಾರವನ್ನು ತಿಳಿಸಿರಲಿಲ್ಲ. ಆದರೆ ಈಗ ಸುಚಿತ್ರಾ ಬ್ಲ್ಯಾಕ್‌ಮೇಲ್‌ ಮಾಡಿರುವ ಬಗ್ಗೆ ತನ್ನ ಜೊತೆ ಹೇಳಿದ್ದಾಳೆ ಎಂದು ಮಹೇಶ್ ನಾಯ್ಕ ತಿಳಿಸಿದ್ದಾರೆ. ಕಮಲಾಕರ್ ಸಂಪರ್ಕಕ್ಕೆ ಬಂದ ಬಳಿಕ ಸುಚಿತ್ರಾ ಖಾಸಗಿ ಖಾಸಗಿ ಕ್ಷಣಗಳ ವಿಡಿಯೋ ಮಾಡಿಟ್ಟುಕೊಂಡಿದ್ದಳು. ಮಕ್ಕಳ ಜತೆ ನಾನು ನಿನ್ನ ಜತೆ ಬರುತ್ತೇನೆ. ನನ್ನನ್ನು ಚೆನ್ನಾಗಿ ನೋಡಿಕೊಳ್ಳದಿದ್ದರೆ ಮರ್ಯಾದೆ ತೆಗೆಯುತ್ತೇನೆ ಎಂದು ಹೆದರಿಸುತ್ತಿದ್ದಳು. ಹೀಗಾಗಿ ಮರ್ಯಾದೆಗೆ ಅಂಜಿ ಕಮಲಾಕರ್ ಭಟ್‌ ಆಕೆಯನ್ನು ತನ್ನೊಂದಿಗೆ ಇರಿಸಿಕೊಂಡಿದ್ದ ಎಂದು ತಿಳಿಸಿದರು.

Read More

ಬೆಂಗಳೂರು : ಬೆಂಗಳೂರಿನಲ್ಲಿ ಚಿರತೆ ಮತ್ತೆ ಭೇಟಿ ಹುಟ್ಟಿಸಿದ್ದು ಬೆಂಗಳೂರಿನ ಅಂಜನಾಪುರದಲ್ಲಿ ಮೂರನೇ ಬಾರಿ ಚಿರತೆ ಪ್ರತ್ಯಕ್ಷವಾಗಿದೆ. ಅಂಜನಾಪುರದ ಫೈವ್ ಜಿ ಬ್ಲಾಕ್ ನಲ್ಲಿ ಚಿರತೆ ಕಾಣಿಸಿಕೊಂಡಿದೆ.ಈ ಹಿಂದೆ ಫೆಬ್ರವರಿ 3 ಮತ್ತು 6ನೇ ತಾರೀಕಿನಂದು ಚಿರತೆ ಕಾಣಿಸಿಕೊಂಡಿತ್ತು. ಸಂದೀಪ್ ಎಂಬುವವರ ಮನೆಯಲ್ಲಿ ಚಿರತೆ ಪ್ರತ್ಯಕ್ಷವಾಗಿದೆ. ತಡರಾತ್ರಿ ಚಿರತೆ ಕಂಡು ನಿವಾಸಿಗಳು ಭಯಭೀತರಾಗಿದ್ದಾರೆ. ಮನೆಯಿಂದ ಹೊರಗಡೆ ಬರುವುದಕ್ಕೂ ನಿವಾಸಿಗಳು ಇದೀಗ ಭಯಪಡುತ್ತಿದ್ದಾರೆ. ಈ ಹಿಂದೆಯೂ ಕೂಡ ಇದೇ ಭಾಗದಲ್ಲಿ ಚಿರತೆ ಕಾಣಿಸಿಕೊಂಡಿದ್ದು ಇದೀಗ ಮೂರನೇ ಬಾರಿ ಚಿರತೆ ಕಾಣಿಸಿಕೊಂಡಿದ್ದು ಅದರ ಒಡಾಟ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ತಡಿಯೋ ನಿವಾಸಿಗಳು ಆದಷ್ಟು ಬೇಗ ಚಿರತೆಯನ್ನು ಹೆಸರೆಹಿಡಿರಿ ಎಂದು ಅರಣ್ಯ ಇಲಾಖೆಗೆ ಆಗ್ರಹಿಸಿದ್ದಾರೆ.

Read More

ಬೆಂಗಳೂರು : ರಾಜ್ಯದಲ್ಲಿ ಘೋರ ಕೃತ್ಯ ಒಂದು ನಡೆದಿದ್ದು ಒಂದು ದಿನದ ನವಜಾತ ಶಿಶುವನ್ನು ಭೀಕರವಾಗಿ ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಶೇಷಾದ್ರಿಪುರಂ ರೈಲ್ವೆ ಪಾರ್ಲರ್ ರಸ್ತೆಯಲ್ಲಿ ನಡೆದಿದೆ. ಶೇಷಾದ್ರಿಪುರಂ ರೈಲ್ವೆ ಪಾರ್ಲರ್ ರಸ್ತೆಯ ಬದಿಯಲ್ಲಿ ನವಜಾತ ಶಿಶುವಿನ ಶವ ಪತ್ತೆಯಾಗಿದ್ದು, ಕಸದ ತೊಟ್ಟಿಯಲ್ಲಿ ಒಂದು ದಿನದ ಗಂಡು ಮಗುವಿನ ಶವ ಪತ್ತೆಯಾಗಿದೆ. ಮಗುವಿನ ಮೃತದೇಹವನ್ನು ಸದ್ಯ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ ಸ್ಥಳಕ್ಕೆ ಶೇಷಾದ್ರಿಪುರಂ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

Read More

ಕಲಬುರ್ಗಿ : ಪಿಸ್ತೂಲ್ ಹಿಡಿದು ಕಾಂಗ್ರೆಸ್ ಮುಖಂಡ ಬಿಲ್ಡಪ್ ತೆಗೆದುಕೊಂಡಿದ್ದಾನೆ. ದುರಂದರ ಹಾಡಿಗೆ ಸ್ಟೆಪ್ಸ್ ಹಾಕಿರುವ ಘಟನೆ ನಡೆದಿದೆ. ಅಫ್ಜಲಪುರ ಕಾಂಗ್ರೆಸ್ ಮುಖಂಡ ಮತಿನ್ ಪಟೇಲ್ ಕಲ್ಬುರ್ಗಿಯಲ್ಲಿ ನಡೆದ ಮದುವೆ ಕಾರ್ಯಕ್ರಮದಲ್ಲಿ ಮತೀನ್ ಪಟೇಲ್ ಪಿಸ್ತೂಲು ಹಿಡಿದು ಬಿಲ್ಡಪ್ ತೆಗೆದುಕೊಂಡಿದ್ದಾನೆ. ಅಫ್ಜಲ್ಪುರ ಶಾಸಕ ಎಂ.ವೈ ಪಾಟೀಲ್ ಬಳಗ ಬಂಟ ಆಗಿರುವ ಬಲಗೈ ಬಂಟ ಮತಿನ್ ಪಟೇಲ್ ಹಿಡಿದು ಬಿಲ್ಡಪ್ ತೆಗೆದುಕೊಂಡಿದ್ದಾನೆ ಶಸ್ತ್ರಾಸ್ತ್ರಗಳನ್ನು ಸಾರ್ವಜನಿಕವಾಗಿ ಪ್ರದರ್ಶನ ಮಾಡುವುದು ಅಪರಾಧ ಅದರಲ್ಲೂ ಈ ರೀತಿ ಪಿಸ್ತುಲ್ ಹಿಡಿದುಕೊಂಡು ದುರಂದರ ಹಾಡಿಗೆ ಬಿಲ್ಡಪ್ ತೆಗೆದುಕೊಂಡಿರುವ ಘಟನೆ ನಡೆದಿದೆ. ಈಗಲೇ ಪೊಲೀಸರು ಕೂಡ ಈ ಕುರಿತು ತನಿಖೆ ನಡೆಸುತ್ತಿದ್ದು ಶಾಸ್ತ್ರಾಸ್ತ್ರಗಳು ಎಲ್ಲಿಂದ ಬಂದವು ಎನ್ನುವುದರ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Read More

ಕೋಲಾರ : ಕೋಲಾರದಲ್ಲಿ ಭೀಕರವಾದ ಕೊಲೆಯಾಗಿದ್ದು, ಮಾರಕಾಸ್ತ್ರಗಳಿಂದ ಕೊಚ್ಚಿ ಆಂಧ್ರಪ್ರದೇಶ ಮೂಲದ ರೌಡಿಶೀಟರ್ ನನ್ನ ಕೊಚ್ಚಿ ಕೊಲೆ ಮಾಡಲಾಗಿದೆ. ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಹೆಬ್ಬಳ್ಳಿ ಬಳಿ ಈ ಒಂದು ಬರ್ಬರ ಕೊಲೆ ನಡೆದಿದೆ. ರೌಡಿಶೀಟರ್ ಆದ ಭಾಸ್ಕರನನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದಾರೆ. ರೌಡಿಶೀಟರ್ ಭಾಸ್ಕರ್ ಡ್ರೈವರ್ ಕೆಲಸ ಮಾಡಿಕೊಂಡಿದ್ದ ಆಂಧ್ರಪ್ರದೇಶದ ವಿವಿಧ ಪೊಲೀಸ್ ಠಾಣೆಗಳಲ್ಲಿ ಭಾಸ್ಕರ್ ವಿರುದ್ಧ ಪ್ರಕರಣಗಳು ದಾಖಲಾಗಿದ್ದವು. ಸದ್ಯ ಸ್ಥಳಕ್ಕೆ ನಂಗಲಿ ಠಾಣೆ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

Read More

ಮೈಸೂರು : ಮುಡಾ ಸೈಟ್ ಹಂಚಿಕೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಲೋಕಾಯುಕ್ತದಿಂದ ಹಲವರಿಗೆ ನೋಟಿಸ್ ಜಾರಿ ಮಾಡಲಾಗಿದೆ. 50:50 ಅನುಪಾತದಲ್ಲಿ ನಿವೇಶನ ಪಡೆದವರಿಗೆ ಲೋಕಾಯುಕ್ತರು ನೋಟಿಸ್ ನೀಡಿದ್ದಾರೆ. ಈ ಒಂದು ಪ್ರಕರಣದಲ್ಲಿ ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕ್ಲೀನ್ ಚಿಟ್ ಸಿಕ್ಕಿದೆ. ಆದರೆ ಸೈಡ್ ಪಡೆದಿರುವ ಇತರರಿಗೆ ಲೋಕಾಯುಕ್ತ ಪೊಲೀಸರು ನೋಟಿಸ್ ನೀಡಿದ್ದಾರೆ. ತನಿಖೆ ಮುಂದುವರಿಸಿರುವ ಲೋಕಾಯುಕ್ತ ಎಸ್ ಪಿ ಉದೇಶ ಅವರು ಪ್ರತಿ ಕೇಸ್ ಸಂಬಂಧ 40ಕ್ಕೂ ಹೆಚ್ಚು ಮಂದಿಗೆ ನೋಟಿಸ್ ನೀಡಿದ್ದಾರೆ. ಅಂದಿನ ಮೂಡ ಆಯುಕ್ತರ ತಂತ್ರ ನಟೇಶ್ ಹಾಗೂ ದಿನೇಶ್ ಅವಧಿಯಲ್ಲಿ 50:50 ಅನುಪಾತದಲ್ಲಿ 1050 ಸೈಟ್ ಹಂಚಿಕೆಯಾಗಿದ್ದು, ಸಂಬಂಧ ಪಟ್ಟಂತೆ 134 ಪ್ರಕರಣ ದಾಖಲಾಗಿದ್ದು ಪ್ರತಿ ಪ್ರಕರಣದ ಈಗಾಗಲೇ ಹಲವರಿಗೆ ನೋಟಿಸ್ ನೀಡಲಾಗಿದೆ ಹಾಗಾಗಿ 50 ಪ್ರಕರಣಗಳ ಕುರಿತು ಲೋಕಾಯುಕ್ತ ತನಿಖೆ ಮುಂದುವರೆಸಿದೆ.

Read More

ಬೆಂಗಳೂರು : ಈ ಹಿಂದೆ ರಾಜ್ಯದಲ್ಲಿ ಪಿಎಸ್ಐ ನೇಮಕಾತಿ ಸೇರಿದಂತೆ ಎಫ್ಡಿಎ ಎಸ್‌ಡಿಎ ಪರೀಕ್ಷೆಯಲ್ಲೂ ಕೂಡ ಭಾರಿ ಅಕ್ರಮ ನಡೆದಿತ್ತು. ಇದೀಗ ಆರ್ಮಿ ಗ್ರೂಪ್ ಸಿ ಪರೀಕ್ಷೆಯಲ್ಲಿ ಕಳ್ಳಾಟ ಮಾಡಿರುವ ಆರೋಪ ಕೇಳಿಬಂದಿದೆ. ಪರೀಕ್ಷೆ ವೇಳೆ ಎಲೆಕ್ಟ್ರಾನಿಕ್ ಡಿವೈಸ್ ಇಟ್ಟುಕೊಂಡಿರುವುದು ಪತ್ತೆಯಾಗಿದ್ದು, ಈ ಸಂಬಂಧ 18 ಮಂದಿ ಆಭ್ಯರ್ಥಿಗಳ ವಿರುದ್ಧ ಹಲಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಿವಿಲ್ ಡಿಫೆನ್ಸ್ ಎಂಪ್ಲಾಯಿ ರೆಕ್ರೂಟ್ ಮೆಂಟ್ ನ ಗ್ರೂಪ್ ಸಿ ಯ ಲೋಯರ್ ಡಿವಿಜನ್ ಕ್ಲರ್ಕ್ ಹುದ್ದೆಗಳ ನೇರ ನೇಮಕಾತಿ ಲಿಖಿತ ಪರೀಕ್ಷೆಯು ಹಲಸೂರಿನ 515 ಆರ್ಮಿ ಬೇಸ್ ವರ್ಕ್ ಶಾಪ್ ನಲ್ಲಿ ಭಾನುವಾರ ಬೆಳಗ್ಗೆ 10 ರಿಂದ 12 ಗಂಟೆವರೆಗೆ ಪರೀಕ್ಷೆ ನಡೆದಿತ್ತು. ಈ ವೇಳೆ ಒಟ್ಟು 18 ಜನ ಅಭ್ಯರ್ಥಿಗಳು ಎಲೆಕ್ಟ್ರಾನಿಕ್ ಉಪಕರಣಗಳನ್ನು ಬಳಸಿ ಪರೀಕ್ಷೆ ಬರೆದಿರೋದು‌ ಪತ್ತೆಯಾಗಿತ್ತು. ಇದಕ್ಕೆ ಸಾಕ್ಷಿ ಎಂಬಂತೆ ಪರೀಕ್ಷಾ ಆವರಣದಲ್ಲಿ ಎಲೆಕ್ಟ್ರಾನಿಕ್ ಡಿವೈಸ್ ಗಳು ಇರುವುದು ಕಂಡುಬಂದಿತ್ತು. ಈ ಹಿನ್ನೆಲೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು…

Read More

ವಿಜಯಪುರ : ರಾಜ್ಯದಲ್ಲಿ ಒಂದು ಅಮಾನವೀಯ ಘಟನೆ ಒಂದು ನಡೆದಿದ್ದು ಯುವತಿ ಒಬ್ಬಳು ಮುಸ್ಲಿಂ ಯುವಕನೊಂದಿಗೆ ಪರಾರಿಯಾಗಿದ್ದಾಳೆ. ಈ ವೇಳೆ ತಂದೆ ತಾಯಿ ಆಕೆಯ ಕಾಲಿಗೆ ಬಿದ್ದು ಗೊಗರೆದರು ಕೂಡ ಅದನ್ನು ಲೆಕ್ಕಿಸಿದೆ ನನ್ನ ಗಂಡನ ಜೊತೆ ಹೋಗುತ್ತೇನೆ ಎಂದು ತಂದೆ ತಾಯಿಯನ್ನು ನಿರ್ಲಕ್ಷಿಸಿ ಯುವಕನೊಂದಿಗೆ ಪರಾರಿಯಾಗಿರುವ ಘಟನೆ ವಿಜಯಪುರದಲ್ಲಿ ನಡೆದಿದೆ. ಹೌದು ಮೊಹಮದ್ ಸಲಿಂ ಸುತಾರ್ ಎಂಬ ಯುವಕನನ್ನು ಪ್ರೀತಿಸಿದ್ದ ಹುಡುಗಿ, ತಂದೆ ತಾಯಿಯನ್ನು ಎದುರುಹಾಕಿಕೊಂಡು ಆತನೊಂದಿಗೆ ಪರಾರಿಯಾಗಿದ್ದಳು. ಈ ಹಿನ್ನೆಲೆ ಮಗಳು ಕಾಣೆಯಾಗಿದ್ದಾಳೆಂದು ಫೆಬ್ರವರಿ 2ರಂದು ಯುವತಿಯ ಪೋಷಕರು ವಿಜಯನಗರ ಮಹಿಳಾ ಪೊಲೀಸ್ ಠಾಣೆಗೆ ದೂರು ಕೊಟ್ಟಿದ್ದರು. ಇದೀಗ ಅದೇ ಠಾಣೆಗೆ ಸ್ವಯಂಪ್ರೇರಿತವಾಗಿ ಪ್ರಿಯಕರನೊಂದಿಗೆ ಬಂದ ಯುವತಿ, ತಾನು ಮದುವೆಯಾಗಿರುವುದಾಗಿ ತಿಳಿಸಿದ್ದಾಳೆ. ಈ ವೇಳೆ ಠಾಣೆಗೆ ಬಂದ ಪೋಷಕರು, ಎಷ್ಟೇ ಕರೆದರೂ ಒಪ್ಪದ ಮಗಳು ಗಂಡನೊಂದಿಗೇ ಹೋದಾಗ, ಆಕೆಯಿದ್ದ ಪೊಲೀಸ್ ವಾಹನಕ್ಕೂ ಅಡ್ಡಬಿದ್ದು ಮಗಳನ್ನು ಓಲೈಸಲು ಪೋಷಕರು ಪ್ರಯತ್ನಿಸಿದ್ದಾರೆ. ಮನೆಗೆ ವಾಪಸ್ ಬರುವಂತೆ ಮಗಳಲ್ಲಿ ಅಂಗಲಾಚಿದ್ದಾರೆ. ಆದರೆ ಯುವತಿ…

Read More