Subscribe to Updates
Get the latest creative news from FooBar about art, design and business.
Author: ಸುರೇಶ್
"ಕನ್ನಡ ನ್ಯೂಸ್ ನೌ ಜಾಲತಾಣದ ಮುಖ್ಯ ಸಂಪಾದಕರಾದ ಸುರೇಶ್ ಅವರು ಕಳೆದ 4 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದಾರೆ. ಸರ್ಕಾರದ ಯೋಜನೆಗಳು, ಶಿಕ್ಷಣ ಮತ್ತು ಪ್ರಚಲಿತ ವಿದ್ಯಮಾನಗಳನ್ನು ಸಾಮಾನ್ಯ ಜನರಿಗೂ ಅರ್ಥವಾಗುವಂತೆ ವಿವರಿಸುವುದು ಇವರ ವಿಶೇಷತೆ. ಈ ಮೊದಲು ವಿವಿಧ ವೆಬ್‌ಸೈಟ್‌ಗಳಲ್ಲಿ ನಾಗರಿಕ ಸಮಸ್ಯೆಗಳ ಬಗ್ಗೆ ವರದಿಗಾರರಾಗಿ ಕೆಲಸ ಮಾಡಿರುವ ಇವರು, ಸಮಯೋಚಿತ ಹಾಗೂ ವಿಶ್ವಾಸಾರ್ಹ ಮಾಹಿತಿ ನೀಡುವ ಮೂಲಕ ಓದುಗರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಡಿಜಿಟಲ್ ಸಾಕ್ಷರತೆ ಇವರ ನೆಚ್ಚಿನ ವಿಷಯಗಳಲ್ಲೊಂದು
ಬೆಂಗಳೂರು, ಫೆ. 10, (ಕರ್ನಾಟಕ ವಾರ್ತೆ): ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಮಾಧ್ಯಮ ಪಟ್ಟಿಯಲ್ಲಿರುವ ಮಾಧ್ಯಮ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ತಾಲ್ಲೂಕು ಮಟ್ಟದ ಪತ್ರಕರ್ತರು ತಮ್ಮ ವೃತ್ತಿ ನಿರತ ಚಟುವಟಿಕೆಗಳ ಸಂಬಂಧ ತಮ್ಮ ಜಿಲ್ಲಾದ್ಯಂತ ಉಚಿತವಾಗಿ ಸಂಚರಿಸಲು ಅನುಕೂಲವಾಗುವಂತೆ ಉಚಿತ ಬಸ್ ಪಾಸ್ ನೀಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಪತ್ರಕರ್ತರು ತಾವು ಕಾರ್ಯನಿರ್ವಹಿಸುತ್ತಿರುವ ಮಾಧ್ಯಮ ಸಂಸ್ಥೆಗಳಿಂದ ಸೇವಾ ಪ್ರಮಾಣಪತ್ರ, ಶಿಫಾರಸ್ಸು ಪತ್ರ ಮತ್ತು 11 ತಿಂಗಳುಗಳ ವೇತನಪತ್ರ (ಲೈನೇಜ್/ಸಂಭಾವನೆ/ಕಮೀಷನ್ ಪಡೆದಿರುವ ದಾಖಲೆ)ಗಳನ್ನು ಅಥವಾ ವೇತನ ಜಮಾ ಆಗಿರುವ ಮಾಹಿತಿ ಇರುವಂತಹ ಬ್ಯಾಂಕ್ ಸ್ಟೇಟಮೆಂಟ್ ಲಗತ್ತಿಸಿ “ಸೇವಾಸಿಂಧು” ಪೋರ್ಟಲ್ (https://sevasindhu.karnataka.gov.in) ಮೂಲಕ ಆನ್ ಲೈನ್ ನಲ್ಲಿ ಅರ್ಜಿಗಳನ್ನು ಸಲ್ಲಿಸಬಹುದು. ಆನ್ ಲೈನ್ ನಲ್ಲಿ ಸಲ್ಲಿಸಲಾದ ಅರ್ಜಿ ಮತ್ತು ಲಗತ್ತಿಸಲಾಗಿರುವ ದಾಖಲೆಗಳ ಒಂದು ಪ್ರತಿಯನ್ನು ಆಯಾ ಜಿಲ್ಲೆಯ ವಾರ್ತಾಧಿಕಾರಿಗಳ ಕಚೇರಿಗೆ ಸಲ್ಲಿಸಬೇಕು. ಸ್ವೀಕೃತ ಅರ್ಜಿಗಳನ್ನು ಆಯ್ಕೆ ಸಮಿತಿಯ ಸಭೆಯಲ್ಲಿ ಪರಿಶೀಲಿಸಿ ಬಸ್ ಪಾಸ್ ಮಂಜೂರು ಮಾಡಲಾಗುತ್ತದೆ. ರಾಜ್ಯದ ಎಲ್ಲ ತಾಲ್ಲೂಕುಗಳ ಅರ್ಹ ಪತ್ರಕರ್ತರು ಕೂಡಲೇ…
ಬೆಂಗಳೂರು : ದಿನಾಂಕ 09/02/2026 ರಂದು ಕರ್ನಾಟಕ ರಾಜ್ಯ ಖಾಸಗಿ ಸಾರಿಗೆ ಸಂಘಗಳ ಒಕ್ಕೂಟದ ಅಧ್ಯಕ್ಷರು ಮತ್ತು ಸದಸ್ಯರು ಮಾನ್ಯ ಸಾರಿಗೆ ಮತ್ತು ಮುಜರಾಯಿ ಸಚಿವರನ್ನು ಭೇಟಿ ಮಾಡಿ, ವಾಹನ-4 ಪೋರ್ಟಲ್ ಮೂಲಕ ರಾಜ್ಯದಲ್ಲಿ “ಭಾರತ್ ಟ್ಯಾಕ್ಸಿ” ಯೋಜನೆಯನ್ನು (ಬೈಕ್ ಟ್ಯಾಕ್ಸಿ/ದ್ವಿಚಕ್ರ ವಾಹನವನ್ನು ಹೊರತುಪಡಿಸಿ) ಆಟೋ ಮತ್ತು ಟ್ಯಾಕ್ಸಿಗಳಿಗೆ ಕೂಡಲೇ ಜಾರಿಗೆ ತರಲು ಮನವಿ ಸಲ್ಲಿಸಿರುತ್ತಾರೆ. ಖಾಸಗಿ ಅಗ್ರಿಗೇಟರ್ಗಳಿಂದ ಆಟೋ ಮತ್ತು ಟ್ಯಾಕ್ಸಿ ಚಾಲಕರು ಕಷ್ಟ ಅನುಭವಿಸುತ್ತಿರುವುದರಿಂದ ಕೇಂದ್ರ ಸರ್ಕಾರವು “ಭಾರತ್ ಟ್ಯಾಕ್ಸಿ” ಯೋಜನೆಯನ್ನು ಪ್ರಾರಂಭಿಸಿದ್ದು, ರಾಜ್ಯದಲ್ಲಿ ಈ ಯೋಜನೆಯನ್ನು ವಾಹನ್ ಪೋರ್ಟಲ್ ಮೂಲಕ ತರಬೇಕೆಂದು, ಅಗ್ರಿಗೇಟರ್ ವ್ಯವಸ್ಥೆಯಲ್ಲಿ ಚಾಲಕರಿಂದ ಪ್ರತಿ ಪ್ರಯಾಣಕ್ಕೆ 20% ರಿಂದ 35% ರವರೆಗೆ ಕಮಿಶನ್ ಪಡೆಯುತ್ತಿರುವುದರಿಂದ ಚಾಲಕರಿಗೆ ತೊಂದರೆಯುಂಟಾಗುತ್ತಿರುವುದಾಗಿ, ವಾಹನ-4 ಪೋರ್ಟಲ್ ಯೋಜನೆಯಿಂದ ನೋಂದಣಿ, ಪರವಾನಗಿ, ವಿಮೆ ಸುಲಭವಾಗಿ ಪಾರದರ್ಶಕವಾಗಿ ದೊರೆಯುವಂತಾಗುತ್ತದೆ. ಇದರಿಂದ ಪ್ರಯಾಣಿಕರ ಸುರಕ್ಷತೆ, ಅಪಘಾತ ಅಥವಾ ಅನಾಹುತದ ಸಂದರ್ಭದಲ್ಲಿ ಪರಿಹಾರ ದೊರೆಯುವುದಾಗಿ, (ಆದರೆ ಸದರಿ ಯೋಜನೆಯಲ್ಲಿ ಬೈಕ್ ಟ್ಯಾಕ್ಸಿ/ದ್ವಿಚಕ್ರ ವಾಹನವನ್ನು ಸೇರಿಸಬಾರದೆಂದು) ಸೇರಿಸಿದಲ್ಲಿ…
ಯಾದಗಿರಿ : ಮಧ್ಯಪಾನ ಬಿಡು ಅಂದಿದ್ದಕ್ಕೆ ಮಗಳನ್ನೇ ತಾಯಿಯೊಬ್ಬಳು ಕೊಲೆ ಮಾಡಿರುವ ಘಟನೆ ವರದಿಯಾಗಿದೆ, ಕತ್ತು ಹಿಸುಕಿ 10 ವರ್ಷದ ಮಗಳನ್ನು ತಾಯಿ ಕೊಲೆ ಮಾಡಿರುವ ಘಟನೆ ಯಾದಗಿರಿಯ ರಾಜೀವ್ ಗಾಂಧಿ ಬಡಾವಣೆಯಲ್ಲಿ ಈ ಕೃತ್ಯ ನಡೆದಿದೆ. ಮಗಳನ್ನ ಕೊಂದ ಬಳಿಕ ಆಕೆ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ತಾಯಿ ನಿರ್ಮಲ ಡ್ರಾಮಾ ಮಾಡಿದ್ದಾಳೆ. 15 ರೂಪಾಯಿ ಕೊಟ್ಟಿಲ್ಲವೆಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ತಾಯಿ ನಿರ್ಮಲ ಕೊಲೆಯ ಬಳಿಕ ನಾಟಕವಾಡಿದ್ದಾಳೆ. ತಂದೆ ತಾಯಿ ಇಬ್ಬರು ಕುಡಿತದ ಚಟಕ್ಕೆ ದಾಸರಾಗಿದ್ದರು. ಆರೋಪಿ ನಿರ್ಮಲಾಗೆ ನಾಲ್ಕು ಜನ ಮಕ್ಕಳು ಇದ್ದಾರೆ. ಈ ರೀತಿ ಕುಡಿಯುತ್ತಿದ್ದರೆ ಕುಟುಂಬದ ನಿರ್ವಹಣೆ ಕಷ್ಟ ಆಗುತ್ತದೆ ಎಂದು ಮಕ್ಕಳು ತಾಯಿಗೆ ಬುದ್ದಿ ಹೇಳಿದ್ದಾರೆ. ಅದೇ ರೀತಿ ನಿನ್ನೆ ಕುಡಿದು ಮನೆಗೆ ಬಂದಿದ್ದಾಳೆ. ಈ ವೇಳೆ ಕೊಲೆಯಾದ ಪ್ರತಿಭಾ ಎನ್ನುವ ಮಗಳ ಜೊತೆ ನಿರ್ಮಲಾ ಜಗಳ ಮಾಡುತ್ತಾಳೆ. ಆಗ ಗಲಾಟೆ ವಿಕೋಪಕ್ಕೆ ತಿರುಗಿ ಕತ್ತು ಹಿಸುಕಿ ಪ್ರತಿಭಾಳನ್ನು ತಾಯಿ ನಿರ್ಮಲ ಕೊಲೆ ಮಾಡಿದ್ದಾಳೆ…
ಬೆಂಗಳೂರು : ಸಿಎಂ ಸಿದ್ದರಾಮಯ್ಯ ನಾನು ಕದ್ದು ಮುಚ್ಚಿ ಮಾತನಾಡಿಲ್ಲ. ನಮ್ಮ ಪಕ್ಷದ ವರಿಷ್ಠರು ಎಲ್ಲರೂ ಸೇರಿ ಮಾತನಾಡಿದ್ದೇವೆ ಎಂದು ಪವರ್ ಶೇರಿಂಗ್ ಬಗ್ಗೆ ಡಿಸಿಎಂ ಡಿಕೆ ಶಿವಕುಮಾರ್ ಹೇಳಿಕೆ ನೀಡಿದರು. ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ನಾನು ಸಿದ್ದರಾಮಯ್ಯ ಏನು ಮಾತನಾಡಿದ್ದೇವೆ ಅಂತ ನಮಗೆ ಮಾತ್ರ ಗೊತ್ತು. ನಾವೇನು ಕದ್ದು ಮುಚ್ಚಿ ಮಾತಾಡಿಲ್ಲ. ನಮ್ಮ ಪಕ್ಷದ ವರಿಷ್ಠರು ಹಾಗೂ ನಾವು ಎಲ್ಲ ಸೇರಿ ಮಾತನಾಡಿದ್ದೇವೆ ಆ ಮಾತಿನ ಪ್ರಕಾರ ಇಬ್ಬರು ಮಾತನಾಡಿಕೊಂಡಿದ್ದೇವೆ. ಬೇರೆ ಯಾರು ಟೆನ್ಶನ್ ತೆಗೆದುಕೊಳ್ಳುವುದು ಹೇಳಿಕೆ ಕೊಡುವುದರಿಂದ ಯಾರಿಗೂ ಏನು ಪ್ರಯೋಜನ ಆಗಲ್ಲ. ಹೇಳಿಕೆ ಕೊಡುವವರು ನನ್ನ ಪರವಾಗಿ ಕೊಡಬಹುದು, ಅಥವಾ ನನ್ನ ವಿರುದ್ಧ ಕೊಡುತ್ತಿರಬಹುದು. ಮಂತ್ರಿಗಳು ಶಾಸಕರು ಯಾರೇ ಇರಲಿ, ಪಕ್ಷ ಡ್ಯಾಮೇಜ್ ಮಾಡುವ ಹೇಳಿಕೆಗಳಾಗಿವೆ ಹೊರತು ಪಕ್ಷಕ್ಕೆ ಒಳ್ಳೆಯ ಮಾಡುವ ಹೇಳಿಕೆಗಳಿಲ್ಲ. ಎಲ್ಲ ಬಾಯಿ ಮುಚ್ಚಿಕೊಂಡು ಇದ್ದಾರೆ ಒಳ್ಳೆದು ಅಂತ ಮಲ್ಲಿಕಾರ್ಜುನ ಖರ್ಗೆ ಅವರು ಹೇಳಿದ್ದಾರೆ ಎಂದರು. ಎಐಸಿಸಿ ಮೀಟಿಂಗ್ ನಲ್ಲಿ ಭಾಗಿಯಾಗಲು ನಾನು…
ಬೆಂಗಳೂರು : ಬೆಂಗಳೂರಿನ ವಿಧಾನಸೌಧದಲ್ಲಿ ಸಚಿವರ ಕಚೇರಿಯಲ್ಲಿಯೇ ಚಿನ್ನಾಭರಣ ಮತ್ತು ನಗದು ಕಳ್ಳತನ ಆಗಿದೆ. 300 ಗ್ರಾಮ ಚಿನ್ನಾಭರಣ ಮತ್ತು 1.50 ಲಕ್ಷ ರೂಪಾಯಿ ನಗದು ಹಣ ಇದ್ದಂತಹ ಕೈ ಚೀಲ ಕಳ್ಳತನವಾಗಿದೆ. ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಅವರ ಕಚೇರಿಯಲ್ಲಿ ಈ ಒಂದು ಕಳ್ಳತನ ನಡೆದಿದೆ. ನವೀನ್ ಎಂಬಾತನಿಗೆ ಸೇರಿದ 300 ಗ್ರಾಂ ಚಿನ್ನಾಭರಣ ಮತ್ತು 1.50 ಲಕ್ಷ ರೂಪಾಯಿ ಕಳ್ಳತನವಾಗಿದೆ. ಕೆಲಸದ ನಿಮಿತ್ಯ ನವೀನ್ ಸಚಿವ ಭೈರತಿ ಸುರೇಶ್ ಅವರ ಕಚೇರಿಗೆ ಬಂದಿದ್ದ. ಚಿನ್ನಾಭರಣ ಹಾಗೂ ನಗದು ಇದ್ದ ಕೈಚೀಲದೊಂದಿಗೆ ಬಂದಿದ್ದ. ಸಚಿವರ ಕಚೇರಿಯಲ್ಲಿ ಮಾರನೇ ದಿನ ಸಚಿವರ ಕಚೇರಿಗೆ ಬಂದು ನೋಡಿದಾಗ ಕೈಚೀಲ ನಾಪತ್ತೆಯಾಗಿತ್ತು. ಗಾಬರಿಗೊಂಡ ನವೀನ್ ವಿಧಾನಸೌಧ ಪೊಲೀಸ್ ಠಾಣೆಗೆ ದೂರು ನೀಡಿದ್ದಾನೆ. ಸಿಸಿಟಿವಿ ಪರಿಶೀಲನೆ ವೇಳೆ ಡಿ ಗ್ರೂಪ್ ನೌಕರಣ ಪಾತ್ರ ಇರುವುದು ಪತ್ತೆಯಾಗಿದೆ. ಆರೋಪಿ ಡಿ ಗ್ರೂಪ್ ನೌಕರರನ್ನು ವಿಧಾನಸೌಧ ಠಾಣೆಪಡಿಸಲು ಅರೆಸ್ಟ್ ಮಾಡಿದ್ದಾರೆ. ಅರೆಸ್ಟ್ ಮಾಡಿ ಆರೋಪಿಯನ್ನು ವಿಚಾರಣೆಗೆ ಒಳಪಡಿಸಿದ್ದು ತನಿಖೆ…
ಪಂಜಾಬ್ : ದೇಶದಲ್ಲಿ ಮತ್ತೊಂದು ಬೆಚ್ಚಿ ಬೆಳಿಸುವ ಘಟನೆ ನಡೆದಿದ್ದು ಕ್ಲಾಸ್ ರೂಮ್ ಗೆ ನುಗ್ಗಿ ಒಬ್ಬ ವಿದ್ಯಾರ್ಥಿನಿ ಮೇಲೆ ವಿದ್ಯಾರ್ಥಿ ಗುಂಡಿನ ದಾಳಿ ಮಾಡಿರುವ ಘಟನೆ ಪಂಜಾಬ್ ನ ತರನ್ ತರಾನ್ ಜಿಲ್ಲೆಯ ಶಾಲೆಯಲ್ಲಿ ಈ ಒಂದು ಭೀಕರ ಘಟನೆ ನಡೆದಿದೆ. ಹೌದು ಶಾಲೆಯಲ್ಲಿ ವಿದ್ಯಾರ್ಥಿನಿ ಬೆಂಚ್ ಮೇಲೆ ಕುಳಿತಿದ್ದಾಗ ಆಕೆಯ ಸಹಪಾಠಿ ಏಕಾಏಕಿ ಬಂದು ವಿದ್ಯಾರ್ಥಿನಿ ತಲೆಗೆ ಗುಂಡಿಕ್ಕಿ ಕೊಲ್ಲುತ್ತಾನೆ ಬಳಿಕ ವಿದ್ಯಾರ್ಥಿ ತಾನು ಸಹ ತಲೆಗೆ ಗುಂಡಿಟ್ಟುಕೊಂಡು ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ ಅಲ್ಲೇ ಇದ್ದಂತ ವಿದ್ಯಾರ್ಥಿಗಳೆಲು ಒಮ್ಮೆಲೇ ಭಯಭೀತರಾಗಿ ತರಗತಿಯಿಂದ ಓಡಿ ಹೋಗುತ್ತಾರೆ.
ಬೆಂಗಳೂರಲ್ಲಿ ಗಾಂಜಾ ಗಿಡ ಬೆಳೆದು, ವಿದ್ಯಾರ್ಥಿಗಳಿಗೆ ಗಾಂಜಾ ಮಾರಾಟ : 15 ಲಕ್ಷ ಮೌಲ್ಯದ ಗಾಂಜಾ ಜಪ್ತಿ, ಓರ್ವ ಅರೆಸ್ಟ್
ಬೆಂಗಳೂರು : ಬೆಂಗಳೂರಿನಲ್ಲಿ ಗಾಜಾ ಬೆಳೆದು ಮಾರಾಟ ಮಾಡುತ್ತಿದ್ದ ವ್ಯಕ್ತಿ ಅರೆಸ್ಟ್ ಆಗಿದ್ದಾನೆ ಕುಮಾರಸ್ವಾಮಿ ಲೇಔಟ್ ಪೊಲೀಸರಿಂದ ಬಿ ಉಮೇಶ್ (35) ಎನ್ನುವ ವ್ಯಕ್ತಿಯನ್ನು ಬಂಧಿಸಲಾಗಿದೆ. ಬಂಧಿತ ಆರೋಪಿಯಿಂದ 15 ಲಕ್ಷ ಮೌಲ್ಯದ 30 ಕೆಜಿ 720 ಗ್ರಾಂ ಗಾಂಜಾ ಪೊಲೀಸರ ವಶಕ್ಕೆ ಪಡೆದುಕೊಂಡಿದ್ದಾರೆ. ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ಉಮೇಶ್ ಕಾಜ ಬೆಳೆಯುತ್ತಿದ್ದ ಬೆಂಗಳೂರಲ್ಲಿ ಮಾರಾಟ ಮಾಡಲು ಬಂದಾಗ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಕುಮಾರಸ್ವಾಮಿ ಲೇಔಟ್ ನ ಕೆಲವು ಸ್ಥಳಗಳಲ್ಲಿ ಗಾಂಜ ಮಾರಾಟ ಮಾಡಿದ್ದಾನೆ. ಖಾಸಗಿ ಕಾಲೇಜು ಹಿಂಭಾಗ ಗಾಂಜಾ ಮಾರಾಟ ಮಾಡುತ್ತಿದ್ದಾಗ ಅರೆಸ್ಟ್ ಮಾಡಿದ್ದಾರೆ. ಜಮೀನಿನಲ್ಲಿ ಗಾಂಜಾ ಗಿಡ ಬೆಳೆದು ಆರೋಪಿ ಮಾರಾಟ ಮಾಡುತ್ತಿದ್ದ
ಬೆಂಗಳೂರು : ಬೆಂಗಳೂರು ಪೊಲೀಸರು ಮತ್ತೊಂದು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಮಾದಕ ವಸ್ತು ಮಾರಾಟ ಮಾಡುತ್ತಿದ್ದ 24 ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ. ಬೆಂಗಳೂರು ನಗರ ಮತ್ತು ಸಿಸಿಬಿ ಪೊಲೀಸರಿಂದ ಈ ಒಂದು ಕಾರ್ಯಾಚರಣೆ ನಡೆದಿದೆ. ಬಂಧಿತರಿಂದ 2.8 ಕೋಟಿ ಮೌಲ್ಯದ ಮಾದಕ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. 1 ಕೆಜಿ ಹೈಡ್ರೋಗಾಂಜಾ, 76 ಕೆಜಿ ಗಾಂಜಾ ಮತ್ತು 1 ಕೆಜಿ ಚರಸ್, 121 ಗ್ರಾಂ MDMA ಅನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ವಿದ್ಯಾರ್ಥಿಗಳು ಐಟಿ ಉದ್ಯೋಗಿಗಳಿಗೆ ಡ್ರಗ್ಸ್ ಮಾರಾಟ ಮಾಡುತ್ತಿದ್ದರು. ಕುಮಾರಸ್ವಾಮಿ ಲೇಔಟ್, ಹೆಬ್ಬಾಳ, ಬಸವನಗುಡಿ, ಚಾಮರಾಜಪೇಟೆ ಜೆಸಿ ನಗರ,ಗೋವಿಂದರಾಜ ನಗರ ವ್ಯಾಪ್ತಿಯಲ್ಲಿ ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ.
ಬೆಂಗಳೂರು : ಕರೋನ ವೇಳೆ ಟ್ರಾವೆಲ್ಸ್ ನಷ್ಟ ಆಗಿದ್ದಕ್ಕೆ ವ್ಯಕ್ತಿ ಒಬ್ಬ ಕಳ್ಳತನಕ್ಕೆ ಇಳಿದಿದ್ದಾನೆ ಸದ್ಯ ಬೆಂಗಳೂರಿನ ಭಯಪನ ಹಳೆ ಪೊಲೀಸರು ಆತನನ್ನು ಅರೆಸ್ಟ್ ಮಾಡಿದ್ದಾರೆ ಸಿನಿಮಾ ಸ್ಟೈಲ್ ನಲ್ಲಿ ಮುಖಕ್ಕೆ ಮಾಸ್ಕ್ ಹಾಕಿ ಕಳ್ಳತನ ಮಾಡುತ್ತಿದ್ದ. ಬಂಧಿತ ಆರೋಪಿಯನ್ನು ದಾವಣಗೆರೆ ಭಾಗದಲ್ಲಿ ಟ್ರಾವೆಲ್ಸ್ ನಡೆಸುತ್ತಿದ್ದ ರಾಜ ಎಂದು ತಿಳಿದುಬಂದಿದೆ. ಕರೋನ ವೇಳೆ ಟ್ರಾವೆಲ್ಸ್ ಲಾಸ್ ಆಗಿ ಜೀವನಕ್ಕೆ ಕಷ್ಟ ಆಗುತ್ತಿತ್ತು ಹಾಗಾಗಿ ಆತ ಮಾಸ್ಕ ಧರಿಸಿ ಕಳ್ಳತನ ಮಾಡುತ್ತಿದ್ದ ಆರೋಪಿ ಬಳಿ ಇದ್ದ 1.84 ಕೋಟಿ ಮೌಲ್ಯದ 1.25 ಕೆಜಿ ಚಿನ್ನವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆರೋಪಿಯ ವಿರುದ್ಧ ಇದುವರೆಗೂ 18 ಕಳ್ಳತನ ಪ್ರಕರಣ ದಾಖಲಾಗಿದೆ. ಬೆಂಗಳೂರಿನಲ್ಲೂ ಕೂಡ ನಾಲ್ಕು ಪ್ರಕರಣ ದಾಖಲಾಗಿದ್ದು ಬೆಳಕಿಗೆ ಬಂದಿದೆ. ಸದ್ಯ ಭಯಪನಹಳ್ಳಿ ಪೊಲೀಸ್ರಿಂದ ತನಿಖೆ ಮುಂದುವರೆದಿದೆ.
ಬೆಳಗಾವಿ : ಬೆಳಗಾವಿಯಲ್ಲಿ ಒಬ್ಬ ವ್ಯಕ್ತಿ ವೈದ್ಯ ಲೋಕಕ್ಕೆ ಸವಾಲಾಗಿದ್ದಾನೆ. ಮೇಕೆಯಂತೆ ಬರೀ ಸೊಪ್ಪು ತಿಂದು ಗುಡ್ಡದಲ್ಲಿ ಬದುಕುತ್ತಿದ್ದಾನೆ. ನಿತ್ಯವೂ ಈತನಿಗೆ ಗಿಡಗಳ ಹಸಿ ಸೊಪ್ಪೆ ಆಹಾರವಾಗಿದೆ. ಬುಡನ್ ಖಾನ್ ಹೊಸಮನಿ ಎಂಬ ಈ ಯುವಕ ಸವದತ್ತಿ ತಾಲೂಕಿನ ಉಗರಗೋಳ ಗ್ರಾಮದ ನಿವಾಸಿಯಾಗಿದ್ದಾನೆ. ಗ್ರಾಮದ ಹೊರವಲಯದ ಹೆಗ್ಗೊಳ್ಳ ಗುಡ್ಡದಲ್ಲಿ ಬರೀ ಹಸಿ ಸೊಪ್ಪು ಎಲೆ ತಿಂದು ಕಳೆದ ಹತ್ತು ವರ್ಷಗಳಿಂದ ಬದುಕುತ್ತಿದ್ದಾನೆ. ಸಾಮಾನ್ಯ ಮನುಷ್ಯರಂತೆ ಸೇವಿಸುವ ಊಟ, ತಿಂಡಿ ಎಲ್ಲ ಬಿಟ್ಟು ಗಿಡದ ತಪ್ಪಲು ಹಸಿ ಸೊಪ್ಪು ಸೇವಿಸಿ ಬದುಕುತ್ತಿದ್ದಾನೆ. ನನಗೆ ಇಲ್ಲಿಯವರೆಗೆ ಯಾವುದೇ ಕಾಯಿಲೆ ಬಂದಿಲ್ಲ ಎಂದು ಹೇಳಿಕೆ ಕೊಟ್ಟಿದ್ದಾನೆ. ನಾನು ಕಾಡಿನಲ್ಲಿ ಇದ್ದಾಗ ಕೋತಿ ಯಾವ ರೀತಿ ಸೊಪ್ಪು ಎಲೆ ತಿನ್ನುತ್ತೋ ಅದನ್ನು ನೋಡಿ ನಾನು ತಿನ್ನಲು ಕಲಿತೆ. ನನಗೆ ಆಗ ಅದು ಬಹಳ ರುಚಿ ಎನಿಸಿತು. ಹಾಗಾಗಿ ನಾನು ಊಟ ತಿಂಡಿ ಎಲ್ಲವನ್ನು ಬಿಟ್ಟು ಎಲೆ, ಸೊಪ್ಪು ತಿಂದು ಒಬ್ಬನೇ ಜೀವಿಸುತ್ತಿದ್ದೇನೆ. ಇಲ್ಲಿ 150ಕ್ಕೂ ಹೆಚ್ಚು ಮರ…














