Author: kannadanewsnow05

ಮೈಸೂರು : ಮೈಸೂರಲ್ಲಿ ಪ್ರೀತ್ಸೆ ಪ್ರೀತ್ಸೆ ಎಂದು ಯುವಕನೊಬ್ಬ ಅಪ್ರಾಪ್ತೆ ಬಾಲಕಿಯ ಬೆನ್ನುಬಿದ್ದಿದ್ದಾನೆ. ಇದರಿಂದ ಕಿರುಕುಳದಿಂದ ಮನನೊಂದ 17 ವರ್ಷದ ಬಾಲಕಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. ನಂಜನಗೂಡು ಪಟ್ಟಣದಲ್ಲಿ ಆದಿತ್ಯ ವಿರುದ್ಧ ಕಿರುಕುಳ ನೀಡಿರುವ ಆರೋಪ ಕೇಳಿ ಬಂದಿದೆ. ನಂಜನಗೂಡು ಪಟ್ಟಣದಲ್ಲಿ 17 ವರ್ಷದ ಬಾಳಿಕೆ ಆತ್ಮಹತ್ಯೆಗೆ ಶರಣಾಗಿದ್ದು ಪೋಷಕರು ಆದಿತ್ಯ ಎನ್ನುವ ಯುವಕನ ವಿರುದ್ಧ ಕಿರುಕುಳ ನೀಡಿದ್ದಾನೆ ಎಂದು ಆರಂಭಿಸಿದ್ದಾರೆ. ಕಿರುಕುಳ ಕೊಡುತ್ತಿರುವ ಬಗ್ಗೆ ಬಾಲಕಿ ಪೋಷಕರಿಗೆ ಹೇಳಿದ್ದಾಳೆ. ಬಾಲಕಿಯ ತಂದೆ ಆದಿತ್ಯನಿಗೆ ಕರೆದು ಬುದ್ಧಿ ಮಾತು ಹೇಳಿದ್ದಾರೆ. ಆದರೂ ಕೂಡ ಆದಿತ್ಯ ಬಾಲಕಿಗೆ ಕಿರುಕುಳ ನೀಡುತ್ತಿದ್ದ ಇದರಿಂದ ಮನನೊಂದು ಮನೆಯಲ್ಲಿಯೇ ಬಾಲಕಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ. ನಂಜನಗೂಡು ಠಾಣೆಯಲ್ಲಿ ಆದಿತ್ಯನ ವಿರುದ್ಧ ಪ್ರಕರಣ ದಾಖಲಾಗಿದೆ.

Read More

ಶಿವಮೊಗ್ಗ : ಶಿವಮೊಗ್ಗದಲ್ಲಿ ಘೋರ ಘಟನೆ ಒಂದು ನಡೆದಿದ್ದು, ಪೊಲೀಸ್ ಠಾಣೆಯಲ್ಲಿಯೇ ಕಾನ್ಸ್ಟೇಬಲ್ ಒಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶಿವಮೊಗ್ಗದ ಸಂಚಾರಿ ಠಾಣೆಯಲ್ಲಿ ನಡೆದಿದೆ ಮೊಹಮ್ಮದ್ ಝಕ್ರಿಯ ಎನ್ನುವವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಳೆದ ಕಳೆದ ಕೆಲವು ದಿನಗಳಿಂದ ಅವರು ರಜೆಯಲ್ಲಿ ಇದ್ದರು. ಮೂರು ದಿನದ ಹಿಂದೆ ಅಷ್ಟೇ ಮೊಹಮ್ಮದ್ ಡ್ಯೂಟಿಗೆ ಹಾಜರಾಗಿದ್ದರು. ಬಸ್ ನಿಲ್ದಾಣದ ಬಳಿ ಡ್ಯೂಟಿ ಮುಗಿಸಿ ಬಂದು ಪೊಲೀಸ್ ಠಾಣೆಯ ಹಿಂಬದಿಯ ಸೆಲ್ ಇರುವ ಜಾಗದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಕುರಿತು ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಬೆಂಗಳೂರು : ಬೆಂಗಳೂರಲ್ಲಿ ವೈದ್ಯೆ ಕೃತಿಕಾ ರೆಡ್ಡಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು ಇದೀಗ ಪ್ರಕರಣದ ಚಾರ್ಜ್ ಶೀಟ್ ತಯಾರಿಸಿದ್ದಾರೆ. ನಾಳೆ ಬೆಂಗಳೂರಿನ ACJM ಕೋರ್ಟ್ ಗೆ ಸುಮಾರು 1,200 ಪುಟಗಳ ಚಾರ್ಜ್ ಶೀಟ್ ಅನ್ನು ಪೊಲೀಸರು ಸಲ್ಲಿಸಲಿದ್ದಾರೆ. ಕೃತಿಕಾ ಪತಿ ಮಹೇಂದ್ರ ರೆಡ್ಡಿ ವಿರುದ್ಧ ಚಾರ್ಜ್ ಶೀಟ್ ತಯಾರಿಸಿದ್ದು ಶುಕ್ರವಾರ ಅಂದರೆ ನಾಳೆ ಎಸಿಜೆಎಂ ಕೋರ್ಟಿಗೆ ಚಾರ್ಜ್ ಶೀಟ್ ಸಲ್ಲಿಕೆಯಾಗಲಿದೆ. ಸುಮಾರು 1,200 ಪುಟಗಳ ಚಾರ್ಜಿಶೀಟ್ ಇದೀಗ ಪೊಲೀಸರು ಸಿದ್ಧಪಡಿಸಿದ್ದಾರೆ. ಮಾರತಹಳ್ಳಿ ಪೊಲೀಸರಿಂದ ಚಾರ್ಜ್ ಶೀಟ್ ರೆಡಿ ಮಾಡಿದ್ದು ಎಸ್ಟಿಪಿ ಪ್ರಸನ್ನ ಕುಮಾರ್ ಅದನ್ನು ಪರಿಶೀಲನೆ ಮಾಡಲಿದ್ದಾರೆ. ಹಲವು ಅಂಶಗಳು ಈ ಒಂದು ವಿಚಾರ ಚಾರ್ಜ್ ಶೀಟ್ ನಲ್ಲಿ ಉಲ್ಲೇಖವಾಗಿದೆ. ಚಾರ್ಜ್ ಶೀಟ್ ನಲ್ಲಿ ಹಲವು ಪ್ರಮುಖ ಅಂಶಗಳ ಉಲ್ಲೇಖ ಆಗಿದ್ದು 72ಕ್ಕೂ ಹೆಚ್ಚು ಸಾಕ್ಷಿಗಳನ್ನು ಸಂಗ್ರಹಿಸಿದ ಬಗ್ಗೆ ಉಲ್ಲೇಖವಾಗಿದೆ. ಕೃತಿಕಾಗೆ ನೀಡಿದ್ದ ಅನಸ್ತೇಷಿಯ ಖರೀದಿಸಿದ ಮಾಹಿತಿ, ಮೆಡಿಕಲ್ ಸ್ಟೋರ್ ಗೆ ಹೋಗಿದ್ದ ಸಿಸಿಟಿವಿ ದೃಶ್ಯಾವಳಿ, ಆರೋಪಿ ಮಹೇಂದ್ರ ರೆಡ್ಡಿ…

Read More

ಹಾವೇರಿ : ನಮ್ಮ ಸರ್ಕಾರ ಅಧಿಕಾರಕ್ಕೆ ಬಂದು ಎರಡೂವರೆ ವರ್ಷ ಆಗಿದೆ. ಸರ್ಕಾರದಿಂದ ₹1.12 ಲಕ್ಷ ಕೋಟಿಗಳನ್ನು ಗ್ಯಾರಂಟಿ ಯೋಜನೆಗಳಿಗೆ ಖರ್ಚು ಮಾಡಿದ್ದೇವೆ. ಆದರೂ ನಮ್ಮ‌ ಸರ್ಕಾರ ಆರ್ಥಿಕವಾಗಿ ದಿವಾಳಿ ಆಗಿಲ್ಲ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು. ಹಾವೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಗ್ಯಾರಂಟಿ ಯೋಜನೆಗಳಿಗಾಗಿ ಪ್ರತಿ ವರ್ಷ ₹52 ಸಾವಿರ ಕೋಟಿ ಖರ್ಚು ಮಾಡುತ್ತಿದೆ. ಜನರಲ್ಲಿ ತಪ್ಪು ಕಲ್ಪನೆ ಬಿಂಬಿಸುವ ಕೆಲಸ ಆಗಬಾರದು. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದು ಎರಡೂವರೆ ವರ್ಷ ಆಗಿದೆ. ಸರ್ಕಾರದಿಂದ ₹1.12 ಲಕ್ಷ ಕೋಟಿಗಳನ್ನು ಗ್ಯಾರಂಟಿ ಯೋಜನೆಗಳಿಗೆ ಖರ್ಚು ಮಾಡಿದ್ದೇವೆ. ಆದರೂ ನಮ್ಮ‌ ಸರ್ಕಾರ ಆರ್ಥಿಕವಾಗಿ ದಿವಾಳಿ ಆಗಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು. ನಮ್ಮ ಸರ್ಕಾರ ಯಾವುದೆ ತಾರತಮ್ಯ ಇಲ್ಲದೇ ಎಲ್ಲರನ್ನೂ ಸಮಾನವಾಗಿ ಕಾಣುತ್ತದೆ. ಹಾಗಾಗಿ, ಎಲ್ಲ ಧರ್ಮ, ಜಾತಿಯ ಬಡವರಿಗೆ ಗ್ಯಾರಂಟಿ ಜಾರಿಗೊಳಿಸಿದ್ದೇವೆ. ಕಟ್ಟಕಡೆಯ ವ್ಯಕ್ತಿಗೂ ಮೂಲ ಸೌಲಭ್ಯ ಸಿಗಬೇಕು. ಆಗ ಮಾತ್ರ ಜಾತ್ಯತೀತ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ ಎಂದರು.

Read More

ಚಾಮರಾಜನಗರ : ರಾಜ್ಯದಲ್ಲಿ ಇನ್ನು ಅದರಲ್ಲೂ ಗ್ರಾಮೀಣ ಪ್ರದೇಶಗಳಲ್ಲಿ ಮೌಢ್ಯ ಆಚರಣೆಗಳು ಇನ್ನೂ ಜೀವಂತವಾಗಿವೆ. ಅದಕ್ಕೆ ನಿದರ್ಶನ ಎಂಬಂತೆ, ಚಾಮರಾಜನಗರದಲ್ಲಿ ಮಗಳಿಗೆ ಅಂತರ್ಜಾತಿ ಯುವಕನ ಜೊತೆ ಮದುವೆ ಮಾಡಿದ್ದಕ್ಕೆ ಕುಟುಂಬಕ್ಕೆ ಬಹಿಷ್ಕಾರ ಹಾಕಲಾಗಿದೆ. ಬಂಡಿಗೆರೆ ಗ್ರಾಮದ ಕೃಷ್ಣರಾಜ ಎಂಬುವವರ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ ಹಾಕಲಾಗಿದೆ. ಸರ್ಕಾರ ಕಾಯ್ದೆ ತಂದರೂ ಕೂಡ ಸಾಮಾಜಿಕ ಬಹಿಷ್ಕಾರ ಪದ್ಧತಿಯ ಉಪಟಳ ಇನ್ನು ನಿಂತಿಲ್ಲ. ಹಾಗಾಗಿ ಸಾಮಾಜಿಕ ಬಹಿಷ್ಕಾರದಿಂದ ಜನರ ರಕ್ಷಣೆ ಕಾಯ್ದೆ ರಕ್ಷಣೆಗೆ ಬರುತ್ತಾ ಎನ್ನುವ ಪ್ರಶ್ನೆ ಮೂಡಿದೆ. ಚಾಮರಾಜನಗರ ತಾಲೂಕಿನ ಬಂಡಿಗೆರೆ ಗ್ರಾಮದಲ್ಲಿ ಈ ಒಂದು ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ ಹಾಕಿದ್ದು ಬಹಿಷ್ಕಾರದಿಂದ ಹೊರ ಬರಬೇಕೆಂದರೆ 5 ಲಕ್ಷ ತಪ್ಪು ಕಾಣಿಕೆ ಕೊಡಬೇಕು. 2023ರಲ್ಲಿ ಕೃಷ್ಣಮೂರ್ತಿ ತಮ್ಮ ಮಗಳಿಗೆ ಮದುವೆ ಮಾಡಿದ್ದರು ಪ್ರೀತಿಸಿದ್ದ ಬೇರೆ ಜಾತಿಯ ಯುವಕರ ಜೊತೆಗೆ ಅವರು ಮದುವೆ ಮಾಡಿದ್ದರು ವಿವಾಹವಾಗಿ ಮೂರು ತಿಂಗಳಿಗೆ ಅಳಿಯ ಮೃತಪಟ್ಟಿದ್ದ. ಅಳಿಯ ಸಾವಿನ ಬಳಿಕ ಮಗಳನ್ನು ಕೃಷ್ಣಮೂರ್ತಿ ದಂಪತಿ ತವರಿಗೆ ಕರಿತಂದಿದ್ದರು. ಅಂತರ್ಜಾತಿ ವಿವಾಹ…

Read More

ಬೆಂಗಳೂರು : ಬೆಂಗಳೂರಿನಲ್ಲಿ ಪತಿಯೊಬ್ಬ ತನ್ನ ಪತ್ನಿಯ ಮೇಲೆ ಅನೈತಿಕ ಸಂಬಂಧ ಅನುಮಾನ ಹಿನ್ನೆಲೆಯಲ್ಲಿ ದಂಪತಿ ನಡುವೆ ಗಲಾಟೆ ನಡೆದಿದೆ. ಈ ವೇಳೆ ಮಗಳಿಗೆ ನೀನು ಬಿಗಿದು ನಂತರ ತಾಯಿ ತಾನು ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಮಗಳು ಕೃತಿಕ (6) ಸಾವನ್ನಪ್ಪಿದ್ದು ತಾಯಿ ನಿರುತ (30) ಸ್ಥಿತಿ ಗಂಭೀರವಾಗಿದೆ. ಬೆಂಗಳೂರಿನ ಹೆಣ್ಣೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಒಂದು ಪ್ರಕರಣ ನಡೆದಿದೆ. ಜನವರಿ 5ರಂದು ರಾತ್ರಿ 10 ಗಂಟೆಗೆ ಗೆ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ನೇಪಾಳ ಮೂಲದ ನೀರುತಾ ಮತ್ತು ಕಿಶನ್ ದಂಪತಿ ನಡುವೆ ಕಿತ್ತಾಟ ನಡೆದಿದೆ. ಫೋನಲ್ಲಿ ಯಾವಾಗಲೂ ಬಿಸಿಯಾಗಿರುತ್ತಾಳೆ ಎಂದು ಪತಿ ಗಲಾಟೆ ಮಾಡಿದ್ದಾನೆ. ಬೆಂಗಳೂರಿನಲ್ಲಿ ಕಿಶನ್ ಸೆಕ್ಯೂರಿಟಿ ಗಾರ್ಡ್ ಕೆಲಸ ಮಾಡಿಕೊಂಡಿದ್ದಾನೆ. ಜನವರಿ 5ರಂದು ಬೆಳಿಗ್ಗೆ ಕಿಶನ್ ಕೆಲಸಕ್ಕೆ ತೆರಳಿದ್ದಾನೆ. ವಾಪಸ್ ಬರುವ ಅಷ್ಟರಲ್ಲಿ ಪತ್ನಿ ಮತ್ತು ಮಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಮಗಳು ಕೃತಿಕ ಮೃತಪಟ್ಟಿದ್ದರೆ, ಪತ್ನಿ ನಿರುತ ಸ್ಥಿತಿ ಗಂಭೀರವಾಗಿತ್ತು ಸದ್ಯ…

Read More

ಹಾವೇರಿ : ಈ ಹಿಂದೆ ಸಿಎಂ ಕುರ್ಚಿಗಾಗಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ನಡುವೆ ವೀಟ್ ವಾರ್ ನಡೆದಿತ್ತು ಈ ವೇಳೆ ಡಿ ಸಿ ಎಂ ಡಿಕೆ ಶಿವಕುಮಾರ್ ಓಲ್ಡ್ ಪವರ್ ಗಿಂತ ವರ್ಡ್ ಪವರ್ ಹೆಚ್ಚು ಎಂದು ಹೇಳಿಕೆ ನೀಡಿದ್ದರು ಇದೀಗ ಹಾವೇರಿಯಲ್ಲಿ ಕೂಡ ಅದೇ ಮಾತನ್ನು ಪುನರುಚ್ಚಿಸಿದ್ದಾರೆ. ಹಾವೇರಿಯ ದೇವಗುಗಿ ಬಳಿ ಇರುವ ಮೆಡಿಕಲ್ ಕಾಲೇಜು ಆಸ್ಪತ್ರೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಹೇಳಿಕೆ ನೀಡಿದರು. ಕೊಟ್ಟ ಮಾತನ್ನು ಉಳಿಸಿಕೊಳ್ಳಬೇಕೆಂದು ನಾನು ಹೇಳಿದ್ದೆ , ಆದ್ದರಿಂದ ಕೊಟ್ಟ ಮಾತನ್ನು ಉಳಿಸಿಕೊಳ್ಳಬೇಕು. ವರ್ಲ್ಡ್ ಪವರ್ ಗಿಂತ ವರ್ಡ್ ಪವರ್ ಹೆಚ್ಚು ಹಾಗಾಗಿ ಕೊಟ್ಟ ಮಾತು ಉಳಿಸಿಕೊಳ್ಳುವುದು ಬಹಳ ಮುಖ್ಯ. ರಾಜಕಾರಣದಲ್ಲಿ ಎಷ್ಟು ದಿನ ಇರುತ್ತೇವೆ ಎಂದು ಗೊತ್ತಿಲ್ಲ ಹಾಗಾಗಿ ನುಡಿದಂತೆ ನಡೆಯಬೇಕು ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿಕೆ ನೀಡಿದರು. 70 ಮೆಡಿಕಲ್ ಕಾಲೇಜುಗಳಲ್ಲಿ 13,945 ಸೀಟು ಲಭ್ಯವಾಗಿದೆ. ನಮ್ಮ ರಾಜ್ಯದಲ್ಲಿ ಹೆಚ್ಚು ಡಾಕ್ಟರ್ ರೆಡಿಯಾಗುತ್ತಿದ್ದಾರೆ. ನೀವು…

Read More

ಬೆಂಗಳೂರು : ಬೆಂಗಳೂರಿನಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿ ಒಬ್ಬ ಆತ್ಮಹತ್ಯೆಗೆ ಶರಣಾಗಿದ್ದು, ಅಪಾರ್ಟ್ಮೆಂಟ್ ನ 16ನೇ ಮಹಡಿಯಿಂದ ಜಿಗಿದು ಇಂಜಿನಿಯರಿಂಗ್ ವಿದ್ಯಾರ್ಥಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಯನ್ನು ನಿಕ್ಷೇಪ ಬಂಗೇರ (26) ಎಂದು ತಿಳಿದುಬಂದಿದೆ. ಮಂಗಳೂರು ಮೂಲದ ವಿದ್ಯಾರ್ಥಿ ನಿಕ್ಷೇಪ ಬಂಗೇರ ಬಾಗಲಗುಂಟೆ ಪ್ರಿನ್ಸ್ ಅಪಾರ್ಟ್ಮೆಂಟಲ್ಲಿ ವಾಸವಿದ್ದ.ತಂದೆ ತಾಯಿ ಜೊತೆಗೆ ವಾಸವಿದ್ದ ನಿಕ್ಷೇಪ 16ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆಗೆ ಶರಣಾಗಿದ್ದಾನೆ. ಪ್ರಾಥಮಿಕ ವರದಿಯ ಪ್ರಕಾರ ಈತ ಅನಾರೋಗ್ಯದಿಂದ ಬಳಲುತ್ತಿದ್ದ ಅದರಿಂದ ಬೇಸತ್ತು ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ತಿಳಿದು ಬಂದಿದೆ.

Read More

ಬಳ್ಳಾರಿ : ಬಳ್ಳಾರಿಯಲ್ಲಿ ಶಾಸಕ ಜನಾರ್ಧನ ರೆಡ್ಡಿ ಅವರ ಮನೆಯ ಮುಂದೆ ಬ್ಯಾನರ್ ಕಟ್ಟುವ ವಿಚಾರವಾಗಿ ಗಲಾಟೆ ಆಗಿ ಗುಂಡೇಟಿಗೆ ಓರ್ವ ಕಾಂಗ್ರೆಸ್ ಕಾರ್ಯಕರ್ತ ಸಾವನಪ್ಪಿದ್ದ. ಬಳಿಕ ಬಳ್ಳಾರಿಯ ಎಸ್ ಪಿ ಪವನ್ ನಜ್ಜುರ್ ಅವರನ್ನು ಸರ್ಕಾರ ಅಮಾನತುಗೊಳಿಸಿತ್ತು. ಇದೀಗ ಇಂದು ಡಿಐಜಿಪಿ ಆಗಿದ್ದ ವರ್ತಿಕಾ ಕಟಿಯಾರ್ ಅವರನ್ನು ಸಹ ವರ್ಗಾವಣೆ ಮಾಡಿದೆ. ವರ್ತಿಕ ಕಟಿಯಾರ್ ಅವರನ್ನು ವರ್ಗಾವಣೆ ಮಾಡಿದ ಬೆನ್ನಲ್ಲೇ ಬಳ್ಳಾರಿಯ ವಲಯ ಐಜಿಪಿಯಾಗಿ ಡಾ. ಪಿಎಸ್ ಹರ್ಷ ಅಧಿಕಾರ ಸ್ವೀಕರಿಸಿದ್ದಾರೆ. ಬೆಳಿಗ್ಗೆಯಷ್ಟೇ ಐಜಿಪಿ ವರ್ತಿಕ ಕಟಿಯಾರ್ ಅವರನ್ನು ರಾಜ್ಯ ಸರ್ಕಾರ ವರ್ಗಾವಣೆ ಮಾಡಿ ಆದೇಶ ಹೊರಡಿಸಿತ್ತು. ಇದೀಗ ಬಳ್ಳಾರಿಯ ನೂತನ ವಲಯ ಐಜಿಪಿಯಾಗಿ ಪಿಎಸ್ ಹರ್ಷ ಅಧಿಕಾರ ಸ್ವೀಕರಿಸಿದ್ದಾರೆ. ಈ ವೇಳೆ ಉಸ್ತುವಾರಿ ಎಸ್ಪಿ ರಂಜಿತ್ ಕುಮಾರ್ ಉಪಸ್ಥಿತರಿದ್ದರು.

Read More

ಬೆಳಗಾವಿ : ಬೆಳಗಾವಿಯಲ್ಲಿ ಘೋರ ದುರಂತ ಒಂದು ಸಂಭವಿಸಿದ್ದು ಜಿಲ್ಲೆಯ ಬೈಲಹೊಂಗಲ ತಾಲೂಕಿನ ಮರಕುಂಬಿಯಲ್ಲಿ ಇರುವ ಸಕ್ಕರೆ ಕಾರ್ಖಾನೆಯಲ್ಲಿ ಬಾಯ್ಲರ್ ಸ್ಫೋಟಗೊಂಡು ಇಬ್ಬರು ಕಾರ್ಮಿಕರು ಸಾವನ್ನಪ್ಪಿದ್ದು, ಆರು ಜನ ಕಾರ್ಮಿಕರಿಗೆ ಗಂಭೀರವಾದ ಗಾಯಗಳಾಗಿರುವ ಘಟನೆ ವರದಿಯಾಗಿದೆ. ಮರಕುಂಬಿಬಳ್ಳಿಯ ಇನಾಮದಾರ್ ಸಕ್ಕರೆ ಕಾರ್ಖಾನೆಯಲ್ಲಿ ಈ ಒಂದು ಅವಘಡ ಸಂಭವಿಸಿದೆ. ಘಟನೆಯಲ್ಲಿ 6 ಕಾರ್ಮಿಕರಿಗೆ ಗಂಭೀರವಾದ ಗಾಯಗಳಾಗಿದ್ದು ಬೆಳಗಾವಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಖಾಸಗಿ ಆಸ್ಪತ್ರೆಗೆ ಬೆಳಗಾವಿ ಎಸ್ ಪಿ ಕೆ ರಾಮರಾಜನ್ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದರು. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

Read More