Author: ಸುರೇಶ್‌

"ಕನ್ನಡ ನ್ಯೂಸ್ ನೌ ಜಾಲತಾಣದ ಮುಖ್ಯ ಸಂಪಾದಕರಾದ ಸುರೇಶ್ ಅವರು ಕಳೆದ 4 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದಾರೆ. ಸರ್ಕಾರದ ಯೋಜನೆಗಳು, ಶಿಕ್ಷಣ ಮತ್ತು ಪ್ರಚಲಿತ ವಿದ್ಯಮಾನಗಳನ್ನು ಸಾಮಾನ್ಯ ಜನರಿಗೂ ಅರ್ಥವಾಗುವಂತೆ ವಿವರಿಸುವುದು ಇವರ ವಿಶೇಷತೆ. ಈ ಮೊದಲು ವಿವಿಧ ವೆಬ್‌ಸೈಟ್‌ಗಳಲ್ಲಿ ನಾಗರಿಕ ಸಮಸ್ಯೆಗಳ ಬಗ್ಗೆ ವರದಿಗಾರರಾಗಿ ಕೆಲಸ ಮಾಡಿರುವ ಇವರು, ಸಮಯೋಚಿತ ಹಾಗೂ ವಿಶ್ವಾಸಾರ್ಹ ಮಾಹಿತಿ ನೀಡುವ ಮೂಲಕ ಓದುಗರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಡಿಜಿಟಲ್ ಸಾಕ್ಷರತೆ ಇವರ ನೆಚ್ಚಿನ ವಿಷಯಗಳಲ್ಲೊಂದು

ಬೆಂಗಳೂರು : ಬೆಂಗಳೂರಿನಲ್ಲಿ ಕಾರು ಹರಿದು ಬೀದಿ ನಾಯಿ ಸಾವನ್ನಪ್ಪಿರುವ ಘಟನೆ ನಡೆದಿದ್ದು, ನಾಯಿಯ ಮೇಲೆ ಕಾರು ಹರಿಸಿ ಕೊಂದ ಚಾಲಕನ ವಿರುದ್ಧ ಇದೀಗ ಎಫ್ಐಆರ್ ದಾಖಲಾಗಿದೆ. ಸಂಜಯ ನಗರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.ನಿನ್ನೆ ಮಧ್ಯಾಹ್ನ 1:00 ಸುಮಾರಿಗೆ ಈ ಒಂದು ಘಟನೆ ನಡೆದಿದೆ. ಜೀವಿಕ ಗೌಡ ಎಂಬವರು ಕಾರು ಚಾಲಕನ ವಿರುದ್ಧ ದೂರು ನೀಡಿದ್ದರು ಅವರ ದೂರಿನ ಆಧಾರದ ಮೇಲೆ ಚಾಲಕನ ವಿರುದ್ಧ FIR ದಾಖಲಾಗಿದೆ.

Read More

ಉತ್ತರಪ್ರದೇಶ : ಕುಡಿದ ಮತ್ತಿನಲ್ಲಿ ಅಡ್ಡಾಡಿದ್ದಿ ಕಾರು ಓಡಿಸಿ 6 ಜನರು ಗಾಯಗೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾನ್ಪುರ ಪೊಲೀಸರು ಪ್ರಮುಖ ತಂಬಾಕು ಉದ್ಯಮಿಯ ಪುತ್ರ 26 ವರ್ಷದ ಶಿವಂ ಮಿಶ್ರಾ ಅವರನ್ನು ಬಂಧಿಸಿದ್ದರು. ಇದೀಗ ಕಾನ್ಪುರದ ACMM ಕೋರ್ಟ್ ನಿಂದ ಜಾಮೀನು ಮಂಜೂರು ಸಿಕ್ಕಿದೆ. ಉತ್ತರ ಪ್ರದೇಶದ ಖ್ಯಾತ ತಂಬಾಕು ಉದ್ಯಮಿ ಕೆಕೆ ಮಿಶ್ರಾ ಪುತ್ರ ಶಿವಂ ಮಿಶ್ರಾನನ್ನ ಕಾನ್ಪುರ ಪೋಲಿಸರು ಬೆಳಿಗ್ಗೆಯಷ್ಟೇ ಬಂಧಿಸಿದ್ದರು. ಕುಡಿದ ಮತ್ತಿನಲ್ಲಿ ಲ್ಯಾಂಬೋರ್ಗಿನಿ ಕಾರು ಓಡಿಸಿದ್ದ. ಈ ವೇಳೆ ಕಾರು ಡಿಕ್ಕಿಯಾಗಿ ಆರು ಪಾದಚಾರಿಗಳು ಗಾಯಗೊಂಡಿದ್ದರು. ಪ್ರಕರಣ ಸಂಬಂಧ ಪೊಲೀಸರು FIR ದಾಖಲಿಸಿಕೊಂಡಿದ್ದರು. ಇದೀಗ ಕಾನ್ಪುರ ಕೋರ್ಟ್ ಶಿವು ಮಿಶ್ರಾಗೆ ಜಾಮೀನು ಮಂಜೂರು ಮಾಡಿದೆ.

Read More

ಬಳ್ಳಾರಿ : ರಾಜ್ಯ ರಾಜಕಾರಣದಲ್ಲಿ ನಾಯಕತ್ವ ಬದಲಾವಣೆ ವಿಚಾರ ಚರ್ಚೆ ನಡೆಯುತ್ತಿದ್ದು ಇದರ ಮಧ್ಯ ವಸತಿ ಸಚಿವ ಜಮೀರ್ ಅಹ್ಮದ್ ಖಾನ್ 2028ರ ವರೆಗೆ ಮುಖ್ಯಮಂತ್ರಿ ಸ್ಥಾನದಲ್ಲಿ ಸಿದ್ದರಾಮಯ್ಯ ಅವರೇ ಇರುತ್ತಾರೆ ಎಂದು ಹೇಳಿಕೆ ನೀಡಿದ್ದಾರೆ. ಬಳ್ಳಾರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ಜಮೀರ್ ಅಹ್ಮದ್ ಖಾನ್, ಸಿದ್ದರಾಮಯ್ಯ ಸಾರಥ್ಯದಲ್ಲಿ 2028 ರ ಚುನಾವಣೆಗೆ ಹೋಗುತ್ತೇವೆ. ನಮ್ಮದು ಹೈಕಮಾಂಡ್ ಪಕ್ಷ ಸಿಎಂ ಬದಲಾವಣೆ ನಮ್ಮ ಕೈಯಲ್ಲಿ ಇಲ್ಲ. ಹಾಗಾಗಿ 2028 ರ ವರೆಗೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ ಆಗಿ ಮುಂದುವರೆಯುತ್ತಾರೆ ಎಂದು ತಿಳಿಸಿದರು.

Read More

ಧಾರವಾಡ : ಕ್ಷುಲ್ಲಕ ಕಾರಣಕ್ಕೆ ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷನ ತಮ್ಮನಿಂದ ಮೂವರ ಮೇಲೆ ಮಾರಕಾಸ್ತ್ರರಗಳಿಂದ ಹಲ್ಲೆ ನಡೆಸಿರುವ ಘಟನೆ ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಮೊರಬ ಗ್ರಾಮದಲ್ಲಿ ನಡೆದಿದೆ. ಕಾರಿಗೆ ಚಕ್ಕಡಿ ಡಿಕ್ಕಿ ಹೊಡೆದಿದ್ದಕ್ಕೆ ಮೋಹರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದಾನೆ. ಹನುಮಂತ್ ಕರಿಗಾರ್ ಎಂಬಾತ ಮೂವರ ಮೇಲೆ ಹಲ್ಲೆ ಮಾಡಿದ್ದಾನೆ. ಚಕ್ಕಡಿಯಲ್ಲಿದ್ದ ಸೋಮಶೇಖರ ಬೆಂಗೇರಿ, ರಮೇಶ್ ಬೆಂಗೇರಿ ಹಾಗೂ ಮಂಜುನಾಥ್ ಬಳ್ಳೊಳ್ಳಿ ಮೇಲೆ ಹನುಮಂತ ಹಲ್ಲೆ ಮಾಡಿದ್ದಾನೆ. ಮಾಜಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಶಿವಾನಂದ ಸಹೋದರನಾಗಿರುವ ಹನುಮಂತ ಮೂವರ ಮೇಲೆ ಹಲ್ಲೆ ಮಾಡಿದ್ದು, ಹಲ್ಲೆಗೋಳಗಾದ ಮೂವರನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಆರೋಪಿ ಹನುಮಂತ ಕರಿಗಾರನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ನವಲಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಬೆಂಗಳೂರು : ಕಾಫಿ ಬಿಲ್ ಕೇಳಿದ್ದಕ್ಕೆ ಪೊಲೀಸರೇ ಕ್ಯಾಂಟೀನ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಿರುವ ಘಟನೆ ವರದಿಯಾಗಿದೆ ಕ್ಯಾಂಟೀನ್ ಸಿಬ್ಬಂದಿಯ ಮೇಲೆ ಅವರು ಪೊಲೀಸರು ಹಲ್ಲೆ ಮಾಡಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಬಳಿ ಇರುವ ಕೆಂಪೇಗೌಡ ಅಂತರಾಷ್ಟ್ರೀಯ ಏರ್ಪೋರ್ಟ್ ಪೊಲೀಸ್ ಠಾಣೆಯ 3 ಸಿಬ್ಬಂದಿ ಹಲ್ಲೆ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಏರ್ ಪೋರ್ಟ್ ನ ಸಿಬ್ಬಂದಿ ಕ್ಯಾಂಟೀನ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದಾರೆ. ಗಂಗರಾಜು, ಬಾಳಪ್ಪ ಮತ್ತು ಕುಮಾರ್ ಎನ್ನುವ ಮೂರು ಪೊಲೀಸ್ ಸಿಬ್ಬಂದಿಗಳು ಅಲ್ಫಾ ಕ್ಯಾಂಟೀನ್ ಸಿಬ್ಬಂದಿ ಮೇಲೆ ಹಾಲೆ ಮಾಡಿದ್ದಾರೆ. ಹೋಟೆಲ್ ಸಂಬಂಧಿಯ ಮೇಲೆ ಕೈ ಮಾಡಿದ ಅಲ್ಲದೆ ಪಂಚ್ ಮಾಡಿ ಹಲ್ಲೆ ಮಾಡಿದ್ದಾನೆ ಈ ನೆಲೆಯಲ್ಲಿ ಕೆಂಪೇಗೌಡ ಏರ್ಪೋರ್ಟ್ ಪೊಲೀಸ್ ಠಾಣೆಯಲ್ಲಿ ಮೂವರು ಪೋಲಿಸಿ ಸಿಬ್ಬಂದಿ ವಿರುದ್ಧ FIR ದಾಖಲಾಗಿದೆ.

Read More

ಬೆಂಗಳೂರು : ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಲ್ತುಳಿತ ದುರಂತ ನಡೆದ ಬಳಿಕ ಯಾವುದೇ ಕ್ರಿಕೆಟ್ ಪಂದ್ಯ ಆಯೋಜಿಸಿಲ್ಲ ಇದೀಗ ಇಂದು ವಿಧಾನಸೌಧದಲ್ಲಿ ಗೃಹ ಸಚಿವ ಜಿ ಪರಮೇಶ್ವರ್ ಅವರ ನೇತೃತ್ವದಲ್ಲಿ ಸಭೆ ನಡೆಯಿತು ಈ ಒಂದು ಸಭೆಯಲ್ಲಿ ಹಲವು ಷರತ್ತುಗಳೊಂದಿಗೆ ಜನ ಸ್ವಾಮಿ ಸ್ಟೇಡಿಯಂನಲ್ಲಿ ಆರ್‌ಸಿಬಿ ಪಂದ್ಯ ನಡೆಸುವ ಕುರಿತು ಚರ್ಚೆ ನಡೆಯಿತು. ಸಭೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಗೃಹ ಸಚಿವ ಜಿ ಪರಮೇಶ್ವರ್, ಬೆಂಗಳೂರಿನಲ್ಲಿ ಐಪಿಎಲ್ ಉದ್ಘಾಟನಾ ಪದ್ಯ ನಡೆಸಲು ಅನುಮತಿ ನೀಡಬೇಕು ಎಂದು ಈಗಾಗಲೇ KSCA ಮನವಿ ಮಾಡಿದ್ದರು. ಈ ವಿಚಾರವಾಗಿ ರಾಜ್ಯ ಸರ್ಕಾರ ನಮ್ಮ ಜಿಬಿಎ ಚೀಫ್ ಕಮಿಷನರ್ ಅವರ ಅಧ್ಯಕ್ಷತೆಯಲ್ಲಿ ನಮ್ಮ ಪೊಲೀಸ್ ಕಮಿಷನರ್, ಜಾಯಿಂಟ್ ಕಮಿಷನರ್, ಪಿಡಬ್ಲ್ಯೂಡಿ ರೆಪ್ರೆಸೆಂಟೇಟಿವ್, ಹೆಲ್ತ್ ಡಿಪಾರ್ಟ್ಮೆಂಟ್ ಸೇರಿಸಿ ಒಂದು ಸಮಿತಿ ಮಾಡಿತ್ತು. ಅದರ ವರದಿ ಇಂದು ನಮ್ಮ ಕೈ ಸೇರಿದೆ. ಅದರ ಸಾಧಕ ಭಾದಕ ಕುರಿತು ಚರ್ಚೆ ಮಾಡಿದ್ದು ಕ್ಯಾಬಿನೆಟ್ ನಲ್ಲಿ ಗೃಹ ಸಚಿವರಿಗೆ ಜವಾಬ್ದಾರಿ ಕೊಟ್ಟಿದ್ದು ಈ…

Read More

ಬೆಂಗಳೂರು : ಬೆಂಗಳೂರಲ್ಲಿ ರೌಡಿಶೀಟರ್ ಬಿಕ್ಲು ಶಿವ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಿನ್ನೆ ಹೈಕೋರ್ಟ್ ಶಾಸಕ ಭೈರತಿ ಬಸವರಾಜ್ ನಿರೀಕ್ಷಣಾ ಜಾಮೀನು ಅರ್ಜಿ ವಜಾಗೊಳಿಸಿತ್ತು. ಅದರ ಬೆನ್ನಲ್ಲೆ ಅವರು ಸುಪ್ರೀಂಕೋರ್ಟಿಗೆ ಅರ್ಜಿ ಸಲ್ಲಿಸಿದ್ದು, ಇಂದು ಸುಪ್ರೀಂ ಕೋರ್ಟ್ ಸಹ ಭೈರತಿ ಬಸವರಾಜ್ ನಿರೀಕ್ಷಣಾ ಜಾಮೀನು ಅರ್ಜಿ ವಜಾ ಗೊಳಿಸಿದೆ. ಹೌದು ರೌಡಿಶೀಟರ್ ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ ಸದ್ಯ ಶಾಸಕ ಭೈರತಿ ಬಸವರಾಜ್ ತಲೆಮೆಡಿಸಿಕೊಂಡಿದ್ದು ಈ ಹಿನ್ನೆಲೆಯಲ್ಲಿ ನಿನ್ನೆ ಹೈಕೋರ್ಟ್ ಅವರ ನಿರೀಕ್ಷಣಾ ಜಾಮೀನು ಅರ್ಜಿ ವಜಾ ಗೊಳಿಸಿತ್ತು ಬಳಿಕ ಶಾಸಕ ಭೈರತಿ ಬಸವರಾಜ್ ಅವರನ್ನು ಬಂಧಿಸಲು ಸಿಐಡಿ ಪೊಲೀಸರು ಲುಕ್ ಔಟ್ ನೋಟಿಸ್ ಜಾರಿ ಮಾಡಿದ್ದರು. ನಿರೀಕ್ಷಣಾ ಜಾಮೀನು ಅರ್ಜಿ ವಜಾ ಆಗುತ್ತಿದ್ದಂತೆ ಶಾಸಕ ಭರತಿ ಬಸವರಾಜ್ ದುಬೈನಲ್ಲಿ ಇದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಇದೀಗ ಸುಪ್ರೀಂ ಕೋರ್ಟಲ್ಲು ನಿರೀಕ್ಷಣ ಜಾಮೀನು ಅರ್ಜಿ ವಜಾ ಹಿನ್ನೆಲೆಯಲ್ಲಿ ಯಾವುದೇ ಕ್ಷಣದಲ್ಲಿ ಶಾಸಕ ಭೈರತಿ ಬಸವರಾಜ್ ಶರಣ ಗತಿ ಆಗುವ ಸಾಧ್ಯತೆ ಇದೆ…

Read More

ಮೈಸೂರು : ಬಿಜೆಪಿ ಐಟಿ ಸೆಲ್ ಮತ್ತು ಪ್ರತಾಪ್ ಸಿಂಹ ವಿರುದ್ಧ ದೂರು ಸಲ್ಲಿಕೆ ಮಾಡಲಾಗಿದೆ. ಮೈಸೂರು ಪೊಲೀಸ್ ಕಮಿಷನರ್ ಸೀಮಾ ಲಾಟ್ಕರ್ ಗೆ ಮೈಸೂರು ನಗರ ಮತ್ತು ಗ್ರಾಮಾಂತರ ಕಾಂಗ್ರೆಸ್ ವತಿಯಿಂದ ಇದೀಗ ದೂರು ಸಲ್ಲಿಸಲಾಗಿದೆ. ಕೆಪಿಸಿಸಿ ವಕ್ತಾರ ಲಕ್ಷ್ಮಣ ನೇತೃತ್ವದಲ್ಲಿ ಮುಖಂಡರು ದೂರು ನೀಡಿದ್ದಾರೆ. ಕಮಿಷನ್ ಮಸೂಲಿ, ವರ್ಗಾವಣೆ ದಂಧೆ ಸಚಿವ ಯತೀಂದ್ರ ಎಂದು ಪೋಸ್ಟ್ ಹಾಕಿದ್ದರು. ಯತೀಂದ್ರ ವರ್ಗಾವಣೆ ದಂಧೆ ನಡೆಸುತ್ತಿದ್ದಾರೆ ಎಂದು ಪ್ರತಾಪ್ ಸಿಂಹ ಆರೋಪಿಸಿ ಪೋಸ್ಟ್ ಹಂಚಿಕೊಂಡಿದ್ದರು. ಪ್ರತಾಪ್ ಸಿಂಹ ಹಾಗೂ ಬಿಜೆಪಿ ಐಟಿ ಸೆಲ್ ವಿರುದ್ಧ ಇದೀಗ ಕಠಿಣ ಕ್ರಮ ಕೈಗೊಳ್ಳುವಂತೆ ದೂರು ಸಲ್ಲಿಕೆಯಾಗಿದೆ.

Read More

ನವದೆಹಲಿ : ಆಳಂದದಲ್ಲಿರುವ ಲಾಡ್ಲೆ ಮಶಾಕ್ ದರ್ಗಾ ಆವರಣದಲ್ಲಿ ಶಿವರಾತ್ರಿ ಹಬ್ಬದಂದು ರಾಘವ ಚೈತನ್ಯ ಶಿವಲಿಂಗಕ್ಕೆ ಪೂಜೆ ಸಲ್ಲಿಸಲು ನಿನ್ನೆ ಕರ್ನಾಟಕ ಹೈಕೋರ್ಟ್ ಅನುಮತಿ ನೀಡಿತ್ತು. ಇದನ್ನು ಪ್ರಶ್ನಿಸಿ, ದರ್ಗಾದ ಆಡಳಿತ ಮಂಡಳಿ ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದು, ಇದೀಗ ಸುಪ್ರೀಂ ಕೋರ್ಟ್ ಸಹ ದರ್ಗಾದಲ್ಲಿ ಶಿವಲಿಂಗ ಪೂಜೆಗೆ ಅನುಮತಿ ನೀಡಿದೆ.ಸುಪ್ರೀಂಕೋರ್ಟ್ ದರ್ಗಾದಲ್ಲಿ ಶಿವಲಿಂಗ ಪೂಜೆಗೆ ತಡೆ ನೀಡಲು ನಿರಾಕರಿಸಿದೆ  ಅರ್ಜಿ ಹಿಂಪಡೆಯಲು ದರ್ಗಾದ ಪರ ಅರ್ಜಿದಾರರಿಗೆ ಸುಪ್ರೀಂ ಕೋರ್ಟ್ ಇದೆ ವೇಳೆ ಸೂಚನೆ ನೀಡಿತು. ಸಂವಿಧಾನದ 32ನೇ ವಿಧಿ ಇರುವುದು ಇಂತಹ ಉದ್ದೇಶಕ್ಕೆ ಅಲ್ಲ ಎಂದು ದರ್ಗಾದ ಪರರಿದಾರರಿಗೆ ಸುಪ್ರೀಂ ಕೋರ್ಟ್ ತಿಳಿಸಿತು. ರಾಜ್ಯ ಹೈಕೋರ್ಟ್ ಆದೇಶವನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ ಆಳಂದದಲ್ಲಿರುವ ದರ್ಗಾದಲ್ಲಿ ಪೂಜೆ ಅವಕಾಶ ಕಲ್ಪಿಸಿದೆ. ದರ್ಗಾ ಆವರಣದಲ್ಲಿರುವ ರಾಘವ ಚೈತನ್ಯ ಶಿವಲಿಂಗ ಪೂಜೆಗೆ ಅವಕಾಶ ಕಲ್ಪಿಸಿದೆ. ಶಿವರಾತ್ರಿ ಹಬ್ಬದಂದು ಪೂಜೆಗೆ ಅವಕಾಶ ಅನುಮತಿಯನ್ನು ಕರ್ನಾಟಕ ಹೈಕೋರ್ಟ್ ನೀಡಿತ್ತು. ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂ…

Read More

ಬೆಂಗಳೂರು : ಬೆಂಗಳೂರು ಜನತೆಗೆ ಇದೀಗ ಮತ್ತೊಂದು ಶಾಕ್ ಎದುರಾಗಿದ್ದು, ಬೇಸಿಗೆಯಲ್ಲಿ ಕಾವೇರಿ ನೀರು ಪೋಲು ಮಾಡಿದರೆ ಜಲಮಂಡಳಿಯಿಂದ 5000 ದಂಡ ವಿಧಿಸಲಾಗುತ್ತೆ ಎಂದು ಎಚ್ಚರಿಕೆ ನೀಡಿದೆ. ಬೆಂಗಳೂರು ಜಲಮಂಡಳಿ ಬೇಸಿಗೆ ಕಾಲದಲ್ಲಿ ಆಗುವ ನೀರಿನ ಸಮಸ್ಯೆಯನ್ನ ಬಗೆಹರಿಸಲು ಈಗಾಗಲೇ ಅಧಿಕಾರಿಗಳ ಸಭೆ ಮಾಡಿದ್ದು, ನೀರಿನ ಸಮಸ್ಯೆ ಆಗುವ ಭಾಗದಲ್ಲಿ ಟ್ಯಾಂಕರ್‌ ವ್ಯವಸ್ಥೆ ಮಾಡಲು ಪ್ಲ್ಯಾನ್‌ ಮಾಡಿಕೊಂಡಿದೆ. ಅದರ ಜೊತೆಗೆ ನೀರಿನ ಅಭಾವ ಆಗೋದು ಡೌಟ್. ಒಂದು ವೇಳೆಯಾದ್ರೂ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳೋದಕ್ಕೆ ಜಲಮಂಡಳಿ ಮುಂದಾಗಿದೆ. ಕಾವೇರಿ ನೀರಿನಲ್ಲಿ ಬೈಕ್, ಕಾರು ತೊಳೆಯೋದು, ನೀರನ್ನ ಬೇಕಾಬಿಟ್ಟಿ ಪೋಲು ಮಾಡಿದ್ರೇ ಜಲಮಂಡಳಿ ದಂಡ ಹಾಕಲು ಕೂಡ ಸಿದ್ಧತೆ ಮಾಡಿಕೊಂಡಿದೆ. ಇದಕ್ಕಾಗಿ ವೀಕ್ಷಕರು ಮತ್ತು ಬ್ಲೂಫೋರ್ಸ್‌ ಕೂಡ ಕಾರ್ಯಚರಣೆ ಮಾಡಲಿದೆ. ಜನರು ಜೀವ ಜಲವನ್ನ ವ್ಯರ್ಥ ಮಾಡದೇ ಸರಿಯಾಗಿ ಬಳಕೆ ಮಾಡಿದ್ರೇ ಜಲಕ್ಷಾಮವಾಗೋದು ಕಡಿಮೆ ಜೊತೆಗೆ ದಂಡ ಕಟ್ಟುವ ಪ್ರಮೇಯವೂ ಬರಲ್ಲ ಎಂದು ಅಧಿಕಾರಿಗಳು ಸಲಹೆ ನೀಡಿದ್ದಾರೆ.

Read More