Author: ಸುರೇಶ್‌

"ಕನ್ನಡ ನ್ಯೂಸ್ ನೌ ಜಾಲತಾಣದ ಮುಖ್ಯ ಸಂಪಾದಕರಾದ ಸುರೇಶ್ ಅವರು ಕಳೆದ 4 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದಾರೆ. ಸರ್ಕಾರದ ಯೋಜನೆಗಳು, ಶಿಕ್ಷಣ ಮತ್ತು ಪ್ರಚಲಿತ ವಿದ್ಯಮಾನಗಳನ್ನು ಸಾಮಾನ್ಯ ಜನರಿಗೂ ಅರ್ಥವಾಗುವಂತೆ ವಿವರಿಸುವುದು ಇವರ ವಿಶೇಷತೆ. ಈ ಮೊದಲು ವಿವಿಧ ವೆಬ್‌ಸೈಟ್‌ಗಳಲ್ಲಿ ನಾಗರಿಕ ಸಮಸ್ಯೆಗಳ ಬಗ್ಗೆ ವರದಿಗಾರರಾಗಿ ಕೆಲಸ ಮಾಡಿರುವ ಇವರು, ಸಮಯೋಚಿತ ಹಾಗೂ ವಿಶ್ವಾಸಾರ್ಹ ಮಾಹಿತಿ ನೀಡುವ ಮೂಲಕ ಓದುಗರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಡಿಜಿಟಲ್ ಸಾಕ್ಷರತೆ ಇವರ ನೆಚ್ಚಿನ ವಿಷಯಗಳಲ್ಲೊಂದು

ಬೆಂಗಳೂರು : ಕದ್ದ ಆಸ್ತಿಯನ್ನು ಹೊಂದಿರುವ ಯಾವುದೇ ವ್ಯಕ್ತಿ ಅಥವಾ ಸಂಸ್ಥೆಯು ಪೊಲೀಸರು ಕೇಳಿದಾಗ ಅದನ್ನು ಹಸ್ತಾಂತರ ಮಾಡಲು ವಿಳಂಬಗೊಳಿಸುವ ಅಥವಾ ನಿರಾಕರಿಸುವ ಯಾವುದೇ ಕಾನೂನುಬದ್ಧ ಹಕ್ಕನ್ನು ಹೊಂದಿರುವುದಿಲ್ಲ ಎಂದು ಹೈಕೋರ್ಟ್‌ ಆದೇಶಿಸಿದೆ. ಅಲ್ಲದೆ, ಕದ್ದ ಆಸ್ತಿ ವಿಷಯದಲ್ಲಿ ಅದು ಚಿನ್ನದ ಸಾಲ ಕಂಪನಿಯಾಗಿದ್ದರೂ ಸಹ ಕದ್ದ ಆಸ್ತಿಯನ್ನು ಹೊಂದುವುದು ರಕ್ಷಾ ಕವಚವಾಗಿ ಬದಲಾಗುವುದಿಲ್ಲ. ಅಲ್ಲದೇ, ಬಡ್ಡಿ ಮತ್ತು ಭದ್ರತೆಯ ಕಾರಣ ನೀಡಿ ಕದ್ದ ವಸ್ತುಗಳನ್ನು ತನ್ನ ಬಳಿಯೇ ಇಟ್ಟುಕೊಳ್ಳುವುದಕ್ಕೆ ಅವಕಾಶವಿಲ್ಲ ಎಂದು ಆದೇಶಿಸಿದೆ. ಕೆಂಗೇರಿಯ ಕರೂರು ವೈಶ್ಯ ಬ್ಯಾಂಕ್‌ ಶಾಖೆಯಿಂದ ಕದ್ದ ಒಡವೆಗಳನ್ನು ಅಡವಿಟ್ಟುಕೊಂಡು ಸಾಲ ಮಂಜೂರು ಮಾಡಿದ್ದ ಆರೋಪದಲ್ಲಿ ಕದ್ದ ಒಡವೆಗಳನ್ನು ಒಪ್ಪಿಸುವಂತೆ ಕೆಂಗೇರಿ ಪೊಲೀಸರು ನೀಡಿದ್ದ ನೋಟಿಸ್ ಪ್ರಶ್ನಿಸಿ ಐಐಎಫ್ಎಲ್ ಫೈನಾನ್ಸ್ ಕಂಪನಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿರುವ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ಮಾಡಿದೆ. ಹಣಕಾಸುದಾರರ ಯಾವುದೇ ಭದ್ರತಾ ಹಿತಾಸಕ್ತಿ ಒಪ್ಪಂದದ ಪ್ರಕಾರ ಮಾನ್ಯವಾಗಿದ್ದರೂ ಸಹ ಕದ್ದ ಆಸ್ತಿಯ ನಿಜವಾದ ಮಾಲೀಕರ…

Read More

ಬೆಂಗಳೂರು : ಬೆಂಗಳೂರಿನಲ್ಲಿ ರೌಡಿಶೀಟರ್ ಬಿಕ್ಲು ಶಿವ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಿಜೆಪಿ ಶಾಸಕ ಬೈರತಿ ಬಸವರಾಜ್ ಅವರನ್ನು ಇಂದು ಬೆಂಗಳೂರಿನ 42ನೇ ACJM ಕೋರ್ಟಿಗೆ ಹಾಜರುಪಡಿಸಿದರು. ವಿಚಾರಣೆ ಬಳಿಕ ಬೈರತಿ ಬಸವರಾಜ್ ಗೆ ಆಸ್ಪತ್ರೆ ಚಿಕಿತ್ಸೆಗೊಳಿಸುವಂತೆ ಸಿಐಡಿ ಗೆ ಕೋರ್ಟ್ ಸೂಚಿಸಿತು. ವಿಚಾರಣೆಯ ವೇಳೆ ಸಿಐಡಿ ಪೋಲೀಸರು ಭೈರತಿ ಬಸವರಾಜ್ ಅವರನ್ನು 14 ದಿನ ಕಸ್ಟಡಿಗೆ ನೀಡಬೇಕು ಎಂದು ಮನವಿ ಮಾಡಿದರು. ರಿಮ್ಯಾಂಡ್ ಅಪ್ಲಿಕೇಶನ್ ಅನ್ನು ಸಿಐಡಿ ಅಧಿಕಾರಿಗಳು ಸಲ್ಲಿಕೆ ಮಾಡಿದರು ಈ ವೇಳೆದಂತೆ ಮನವಿ ಮಾಡಿದರು. ಆದರೆ ಕೋರ್ಟ್ ಜಡ್ಜ್ ವಿಚಾರಣೆ ಬಳಿಕ ಬೈರತಿ ಬಸವರಾಜ್ ಅವರಿಗೆ ಆಸ್ಪತ್ರೆಯಲ್ಲಿ ಇಂದು ಚಿಕಿತ್ಸೆ ಕೊಡಿಸಿ ನಾಳೆ ನ್ಯಾಯಾಧೀಶರ ಮನೆಯಲ್ಲಿ ಹಾಜರುಪಡಿಸುವಂತೆ ಸಿಐಡಿ ಗೆ ಕೋರ್ಟ್ ಸೂಚನೆ ನೀಡಿದೆ. ಇದಕ್ಕೂ ಮುನ್ನ ಇದೇ ಪ್ರಕರಣದಲ್ಲಿ ಆರೋಪಿಯಾಗಿದ್ದ ಮಲಯಾಳಿ ಅಜಿತ್ ನನ್ನು ಏಳು ದಿನಗಳ ಕಾಲ ಸಿಐಡಿ ಕಸ್ಟಡಿಗೆ ನೀಡಿ ಕೋರ್ಟ್ ಆದೇಶಿಸಿತ್ತು.

Read More

ಬಳ್ಳಾರಿ : ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ ತೆಕ್ಕಲಕೋಟೆ ಗ್ರಾಮದಲ್ಲಿ ಇದೀಗ ಶಿಲಾಯುಗ ಕಾಲದ ಮತ್ತೊಂದು ಅಸ್ತಿಪಂಜರ ಪತ್ತೆಯಾಗಿದೆ. ಗ್ರಾಮದ ಗೌಡರ ಮೂಲೆ ಪ್ರದೇಶದಲ್ಲಿ ಮೂರನೇ ಅಸ್ತಿಪಂಜರ ಪತ್ತೆಯಾಗಿದೆ. ಮಡಿಕೆ ಹೊರ ತೆಗೆಯುವ ವೇಳೆ ಮೂರನೇ ಅಸ್ತಿಪಂಜರ ಪತ್ತೆಯಾಗಿದೆ. ಸಂಶೋಧಕರು ಉತ್ಖನ ಕಾರ್ಯವನ್ನು ಸ್ಥಗಿತಗೊಳಿಸಿದ್ದು, ಫೆಬ್ರವರಿ 12ರ ವರೆಗೆ ಮಾತ್ರ ಉತ್ಖನಕ್ಕೆ ಅನುಮತಿ ನೀಡಲಾಗಿತ್ತು. ಸದ್ಯ ಉತ್ಖನನ ಸ್ಥಳಕ್ಕೆ ಬಳ್ಳಾರಿಯ ಎಸ್ ಪಿ ಸುಮನ್ ಫನೇಕರ್ ಭೇಟಿ ನೀಡಿದ್ದಾರೆ. ಕಳೆದ ಕೆಲವು ದಿನಗಳ ಹಿಂದೆ ಕೂಡ ಬಳ್ಳಾರಿಯಲ್ಲಿ ಸಂಶೋಧಕರು ಉತ್ಖನನ ಮಾಡುವಾಗ ಶಿಲಾಯುಗದ ಮಾನವನ ಅಸ್ತಿಪಂಜರಗಳು ಪತ್ತೆಯಾಗಿದ್ದವು.ಇದೀಗ ಮೂರನೇ ಮಾನವನ ಅಸ್ತಿ ಪಂಜರ ಪತ್ತೆಯಾಗಿದ್ದು ಕುತೂಹಲಕ್ಕೆ ಕಾರಣವಾಗಿದೆ.

Read More

ಬೆಂಗಳೂರು : ರೌಡಿಶೀಟರ್ ಬಿಕ್ಲು ಶಿವ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪ್ರಕರಣದ ಮತ್ತೋರ್ವ ಆರೋಪ A20 ಮಲಯಾಳಿ ಅಜಿತ್ ನನ್ನು ಫೆಬ್ರವರಿ 19 ರವರೆಗೆ CID ಕಸ್ಟಡಿಗೆ ನೀಡಿ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಆದೇಶ ಹೊರಡಿಸಿದೆ. ಹೌದು ರೌಡಿಶೀಟರ್ ಬಿಕ್ಲು ಶಿವ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ A20 ಆರೋಪಿ ಆಗಿರುವ ಅಜಿತ್ ಅಲಿಯಾಸ್ ಮಲಿಯಾಳಿ ಅಜಿತ್ ಬಿಜೆಪಿ ಶಾಸಕ ಭೈರತಿ ಬಸವರಾಜ್ ಅವರ ಕ್ಷೇತ್ರದಲ್ಲಿ ರಿಯಲ್ ಎಸ್ಟೇಟ್ ಹಾಗೂ ಫೈನಾನ್ಸ್ ಇಟ್ಟುಕೊಂಡಿದ್ದ. ಭೈರತಿ ಬಸವರಾಜ್ ಪ್ರಕರಣದ ಎಲ್ಲರಿಗೂ ಫೈನಾನ್ಸಿಯರ್ ಆಗಿದ್ದ. ಅಜಿತ್ ಈ ಪ್ರಕರಣದಲ್ಲಿ ಜಾಗದ ಮೇಲೆ ಬಿಕ್ಲು ಶಿವ ಮತ್ತು ಜಗ್ಗ ನಡುವೆ ಗಲಾಟೆ ಆಗುತ್ತಿತ್ತು. ಫೈನಾನ್ಸ್ ಮಾಡಿ ಆ ಜಾಗವನ್ನು ಪಡೆದುಕೊಳ್ಳಬೇಕು ಅಂತ ಪ್ಲಾನ್ ಮಾಡಿದ್ದು ಈ ಮಲಿಯಾಳಿ ಅಜಿತ್. ಈತನನ್ನು ಅರೆಸ್ಟ್ ಮಾಡಲು ಪೊಲೀಸರು ಹರಸಾಹಸ ಪಟ್ಟಿದ್ದರು. ಏಕೆಂದರೆ ಈತನೊಬ್ಬ ವಕೀಲ ಕೂಡ ಆಗಿದ್ದ. ಇದೀಗ ಇಂದು ಅರೆಸ್ಟ್ ಮಾಡಿ ಬೌರಿಂಗ್ ಆಸ್ಪತ್ರೆಗೆ ಕರೆತಂದು ಮೆಡಿಕಲ್…

Read More

ಉಡುಪಿ : ರಾಜ್ಯದಲ್ಲಿ ಅಧಿಕಾರಿಗಳ ವರ್ಗಾವಣೆ ವಿಚಾರಕ್ಕೆ ಸಂಬಂಧಪಟ್ಟಂತೆ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಗಂಭೀರವಾದ ಆರೋಪ ಮಾಡಿದ್ದು, ಇದರಲ್ಲಿ ನೇರವಾಗಿ ಸಿಎಂ ಸಿದ್ದರಾಮಯ್ಯ ಪುತ್ರ ಯತೀಂದ್ರ ಹಾಗೂ ಸಚಿವ ಭೈರತಿ ಸುರೇಶ್ ಭಾಗಿಯಾಗಿದ್ದಾರೆ ಎಂದು ಆರೋಪಿಸಿದರು. ಇವರ ಹಸ್ತಕ್ಷೇಪದಿಂದ, ಜಿಲ್ಲೆಯ ಶಾಸಕರು, ಉಸ್ತುವಾರಿ ಸಚಿವರು, ಜಿಲ್ಲಾ ಮುಖಂಡರು ಸೇರಿದಂತೆ ಎಲ್ಲರೂ ರೋಸಿ ಹೋಗಿದ್ದಾರೆ. ಸಿಎಂ ಸಿದ್ದರಾಮಯ್ಯನವರು ರಾಜ್ಯದ ದೀರ್ಘಾವಧಿಯ ಸಿಎಂ ನಿಜ. ಆದರೆ ಅತಿ ಭ್ರಷ್ಟ ಮುಖ್ಯಮಂತ್ರಿ ಆಗಿ ನಿವೃತ್ತರಾಗುತ್ತಾರೆ. ಕಡು ಭ್ರಷ್ಟ ಎಂಬ ಹೆಸರು ತಂದುಕೊಳ್ಳಬೇಡಿ. ಪಕ್ಷದಲ್ಲಿ ಇದು ಸಿದ್ದರಾಮಯ್ಯವ ಅವರ ಕೊನೆಯ ಬಜೆಟ್ ಅಂತಿದ್ದಾರೆ. ಕಾಂಗ್ರೆಸ್ ಹೈಕಮಾಂಡ್ ವೀಕ್ ಆಗಿದೆ ಎಂದು ಉಡುಪಿಯಲ್ಲಿ ಶಾಸಕ ಬಸನಗೌಡ ಪಾಟೀಲ ಹೇಳಿಕೆ ನೀಡಿದರು.

Read More

ಚಾಮರಾಜನಗರ : ಕೆ ಎಸ್ ಆರ್ ಟಿ ಸಿ ಬಸ್ ಹಾಗೂ ಖಾಸಗಿ ಬಸ್ ಮುಖಾಮುಖಿ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ 20ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಂಭೀರವಾದ ಗಾಯಗಳಾಗಿರುವ ಘಟನೆ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದ 4ನೇ ತಿರುವಿನಲ್ಲಿ ಈ ಅಪಘಾತ ಸಂಭವಿಸಿದೆ. ಮೈಸೂರಿನಿಂದ ಕೆಎಸ್ಆರ್ಟಿಸಿ ಬಸ್ ಮಲೆ ಮಹದೇಶ್ವರ ಬೆಟ್ಟಕ್ಕೆ ಬರುತ್ತಿತ್ತು. ಈ ವೇಳೆ ಎದುರಿಗೆ ಬಂದ ಖಾಸಗಿ ಬಸ್ ಬೆಟ್ಟದ 4ನೇ ತಿರುವಿನಲ್ಲಿ ಪರಸ್ಪರ ಮುಖಾಮುಖಿ ಡಿಕ್ಕಿ ಹೊಡೆದಿವೆ. ಈ ಒಂದು ಅಪಘಾತದಲ್ಲಿ 20ಕ್ಕೂ ಹೆಚ್ಚು ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ತಕ್ಷಣ ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

Read More

ದಾವಣಗೆರೆ : ರಾಜ್ಯದ SC, ST ಯವರಿಗೆ ನಿವೇಶನ ಕೊಡುವ ಸ್ಕೀಮ್​​ಗೆ ಗ್ರೀನ್‌ ಸಿಗ್ನಲ್ ಸಿಕ್ಕಿದೆ. ಎಲ್ಲೆಲ್ಲಿ ಸರ್ಕಾರಿ ಜಾಗಗಳಿವೆ ಅವುಗಳನ್ನು ಗುರುತಿಸಿ ಅಭಿವೃದ್ಧಿ ಮಾಡಿ, ಸೈಟ್ ಕೊಡುವ ಕೆಲಸ ಮಾಡುತ್ತೇವೆ ಎಂದು ಸಚಿವ ಸತೀಶ್ ಜಾರಕಿಹೋಳಿ ತಿಳಿಸಿದರು. ದಾವಣಗೆರೆಯಲ್ಲಿ ಮಾತನಾಡಿದ ಅವರು, ಮಾರ್ಚ್ 6 ರಂದು ಸಿಎಂ ಸಿದ್ದರಾಮಯ್ಯ ಅವರು ಬಜೆಟ್ ಮಂಡಿಸಲಿದ್ದಾರೆ. ಈ ಬಾರಿ ಒಳ್ಳೆಯ ಬಜೆಟ್ ನಿರೀಕ್ಷೆ ಮಾಡಿದ್ದೇವೆ. ​ನಿಂದ ಇಡೀ ರಾಜ್ಯಕ್ಕೆ ಒಳ್ಳೆಯದಾಗಲಿದೆ. ಸಾಮಾನ್ಯವಾಗಿ ಬಜೆಟ್​​ನಲ್ಲಿ 10 ರಿಂದ 20 ಸಾವಿರ ಕೋಟಿಯಷ್ಟು ಪ್ರತಿ ವರ್ಷ ಹೆಚ್ಚಾಗುತ್ತದೆ. ಇದು ರಾಜ್ಯದ ಅಭಿವೃದ್ಧಿಗೆ ನೆರವಾಗಲಿದೆ ಎಂದು ಸಚಿವರು ಮಾಹಿತಿ ನೀಡಿದರು.

Read More

ಬೆಂಗಳೂರು : ಬೆಸ್ಕಾಂ ನಿರ್ವಹಣಾ ಕಾಮಗಾರಿಗಳ ಹಿನ್ನೆಲೆಯಲ್ಲಿ ನಾಳೆ ಬೆಳಿಗ್ಗೆ 10ರಿಂದ ಸಂಜೆ 5 ಗಂಟೆಯವರೆಗೆ ಬೆಂಗಳೂರಿನ ವಿವಿಧೆಡೆ ವಿದ್ಯುತ್​​ ಸರಬರಾಜಲ್ಲಿ ವ್ಯತ್ಯಯವಾಗಲಿದೆ. ಹೀಗಾಗಿ ಗ್ರಾಹಕರು ಸಹಕರಿಸುವಂತೆ ಬೆಸ್ಕಾಂ ಮನವಿ ಮಾಡಿದೆ. ತುಮಕೂರಿನ ಶಿರಾ ಹಾಗೂ ಗ್ರಾಮೀಣ ಉಪ ವಿಭಾಗ ವ್ಯಾಪ್ತಿಯಲ್ಲಿಯೂ ನಿರ್ವಹಣಾ ಕಾಮಗಾರಿ ಹಿನ್ನೆಲೆ ವಿದ್ಯುತ್​​ ಸರಬರಾಜಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಲಾಗಿದೆ. ಜಾಲಹಳ್ಳಿ ವ್ಯಾಪ್ತಿಯ ಡಿಬಿ ಸಂದ್ರ 2ನೇ ಮತ್ತು 4ನೇ ಬ್ಲಾಕ್, ಜೆಬಿ ಕಾವಲ್ ಟ್ರೀ ಪಾರ್ಕ್, ಗಂಗಮ್ಮ ಸರ್ಕಲ್, ಕಮ್ಮಗೊಂಡನಹಳ್ಳಿ, ಬಿಇಎಲ್ ಉತ್ತರ ಮತ್ತು ದಕ್ಷಿಣ ಕಾಲೋನಿ, ಬಾಹುಬಲಿ ನಗರ, ಬ್ಲೂಮ್‌ಫೀಲ್ಡ್ ಗಾರ್ಡನ್, ರಾಮಚಂದ್ರಾಪುರ, ಎಚ್‌ಎಂಟಿ ಇಂಡಸ್ಟ್ರಿಯಲ್ ಎಸ್ಟೇಟ್, ಪ್ರೆಸ್ಟೀಜ್ ವೆಲ್ಲಿಂಗ್ಟನ್, ಪ್ರೆಸ್ಟೀಜ್ ಕೆನ್ಸಿಂಗ್ಟನ್, ಚಾಮುಂಡೇಶ್ವರಿ ಲೇಔಟ್, ನಂಜಪ್ಪ ಲೇಔಟ್​​ಗಳಲ್ಲಿ ಬೆಳಿಗ್ಗೆ 10 ರಿಂದ ಸಂಜೆ 5ರ ವರೆಗೆ ವಿದ್ಯುತ್​​ ಸರಬರಾಜಲ್ಲಿ ವ್ಯತ್ಯವಾಗಲಿದೆ. ದೊಮ್ಮಲೂರು ವ್ಯಾಪ್ತಿಯ ದೊಮ್ಮಲೂರು 2ನೇ ಹಂತ, ಕೋಡಿಹಳ್ಳಿ, ಯೋಗಾನಂದ ಲೇಔಟ್, ಪರಮಹಂಸ ರಸ್ತೆ, ಧೂಪನಹಳ್ಳಿ, ಎಚ್‌ಎಎಲ್ 2ನೇ…

Read More

ನವದೆಹಲಿ : ಧಾರವಾಡದಲ್ಲಿ ಬಿಜೆಪಿ ಮುಖಂಡ ಯೋಗೇಶ್ ಗೌಡ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಸುಪ್ರೀಂ ಕೋರ್ಟ್ ಸಿಬಿಐಗೆ ನೋಟಿಸ್ ಜಾರಿ ಮಾಡಿದೆ. ಒಂದು ವಾರದಲ್ಲಿ ಪ್ರತಿಕ್ರಿಯೆ ನೀಡುವಂತೆ ಸುಪ್ರೀಂಕೋರ್ಟ್ ಸಿಬಿಐಗೆ ನೋಟಿಸ್ ನೀಡಿದೆ. ಧಾರವಾಡದ ಬಿಜೆಪಿ ಮುಖಂಡ ಯೋಗೇಶ್ ಗೌಡ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಅರ್ಜಿ ವಿಚಾರಣೆ ನಡೆಸಿ ಸಿಬಿಐಗೆ ನೋಟಿಸ್ ನೀಡಿದೆ. ಒಂದು ವಾರದಲ್ಲಿ ಪ್ರತಿಕ್ರಿಯೆ ನೀಡುವಂತೆ ಸೂಚನೆ ನೀಡಿದೆ. ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿಗೆ ಜಾಮೀನು ನೀಡಲು ಹೈಕೋರ್ಟ್ ನಿರಾಕರಿಸಿತ್ತು. ಹೈಕೋರ್ಟ್ ಆದೇಶ ಪ್ರಶ್ನೆಸಿ ವಿನಯ್ ಕುಲಕರ್ಣಿ ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಶಾಸಕ ವಿನಯ್ ಕುಲಕರ್ಣಿ ಅರ್ಜಿ ವಿಚಾರಣೆ ನಡೆಸಿ ಸುಪ್ರೀಂ ಕೋರ್ಟ್ ಸಿಬಿಐ ಗೆ ನೋಟಿಸ್ ನೀಡಿದೆ.

Read More

ಬೆಂಗಳೂರು : RTO ಇಲಾಖೆಯಲ್ಲಿ ಅಧಿಕಾರಿಗಳ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿದ್ದು ತಪಾಸಣೆ ಮಾಡದೇ ಸಾವಿರಾರು ವಾಹನಗಳಿಗೆ ಫಿಟ್ನೆಸ್ ಸರ್ಟಿಫಿಕೇಟ್ (FC) ಕೊಡಲಾಗಿದೆ ಎನ್ನುವ ಗಂಭೀರವಾದ ಆರೋಪ ಕೇಳಿ ಬಂದಿದೆ. ಬೆಂಗಳೂರ್ ನಗರ ಬೆಂಗಳೂರು ಕೇಂದ್ರ ಸೇರಿದಂತೆ ಕೋರಮಂಗಲ ಆರ್ ಟಿ ಓ ಕಚೇರಿಯಲ್ಲಿ ವೆಹಿಕಲ್ ಇನ್ಸ್ಪೆಕ್ಟರ್ ರಿಂದ ಫಿಟ್ನೆಸ್ ಸರ್ಟಿಫಿಕೇಟ್ ನೀಡಿದ್ದಾರೆ. ದಾಖಲೆ ಸಮೇತ ವಕೀಲ ನಟರಾಜ್ ಎಂಬವರು ಇದೀಗ ಆರ್‌ಟಿಓ ಅಧಿಕಾರಿಗಳ ವಿರುದ್ಧ ದೂರು ನೀಡಿದ್ದಾರೆ. ಹೊರ ರಾಜ್ಯದ ಒಟ್ಟು 10,000 22 ವಾಹನಗಳಿಗೆ ಫಿಟ್ನೆಸ್ ಸರ್ಟಿಫಿಕೇಟ್ ಕೊಡಲಾಗಿದೆ ತಪಾಸಣೆ ಮಾಡದೇ ಅಧಿಕಾರಿಗಳು ಫಿಟ್ನೆಸ್ ಸರ್ಟಿಫಿಕೇಟ್ ಮಾಡಿ ಕೊಟ್ಟಿದ್ದಾರೆ. ಮಹಾರಾಷ್ಟ್ರ ಕೇರಳ ಗುಜರಾತ್ ವಾಹನಗಳಿಗೆ ಫಿಟ್ನೆಸ್ ಸರ್ಟಿಫಿಕೇಟ್ ನೀಡಿದ್ದಾರೆ ಎಂದು ವಕೀಲ ನಟರಾಜ್ ಅವರು ಆರೋಪಿಸಿದ್ದಾರೆ. ಬೆಂಗಳೂರು ನಗರ ಬೆಂಗಳೂರು ಸೆಂಟ್ರಲ್ ಸೇರಿದಂತೆ ಆರ್ ಟಿ ಓ ಇಲಾಖೆಯಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಅಧಿಕಾರಿಗಳು ತಮಗೆ ಮನಸ್ಸು ಇಚ್ಛೆ ಸುಮಾರು 10000ಕ್ಕೂ ಹೆಚ್ಚು ವಾಹನಗಳಿಗೆ ತಪಾಸಣೆ ಮಾಡದೇ ಫಿಟ್ನೆಸ್ ಸರ್ಟಿಫಿಕೇಟ್ ಕೊಟ್ಟಿದ್ದಾರೆ.…

Read More