Author: kannadanewsnow05

ಮೈಸೂರು : ಮೈಸೂರಿನಲ್ಲಿ ಮುಂದುವರೆದ ಒತ್ತುವರಿ ತೆರವು ಕಾರ್ಯಾಚರಣೆ ವಿಜಯನಗರ ಮೂರನೇ ಹಂತದಲ್ಲಿ 7 ಎಕರೆ ಅತಿಕ್ರಮವನ್ನು ತೆರವುಗೊಳಿಸಲಾಯಿತು. ಸುಮಾರು 140 ಕೋಟಿ ಮೌಲ್ಯದ ಆಸ್ತಿಯನ್ನು MDA (Mysuru Development Authority) ವಶಕ್ಕೆ ಪಡೆದುಕೊಂಡಿದೆ. ಸರ್ಕಾರಿ ಜಾಗ ಅತಿಕ್ರಮಸಿ ಖಾಸಗಿ ವ್ಯಕ್ತಿಗಳು ಕ್ರಮ ಕಟ್ಟಡ ತರವುಗೊಳಿಸಿ ಎಂಡಿಎ ಭೂಮಿ ವಶಕ್ಕೆ ಪಡೆದುಕೊಂಡಿದೆ. ಇನ್ನು ನಿನ್ನೆಯೂ ಸಹ ಜೆಸಿಬಿ ಯಂತ್ರಗಳ ಘರ್ಜನೆಯೊಂದಿಗೆ ಸರ್ಕಾರಿ ಭೂಮಿ ಒತ್ತುವರಿ ತೆರವು ಕಾರ್ಯಾಚರಣೆ ನಡೆಯಿತು. ತಹಶೀಲ್ದಾರ್ ಮಹೇಶ್ ಕುಮಾರ್ ನೇತೃತ್ವದಲ್ಲಿ ತಾಲೂಕು ಆಡಳಿತ ಮೈಸೂರು ಗ್ರಾಮ ಸರ್ವೇ ನಂ.87ರಲ್ಲಿ 38 ಗುಂಟೆ ಭೂಮಿಯನ್ನು ವಶಕ್ಕೆ ಪಡೆದುಕೊಂಡಿತು. ಈ ಭೂಮಿಯನ್ನು ಖಾಸಗಿ ವ್ಯಕ್ತಿಗಳು ವಾಹನ ಪಾರ್ಕಿಂಗ್ ಹಾಗೂ ಟೀ ಅಂಗಡಿಗಾಗಿ ಅಕ್ರಮವಾಗಿ ಬಳಸುತ್ತಿದ್ದರು ಮತ್ತು ಪ್ರತಿದಿನ ಪಾರ್ಕಿಂಗ್ ಶುಲ್ಕ ವಸೂಲಿ ಮಾಡುತ್ತಿದ್ದರು. ಈ ಹಿಂದೆ ಅಲ್ಪಸಂಖ್ಯಾತ ಹಿಂದುಳಿದ ವರ್ಗದ ವಿದ್ಯಾರ್ಥಿಗಳ ನಿಲಯಕ್ಕೆ ಮಂಜೂರಾಗಿದ್ದ ಕೋಟ್ಯಂತರ ಮೌಲ್ಯದ ಸರ್ಕಾರಿ ಭೂಮಿಯನ್ನು ಒತ್ತುವರಿಯಿಂದ ಮುಕ್ತಗೊಳಿಸಿ ಆಡಳಿತ ವಶಕ್ಕೆ ಪಡೆದಿದೆ.

Read More

ಮಂಗಳೂರು : ಫೆಬ್ರವರಿ 9 ರಿಂದ ನಮ್ಮ ಮೆಟ್ರೋ ಪ್ರಯಾಣದರ ಶೇಕಡ 5ರಷ್ಟು ಹೆಚ್ಚಳ ವಿಚಾರವಾಗಿ ಡಿಸಿಎಂ ಡಿಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದು, ಮೆಟ್ರೋ ದರ ಹೆಚ್ಚಳ ವಿಚಾರವಾಗಿ ನಮ್ಮನ್ನು ಯಾರು ಸಂಪರ್ಕಿಸಿಲ್ಲ ಮೆಟ್ರೋ ಚೇರ್ಮನ್ ಆಗಿ ಕೇಂದ್ರ ಸರ್ಕಾರದವರು ಇದ್ದಾರೆ ಎಂದು ತಿಳಿಸಿದರು. ಮಂಗಳೂರಲ್ಲಿ ಮಾತನಾಡಿದ ಅವರು, ಇಂದು ಅಥವಾ ನಾಳೆ ಮೆಟ್ರೋ ಚೇರ್ಮನ್ ಜೊತೆ ಮಾತನಾಡುವೆ, ಯಾವುದೇ ಕಾರಣಕ್ಕೂ ಜನರಿಗೆ ತೊಂದರೆಯಾಗಲು ಬಿಡಲ್ಲ. ಪ್ರಯಾಣದರ ಪರಿಷ್ಕರಣೆ ವಿಚಾರವಾಗಿ ಮಾತನಾಡುತ್ತೇನೆ ಎಂದು ಮಂಗಳೂರಿನಲ್ಲಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿಕೆ ನೀಡಿದರು.

Read More

ಚಿಕ್ಕಬಳ್ಳಾಪುರ : ಫೆಬ್ರವರಿ 14ರಂದು ಪ್ರೇಮಿಗಳ ದಿನಾಚರಣೆ ಎಲ್ಲೆಡೆ ಆಚರಿಸಲಾಗುತ್ತದೆ. ಆದರೆ ಪ್ರೇಮಿಗಳಿಗೆ ಶಾಕ್ ಎದುರಾಗಿದ್ದು, ಫೆಬ್ರವರಿ 14ರಂದು ಚಿಕ್ಕಬಳ್ಳಾಪುರ ಜಿಲ್ಲೆಯ ವಿಶ್ವವಿಖ್ಯಾತ ನಂದಿ ಗಿರಿಧಾಮ ಬಂದ್ ಇರಲಿದೆ. ಹೌದು ಫೆಬ್ರುವರಿ 14ರಂದು ಪ್ರೇಮಿಗಳ ದಿನಾಚರಣೆ ಹಿನೆಲೆಯಲ್ಲಿ ಬೆಳಿಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆವರೆಗೆ ನಂದಿ ಗಿರಿಧಾಮ ಬಂದಿರಲಿದೆ , ಈ ಕುರಿತು ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಜಿ ಪ್ರಭು ಆದೇಶ ಹೊರಡಿಸಿದ್ದಾರೆ ಕಾನೂನು ಸುವ್ಯವಸ್ಥೆ ಕಾಪಾಡಲು ಜಿಲ್ಲಾಡಳಿತದಿಂದ ಕ್ರಮ ಕೈಗೊಳ್ಳಲಾಗಿದೆ.

Read More

ಚಿಕ್ಕಮಗಳೂರು : ನದಿಯ ದಡದಲ್ಲಿ ವಿದ್ಯುತ್ ತಂತಿ ತುಂಡಾಗಿ ಬಿದ್ದು ಓರ್ವ ವ್ಯಕ್ತಿ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ದೋಣಿ ಗಂಡಿ ಬಳಿಯ ಹೇಮಾವತಿ ನದಿಯಲ್ಲಿ ಈ ಒಂದು ದುರ್ಘಟನೆ ಸಂಭವಿಸಿದೆ. ವಿದ್ಯುತ್ ತಂತಿ ಸ್ಪರ್ಶಿಸಿ ಸಂತೋಷ (38) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಪತ್ನಿ ಮತ್ತು ಸಂಬಂಧಿಕರ ಜೊತೆಗೆ ಬಟ್ಟೆ ತೊಳೆಯಲು ಹೇಮಾವತಿ ನದಿಗೆ ತೆರಳಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಮೃತ ಸಂತೋಷ್ ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಚೀಕನಹಳ್ಳಿ ಗ್ರಾಮದ ನಿವಾಸಿಯಾಗಿದ್ದು, ಈ ಹಿಂದೆ ಗುತ್ತಿಗೆ ಆಧಾರದಲ್ಲಿ ಸಂತೋಷ ಲೈನ್ ಮೆನ್ ಆಗಿದ್ದರು. ಕಳೆದ ನಾಲ್ಕು ದಿನಗಳ ಹಿಂದೆ ಎಷ್ಟೇ ಸಂತೋಷ ಲೈನ್ ಮ್ಯಾನ್ ಕೆಲಸವನ್ನು ಬಿಟ್ಟಿದ್ದರು. ಪತ್ನಿಯ ಜೊತೆಗೆ ಸಂಬಂಧಿಕರ ಮನೆಗೆ ಬಂದಾಗ ಈ ಘಟನೆ ಸಂಭವಿಸಿದೆ. ಗೋಣಿಬೀಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಮೆಸ್ಕಾಂ ಇಲಾಖೆಯ ಅನಿಲಕ್ಷಕ್ಕೆ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಹೇಮಾವತಿ ನದಿಗೆ ಅಡಲಾಗಿ ಬಿದ್ದಿದ್ದ ಈ ಒಂದು ವಿದ್ಯುತ್ ತಂತಿಯಿಂದ ಸಂತೋಷ…

Read More

ಬೆಂಗಳೂರು : ಉದ್ಯಮಿ ಅರವಿಂದ್ ರೆಡ್ಡಿಗೆ ಪತ್ರದ ಮೂಲಕ ಬೆದರಿಕೆ ಮತ್ತು ಕೋಟ್ಯಂತರ ಹಣಕ್ಕೆ ಬೇಡಿಕೆ ಇಟ್ಟಿರುವ ಆರೋಪ ಕೇಳಿಬಂದಿದೆ. ಉದ್ಯಮಿ ಅರವಿಂದ ರೆಡ್ಡಿಗೆ ಹೆಸರಿನಲ್ಲಿ ಬೆದರಿಕೆ ಪತ್ರ ಬಂದಿತ್ತು. ಇದೀಗ ಈ ಒಂದು ಪ್ರಕರಣಕ್ಕೆ ಸಂಬಂಧಪಟ್ಟಂತೆ ವೈಶಾಖ ಎಂಬಾತನನ್ನ ಎಚ್ಎಎಲ್ ಠಾಣೆ ಪೊಲೀಸರು ಅರೆಸ್ಟ್ ಮಾಡಿದ್ದಾರೆ ಬ್ಲೂ ಡಾಟ್ ಕೊರಿಯರ್ ಮುಖಾಂತರ ಬೆದರಿಕೆ ಪತ್ರ ಬಂದಿತ್ತು. ಇತ್ತೀಚಿಗೆ ಅರವಿಂದ ರೆಡ್ಡಿ ವಿರುದ್ಧ ಓರ್ವ ನಟಿ ದೂರು ನೀಡಿದ್ದಳು ಇದೇ ಪ್ರಕರಣ ಸಂಬಂಧ ಉದ್ಯಮಿ ಅರವಿಂದ ರೆಡ್ಡಿಗೆ ಬೆದರಿಕೆ ಪತ್ರ ಬಂದಿದೆ. ಬೆದರಿಕೆ ಪತ್ರ ನೋಡಿ ಅರವಿಂದ್ ರೆಡ್ಡಿ ಎಚ್ಎಎಲ್ ಠಾಣೆಗೆ ದೂರು ನೀಡಿದ್ದಾರೆ. ತನಿಖೆಯ ವೇಳೆ ನಟಿಯ ಗೆಳೆಯ ಈ ಪತ್ರ ಕಳುಹಿಸುವುದು ಎಂಬುದು ಪತ್ತೆಯಾಗಿದೆ. ಮಹಿಳೆಯ ಜೊತೆ ಇರುವ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬೇಕು. ಹಾಗೆ ಕ್ಷಮಾಪಣ ಪತ್ರದ ಜೊತೆ ಆರರಿಂದ ಏಳು ಕೋಟಿ ಹಣ ಕಳುಹಿಸು ಇಲ್ಲದಿದ್ದರೆ ಬೇರೆ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕಿದ್ದು, ಸದ್ಯ ನಟಿಯ ಸ್ನೇಹಿತ…

Read More

ಬೆಂಗಳೂರು : ಐದು ವರ್ಷಗಳ ಕಾಲ ನಮ್ಮ ತಂದೆಯವರೇ ಮುಖ್ಯಮಂತ್ರಿ ಆಗಿ ಮುಂದುವರೆಯಲಿದ್ದಾರೆ ಇದಕ್ಕೆ ಹೈಕಮಾಂಡ್ ಸಹ ಗ್ರೀನ್ ಸಿಗ್ನಲ್ ಕೊಟ್ಟಿದೆ ಎಂದು ಎಂಎಲ್ಸಿ ಯತೀಂದ್ರ ಹೇಳಿಕೆ ನೀಡಿದ್ದು, ಇದಕ್ಕೆ ಡಿಸಿಎಂ ಡಿಕೆ ಶಿವಕುಮಾರ್ ಯತಿಂದ್ರ ನಮ್ಮ ಹೈಕಮಾಂಡ್ ಅವರ ಹೇಳಿಕೆಯನ್ನು ಸ್ವಾಗತಿಸುತ್ತೇನೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಟಾಂಗ್ ನೀಡಿದ್ದಾರೆ. ಯತೀಂದ್ರ ಹೇಳಿದ್ದನು? ನಾಯಕತ್ವ ಬದಲಾವಣೆ ವಿಚಾರವಾಗಿ ಚರ್ಚೆ ನಡೆಯುತ್ತಿರುವಾಗಲೇ ಯತೀಂದ್ರ ಸಿದ್ದರಾಮಯ್ಯ ಸ್ಪೋಟಕ ಹೇಳಿಕೆ ನೀಡಿದ್ದು, 5 ವರ್ಷಗಳ ಕಾಲ ನಮ್ಮ ತಂದೆಯೇ ಸಿಎಂ ಎಂದು ಹೈಕಮಾಂಡ್ ಗ್ರೀನ್ ಸಿಗ್ನಲ್ ನೀಡಿದೆ ಎಂದು ಸ್ಪೋಟಕ ಹೇಳಿಕೆ ನೀಡಿದರು. ಮೈಸೂರಿನಲ್ಲಿ ಮಾತನಾಡಿದ ಅವರು, ಯಾರೋ ಕೆಲವರು ನಾಯಕತ್ವ ಬದಲಾವಣೆಗೆ ಪ್ರಯತ್ನಿಸಿದ್ದರು. ಆ ಪ್ರಯತ್ನಕ್ಕೆ ಹೈಕಮಾಂಡ್ ಸೊಪ್ಪು ಹಾಕಿಲ್ಲ. ಸಿದ್ದರಾಮಯ್ಯ 5 ವರ್ಷ ಮುಖ್ಯಮಂತ್ರಿ ಆಗಿ ಅಧಿಕಾರ ನಡೆಸ್ತಾರೆ. ಪಕ್ಷದಲ್ಲಿ ಈಗ ಎಲ್ಲೂ ನಾಯಕತ್ವ ಬದಲಾವಣೆ ಬಗ್ಗೆ ಚರ್ಚೆ ಆಗ್ತಿಲ್ಲ. ಮಾಧ್ಯಮಗಳಲ್ಲಿ ಮಾತ್ರ ನಾಯಕತ್ವ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ನಮ್ಮಲ್ಲಿ ಈಗ…

Read More

ಮಂಡ್ಯ : ಮಂಡ್ಯದಲ್ಲಿ ಕೆಎಸ್ಆರ್ಟಿಸಿ ಚಾಲಕನೊಬ್ಬ ಮೊಬೈಲ್ ನಲ್ಲಿ ರಿಲ್ಸ್ ನೋಡಿಕೊಂಡು ಬಸ್ ಓಡಿಸುವ ವಿಡಿಯೋ ವೈರಲಾಗಿದೆ. ಮಳವಳ್ಳಿಯಿಂದ ಮೈಸೂರಿಗೆ ಹೋಗುತ್ತಿದ್ದ ಕೆಎಸ್ಆರ್ಟಿಸಿ ಬಸ್ ಚಾಲಕ ಮಹೇಶ್ ಮೊಬೈಲ್ ನಲ್ಲಿ ರೀಲ್ ವೀಕ್ಷಣೆ ಮಾಡಿದ್ದಾರೆ. ಚಾಲಕನ ನಿರ್ಲಕ್ಷ್ಯ ಚಾಲನೆಗೆ ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ ಈ ರೀತಿ ಬೇಜವಾಬ್ದಾರಿ ತೋರಿದ್ದಾರೆ. ಹೇಗೆ ಎಂದು ಅಸಮಾಧಾನ ಹೊರಹಾಕಿದ್ದಾರೆ. ಚಾಲಕನ ವಿರುದ್ಧ ಅಗತ್ಯವಾದ ಕ್ರಮ ಕೈಗೊಳ್ಳಬೇಕು ಎಂದು ಪ್ರಯಾಣಿಕರು ಸಹ ಆಗ್ರಹಿಸಿದ್ದಾರೆ.

Read More

ಬೆಂಗಳೂರು : ಕಾಂಗ್ರೆಸ್ ಪಕ್ಷವನ್ನು ಹಾಳು ಮಾಡಿರುವುದೇ ಗಾಂಧಿ ಮನೆತನ ಎಂದು ವಿರೋಧ ಪಕ್ಷದ ನಾಯಕ ಆರ್ ಅಶೋಕ್ ವಾಗ್ದಾಳಿ ನಡೆಸಿದರು. ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಬ್ಯಾಲೆಟ್ ಪೇಪರ್ ಬಳಕೆಗೆ ಸರ್ಕಾರ ನಿರ್ಧರಿಸಿದ್ದು ಈ ವಿಚಾರವಾಗಿ ಕಾಂಗ್ರೆಸ್ ಪಕ್ಷ ಒಂದು ರೀತಿ ತುಘಲಕ್ ಇದ್ದಂತೆ. ದೇಶದಲ್ಲಿ ಇವಿಎಂ ತಂದಿದ್ದು ರಾಜೀವ್ ಗಾಂಧಿ. ರಾಜೀವ್ ಗಾಂಧಿ ಮೇಲಿನ ನಂಬಿಕೆಯನ್ನೇ ಕಳೆದುಕೊಂಡು ಬಿಟ್ರಾ? ಎಂದು ವಿಪಕ್ಷ ನಾಯಕ ಆರ್ ಅಶೋಕ ಪ್ರಶ್ನಿಸಿದರು. ಮೊದಲೇ ಕಾಂಗ್ರೆಸ್ ಪಕ್ಷದವರಿಗೆ ಪಾಕಿಸ್ತಾನದ ಮೇಲೆ ಪ್ರೀತಿ ಜಾಸ್ತಿ. ಈ ರೀತಿ ಆಡುತ್ತಿದ್ದರೆ ಅವರೇ ನಿಮ್ಮ ಗುರು, ದೇವರು ಆಗುತ್ತಾರೆ. ಅವರು ಮಾಡುವುದು ಅನಾಚಾರ ಮನೆಯ ಮುಂದೆ ಬೃಂದಾವನ. ಕಾಂಗ್ರೆಸ್ ಪಕ್ಷವನ್ನು ಹಾಳು ಮಾಡಿರುವುದೇ ಗಾಂಧಿ ಮನೆತನ ಎಂದು ಬೆಂಗಳೂರಿನಲ್ಲಿ ವಿಪಕ್ಷ ನಾಯಕ ಆರ್ ಅಶೋಕ್ ವಾಗ್ದಾಳಿ ನಡೆಸಿದರು.

Read More

ದಾವಣಗೆರೆ : ದಾವಣಗೆರೆಯಲ್ಲಿ ಭೀಕರವಾದ ಅಪಘಾತ ಸಂಭವಿಸಿದ್ದು, ಎರಡು ಕಾರುಗಳ ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಓರ್ವ ಮೃತಪಟ್ಟಿದ್ದು, ಕಾರಿನಲ್ಲಿದ್ದ ನಾಲ್ವರ ಸ್ಥಿತಿ ಗಂಭೀರವಾಗಿರುವ ಘಟನೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಹೊನ್ನೇಬಾಗಿ ಗ್ರಾಮದ ಸಮೀಪ ನಡೆದಿದೆ.‌ ನಯಾಜ್ ಖಾನ್ ಕಾರು ಅಪಘಾತದಲ್ಲಿ ಮೃತ ಚಾಲಕ ಎಂದು ತಿಳಿದುಬಂದಿದೆ. Lಚನ್ನಗಿರಿ ತಾಲೂಕಿನ ನಲ್ಲೂರಿನಿಂದ ಅಡಿಕೆ ವ್ಯಾಪರಕ್ಕೆಂದು ತೆರಳುತ್ತಿದ್ದ ಒಂದು ಕಾರಿಗೆ ಪಾಂಡೋಮಟ್ಟಿ ಕಡೆಯಿಂದ ಚನ್ನಗಿರಿಗೆ ಬರುತ್ತಿದ್ದ ಮತ್ತೊಂದು ಕಾರಿನ ನಡುವೆ ಮುಖಾಮುಖಿ ಡಿಕ್ಕಿಯಾಗಿವೆ. ಅಪಘಾತದ ರಭಸಕ್ಕೆ ಕಾರೊಂದು ಎರಡು ತುಂಡಾಗಿದೆ. ಗಂಭೀರವಾಗಿ ಗಾಯಗೊಂಡವರನ್ನು ಶಿವಮೊಗ್ಗ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.‌ ಚನ್ನಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಘಟನಾ ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

Read More

ಬೆಂಗಳೂರು : ಕಳೆದ ವಾರವಷ್ಟೇ ಬೆಂಗಳೂರಿನ ತಲಕಟ್ಟಪುರದಲ್ಲಿ ಜಲಮಂಡಳಿ ಇಲಾಖೆ ಅಧಿಕಾರಿಗಳ ನಿರ್ಲಕ್ಷಕ್ಕೆ 9ನೇ ತರಗತಿ ವಿದ್ಯಾರ್ಥಿ ಸಂಪ್ ಗೆ ಬಿದ್ದು ಸಾವನ್ನಪ್ಪಿದ್ದ. ಈ ಘಟನೆ ಮಾಸುವ ಮುನ್ನವೇ ಬೆಂಗಳೂರಲ್ಲಿ ಘೋರ ದುರಂತವೊಂದು ತಪ್ಪಿದ್ದು, GBA ನಿರ್ಲಕ್ಷಕ್ಕೆ ವಿದ್ಯಾರ್ಥಿಯೊಬ್ಬ ಚರಂಡಿಗೆ ಬಿದ್ದಿದ್ದಾನೆ. ತಕ್ಷಣ ಸಾರ್ವಜನಿಕರು ಆತನನ್ನು ಮೇಲಕ್ಕೆ ಎತ್ತಿ ರಕ್ಷಿಸಿದ್ದಾರೆ. ಬೆಂಗಳೂರಿನ ಸರ್ವಜ್ಞ ನಗರದ ಗೋವಿಂದಾಪುರದಲ್ಲಿ ಈ ಘಟನೆ ನಡೆದಿದೆ. ಶಾಲೆಯ ಎದುರು GBA ಚರಂಡಿ ಕಾಮಗಾರಿ ನಡೆಸುತ್ತಿತ್ತು. ಆದರೆ ಚರಂಡಿ ಓಪನ್ ಇದ್ರೂ ಮುಂಜಾಗ್ರತೆ ಕ್ರಮ ಕೈಗೊಂಡಿಲ್ಲ. ಚರಂಡಿಗೆ 1ನೇ ತರಗತಿ ವಿದ್ಯಾರ್ಥಿ ಬಿದ್ದಿದ್ದಾನೆ. ಸ್ಲ್ಯಾಬ್ ಓಪನ್ ಇದ್ದ ಕಾರಣ ಬಾಲಕ ಬಿದ್ದಿದ್ದಾನೆ. ಕೂಡಲೇ ಸ್ಥಳೀಯರು ಆತನನ್ನು ಮೇಲಕ್ಕೆ ಎತ್ತಿದ್ದಾರೆ.

Read More