Subscribe to Updates
Get the latest creative news from FooBar about art, design and business.
Author: kannadanewsnow05
ಉತ್ತರಕನ್ನಡ : ಬಿಜೆಪಿ ನಾಯಕರನ್ನು ಹೊಗಳಿ ರಾಜ್ಯ ಸರ್ಕಾರದ ಗ್ಯಾರಂಟಿಗಳ ಬಗ್ಗೆ ಕಾಂಗ್ರೆಸ್ ಶಾಸಕ ಆರ್ ವಿ ದೇಶಪಾಂಡೆ ವ್ಯಂಗ್ಯವಾಡಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯಲ್ಲಿ ಶಾಸಕ ಆರ್ ವಿ ದೇಶಪಾಂಡೆ ಹೇಳಿಕೆ ನೀಡಿದ್ದು ಕೇಂದ್ರ ಸಚಿವ ವಿ ಸೋಮಣ್ಣ ಅವರನ್ನು ಹೊಗಳಿದ್ದಾರೆ. ವಿ ಸೋಮಣ್ಣ ಅವರು ಪ್ರಮಾಣಿಕವಾಗಿ ಕೆಲಸ ಮಾಡುತ್ತಿದ್ದಾರೆ. ಅವರ ಪ್ರಯಾಣದ ಫಲವಾಗಿ ರೈಲು ಸೇವೆ ಪೂನ ಆರಂಭವಾಗಿದೆ. ದಾಂಡೇಲಿ ಮತ್ತು ಅಳ್ಳಾವರ ರೈಲು ಸಂಚಾರ ಪುನರಾರಂಭ ಆಗಿದೆ. ವಿ ಸೋಮಣ್ಣ ಅವರು ಮತ್ತಷ್ಟು ಎತ್ತರಕ್ಕೆ ಬೆಳೆಯಬೇಕು ಎಂದು ಹಾರೈಸುತ್ತೇನೆ ಎಂದು ತಿಳಿಸಿದರು. ಸಿದ್ದರಾಮಯ್ಯ ಮಹಿಳೆಯರಿಗೆ ಬಸ್ ಫ್ರೀ ಮಾಡಿದ್ದಾರೆ ಯಾವ ಭಾಷೆ ನೋಡಿದರೂ ಫುಲ್ ಆಗಿರುತ್ತವೆ ಗಂಡು ಮಕ್ಕಳಿಗೆ 10ವುದಕ್ಕೂ ಸಹ ಆಗಲ್ಲ ಬಸ್ನಲ್ಲಿ ಯಾರಿಗಾದರೂ ಹಣ ಬೀಳುತ್ತದೆ ಬಸ್ನಲ್ಲಿ ಗಂಡು ಮಕ್ಕಳು ನೋಡಿಕೊಂಡು ಓಡಾಡಬೇಕಿದೆ ಸಿದ್ದರಾಮಯ್ಯ ಮಾಡಿದ್ದು ಒಂದೆರಡು ಅಲ್ಲ ಎಂದು ಆರ್ ವಿ ದೇಶಪಾಂಡೆ ಗ್ಯಾರಂಟಿ ಕುರಿತು ವ್ಯಂಗ್ಯವಾಡಿದ್ದಾರೆ.
ಬೆಂಗಳೂರು : ಮೆಟ್ರೋ ದರ ಹೆಚ್ಚಳ ಆಗಲ್ಲ ಎಂದು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಏನು ಹೇಳಿಕೆ ನೀಡಿದ್ದರೊ, ಈ ಕುರಿತು ಬಿಎಂಆರ್‌ಸಿಎಲ್ ಹಿರಿಯ ಅಧಿಕಾರಿಗಳು ಪ್ರತಿಕ್ರಿಯೆ ನೀಡಿದ್ದು, ನಮಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಯಾವುದೇ ಮಾಹಿತಿ ಬಂದಿಲ್ಲ ಎಂದು ತಿಳಿಸಿದ್ದಾರೆ. ಈ ವಿಚಾರವಾಗಿ ಮಾಧ್ಯಮಗಳೊಂದಿಗೆ ಮಾತನಾಡಿದ ‘BMRCL’ ಹಿರಿಯ ಅಧಿಕಾರಿಗಳು ನಮಗೆ ಮಾಹಿತಿ ಬಂದಮೇಲೆ ಏನು ಮಾಡಬೇಕು ಎಂದು ತೀರ್ಮಾನ ಮಾಡುತ್ತೇವೆ. ಅಲ್ಲಿಯವರೆಗೂ ನಮ್ಮ ಆದೇಶದಲ್ಲಿ ಯಾವುದೇ ಬದಲಾವಣೆ ಇಲ್ಲ. ಮಾಹಿತಿ ಬಂದ ನಂತರ ಬಳಿಕವಷ್ಟೇ ಟಿಕೇಟ್ ದರ ಇಳಿಕೆ ಬಗ್ಗೆ ತೀರ್ಮಾನಿಸುತ್ತೇವೆ ಎಂದು ಬಿಎಂಆರ್‌ಸಿಎಲ್ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಬೆಂಗಳೂರು : ನಮ್ಮ ಮೆಟ್ರೋ ಪ್ರಯಾಣಿಕರಿಗೆ ಇದೀಗ ಗುಡ್ ನ್ಯೂಸ್ ಸಿಕ್ಕಿದ್ದು ಮೆಟ್ರೋ ಪ್ರಯಾಣದ ದರ ಹೆಚ್ಚಳ ಇಲ್ಲ ಎಂದು ಹೇಳಲಾಗುತ್ತಿದೆ ಈ ಕುರಿತು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ತಮ್ಮ ಎಕ್ಸ್ ನಲ್ಲಿ ಪೋಸ್ಟ್ ಮಾಡಿ ಮಾಹಿತಿ ಹಂಚಿಕೊಂಡಿದ್ದಾರೆ.ಈ ವಿಚಾರವಾಗಿ ಬಿಎಂಆರ್‌ಸಿಎಲ್ ಇಂದ ಅಧಿಕೃತ ಮಾಹಿತಿ ಬರಬೇಕಷ್ಟೇ. ಕೇಂದ್ರ ಗೃಹ ವ್ಯವಹಾರಗಳ ಸಚಿವ ಮನೋಹರ್ ಕಟ್ಟರ್ ಅವರೊಂದಿಗೆ ದೂರವಾಣಿ ಸಂಭಾಷಣೆ ನಡೆಸಿದ್ದೇನೆ, ಸೋಮವಾರದಿಂದ ಪ್ರಾರಂಭಿಸಲು ಪ್ರಸ್ತಾಪಿಸಲಾದ ರಾಜ್ಯ ಸರ್ಕಾರದ ಅನ್ಯಾಯದ ಬೆಂಗಳೂರು ಮೆಟ್ರೋ ದರ ಏರಿಕೆಯ ವಿರುದ್ಧ ತಕ್ಷಣದ ಮಧ್ಯಪ್ರವೇಶವನ್ನು ಕೋರಿದ್ದೇನೆ. ಬೆಂಗಳೂರಿನಲ್ಲಿ ಈಗಾಗಲೇ ಭಾರತದಲ್ಲಿ ಅತ್ಯಂತ ದುಬಾರಿ ಮೆಟ್ರೋ ದರಗಳಿವೆ ಎಂದು ನಾನು ಗಮನಸೆಳೆದಿದ್ದೇನೆ. ಈ ಹೆಚ್ಚಳವು ಲಕ್ಷಾಂತರ ನಾಗರಿಕರಿಗೆ ಸಾರ್ವಜನಿಕ ಸಾರಿಗೆಯನ್ನು ತಲುಪಲು ಕಷ್ಟವಾಗುತ್ತದೆ ಮತ್ತು ಅದರ ಉದ್ದೇಶವನ್ನು ವಿಫಲಗೊಳಿಸುತ್ತದೆ. ಪ್ರಸ್ತಾವಿತ ಹೆಚ್ಚಳವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವಂತೆ ಅವರು ಸೂಚನೆ ನೀಡಿದ್ದಾರೆ. ಇದು ಸೋಮವಾರದಿಂದ ಜಾರಿಗೆ ಬರುವುದಿಲ್ಲ. FFC ಯಲ್ಲಿನ ವೈಪರೀತ್ಯಗಳ ವೈಯಕ್ತಿಕ ಪರಿಶೀಲನೆಯನ್ನು ಸಹ ಅವರು ಭರವಸೆ…
ಬೆಂಗಳೂರು : ರಾಜ್ಯದಲ್ಲಿ ಆತ್ಮಹತ್ಯೆ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದು ಇದೀಗ ಆರೋಗ್ಯ ಇಲಾಖೆಯಿಂದ ಸ್ಫೋಟಕ ಸಂಗತಿ ಹೊರಬಿದ್ದಿದೆ. ವರ್ಷದಲ್ಲಿ 1 ಲಕ್ಷಕ್ಕೂ ಹೆಚ್ಚು ಜನರಿಗೆ ಆತ್ಮಹತ್ಯೆ ಆಲೋಚನೆ ಬರುತ್ತಿವೆ. ಉದ್ಯಮಿ ಸಿ ಜೆ ರಾಯ್ ಆತ್ಮಹತ್ಯೆ ಬೆನ್ನಲ್ಲೇ ಇದೀಗ ಆರೋಗ್ಯ ಇಲಾಖೆ ಸ್ಫೋಟಕ ಮಾಹಿತಿ ಬಹಿರಂಗಗೊಳಿಸಿದೆ. ಈ ಕುರಿತು ಡಾಕ್ಟರ್ ಗುರುರಾಜ ಹೆಗಡೆ ಮಾಹಿತಿ ನೀಡಿದ್ದು , ಬೆಂಗಳೂರಿನಲ್ಲಿ ಹೆಚ್ಚುತ್ತಿದೆ ಹಿಡನ್ ಡಿಪ್ರೆಶನ್ ಪ್ರಕರಣ. ನೀವು ನಿಮಾನ್ಸ್ ನ ಟೆಲಿ ಮಾನಸ್ ವೆ ಜನರು ಸುಮಾರು 2 ಲಕ್ಷ 3 ಸಾವಿರಕ್ಕೂ ಹೆಚ್ಚು ಜನರು ಕರೆ ಮಾಡಿದ್ದಾರೆ. ತಮ್ಮ ಸಮಸ್ಯೆಗಳನ್ನು ಮನೋರೋಗಿಗಳು ಹೇಳಿಕೊಳ್ಳುತ್ತಿದ್ದಾರೆ. ಶೇಕಡಾ 49.86 ಪುರುಷರು ಶೇಕಡ 45.45 ಮಹಿಳೆಯರಲ್ಲಿ ಮಾನಸಿಕ ಒತ್ತಡ ಹೆಚ್ಚಾಗುತ್ತಿದೆ. ಒಂದು ಕಡೆ ಉದ್ಯಮದಲ್ಲಿ ನಷ್ಟ, ಒತ್ತಡ, ಕೌಟುಂಬಿಕ ಚಿಂತೆ, ಕೆಲಸ ಮಾಡುವ ಸ್ಥಳದಲ್ಲಿ ಒತ್ತಡ ಹೀಗೆ ಹತ್ತು ಹಲವು ಸಮಸ್ಯೆಗಳಿಂದ ಹಿಡನ್ ಡಿಪ್ರೆಶನ್ ನಿಂದ ಪುರುಷ ಮತ್ತು ಮಹಿಳೆಯರು ಬಳಲುತ್ತಿದ್ದಾರೆ. ತಮಗೆ ಅರಿವಿಲ್ಲದಂತೆ ಖಿನ್ನತೆಗೆ…
ಬೆಂಗಳೂರು : ಬೆಂಗಳೂರಿನಲ್ಲಿ ಬೆಚ್ಚಿ ಬೆಳಿಸುವಂತಹ ಘಟನೆ ನಡೆದಿದ್ದು ಪ್ರಿಯಕರನೀಗಾಗಿ ಗಂಡನನ್ನು ಜೈಲಿಗೆ ಕಳುಹಿಸಲು ಪತ್ನಿ ಒಬ್ಬಳು ಬಾರಿ ಸ್ಕೆಚ್ ಹಾಕಿದ್ದಾಳೆ. ಪತಿಯನ್ನು ಕೊಲೆಗಾರನನ್ನಾಗಿ ಮಾಡಲು ಪತ್ನಿ ಪ್ಲಾನ್ ಮಾಡಿದ್ದಳು. ಅದರಂತೆ ಹೆಂಡತಿಯ ಖತರ್ನಾಕ್ ಪ್ಲಾನ್ ಇಂದ ಜೈಲು ಪಾಲದ ಪತಿ. ಆನೇಕಲ್ ನಲ್ಲಿ ಅಣ್ಣನ ಕೊಂದು ಆಂಥೋನಿ ಎಂಬಾತ ಜೈಲು ಪಾಲಾಗಿದ್ದಾನೆ. ಪ್ರಿಯಕರಣಿಗಾಗಿ ಗಂಡನನ್ನು ಪತ್ನಿ ಜೈಲಿಗೆ ಕಳುಹಿಸಿದ್ದಾಳ ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನಲ್ಲಿ ಈ ಒಂದು ಘಟನೆ ನಡೆದಿದ್ದು, ಅಣ್ಣನನ್ನೇ ಕೊಂದು ತಮ್ಮ ಆಂಥೋನಿ ಜೈಲು ಸೇರಿದ್ದಾನೆ. ಆಂತೋನಿ ಪತ್ನಿ ರೋಜಿಗೆ ರಾಜೇಶ್ ಎಂಬಾತನ ಜೊತೆ ಲವ್ ಆಗಿದ್ದು ಪ್ರಿಯಕರನ ಜೊತೆಗೆ ಇರಲು ಗಂಡ ಆಂಥೋನಿ ಅಡ್ಡಿಯಾಗಿದ್ದ. ಕುಡಿತದ ನೆಪ ಒಡ್ಡಿ ಪತಿಯನ್ನು ರಿಹಾಬ್ ಸೆಂಟರ್ಗೆ ಪತ್ನಿ ದಾಖಲು ಮಾಡಿದ್ದಳು. 18 ತಿಂಗಳು ಬಳಿಕ ಪತಿ ಆಂಥೋನಿ ವಾಪಸ್ ಆಗಿದ್ದ. ಆತನ ಜೊತೆ ಜೀವನ ನಡೆಸಲು ಶರತ್ತು ಹಾಕಿದ್ದಳು. ತಾಯಿ ಅಣ್ಣ ತಮ್ಮ ಕೊಲ್ಲುವಂತೆ ಒತ್ತಡ ಹಾಕಿದ್ದಳು.…
ಚಿಕ್ಕಬಳ್ಳಾಪುರ : ಚಿಕ್ಕಬಳ್ಳಾಪುರದ ಖಾಸಗಿ ಶಾಲೆಯಲ್ಲಿ ಶಿಕ್ಷಕರಿಂದಲೇ ವಿದ್ಯಾರ್ಥಿಗೆ ಥಳಿಸಿರುವ ಘಟನೆ ವರದಿಯಾಗಿದ್ದು, ಈ ಹಿನ್ನೆಲೆ ಮಕ್ಕಳ ರಕ್ಷಣಾ ಆಯೋಗ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿದೆ. ಶಾಲೆಗೆ ಭೇಟಿ ನೀಡಿ 5 ದಿನಗಳಲ್ಲಿ ವರದಿ ನೀಡುವಂತೆ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗೆ ಮಕ್ಕಳ ರಕ್ಷಣಾ ಆಯೋಗ ಸೂಚನೆ ನೀಡಿದೆ. ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರಿನ ವಿದ್ಯಾನಿಧಿ ಖಾಸಗಿ ಶಾಲೆಯಲ್ಲಿ ಈ ಒಂದು ಘಟನೆ ನಡೆದಿತ್ತು. 8ನೇ ತರಗತಿ ವಿದ್ಯಾರ್ಥಿ ಸುಶಾಂತ್ ಗೆ ಶಿಕ್ಷಕರು ಥಳಿಸಿರುವ ಆರೋಪ ಕೇಳಿ ಬಂದಿದೆ. ಶಾಲೆಯ ಆಡಳಿತ ಮಂಡಳಿಯ ವಿರುದ್ಧ ಪೋಷಕರು ಇದೀಗ ಅಕ್ರೋಶ ಹೊರಹಾಕಿದ್ದಾರೆ.
ಕೊಡಗು : ಇತ್ತೀಚಿಗೆ ಐಟಿ ಅಧಿಕಾರಿಗಳ ದಾಳಿಯ ಭೀತಿ ಹಾಗು ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಕಾನ್ಫಿಡೆಂಟ್ ಚೇರ್ಮನ್ ಖ್ಯಾತ ಉದ್ಯಮಿ ಸಿಜೆ ರಾಯ್ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದರು. ಇದೀಗ ಕರ್ನಾಟಕದಲ್ಲಿ ಮತ್ತೊಬ್ಬ ಉದ್ಯಮಿ ತನ್ನ ಕುಟುಂಬದ ಜೊತೆಗೆ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕೊಡಗಿನಲ್ಲಿ ನಡೆದಿದೆ. ಸಜೀರ್ ಎನ್ನುವ ವ್ಯಕ್ತಿ ಕಾರಿನಲ್ಲಿ ತನ್ನ ಕುಟುಂಬದ ಜೊತೆಗೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಆದರೆ ಘಟನೆಯಲ್ಲಿ ಸಜೀರ್ ಸಾವನ್ನಪ್ಪಿದ್ದು, ಸಜೀರ್ ಪತ್ನಿ ಹಾಗೂ ಅವರ ಇಬ್ಬರು ಮಕ್ಕಳನ್ನು ಸ್ಥಳೀಯರು ಕಾಪಾಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ಕೊಡಗು ಮೂಲದ ಉದ್ಯಮಿ ಸಜೀರ್, ಕೇರಳದ ವಯನಾಡ್ ನಿವಾಸಿ ಬಾಪು ಎಂಬುವವರಿಗೆ ಸುಮಾರು 20 ಲಕ್ಷ ರೂಪಾಯಿ ಸಾಲ ನೀಡಿದ್ದರು ಎನ್ನಲಾಗಿದೆ. ಆದರೆ, ಸಾಲ ಪಡೆದಿದ್ದ ಬಾಪು ಹಣವನ್ನು ವಾಪಸ್ ನೀಡದೆ ಸಜೀರ್ ಅವರಿಗೆ ಹಲವು ತಿಂಗಳಿನಿಂದ ಸತಾಯಿಸುತ್ತಿದ್ದ ಎನ್ನಲಾಗಿದೆ. ಇದರಿಂದ ಕಂಗಾಲಾಗಿದ್ದ ಸಜೀರ್, ಹಣ ವಾಪಸ್ ಪಡೆಯಲು ಅಂತಿಮ ಪ್ರಯತ್ನವಾಗಿ ಕುಟುಂಬ…
ಬೆಂಗಳೂರು : ಸಾಮಾನ್ಯವಾಗಿ ದುಡ್ಡು ಬಂಗಾರ ಬೆಳ್ಳಿ ಅಥವಾ ಯಾವುದೇ ಬೆಲೆ ಬಾಳುವ ವಸ್ತು ಕಳೆದುಕೊಂಡರೆ ದೂರು ನೀಡುವುದನ್ನು ಕೇಳಿದ್ದೇವೆ ಆದರೆ ಬೆಂಗಳೂರಿನಲ್ಲಿ ವಿಚಿತ್ರ ಘಟನೆ ಒಂದು ನಡೆದಿದ್ದು, ಗರ್ಭಿಣಿ ಬೆಕ್ಕನ್ನು ಕಿಡ್ನಾಪ್ ಮಾಡಿದ್ದಾರೆ ಎಂದು ವ್ಯಕ್ತಿ ಒಬ್ಬರು ದೂರು ನೀಡಿದ ಹಿನ್ನೆಲೆಯಲ್ಲಿ 9 ಜನರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಹೌದು ಗರ್ಭಿಣಿ ಬೆಕ್ಕು ಕಿಡ್ನಾಪ್ ಮಾಡಿದ್ದಾರೆ ಎಂದು ದೂರು ದಾಖಲಾಗಿದೆ. ಬೆಂಗಳೂರಿನಲ್ಲಿ 9 ಜನರ ವಿರುದ್ಧ ಇದೀಗ ಎಫ್ಐಆರ್ ದಾಖಲಾಗಿದೆ. ಬೆಂಗಳೂರಿನ ಎಚ್ಎಎಲ್ ಪೊಲೀಸ್ ಠಾಣೆಯಲ್ಲಿ 9 ಜನರ ವಿರುದ್ಧ fir ದಾಖಲಾಗಿದೆ. ವ್ಯಾನ್ಶಿ ಸಾಲೆಟರ್ ಅಪಾರ್ಟ್ಮೆಂಟ್ನಲ್ಲಿದ್ದ ಬೆಕ್ಕನ್ನು ಕಿಡ್ನಾಪ್ ಮಾಡಿದ್ದಾರೆ. ಅಪಾರ್ಟ್ಮೆಂಟ್ ಸಿಬ್ಬಂದಿ ಸ್ಥಳಾಂತರ ಮಾಡಿದ್ದಾರೆ ಎಂದು ಹರೀಶ್ ದೂರು ನೀಡಿದ್ದಾರೆ. ಅಪಾರ್ಟ್ಮೆಂಟ್ ಅಧ್ಯಕ್ಷ ಶ್ರೀ ರಾಮ್ ಸೆಕ್ಯೂರಿಟಿ ಮ್ಯಾನೇಜರ್ ಸೇರಿದಂತೆ ಒಟ್ಟು ಒಂಬತ್ತು ಜನರ ವಿರುದ್ಧ ಎಚ್ಎಎಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ಪೊಲೀಸರು fir ದಾಖಲಿಸಿಕೊಂಡಿದ್ದಾರೆ.
ಁಅವಿನಾಶ್ ಆರ್ ಭೀಮಸಂದ್ರ ಬೆಂಗಳೂರು: ಕರ್ನಾಟಕ ಮೂಲದ ಒಂದೇ ಕುಟುಂಬದ ನಾಲ್ವರು ಬಿಹಾರದಲ್ಲಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಪುತ್ರನಿಗೆ ಆನ್‌ಲೈನ್ ಗೇಮ್ ಆತ್ಮಹತ್ಯೆಗೆ ಕಾರಣ ಎನ್ನಲಾಗಿದೆ. ಮೃತರನ್ನು ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನವರು ಎನ್ನಲಾಗಿದೆ. ಗುಬ್ಬಿಯಿಂದ ಅವರು ಕೆಲ ದಿನಗಳ ಹಿಂದೆ ಬೆಂಗಳೂರಿನ ಸೋಲದೇವನಹಳ್ಳಿಯಲ್ಲಿ ವಾಸ ಮಾಡುತ್ತಿದ್ದಾರೆ. ಇಡೀ ಕುಟುಂಬ ನೇಪಾಳ ಹಾಗು ಬಿಹಾರಕ್ಕೆ ಪ್ರವಾಸಕ್ಕೆ ಹೋದ ಸಮಯದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಘಟನೆ ಬಿಹಾರದ ನಳಂದ ಜಿಲ್ಲೆಯ ಧರ್ಮಶಾಲೆ ರೂಮ್ ಬುಕ್ ಮಾಡಿದ್ದರು ಎನ್ನಲಾಗಿದೆ. ಸದ್ಯ ಘಟನೆ ಬಗ್ಗೆ ಸ್ಥಳೀಯ ಬಿಹಾರದ ಪೊಲೀಸರು ಮೃತರ ಸಂಬಂಧಿಕರಿಗೆ ಮಾಹಿತಿಯನ್ನು ನೀಡಿದ್ದಾರೆ ಎನ್ನಲಾಗಿದೆ. ಮೃತರನ್ನು ಜಿ.ಆರ್. ಸುಮಂಗಲಾ (78 ) ಮಗ ಜಿ.ಆರ್. ನಾಗಪ್ರಸಾದ್, (50) ಸಹೋದರಿಯರಾದ ಜಿ.ಆರ್. ಶಿಲ್ಪಾ (48) –.ಆರ್. ಶ್ರುತಾ (43) ಎಂದು ಗುರುತಿಸಲಾಗಿದೆ. ಮೃತರನ್ನು ಜಿ.ಆರ್. ಸುಮಂಗಲ (78), ಅವರ ಪುತ್ರಿಯರಾದ ಶಿಲ್ಪಾ ಜಿ.ಆರ್. (48) ಮತ್ತು ಶ್ರುತಾ ಜಿ.ಬಿ. (43) ಮತ್ತು ಪುತ್ರ ಜಿ.ಆರ್. ನಾಗ…
ಹಾವೇರಿ : ಕಳೆದ ಡಿಸೆಂಬರ್ ನಲ್ಲಿ ಕರ್ನಾಟಕ ಗೋವಾ ಗಡಿ ಭಾಗದ ಚೋರ್ಲ ಘಾಟ್ ಸಮೀಪ 400 ಕೋಟಿ ರೂಪಾಯಿ ಇದ್ದ ಕಂಟೇನರ್ ನನ್ನ ಕಳ್ಳರು ದರೋಡೆ ಮಾಡಿದ್ದಾರೆ. ಈ ಪ್ರಕರಣದ ತನಿಖೆ ನಡೆಯುತ್ತಿರುವಾಗಲೇ ಕಳ್ಳರು ಹಾವೇರಿಯಲ್ಲಿ ಚಲಿಸುತ್ತಿದ್ದ ಲಾರಿಯಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಮೊಬೈಲ್ ಕಳ್ಳತನ ಮಾಡಿದ್ದಾರೆ. ಹೌದು ರಾಷ್ಟ್ರೀಯ ಹೆದ್ದಾರಿ 48 ರಲ್ಲಿ ಸಿನಿಮೀಯ ರೀತಿಯಲ್ಲಿ ಕಳ್ಳತನ ನಡೆದಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಗಳಲ್ಲಿ ಬಹುಮೌಲ್ಯದ ವಸ್ತು ಸಾಗಿಸುವ ವಾಹನಗಳನ್ನೇ ಟಾರ್ಗೆಟ್ ಮಾಡುತ್ತಿರುವ ಖದೀಮರು, ವಾಹನ ಚಲಿಸುತ್ತಿದ್ದಂತೆಯೇ ಕಳ್ಳತನ ಮಾಡಿ ತಮ್ಮ ಕೈಚಳಕ ತೋರಿಸಿದ್ದಾರೆ. ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ಕಾಕೋಳ ಮತ್ತು ಮೊಟೇಬೆನ್ನೂರು ಮಧ್ಯದಲ್ಲಿ ಈ ಕಳ್ಳತನ ನಡೆದಿದೆ. ಕಳೆದ ಶನಿವಾರ ರಾತ್ರಿ ಈ ಘಟನೆ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿನ ಬಂದಿದೆ. ಇ-ಕಾಮರ್ಸ್ ಕಂಪನಿಯೊಂದಕ್ಕೆ ಸೇರಿದ ಮೊಬೈಲ್ ಸೇರಿದಂತೆ ವಿವಿಧ ವಸ್ತುಗಳು ಬೆಂಗಳೂರಿನಿಂದ ಧಾರವಾಡದ ಕೊಟೂರು ಗ್ರಾಮದ ವೇರಹೌಸ್ಗೆ ಹೋಗುತ್ತಿದ್ದ ವೇಳೆ ಕಳ್ಳತನವಾಗಿದೆ. ಗೂಡ್ಸ್ ಲಾರಿ KA-22…














