Subscribe to Updates
Get the latest creative news from FooBar about art, design and business.
Author: kannadanewsnow05
ಬಾಗಲಕೋಟೆ : ಕರ್ತವಲೋಪ ಆರೋಪದ ಅಡಿ ಬಾಗಲಕೋಟೆ ಜಿಲ್ಲೆಯ ಬನಹಟ್ಟಿ ಠಾಣೆಯ ಸಿಪಿಐ ಎಚ್ಆರ್ ಪಾಟೀಲ್ ರನ್ನು ಸಸ್ಪೆಟ್ ಮಾಡಲಾಗಿದೆ. ಬೆಳಗಾವಿ ಉತ್ತರ ವಲಯ ಐಜಿಪಿ ಡಾ.ಚೇತನ ಸಿಂಗ್ ರಾಥೋಡ್ ಆದೇಶ ಹೊರಡಿಸಿದ್ದು ಯಾವುದೇ ಕಾರಣ ಉಲ್ಲೇಖಿಸದೆ ಬನಹಟ್ಟಿ ಠಾಣೆ ಸಿಪಿಐ ಸಸ್ಪೆಂಡ್ ಮಾಡಿ ಆದೇಶ ಹೊರಡಿಸಿದ್ದಾರೆ. ಬಳಿಕ ಕರ್ತವಲೋಪ ಆರೋಪದ ಅಡಿ ಅಮಾನತುಗೊಳಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಬನಹಟ್ಟಿ ವೃತ್ತದ ಸಿಪಿಐ ಪ್ರಭಾರ ಹುದ್ದೆಯನ್ನ ಮುಧೋಳ ಸಿಪಿಐಗೆ ವಹಿಸಿ ಆದೇಶಿಸಿದ್ದಾರೆ.
ಬೆಂಗಳೂರು : ನಾವು ಇನ್ನೂ 5,000 ಕಾರ್ಯಕ್ರಮಗಳನ್ನು ಮಾಡುತ್ತೇವೆ ದ್ವೇಷ ಭಾಷಣಗಳನ್ನು ಮಾಡುತ್ತೇವೆ. ಈ 5000 ದ್ವೇಷ ಭಾಷಣಗಳು ರಾಜ್ಯದಲ್ಲಿ ಆಳುವ ಅರಸರಿಗೆ ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ ಎಲ್ ಸಂತೋಷ್ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ರಾಷ್ಟ್ರೀಯ ಸ್ವಯಂಸೇವಾ ಸಂಘದ ಶತಮಾನೋತ್ಸವ ಹಿನ್ನೆಲೆಯಲ್ಲಿ ಬೆಂಗಳೂರಿನ ಗೋವಿಂದರಾಜ ನಗರದಲ್ಲಿ ಹಿಂದೂ ಸಮಾಜೋತ್ಸವ ಕಾರ್ಯಕ್ರಮ ನಡೆದಿದ್ದು, ಸಮಾಜೋತ್ಸವ ಕಾರ್ಯಕ್ರಮದಲ್ಲಿ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಭಾಷಣ ಮಾಡಿದರು. ದೇಶಕ್ಕಾಗಿ ಬದುಕುವುದು ಕ್ಷಣಿಕವಾದ ಸಂಗತಿ ಅಲ್ಲ. ಆರ್ ಎಸ್ ಎಸ್ ತನಗೋಸ್ಕರ ಏನನ್ನು ಮಾಡಿಕೊಳ್ಳುವುದಿಲ್ಲ. ಹೊಗಳಿಕೆಗೋಸ್ಕರ ಆರ್‌ಎಸ್‌ಎಸ್ ಏನು ಮಾಡಿಕೊಳ್ಳುವುದಿಲ್ಲ. ಇಂದಿನ ಕಾರ್ಯಕ್ರಮಕ್ಕೆ ಮೈದಾನ ಪಡೆಯಲು ಓಡಾಡಿಸಿದರು ಹಿಂದೂ ಸಮಾಜ ಎದ್ದಿದೆ ತನ್ನ ಕಾಲುಗಳ ಮೇಲೆ ಎದ್ದು ನಿಂತಿದೆ ನೀವು ಮೈದಾನ ಕೊಡದಿದ್ದರೆ ರಸ್ತೆಗಳನ್ನೇ ಮೈದಾನ ಮಾಡುತ್ತೇವೆ. ನಾವು ಇನ್ನು 5000 ಕಾರ್ಯಕ್ರಮಗಳನ್ನು ಮಾಡುತ್ತೇವೆ. ನಾವು ದ್ವೇಷ ಭಾಷಣಗಳನ್ನು ಮಾಡುತ್ತೇವೆ ಕರ್ನಾಟಕವನ್ನು ಆಳುವ ಅರಸರಿಗೆ…
ಬೀದರ್ : ಶಿವರಾತ್ರಿ ಚಂದಾ ಹಣ ನೀಡದಿದ್ದಕ್ಕೆ ನಾಲ್ಕೈದು ಯುವಕರಿಂದ ಓರ್ವ ಯುವಕನ ಮೇಲೆ ಹಲ್ಲೆ ನಡೆಸಲಾಗಿದೆ. ಕೇಳಿದಷ್ಟು ಚಂದಾ ಕೊಡದಿದ್ದಕ್ಕೆ ನಾಲ್ಕೈದು ಯುವಕರಿಂದ ಹಲ್ಲೆ ನಡೆದಿದೆ. ಬೀದರ್ ನ ಮೈಲೂರು ಬಡಾವಣೆಯಲ್ಲಿ ಈ ಒಂದು ಚಾಕು ಇರಿದಿರುವ ಘಟನೆ ವರದಿಯಾಗಿದೆ. ಮಹೇಶ್ ಎಂಬ ಯುವಕನಿಗೆ ನಾಲ್ಕೈದು ಯುವಕರು ಚಾಕುವಿನಿಂದ ಇರಿದು ಭೀಕರವಾಗಿ ಹಲ್ಲೆ ಮಾಡಿದ್ದಾರೆ. ಶಿವರಾತ್ರಿಗೆ 10,000 ಚೆಂದಾ ಕೊಡುವಂತೆ ಯುವಕರು ಮಹೇಶನಿಗೆ ಕೇಳಿದ್ದಾರೆ. ಅಷ್ಟೊಂದು ಹಣ ಕೊಡಲ್ಲ ಅಂದಿದ್ದಕ್ಕೆ ಮಹೇಶ್ ಮೇಲೆ ಹಲ್ಲೆ ಮಾಡಿದ್ದಾರೆ. ಮಹೇಶ್ ಮೇಲೆ ವಿದ್ಯಾನಗರ ಬಡಾವಣೆ ಯುವಕರು ಹಲ್ಲೆ ಮಾಡಿದ್ದಾರೆ. ಗಾಯಾಳು ಮಹೇಶನನ್ನು ತಕ್ಷಣ ಬಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಯುವಕರು ಹಲ್ಲೆ ಮಾಡುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಘಟನೆ ಕುರಿತು ಗಾಂಧಿಗಂಜ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೋಲಾರ : ಕೋಲಾರದಲ್ಲಿ ಅಮಾನವೀಯ ಘಟನೆ ಒಂದು ನಡೆದಿದ್ದು ಏಳು ದಿನದ ನವಜಾತ ಗಂಡು ಮಗುವನ್ನು 5 ಲಕ್ಷಕ್ಕೆ ಮಾರಾಟ ಮಾಡುವಾಗ ದಂಪತಿಗಳು ಸಿಗಿಬಿದ್ದಿರುವ ಘಟನೆ ವರದಿಯಾಗಿದೆ. ನಿತು ಮತ್ತು ರಾಘವೇಂದ್ರ ಎನ್ನುವ ದಂಪತಿಗಳು ಕೋಲಾರ ಜಿಲ್ಲೆಯ ಶ್ರೀನಿವಾಸಪುರದಲ್ಲಿ ಮಧ್ಯವರ್ತಿ ನಾರಾಯಣಸ್ವಾಮಿ ಮೂಲಕ ಮಗು ಮಾರಾಟಕ್ಕೆ ತಂದೆ ರಾಘವೇಂದ್ರ ಮತ್ತು ತಾಯಿ ನೀತು ಮುಂದಾಗಿದ್ದರು. ಈಗಾಗಲೇ ದಂಪತಿಗಳಿಗೆ ಇಬ್ಬರು ಮಕ್ಕಳಿದ್ದು ಮೂರನೇ ಮಗು ಬೇಡ ಎಂದು ಮಾರಾಟಕ್ಕೆ ಮುಂದಾಗಿದ್ದಾರೆ. ಮಗು ಮಾರಾಟದ ವಿಷಯ ತಿಳಿದು ಸದ್ಯ ಪೋಲೀಸರು ದಂಪತಿಯನ್ನು ಹಾಗು ಮಧ್ಯವರ್ತಿ ನಾರಾಯಣಸ್ವಾಮಿಯನ್ನ ವಶಕ್ಕೆ ಪಡೆದುಕೊಂಡಿದ್ದಾರೆ.
ಉತ್ತರಕನ್ನಡ : ಮಧ್ಯಾಹ್ನದ ಊಟ ಸೇವಿಸಿದ 70ಕ್ಕೂ ಹೆಚ್ಚು ಶಾಲಾ ಮಕ್ಕಳು ಅಸ್ವಸ್ಥರಾಗಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡು ತಾಲೂಕಿನ ಪಂಚವಟಿಯಲ್ಲಿ ಇರುವ ಪಿಎಂಶ್ರೀ ಜವಹಾರ ನವೋದಯ ವಿದ್ಯಾಲಯದಲ್ಲಿ ನಡೆದಿದೆ. ಫೆಬ್ರುವರಿ 4ರಂದು 518 ಮಕ್ಕಳು ಮಧ್ಯಾಹ್ನದ ಬಿಸಿ ಊಟ ಸೇವಿಸಿದರು. ಈ ಪೈಕಿ 70 ಮಕ್ಕಳಿಗೆ ಜ್ವರ, ವಾಂತಿ, ಭೇದಿ ಹಾಗೂ ಹೊಟ್ಟೆ ನೋವು ಕಾಣಿಸಿಕೊಂಡಿತು. ತಕ್ಷಣ ಮಕ್ಕಳನ್ನು ಮುಂಡಗೋಡು ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಯಿತು. ಸ್ಥಳಕ್ಕೆ ಆಗಮಿಸಿ ಆರೋಗ್ಯ ಅಧಿಕಾರಿಗಳ ತಂಡ ಪರಿಶೀಲನೆ ನಡೆಸುತ್ತಿದೆ. ಅಧಿಕಾರಿಗಳು ಬೆಳಗಾವಿ ಇಲಾಖೆ ಕಳುಹಿಸಿದ್ದಾರೆ. ಇನ್ನು 8 ಶಾಲಾ ಮಕ್ಕಳಲ್ಲಿ ಜ್ವರ ಹಾಗೂ ವಾಂತಿಯ ಲಕ್ಷಣ ಕಂಡು ಬಂದಿದೆ. ಎಲ್ಲ ಮಕ್ಕಳಿಗೆ ಪರೀಕ್ಷೆ ನಡೆಸಿರುವ ಆರೋಗ್ಯ ಅಧಿಕಾರಿಗಳ ತಂಡ ಘಟನೆಗೆ ಕಾರಣ ಏನು ಎನ್ನುವುದರ ಕುರಿತು ತನಿಖೆ ನಡೆಸಲಾಗುತ್ತಿದೆ.
ಹಾಸನ : ಹಾಸನದಲ್ಲಿ ಘೋರ ದುರಂತವೊಂದು ನಡೆದಿದ್ದು, ಕೆರೆಗೆ ಈಜಲು ಹೋಗಿದ್ದ ವಿದ್ಯಾರ್ಥಿ ನೀರುಪಾಲಾದ ಘಟನೆ ಹಾಸನ ಹೊರವಲಯದ ಉದ್ದುರು ಗ್ರಾಮದಲ್ಲಿ ನಡೆದಿದೆ.ಮೃತಪಟ್ಟ ವಿದ್ಯಾರ್ಥಿಯನ್ನು ಪ್ರಜ್ವಲ್ (18) ಎಂದು ಗುರುತಿಸಲಾಗಿದೆ. ಈತ ಖಾಸಗಿ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಓದುತ್ತಿದ್ದ. ಇಂದು (ಫೆ.7) ಮಧ್ಯಾಹ್ನ ನಾಲ್ವರು ಸ್ನೇಹಿತರ ಜೊತೆ ಉದ್ದೂರು ಕೆರೆಗೆ ಈಜಲು ತೆರಳಿದ್ದ. ಐವರಲ್ಲಿ ಇಬ್ಬರು ಸ್ನೇಹಿತರು ಈಜಲು ನೀರಿಗೆ ಇಳಿದಿದ್ದರು. ಕೆರೆಯ ಆಳವಾದ ಪ್ರದೇಶಕ್ಕೆ ಈಜುತ್ತಾ ಹೋಗಿದ್ದ ಪ್ರಜ್ವಲ್ ವಾಪಾಸ್ ಬರಲು ಆಗದೇ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ.ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ರಾಯಚೂರು : ಬೆಂಗಳೂರಿನ ನಮ್ಮ ಮೆಟ್ರೋ ಪ್ರಯಾಣದರ ಸೋಮವಾರದಿಂದ ಏರಿಕೆ ಆಗಲ್ಲ ಎಂದು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಹೇಳಿಕೆ ನೀಡಿದ್ದರು. ಇದಕ್ಕೆ ಡಿಸಿಎಂ ಡಿಕೆ ಶಿವಕುಮಾರ್ ಕೌಂಟರ್ ನೀಡಿದ್ದು, ಸುಮ್ಮನೆ ಖಾಲಿ ಮಾತನಾಡುವುದು ಬೇಡ ಮೊದಲು ರಾಜ್ಯ ಸರ್ಕಾರಕ್ಕೆ, ನನಗೆ, ಕೇಂದ್ರ ಸರ್ಕಾರಕ್ಕೆ ಹಾಗು ಎಲ್ಲಾ ಸಂಸದರಿಗೆ ಪತ್ರ ಬರೆಯಿರಿ ಎಂದು ಕೌಂಟರ್ ನೀಡಿದರು. ರಾಯಚೂರಿನಲ್ಲಿ ಇದೆ ವಿಚಾರವಾಗಿ ಮಾತನಾಡಿದ ಅವರು ತೇಜಸ್ವಿ ಸೂರ್ಯ ಸುಮ್ಮನೆ ಖಾಲಿ ಮಾತನಾಡುವುದು ಬೇಡ. ಕೇಂದ್ರ ಸರ್ಕಾರಕ್ಕೆ, ರಾಜ್ಯ ಸರ್ಕಾರಕ್ಕೆ, ನನಗೆ ಹಾಗು ಎಲ್ಲಾ ಸಂಸದವರಿಗೆ ಮೊದಲು ಪತ್ರ ಬರೆಯಿರಿ ಯಾರು ಬೇಡ ಅಂತಿದ್ದಾರೆ. ನಾವು ಬೇಡ ಅಂತಿದ್ದೀವಿ ಅದು ಬೇರೆ ವಿಚಾರ. ಯಾರು ಎಂಪಿ ಒಬ್ಬರ ಹೆಸರು ಹೇಳಿಲ್ಲ ಎಲ್ಲರೂ ಸೇರಿ ಪತ್ರ ಬರೆಯಿರಿ. ಪ್ರತಿಭಟನೆಗೆ ವಿರೋಧ ಮಾಡಬಾರದು ಅನ್ನೋ ದೃಷ್ಟಿಯಿಂದ ಪ್ರಧಾನಿ ಮೋದಿ, ಕೇಂದ್ರ ಸಚಿವರಿಗೂ ಪತ್ರ ಬರೆಯಲಿ. ಆಮೇಲೆ ಆ ವಿಚಾರವಾಗಿ ಮಾತನಾಡೋಣ ಬರೀ ಮೀಡಿಯಾ ಮುಂದೆ ಮಾತನಾಡುವುದನ್ನು ಯಾರು…
ದಕ್ಷಿಣಕನ್ನಡ : ಬಿಜೆಪಿಯವರು ಎಷ್ಟೇ ತಿಪ್ಪರಲಾಗ ಹೊಡೆದ್ರೂ ಮತ್ತೆ ಸರ್ಕಾರ ತರೋದು ನಮಗೆ ಗೊತ್ತಿದೆ. ದಾನ ಧರ್ಮ ಮಾಡುವ ಕೈ ಅಧಿಕಾರಕ್ಕೆ ಬಂದ ಹಿನ್ನೆಲೆಯಲ್ಲಿ ಬಡವರಿಗೆ ಪಂಚ ಗ್ಯಾರಂಟಿಗಳನ್ನು ನೀಡಲು ಸಾಧ್ಯವಾಗಿದೆ. ಹೀಗಾಗಿ ಬಿಜೆಪಿಯವರು ಟೀಕಿಸುತ್ತಿದ್ದಾರೆ ಎಂದು ಡಿಕೆ ಶಿವಕುಮಾರ್ ತಿಳಿಸಿದರು. ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ನೂತನ ಕಾಂಗ್ರೆಸ್ ಭವನಕ್ಕೆ ಶಿಲನ್ಯಾಸ ನೆರವೇರಿಸಿ ಮಾತನಾಡಿದ ಅವರು, ನಮ್ಮ ಸರ್ಕಾರವು ಗ್ಯಾರಂಟಿ ಯೋಜನೆ ತಂದಿರುವುದು ಕೇವಲ ಕಾಂಗ್ರೆಸ್‌ಗರಿಗೆ ಮಾತ್ರ ಎಂದು ಬಿಜೆಪಿಯವರು ಅಪಪ್ರಚಾರ ಮಾಡಿದ್ದರು. ಆದರೆ ಎಲ್ಲರಿಗಾಗಿ ಈ ಯೋಜನೆ ತಂದಿದ್ದೇವೆ. ಇದನ್ನು ಬಿಜೆಪಿಯವರು ಪಡೆಯುತ್ತಿದ್ದಾರೆ. ಟೀಕೆ ಮಾಡುವವರು ಯೋಜನೆ ನಮಗೆ ಬೇಡ ಎಂದು ಬಿಟ್ಟು ಕೊಡಲಿ ಎಂದು ಸವಾಲು ಹಾಕಿದರು. ಬಿಜೆಪಿಯು ಜನರ ವೋಟು ತಡೆಯುವ ನಿಟ್ಟಿನಲ್ಲಿ ಎಸ್‌ಐಆರ್ ತರುತ್ತಿದೆ. ಈ ಮೂಲಕ ಎಸ್‌ಸಿ ಎಸ್‌ಟಿ, ಅಲ್ಪ ಸಂಖ್ಯಾತರು ಹಾಗೂ ಹಿಂದುಳಿದ ವರ್ಗಗಳ ಮತವನ್ನು ತಡೆಯುವ ಕೆಲಸ ಮಾಡಲಾಗುತ್ತಿದೆ. ಪ್ರತಿ ಬೂತ್‌ಗಳಲ್ಲಿಯೂ ಇದನ್ನು ಮಾಡಲಾಗುತ್ತಿದೆ. ಇದರ ಬಗ್ಗೆ ಬಹಳ ಜಾಗೃತೆಯಾಗಿರಬೇಕು. ಮುಖ್ಯಮಂತ್ರಿ…
ಚಿಕ್ಕಬಳ್ಳಾಪುರ : ಚಿಕ್ಕಬಳ್ಳಾಪುರದಲ್ಲಿ ಮತ್ತೊಂದು ದರೋಡೆ ನಡೆದಿದ್ದು ಮನೆಯ ಬೀಗ ಒಡೆದು ಹಣ ಮತ್ತು ಚಿನ್ನಾಭರಣವನ್ನು ದೋಚಿ ಕಳ್ಳರು ಪರಾರಿಯಾಗಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರಿನಲ್ಲಿ ನಡೆದಿದೆ. ಡಿ ಆರ್ ಎಂ ಬಡಾವಣೆಯಲ್ಲಿ ಹರೀಶ್ ಎಂಬುವರ ಮನೆಯಲ್ಲಿ ಈ ಒಂದು ಕಳ್ಳತನ ನಡೆದಿದೆ ಕುಟುಂಬದವರು ಎಲ್ಲರೂ ತಿರುಪತಿಗೆ ಹೋಗಿದ್ದಾಗ ಕಳ್ಳರು ತಮ್ಮ ಕೈಚಳಕ ತೋರಿಸಿದ್ದು 30 ಗ್ರಾಂ ಚಿನ್ನ 450 g ಬೆಳ್ಳಿ 46,000 ನಗದು ಹಣ ಕಳ್ಳತನ ಮಾಡಿದ್ದಾರೆ ಈ ಕುರಿತು ಗೌರಿಬಿದನೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಿವಮೊಗ್ಗ : ಶಿವಮೊಗ್ಗದಲ್ಲಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಾಧ್ಯಾಪಕನಿಗೆ ಥಳಿಸಲಾಗಿದೆ. ಜಿಲ್ಲೆಯ ಸಾಗರ ನಗರದಲ್ಲಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಹಿನ್ನೆಲೆಯಲ್ಲಿ ಪ್ರಾಧ್ಯಾಪಕನಿಗೆ ಥಳಿಸಿರುವ ಘಟನೆ ವರದಿಯಾಗಿದೆ. ಕೊಳಗಿಬೀಸ್ ಕಾಲೇಜಿನ ವಿದ್ಯಾರ್ಥಿ ನಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪ ಕೇಳಿ ಬಂದಿದೆ. ಕಾಲೇಜು ಪ್ರಾಧ್ಯಾಪಕ ಎಂ. ಆರ್ ಆದರ್ಶ್ ಎಂಬವನಿಗೆ ಇದೀಗ ಜನ ಥಳಿಸಿದ್ದಾರೆ. ಈ ಹಿಂದೆ ಶಿರಸಿಯಲ್ಲಿ ಕೂಡ ಇದೆ ರೀತಿ ಲೈಂಗಿಕ ಕಿರುಕುಳ ನೀಡಿ ಸಿಕ್ಕಿ ಬಿದ್ದಿದ್ದ. ಬಳಿಕ ಆದರ್ಶ ನನ್ನ ಬೇರೆ ಕಾಲೇಜಿಗೆ ವರ್ಗಾಯಿಸಲಾಗಿತ್ತು. ಇದೀಗ ಶಿವಮೊಗ್ಗದಲ್ಲೂ ಈ ರೀತಿ ಕೃತ್ಯ ಎಸಗಿದ್ದು, ಜನರು ಹಿಡಿದು ಥಳಿಸಿದ್ದಾರೆ.














