Subscribe to Updates
Get the latest creative news from FooBar about art, design and business.
Author: kannadanewsnow05
ಬೆಂಗಳೂರು : ಬೆಂಗಳೂರಿನಲ್ಲಿ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಸಂದೇಶಗಳ ಹಾವಳಿ ಮುಂದುವರೆದಿದ್ದು, ನಿನ್ನೆ ತಾನೇ ಇಟಲಿ, ಜಪಾನ್ ರಾಯಭಾರಿ ಕಚೇರಿಗೆ ಬಾಂಬ್ ಬೆದರಿಕೆ ಸಂದೇಶ ಬಂದಿತ್ತು. ಇದೀಗ ನೆದರ್‌ಲ್ಯಾಂಡ್ ರಾಯಭಾರಿ ಕಚೇರಿಗೂ ಕೂಡ ಕಿಡಿಗೇಡಿಗಳು ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಸಂದೇಶ ಕಳುಹಿಸಿದ್ದಾರೆ. ಆರ್ಟಿ ನಗರದ ಗಂಗಾನಗರದಲ್ಲಿರುವ ನೆದರ್‌ಲ್ಯಾಂಡ್ ರಾಯಭಾರಿ ಕಚೇರಿಗೆ ಜನವರಿ 29ರಂದು ಕಿಡಿಗೇಡಿಗಳು ಇ-ಮೇಲ್ ಕಳುಹಿಸಿ ‘5 RDX ಮತ್ತು ಐಇಡಿ ಬಳಸಿ ಸ್ಫೋಟ ಮಾಡುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ. ಈ ಕುರಿತು ರಾಯಭಾರಿ ಕಚೇರಿ ಅಧಿಕಾರಿ ಭಾಸ್ಕರ್ ಸುಬ್ರಹ್ಮಣಿ ಆರ್.ಟಿ.ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದಾರೆ. gaina_ramesh@outlook.com ವಿಳಾಸದಿಂದ bangalore.visa@esteri.it ಗೆ ಸಂದೇಶ ಕಳುಹಿಸಿ ‘5 RDX ಬಾಂಬ್ ಸ್ಫೋಟ ಮಾಡುತ್ತೇವೆ’ ಎಂದು ಬೆದರಿಕೆ ಹಾಕಲಾಗಿತ್ತು. ಈ ಸಂಬಂಧ ಇಟಾಲಿಯನ್ ಕಾನ್ಸುಲೇಟ್ ಭದ್ರತಾ ವ್ಯವಸ್ಥಾಪಕ ಜಿಯೋಡೊಮೆನಿಕ್ ಒ ಮಿಲಾನೋ ಹಲಸೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಸದ್ಯ ಇಟಲಿ,…
ಮೈಸೂರು : ಮೈಸೂರಿನಲ್ಲಿ ದಿನಕ್ಕೊಂದು ಡ್ರಗ್ ತಯಾರಿಕಾ ಘಟಕ ಪತ್ತೆ ಹಿನ್ನಲೆಯಲ್ಲಿ ಡ್ರಗ್ ಹಾವಳಿ ತಡೆಗಟ್ಟುವಲ್ಲಿ ಸಿಸಿಬಿ ಪೊಲೀಸರು ವಿಫಲರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಮೈಸೂರಿನ ಸಿಸಿಬಿ ಪೊಲೀಸ ವಿಂಗ್ ಗೆ ಮೇಜರ್ ಸರ್ಜರಿ ಮಾಡಲಾಗಿದ್ದು, ಒಂದೇ ಬಾರಿಗೆ ಸಿಸಿಬಿಯ ಸುಮಾರು 10 ಸಿಬ್ಬಂದಿಗಳು ವರ್ಗಾವಣೆ ಮಾಡಲಾಗಿದೆ. ವರ್ಗಾವಣೆ ಮಾಡಿ ಕಮಿಷನರ್ ಸೀಮಾ ಲಾಟ್ಕರ್ ಆದೇಶ ಹೊರಡಿಸಿದ್ದಾರೆ. ಕಮಿಷನರ್ ಸೀಮಾ ಲಾಟ್ಕರ್ ಸಿಸಿಬಿ ಇಂದ ಮೂಲ ಸ್ಥಾನಕ್ಕೆ ಸಿಬ್ಬಂದಿಗಳನ್ನು ಕಳುಹಿಸಿದ್ದಾರೆ. ಸಾಕಷ್ಟು ದಿನಗಳಿಂದ ಸಿಸಿಬಿಯಲ್ಲಿ ಪೊಲೀಸ್ ಕಾನ್ಸ್ಟೇಬಲ್ ಹಾಗು ಹೆಡ್ ಕಾನ್ಸ್ಟೇಬಲ್ ಗಳು ಕೆಲಸ ಮಾಡುತ್ತಿದ್ದರು. ಮಾರಾಟಗಾರರ ಬಗೆಗಿನ ಸುಳಿವುಗಳ ವಿಚಾರದಲ್ಲಿ ಲೋಪ ಕಂಡು ಬಂದ ಆರೋಪದ ಹಿನ್ನೆಲೆಯಲ್ಲಿ ಸಿಸಿಬಿಗೆ ಹೆಚ್ಚಿನ ಒತ್ತು ನೀಡಲು ಕಮಿಷನರ್ ಸೀಮಾ ಲಾಟ್ಕರ್ ಈ ಕ್ರಮ ಕೈಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ಉಯ್ತರಕನ್ನಡ : ಜ್ಯೋತಿಷಿ ಕಮಲಾಕರ ಭಟ್ ಮತ್ತು ಸುಚಿತ್ರ ಬಂಧನ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಿದ್ದಾಪುರ ಪೊಲೀಸರ ವೈಫಲ್ಯ ಎಂದು ಸ್ಥಳೀಯರು ಆರೋಪಿಸಿದ್ದು, ಈ ಹಿನ್ನೆಲೆಯಲ್ಲಿ ಸಿದ್ದಾಪುರ ಠಾಣೆಯ ಇಬ್ಬರು ಪೊಲೀಸ್ ಸಿಬ್ಬಂದಿಗಳನ್ನು ವರ್ಗಾವಣೆ ಮಾಡಲಾಗಿದೆ. ಎಸ್ ಪಿ ದೀಪನ್ ಅವರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಎಸ್ ಐ ಗಣಪತಿ ಭಟ್ ಮತ್ತು ಹೆಡ್ ಕಾನ್ಸ್ಟೇಬಲ್ ಆದಂತಹ ಚಂದ್ರಶೇಖರ್ ರನ್ನು ವರ್ಗಾವಣೆ ಮಾಡಲಾಗಿದೆ. ಇಬ್ಬರನ್ನು ಹಳಿಯಾಳ ಉಪ ವಿಭಾಗಕ್ಕೆ ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ.ಶಿರಸಿ ಡಿವೈಎಸ್ಪಿ ಗೀತಾ ಪಾಟೀಲ್ ನೇತೃತ್ವದಲ್ಲಿ ಪ್ರಕರಣದ ತನಿಖೆ ನಡೆಯುತ್ತಿದೆ. ತನಿಖೆಯಲ್ಲಿ ಏನಾದರೂ ಲೋಪ ಕಂಡುಬಂದರೆ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಉತ್ತರ ಕನ್ನಡ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ತಿಳಿಸಿದ್ದಾರೆ.
ಚೈನ್ನೈ : ಡ್ರಗ್ಸ್ ಹೊಂದಿದ್ದ ಆರೋಪದ ಅಡಿ ನಟಿ ಸೇರಿ 8 ಜನರನ್ನು ಇದೀಗ ಅರೆಸ್ಟ್ ಮಾಡಲಾಗಿದೆ. ಚೆನ್ನೈನಲ್ಲಿ ನಟಿ ಅಂಜುಕೃಷ್ಣ, ಸಹಾಯಕ ನಿರ್ದೇಶಕಿ ವಿನ್ಸಿ ನಿವೇತ, ಕಾರ್ತಿಕ ರಾಜ, ಯಶವಂತ ಸೇರಿದಂತೆ 8 ಜನರನ್ನು ಪೊಲೀಸರು ಇದೀಗ ಅರೆಸ್ಟ್ ಮಾಡಲಾಗಿದೆ. ಮೆಥಾಂಫೆಂಟಮೇನ್, ಗಾಂಜಾ ಮೊಬೈಲ್ ಸೇರಿದಂತೆ ಹಲವ ವಸ್ತುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಚೆನ್ನೈ ಪೊಲೀಸರು ಗುರುವಾರ ಪ್ರಮುಖ ಮಾದಕವಸ್ತು ಪತ್ತೆ ಕಾರ್ಯವನ್ನು ನಡೆಸಿದ್ದು, ತಮಿಳು ಮತ್ತು ಮಲಯಾಳಂ ನಟಿ ಅಂಜು ಕೃಷ್ಣ ಮತ್ತು ತಮಿಳು ಸಹಾಯಕ ನಿರ್ದೇಶಕಿ ವಿನ್ಸಿ ನಿವೇತಾ ಸೇರಿದಂತೆ ಎಂಟು ಜನರನ್ನು ಬಂಧಿಸಿದ್ದಾರೆ. ನೇಸಪಕ್ಕಂ ನಿವಾಸಿ ವಿಘ್ನೇಶ್ವರನ್ (33) ಬಂಧನದೊಂದಿಗೆ ತನಿಖೆ ಪ್ರಾರಂಭವಾಯಿತು. ಎಎನ್‌ಐಯು (ದಕ್ಷಿಣ) ತಂಡದ ಇನ್ಸ್‌ಪೆಕ್ಟರ್ ಜಾನಿ ಚೆಲ್ಲಪ್ಪ ಅವರಿಗೆ ದೊರೆತ ಸುಳಿವಿನ ಮೇರೆಗೆ ಬಂಧನ ನಡೆದಿದೆ. ವಿಚಾರಣೆಯ ಸಮಯದಲ್ಲಿ, ವಿಘ್ನೇಶ್ವರನ್ ಪೋರೂರು ಬಳಿಯ ಕೋವೂರಿನ ವೆಂಕಟೇಶ್ ಕುಮಾರ್ (31) ಅವರಿಂದ ಮಾದಕ ವಸ್ತುಗಳನ್ನು ಪಡೆದುಕೊಂಡಿದ್ದಾಗಿ ಬಹಿರಂಗಪಡಿಸಿದ್ದಾನೆ. ಈ ಮಾಹಿತಿಯ ಆಧಾರದ ಮೇಲೆ, ಪೊಲೀಸರು…
ಪ್ರತಿಯೊಬ್ಬರ ಜೀವನದಲ್ಲೂ ಒಂದಲ್ಲ ಒಂದು ರೂಪದಲ್ಲಿ ಸಾಲ ಬರುತ್ತದೆ. ಆ ಸಾಲದ ಹೊರೆಯಿಂದ ಹೊರಬರಲು ಸಾಕಷ್ಟು ಪ್ರಯತ್ನಿಸಿದರೂ, ಅನೇಕ ಜನರು ಸಿಲುಕಿಕೊಳ್ಳುತ್ತಾರೆ. ಸಂಪತ್ತಿನ ಅಧಿಪತಿಯಾದ ವೆಂಕಟಾಜಲಪತಿಯೇ ಕುಬೇರನಿಂದ ಸಾಲ ಪಡೆದನೆಂದು ಹೇಳಲಾಗುತ್ತದೆ. ಅಂತಹ ಸಾಲದ ಹೊರೆಯಿಂದ ಹೊರಬರಲು ಮತ್ತು ಸಾಲದಿಂದ ಮುಕ್ತರಾಗಲು ನಾವು ಈ ಪೋಸ್ಟ್ನಲ್ಲಿ ಕೆಲವು ಸರಳ ಪರಿಹಾರಗಳನ್ನು ನೋಡುತ್ತೇವೆ. ಭವಿಷ್ಯದ ಕುರಿತು ನಿಮಗೆ ಆತಂಕವಿದೆಯೇ..? ಜ್ಯೋತಿಷಕ್ಕೆ ಸಂಬಂಧಿಸಿದ ಪ್ರಶ್ನೆಗಳಿವೆಯೇ? ನಿಮ್ಮಲ್ಲಿನ ಗೊಂದಲಗಳನ್ನು ಬಗೆಹರಿಸಲು ನಿಮ್ಮ ವೈಯಕ್ತಿಕ ಪ್ರಶ್ನೆಗಳನ್ನು ಕೇಳಿ ಪರಿಹಾರ ಪಡೆದುಕೊಳ್ಳಬಹುದು ಖಾಯಂ ವಿಳಾಸ:- ಶ್ರೀ ಕ್ಷೇತ್ರ ಸಿಗಂದೂರು ಕಳಸವಳ್ಳಿ ಗ್ರಾಮ, ತುಮರಿ ಅಂಚೆ, ಸಾಗರ ತಾಲ್ಲೂಕು, ಶಿವಮೊಗ್ಗ ಜಿಲ್ಲೆ ವಿದ್ವಾನ್ ವಿದ್ಯಾಧರ್ ತಂತ್ರಿ ನಂ:- 9686268564 ಋಣ ಪರಿಹಾರ ತಮ್ಮ ಸಾಲವನ್ನು ಮರುಪಡೆಯಲು ಸಾಧ್ಯವಾಗದ ಅನೇಕ ಜನರಿದ್ದಾರೆ. ಅದೇ ರೀತಿ ಸಾಲ ತೀರಿಸಲಾಗದೆ ಸಾಕಷ್ಟು ಮಂದಿ ಇದ್ದಾರೆ. ಈ ಸಮಸ್ಯೆಯನ್ನು ಪರಿಹರಿಸಲು ಮಂಗಳವಾರವನ್ನು ಮಂಗಳಕರ ದಿನವೆಂದು ಪರಿಗಣಿಸಲಾಗುತ್ತದೆ. ಹೌದು, ಮಂಗಳವಾರದಂದು ನಾವು ಪಡೆದ ಸಾಲದ ಸ್ವಲ್ಪ ಮೊತ್ತವನ್ನು ಮರುಪಾವತಿ ಮಾಡುವ ಮೂಲಕ ನಮ್ಮ…
ಪಂಜಾಬ್ : ಪಂಜಾಬ್ ನಲ್ಲಿ ಗುಂಡಿಕ್ಕಿ ಆಪ್ ಮುಖಂಡನ ಬರ್ಬರ ಹತ್ಯೆ ನಡೆಸಲಾಗಿದೆ. ಪಂಜಾಬ್ ನ ಜಲಂಧರ ಬಳಿಯ ಗುರುದ್ವಾರದ ಹತ್ತಿರ ಈ ಒಂದು ಭೀಕರ ಗುಂಡಿನ ದಾಳಿ ನಡೆದಿದೆ. ಗುಂಡಿಕ್ಕಿ ಆಪ್ ಮುಖಂಡರಾದ ಲಕ್ಕಿ ಒಬೆರಾಯ್ ಅವರನ್ನು ಕೊಲೆ ಮಾಡಲಾಗಿದೆ. ಕಾರಿನಲ್ಲಿ ಬಂದಿದ್ದ ದುಷ್ಕರ್ಮಿಗಳು ಅವರ ಮೇಲೆ ಗುಂಡಿನ ದಾಳಿ ನಡೆಸಿದೆ. ಲಕ್ಕಿ ಒಬೆರಾಯ್ ಅವರ ಮೇಲೆ ಗುಂಡಿನ ದಾಳಿ ನಡೆಸಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಘಟನೆ ಸಂಭಂದಿಸಿದಂತೆ ಇನ್ನಷ್ಟು ಮಾಹಿತಿಯನ್ನು ನಿರೀಕ್ಷಿಸಲಾಗುತ್ತಿದೆ
ಬಳ್ಳಾರಿ : ಬಳ್ಳಾರಿಯ ಆಂಜನೇಯ ಸ್ವಾಮಿ ದೇಗುಳಲಿ ಮಾಂಸದ ತುಂಡುಗಳು ಪತ್ತೆಯಾಗಿದ್ದು ಮಾಂಸದ ತುಂಡುಗಳನ್ನು ನೋಡಿ ಅರ್ಚಕ ಶಾಕ್ ಆಗಿದ್ದಾರೆ. ಪ್ಲಾಸ್ಟಿಕ್ ಕವರ್ನಲ್ಲಿ ಮಾಂಸದ ತುಂಡುಗಳು ಪತ್ತೆಯಾಗಿವೆ. ಬಳ್ಳಾರಿ ನಗರದ ನಾಗಲಕೇರಿಯಲ್ಲಿರುವ ದೇವಸ್ಥಾನದಲ್ಲಿ ಮಾಂಸದ ತುಂಡುಗಳು ಪತ್ತೆಯಾಗಿವೆ. ಮಾಂಸದ ತುಂಡುಗಳನ್ನ ನೋಡಿ ತಕ್ಷಣ ಅರ್ಚಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ತಿಳಿದು ದೇವಸ್ಥಾನದ ಬಳಿ ಭಕ್ತರ ದಂಡೆ ಜಮಾಯಿಸಿದೆ. ಘಟನಾ ಸ್ಥಳಕ್ಕೆ ಬಂದು ಪೊಲೀಸರು ಪರಿಶೀಲನೆ ನಡೆಸುತ್ತಿದ್ದು, ಭಕ್ತರು ಯಾರು ಈ ಕೃತ್ಯ ಎಸಗಿದ್ದು? ಅಥವಾ ಇದರ ಹಿಂದೆ ಯಾರೂ ಕೈವಾಡ ಇದೆ ಅಥವಾ ಅಚಾತುರ್ಯವಾಗಿ ನಡೆದಿದೆಯೋ ಎನ್ನುವುದರ ಕುರಿತು ತನಿಖೆ ನಡೆಸಿ ಎಂದು ಭಕ್ತರು ಪೊಲೀಸರಿಗೆ ಮನವಿ ಮಾಡಿದ್ದಾರೆ.
ಬೆಂಗಳೂರು : ಇತ್ತೀಚಿಗೆ ಸೈಬರ್ ವಂಚನೆ ಪ್ರಕರಣಗಳು ಹೆಚ್ಚುತ್ತಿದ್ದು ಇದರಿಂದ ಅನೇಕ ಅಮಾಯಕ ಜನರು ದೊಡ್ಡ ದೊಡ್ಡ ಉದ್ಯಮಿಗಳು ಸೈಬರ್ ವಂಚನೆಗೆ ಬಲಿಯಾಗುತ್ತಿದ್ದಾರೆ. ಇದೀಗ ರಾಜ್ಯದಲ್ಲಿ ಹೆಚ್ಚುತ್ತಿರುವ ಸೈಬರ್ ಪ್ರಕರಣಗಳಿಗೆ ಕಡಿವಾಣ ಹಾಕಲು ಸಿಐಡಿ ಸೈಬರ್ ಕ್ರೈಂ ಮಹತ್ವದ ಕಾರ್ಯಾಚರಣೆ ನಡೆಸಿದೆ. ಫೆಬ್ರವರಿ 6ರಂದು ನಡೆದ ದಾಳಿಯಲ್ಲಿ, 40 ಸಾವಿರಕ್ಕೂ ಹೆಚ್ಚು ಮ್ಯೂಲ್ ಖಾತೆಗಳನ್ನು ಪತ್ತೆ ಹಚ್ಚಿ, 13 ಪ್ರಮುಖ ವಂಚಕರನ್ನು ಬಂಧಿಸಲಾಗಿದೆ. ನಿನ್ನೆ ರಾಜ್ಯಾದ್ಯಂತ 100ಕ್ಕೂ ಹೆಚ್ಚು ಕಡೆ ಏಕಕಾಲದಲ್ಲಿ ದಾಳಿ ನಡೆಸಿದ ಸಿಐಡಿ ತಂಡ, ಫೆಬ್ರವರಿ 6ರಂದು ಈ ಪ್ರಕರಣದ ಪ್ರಮುಖ 13 ಮಾಸ್ಟರ್ ಮೈಂಡ್‌ಗಳನ್ನು ಬಂಧಿಸಿದೆ. ಅಮಾಯಕ ಜನರ ಬ್ಯಾಂಕ್ ಖಾತೆ, ಎಟಿಎಂ ಕಾರ್ಡ್ ಹಾಗೂ ಖಾತೆ ವಿವರಗಳನ್ನು ಹಣಕ್ಕಾಗಿ ಸಂಗ್ರಹಿಸಿ ಸೈಬರ್ ವಂಚಕರಿಗೆ ನೀಡಲಾಗುತ್ತಿತ್ತು ಎಂಬುದು ಸಿಐಡಿ ತನಿಖೆ ವೇಳೆ ಬಯಲಾಗಿದೆ. ಈ ಮ್ಯೂಲ್ ಅಕೌಂಟ್‌ಗಳ ಮೂಲಕ ಆನ್‌ಲೈನ್ ವಂಚನೆ ನಡೆಸಿ ಹಣ ವರ್ಗಾವಣೆ ಹಾಗೂ ಎಟಿಎಂ ಮೂಲಕ ಹಣ ವಿತ್‌ಡ್ರಾ ಮಾಡಲಾಗುತ್ತಿತ್ತು. ದಾಳಿಯ ವೇಳೆ…
ದಾವಣಗೆರೆ : ಅಧಿಕಾರ ಹಂಚಿಕೆ ವಿಚಾರವಾಗಿ ದಾವಣಗೆರೆಯಲ್ಲಿ ಕಾಂಗ್ರೆಸ್ ಶಾಸಕ ಬಸವರಾಜ ಶಿವಗಂಗಾ ಹೇಳಿಕೆ ನೀಡಿದ್ದು ಅಧಿಕಾರ ಹಂಚಿಕೆಯ ನಿರ್ಧಾರದ ಕುರಿತು ಹೈಕಮಾಂಡ್ ಸ್ಪಷ್ಟನೆ ನೀಡಬೇಕು. ಡಿಸಿಎಂ ಡಿಕೆ ಶಿವಕುಮಾರ್ ಸಿಎಂ ಆಗಲೇಬೇಕು ಎಂಬ ನಿಲುವು ನನ್ನದಾಗಿದೆ ಎಂದು ತಿಳಿಸಿದರು. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಡಿಸಿಎಂ ಡಿಕೆ ಶಿವಕುಮಾರ್ ಸಿಎಂ ಆಗಲೇ ಬೇಕಾ ಎಂಬ ನಿಲುವು ಇದೆ ನಾನು ಅವರ ಹೆಸರಿನಿಂದಲೇ ಶಾಸಕನಾಗಿ ಪ್ರಮಾಣವಚನ ಸ್ವೀಕರಿಸಿದ್ದೇನೆ ಆದರೆ ಸಿಎಂ ಸ್ಥಾನದ ಬಗ್ಗೆ ಹೈಕಮಾಂಡ್ ಕೂಡಲೇ ಸ್ಪಷ್ಟನೆ ನೀಡಬೇಕು ಅಧಿವೇಶನ ಮುಕ್ತಾಯವಾಗಲಿದೆ ಎರಡು ದಿನಗಳಲ್ಲಿ ದೆಹಲಿಗೆ ಕರೆಯಬಹುದು. ಡಿಸೆಂಬರ್ ಆಯ್ತು, ಸಂಕ್ರಾಂತಿ ಆಯ್ತು, ಈಗ ಬಜೆಟ್ ಬರುತ್ತಿದೆ. ಹೀಗೆ ನಾವೇ ಪದೇ ಪದೇ ಹೇಳಿಕೆ ನೀಡುವುದು ಸೂಕ್ತ ಅಲ್ಲ. ಸಿದ್ದರಾಮಯ್ಯರೆ ಸಿಎಂ ಆಗಿ ಮುಂದುವರೆಯುತ್ತಾರೆ ಅಂತ ಹೇಳಿದರೆ ಸ್ವಾಗತಿಸುತ್ತೇವೆ ಎಂದು ಶಾಸಕ ಬಸವರಾಜ್ ಶಿವಗಂಗಾ ಹೇಳಿಕೆ ನೀಡಿದರು.
ಬೀದರ್ : ಕಳೆದ ಕೆಲವು ದಿನಗಳ ಹಿಂದೆ ನಿಗೂಢವಾದ ಸ್ಫೋಟಕ್ಕೆ ಶಾಲೆಗೆ ತೆರಳುತ್ತಿದ್ದ ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡಿದ್ದ ಘಟನೆ ಬೀದರ್ನಲ್ಲಿ ನಡೆದಿತ್ತು ಇದೀಗ ಬೀದರ್ ಜಿಲ್ಲೆ ಸೇರಿದಂತೆ ಸುತ್ತಮುತ್ತ ಗ್ರಾಮದಲ್ಲಿ ನಿಗೂಢ ಶುದ್ಧ ಕೇಳಿಸುತ್ತಿದೆ. ಹೌದು ಬೀದರ್ ಜಿಲ್ಲೆಯ ಡಾಕುಳಗಿ ಗ್ರಾಮದಲ್ಲಿ ಈ ಒಂದು ನಿಗೂಢ ಶಬ್ದ ಕೇಳಿಸುತ್ತಿದ್ದು, ಭೂಮಿಯಿಂದ ಬರುತ್ತಿರುವ ಶಬ್ದದಿಂದ ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದಾರೆ ಬೀದರ್ ಜಿಲ್ಲೆಯ ಹುಮ್ನಾಬಾದ್ ತಾಲೂಕಿನ ಡಾಕುಳಗಿ ಗ್ರಾಮದಲ್ಲಿ ನಿಗೂಢವಾದ ಶಬ್ದ ಕೇಳುತ್ತಿದ್ದು ನಿನ್ನೆ ರಾತ್ರಿ ಸುಮಾರಿಗೆ ಭೂಮಿಯಿಂದ ಈ ಒಂದು ಶಬ್ದ ಕೇಳಿ ಬಂದಿದೆ ಗ್ರಾಮಕ್ಕೆ ಇದೀಗ ತಹಶೀಲ್ದಾರ್ ಅಂಜುಂ ತಬಸ್ಸುಂ ಭೇಟಿ ನೀಡಿದ್ದಾರೆ.














