Author: kannadanewsnow05

ನವದೆಹಲಿ : ನವದೆಹಲಿಯ ಕೆಂಪು ಕೋಟೆಯ ಬಳಿ ಐ ಟ್ವೆಂಟಿ ಕಾರು ಸ್ಪೋಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಜಮ್ಮು ಕಾಶ್ಮೀರದಲ್ಲಿ NIA ಅಧಿಕಾರಿಗಳು ಮತ್ತೆ ಇಬ್ಬರು ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ. ದೆಹಲಿಯ ಕೆಂಪುಕೋಟೆ ಬಳಿ ನಡೆದ ಕಾರು ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ, ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಜಮ್ಮು ಮತ್ತು ಕಾಶ್ಮೀರದಲ್ಲಿ ಮತ್ತೆ ಇಬ್ಬರು ಶಂಕಿತರನ್ನು ಬಂಧಿಸಿದೆ. ಈ ಮೂಲಕ ಈ ಪ್ರಕರಣದಲ್ಲಿ ಬಂಧಿತರಾದವರ ಒಟ್ಟು ಸಂಖ್ಯೆ 11ಕ್ಕೆ ಏರಿಕೆಯಾಗಿದೆ. ಈ ಕುರಿತ ಪ್ರಮುಖ ವಿವರಗಳು ಇಲ್ಲಿವೆ: ಬಂಧಿತರ ವಿವರ ಹೆಸರುಗಳು: ಜಮೀರ್ ಅಹ್ಮದ್ ಅಹಂಗರ್ (ಗಂದರ್ಬಲ್ ನಿವಾಸಿ) ಮತ್ತು ತುಫೈಲ್ ಅಹ್ಮದ್ ಭಟ್ (ಶ್ರೀನಗರ ನಿವಾಸಿ). ಆರೋಪ: ಇವರು ಭಯೋತ್ಪಾದಕ ಸಂಘಟನೆ ಅನ್ಸಾರ್ ಗಜ್ವತ್-ಉಲ್-ಹಿಂದ್ (AGH) ನ ಸಕ್ರಿಯ ಓವರ್ ಗ್ರೌಂಡ್ ವರ್ಕರ್ಸ್ (OGWs) ಎಂದು ಗುರುತಿಸಲಾಗಿದೆ. ಪಾತ್ರ: ಸ್ಫೋಟದ ಪ್ರಮುಖ ಸಂಚುಕೋರ ಉಮರ್ ಉನ್ ನಬಿಗೆ ಇವರು ಶಸ್ತ್ರಾಸ್ತ್ರಗಳನ್ನು ಪೂರೈಸಿದ್ದರು ಎಂಬ ಗಂಭೀರ ಆರೋಪವಿದೆ. ಪ್ರಕರಣದ ಹಿನ್ನೆಲೆ ಘಟನೆ: ನವೆಂಬರ್…

Read More

ಕೊಪ್ಪಳ : ತಲ್ವಾರ್ನಿಂದ ಕೇಕ್ ಕತ್ತರಿಸಿ ಬರ್ತ್ಡೇ ಆಚರಣೆ ಮಾಡಲಾಗಿದೆ. ಕೊಪ್ಪಳದಲ್ಲಿ ಈ ಒಂದು ಘಟನೆ ನಡೆದಿದೆ. ಯಮನೂರಪ್ಪ ಇಸ್ಲಾಂಪುರ ಎನ್ನುವಂತ ಯುವಕ ತಲ್ವಾರ್ನಿಂದ ಕೇಕ್ ಕತ್ತರಿಸಿದ್ದು ಶಸ್ತ್ರಾಸ್ತ್ರ ಕಾಯಿದೆ ಉಲ್ಲಂಘಿಸಿದ್ದಾನೆ. ಫೆಬ್ರುವರಿ 24ರಂದು ಈ ಒಂದು ಘಟನೆ ನಡೆದಿದ್ದು ತಲ್ವಾರ್ನಿಂದ ಕೇಕ್ ಅನ್ನು ಯಮನೂರಪ್ಪ ಕಟ್ ಮಾಡಿದ್ದಾನೆ. ಇದೆಲ್ಲ ಕೂಡ ಕಾನೂನು ಬಾಹಿರ ಎಂದು ಹೇಳಿದರೂ ಕೂಡ ಇಂತಹ ಘಟನೆಗಳು ಮರುಕಳಿಸುತ್ತಿವೆ. ಸಾಲಾಗಿಟ್ಟಿರುವ ಕೇಕನ್ನು ತಲ್ವಾರ್ನಿಂದ ಯಮನೂರಪ್ಪ ಕಟ್ ಮಾಡಿದ್ದಾನೆ. ಈ ಕುರಿತು ಕನಕಗಿರಿ ಠಾಣೆಯಲ್ಲಿ ಯಮನೂರಪ್ಪ ವಿರುದ್ಧ ಕೇಸ್ ದಾಖಲಾಗಿದೆ.

Read More

ಬೆಂಗಳೂರು : ಬೆಂಗಳೂರಿನಲ್ಲಿ ತಾಯಿಯ ಎದುರೇ ಮಗನನ್ನು ಭೀಕರವಾಗಿ ಕೊಲೆ ಮಾಡಲಾಗಿದೆ. ಮಾರಕಸ್ತ್ರಗಳಿಂದ ಕೊಚ್ಚಿ ರೌಡಿಶೀಟರ್ ಪವನ್ ಕುಮಾರ್ ಎಂಬಾತನನ್ನು ಭೀಕರವಾಗಿ ಕೊಲೆ ಮಾಡಲಾಗಿದೆ. ಬೆಂಗಳೂರಿನ ಸಂಪಿಗೆಹಳ್ಳಿಯ ಥಣಿಸಂದ್ರ ದಲ್ಲಿ ಈ ಒಂದು ಘಟನೆ ನಡೆದಿದೆ. ಮಧ್ಯರಾತ್ರಿ ದುಷ್ಕರ್ಮಿಗಳು ಲಾಂಗ್ ನಿಂದ ಕೊಚ್ಚಿ ರೌಡಿಶೀಟರ್ ಅನ್ನು ಕೊಲೆ ಮಾಡಿದ್ದಾರೆ ಸ್ಥಳಕ್ಕೆ ಸಂಪಿಗೆಹಳ್ಳಿ ಠಾಣ ಪೋಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಡಿಜೆ ಹಳ್ಳಿ ಠಾಣೆ ರೌಡಿಶೀಟರ್ ಆಗಿದ್ದ ಪವನ್ ಕುಮಾರ್ ಕೊಲೆ ಕೇಸ್ ಒಂದರಲ್ಲಿ ಆರೋಪಿಯಾಗಿದ್ದ. ಮೂರು ತಿಂಗಳ ಹಿಂದೆ ಪವನ್ ಕುಮಾರ್ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ. ಹಳೆ ದ್ವೇಷದ ಹಿನ್ನೆಲೆಯಲ್ಲಿ ಪವನ್ ಕುಮಾರ್ ನನ್ನ ಕೊಲೆ ಮಾಡಲಾಗಿದೆ ಎನ್ನುವ ಶಂಕೆ ವ್ಯಕ್ತವಾಗುತ್ತಿದೆ.

Read More

ಬೆಂಗಳೂರು : ತಾಯಿಗೆ ರಜೆ ನಿರಾಕರಿಸಿದರೆ, ಅದು ಮಕ್ಕಳ ಮೇಲೆ ಒತ್ತಡವಾಗಬಹುದು. ಸಿಸಿಎಲ್‌ ರಜೆ ಮಗುವಿನ ಹಕ್ಕು. ಹಾಗಾಗಿ ಮಕ್ಕಳ ಆರೈಕೆ ರಜೆ ಮಗುವಿನ ಹಕ್ಕಾಗಿದ್ದು, ಈ ರಜೆಯ ಕೋರಿಕೆ ಬಂದಾಗ ಅದನ್ನು ನಿರಾಕರಿಸದೆ, ಆದ್ಯತೆ ಮೇರೆಗೆ ರಜೆ ಮಂಜೂರು ಮಾಡಬೇಕು ಎಂದು ಹೈಕೋರ್ಟ್‌ ಆದೇಶಿಸಿದೆ. ನೌಕರರಿಂದ ಬೇರೆ ರಜೆಗಳಿಗೆ ಬೇಡಿಕೆ ಬಂದಾಗ ಮಂಜೂರು ಮಾಡಲು ವಿವೇಚನಾ ಅಧಿಕಾರ ಉದ್ಯೋಗದಾತರಿಗಿರಲಿದೆ. ಆದರೆ ಸಿಸಿಎಲ್​ ರಜೆಯನ್ನು ನಿರಾಕರಿಸುವಂತಿಲ್ಲ ಎಂದು ತಿಳಿಸಿರುವ ಹೈಕೋರ್ಟ್​​, ಕೇಂದ್ರ ಸರ್ಕಾರದ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಅಧೀನದಲ್ಲಿರುವ ಸೆಂಟರ್‌ ಫಾರ್‌ ಡೆವಲಪ್​ಮೆಂಟ್‌ ಆಫ್‌ ಅಡ್ವಾನ್ಸ್‌ಡ್‌ ಕಂಪ್ಯೂಟಿಂಗ್‌ನಲ್ಲಿ ಆಡಳಿತಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಕವಿತಾ ವಡ್ಡೆ ಅವರಿಗೆ ಫೆ.6ರಿಂದ ಮೇ 20ರವರೆಗೆ ಚೈಲ್ಡ್​ ಕೇರ್‌ ಲೀವ್‌ ನೀಡಲು ನಿರ್ದೇಶನ ನೀಡಿದೆ. ರಜೆ ನೀಡುವಂತೆ ಕೇಂದ್ರೀಯ ಆಡಳಿತ ನ್ಯಾಯಮಂಡಳಿ(ಸಿಎಟಿ) ಫೆ.5ರಂದು ಆದೇಶ ನೀಡಿತ್ತು. ಅದನ್ನು ಪ್ರಶ್ನಿಸಿ ಕೇಂದ್ರ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್‌.ಜಿ.ಪಂಡಿತ್‌ ಮತ್ತು ನ್ಯಾಯಮೂರ್ತಿ ಕೆ.ವಿ.ಅರವಿಂದ್‌…

Read More

ಬೆಂಗಳೂರು : ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) 12 ರಾಜ್ಯಗಳಲ್ಲಿ ಬರೋಬ್ಬರಿ 32 ನಕಲಿ ವಿಶ್ವವಿದ್ಯಾಲಯಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇದರಲ್ಲಿ ನಮ್ಮ ರಾಜ್ಯದಲ್ಲೂ ಎರಡು ನಕಲಿ ವಿಶ್ವವಿದ್ಯಾಲಯ ಪತ್ತೆಯಾಗಿವೆ. ಈ ನಕಲಿ ವಿಶ್ವವಿದ್ಯಾಲಯಗಳ ಪೈಕಿ ದೆಹಲಿ 1ನೇ ಸ್ಥಾನದಲ್ಲಿದ್ದರೆ, ಉತ್ತರ ಪ್ರದೇಶ ಎರಡನೇ ಸ್ಥಾನದಲ್ಲಿದೆ. ಇಂತಹ ವಿಶ್ವವಿದ್ಯಾಲಯಗಳಲ್ಲಿ ದಾಖಲಾದ ನಂತರ ಪಡೆದ ಪದವಿಗಳು ನಿಷ್ಪ್ರಯೋಜಕವಾಗುತ್ತವೆ ಎಂದು ಯುಜಿಸಿ ಸ್ಪಷ್ಟವಾಗಿ ಎಚ್ಚರಿಸಿದೆ. ಜೊತೆಗೆ ಈ ವಿಶ್ವವಿದ್ಯಾಲಯಗಳಿಂದ ಪದವಿಗಳನ್ನು ಉದ್ಯೋಗಕ್ಕಾಗಿ ಮಾನ್ಯತೆ ನೀಡಬಾರದು ಎಂದಿದೆ. ಯಾವುದೇ ವಿದ್ಯಾರ್ಥಿಯು ಯಾವುದೇ ಸಂಸ್ಥೆಯಲ್ಲಿ ತರಾತುರಿಯಲ್ಲಿ ಪ್ರವೇಶ ಪಡೆಯಬಾರದು. ವಿಶ್ವವಿದ್ಯಾಲಯ ಅನುದಾನ ಆಯೋಗದ (UGC) ಅಧಿಕೃತ ವೆಬ್‌ಸೈಟ್‌ನಲ್ಲಿ ಅನುಮೋದಿತ ವಿಶ್ವವಿದ್ಯಾಲಯಗಳ ಪ್ರಸ್ತುತ ಪಟ್ಟಿಯನ್ನು ಪರಿಶೀಲಿಸಬೇಕು. ಇದು UGC ಕಾಯ್ದೆ 1956 ರ ಅಡಿಯಲ್ಲಿ ಮಾನ್ಯತೆ ಪಡೆದ ವಿಶ್ವವಿದ್ಯಾಲಯಗಳ ಹೆಸರುಗಳನ್ನು ಒಳಗೊಂಡಿದೆ. ಇದರ ಮೂಲಕ ಅವರು ಪ್ರವೇಶ ಪಡೆಯಲಿರುವ ಸಂಸ್ಥೆಯು ಮಾನ್ಯವಾಗಿದೆಯೇ ಅಥವಾ ಇಲ್ಲವೇ ಎಂದು ತಿಳಿಯುತ್ತದೆ. ಕೇಂದ್ರ ಸರ್ಕಾರವು ನಿರಂತರವಾಗಿ ನಕಲಿ ವಿಶ್ವವಿದ್ಯಾಲಯಗಳ ವಿರುದ್ಧ ಕ್ರಮ ಕೈಗೊಳ್ಳುತ್ತದೆ.…

Read More

ಯಾದಗಿರಿ : ಶಹಾಪುರ ತಾಲೂಕಿನ ಮಹಲ್ ರೋಜಾದ ಸ್ವಘೋಷಿತ ದೇವಮಾನವ ಮಲ್ಲಿಕಾರ್ಜುನ ಮುತ್ಯಾ ವಿರುದ್ಧ ಅಪ್ರಾಪ್ತ ಬಾಲಕಿಯೊಂದಿಗೆ ಅನುಚಿತವಾಗಿ ವರ್ತಿಸಿರುವುದಾಗಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದೆ. ಮಲ್ಲಿಕಾರ್ಜುನ ಮುತ್ಯಾ ಅಪ್ರಾಪ್ತ ಬಾಲಕಿಯೊಂದಿಗೆ ಅನುಚಿತವಾಗಿ ವರ್ತಿಸಿರುವುದಾಗಿ ಹೇಳಲಾಗಿರುವ ವಿಡಿಯೋ ತುಣುಕುಗಳು ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ವಿಷಯವನ್ನು ಗಂಭೀರವಾಗಿ ಪರಿಗಣಿಸಿರುವ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಸ್ವಯಂ ದೂರು ದಾಖಲಿಸಿಕೊಂಡಿದೆ. ವೈರಲ್ ವಿಡಿಯೋವನ್ನು ಪರಿಶೀಲಿಸಿ, ಕೈಗೊಂಡ ಕ್ರಮಗಳ ಕುರಿತು ವಿವರವಾದ ವರದಿ ಸಲ್ಲಿಸುವಂತೆ ಯಾದಗಿರಿ ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ಆಯೋಗ ಪತ್ರ ರವಾನಿಸಿದೆ.

Read More

ಮಂಡ್ಯ :- ಮದ್ದೂರು ನಗರದ ವಿಶ್ವೇಶ್ವರಯ್ಯ ನಗರ 7 ನೇ ರಸ್ತೆಯ ಮನೆಯೊಂದರಲ್ಲಿ ಕಳ್ಳತನವಾಗಿದ್ದು 1.5 ಲಕ್ಷ ರೂ ನಗದು ಸೇರಿದಂತೆ ಲಕ್ಷಾಂತರ ರೂ ಬೆಲೆ ಬಾಳುವ ಚಿನ್ನಾಭರಣ, ಬೆಳ್ಳಿ ಸಾಮಗ್ರಿಗಳನ್ನು ದೋಚಿ ಕಳ್ಳರು ಪರಾರಿಯಾಗಿರುವ ಘಟನೆ ಮಂಗಳವಾರ ರಾತ್ರಿ ಬೆಳಕಿಗೆ ಬಂದಿದೆ. ಸೌಮ್ಯ ಮಹೇಶ್ ಎಂಬುವವರ ಮನೆಯಲ್ಲೇ ಕಳ್ಳತನವಾಗಿದ್ದು,ಮನೆಯವರು ಸೋಮವಾರ ಸಂಬಂಧಿಕರ ಊರಿಗೆ ಹೋಗಿ ಮಂಗಳವಾರ ರಾತ್ರಿ 10 ಗಂಟೆಗೆ ವಾಪಸ್ ಬಂದಾಗ ಮನೆಯಲ್ಲಿ ಕಳ್ಳತನವಾಗಿರುವುದು ಗೊತ್ತಾಗಿದೆ. ಕಳ್ಳರು ಮನೆಯ ಗೇಟ್ ನ ಬೀಗ ಹೊಡೆದು ನಂತರ ಮುಂಬಾಗಿಲಿನ ಬೀಗವನ್ನು ಕಬ್ಬಿಣದ ಸಲಾಕೆಯಿಂದ ಮೀಟಿ ಮನೆಯ ಒಳಹೋಗಿ ರೂಮಿನ ಬೀರುವಿನಲ್ಲಿದ್ದ 148 ಗ್ರಾಂ ತೂಕದ ಚಿನ್ನಾಭರಣ, 1.5ಲಕ್ಷ ರೂ ನಗದು ಹಾಗೂ ದೇವರ ಮನೆಯಲ್ಲಿದ್ದ ಸುಮಾರು 2.5 ಕೆ. ಜಿ ತೂಕದ ಬೆಳ್ಳಿ ಸಾಮಗ್ರಿಗಳನ್ನು ಕಳ್ಳರು ದೋಚಿ ಪರಾರಿಯಾಗಿದ್ದಾರೆ. ವಿಷಯ ತಿಳಿಯುತ್ತಿದ್ದoತೆಯೇ ಸ್ಥಳಕ್ಕೆ ಸಿಪಿಐ ಗಳಾದ ನವೀನ್ ಕುಮಾರ್, ನಾರಾಯಣಿ, ಪಿಎಸ್ಐ ಗಳಾದ ಮಂಜುನಾಥ್, ರವಿ ಸೇರಿದಂತೆ ಸಿಬ್ಬಂದಿಗಳು ಹಾಗೂ…

Read More

ಮಂಡ್ಯ :- ಹಲವು ವರ್ಷಗಳಿಂದ ಮೂಲ ಸೌಕರ್ಯಗಳಿಂದ ವಂಚಿತವಾಗಿರುವ ಗ್ರಾಮಗಳನ್ನು ಪಟ್ಟಿ ಮಾಡಿ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಲಾಗುತ್ತಿದೆ ಎಂದು ಶಾಸಕ ಕೆ.ಎಂ.ಉದಯ್ ಹೇಳಿದರು. ಮದ್ದೂರು ತಾಲೂಕಿನ ಚುಂಚಗಹಳ್ಳಿ, ನೀಲಕಂಠನಹಳ್ಳಿ, ಆಲೂರುದೊಡ್ಡಿ, ಆಲೂರು ಹಾಗೂ ಬೂದಗುಪ್ಪೆ ಗ್ರಾಮಗಳಲ್ಲಿ 1 ಕೋಟಿ ರೂ.ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಬುಧವಾರ ಚಾಲನೆ ನೀಡಿ ಮಾತನಾಡಿದರು. ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳಾದರೂ ಕ್ಷೇತ್ರದ ನೂರಾರು ಗ್ರಾಮಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸುವಲ್ಲಿ ಹಿಂದಿನ ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದಾಗಿ ಅಭಿವೃದ್ಧಿಯಿಂದ ವಂಚಿತವಾಗಿವೆ. ಹೀಗಾಗಿ ಅಂತಹ ಗ್ರಾಮಗಳಿಗೆ ಮೊದಲು ಅಭಿವೃದ್ಧಿ ಕಾರ್ಯಗಳಿಗೆ ಮುಖ್ಯಮಂತ್ರಿಗಳ ವಿಶೇಷ ಅನುದಾನದಲ್ಲಿ ಕಾಮಗಾರಿಗಳಿಗೆ ಚಾಲನೆ ನೀಡಲಾಗುತ್ತಿದೆ ಎಂದರು. ಈಗಾಗಲೇ ಎರಡುವರೆ ವರ್ಷಗಳಲ್ಲೆ ನಮ್ಮ ಸರ್ಕಾರ ಕ್ಷೇತ್ರದ ಅಭಿವೃದ್ಧಿಗೆ 1800 ಕೋಟಿಗೂ ಹೆಚ್ಚಿನ ಅನುದಾನ ಬಿಡುಗಡೆ ಮಾಡಿ ಕೊಟ್ಟ ಮಾತಿನಂತೆ ನಡೆದುಕೊಂಡಿದೆ. ಕ್ಷೇತ್ರದ ಪ್ರತಿ ಗ್ರಾಮಗಳಲ್ಲೂ ರಸ್ತೆ, ಚರಂಡಿ, ನೀರಾವರಿ, ಶಿಕ್ಷಣ, ಕುಡಿಯುವ ನೀರು, ಕೆರೆ ಹಾಗೂ ನಾಲೆಗಳ ಆಧುನಿಕರಣ ಸೇರಿದಂತೆ ಪ್ರತಿಯೊಂದು ಕ್ಷೇತ್ರಕ್ಕೂ ವಿಶೇಷ ಗಮನ ನೀಡಲಾಗಿದ್ದು,…

Read More

ಬೆಂಗಳೂರು : ಬೆಂಗಳೂರಿನಲ್ಲಿ ಮತ್ತೊಂದು ಆತ್ಮಹತ್ಯೆ ಪ್ರಕರಣ ಬೆಳಕಿಗೆ ಬಂದಿದ್ದು, ಬಿಬಿಎಂಪಿ ನಿವೃತ್ತ ಇಂಜಿನಿಯರ್ ಪರಮೇಶ್ವರಯ್ಯ (63) ಆತ್ಮಹತ್ಯೆಗೆ ಶರಣಾಗಿದ್ದಾರೆ. ಬೆಂಗಳೂರಿನ ಕೋರಮಂಗಲದ ಮನೆಯಲ್ಲಿ ಈ ಒಂದು ಆತ್ಮಹತ್ಯೆ ಘಟನೆ ನಡೆದಿದೆ. ಬಿಬಿಎಂಪಿ ನಿವೃತ್ತ ನೌಕರ ಪರಮೇಶ್ವರಯ್ಯ ಅವರು ಮಾನಸಿಕವಾಗಿ ಕುಗ್ಗಿಹೋಗಿದ್ದು ಹಾಗೂ ಚಿಕಿತ್ಸೆ ಸಹ ಪಡೆಯುತ್ತಿದ್ದರು. ಬಿಬಿಎಂಪಿ ಮಹದೇವಪುರ ವ್ಯಾಪ್ತಿಯ ಮುಖ್ಯ ಇಂಜಿನಿಯರ್ ಆಗಿದ್ದ ಪರಮೇಶ್ವರ ಸಿಬಿಐ ತನಿಖೆಗೆ ಹೆದರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ. 2021 ರಲ್ಲಿ ಗುತ್ತಿಗೆದಾರ ಅನಿಲ್ ನಿವಾಸದ ಮೇಲೆ ಐಟಿ ದಾಳಿ ಮಾಡಿತ್ತು. ಬಿಬಿಎಂಪಿ ಗುತ್ತಿಗೆದಾರ ಅನಿಲ್ ನಿವಾಸದಲ್ಲಿ ಸೂಟ್ಕೇಸ್ ನಲ್ಲಿ ಮೂರು ಲಾಕ್ ಪತ್ತೆಯಾಗಿತ್ತು. ಅದರಲ್ಲಿ 1.35 ಲಕ್ಷ ನಗದು ಹಣ 275.98 ಗ್ರಾಂ ಚಿನ್ನಾಭರಣ ಪತ್ತೆಯಾಗಿತ್ತು. ಅಲ್ಲದೆ ಹಲವು ಜಮೀನು ಮತ್ತು ಸೈಟ್ ದಾಖಲಾತಿ ಪತ್ತೆಯಾಗಿದ್ದವು. ಇದೆಲ್ಲವೂ ಪರಮೇಶ್ವರ್ ಗೆ ಸೇರಿದ್ದು ಅಂತ ಅನಿಲ್ ಕುಮಾರ್ ಹೇಳಿದ್ದರು. 2021ರ ಡಿಸೆಂಬರ್ 4ರಂದು ಪರಮೇಶ್ವರಯ್ಯ ಮನೆಯ ಮೇಲೆ ಐಟಿ ಅಧಿಕಾರಿಗಳು ದಾಳಿ…

Read More

ಬೆಂಗಳೂರು : ಇತ್ತೀಚಿಗೆ ಶಿರಹಟ್ಟಿ ಕ್ಷೇತ್ರದ ಬಿಜೆಪಿ ಶಾಸಕ ಚಂದ್ರು ಲಮಾಣಿ ಅವರು ಕಾಮಗಾರಿ ಒಂದಕ್ಕೆ ಗುತ್ತಿಗೆದಾರನ ಬಳಿ 5ಲಕ್ಷ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದರು. ಇದೀಗ ಇದೆ ವಿಚಾರವಾಗಿ ಗುತ್ತಿಗೆದಾರರ ಸಂಘದ ರಾಜ್ಯಾಧ್ಯಕ್ಷ ಆರ್ ಮಂಜುನಾಥ್ ಸ್ಫೋಟಕವಾದ ಹೇಳಿಕೆ ನೀಡಿದ್ದಾರೆ. ಕೋಲಾರದಲ್ಲಿ ಈ ವಿಚಾರವಾಗಿ ಮಾತನಾಡಿದ ಅವರು ಕಾಮಗಾರಿ ಮುಗಿದರೂ ಬಿಲ್ ಆಗದೆ ಮನೆಮಠ ಕಳೆದುಕೊಂಡಿದ್ದೇವೆ. ನಾವು ಪರ್ಸೆಂಟೇಜ್ ನಿಗದಿ ಮಾಡಿಲ್ಲ ಆದರೂ ಪರ್ಸೆಂಟೇಜ್ ಇದೆ. ಸರ್ಕಾರದ ಎಲ್ಲಾ ಇಲಾಖೆಗಳಲ್ಲೂ ಪರ್ಸೆಂಟೇಜ್ ಇದೆ ನಾವು ಮಧ್ಯಮ ವರ್ಗದ ಗುತ್ತಿಗೆದಾರರು ಆ ವಿಚಾರ ಮಾತನಾಡಿದರೆ ತೊಂದರೆಯಾಗುತ್ತದೆ ಎಂದು ತಿಳಿಸಿದರು. ಗುತ್ತಿಗೆದಾರನಿಂದ ಲಂಚ ಪಡೆಯುವಾಗ ಚಂದ್ರು ಲಮಾಣಿ ಬಲೆಗೆ ಬಿದ್ದ ವಿಚಾರವಾಗಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಅಂತಹ ಇಬ್ಬರು ಶಾಸಕರು ಸಿಗುತ್ತಾರೆ. ಬಿಜೆಪಿ ಶಾಸಕ ಚಂದ್ರು ಲಮಾಣಿ ಈ ರೀತಿ ಎಲ್ಲಾ ಪಕ್ಷಗಳಲ್ಲೂ ಇದ್ದಾರೆ. ಸಿಎಂ ಸಿದ್ದರಾಮಯ್ಯ ಅನುಮತಿ ನೀಡಿದರೆ ಶಾಸಕರ ಹೆಸರು ಹೇಳುತ್ತೇವೆ ಎಂದು ಗುತ್ತಿಗೆದಾರರ ಸಂಘದ ರಾಜ್ಯಾಧ್ಯಕ್ಷ ಆರ್ ಮಂಜುನಾಥ್…

Read More