Subscribe to Updates
Get the latest creative news from FooBar about art, design and business.
Author: kannadanewsnow05
ಬೆಂಗಳೂರು : ಇತ್ತೀಚಿಗೆ ಕರ್ನಾಟಕದ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಅಕ್ರಮವಾಗಿ ನುಸುಳಿದ್ದ ಬಾಂಗ್ಲಾದೇಶ, ಪಾಕಿಸ್ತಾನ್ ಪ್ರಜೆಗಳನ್ನು ಪತ್ತೆ ಹಚ್ಚಲಾಗಿತ್ತು. ಇದೀಗ ಬೆಂಗಳೂರಲ್ಲಿ ಪೊಲೀಸರು ಮತ್ತೊಮ್ಮೆ ಭರ್ಜರಿ ಕಾರ್ಯಚರಣೆ ನಡೆಸಿದ್ದಾರೆ. ಹೌದು ಅಕ್ರಮ ಬಾಂಗ್ಲಾ ವಲಸಿಗರ ಪತ್ತೆಗೆ ಪೊಲೀಸರು ಕಾರ್ಯಾಚರಣೆ ಚುರುಕುಗೊಳಿಸಿದ್ದಾರೆ. ನಗರದ ಪೂರ್ವ ವಿಭಾಗದ ರಾಮ ಮೂರ್ತಿನಗರ ಪೊಲೀಸ್ ಠಾಣೆ ವ್ಯಾಪ್ತಿಯ ಕೆ. ಚನ್ನಸಂದ್ರ ಹಾಗೂ ಕಲ್ಕೆರೆ ಪ್ರದೇಶದ ವಿವಿಧೆಡೆ ಪ್ಲೈವುಡ್ ಅಂಗಡಿ, ಗೋದಾಮು ಹಾಗೂ ಮನೆಗಳಲ್ಲಿ ಕೆಲಸ ಮಾಡುವ ಕಾರ್ಮಿಕರನ್ನು ವಿವಿಧ ಸ್ತರಗಳಲ್ಲಿ ಪೊಲೀಸರು ತಪಾಸಣೆಗೊಳಪಡಿಸಿದ್ದಾರೆ. ಈ ವೇಳೆ 1 ಸಾವಿರಕ್ಕೂ ಅಧಿಕ ಸಂಶಯಾಸ್ಪದ ವ್ಯಕ್ತಿಗಳ ಆಧಾರ್ ಕಾರ್ಡ್, ವಿದ್ಯಾಭ್ಯಾಸ ಮಾಡಿರುವ ಮೂಲ ಅಂಕಪಟ್ಟಿ, ಬ್ಯಾಂಕ್ ಖಾತೆ, ಪಾಸ್‌ಪೋರ್ಟ್ ವಿವಿಧ ದಾಖಲೆಗಳು ಹಾಗೂ ಪೋನ್ ಕರೆ ಮತ್ತು ಸಕ್ರಿಯರಾಗಿರುವ ವಾಟ್ಸ್ಆಪ್ ಗ್ರೂಪ್‌ಗಳನ್ನು ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಓರ್ವ ನೈಜೀರಿಯಾ ಪ್ರಜೆ ಸೇರಿದಂತೆ 11 ಜನ ಸಂಶಯಾಸ್ಪದ ಅಕ್ರಮ ನಿವಾಸಿಗಳು ಪತ್ತೆಯಾಗಿದ್ದು, ಆ ವ್ಯಕ್ತಿಗಳ ವಿರುದ್ಧ ಕಾನೂನು…
ಬೆಂಗಳೂರು : ಸರ್ಕಾರಿ ಕೋಟಾದ ಅಡಿಯಲ್ಲಿ MBBS ಪ್ರವೇಶ ಪಡೆದ ಸುಮಾರು 400ಕ್ಕೂ ಹೆಚ್ಚು ವಿಧ್ಯಾರ್ಥಿಗಳಿಗೆ ಇದೀಗ ರಾಜ್ಯ ಸರ್ಕಾರ ಬಿಗ್ ಶಾಕ್ ನೀಡಿದೆ. ಕಾರಣ ಇಷ್ಟೇ ಎಂಬಿಬಿಎಸ್ ವಿದ್ಯಾರ್ಥಿಗಳು ಕಡ್ಡಾಯವಾಗಿ ಗ್ರಾಮೀಣ ಸೇವೆ ಸಲ್ಲಿಸಬೇಕು ಎಂಬ ನಿಯಮವಿದೆ. ಆದರೆ ಇದರಿಂದ ತಪ್ಪಿಸಿಕೊಂಡ ಸುಮಾರು 400ಕ್ಕೂ ಹೆಚ್ಚು ಎಂಬಿಬಿಎಸ್ ವಿದ್ಯಾರ್ಥಿಗಳಿಗೆ ರಾಜ್ಯ ಆರೋಗ್ಯ ಇಲಾಖೆ 15ಲಕ್ಷ ರೂಪಾಯಿ ದಂಡ ವಿಧಿಸಿದೆ. ಹೌದು ಗ್ರಾಮೀಣ ಸೇವೆ ತಪ್ಪಿಸಿದ 400ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ 15 ಲಕ್ಷ ರೂ ದಂಡದ ನೋಟಿಸ್ ನೀಡಲಾಗಿದೆ. ಕರ್ನಾಟಕದಲ್ಲಿ ಒಂದು ವರ್ಷದ ಕಡ್ಡಾಯ ಗ್ರಾಮೀಣ ಸೇವೆಗೆ ಹಾಜರಾಗದ 400ಕ್ಕೂ ಹೆಚ್ಚು ವೈದ್ಯ ವಿದ್ಯಾರ್ಥಿಗಳಿಗೆ ತಲಾ 15 ಲಕ್ಷ ರೂ ದಂಡ ಕಟ್ಟುವಂತೆ ರಾಜ್ಯ ಸರ್ಕಾರ ಶಾಕ್ ನೀಡಿದೆ. ಈ ಬಗ್ಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ನೋಟಿಸ್ ಹೊರಡಿಸಲಾಗಿದೆ. 30 ದಿನಗಳೊಳಗೆ ದಂಡ ಪಾವತಿಸದಿದ್ದರೆ ಕಾನೂನು ಕ್ರಮಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದೆ. ಸರ್ಕಾರಿ ವೈದ್ಯಕೀಯ ಕೋಟಾದಡಿ ಎಂಬಿಬಿಎಸ್ ಪದವಿ ಪಡೆದ…
ಬೆಂಗಳೂರು : ಬೆಂಗಳೂರಲ್ಲಿ ನಿರ್ದೇಶಕ ಅನೀಶ್ ಕಿಡ್ನ್ಯಾಪ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ 11 ಆರೋಪಿಗಳನ್ನು ಇದೀಗ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಬೆಂಗಳೂರಿನ ಆಡುಗೋಡಿ ಠಾಣಾ ವ್ಯಾಪ್ತಿಯಲ್ಲಿ ಈ ಒಂದು ಘಟನೆ ನಡೆದಿತ್ತು. ಜೀವನದ ಭಾಷೆ ಎಂಬ ಸಿನಿಮಾವನ್ನು ಅನಿಶ್ ನಿರ್ದೇಶನ ಮಾಡುತ್ತಿದ್ದ ಹಿಂದೆ ಭರವಸೆಯ ಜೀವನ ಎಂಬ ಶಾರ್ಟ್ ಮೂವಿ ಸಹ ಮಾಡಿದ್ದ. ನಂತರ ಜೀವನದ ಭಾಷೆ ಎಂಬ ಸಿನಿಮಾ ನಿರ್ದೇಶನ ಮಾಡುತ್ತಿದ್ದ. ಆದರೆ ಕಾರಣಾಂತರಗಳಿಂದ ಸಿನೆಮಾ ನಿಲ್ಲಿಸಿ ಮುಂಬೈಗೆ ಶಿಫ್ಟ್ ಆಗಿದ್ದ. ಬಳಿಕ ನಟಿ ಐಶ್ವರ್ಯಗೆ ಕಾರು ಮಾರಾಟದ ಬಗ್ಗೆ ತಿಳಿಸಿದ್ದ. ನಟಿ ಐಶ್ವರ್ಯ ಮೂಲಕ ಆರೋಪಿಗಳು ಮಾಹಿತಿ ಕಲೆಹಾಕಿದ್ದಾರೆ. ದುನಿಯಾ ವಿಜಿ ಅಭಿನಯದ ಭೀಮ ಚಿತ್ರದಲ್ಲಿ ಐಶ್ವರ್ಯ ನಟಿಸಿದ್ದರು. ಕಾರು ಖರೀದಿ ಮಾಡುವುದಾಗಿ ಆರೋಪಿಗಳು ಅನೀಶನನ್ನು ಸಂಪರ್ಕಿಸಿದ್ದಾರೆ.ನಟಿಯ ಮೂಲಕ ನಿರ್ದೇಶಕನನ್ನು ಬೆಂಗಳೂರಿಗೆ ಕರೆಸಿದ್ದಾರೆ. ಕಾರು ಖರೀದಿ ಮಾಡುತ್ತೇವೆ ಎಂದು ಕರೆಸಿ ಕಿಡ್ನಾಪ್ ಮಾಡಿದ್ದರು. ಬೆಳಕಿಗೆ ಬಂದಿದೆ ನಿರ್ದೇಶಕ ಅನೀಶ್ ಜೊತೆಗೆ ಐದು ಲಕ್ಷ ಹಣದ ವಿಚಾರಕ್ಕೆ ಜಗಳ ಆಗಿತ್ತು.…
ಬೆಂಗಳೂರು : ನೆಲಮಂಗಲ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಹುದ್ದೆಗೆ ನಡೆದ ಚುನಾವಣೆಯಲ್ಲಿ, ವಿಪ್ ಉಲ್ಲಂಘನೆ ಹಿನ್ನೆಲೆ, ಕರ್ನಾಟಕ ಸ್ಥಳೀಯ ಸಂಸ್ಥೆಗಳ (ಪಕ್ಷಾಂತರ ನಿಷೇಧ) ಅಧಿನಿಯಮ 4 (2)(|||) ರನ್ವಯ ತಕ್ಷಣದಿಂದ ಜಾರಿಗೆ ಬರುವಂತೆ ನೆಲಮಂಗಲ ನಗರಸಭೆಯ ಏಳು ಸದಸ್ಯರನ್ನು ಅನರ್ಹಗೊಳಿಸಿ ಜಿಲ್ಲಾಧಿಕಾರಿ ಎ.ಬಿ. ಬಸವರಾಜು ಅವರು ಆದೇಶಿಸಿದ್ದಾರೆ. ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಹುದ್ದೆಗೆ 2025ರ ಫೆಬ್ರುವರಿ 13ರಂದು ನಡೆದ ಚುನಾವಣೆಯಲ್ಲಿ, ಜೆಡಿಎಸ್ ಚಿಹ್ನೆ ಅಡಿ ಸದಸ್ಯರಾಗಿ ಆಯ್ಕೆಯಾಗಿದ್ದ ಸದಸ್ಯರು ಪಕ್ಷವು ಜಾರಿಗೊಳಿಸಿದ್ದ ವಿಪ್ ಉಲ್ಲಂಘಿಸಿದ್ದರು. ಜೆಡಿಎಸ್ ಪಕ್ಷದ ಅಭ್ಯರ್ಥಿಗಳಿಗೆ ಮತ ಚಲಾಯಿಸದೇ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಮತ ಚಲಾಯಿಸಿ ಚುನಾವಣಾ ಅಕ್ರಮ ಎಸಗಿರುತ್ತಾರೆ ಎಂದು ಆರೋಪಿಸಿ ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಮುನೇಗೌಡ ಅವರು 2025ರ ಮಾರ್ಚ್ 3ರಂದು ಪಕ್ಷಾಂತರ ನಿಷೇಧ ಕಾಯ್ದೆಯ ಸೆಕ್ಷನ್ 3 ಮತ್ತು 4ರ ಅಡಿ ಪೌರಾಯುಕ್ತರಿಗೆ ದೂರು ಸಲ್ಲಿಸಿದ್ದರು. ನಗರಸಭೆಯ ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನು ಆಯ್ಕೆ ಮಾಡಲು ನಡೆದ ಚುನಾವಣೆಯಲ್ಲಿ ತಮ್ಮ ಪಕ್ಷದ ಅಭ್ಯರ್ಥಿಗಳಿಗೆ ಮತ ಚಲಾಯಿಸಲು…
ತುಮಕೂರು: ತುಮಕೂರಿನಲ್ಲಿ ವಿದ್ಯಾರ್ಥಿಯೊಬ್ಬ ವಾಟ್ಸಾಪ್ ಸ್ಟೇಟಸ್ ಹಾಕಿ ಆತ್ಮಹತ್ಯೆ ಮಾಡಿಕೊಂಡಿರುವ ಸುದ್ದಿ ವರದಿಯಾಗಿದೆ. ಯುವಜನತೆ ಇಂತಹ ತೀವ್ರ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿರುವುದು ಸಮಾಜಕ್ಕೆ ದೊಡ್ಡ ಆತಂಕದ ವಿಷಯವಾಗಿದೆ. ಹೌದು ತುಮಕೂರು ಜಿಲ್ಲೆಯ ತುರವೆಕೆರೆ ತಾಲೂಕಿನ ಕೊಂಡಜ್ಜಿ ಬಳಿಯ ಗೋಪ್ಪೇನಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. 19 ವರ್ಷದ ಧನುಷ್ ನೀರಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ವಿದ್ಯಾರ್ಥಿ. ಡಿಪ್ಲೋಮಾ ವ್ಯಾಸಂಗ ಮಾಡುತ್ತಿದ್ದ. ಬೆಳಿಗ್ಗೆ ಕಾಲೇಜಿಗೆ ಹೋಗುತ್ತೇನೆ ಎಂದು ಮನೆಯಿಂದ ಹೋದವನು ಮನೆಗೆ ವಾಪಸ್ ಆಗಿಲ್ಲ. ಈ ವೇಳೆ ಕುಟುಂಬದವರು ಹುಡುಕಾಟ ನಡೆಸಿದಾಗ ಕಾಲೇಜಿನ ಹಿಂಭಾಗದಲ್ಲಿರುವ ಕಟ್ಟೆಯ ಬಳಿ ಧನುಷ್ ಬ್ಯಾಗ್, ಚಪ್ಪಲಿ, ಮೊಬೈಲ್ ಪತ್ತೆಯಾಗಿದೆ. ಅಲ್ಲಿಯೇ ನೀರಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತ್ಮಹತ್ಯೆಗೂ ಮುನ್ನ ಧನುಷ್ ವಾಟ್ಸಪ್ ಸ್ಟೇಟಸ್ ಹಾಕಿದ್ದಾನೆ. ನೀನೇ ಖುಷಿಯಾಗಿರು. ನಾನು ಪ್ರಪಂಚವನ್ನೇ ಬಿಟ್ಟು ಹೋಗುತ್ತೇನೆ ಎಂದು ಬರೆದುಕೊಂಡಿದ್ದಾನೆ.ತುರವೆಕೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ. ಘಟನೆಯ ಹಿನ್ನಲೆ ಸಾಮಾನ್ಯವಾಗಿ ಇಂತಹ ಪ್ರಕರಣಗಳಲ್ಲಿ ವಿದ್ಯಾರ್ಥಿಗಳು ತಮ್ಮ ಕೊನೆಯ ನಿರ್ಧಾರವನ್ನು ಅಥವಾ ಅದಕ್ಕೆ…
ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದಲ್ಲಿ ಇಂದು (ಫೆಬ್ರವರಿ 26, 2026) ನಡೆಯುತ್ತಿರುವ ಸಚಿವ ಸಂಪುಟ ಸಭೆಯು ರಾಜ್ಯದ ರಾಜಕೀಯ ಮತ್ತು ಆರ್ಥಿಕ ದೃಷ್ಟಿಯಿಂದ ಅತ್ಯಂತ ಮಹತ್ವದ್ದಾಗಿದೆ. ಮಾರ್ಚ್ 6 ರಂದು ಮಂಡನೆಯಾಗಲಿರುವ ರಾಜ್ಯ ಬಜೆಟ್‌ಗೆ ಮುನ್ನ ನಡೆಯುತ್ತಿರುವ ಈ ಸಭೆಯಲ್ಲಿ ಮುಖ್ಯಮಂತ್ರಿಯವರ ಮುಂದೆ ಹಲವು ಸವಾಲುಗಳಿವೆ. ಸಂಪುಟ ಸಭೆಯಲ್ಲಿ ಚರ್ಚೆಗೆ ಬರಬಹುದಾದ ಪ್ರಮುಖ ಸವಾಲುಗಳು ಇಲ್ಲಿವೆ: 1. ಉದ್ಯೋಗಾಕಾಂಕ್ಷಿಗಳ ಪ್ರತಿಭಟನೆ ಮತ್ತು ನೇಮಕಾತಿ ಸವಾಲು ರಾಜ್ಯದಲ್ಲಿ ಖಾಲಿ ಇರುವ ಸುಮಾರು 2.5 ಲಕ್ಷ ಸರ್ಕಾರಿ ಹುದ್ದೆಗಳನ್ನು ಹಂತಹಂತವಾಗಿ ಭರ್ತಿ ಮಾಡುವುದಾಗಿ ಸಿಎಂ ಭರವಸೆ ನೀಡಿದ್ದಾರೆ. ಧಾರವಾಡ ಸೇರಿದಂತೆ ವಿವಿಧೆಡೆ ನಡೆಯುತ್ತಿರುವ ಯುವಜನರ ಪ್ರತಿಭಟನೆಗೆ ಸ್ಪಂದಿಸಿ, ಕನಿಷ್ಠ 56,000 ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದ ವೇಳಾಪಟ್ಟಿಯನ್ನು (Calendar of Events) ಬಿಡುಗಡೆ ಮಾಡುವ ಒತ್ತಡ ಸರ್ಕಾರದ ಮೇಲಿದೆ. 2. ಬಜೆಟ್ ಸಿದ್ಧತೆ ಮತ್ತು ಆರ್ಥಿಕ ಸಮತೋಲನ ಸಿದ್ದರಾಮಯ್ಯನವರು ತಮ್ಮ ದಾಖಲೆಯ 17ನೇ ಬಜೆಟ್ ಮಂಡಿಸಲು ಸಿದ್ಧತೆ ನಡೆಸುತ್ತಿದ್ದಾರೆ. ಆದರೆ ರಾಜ್ಯದ ಆರ್ಥಿಕ ಸ್ಥಿತಿ…
ರಾಯಚೂರು : ರಾಯಚೂರು ಜಿಲ್ಲೆಯ ದೇವದುರ್ಗ ಕ್ಷೇತ್ರದ ಜೆಡಿಎಸ್ ಶಾಸಕಿ ಕರೆಮ್ಮ ಜಿ. ನಾಯಕ ಅವರ ವಿರುದ್ಧ ಕೇಳಿಬಂದಿರುವ 47% ಕಮಿಷನ್ ಆರೋಪ ಈಗ ರಾಜ್ಯ ರಾಜಕಾರಣದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಈ ಗಂಭೀರ ಆರೋಪಕ್ಕೆ ಸಂಬಂಧಿಸಿದಂತೆ ಸ್ವತಃ ಶಾಸಕಿಯವರೇ ಮಾಧ್ಯಮಗಳ ಮುಂದೆ ಬಂದು ಸ್ಪಷ್ಟನೆ ನೀಡಿದ್ದಾರೆ. ಹೌದು ಜೆಡಿಎಸ್ ಶಾಸಕಿ ಕರೆಮ್ಮ ಅವರು ಪ್ರತಿ ಕಾಮಗಾರಿಯಲ್ಲಿ 47% ಕಮಿಷನ್ ಪಡೆದಿದ್ದಾರೆ ಎಂದು ದೇವದುರ್ಗ ತಾಲೂಕು ಜೆಡಿಎಸ್ ಅಧ್ಯಕ್ಷ ಬುಡ್ಡನಗೌಡ ಶಾಸಕಿ ಕ್ರಮ ನಾಯಕ್ ವಿರುದ್ಧ ಗಂಭೀರವಾದ ಆರೋಪ ಮಾಡಿದ್ದಾರೆ. ಈ ಆರೋಪವನ್ನು ತೊಳಿ ಹಾಕಿರುವ ಶಾಸಕಿ ನಾನು ಒಂದು ಪೈಸೆಯೂ ಕಮಿಷನ್ ಪಡೆದಿಲ್ಲ ಕಮಿಷನ್ ಪಡೆಯುವ ದರಿದ್ರ ನನಗೆ ಬಂದಿಲ್ಲ. ಎಲ್ಲಾ ಕಳೆದುಕೊಂಡು ರಾಜಕೀಯಕ್ಕೆ ಬಂದಿರುವುದು ನಾನು ಅಂತಹ ದರಿದ್ರ ತನ್ನ ನನಗೆ ಬಂದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಪ್ರಕರಣದ ಪ್ರಮುಖ ಅಂಶಗಳು ಇಲ್ಲಿವೆ: 1. ಏನಿದು ಆರೋಪ? ದೇವದುರ್ಗ ಕ್ಷೇತ್ರದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳಲ್ಲಿ ಶಾಸಕಿ ಕರೆಮ್ಮ…
ಬೆಂಗಳೂರು : ಬೆಂಗಳೂರಲ್ಲಿ ನಿರ್ದೇಶಕ ಅನೀಶ್ ಕಿಡ್ನ್ಯಾಪ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ 11 ಆರೋಪಿಗಳನ್ನು ಇದೀಗ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಬೆಂಗಳೂರಿನ ಆಡುಗೋಡಿ ಠಾಣಾ ವ್ಯಾಪ್ತಿಯಲ್ಲಿ ಈ ಒಂದು ಘಟನೆ ನಡೆದಿತ್ತು. ಜೀವನದ ಭಾಷೆ ಎಂಬ ಸಿನಿಮಾವನ್ನು ಅನಿಶ್ ನಿರ್ದೇಶನ ಮಾಡುತ್ತಿದ್ದ ಹಿಂದೆ ಭರವಸೆಯ ಜೀವನ ಎಂಬ ಶಾರ್ಟ್ ಮೂವಿ ಸಹ ಮಾಡಿದ್ದ. ನಂತರ ಜೀವನದ ಭಾಷೆ ಎಂಬ ಸಿನಿಮಾ ನಿರ್ದೇಶನ ಮಾಡುತ್ತಿದ್ದ. ಆದರೆ ಕಾರಣಾಂತರಗಳಿಂದ ಸಿನೆಮಾ ನಿಲ್ಲಿಸಿ ಮುಂಬೈಗೆ ಶಿಫ್ಟ್ ಆಗಿದ್ದ. ಬಳಿಕ ನಟಿ ಐಶ್ವರ್ಯಗೆ ಕಾರು ಮಾರಾಟದ ಬಗ್ಗೆ ತಿಳಿಸಿದ್ದ. ನಟಿ ಐಶ್ವರ್ಯ ಮೂಲಕ ಆರೋಪಿಗಳು ಮಾಹಿತಿ ಕಲೆಹಾಕಿದ್ದಾರೆ. ದುನಿಯಾ ವಿಜಿ ಅಭಿನಯದ ಭೀಮ ಚಿತ್ರದಲ್ಲಿ ಐಶ್ವರ್ಯ ನಟಿಸಿದ್ದರು. ಕಾರು ಖರೀದಿ ಮಾಡುವುದಾಗಿ ಆರೋಪಿಗಳು ಅನೀಶನನ್ನು ಸಂಪರ್ಕಿಸಿದ್ದಾರೆ.ನಟಿಯ ಮೂಲಕ ನಿರ್ದೇಶಕನನ್ನು ಬೆಂಗಳೂರಿಗೆ ಕರೆಸಿದ್ದಾರೆ. ಕಾರು ಖರೀದಿ ಮಾಡುತ್ತೇವೆ ಎಂದು ಕರೆಸಿ ಕಿಡ್ನಾಪ್ ಮಾಡಿದ್ದರು. ಬೆಳಕಿಗೆ ಬಂದಿದೆ ನಿರ್ದೇಶಕ ಅನೀಶ್ ಜೊತೆಗೆ ಐದು ಲಕ್ಷ ಹಣದ ವಿಚಾರಕ್ಕೆ ಜಗಳ ಆಗಿತ್ತು.…
ತುಮಕೂರು : ಕೋತಿ ಅಡ್ಡ ಬಂದ ಪರಿಣಾಮ ಸಡನ್ ಆಗಿ ಬ್ರೇಕ್ ಹಾಕಿದಕ್ಕೆ ಆಟೋ ಪಲ್ಟಿಯಾಗಿದೆ ಪಲ್ಟಿಯಾದ ಆಟೋಗೆ ಕಾರು ಡಿಕ್ಕಿ ಹೊಡೆದು ಆಟೋ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ತುಮಕೂರು ಜಿಲ್ಲೆಯ ಕೊರಟಗೆರೆಯ ಜಂಪೇನಹಳ್ಳಿ, ಕೆರೆಯ ಬಳಿ ಈ ಒಂದು ಅಪಘಾತ ಸಂಭವಿಸಿದೆ. ಮೃತ ವ್ಯಕ್ತಿಯನ್ನು ಮಹೇಂದ್ರ ಕುಮಾರ್ ಎಂದು ತಿಳಿದುಬಂದಿದೆ . ರಸ್ತೆಯಲ್ಲಿ ಕೋತಿ ಏಕಾಎಕಿ ಅಡ್ಡ ಬಂದಿದೆ. ಈ ವೇಳೆ ಮಹೇಂದ್ರ ಕುಮಾರ್ ಸಡನ್ ಆಗಿ ಬ್ರೇಕ್ ಹೊಡೆದಾಗ ಆಟೋ ಪಲ್ಟಿ ಆಗಿದೆ. ಆಗ ಎದುರುಗಡೆ ಬರುತ್ತಿದ್ದ ಕಾರು ಆಟೋಗೆ ಡಿಕ್ಕಿ ಹೊಡೆದ ಪರಿಣಾಮ ಆಟೋ ಚಾಲಕ ಮಹೇಂದ್ರ ಕುಮಾರ್ ಸ್ಥಳದಲ್ಲಿ ಸಾವನ್ನಪ್ಪಿದ್ದಾರೆ. ಈ ಕುರಿತು ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿದೆ.
ಬೆಂಗಳೂರು : ಗೃಹ ಸಚಿವ ಜಿ.ಪರಮೇಶ್ವರ ಮುಂದಿನ ಸಿಎಂ ಎಂದು ಘೋಷಣೆ ವಿಚಾರವಾಗಿ ಪರಮೇಶ್ವರ ಅವರು ಸುಧೀರ್ಘಕಾಲ ಕೆಪಿಸಿಸಿ ಅಧ್ಯಕ್ಷರಾಗಿದ್ದವರು. 2013ರಲ್ಲಿ ಯಾವುದೇ ಗ್ಯಾರಂಟಿ ಇಲ್ಲದೆ ಅಧಿಕಾರಕ್ಕೆ ತಂದಿದ್ದರು ಎಂದು ಬೆಂಗಳೂರಿನಲ್ಲಿ ಕಾಂಗ್ರೆಸ್ ಎಂಎಲ್ಸಿ ಬಿಕೆ ಹರಿಪ್ರಸಾದ್ ಹೇಳಿಕೆ ನೀಡಿದರು. ಕಾಂಗ್ರೆಸ್ ಪಕ್ಷ ಸುಳ್ಳು ಆಶ್ವಾಸನೆ ಕೊಟ್ಟು ಅಧಿಕಾರಕ್ಕೆ ಬಂದಿರಲಿಲ್ಲ. ಕಾರಣಾಂತರದಿಂದ ಅವರು ಸೋತಿದ್ದರು. ಹಾಗಾಗಿ ಸಿಎಂ ಆಗಲು ಆಗಲಿಲ್ಲ ಕಾಂಗ್ರೆಸ್ಸಿನ 140 ಶಾಸಕರು ಕೂಡ ಸಿಎಂ ಆಗಲು ಅರ್ಹರೆ. ಆದರೆ ಇದು ಶಾಸಕರು ಹೈಕಮಾಂಡ್ ತೀರ್ಮಾನ ಮಾಡುವ ವಿಚಾರವಾಗಿದೆ ಎಂದು ಹೇಳಿಕೆ ನೀಡಿದರು.














