Author: kannadanewsnow05

ಹಾವೇರಿ : ರಾಜ್ಯದಲ್ಲಿ ಆರ್ ಎಸ್ ಎಸ್ ಚಟುವಟಿಕೆಗಳಿಗೆ ಕಡಿವಾಣ ಹಾಗುವ ವಿಚಾರಕ್ಕೆ ಸಂಬಂಧಪಟ್ಟಂತೆ ಇಂತಹ ಪತ್ರಗಳು ಬಂದು ಹೋಗಿವೆ ಆದರೆ ಇದು ಪ್ರಿಯಾಂಕ ಖರ್ಗೆ ಗೊತ್ತಿಲ್ಲ ಎಂದು ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲೂಕಿನ ಬಂಕಾಪುರದಲ್ಲಿ ಪ್ರಹ್ಲಾದ ಜೋಶಿ ಹೇಳಿಕೆ ನೀಡಿದರು. ಮುತ್ತಾತ ಅವರು ಆಕ್ರಮಣಕ್ಕೆ ಒಳಗಾಗಿದ್ದರು. ರಾಹುಲ್ ಗಾಂಧಿ ಮುತ್ತಾತ ನರಸಿಂಹರಾವ್ ಕಡಿವಾಣಕ್ಕೆ ಮುಂದಾಗಿದ್ದರು. ದೇಶದಲ್ಲಿ ಮೂರನೇ ಸಲ ಬಿಜೆಪಿ ಅಧಿಕಾರಕ್ಕೆ ಬಂದಿದೆ ಒಂದು ವೇಳೆ ಆರ್ ಎಸ್ ಎಸ್ ಕೆ ನಿರ್ಬಂಧ ಹಾಕಿದರೆ ನಾವು ಸುಮ್ಮನಿರಲ್ಲ ಕುಕ್ಕರ್ ಹಿಡಿದವರು, ತಲ್ವಾರ್ ಇವರಿಗೆ ಬ್ರದರ್ಸ್ ಇದ್ದಂತೆ. ತಲ್ವಾರ್ ಹಿಡಿದು ತಿರುಗಾಡುವವರನ್ನು ಬಂಧಿಸಿ ನೋಡೋಣ ಎಂದು ಸವಾಲು ಹಾಕಿದರು. ಆರ್ ಎಸ್ ಎಸ್ ಭಾರತದ ತಾಲಿಬಾನಿಗಳು ಎಂದು ಎಂಎಲ್ಸಿ ಬಿ ಕೆ ಹರಿಪ್ರಸಾದ್ ಹೇಳಿಕೆ ವಿಚಾರವಾಗಿ ಆರ್ ಎಸ್ ಎಸ್ ಗೆ ಬೈದರೆ ಮಂತ್ರಿ ಮಾಡುತ್ತಾರೆ ಅಂತ ಹರಿಪ್ರಸಾದ್ ಅಂದುಕೊಂಡಿದ್ದಾರೆ. ಸಿದ್ದರಾಮಯ್ಯ ಅವರು ಯಾವ ಚಡ್ಡಿ ಹಾಕ್ಕೊಂಡಿದ್ದನ್ನ ತಿಳಿಯಬೇಕು. ಅದು ಖಾಕಿ…

Read More

ಬೆಂಗಳೂರು : ಬೆಂಗಳೂರಲ್ಲಿ ಘೋರ ದುರಂತ ಸಂಭವಿಸಿದ್ದು, ಮನೆಯ ಮೇಲೆ ಕ್ರೇನ್ ಟವರ್ ಬಿದ್ದು ಭಾರೀ ಅನಾಹುತ ಒಂದು ಸಂಭವಿಸಿದೆ. ಮನೆಯ ಮೇಲೆ ಬಿದ್ದ ಕ್ರೇನ್ ಟವರ್ ನಿಂದ ಒಬ್ಬನ ಸ್ಥಿತಿ ಗಂಭೀರವಾಗಿದ್ದು ಘಟನೆಯಲ್ಲಿ ಮನೆಯಲ್ಲಿದ್ದ ಐವರಿಗೆ ಕೆಆರ್ ಪುರಂ ನಲ್ಲಿ ಬೃಹತ್ ಕ್ರೇನ್ ಒಂದು ಕುಸಿದು ಬಿದ್ದಿದೆ. ಕ್ರೇನ್ ರಿಪೇರಿ ಮಾಡಲು ಬಳಸುವ ಲ್ಯಾಡರ್ ಗಳು ಕುಸಿತವಾಗಿವೆ, ಮೆಡಹಳ್ಳಿ ಬಡಾವಣೆಯಲ್ಲಿ ಮಧ್ಯಾಹ್ನ ಈ ಒಂದು ಘಟನೆ ನಡೆದಿದ್ದು ಬಾಡಿಗೆ ಮನೆಯಲ್ಲಿ ನೆಲೆಸಿದ ಇವರಿಗೆ ಗಂಭೀರವಾದ ಗಾಯಗಳಾಗಿದ್ದು, ಓರ್ವನ ಸ್ಥಿತಿ ಗಂಭೀರವಾಗಿದೆ.ಸದ್ಯಕ್ಕೆ ಅವಲಹಳ್ಳಿ ಠಾಣೆ ಪೋಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದು ಪರಿಶೀಲನೆ ನಡೆಸುತ್ತಿದ್ದಾರೆ

Read More

ಬೆಂಗಳೂರು : ಮಧ್ಯಪ್ರದೇಶ ರಾಜಸ್ಥಾನದಲ್ಲಿ ಕೆಮ್ಮಿನ ಸಿರಪ್ ಸೇವಿಸಿ 15ಕ್ಕೂ ಹೆಚ್ಚು ಮಕ್ಕಳ ಸರಣಿ ಸಾವಿನ ಬೆನ್ನಲ್ಲೇ, ಎಚ್ಚೆತ್ತುಕೊಂಡ ರಾಜ್ಯ ಸರ್ಕಾರ ಇದುವರೆಗೂ 390ಕ್ಕೂ ಹೆಚ್ಚು ಕೆಮ್ಮಿನ ಸಿರಪ್ ಸ್ಯಾಂಪಲ್ ತಪಾಸಣೆ ನಡೆಸಿದ್ದು, ಅವುಗಳಲ್ಲಿ ಯಾವುದೇ ರೀತಿಯಾದ ನೆಗೆಟಿವ್ ಅಂಶ ವರದಿಯಾಗಿಲ್ಲ ಎಂದು ಆರೋಗ್ಯ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ಸ್ಪಷ್ಟಪಡಿಸಿದರು. ಬೆಂಗಳೂರಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೆಮ್ಮಿನ ಸಿರಪ್ ನಿಷೇಧ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, 390 ಸ್ಯಾಂಪಲ್ ತಪಾಸಣೆ ಮಾಡಿಸುತ್ತಿದ್ದೇವೆ. ವರದಿಯ ಯಾವುದರಲ್ಲೂ ನೆಗೆಟಿವ್ ಬಂದಿಲ್ಲ. ಎಲ್ಲಾ ಡ್ರಗ್ ಮ್ಯಾನಿಫ್ಯಾಕ್ಟರ್​ಗಳ ಮಾನದಂಡವನ್ನು ಮತ್ತೊಮ್ಮೆ ಪರಿಶೀಲನೆ ಮಾಡಲಾಗ್ತಿದೆ. ಅವ್ಯವಸ್ಥೆ ಇರಬಾರದು, ನಿಯಮ‌ ಪ್ರಕಾರ ಔಷಧ ತಯಾರು ಮಾಡಬೇಕು. ಅದನ್ನೆಲ್ಲಾ ಪರಿಶೀಲನೆ ಮಾಡಿಸುತ್ತಿದ್ದೇನೆ ಎಂದು ಸ್ಪಷ್ಟಪಡಿಸಿದರು.

Read More

ಕಲಬುರಗಿ : ರಾಜ್ಯದಲ್ಲಿ ಒಂದು ಕೋಟಿ ಪಡಿತರ ಚೀಟಿದಾರರು ಹೊಂದಿದ್ದು, ಅನ್ನಭಾಗ್ಯ ಯೋಜನೆಯಡಿ ಇಂದಿರಾ ಕಿಟ್‌ನಲ್ಲಿ ಎರಡು ಕೆಜಿ ತೊಗರಿ ವಿತರಣೆಯಿಂದ ತೊಗರಿ ಬೆಳೆಗಾರರಿಗೆ ದೊಡ್ಡ ಪ್ರಮಾಣದ ಲಾಭವಾಗಲಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ್ ಹೇಳಿದರು. ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯಾದಾದ್ಯಂತ ತೊಗರಿ ವಿತರಣೆಗೆ ಟೆಂಡ‌ರ್ ಕರೆದು ಬೆಲೆ ನಿಗದಿಪಡಿಸಿ ವಿತರಿಸಲು ಕ್ರಮವಹಿಸಲಿದ್ದೇವೆ. ಪ್ರತಿ ಕಾರ್ಡ್ ಗೆ ಎರಡು ಕೆಜಿ ತೊಗರಿ ಬೇಳೆ ಸಿಗಲಿವೆ. ಇದ್ದಾರೆ. ಹೀಗಾಗಿ, ದೊಡ್ಡ ಪ್ರಮಾಣದಲ್ಲಿ ತೊಗರಿ ಖರೀದಿ ಆಗಲಿದೆ ಎಂದು ಮಾಹಿತಿ ನೀಡಿದರು. ಬೀದರ್, ಯಾದಗಿರಿ, ರಾಯಚೂರು, ಬಾಗಲಕೋಟ, ವಿಜಯಪುರ ಹಾಗೂ ಕಲಬುರಗಿ ‘ಯಲ್ಲಿ ಬೆಳೆ ನಷ್ಟದ ಸರ್ವೇ ಕಾರ್ಯ ನಡೆದಿದೆ. ಶೇ. 70 ಸರ್ವೇ ಮುಗಿದಿದೆ. ಕಲಬುರಗಿಯಲ್ಲಿ ವಿಮೆ ಹಣ 500 ಕೋಟಿಗೂ ಹೆಚ್ಚು ಪರಿಹಾರ ಸಿಗುವ ನಿರೀಕ್ಷೆ ಇದೆ. ವಾಣಿಜ್ಯ ಬೆಳೆಗಳಿಗೆ 200 ಕೋಟಿ ಬರುವ ನಿರೀಕ್ಷೆ ಇದೆ. ರೈತರಿಗೆ ಕೈಗೆ ಬಂದ ತೂತು ಬಾಯಿಗೆ ಬರದಂತೆ…

Read More

ಶಿವಮೊಗ್ಗ : ಕೇಂದ್ರ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಗೆ ಬಿಸ್ಕೆಟ್ ಪ್ಯಾಕೆಟ್‌ಗಳಲ್ಲಿ ಅಕ್ರಮವಾಗಿ ಗಾಂಜಾ ಮತ್ತು ಸಿಗರೇಟ್ ಕೊಂಡೊಯ್ಯಲು ಯತ್ನಿಸಿದ ಇಬ್ಬರು ಯುವಕರನ್ನು ಜೈಲು ಸಿಬ್ಬಂದಿ ಬಂದಿಸಿದ್ದಾರೆ. ಭದ್ರಾವತಿ ನಗರದ ನಿವಾಸಿಗಳಾದ ರಾಹಿಲ್ (19) ಹಾಗೂ ತಸೀರುಲ್ಲಾ (19) ಬಂಧಿತ ಆರೋಪಿಗಳು. ಶನಿವಾರ ಸಂಜೆ 4.30ರ ಸುಮಾರಿಗೆ ಕೈದಿ ಮೊಹಮ್ಮದ್ ಗೌಸ್ ಅಲಿಯಾಸ್ ಜಂಗ್ಲಿ ಎಂಬಾತನ ಸಂದರ್ಶನಕ್ಕೆಂದು ಆಗಮಿಸಿದ್ದ ಈ ಇಬ್ಬರು ಮೂರು ವೀಟಾ ಮಾರಿ ಗೋಲ್ಡ್ ಬಿಸ್ಕೆಟ್ ಪ್ಯಾಕೆಟ್‌ಗಳನ್ನು ತಂದಿದ್ದರು. ಅನುಮಾನಗೊಂಡ ಜೈಲು ಸಿಬ್ಬಂದಿ ಅವನ್ನು ಪರಿಶೀಲಿಸಿದಾಗ, ಕಪ್ಪು ಗಮ್ ಟೇಪ್‌ನಲ್ಲಿ ಸುತ್ತಿದ ನಿಷಿದ್ಧ ವಸ್ತುಗಳು ಪತ್ತೆಯಾದವು. ಅವುಗಳಲ್ಲಿ 1 ಗಾಂಜಾ ಪ್ಯಾಕೆಟ್ ಮತ್ತು 2 ಸಿಗರೇಟ್ ಪ್ಯಾಕೆಟ್‌ಗಳು ಇರುವುದು ದೃಢಪಟ್ಟಿತು. ನಿಷೇಧಿತ ವಸ್ತುಗಳನ್ನು ಜಪ್ತಿ ಮಾಡಿದ ಜೈಲು ಸಿಬ್ಬಂದಿ ಆರೋಪಿಗಳನ್ನು ತುಂಗಾನಗರ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ. ಕೇಂದ್ರ ಜೈಲು ಅಧೀಕ್ಷಕ ಡಾ. ರಂಗನಾಥ್ ಅವರ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಬಂಧಿತ ಯುವಕರನ್ನು ವಿಚಾರಣೆಗೆ ಒಳಪಡಿಸಿದ್ದಾರೆ.

Read More

ಬೆಂಗಳೂರು : ಪ್ರಧಾನ ಮಂತ್ರಿ ಆಯುಷ್ಮಾನ್ ಭಾರತ್ ಆರೋಗ್ಯ ಮೂಲ ಸೌಕರ್ಯ ಮಿಷನ್ ಯೋಜನೆಯಡಿ 5 ಕ್ರಿಟಿಕಲ್ ಕೇರ್ ಬ್ಲಾಕ್‌ಗೆ ಅಗತ್ಯ ಇರುವ 168 ಸಿಬ್ಬಂದಿ ನೇಮಕಕ್ಕೆ ಆರೋಗ್ಯ ಇಲಾಖೆ ಅನುಮೋದನೆ ನೀಡಿದೆ. ವಿಜಯಪುರ (100 ಹಾಸಿಗೆ), ತುಮಕೂರು (100 ಹಾಸಿಗೆ), ಕೋಲಾರ (50 ಹಾಸಿಗೆ), ಉಡುಪಿ (50 ಹಾಸಿಗೆ) ಮತ್ತು ಬೆಂಗಳೂರಿನ ಸಿ.ವಿ.ರಾಮನ್ ಆಸ್ಪತ್ರೆ (100 ಹಾಸಿಗೆ)ಗಳ ಕ್ರಿಟಿಕಲ್ ಕೇರ್ ಬ್ಲಾಕ್‌ಗಳು ಕಾರ್ಯನಿರ್ವಹಿಸುವಂತೆ ಮಾಡಲು ಸಿಬ್ಬಂದಿ ಅಗತ್ಯವಿದೆ. ಕ್ರಿಟಿಕಲ್ ಕೇರ್ ಬ್ಲಾಕ್‌ಗಳಿಗೆ ಅಗತ್ಯ ಇರುವ ಶಸ್ತ್ರಚಿಕಿತ್ಸಕರು, ಫಿಜಿಷಿಯನ್, ವಿಕಿರಣಶಾಸ್ತ್ರಜ್ಞ, ಶುಶೂಷಕರು, ಗ್ರೂಪ್ -ಡಿ ದರ್ಜೆ ಸೇರಿ ಎಂಟು ವಿಭಾಗಗಳ ಒಟ್ಟು 168 ನೌಕರರ ನೇಮಕಕ್ಕೆ ಅನುಮೋದನೆ ನೀಡಲಾಗಿದೆ.

Read More

ದಕ್ಷಿಣಕನ್ನಡ : ದಕ್ಷಿಣಕನ್ನಡ ಜಿಲ್ಲೆಯಲ್ಲಿ ಘೋರ ದುರಂತ ಸಂಭವಿಸಿದ್ದು, ಸೇಡಿಯಾಪು ಕೂಟೇಲು ಸಮೀಪ ಶಾಲೆ ಮುಗಿಸಿ ತೆರಳುತ್ತಿರುವಾಗ ಹೆಚ್ಚೇನು ದಾಳಿ ಮಾಡಿ ಮೂವರು ಗಾಯಗೊಂಡಿದ್ದು, ಈ ಪೈಕಿ ಓರ್ವ ಬಾಲಕಿ ಮೃತಪಟ್ಟಿದ್ದಾಳೆ. ಸೇಡಿಯಾಪು ಕೂಟೇಲು ನಿವಾಸಿ ದಿಶಾ (7) ಮೃತ ಬಾಲಕಿ. 5ನೇ ತರಗತಿ ಬಾಲಕಿ ಪ್ರತ್ಯಶ್ (10), ಸ್ಥಳೀಯ ನಿವಾಸಿ ನಾರಾಯಣ ಗೌಡ (55) ಗಾಯಗೊಂಡಿದ್ದಾರೆ. 10ರಂದು ಸಂಜೆ ವಾಹನದಿಂದ ಇಳಿದು ಹೋಗುತ್ತಿದ್ದ ಇಬ್ಬರು ವಿದ್ಯಾರ್ಥಿಗಳ ಮೇಲೆ ಇದ್ದಕ್ಕಿದ್ದಂತೆಯೇ ಹೆಚ್ಚೇನು ದಾಳಿ ಮಾಡಿದೆ. ಬೊಬ್ಬೆ ಕೇಳಿ ಸ್ಥಳೀಯರಾದ ನಾರಾಯಣ ಗೌಡ ರಕ್ಷಣೆಗೆ ತೆರಳಿದ್ದು ಅವರ ಮೇಲೆಯೂ ದಾಳಿ ನಡೆಸಿದೆ. ಮೂವರನ್ನು ಪುತ್ತೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು. ಗಂಭೀರ ಸ್ಥಿತಿಯಲ್ಲಿದ್ದ ಮಕ್ಕಳನ್ನು ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿಗೆ ವರ್ಗಾಯಿಸಲಾಗಿತ್ತು. ದಿಶಾ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾಳೆ. ಪ್ರತ್ಯೇಶ್ ಪರಿಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ. ನಾರಾಯಣ ಅವರು ಚೇತರಿಸಿಕೊಂಡಿದ್ದು, ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

Read More

ಬೆಳಗಾವಿ : ಬೆಳಗಾವಿಯಲ್ಲಿ ಘೋರ ದುರಂತ ಸಂಭವಿಸಿದ್ದು, ಪ್ರೀತ್ಸೆ, ಪ್ರೀತ್ಸೆ ಎಂದು ಬೆನ್ನು ಬಿದ್ದು ಕಾಡುತ್ತಿದ್ದ ಪಾಗಲ್ ಪ್ರೇಮಿಯ ಹುಚ್ಚಾಟದಿಂದ ಕಂಗೆಟ್ಟು ಮಾನಸಿಕವಾಗಿ ನೊಂದ ಯುವತಿ ನೇಣಿಗೆ ಕೊರಳೊಡ್ಡಿ ಆತ್ಮಹತ್ಯೆ ಮಾಡಿಕೊಂದಿರುವ ಘಟನೆ ಖಾನಾಪುರದ ದೇವಲತ್ತಿ ಗ್ರಾಮದಲ್ಲಿ ನಡೆದಿದೆ. ಅಶ್ವಿನಿ ಕೋಲಕಾರ (17) ಎಂಬುವಳೇ ಮೃತ ದುರ್ದೈವಿ. ನಂದಳಿ ಗ್ರಾಮದ ರತನ ಪಾಟೀಲ(26) ಎಂಬ ಯುವಕನಿಗೆ ದೇವಲತ್ತಿ ಗ್ರಾಮದ ತನಗಿಂತಲೂ 10 ವರ್ಷ ಚಿಕ್ಕ ವಯಸ್ಸಿನ ಈಕೆ ಮೇಲೆ ಮನಸ್ಸಾಗಿದೆ. ಆಕೆಗೆ ತನ್ನ ಪ್ರೇಮ ನಿವೇದನೆ ಮಾಡಿಕೊಂಡಿದ್ದಾನೆ. ಆದರೆ ಅವನ ಪ್ರೀತಿಗೆ ಸಕಾರಾತ್ಮಕವಾಗಿ ಸ್ಪಂದಿಸಲಿಲ್ಲ. ಇದರಿಂದ ಕೆರಳಿದ ಆತ ಆಕೆಯನ್ನು ಫಾಲೋ ಮಾಡಿ ಬಂದು ಸತಾಯಿಸುವುದಕ್ಕೆ ಶುರು ಮಾಡಿದ್ದಾನೆ. ಕಳೆದೊಂದು ವರ್ಷದಿಂದಲೂ ಇದೇ ನಡೆದಿತ್ತು. ನೀನು ನನ್ನನ್ನು ಒಪ್ಪಿಕೊಳ್ಳಲೇಬೇಕು. ನಾನು ಕರೆದಲ್ಲಿಗೆ ಬರಬೇಕು. ನನ್ನೊಂದಿಗೆ ಸಹಕರಿಸಬೇಕು ಎಂದು ಒತ್ತಾಯಿಸಲು ಶುರು ಮಾಡಿದ್ದಾನೆ. ಒಪ್ಪದೆ ಇದ್ದಾಗ ನಮ್ಮಿಬ್ಬರ ನಡುವೆ ಸಂಬಂಧವಿದೆ ಎಂದು ಎಲ್ಲರಿಗೂ ಹೇಳುತ್ತೇನೆ ಎಂದು ಧಮ್ಮಿ ಹಾಕಿದ್ದಾನೆ. ನಿರಂತರ ಕಿರುಕುಳದಿಂದ ಮಾನಸಿಕವಾಗಿ…

Read More

ಬೆಂಗಳೂರು : ಆರ್ ಎಸ್ ಎಸ್ ನೂರು ವರ್ಷ ಭರ್ತಿ ಬೆನ್ನಲ್ಲೇ ಬಿಗ್ ಶಾಕ್ ಎದುರಾಗಿದ್ದು, ಆರ್ ಎಸ್ ಎಸ್ ಚಟುವಟಿಕೆಗಳಿಗೆ ರಾಜ್ಯ ಸರ್ಕಾರ ಬ್ರಿಕ್ ಹಾಕುತ್ತಾ? ಎನ್ನುವ ಕುರಿತು ಚಿಂತನೆ ನಡೆಯುತ್ತಿದೆ. ಆರ್ ಎಸ್ ಎಸ್ ಚಟುವಟಿಕೆಗಳಿಗೆ ನಿರ್ಬಂಧದ ಬಗ್ಗೆ ಗಂಭೀರ ಚಿಂತನೆ ನಡೆಯುತ್ತಿದೆ. ಸಾರ್ವಜನಿಕ ಸರಕಾರಿ ಸ್ಥಳಗಳಲ್ಲಿ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಸರಕಾರ ಚಿಂತನೆ ನಡೆಸುತ್ತಿದೆ ಎಂದು ತಿಳಿದುಬಂದಿದೆ. ಹೌದು ಆರ್ ಎಸ್ ಎಸ್ ಚಟುವಟಿಕೆಗಳಿಗೆ ಕಡಿವಾಣದ ಬಗ್ಗೆ ಸಿಎಂ ಸಿದ್ದರಾಮಯ್ಯಗೆ ಕೆಲವು ಸಚಿವರು ಪ್ರಸ್ತಾವನೆ ಸಲ್ಲಿಸಿದ್ದಾರೆ. ಶಾಲಾ ಕಾಲೇಜು ಆವರಣ, ಉದ್ಯಾನವನ, ಸರ್ಕಾರಿ ಮೈದಾನ, ವಿವಿಧ ಹಾಸ್ಟೆಲ್ ಕ್ಯಾಪಸ್ ಗಳಲ್ಲಿ ಚಟುವಟಿಕೆಗಳಿಗೆ ಬ್ರೇಕ್ ಹಾಕಲು ರಾಜ್ಯ ಸರ್ಕಾರ ಮುಂದಾಗಿದೆ. ಆರ್ ಎಸ್ ಎಸ್ ಚಟುವಟಿಕೆಗಳಿಗೆ ನಿರ್ಬಂಧಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ. ಈಗಾಗಲೇ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ವಿವಿಧ ಹಾಸ್ಟೆಲ್ ಮತ್ತು ಕ್ಯಾಂಪಸ್ ಗಳಲ್ಲಿ ಬ್ರೇಕ್ ಹಾಕಲು ಸರ್ಕಾರ ಮುಂದಾಗಿದೆ. ಇದೆ ವಿಚಾರವಾಗಿ ಸಚಿವ ಪ್ರಿಯಾಂಕ್ ಖರ್ಗೆ…

Read More

ಬೆಂಗಳೂರು : ಮದುವೆಗೆ ನಿರಾಕರಿಸಿದ ಯುವತಿಯನ್ನು ಅಪಹರಿಸಿದ್ದ ಐವರನ್ನು ಇದೀಗ ಅರೆಸ್ಟ್ ಮಾಡಲಾಗಿದೆ. ಬೆಂಗಳೂರಿನ ಸುಬ್ರಮಣ್ಯಪುರ ಠಾಣೆ ಪೋಲೀಸರು ಐವರು ಆರೋಪಗಳನ್ನು ಅರೆಸ್ಟ್ ಮಾಡಿದ್ದಾರೆ. ರಂಗನಾಥ, ರಾಜೇಶ್, ಚಂದನ್,ಶ್ರೇಯಸ್ ಹಾಗೂ ಮಂಜುನಾಥ್ ಬಂಧಿತ ಆರೋಪಿಗಳು ಎಂದು ತಿಳಿದು ಬಂದಿದ್ದು, ಮಾರಕಾಸ್ತ್ರ ಸಮೇತ ಆಟೋ ಬೈಕ್ ನಲ್ಲಿ ಬಂದು ಯುವತಿಯನ್ನು ಅಪಹರಿಸಿದ್ದಾರೆ. ಯುವತಿ ಅಪಹರಿಸಿದ್ಧ ಹನ್ನೆರಡು ಗಂಟೆಯೊಳಗೆ ಪೊಲೀಸರು ಆರೋಪಿಗಳ ಹೇಡೆಮುರಿ ಕಟ್ಟಿದ್ದಾರೆ. ಯುವತಿಯನ್ನು ರಕ್ಷಿಸಿ, ಪೊಲೀಸರು ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ. ಚಿಕ್ಕಲ್ಲಸಂದ್ರದಲ್ಲಿ ವಾಸವಿದ್ದ ಯುವತಿಯನ್ನು ಈ ಒಂದು ಗ್ಯಾಂಗ್ ಕಿಡ್ಯಾಪ್ ಮಾಡಿತ್ತು. ಬುಧವಾರ ಮನೆಯ ಬಳಿಗೆ ಯುವತಿಯನ್ನು ಕಿಡ್ನಾಪ್ ಮಾಡಿದ್ದರು. ಕಿಡ್ನಾಪ್ ಆಗಿದ್ದ ಯುವತಿಗೆ ಆರೋಪಿ ರಂಗನಾಥ್ ಪರಿಚಯವಿದ್ದ ಎನ್ನಲಾಗಿದೆ. ಬೈಕ್ ಮೆಕ್ಯಾನಿಕ್ ಆಗಿ ಆರೋಪಿ ರಂಗನಾಥ್ ಕೆಲಸ ಮಾಡುತ್ತಿದ್ದ. ಕೊಲೆ ಪ್ರಕರಣ ಒಂದರಲ್ಲಿ ಜೈಲಿಗೆ ಸಹ ಹೋಗಿ ಬಂದಿದ್ದ. ಜೈಲಿನಿಂದ ಬಂದ ನಂತರ ಮದುವೆಯಾಗುವಂತೆ ಯುವತಿಗೆ ಒತ್ತಡ ಹೇರಿದ್ದಾನೆ ಮನೆಯ ಬಳಿ ಹೋಗಿ ಗಲಾಟೆ ಮಾಡಿದ್ದಾನೆ. ಮದುವೆ ಮಾಡಿಕೊಡಲು ಯುವತಿ…

Read More