Subscribe to Updates
Get the latest creative news from FooBar about art, design and business.
Author: kannadanewsnow05
ಬೆಂಗಳೂರು : ಇತ್ತೀಚಿಗೆ ಕಾಂಗ್ರೆಸ್ ಪಕ್ಷದಲ್ಲಿ ಡಿನ್ನರ್ ಪಾಲಿಟಿಕ್ಸ್ ಹೆಚ್ಚಾಗಿದೆ. ಕಳೆದ ಕೆಲವು ದಿನಗಳ ಹಿಂದೆ ಕಾಂಗ್ರೆಸ್ ನ ಸಚಿವರಿಗೆ ಶಾಸಕರಿಗೆ ಡಿಸಿಎಂ ಡಿಕೆ ಶಿವಕುಮಾರ್ ಡಿನ್ನರ್ ಯೋಜನೆ ಮಾಡಿದ್ದರು. ಅದಾದ ಬಳಿಕ ಅಧಿಕ ಮಾರ್ಚ್ 16 ರಂದು ಸಿಎಂ ಸಿದ್ದರಾಮಯ್ಯ ಕಾಂಗ್ರೆಸ್ ಪಕ್ಷದ ಸಚಿವರಿಗೆ ಹಾಗೂ ಶಾಸಕರುಗಳಿಗೆ ಡಿನ್ನರ್ ಪಾರ್ಟಿ ಆಯೋಜನೆ ಮಾಡಿದ್ದಾರೆ. ಹೌದು ಮಾರ್ಚ್ 16ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸರ್ಕಾರಿ ನಿವಾಸ ‘ಕಾವೇರಿ’ಯಲ್ಲಿ ಸಚಿವರಿಗೆ ಡಿನ್ನರ್ ಪಾರ್ಟಿ ಆಯೋಜಿಸಿರುವುದು ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ. ವಿಧಾನಸಭೆ ಅಧಿವೇಶನ ನಡೆಯುತ್ತಿರುವ ಸಮಯದಲ್ಲೇ ಕಾಂಗ್ರೆಸ್ ಆಂತರಿಕ ರಾಜಕೀಯ ಚಟುವಟಿಕೆಗಳು ಚುರುಕುಗೊಂಡಿರುವುದು ಗಮನಾರ್ಹವಾಗಿದೆ. ಈ ಡಿನ್ನರ್ ಸಭೆಯಲ್ಲಿ ಮುಂದಿನ ರಾಜಕೀಯ ತಂತ್ರಗಳ ಬಗ್ಗೆ ಚರ್ಚೆಯಾಗುವ ಸಾಧ್ಯತೆ ಇದೆ. ವಿಶೇಷವಾಗಿ ಸ್ಥಳೀಯ ಸಂಸ್ಥೆಗಳ ಚುನಾವಣೆ, ಜಿಬಿಎ ಚುನಾವಣೆಗಳ ತಯಾರಿ, ಒಳಮೀಸಲಾತಿ ವಿಚಾರ ಸೇರಿದಂತೆ ಹಲವು ಪ್ರಮುಖ ವಿಷಯಗಳ ಬಗ್ಗೆ ಚರ್ಚೆಯಾಗಬಹುದು ಎಂದು ಪಕ್ಷದ ಮೂಲಗಳು ತಿಳಿಸಿವೆ. ಇತ್ತೀಚೆಗೆ ಕೆಪಿಸಿಸಿ ಅಧ್ಯಕ್ಷರಾಗಿ 6…
ಟೆಹ್ರಾನ್ : ಇರಾನ್ ನೂತನ ಸುಪ್ರೀಂ ಲೀಡರ್ ಮೊಜ್ತಾಬಾ ಎರಡು ಕಾಲು ಕಟ್ ಆಗಿದೆ. ನೂತನ ಸುಪ್ರೀಂ ಲೀಡರ್ ಮೋಜ್ತಾಬಾ ಕೋಮಾಗೆ ಜಾರಿದ ಮಾಹಿತಿ ಲಭ್ಯವಾಗಿದೆ. ಸದ್ಯ ಟೆಹ್ರಾನ್ ಸಿನ ಯೂನಿವರ್ಸಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಮಾಹಿತಿ ಲಭ್ಯವಾಗಿದೆ. ಇನ್ನು ಇಸ್ರೇಲ್ ಮತ್ತು ಅಮೆರಿಕ ಹೊಡೆತಕ್ಕೆ ಟೆರಾನ್ ತತ್ತರವಾಗಿದ್ದು ಇಸ್ರೇಲ್ ಹೇರ್ ಸ್ಟ್ರೈಕ್ ಗೆ ಕಟ್ಟಡಗಳು ಚದರ ಚಿತ್ರವಾಗಿವೆ. ವಸತಿ ಪ್ರದೇಶಗಳನ್ನು ಸಂಪೂರ್ಣವಾಗಿ ಸರ್ವನಾಶ ಮಾಡಿದೆ ಟೆಹ್ರಾನನ ಹಲೋ ಪ್ರದೇಶಗಳು ಸಂಪೂರ್ಣವಾಗಿ ಸ್ಮಶಾನದಂತಾಗಿದೆ.
ಬೆಂಗಳೂರು : ಬೆಂಗಳೂರಿನಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ ವಿಚಾರವಾಗಿ ಗೃಹಬಳಕೆ ಸಿಲಿಂಡರ್ ಕೊರತೆ ಇಲ್ಲ ಎಂದು ಜಿಲ್ಲಾಧಿಕಾರಿ ಜಗದೀಶ್ ಸ್ಪಷ್ಟಪಡಿಸಿದ್ದಾರೆ. ಗೃಹ ಬಳಕೆದಾರರು ಯಾವುದೇ ಆತಂಕ ಪಡುವುದು ಬೇಡ ಸಾಕಷ್ಟು ಪ್ರಮಾಣದಲ್ಲಿ ಅಡುಗೆ ಅನಿಲದ ದಾಸ್ತಾನು ಇದೆ ಎಂದು ತಿಳಿಸಿದರು. ಹೀಗಾಗಿ ಎಲ್‌ಪಿಜಿ ಸಿಲಿಂಡರ್ ಬಗ್ಗೆ ಯಾರು ಆತಂಕಪಡಬಾರದು. ಏನಾದರೂ ಕುಂದು ಕೊರತೆ ಇದ್ದರೆ ಸಹಾಯವಾಣಿ ಸಂಪರ್ಕಿಸಿ ಸಹಾಯವಾಣಿ ಸಂಖ್ಯೆ 9611404384 ಗೆ ಕರೆ ಮಾಡಲು ಮನವಿ ಮಾಡಿದರು ಬೆಂಗಳೂರು ಡಿಸಿ ಜಗದೀಶ್ ಅವರು ಈ ಕುರಿತು ಮಾಧ್ಯಮ ಪ್ರಕಟಣೆ ಹೊರಡಿಸಿದ್ದಾರೆ.
ಬೆಂಗಳೂರು : ಇಸ್ರೇಲ್ ಹಾಗೂ ಇರಾನ್ ನಡುವೆ ಯುದ್ಧದ ಪರಿಣಾಮ ಇದೀಗ ಭಾರತದಾದ್ಯಂತ ಹಲವಾರು ರೀತಿಯಲ್ಲಿ ಪರಿಣಾಮ ಬೀರಿದ್ದು ಅದರಲ್ಲೂ ಪ್ರಮುಖವಾಗಿ ಸಿಲಿಂಡರ್ ಪೂರೈಕೆಯಲ್ಲಿ ವ್ಯತ್ಯಯ್ಯ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಸಿಲಿಂಡರ್ ವಿತರಕರ ಕಲಾಟ ನಡೆಯುತ್ತಿದೆಯಾ ಎಂದು ತನಿಖೆ ನಡೆಸಲು ರಾಜ್ಯಕ್ಕೆ ಸಿಬಿಐ ಎಂಟ್ರಿ ಕೊಟ್ಟಿದೆ. ಹೌದು ರಾಜ್ಯದ ಹಲವೆಡೆ ವಾಣಿಜ್ಯ ಸಿಲಿಂಡರ್ ಕೊರತೆ ಹಿನ್ನೆಲೆಯಲ್ಲಿ, ವಾಣಿಜ್ಯ ಸಿಲಿಂಡರ್ ಅಭಾವ ಸಂಬಂಧ ಸಿಬಿಐ ತನಿಖೆ ನಡೆಸುತ್ತಿದ್ದು, ಕಮರ್ಷಿಯಲ್ ಸಿಲಿಂಡರ್ ವಿತರಕರ ಕಳ್ಳಾಟ ನಡೆಸುತ್ತಿದ್ದಾರಾ? ಎಂದು ತನಿಖೆ ನಡೆಸಲು ಇದೀಗ ಸಿಬಿಐ ಎಂಟ್ರಿ ಕೊಟ್ಟಿದೆ. ಈಗಾಗಲೇ ಸಿಲಿಂಡರ್ ಪೂರೈಕೆ ವ್ಯತ್ಯಯ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಬಹುತೇಕ ಹೋಟೆಲ್ ಗಳು ಬಂದಾಗಿವೆ. ಇನ್ನು ಗ್ರಾಹಕರು ಸಿಲಿಂಡರ್ ಇಲ್ಲದೆ ಪರದಾಡುತ್ತಿದ್ದಾರೆ. ಸಿಲಿಂಡರ್ ಏಜೆನ್ಸಿ ಅಂಗಡಿಗಳ ಮುಂದೆ ನಿಂತು ವಾಗ್ವಾದ ನಡೆಸುತ್ತಿದ್ದಾರೆ. ಅಲ್ಲದೆ ಕೆಲವು ಸಿಲಿಂಡರ್ ವಿತರಕರು ಸಿಲಿಂಡರ್ ದರ ಒಮ್ಮೆಲೆ ಏರಿಕೆ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಸಿಬಿಐ ತನಿಖೆಗೆ ಇಳಿದಿದೆ. 1. ಅಕ್ರಮದ ಸ್ವರೂಪ ಏನು?…
ಬೆಂಗಳೂರು : ಬಂಡಿಪುರ ಹಾಗೂ ನಾಗರಹೊಳೆ ಸಫಾರಿ ಪುನರಂಭದ ಕುರಿತು ಸಚಿವ ಈಶ್ವರ ಕಂಡ್ರೆ ಸಮರ್ಥಿಸಿಕೊಂಡಿದ್ದರು. ಇದೀಗ ಪ್ರವಾಸಿಗರಿಗೆ ಸಚಿವ ಈಶ್ವರ ಕಂಡ್ರೆ ಸಿಹಿ ಸುದ್ದಿ ಒಂದನ್ನು ನೀಡಿದ್ದು, ಸುಬ್ರಹ್ಮಣ್ಯ – ಕುಮಾರ ಪರ್ವತದ ಚಾರಣವನ್ನು ಬೆಳಗ್ಗೆ 5.30 ಗಂಟೆಗೆ ಆರಂಭಿಸಲು ಅರಣ್ಯ ಸಚಿವ ಈಶ್ವರ್ ಖಂಡ್ರೆ ಒಪ್ಪಿಗೆ ಸೂಚಿಸಿದರು. ಪ್ರಶ್ನೋತ್ತರ ಅವಧಿಯಲ್ಲಿ ವಿಷಯ ಪ್ರಸ್ತಾಪಿಸಿದ ಶಾಸಕಿ ಭಾಗೀರಥಿ ಮುರುಳ್ಯಾ, ಸುಬ್ರಹ್ಮಣ್ಯದಿಂದ, ಕುಮಾರ ಪರ್ವತಕ್ಕೆ ಚಾರಣ ಹೋಗಲು ವ್ಯವಸ್ಥೆ ಬದಲಾಗಿದೆ. ಬೆಳಗ್ಗೆ 5 ಗಂಟೆ ಬದಲಾಗಿ, ಬೆಳಗ್ಗೆ 6 ಗಂಟೆಗೆ ಚಾರಣಕ್ಕೆ ಹೋಗಲು ಬಿಡಲಾಗ್ತಿದೆ. ಇದರಿಂದ ಶಿಖರಕ್ಕೆ ತಲುಪಲು ಸಮಯ ವ್ಯತ್ಯಾಸ ಆಗುತ್ತಿದೆ. ಶೇಷಗಿರಿ ಪರ್ವತಕ್ಕೆ ಹೋಗಲು ಬಿಡುತ್ತಿಲ್ಲ. ಹಾಗಾಗಿ, ಮೊದಲಿನಂತೆ ವ್ಯವಸ್ಥೆ ಮಾಡಿಕೊಡಬೇಕು ಎಂದು ಮನವಿ ಮಾಡಿದರು. ಇದಕ್ಕೆ ಸಚಿವ ಈಶ್ವರ್ ಖಂಡ್ರೆ ಉತ್ತರಿಸುತ್ತಾ, ಸುಬ್ರಹ್ಮಣ್ಯದಿಂದ ಕುಮಾರ ಪರ್ವತ ಚಾರಣ ಮಾಡಿ ವಾಪಸಾಗಲು ಎರಡು ದಿನ ಬೇಕು. ಹೋದವರು ಅಲ್ಲಿ ವಾಸ್ತವ್ಯ ಮಾಡುತ್ತಿದ್ದರು. ಅಲ್ಲಿ ಹೋಗುವ ಪ್ರವಾಸಿಗರ ರಕ್ಷಣೆಗೆ ಸಮಸ್ಯೆ…
ಬೆಂಗಳೂರು : ಬೇಸಿಗೆಯ ಬಿಸಿಲಿನ ಬೇಗೆಯಿಂದ ತಪ್ಪಿಸಿಕೊಳ್ಳಲು ಅನೇಕರು ತಣ್ಣಗಿರುವ ಬಿಯರ್ ಮೊರೆ ಹೋಗುತ್ತಾರೆ. ಗಂಟಲು ಒಣಗಿದಾಗ ‘ಚಿಲ್ಡ್’ ಬಿಯರ್ ಕುಡಿದರೆ ಹಾಯ್ ಎನಿಸಬಹುದು, ಆದರೆ ಇದು ನಿಮ್ಮ ದೇಹದ ಮೇಲೆ ಅಂದುಕೊಂಡಿದ್ದಕ್ಕಿಂತ ಭಿನ್ನವಾದ ಪರಿಣಾಮ ಬೀರಬಹುದು. ಈ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ 1. ನಿರ್ಜಲೀಕರಣದ (Dehydration) ಅಪಾಯ ಬಿಯರ್ ಕುಡಿದರೆ ದಾಹ ತೀರುತ್ತದೆ ಎಂಬುದು ತಪ್ಪು ಕಲ್ಪನೆ. ಆಲ್ಕೋಹಾಲ್ ಒಂದು ‘ಡಯೂರೆಟಿಕ್’ (Diuretic) ಆಗಿ ಕಾರ್ಯನಿರ್ವಹಿಸುತ್ತದೆ. ಅಂದರೆ, ಇದು ನಿಮ್ಮ ದೇಹದಿಂದ ಮೂತ್ರದ ರೂಪದಲ್ಲಿ ಹೆಚ್ಚು ನೀರನ್ನು ಹೊರಹಾಕುವಂತೆ ಮಾಡುತ್ತದೆ. ಬೇಸಿಗೆಯಲ್ಲಿ ಈಗಾಗಲೇ ಬೆವರಿನ ಮೂಲಕ ನೀರು ನಷ್ಟವಾಗುತ್ತಿರುತ್ತದೆ, ಇದರ ಜೊತೆಗೆ ಬಿಯರ್ ಸೇವಿಸಿದರೆ ದೇಹವು ಬೇಗನೆ ನಿರ್ಜಲೀಕರಣಕ್ಕೆ ಒಳಗಾಗುತ್ತದೆ. 2. ದೇಹದ ಉಷ್ಣಾಂಶ ಏರಿಕೆ ನಮಗೆ ಕುಡಿಯುವಾಗ ತಣ್ಣಗೆ ಎನಿಸಿದರೂ, ಆಲ್ಕೋಹಾಲ್ ರಕ್ತನಾಳಗಳನ್ನು ವಿಸ್ತರಿಸುತ್ತದೆ (Vasodilation). ಇದರಿಂದ ಚರ್ಮದ ಮೇಲ್ಮೈಗೆ ರಕ್ತದ ಹರಿವು ಹೆಚ್ಚಾಗಿ ತಾತ್ಕಾಲಿಕವಾಗಿ ಬಿಸಿಯ ಅನುಭವವಾಗುತ್ತದೆ. ಇದು ದೇಹದ ಆಂತರಿಕ ಉಷ್ಣತೆಯನ್ನು ನಿಯಂತ್ರಿಸುವ ಸಾಮರ್ಥ್ಯವನ್ನು…
ಬೆಂಗಳೂರು : ಟಿಪ್ಪರ್ ಲಾರಿ ಹರಿದು ವೈದ್ಯಕೀಯ ವಿದ್ಯಾರ್ಥಿನಿ ಸಾವನ್ನಪ್ಪಿದ ಘಟನೆ ಬುಧವಾರ ಸಂಜೆ ಮೈಸೂರು ರಸ್ತೆಯ ಆರ್.ಆರ್.ವೈದ್ಯಕೀಯ ಕಾಲೇಜು ಬಳಿ ನಡೆದಿದೆ. ಈ ಕಾಲೇಜಿನಲ್ಲೇ ನಾಲ್ಕನೇ ವರ್ಷದ ವೈದ್ಯಕೀಯ ವಿದ್ಯಾರ್ಥಿನಿಯಾಗಿದ್ದ ಕೃತಿಕಾ (21) ಮೃತ ಯುವತಿ ಎಂದು ತಿಳಿದು ಬಂದಿದೆ. ಸ್ಕೂಟರ್ ಚಲಾಯಿಸುತ್ತಿದ್ದ ಮತ್ತೋರ್ವ ವಿದ್ಯಾರ್ಥಿನಿ ಹಂಸ ಕೂಡ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ. ನಿನ್ನೆ ಸಂಜೆ 4:15ರ ಸುಮಾರಿಗೆ ಸ್ಕೂಟರ್ ಮೂಲಕ ಹೊರಟ ಕೃತಿಕಾ ಹಾಗೂ ಹಂಸ ಆರ್.ಆರ್.ವೈದ್ಯಕೀಯ ಕಾಲೇಜಿನ ನಿರ್ಗಮನ ದ್ವಾರದಿಂದ ಮೈಸೂರು ರಸ್ತೆಯ ಕಡೆ ತೆರಳುತ್ತಿದ್ದರು. ಈ ವೇಳೆ ಮೈಸೂರು ಕಡೆಗೆ ಸಾಗುತ್ತಿದ್ದ ಟಿಪ್ಪರ್ ಲಾರಿ ಸ್ಕೂಟರ್‌ಗೆ ಡಿಕ್ಕಿಯಾಗಿದೆ. ಅಪಘಾತದ ರಭಸಕ್ಕೆ ಸ್ಕೂಟರ್ ಚಲಾಯಿಸುತ್ತಿದ್ದ ಹಂಸ ರಸ್ತೆಯ ಎಡಭಾಗಕ್ಕೆ ಬಿದ್ದರೆ, ಹಿಂಬದಿ ಸವಾರೆ ಕೃತಿಕಾ ಬಲಭಾಗಕ್ಕೆ ಬಿದ್ದಿದ್ದಾರೆ.ದುರಾದೃಷ್ಟವಶಾತ್ ಕೃತಿಕಾ ಅವರ ದೇಹದ ಮೇಲೆ ಟಿಪ್ಪರ್ ಲಾರಿಯ ಚಕ್ರ ಹರಿದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗಾಯಗೊಂಡ ಹಂಸಳನ್ನು ಆರ್ ಆರ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನಾ ಸ್ಥಳಕ್ಕೆ ಕೆಂಗೇರಿ ಸಂಚಾರ…
ನವದೆಹಲಿ : ಇಸ್ರೇಲ್ ಇರಾನ್ ಯುದ್ಧದ ಬಳಿಕ ಭಾರತದ ಬಂದರಿಗೆ ಮೊದಲ ಬಾರಿಗೆ ಭಾರತದ ಬಂದರಿಗೆ ತೈಲನೌಕೆ ಆಗಮಿಸಿದೆ ಜಲಸಂಧಿಯಿಂದ ಈ ಒಂದು ತೈಲನೌಕೆ ಬಂದಿದೆ. ಹೊರ್ಮೊಜ್ ಜಲಸಂಧಿಯಿಂದ ಮುಂಬೈ ಬಂದರಿಗೆ ತೈಲ ನೌಕೆ ಆಗಮಿಸಿದೆ. ಮಾರ್ಚ್ 8ರವರೆಗೆ ಜಲಸಂಧಿಯಲ್ಲಿ ಈ ಒಂದು ತೈಲ ನೌಕೆ ಸಿಲುಕಿತ್ತು. ಹರ್ಮೋಜ್ ಜಲಸಂಧಿ ಬಂದ್ ಆಗಿದ್ದರಿಂದ ತೈಲ ನೌಕೆ ಸಿಲುಕಿತ್ತು. ಮಾರ್ಚ್ 9 ರಂದು ಹೊರಟಿದ್ದ ಭಾರತದ ತೈಲ ನೌಕೆ ಇದೀಗ ಮುಂಬೈ ತಲುಪಿದೆ. ಇರಾನ್ ಇಸ್ರೇಲ್ ಯುದ್ಧದ ನಡುವೆ ಹಾರ್ಮೋನ್ಸ್ ಜಲಸಂಧಿಯಲ್ಲಿ ಭಾರತೀಯ ತೈಲ ನೌಕೆ ಸಿಲುಕಿತ್ತು. ಒಂದು ವೇಳೆ ಯಾವುದೇ ಹಡಗುಗಳನ್ನು ಅಲ್ಲಿಂದ ತೆಗೆದುಕೊಂಡು ಹೋದರೆ ನಡುವೆಯೇ ದಾಳಿ ಮಾಡಿ ಧ್ವಂಸಗೊಳಿಸಲಾಗುತ್ತದೆ ಎಂದು ಇರಾನ್ ಎಚ್ಚರಿಕೆ ನೀಡಿತ್ತು. ಆದರೆ ಇದೀಗ ಭಾರತಕ್ಕೆ ಅತಿ ದೊಡ್ಡ ರಾಜತಾಂತ್ರಿಕ ಗೆಲುವು ಸಿಕ್ಕಂತಾಗಿದೆ. ಪ್ರಮುಖ ಅಂಶಗಳು: ಸುರಕ್ಷಿತ ಸಂಚಾರ : ಮಧ್ಯಪ್ರಾಚ್ಯದಲ್ಲಿ ಯುದ್ಧದ ಭೀತಿಯಿದ್ದರೂ, ಅಂತರಾಷ್ಟ್ರೀಯ ಜಲಮಾರ್ಗಗಳಲ್ಲಿ ತೈಲ ಸಾಗಾಣಿಕೆ ಪುನರಾರಂಭಗೊಂಡಿರುವುದು ಭಾರತದ ಇಂಧನ ಭದ್ರತೆಗೆ…
ಕೊಡಗು : ಕೊಡಗು ಜಿಲ್ಲೆಯಲ್ಲಿ ಕಾಡಾನೆ ಹಾವಳಿ ಮುಂದುವರೆದಿದ್ದು, ಇಂದು ಕಾಡಾನೆ ದಾಳಿಗೆ ಕಾಫಿ ಬೆಳೆಗಾರನೊಬ್ಬ ಸಾವನಪ್ಪಿರುವ ಘಟನೆ ವರದಿಯಾಗಿದೆ. ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಸಿದ್ದಾಪುರ ಗ್ರಾಮದಲ್ಲಿ ಕಾಡಾನೆ ದಾಳಿಗೆ ಗಣಪತಿ ಅಲಿಯಾಸ್ ಗಪ್ಪು (49) ಸಾವನ್ನಪ್ಪಿರುವ ವ್ಯಕ್ತಿ. ಸಿದ್ದಾಪುರ ಸಮೀಪದ ಹೈಸ್ಕೂಲ್ ಪೈಸಾರಿಯಲ್ಲಿ ಈ ಒಂದು ಘಟನೆ ಸಂಭವಿಸಿದೆ. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ನವದೆಹಲಿ : ಇರಾನ್ ಇಸ್ರೇಲ್ ಯುದ್ಧದ ನಡುವೆಯೇ ಭಾರತಕ್ಕೆ ದೊಡ್ಡ ರಾಜತಾಂತ್ರಿಕ ಜಯ ಸಿಕ್ಕಿದೆ. ವಿದೇಶಾಂಗ ಸಚಿವ ಎಸ್. ಜೈಶಂಕರ್ ಮತ್ತು ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಘ್ಚಿ ನಡುವಿನ ಮಾತುಕತೆಯ ನಂತರ, ಆಯಕಟ್ಟಿನ ಹಾರ್ಮುಜ್ ಜಲಸಂಧಿಯ ಮೂಲಕ ಭಾರತೀಯ ತೈಲ ಹಡಗುಗಳು ಸಾಗಲು ಇರಾನ್ ಅನುಮತಿ ನೀಡಿದೆ ಎಂದು ಮೂಲಗಳು ತಿಳಿಸಿವೆ. ಆದರೆ ಇದೀಗ ಇರಾನ್ ಹಾರ್ಮುಜ್ ಜಲಸಂಧಿಯಲ್ಲಿ ಭಾರತೀಯ ತೈಲ ಹಡಗುಗಳಿಗೆ ಯಾವುದೇ ಅನುಮತಿ ನೀಡಿಲ್ಲ ಎಂದು ಸ್ಪಷ್ಟಪಡಿಸಿದೆ. ವಿಶ್ವದ ಅತ್ಯಂತ ಪ್ರಮುಖ ತೈಲ ಸಾಗಾಣಿಕೆ ಮಾರ್ಗವಾಗಿರುವ ‘ಹಾರ್ಮುಜ್ ಜಲಸಂಧಿ’ಯಲ್ಲಿ (Strait of Hormuz) ಭಾರತೀಯ ತೈಲ ಹಡಗುಗಳ ಸಂಚಾರಕ್ಕೆ ಯಾವುದೇ ವಿಶೇಷ ಅನುಮತಿ ಅಥವಾ ವಿನಾಯಿತಿ ನೀಡಿಲ್ಲ ಎಂದು ಇರಾನ್ ಸರ್ಕಾರ ಅಧಿಕೃತವಾಗಿ ಸ್ಪಷ್ಟಪಡಿಸಿದೆ. ಮುಖ್ಯಾಂಶಗಳು: ಸ್ಪಷ್ಟನೆ ನೀಡಿದ ಇರಾನ್: ಹಾರ್ಮುಜ್ ಜಲಸಂಧಿಯ ಮೂಲಕ ಹಾದುಹೋಗುವ ಭಾರತೀಯ ತೈಲ ಟ್ಯಾಂಕರ್‌ಗಳಿಗೆ ಯಾವುದೇ ರೀತಿಯ ಪ್ರತ್ಯೇಕ ಸೌಲಭ್ಯ ಅಥವಾ ಸುರಕ್ಷತೆಯ ಭರವಸೆ ನೀಡಿಲ್ಲ ಎಂದು ಇರಾನ್ ವಿದೇಶಾಂಗ ಇಲಾಖೆ…














