Subscribe to Updates
Get the latest creative news from FooBar about art, design and business.
Author: kannadanewsnow05
ಬೆಂಗಳೂರು : ರಾಜ್ಯ ಸರ್ಕಾರ ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ಸಿಹಿ ಸುದ್ದಿ ಒಂದನ್ನು ನೀಡಿದ್ದು, ಆದ್ಯತಾ ಪಡಿತರ ಚೀಟಿಗೆ (ಬಿಪಿಎಲ್ ಕಾರ್ಡ್) ಸಂಬಂಧಿಸಿದಂತೆ ಕುಟುಂಬದ ವಾರ್ಷಿಕ ಆದಾಯ ಮಿತಿಯನ್ನು ಈಗಿರುವ 1.20 ಲಕ್ಷ ರೂ.ಗಳಿಂದ 3 ಲಕ್ಷ ರೂ.ಗೆ ಹೆಚ್ಚಳ ಮಾಡುವ ಚಿಂತನೆಯಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದರು. ವಿಧಾನಸಭೆಯ ಪ್ರಶೋತ್ತರ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಬಿಜೆಪಿಯ ಡಾ.ಸಿ.ಎನ್.ಅಶ್ವತ್ಥನಾರಾಯಣ, ಬಿಪಿಎಲ್ ಕಾರ್ಡ್ ಪಡೆಯಲು ಈಗ ಇರುವ ನಿಯಮಗಳು 2017ರಲ್ಲಿ ರಚನೆಯಾಗಿದ್ದು, ಈಗ ಸಾಕಷ್ಟು ಬದಲಾವಣೆಗಳಾಗಿವೆ. ಆದರೂ 8 ವರ್ಷದಿಂದ ಅದೇ ಮಾನದಂಡಗಳನ್ನು ಅನುಸರಿಸಲಾಗುತ್ತಿದೆ ಎಂದರು. ಅದರಲ್ಲೂ ಇಡೀ ರಾಜ್ಯಕ್ಕೆ ಈ ನಿಯಮಗಳನ್ನು ಅನ್ವಯಿಸುವುದೂ ಸರಿಯಲ್ಲ. ಬೆಂಗಳೂರಿನ ಜೀವನ ನಿರ್ವಹಣಾ ವೆಚ್ಚಕ್ಕೂ, ಗ್ರಾಮಾಂತರ ಪ್ರದೇಶಗಳ ನಿರ್ವಹಣಾ ವೆಚ್ಚಕ್ಕೂ ಬಹಳಷ್ಟು ವ್ಯತ್ಯಾಸಗಳಿವೆ. ಎರಡೂ ಪ್ರದೇಶಗಳಿಗೆ ಏಕರೂಪದ ಆದಾಯ ಮಿತಿ ನಿಗದಿಪಡಿಸುವುದು ತಪ್ಪು. ಇದನ್ನು ವೈಜ್ಞಾನಿಕವಾಗಿ ಪರಿಷ್ಕರಿಸಬೇಕು ಎಂದು ಒತ್ತಾಯಿಸಿದರು. ವಿಧವೆಯರು, ವಿಕಲಚೇತನರು, ಮಾರಕ ರೋಗಗಳಿಂದ ಬಳಲುತ್ತಿರುವವರ ಕುಟುಂಬಕ್ಕೆ ಬಿಪಿಎಲ್‌ಗಿಂತ ಅಂತ್ಯೋದಯ ಅನ್ನ ಕಾರ್ಡ್…
ಬೆಂಗಳೂರು : ನಟಿ ರಮ್ಯಾಗೆ ಸಮಾಜಿಕ ಜಾಲತಾಣದಲ್ಲಿ ಅಶ್ಲೀಲ ಮೆಸೇಜ್ ಹಾಕಿದ್ದ ಪ್ರಕರಣದ ಬೆನ್ನೆಲ್ಲೆ, ಜಾಲತಾಣಗಳಲ್ಲಿ ನಟ ದರ್ಶನ್ ಪತ್ನಿ ವಿಜಯಲಕ್ಷ್ಮೀಗೆ ಕೂಡ ಅಶ್ಲೀಲ ಕಮೆಂಟ್ ಹಾಗೂ ನಿಂದಿಸಿದ್ದ ಪ್ರಕರಣದ ತನಿಖೆ ಪೂರ್ಣಗೊಳಿಸಿರುವ ಸಿಸಿಬಿ ಪೊಲೀಸರು, 6 ಆರೋಪಿಗಳ ವಿರುದ್ಧ 45ನೇ ಎಸಿಎಂಎಂ ಕೋರ್ಟ್‌ಗೆ 473 ಪುಟಗಳ ಆರೋಪಪಟ್ಟಿ ಸಲ್ಲಿಸಿದ್ದಾರೆ. ವಿಜಯಲಕ್ಷ್ಮೀ ಅವರು 2025ರ ಡಿಸೆಂಬರ್‌ನಲ್ಲಿ ತಮ್ಮ ವಿರುದ್ಧ ಅಶ್ಲೀಲ ಕಮೆಂಟ್ ಹಾಕಿದ್ದ ಕಿಡಿಗೇಡಿಗಳ ವಿರುದ್ಧ ಸೈಬರ್‌ಕ್ರೆ,,0 ಠಾಣೆಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ತನಿಖೆ ನಡೆಸಿದ್ದ ಸಿಸಿಬಿ ಖಾಸೀಂ ರಾಜಾ ಅವರ ನೇತೃತ್ವದ ತಂಡ 6 ಮಂದಿ ಆರೋಪಿಗಳನ್ನು ಬಂಧಿಸಿತ್ತು. ಇದೀಗ ತನಿಖೆ ಪೂರ್ಣಗೊಂಡಿದ್ದು ಎಲ್ಲಾ ಆರೋಪಿಗಳ ವಿರುದ್ಧ ಆರೋಪಪಟ್ಟಿ ಸಲ್ಲಿಸಲಾಗಿದೆ. ಆರೋಪಿಗಳ ಪೈಕಿ ಕೆಲವರು ನಟ ಸುದೀಪ್ ಅಭಿಮಾನಿಗಳು ಎಂದು ಹೇಳಿಕೊಂಡಿದ್ದಾರೆ. ಆದರೆ, ವಿಚಾರಣೆಯಲ್ಲಿ ಅವರ ಹೆಸರಿನಲ್ಲಿ ನಕಲಿ ಖಾತೆಗಳನ್ನು ತೆರೆದು ವಿಜಯಲಕ್ಷ್ಮೀಗೆ ಅಶ್ಲೀಲ ಕಮೆಂಟ್ ಹಾಗೂ ನಿಂದಿಸಿದ್ದರು ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಪೋಸ್ಟ್ ಮಾಡುತ್ತಿರುವುದು ಅಶ್ಲೀಲ…
ಬೆಂಗಳೂರು : ಇರಾನ್ ಇಸ್ರೇಲ್ ಯುದ್ಧದ ಪರಿಣಾಮವಾಗಿ ಇದೀಗ ರಾಜ್ಯದಲ್ಲಿ ಸಿಲಿಂಡರ್ ಅಭಾವ ಇದ್ದು ಅದರಲ್ಲೂ ಬೆಂಗಳೂರಿನಲ್ಲಿ ಸಿಲಿಂಡರ್ ಇಲ್ಲದೆ ಬಹುತೇಕ ದೊಡ್ಡ ದೊಡ್ಡ ಹೋಟೆಲ್ ಗಳು ಬಂದ್ ಆಗಿವೆ. ಇದರ ಮಧ್ಯ ಬೆಂಗಳೂರಿಗರಿಗೆ ಮತ್ತೊಂದು ಶಾಕ್ ಎದುರಾಗಿದ್ದು ಇನ್ನೂ ಒಂದು ವಾರ ಅಥವಾ 10 ದಿನ ಸಿಲಿಂಡರ್ ಸಿಗಲ್ಲ ಎಂದು ಆಹಾರ ಸಚಿವ ಕೆಎಚ್ ಮುನಿಯಪ್ಪ ತಿಳಿಸಿದರು. ವಿಧಾನಪರಿಷತ್ತಿನಲ್ಲಿ ಆಹಾರ ಸಚಿವ ಮುನಿಯಪ್ಪ ಹೇಳಿಕೆ ನೀಡಿದ್ದು ಇನ್ನೂ ಒಂದು ವಾರ ಅಥವಾ ಹತ್ತು ದಿನ ಸಿಲಿಂಡರ್ ಸಿಗಲ್ಲ. ಕಮರ್ಷಿಯಲ್ ಸಿಲಿಂಡರ್ ಸದ್ಯಕ್ಕೆ ಸ್ಟಾಕ್ ಇಲ್ಲ. ಹಾಗಾಗಿ ಹೋಟೆಲ್ ಮಾಲೀಕರು ತಾಳ್ಮೆಯಿಂದ ಕಾಯಬೇಕು. ಆಸ್ಪತ್ರೆ, ಹಾಸ್ಟೆಲ್ ಮತ್ತು ವಸತಿ ನಿಲಯಕ್ಕೆ ಗ್ಯಾಸ್ ನೀಡುತ್ತೇವೆ. ಹೋಟೆಲ್ ನವರು ಎಲೆಕ್ಟ್ರಿಕ್ ಸ್ಟವ್ ಬಳಸಬೇಕು. ಒಂದು ವಾರ ಹತ್ತು ದಿನ ಸುಧಾರಿಸಿಕೊಂಡರೆ ಸಮಸ್ಯೆ ಬಗ್ಗೆ ಹರಿಯುತ್ತದೆ ಎಂದು ಸಚಿವ ಮುನಿಯಪ್ಪ ಉತ್ತರಿಸಿದರು.
ಬೆಂಗಳೂರು : ರಾಜ್ಯದಲ್ಲಿ ಮರ್ಯಾದ ಹತ್ಯೆ ನಿಷೇಧಿಸುವ ಮಾಸೂದೆಗೆ ರಾಜ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ.ವಿವಾಹದಲ್ಲಿ ಆಯ್ಕೆ ಸ್ವಾತಂತ್ರ್ಯವನ್ನು ಒದಗಿಸಿ, ಜಾತಿ ಆಧಾರಿತ ಅಪರಾಧಗಳನ್ನು ತಡೆಯಲು ಹಾಗೂ ನಿಷೇಧಿಸಲು ಈ ಮಸೂದೆ ಮಂಡನೆ ಮಾಡಲಾಗಿದೆ. ರಾಜ್ಯದಲ್ಲಿ ಜಾತಿ ಆಧಾರಿತ ಭೇದಭಾವ ಇನ್ನೂ ಕ್ರೂರ ಹಿಂಸಾಚಾರದ ರೂಪದಲ್ಲಿ ವ್ಯಕ್ತವಾಗುತ್ತಿದೆ. ವಿಶೇಷವಾಗಿ ಅಂತರ್ಜಾತಿ ವಿವಾಹಗಳ ಮೂಲಕ ತಮ್ಮ ಜೀವನ ಸಂಗಾತಿಯನ್ನು ಆಯ್ಕೆಮಾಡುವ ಸಂವಿಧಾನಾತ್ಮಕ ಹಕ್ಕನ್ನು ಬಳಸಿಕೊಳ್ಳುವ ಯುವಕರ ವಿರುದ್ಧ ಗೌರವ ಹತ್ಯೆಗಳಂತಹ ಅಪರಾಧಗಳು ನಡೆಯುತ್ತಿರುವ ಘಟನೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಈ ಮಸೂದೆ ರೂಪಿಸಲಾಗಿದೆ. ಜಾತಿ ಆಧಾರಿತ ಅಪರಾಧಗಳ ಮೂಲಕ ಮಾನವಹಕ್ಕು ಉಲ್ಲಂಘನೆ ತಡೆಯಲು, ಅಂತರ್ಜಾತಿ ವಿವಾಹಗಳಿಗೆ ಗೌರವ ನೀಡಲು, ವೈಯಕ್ತಿಕ ಆಯ್ಕೆಗಳ ಮೇಲೆ ಜಾತಿ ಆಧಾರಿತ ಬಲವಂತದ ಭೇದ ಭಾವವನ್ನು ತಡೆಯಲು ಮತ್ತು ಅಂತರ್ಜಾತಿ ವಿವಾಹವನ್ನು ನೆರವೇರಿಸಲು ‘ಇವ ನಮ್ಮವ ಇವ ನಮ್ಮವ ವೇದಿಕೆ’ ಸ್ಥಾಪಿಸಲು ಮಸೂದೆಯಲ್ಲಿ ನಿಯಮ ರೂಪಿಸಲಾಗಿದೆ. ಜಾತಿ, ಸಂಸ್ಕೃತಿ, ಸಂಪ್ರದಾಯ, ಗೌರವದಂತಹ ಹೆಸರಲ್ಲಿ ಯಾವುದೇ ವ್ಯಕ್ತಿ ಕೃತ್ಯಗಳನ್ನು ನಡೆಸುವ…
ನವದೆಹಲಿ : ಅಮೇರಿಕಾ ಇಸ್ರೆಲ್ ಹಾಗೂ ಇರಾನ್ ಮಧ್ಯ ಯುದ್ಧ ನಡೆಯುತ್ತಿರುವ ಸಂದರ್ಭದಲ್ಲಿ ಅಮೆರಿಕಾಗೆ ಇರಾನ್ ಬಿಗ್ ಶಾಕ್ ನೀಡಿದೆ. ಇರಾನ್ ಕ್ಷಿಪಣಿ ದಾಳಿಗೆ ಅಮೇರಿಕಾ ವಿಮಾನವೊಂದು ಪತನವಾಗಿದೆ. ಹೌದು ಅಮೆರಿಕಾದ ಇಂಧನ ತುಂಬುವ ವಿಮಾನ ಇರಾನ್ ನ ಕ್ಷಿಪಣಿ ದಾಳಿಗೆ ಪತನವಾಗಿದ್ದು, ಪಶ್ಚಿಮ ಇರಾಕ್ ನಲ್ಲಿ ಅಮೆರಿಕಾದ ವಿಮಾನ ಪತನಗೊಂಡಿದೆ. ಈ ಒಂದು ದಾಳಿಯಲ್ಲಿ ಅಮೆರಿಕಾದ ಐವರು ಸಿಬ್ಬಂದಿಗಳು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗುತ್ತಿದೆ. ಇನ್ನು ಸಿಬ್ಬಂದಿಗಳ ಮೃತದೆಹಕ್ಕಾಗಿ ಅಮೆರಿಕ ಸೇನೆಯಿಂದ ಶೋಧ ಕಾರ್ಯ ನಡೆಸಲಾಗುತ್ತಿದೆ.
ಬೆಂಗಳೂರು : ಇರಾನ್ ಹೆಸರಲ್ಲಿ ಯುದ್ಧದ ಪರಿಣಾಮ ರಾಜ್ಯದಲ್ಲಿ ಕಳೆದ ಕೆಲವು ದಿನಗಳಿಂದ ಗ್ಯಾಸ್ ಸಿಲಿಂಡರ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುತ್ತಿದೆ. ಆದರೆ ಇದೀಗ ರಾಜ್ಯದಲ್ಲಿ ಅಡುಗೆ ಅನಿಲದ ಕೊರತೆಯಿಲ್ಲ, ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕೃತ ಸುತ್ತೋಲೆ ಹೊರಡಿಸಿದೆ. ಹೌದು ಕಳೆದ ಕೆಲವು ದಿನಗಳಿಂದ ರಾಜ್ಯದಲ್ಲಿ ಅಡುಗೆ ಅನಿಲ (LPG) ಅಭಾವ ಉಂಟಾಗಲಿದೆ ಎಂಬ ಆತಂಕ ಸಾರ್ವಜನಿಕರಲ್ಲಿ ಮನೆ ಮಾಡಿತ್ತು. ಪ್ರಮುಖವಾಗಿ ಹೋಟೆಲ್, ಶಾಲೆ-ಕಾಲೇಜು, ದೇವಾಲಯಗಳ ದಾಸೋಹ ಭವನ, ಇಂದಿರಾ ಕ್ಯಾಂಟೀನ್ ಹಾಗೂ ಐಟಿ ಕಂಪನಿಗಳ ಕ್ಯಾಂಟೀನ್‌ಗಳಲ್ಲಿ ಗ್ಯಾಸ್ ಸಮಸ್ಯೆ ಎದುರಾದ ಬೆನ್ನಲ್ಲೇ ಜನಸಾಮಾನ್ಯರು ಆತಂಕಕ್ಕೆ ಒಳಗಾಗಿದ್ದರು. ಈ ಹಿನ್ನೆಲೆ ರಾಜ್ಯದಲ್ಲಿ ಅಡುಗೆ ಅನಿಲದ ಕೊರತೆಯಿಲ್ಲ, ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕೃತ ಸುತ್ತೋಲೆ ಹೊರಡಿಸಿದೆ. ಗ್ಯಾಸ್ ಅಭಾವವಾಗಬಹುದು ಎಂಬ ಭೀತಿಯಲ್ಲಿ ಅನೇಕ ಗ್ರಾಹಕರು ಮುನ್ನೆಚ್ಚರಿಕೆ ಕ್ರಮವಾಗಿ ಅಥವಾ ಗಾಬರಿಯಿಂದ ಅನಗತ್ಯವಾಗಿ ಸಿಲಿಂಡರ್ ಬುಕಿಂಗ್ ಮಾಡುತ್ತಿದ್ದಾರೆ. ಇದರಿಂದ…
ಬಾಗಲಕೋಟೆ : ವಿದ್ಯಾರ್ಥಿನಿಯರ ಡ್ರೆಸ್ ಬದಲಾವಣೆ ಸ್ಥಳದಲ್ಲಿ ಕಲ್ಲೆಸೆದ ಹಿನ್ನೆಲೆಯಲ್ಲಿ ಯುವಕನಿಗೆ ಹಿಗ್ಗಾಮುಗ್ಗ ಥಳಿಸಿರುವ ಘಟನೆ ನಡೆದಿದ್ದು, ಈ ವೇಳೆ ಹಲ್ಲೆಯ ಬಳಿಕ ಯುವಕ ಹೃದಯಘಾತದಿಂದ ಸಾವನ್ನಪ್ಪಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಸಾವಳಗಿಯಲ್ಲಿ ನಡೆದಿದೆ. ಮೃತ ಯುವಕನನ್ನು ಸುದೀಪ ಪಾಂಗೆ (19) ಎಂದು ತಿಳಿದುಬಂದಿದೆ. ಹಲ್ಲೆ ಮಾಡುತ್ತಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಕೂಡ ಸೆರೆಯಾಗಿದೆ. ಯುವಕನಿಗೆ ಮೇಲೆ ಥಳಿಸಿದ ಮೂವರ ವಿರುದ್ಧ ಇದೀಗ FIR ದಾಖಲಾಗಿದೆ. ರಾಜು ಮಾಳೆ, ವಿಜಯ್ ಹಾಗು ಮಲ್ಲಿಕಾರ್ಜುನ ವಿರುದ್ಧ FIR ದಾಖಲಾಗಿದೆ. ವಿದ್ಯಾರ್ಥಿನಿಯರು ಡ್ರೆಸ್ ಚೇಂಜ್ ಮಾಡುವ ಸ್ಥಳದಲ್ಲಿ ಯುವಕ ಕಲ್ಲು ಎಸೆದು ಕುಚೇಷ್ಟೆ ಮಾಡಿದ್ದಾನೆ. ಹೀಗಾಗಿ ಸುದೀಪ್ ಮೇಲೆ ಮೂವರು ಹಿಗ್ಗಾಮುಗ್ಗ ಥಳಿಸಿದ್ದಾರೆ. ಈ ವೇಳೆ ಯುವಕ ಸುದೀಪ್ ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ.
BREAKING : ಉತ್ತರಕನ್ನಡದಲ್ಲಿ ಮೊಬೈಲ್ ನೋಡಬೇಡ ಎಂದು ಬುದ್ಧಿ ಮಾತು ಹೇಳಿದಕ್ಕೆ, 9ನೇ ತರಗತಿ ವಿದ್ಯಾರ್ಥಿ ಆತ್ಮಹತ್ಯೆ!
ಉತ್ತರಕನ್ನಡ : ಪೋಷಕರು ಬುದ್ಧಿ ಮಾತು ಹೇಳಿದ್ದಕ್ಕೆ 15 ವರ್ಷದ ಬಾಲಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಗಣೇಶನಗರದಲ್ಲಿ ನಡೆದಿದೆ. ಮೊಬೈಲ್ ಬಿಟ್ಟು ಓದಿನ ಕಡೆಗೆ ಗಮನಹರಿಸಲು ಪೋಷಕರು ಬುದ್ದಿಮಾತು ಹೇಳಿದ್ದರು. ಇದರಿಂದ ಮನನೊಂದು ಒಂಬತ್ತನೇ ತರಗತಿ ವಿದ್ಯಾರ್ಥಿ ಶುಭಂ (15) ಆತ್ಮಹತ್ಯೆಗೆ ಶರಣಾಗಿದ್ದಾನೆ. ಪೋಷಕರು ಮೊಬೈಲ್ ಬಿಟ್ಟು ಓದು ಎಂದು ಕಿವಿಮಾತು ಹೇಳಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.ಮಾರಿಕಾಂಬ ಪ್ರೌಢ ಶಾಲೆಯಲ್ಲಿ ಶುಭಂ ನಾಗೇಶ್ ನಾಯಕ್ 9ನೇ ತರಗತಿಯಲ್ಲಿ ಓದುತ್ತಿದ್ದ. ಪರೀಕ್ಷೆ ಸಮಯದಲ್ಲಿ ಮೊಬೈಲ್ ನೋಡಬೇಡ ಎಂದು ಪೋಷಕರು ಬುದ್ಧಿವಾದ ಹೇಳಿದ್ದಾರೆ ಇದರಿಂದ ಮನನೊಂದು ಮನೆಯಲ್ಲಿ ಯಾರೂ ಇಲ್ಲದ ವೇಳೆ ವಿದ್ಯಾರ್ಥಿ ಶುಭಂ ನೇಣಿಗೆ ಶರಣಾಗಿದ್ದಾನೆ. ತಕ್ಷಣ ಟಿಎಸ್ಎಸ್ ಆಸ್ಪತ್ರೆಗೆ ದಾಖಲಿಸಿದರು ಚಿಕಿತ್ಸೆಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ . ಈ ಕುರಿತು ಶಿರಸಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನವದೆಹಲಿ : ಇರಾನ್ ನೂತನ ಸುಪ್ರೀಂ ಲೀಡರ್ ಮೊಜ್ತಾಬಾ ಎರಡು ಕಾಲು ಕಟ್ ಆಗಿದೆ. ನೂತನ ಸುಪ್ರೀಂ ಲೀಡರ್ ಮೋಜ್ತಾಬಾ ಕೋಮಾಗೆ ಜಾರಿದ ಮಾಹಿತಿ ಲಭ್ಯವಾಗಿದೆ. ಸದ್ಯ ಟೆಹ್ರಾನ್ ಸಿನ ಯೂನಿವರ್ಸಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಮಾಹಿತಿ ಲಭ್ಯವಾಗಿದೆ. ಎರಡು ಕಾಲು ಕಳೆದುಕೊಂಡು ಆಸ್ಪತ್ರೆಯ ಬೆಡ್ ಮೇಲೆ ಕುಳಿತಿರುವ ಖಮೇನಿಯ ಫೋಟೋ ಇದೀಗ ವೈರಲಾಗಿದೆ. ಖಮೇನಿ ಕೋಮಾಗೆ ಜಾರಿದ್ದು, ಅಲ್ಲದೆ ಕಿಡ್ನಿ ಮೇಲೆ ಎಫೆಕ್ಟ್ ಆಗಿದ್ದು ಹೃದಯ ಸಂಬಂಧಿ ಕಾಯಿಲೆ ಕೂಡ ಇದೇ ಎನ್ನಲಾಗಿದೆ. ಇನ್ನು ಇಸ್ರೇಲ್ ಮತ್ತು ಅಮೆರಿಕ ಹೊಡೆತಕ್ಕೆ ಟೆರಾನ್ ತತ್ತರವಾಗಿದ್ದು ಇಸ್ರೇಲ್ ಹೇರ್ ಸ್ಟ್ರೈಕ್ ಗೆ ಕಟ್ಟಡಗಳು ಚದರ ಚಿತ್ರವಾಗಿವೆ. ವಸತಿ ಪ್ರದೇಶಗಳನ್ನು ಸಂಪೂರ್ಣವಾಗಿ ಸರ್ವನಾಶ ಮಾಡಿದೆ ಟೆಹ್ರಾನನ ಹಲೋ ಪ್ರದೇಶಗಳು ಸಂಪೂರ್ಣವಾಗಿ ಸ್ಮಶಾನದಂತಾಗಿದೆ.
ವಿಜಯಪುರ : ವಿಜಯಪುರದಲ್ಲಿ ಭೀಕರವಾದ ಅಪಘಾತ ಸಂಭವಿಸಿದ್ದು ಕಾರು ಪಲ್ಟಿಯಾಗಿ ಇಬ್ಬರು ಸ್ಥಳದಲ್ಲಿ ಸಾವನಪ್ಪಿದ್ದು ಮತ್ತಿಬ್ಬರಿಗೆ ಗಂಭೀರವಾದ ಗಾಯಗಳ ಘಟನೆ ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಬಸವನಹಟ್ಟಿ ಕ್ರಾಸ್ ಬಳಿ ಈ ಅಪಘಾತ ಸಂಭವಿಸಿದೆ. ಬೆಳಗಾವಿ ಜಿಲ್ಲೆಯ ಕಾಗವಾಡದಿಂದ ನಾಲ್ವರು ಶ್ರೀಶೈಲಕ್ಕೆ ತೆರಳುತ್ತಿದ್ದರು. ಈ ವೇಳೆ ನಿಯಂತ್ರಣ ಕಳೆದುಕೊಂಡು ಕಾರು ಪಲ್ಟಿಯಾಗಿದೆ. ಘಟನೆಯಲ್ಲಿ ಚಂದ್ರವ್ವ ಟಕ್ಕಣ್ಣನವರ (70) ಕಾಮಪ್ಪ ಅವರಾದಿ (65) ಮೃತ ದುರ್ದೈವಿಗಳು ಎಂದು ತಿಳಿದುಬಂದಿದೆ. ಗಾಯಗೊಂಡ ಇಬ್ಬರನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ನೀಡಲಾಗುತ್ತಿದೆ. ಅಪಘಾತದ ಕುರಿತು ಬಸವನ ಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.














