Subscribe to Updates
Get the latest creative news from FooBar about art, design and business.
Author: kannadanewsnow05
ಬೆಂಗಳೂರು : ಬೆಂಗಳೂರಿನ ಚಂದ್ರಾಲೇಔಟ್‌ನಲ್ಲಿ ಹಣದಾಸೆಗಾಗಿ 15 ವರ್ಷದ ಮಗಳನ್ನು ತಾಯಿಯೇ ವೇಶ್ಯಾವಾಟಿಕೆಗೆ ದೂಡಿದ ಘಟನೆ ಬೆಳಕಿಗೆ ಬಂದಿದೆ. ಈ ಸಂಬಂಧ ಬಾಲಕಿಯ ತಾಯಿ, ಮಲತಂದೆ ಹಾಗೂ ಮಧ್ಯವರ್ತಿಯನ್ನು ಪೊಲೀಸರು ಬಂಧಿಸಿದ್ದು, ಬಾಲಕಿಯನ್ನು ರಕ್ಷಿಸಿದ್ದಾರೆ. ಘಟನೆ ಹಿನ್ನೆಲೆ ತಾಯಿ ಮತ್ತು ಮಲತಂದೆ ಪ್ರತಿದಿನ ಕಾರಿನಲ್ಲಿ ಬಾಲಕಿಯನ್ನು ಮಧ್ಯವರ್ತಿಯ ಮನೆಗೆ ಕರೆದುಕೊಂಡು ಹೋಗಿ ಬಿಡುತ್ತಿದ್ದರು. ಅಲ್ಲಿ ಬಾಲಕಿ ಸಂಜೆವರೆಗೂ ಗಿರಾಕಿಗಳ ಕಿರುಕುಳಕ್ಕೆ ಬಲಿಯಾಗುತ್ತಿದ್ದಳು. ಬಾಲಕಿಯೊಂದಿಗೆ ಸಮಯ ಕಳೆಯಲು ಮಧ್ಯವರ್ತಿಯು 6 ರಿಂದ 10 ಸಾವಿರ ರು.ವರೆಗೂ ಹಣ ನಿಗದಿಪಡಿಸುತ್ತಿದ್ದಳು. ಇದರಲ್ಲಿ ಅರ್ಧದಷ್ಟು ಹಣವನ್ನು ಆಕೆಯ ತಾಯಿಗೆ ನೀಡಲಾಗುತ್ತಿತ್ತು ಎಂಬ ಆಘಾತಕಾರಿ ಮಾಹಿತಿ ತನಿಖೆಯಲ್ಲಿ ಬಹಿರಂಗವಾಗಿದೆ. ಹಣದಾಸೆಗೆ ಬಿದ್ದು ತನ್ನ 15 ವರ್ಷದ ಮಗಳನ್ನು ಮಾಂಸದಂಧೆಗೆ ದೂಡಿದ ತಾಯಿಯ ಕರಾಳ ಕೃತ್ಯ ಚಂದ್ರಾಲೇಔಟ್ ಪೊಲೀಸರು ನಡೆಸಿದ ಕಾರ್ಯಾಚರಣೆ ವೇಳೆ ಬಯಲಾಗಿದೆ. ಮಗಳನ್ನು ವೇಶ್ಯಾವಾಟಿಕೆಗೆ ದೂಡಿದ್ದ ಆರೋಪದ ಮೇಲೆ ಬಾಲಕಿಯ ತಾಯಿ, ಆಕೆಯ ಮಲತಂದೆ ಹಾಗೂ ಮಧ್ಯವರ್ತಿಯನ್ನು ಬಂಧಿಸಲಾಗಿದೆ. ಆರೋಪಿಗಳ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ…
ಬೆಂಗಳೂರು : ದಿನದಿಂದ ದಿನಕ್ಕೆ ಏರುತ್ತಿರುವ ಎಲ್‌ಪಿಜಿ ದರದಿಂದಾಗಿ ಸಾಮಾನ್ಯ ಜನರ ಬಜೆಟ್ ಏರುಪೇರಾಗುತ್ತಿದೆ. ಆದರೆ, ಅಡುಗೆ ಮಾಡುವಾಗ ನಾವು ಮಾಡುವ ಸಣ್ಣಪುಟ್ಟ ಬದಲಾವಣೆಗಳಿಂದ ಒಂದು ಸಿಲಿಂಡರ್ ಅನ್ನು ಕನಿಷ್ಠ 10 ರಿಂದ 15 ದಿನಗಳ ಕಾಲ ಹೆಚ್ಚು ಬಳಸಲು ಸಾಧ್ಯವಿದೆ. ಇಂದಿನ ದಿನಗಳಲ್ಲಿ ಎಲ್‌ಪಿಜಿ (LPG) ಸಿಲಿಂಡರ್ ಬೆಲೆ ಏರಿಕೆಯು ಪ್ರತಿಯೊಬ್ಬ ಸಾಮಾನ್ಯ ಕುಟುಂಬದ ಬಜೆಟ್ ಮೇಲೆ ಪರಿಣಾಮ ಬೀರುತ್ತಿದೆ. ಆದರೆ ಅಡುಗೆ ಮನೆಯಲ್ಲಿ ನಾವು ಮಾಡುವ ಸಣ್ಣಪುಟ್ಟ ಬದಲಾವಣೆಗಳು ಸಿಲಿಂಡರ್ ಅನ್ನು ಕನಿಷ್ಠ 10 ರಿಂದ 15 ದಿನಗಳ ಕಾಲ ಹೆಚ್ಚುವರಿಯಾಗಿ ಬಳಸಲು ಸಹಾಯ ಮಾಡುತ್ತವೆ. ಆ ಉಪಯುಕ್ತ ಮಾಹಿತಿ ಇಲ್ಲಿದೆ 1. ಪಾತ್ರೆಗಳನ್ನು ಮುಚ್ಚಿ ಅಡುಗೆ ಮಾಡಿ ಅಡುಗೆ ಮಾಡುವಾಗ ಯಾವಾಗಲೂ ಪಾತ್ರೆಗಳ ಮೇಲೆ ಮುಚ್ಚಳವನ್ನು ಬಳಸಿ. ಇದರಿಂದ ಹಬೆಯು ಹೊರಹೋಗದೆ ಶಾಖವು ಪಾತ್ರೆಯ ಒಳಗೇ ಇರುತ್ತದೆ, ಪರಿಣಾಮವಾಗಿ ಆಹಾರವು ಬೇಗನೆ ಬೇಯುತ್ತದೆ ಮತ್ತು ಗ್ಯಾಸ್ ಉಳಿತಾಯವಾಗುತ್ತದೆ. 2. ಪ್ರೆಶರ್ ಕುಕ್ಕರ್ ಬಳಕೆ ಹೆಚ್ಚಿರಲಿ ಸಾಮಾನ್ಯ ಪಾತ್ರೆಗಳಿಗಿಂತ…
ಬೆಂಗಳೂರು : ಯಲಹಂಕ ತಾಲೂಕು ಆಡಳಿತದಿಂದ ಒತ್ತುವರಿ ತೆರವು ಕಾರ್ಯಾಚರಣೆ ನಡೆದಿದ್ದು ಒತ್ತುವರಿ ಮಾಡಿದ್ದ 80 ಕೋಟಿ ಮೌಲ್ಯದ ಸರಕಾರಿ ಜಮೀನು ಇದೀಗ ಮರು ವಶಪಡಿಸಿಕೊಳ್ಳಲಾಗಿದೆ. 80 ಕೋಟಿ ಮೊಲದ 13 ಎಕರೆ 20 ಗುಂಟೆ ಒತ್ತುವರಿ ಜಮೀನು, ಇದೀಗ ತೆಲುಗು ಮಾಡಲಾಗಿದೆ ಬೆಂಗಳೂರು ನಗರ ಜಿಲ್ಲಾಧಿಕಾರಿ ಜಗದೀಶ್ ನೇತೃತ್ವದಲ್ಲಿ ತೆರವು ಕಾರ್ಯಾಚರಣೆ ನಡೆಸಲಾಯಿತು. ಬೆಂಗಳೂರಿನ ಯಲಹಂಕ ತಾಲೂಕಿನ ಇಟಕಲ್ಪುರ ಸುತ್ತಮುತ್ತ ಅಕ್ರಮ ಜಮೀನು ಒತ್ತುವರಿಯಾಗಿತ್ತು.
ಬೆಂಗಳೂರು : ಬೆಂಗಳೂರಿನಲ್ಲಿ ಮತ್ತೊಂದು ಭೀಕರವಾದ ಕೊಲೆ ನಡೆದಿದ್ದು ಪ್ರಿಯಕರನೊಬ್ಬ ತನ್ನ ಪ್ರಿಯತಮೆಯನ್ನು ವೈರ್ ನಿಂದ ಕುತ್ತಿಗೆ ಬಿದ್ದು ಭೀಕರವಾಗಿ ಕೊಲೆ ಮಾಡಿರುವ ಘಟನೆ, ವರ್ತೂರು ಪೊಲೀಸ್ ಠಾಣಾ ವ್ಯಾಪ್ತಿಯ ಕೊಡತಿ ಬಳಿ ನಡೆದಿದೆ. ಹತ್ಯೆಯಾದ ಪ್ರಿಯತಮೇಯನ್ನ ಕೊಡಗು ಮೂಲದ ರಂಜಿತಾ (24) ಎಂದು ತಿಳಿದು ಬಂದಿದೆ , ಆರೋಪಿ ಅಯ್ಯಪ್ಪನನ್ನು ವರ್ತೂರು ಠಾಣೆ ಪೋಲೀಸರು ಇದೀಗ ಅರೆಸ್ಟ್ ಮಾಡಿ ವಿಚಾರಣೆ ಒಳಪಡಿಸಿದ್ದಾರೆ. ರಂಜಿತ ಮತ್ತು ಅಯ್ಯಪ್ಪ ಕೊಡಗು ಜಿಲ್ಲೆಯ ನಿವಾಸಿಗಳಾಗಿದ್ದು, ಮದುವೆಯಾಗಿ ಹೆಂಡತಿಯನ್ನು ಅಯ್ಯಪ್ಪ ಬಿಟ್ಟಿದ್ದ. ಡ್ರೈ ಫ್ರೂಟ್ ಅಂಗಡಿಯಲ್ಲಿ ಆರೋಪಿ ಅಯ್ಯಪ್ಪ ಸೂಪರ್ವೈಸರ್ ಆಗಿ ಕೆಲಸ ಮಾಡುತ್ತಿದ್ದ. ಇನ್ನು ಅಯ್ಯಪ್ಪನನ್ನೆ ಮದುವೆಯಾಗುವುದಾಗಿ ರಂಜಿತ ಮನೆ ಬಿಟ್ಟು ಬಂದಿದ್ದಾಳೆ. ಪತ್ನಿಗೆ ವಿಚ್ಛೇದನ ನೀಡದೆ ಅಯ್ಯಪ್ಪ ರಂಜಿತಾ ಜೊತೆಗೆ ವಾಸವಿದ್ದ. ಇದೀಗ ಮದುವೆ ವಿಚಾರಕ್ಕೆ ರಂಜಿತ ಹಾಗೂ ಅಯ್ಯಪ್ಪನ ನಡುವೆ ಜಗಳ ನಡೆದಿದೆ. ಜಗಳವಿಕೋಪಕ್ಕೆ ಹೋಗಿ ಅಯ್ಯಪ್ಪ ರಂಜಿತಾಳ ಕುತ್ತಿಗೆಗೆ ವೈರ್ಮಿತ ಬಿಗಿದು ಕೊಲೆ ಮಾಡಿದ್ದಾನೆ ಎಂದು ತಿಳಿದುಬಂದಿದೆ.ಸದ್ಯ ಆರೋಪಿಯನ್ನು ವರ್ತೂರು…
ಬೀದರ್ : ದೇಶದ ಹಲವಡೆ ಗ್ಯಾಸ್ ಸಿಲಿಂಡರ್ ಕೊರತೆ ವಿಚಾರವಾಗಿ, ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ ಖರ್ಗೆ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದು, ಮೋದಿ ಅವರ ವಿದೇಶಾಂಗ ನೀತಿ ಸಂಪೂರ್ಣವಾಗಿ ವೈಫಲ್ಯವಾಗಿದೆ. ಗ್ಯಾಸ್ ಸಮಸ್ಯೆ ಇಲ್ಲ ಅಂದಮೇಲೆ ಎಸ್ಮಾ ಏಕೆ ಜಾರಿ ಮಾಡಿದರು ಎಂದು ಕಿಡಿಕಾರಿದರು. ಯುದ್ಧ ಆರಂಭಕ್ಕೂ ಮೋದಿ ಇಸ್ರೇಲ್ ಗೆ ಹೋಗಿದ್ದು ಏಕೆ? ಹೆಸರಿನಲ್ಲಿ ಅಂತಹ ಕೆಲಸ ಏನಿತ್ತು? ಸಮಸ್ಯೆ ನಮ್ಮ ದೇಶದಲ್ಲಿ ಮಾತ್ರ ಏಕೆ ಆಗುತ್ತಿದೆ? ಬೇರೆ ಕಡೆ ಏಕೆ ಆಗುತ್ತಿಲ್ಲ? ಹಾರ್ಮೋಜ್ ಜಲಸಂಧಿಯಲ್ಲಿ ಹಡಗುಗಳ ಓಡಾಟಕ್ಕೆ ಅವಕಾಶ ಸಿಕ್ಕಿದೆ, ಜಲಸಂಧಿಯಲ್ಲಿ ಚೀನಾ ರಷ್ಯಾ ಹಡುಗುಗಳ ಓಡಾಟಕ್ಕೆ ಅವಕಾಶ ಸಿಕ್ಕಿದೆ ನಮ್ಮ ದೇಶಕ್ಕೆ ಅದರ ಕ್ಲಾರಿಟಿ ಇಲ್ಲ ಗ್ಯಾಸ್ ಸಮಸ್ಯೆ ಇಲ್ಲ ಅಂದಮೇಲೆ ಎಸ್ಮಾ ಏಕೆ ಜಾರಿ ಮಾಡಿದರು ಹರ್ದೀಪ ಸಿಂಗ್ ಪುರಿ ಗ್ಯಾಸ್ ಸಮಸ್ಯೆ ಬಗ್ಗೆ ಮಾತನಾಡುತ್ತಿಲ್ಲ ಏಕೆ? ಎಂದು ಪ್ರಿಯಾಂಕ ಖರ್ಗೆ ವಾಗ್ದಾಳಿ ನಡೆಸಿದರು.
ಬೆಂಗಳೂರು : ಇತ್ತೀಚಿನ ದಿನಗಳಲ್ಲಿ ಡಿಜಿಟಲ್ ಪಾವತಿ ಮತ್ತು ಆನ್‌ಲೈನ್ ಸೇವೆಗಳು ಎಷ್ಟು ಸುಲಭವಾಗಿದೆಯೋ, ಅಷ್ಟೇ ಅಪಾಯಕಾರಿಯೂ ಆಗುತ್ತಿವೆ. ಅದರಲ್ಲೂ ವಿಶೇಷವಾಗಿ ಗ್ಯಾಸ್ ಸಿಲಿಂಡರ್ ಬುಕ್ ಮಾಡುವ ಗ್ರಾಹಕರನ್ನು ಗುರಿಯಾಗಿಸಿಕೊಂಡು ಸೈಬರ್ ವಂಚಕರು ಹೊಸ ಜಾಲ ಬೀಸಿದ್ದಾರೆ. ಪ್ರಸಿದ್ಧ ಗ್ಯಾಸ್ ಏಜೆನ್ಸಿಗಳ ಹೆಸರಿನಲ್ಲಿ ನಕಲಿ ವೆಬ್‌ಸೈಟ್ ಮತ್ತು ಲಿಂಕ್‌ಗಳನ್ನು ಸೃಷ್ಟಿಸಿ ಸಾರ್ವಜನಿಕರ ಹಣಕ್ಕೆ ಕನ್ನ ಹಾಕುತ್ತಿದ್ದಾರೆ. ಸೈಬರ್ ವಂಚಕರು ವಿವಿಧ ಏಜೆನ್ಸಿಗಳ ಹೆಸರಲ್ಲಿ ಜನರಿಗೆ ಲಿಂಕ್ ಕಳಿಸ್ತಿದ್ದಾರೆ. ಅಪ್ಪಿತಪ್ಪಿ ಆ ಲಿಂಕ್ ಮೇಲೆ ಕ್ಲಿಕ್ ಮಾಡಿದ್ರೆ ಕಥೆ ಮುಗೀತು. ಗ್ಯಾಸ್ ಬುಕ್ ಮಾಡಿಕೊಳ್ಳುವಂತೆ ಕಳಿಸಿದ ಲಿಂಕ್ ಮೂಲಕವೇ ಮೊಬೈಲ್ ಹ್ಯಾಕ್ ಮಾಡ್ತಿದ್ದಾರೆ. ಗ್ಯಾಸ್‌ಗಾಗಿ ಅಲೆದಾಡುತ್ತಿರುವವರು ಯಾಮಾರಿ ಲಿಂಕ್ ಒತ್ತಿದ್ರೆ ಗ್ಯಾಸ್ ಸಮಸ್ಯೆಯ ಜೊತೆ ಮತ್ತೊಂದು ಸಮಸ್ಯೆ ಎದುರಾಗೋದು ಫಿಕ್ಸ್ ಎನ್ನುವಂತೆ ಆಗಿದೆ. ಇನ್ನು, ಇಂಥದ್ದೇ ಮೋಸದ ಜಾಲಕ್ಕೆ ಬಿದ್ದಿರುವ ಜನರು ಬೆಂಗಳೂರು ಪೊಲೀಸ್ ಕಂಟ್ರೋಲ್ 112ಗೆ ಕರೆ ಮಾಡಿ ವಂಚನೆಗೆ ಒಳಗಾಗಿರುವ ಬಗ್ಗೆ ಮಾಹಿತಿ ನೀಡುತ್ತಿದ್ದಾರೆ. ಪೊಲೀಸರು ಕೂಡ ಎಚ್ಚೆತ್ತಿದ್ದು, ಜನರಿಗೆ…
ಚಿತ್ರದುರ್ಗ : ರಾಜ್ಯದಲ್ಲಿ ಮತ್ತೊಂದು ಅಕ್ರಮ ನಡೆದಿರುವುದು ಬೆಳಕಿಗೆ ಬಂದಿದ್ದು, ಜಿಲ್ಲಾಧಿಕಾರಿ ಹಾಗೂ ಎಡಿಸಿಯವರ ಡಿಜಿಟಲ್ ಸಹಿ ದುರುಪಯೋಗಪಡಿಸಿಕೊಂಡು 15 ಲಕ್ಷ ರೂ. ಮೌಲ್ಯದ ನಕಲಿ ಬಿಲ್ ಸೃಷ್ಟಿಸಿದ್ದ ಐವರು ನೌಕರರನ್ನು ಬಂಧಿಸಿರುವ ಘಟನೆ ಚಿತ್ರದುರ್ಗದಲ್ಲಿ ಬೆಳಕಿಗೆ ಬಂದಿದೆ. ನಗರಾಭಿವೃದ್ಧಿ ವಿಭಾಗದಲ್ಲಿ ಹೊರಗುತ್ತಿಗೆ ನೌಕರ ಸೈಯದ್ ಸಾದಿಕ್, ವಿನಯ್ ಶರ್ಮಾ, ವಿಜಯ್ ಕುಮಾರ್, ಬಸವರಾಜ, ಮಹೆಬೂಬ್ ಭಾಷಾ ಹಾಗೂ ವೆಂಕಟೇಶ್ ಎಂಬ ಆರು ಜನರ ವಿರುದ್ಧ ಪ್ರಕರಣ ದಾಖಲಾಗಿದೆ. ಸದ್ಯ ಎ1 ಆರೋಪಿ ಸೈಯದ್ ಪರಾರಿಯಾಗಿದ್ದು, ಇನ್ನುಳಿದ ಐವರನ್ನು ಬಂಧಿಸಿದ್ದಾರೆ. ಇನ್ನೂ ಡಿಸಿ ಕಚೇರಿಯಲ್ಲಿ ಡಿಸಿ ಹಾಗೂ ಎಡಿಸಿ ಅವರಿಗೆ ಸಂಬಂಧಿತ ಡಿಎಸ್‌ಸಿ ಕೀ ಕಳ್ಳತನ ಮಾಡಿದ್ದಾರೆ ಎಂದು ನೌಕರ ಸೈಯದ್ ಸಾದಿಕ್ ವಿರುದ್ಧ ಕಳ್ಳತನ ಆರೋಪ ಕೇಳಿಬಂದಿದೆ. ಸದ್ಯ ಗುತ್ತಿಗೆ ನೌಕರರನ್ನು ಕೆಲಸದಿಂದ ವಜಾಗೊಳಿಸಿದ್ದು, ಓರ್ವ ಸರ್ಕಾರಿ ನೌಕರನನ್ನು ಅಮಾನತುಗೊಳಿಸಿದ್ದಾರೆ. ಈ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸುವುದಾಗಿ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ತಿಳಿಸಿದ್ದಾರೆ. ಜಿಲ್ಲಾ ನಗರಾಭಿವೃದ್ಧಿ ವಿಭಾಗದ ಐವರು ಸಿಎಲ್‌ಟಿಸಿ ಸಿಬ್ಬಂದಿ…
ಬೆಂಗಳೂರು : ಜೈಲುಗಳಲ್ಲಿ ಮಾದಕ ವಸ್ತು ನಿರ್ಮೂಲನೆಗೆ ಕಾರಾಗೃಹ ಇಲಾಖೆ ಡಿಜಿಪಿ ಅಲೋಕ್ ಕುಮಾರ್ ಮುಂದಾಗಿದ್ದು ರಾಜ್ಯಾದ್ಯಂತ ಜೈಲಿನಲ್ಲಿ ಮಾದಕ ವಸ್ತು ಪತ್ತೆ ಪರೀಕ್ಷೆ ನಡೆಸಲಾಗುತ್ತಿದೆ. ಈ ಮೂಲಕ ಜೈಲುಗಳಲ್ಲಿ ಡ್ರಗ್ಸ್ ನೆಟ್ವರ್ಕ್ ಬ್ರೇಕ್ ಹಾಕಲು ಇದೀಗ ಅಲೋಕ್ ಕುಮಾರ್ ಹೊಸ ಪ್ರಯತ್ನಕ್ಕೆ ಕೈಹಾಕಿದ್ದಾರೆ. ನಿಮ್ಹಾನ್ಸ್ ಆಸ್ಪತ್ರೆ ಜೊತೆ ಸೇರಿ ಡ್ರಗ್ಸ್ ಮುಕ್ತ ಕಾರಾಗೃಹ ಮಾಡಲು ಪಣ ತೊಟ್ಟಿದ್ದಾರೆ. ರಾಜ್ಯದ ಜೈಲುಗಳಲ್ಲಿ ಕೈದಿಗಳಿಗೆ ವಿವಿಧ ಮಾದರಿ ಡ್ರಗ್ಸ್ ಪರೀಕ್ಷೆ ನಡೆಸಲಾಗುತ್ತದೆ. ಸದ್ಯ ರಾಜ್ಯದ ಎಲ್ಲಾ ಜೈಲುಗಳಲ್ಲಿ ಶೇಕಡ 10 ರಷ್ಟು ಕೈದಿಗಳಿಗೆ ಡ್ರಗ್ಸ್ ಮಾದರಿ ಪರೀಕ್ಷೆ ನಡೆಸಲಾಗಿದೆ. ಜೈಲು ವೈದ್ಯಾಧಿಕಾರಿಗಳಿಂದ ಕೈದಿಗಳಿಗೆ ಮಾದಕ ವಸ್ತು ಪರೀಕ್ಷೆ ನಡೆಸಲಾಗಿದೆ. ಕೈದಿಗಳು ಡ್ರಗ್ ಅಡಿಕ್ಟ್ ಆಗಿದ್ದರೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತದೆ.
ನವದೆಹಲಿ : ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು (NHAI) ಪ್ರತಿ ವರ್ಷದಂತೆ ಈ ವರ್ಷವೂ ಟೋಲ್ ದರಗಳನ್ನು ಪರಿಷ್ಕರಿಸುತ್ತಿದ್ದು, ಏಪ್ರಿಲ್ 1, 2026 ರಿಂದ ಹೊಸ ದರಗಳು ಜಾರಿಗೆ ಬರಲಿವೆ. ವಾರ್ಷಿಕ ಪಾಸ್ ದರವು ಸುಮಾರು ₹3,000 ರಿಂದ ₹3,075 ಕ್ಕೆ ಏರಿಕೆಯಾಗುವ ಸಾಧ್ಯತೆಯಿದೆ. ಇದು ಮುಖ್ಯವಾಗಿ ಫಾಸ್ಟ್ಯಾಗ್ (FASTag) ಹೊಂದಿರುವ ಖಾಸಗಿ ವಾಹನ ಸವಾರರಿಗೆ ಅನ್ವಯಿಸಲಿದೆ. ಹಣದುಬ್ಬರ ಮತ್ತು ಸಗಟು ಬೆಲೆ ಸೂಚ್ಯಂಕದ (WPI) ಆಧಾರದ ಮೇಲೆ ಈ ಏರಿಕೆ ಮಾಡಲಾಗುತ್ತಿದೆ ಎಂದು ವರದಿಯಾಗಿದೆ. 1. ಟೋಲ್ ವಾರ್ಷಿಕ ಪಾಸ್ ದರ ಏರಿಕೆ ಪ್ರತಿದಿನ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಚರಿಸುವವರಿಗಾಗಿ ನೀಡಲಾಗುವ ವಾರ್ಷಿಕ ಪಾಸ್ ದರದಲ್ಲಿ ಏರಿಕೆ ಮಾಡಲಾಗಿದೆ. ಹಳೆಯ ದರ: ₹3,000 ಹೊಸ ದರ: ₹3,075 ನಿಯಮ: ಈ ಪಾಸ್ ಒಂದು ವರ್ಷ ಅಥವಾ ಗರಿಷ್ಠ 200 ಟೋಲ್ ಕ್ರಾಸ್‌ಗಳಿಗೆ ಮಾತ್ರ ಮಾನ್ಯವಾಗಿರುತ್ತದೆ. ಇವೆರಡರಲ್ಲಿ ಯಾವುದು ಮೊದಲು ಪೂರ್ಣಗೊಳ್ಳುತ್ತದೆಯೋ ಅಲ್ಲಿಗೆ ಪಾಸ್ ಅವಧಿ ಮುಕ್ತಾಯವಾಗುತ್ತದೆ. 2. ಸಾಮಾನ್ಯ ಟೋಲ್ ದರಗಳ ಹೆಚ್ಚಳ…
ತಿರುಪತಿ : ರಾಜ್ಯ ಸೇರಿ ದೇಶಾದ್ಯಂತ ಗ್ಯಾಸ್ ಸಮಸ್ಯೆ ಇದೇ. ಇದರ ನಡುವೆ ಸಿಲಿಂಡರ್ ಕಳ್ಳ ಸಾಗಣೆ ನಡೆಯುತ್ತಿದೆ ತಿರುಪತಿಯಲ್ಲಿ 833 ಅಡುಗೆ ಸಿಲಿಂಡರ್ ಗಳನ್ನು ಸೀಜ್ ಮಾಡಿಕೊಳ್ಳಲಾಗಿದೆ. ಹೌದು ಅಕ್ರಮವಾಗಿ ಸಾಗಿಸುತ್ತಿದ್ದ 822 ಸಿಲಿಂಡರ್ ಗಳನ್ನು ಸೀಜ್ ಮಾಡಿಕೊಳ್ಳಲಾಗಿದೆ. ಮೊದಲೇ ಸಿಲಿಂಡರ್ ಇಲ್ಲದೆ ಜನರು, ಹೋಟೆಲ್ ಮಾಲೀಕರು ಪರದಾಡುತ್ತಿದ್ದರೆ, ಇನ್ನು ಇಲ್ಲಿ ಅಕ್ರಮವಾಗಿ 822 ಕ್ಕೂ ಹೆಚ್ಚು ಸಿಲಿಂಡರ್ ಗಳನ್ನು ಸಾಗಿಸುತ್ತಿದ್ದು ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಎಲ್ಲಾ ಸಿಲಿಂಡರ್ ಗಳನ್ನು ಸೀಜ್ ಮಾಡಿಕೊಂಡಿದ್ದು ಸಿಲಿಂಡರ್ ಸಾಗಿಸುತ್ತಿದ್ದವರ ವಿರುದ್ಧ ಕ್ರಮ ಕೈಗೊಂಡಿದ್ದಾರೆ ಎಂದು ತಿಳಿದುಬಂದಿದೆ.














