Author: kannadanewsnow05

ಬಾಗಲಕೋಟೆ : ವಿದ್ಯಾರ್ಥಿನಿಯರ ಡ್ರೆಸ್ ಬದಲಾವಣೆ ಸ್ಥಳದಲ್ಲಿ ಕಲ್ಲೆಸೆದ ಹಿನ್ನೆಲೆಯಲ್ಲಿ ಯುವಕನಿಗೆ ಹಿಗ್ಗಾಮುಗ್ಗ ಥಳಿಸಿರುವ ಘಟನೆ ನಡೆದಿದ್ದು, ಈ ವೇಳೆ ಹಲ್ಲೆಯ ಬಳಿಕ ಯುವಕ ಹೃದಯಘಾತದಿಂದ ಸಾವನ್ನಪ್ಪಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಸಾವಳಗಿಯಲ್ಲಿ ನಡೆದಿದೆ. ಮೃತ ಯುವಕನನ್ನು ಸುದೀಪ ಪಾಂಗೆ (19) ಎಂದು ತಿಳಿದುಬಂದಿದೆ. ಹಲ್ಲೆ ಮಾಡುತ್ತಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಕೂಡ ಸೆರೆಯಾಗಿದೆ. ಯುವಕನಿಗೆ ಮೇಲೆ ಥಳಿಸಿದ ಮೂವರ ವಿರುದ್ಧ ಇದೀಗ FIR ದಾಖಲಾಗಿದೆ. ರಾಜು ಮಾಳೆ, ವಿಜಯ್ ಹಾಗು ಮಲ್ಲಿಕಾರ್ಜುನ ವಿರುದ್ಧ FIR ದಾಖಲಾಗಿದೆ. ವಿದ್ಯಾರ್ಥಿನಿಯರು ಡ್ರೆಸ್ ಚೇಂಜ್ ಮಾಡುವ ಸ್ಥಳದಲ್ಲಿ ಯುವಕ ಕಲ್ಲು ಎಸೆದು ಕುಚೇಷ್ಟೆ ಮಾಡಿದ್ದಾನೆ. ಹೀಗಾಗಿ ಸುದೀಪ್ ಮೇಲೆ ಮೂವರು ಹಿಗ್ಗಾಮುಗ್ಗ ಥಳಿಸಿದ್ದಾರೆ. ಈ ವೇಳೆ ಯುವಕ ಸುದೀಪ್ ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ.

Read More

ಉತ್ತರಕನ್ನಡ : ಪೋಷಕರು ಬುದ್ಧಿ ಮಾತು ಹೇಳಿದ್ದಕ್ಕೆ 15 ವರ್ಷದ ಬಾಲಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಗಣೇಶನಗರದಲ್ಲಿ ನಡೆದಿದೆ. ಮೊಬೈಲ್ ಬಿಟ್ಟು ಓದಿನ ಕಡೆಗೆ ಗಮನಹರಿಸಲು ಪೋಷಕರು ಬುದ್ದಿಮಾತು ಹೇಳಿದ್ದರು. ಇದರಿಂದ ಮನನೊಂದು ಒಂಬತ್ತನೇ ತರಗತಿ ವಿದ್ಯಾರ್ಥಿ ಶುಭಂ (15) ಆತ್ಮಹತ್ಯೆಗೆ ಶರಣಾಗಿದ್ದಾನೆ. ಪೋಷಕರು ಮೊಬೈಲ್ ಬಿಟ್ಟು ಓದು ಎಂದು ಕಿವಿಮಾತು ಹೇಳಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.ಮಾರಿಕಾಂಬ ಪ್ರೌಢ ಶಾಲೆಯಲ್ಲಿ ಶುಭಂ ನಾಗೇಶ್ ನಾಯಕ್ 9ನೇ ತರಗತಿಯಲ್ಲಿ ಓದುತ್ತಿದ್ದ. ಪರೀಕ್ಷೆ ಸಮಯದಲ್ಲಿ ಮೊಬೈಲ್ ನೋಡಬೇಡ ಎಂದು ಪೋಷಕರು ಬುದ್ಧಿವಾದ ಹೇಳಿದ್ದಾರೆ ಇದರಿಂದ ಮನನೊಂದು ಮನೆಯಲ್ಲಿ ಯಾರೂ ಇಲ್ಲದ ವೇಳೆ ವಿದ್ಯಾರ್ಥಿ ಶುಭಂ ನೇಣಿಗೆ ಶರಣಾಗಿದ್ದಾನೆ. ತಕ್ಷಣ ಟಿಎಸ್ಎಸ್ ಆಸ್ಪತ್ರೆಗೆ ದಾಖಲಿಸಿದರು ಚಿಕಿತ್ಸೆಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ . ಈ ಕುರಿತು ಶಿರಸಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ನವದೆಹಲಿ : ಇರಾನ್ ನೂತನ ಸುಪ್ರೀಂ ಲೀಡರ್ ಮೊಜ್ತಾಬಾ ಎರಡು ಕಾಲು ಕಟ್ ಆಗಿದೆ. ನೂತನ ಸುಪ್ರೀಂ ಲೀಡರ್ ಮೋಜ್ತಾಬಾ ಕೋಮಾಗೆ ಜಾರಿದ ಮಾಹಿತಿ ಲಭ್ಯವಾಗಿದೆ. ಸದ್ಯ ಟೆಹ್ರಾನ್ ಸಿನ ಯೂನಿವರ್ಸಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಮಾಹಿತಿ ಲಭ್ಯವಾಗಿದೆ. ಎರಡು ಕಾಲು ಕಳೆದುಕೊಂಡು ಆಸ್ಪತ್ರೆಯ ಬೆಡ್ ಮೇಲೆ ಕುಳಿತಿರುವ ಖಮೇನಿಯ ಫೋಟೋ ಇದೀಗ ವೈರಲಾಗಿದೆ. ಖಮೇನಿ ಕೋಮಾಗೆ ಜಾರಿದ್ದು, ಅಲ್ಲದೆ ಕಿಡ್ನಿ ಮೇಲೆ ಎಫೆಕ್ಟ್ ಆಗಿದ್ದು ಹೃದಯ ಸಂಬಂಧಿ ಕಾಯಿಲೆ ಕೂಡ ಇದೇ ಎನ್ನಲಾಗಿದೆ. ಇನ್ನು ಇಸ್ರೇಲ್ ಮತ್ತು ಅಮೆರಿಕ ಹೊಡೆತಕ್ಕೆ ಟೆರಾನ್ ತತ್ತರವಾಗಿದ್ದು ಇಸ್ರೇಲ್ ಹೇರ್ ಸ್ಟ್ರೈಕ್ ಗೆ ಕಟ್ಟಡಗಳು ಚದರ ಚಿತ್ರವಾಗಿವೆ. ವಸತಿ ಪ್ರದೇಶಗಳನ್ನು ಸಂಪೂರ್ಣವಾಗಿ ಸರ್ವನಾಶ ಮಾಡಿದೆ ಟೆಹ್ರಾನನ ಹಲೋ ಪ್ರದೇಶಗಳು ಸಂಪೂರ್ಣವಾಗಿ ಸ್ಮಶಾನದಂತಾಗಿದೆ.

Read More

ವಿಜಯಪುರ : ವಿಜಯಪುರದಲ್ಲಿ ಭೀಕರವಾದ ಅಪಘಾತ ಸಂಭವಿಸಿದ್ದು ಕಾರು ಪಲ್ಟಿಯಾಗಿ ಇಬ್ಬರು ಸ್ಥಳದಲ್ಲಿ ಸಾವನಪ್ಪಿದ್ದು ಮತ್ತಿಬ್ಬರಿಗೆ ಗಂಭೀರವಾದ ಗಾಯಗಳ ಘಟನೆ ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಬಸವನಹಟ್ಟಿ ಕ್ರಾಸ್ ಬಳಿ ಈ ಅಪಘಾತ ಸಂಭವಿಸಿದೆ. ಬೆಳಗಾವಿ ಜಿಲ್ಲೆಯ ಕಾಗವಾಡದಿಂದ ನಾಲ್ವರು ಶ್ರೀಶೈಲಕ್ಕೆ ತೆರಳುತ್ತಿದ್ದರು. ಈ ವೇಳೆ ನಿಯಂತ್ರಣ ಕಳೆದುಕೊಂಡು ಕಾರು ಪಲ್ಟಿಯಾಗಿದೆ. ಘಟನೆಯಲ್ಲಿ ಚಂದ್ರವ್ವ ಟಕ್ಕಣ್ಣನವರ (70) ಕಾಮಪ್ಪ ಅವರಾದಿ (65) ಮೃತ ದುರ್ದೈವಿಗಳು ಎಂದು ತಿಳಿದುಬಂದಿದೆ. ಗಾಯಗೊಂಡ ಇಬ್ಬರನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ನೀಡಲಾಗುತ್ತಿದೆ. ಅಪಘಾತದ ಕುರಿತು ಬಸವನ ಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಬೆಂಗಳೂರು : ಇತ್ತೀಚಿಗೆ ಕಾಂಗ್ರೆಸ್ ಪಕ್ಷದಲ್ಲಿ ಡಿನ್ನರ್ ಪಾಲಿಟಿಕ್ಸ್ ಹೆಚ್ಚಾಗಿದೆ. ಕಳೆದ ಕೆಲವು ದಿನಗಳ ಹಿಂದೆ ಕಾಂಗ್ರೆಸ್ ನ ಸಚಿವರಿಗೆ ಶಾಸಕರಿಗೆ ಡಿಸಿಎಂ ಡಿಕೆ ಶಿವಕುಮಾರ್ ಡಿನ್ನರ್ ಯೋಜನೆ ಮಾಡಿದ್ದರು. ಅದಾದ ಬಳಿಕ ಅಧಿಕ ಮಾರ್ಚ್ 16 ರಂದು ಸಿಎಂ ಸಿದ್ದರಾಮಯ್ಯ ಕಾಂಗ್ರೆಸ್ ಪಕ್ಷದ ಸಚಿವರಿಗೆ ಹಾಗೂ ಶಾಸಕರುಗಳಿಗೆ ಡಿನ್ನರ್ ಪಾರ್ಟಿ ಆಯೋಜನೆ ಮಾಡಿದ್ದಾರೆ. ಹೌದು ಮಾರ್ಚ್ 16ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸರ್ಕಾರಿ ನಿವಾಸ ‘ಕಾವೇರಿ’ಯಲ್ಲಿ ಸಚಿವರಿಗೆ ಡಿನ್ನರ್ ಪಾರ್ಟಿ ಆಯೋಜಿಸಿರುವುದು ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ. ವಿಧಾನಸಭೆ ಅಧಿವೇಶನ ನಡೆಯುತ್ತಿರುವ ಸಮಯದಲ್ಲೇ ಕಾಂಗ್ರೆಸ್ ಆಂತರಿಕ ರಾಜಕೀಯ ಚಟುವಟಿಕೆಗಳು ಚುರುಕುಗೊಂಡಿರುವುದು ಗಮನಾರ್ಹವಾಗಿದೆ. ಈ ಡಿನ್ನರ್ ಸಭೆಯಲ್ಲಿ ಮುಂದಿನ ರಾಜಕೀಯ ತಂತ್ರಗಳ ಬಗ್ಗೆ ಚರ್ಚೆಯಾಗುವ ಸಾಧ್ಯತೆ ಇದೆ. ವಿಶೇಷವಾಗಿ ಸ್ಥಳೀಯ ಸಂಸ್ಥೆಗಳ ಚುನಾವಣೆ, ಜಿಬಿಎ ಚುನಾವಣೆಗಳ ತಯಾರಿ, ಒಳಮೀಸಲಾತಿ ವಿಚಾರ ಸೇರಿದಂತೆ ಹಲವು ಪ್ರಮುಖ ವಿಷಯಗಳ ಬಗ್ಗೆ ಚರ್ಚೆಯಾಗಬಹುದು ಎಂದು ಪಕ್ಷದ ಮೂಲಗಳು ತಿಳಿಸಿವೆ. ಇತ್ತೀಚೆಗೆ ಕೆಪಿಸಿಸಿ ಅಧ್ಯಕ್ಷರಾಗಿ 6…

Read More

ಟೆಹ್ರಾನ್ : ಇರಾನ್ ನೂತನ ಸುಪ್ರೀಂ ಲೀಡರ್ ಮೊಜ್ತಾಬಾ ಎರಡು ಕಾಲು ಕಟ್ ಆಗಿದೆ. ನೂತನ ಸುಪ್ರೀಂ ಲೀಡರ್ ಮೋಜ್ತಾಬಾ ಕೋಮಾಗೆ ಜಾರಿದ ಮಾಹಿತಿ ಲಭ್ಯವಾಗಿದೆ. ಸದ್ಯ ಟೆಹ್ರಾನ್ ಸಿನ ಯೂನಿವರ್ಸಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಮಾಹಿತಿ ಲಭ್ಯವಾಗಿದೆ. ಇನ್ನು ಇಸ್ರೇಲ್ ಮತ್ತು ಅಮೆರಿಕ ಹೊಡೆತಕ್ಕೆ ಟೆರಾನ್ ತತ್ತರವಾಗಿದ್ದು ಇಸ್ರೇಲ್ ಹೇರ್ ಸ್ಟ್ರೈಕ್ ಗೆ ಕಟ್ಟಡಗಳು ಚದರ ಚಿತ್ರವಾಗಿವೆ. ವಸತಿ ಪ್ರದೇಶಗಳನ್ನು ಸಂಪೂರ್ಣವಾಗಿ ಸರ್ವನಾಶ ಮಾಡಿದೆ ಟೆಹ್ರಾನನ ಹಲೋ ಪ್ರದೇಶಗಳು ಸಂಪೂರ್ಣವಾಗಿ ಸ್ಮಶಾನದಂತಾಗಿದೆ.

Read More

ಬೆಂಗಳೂರು : ಬೆಂಗಳೂರಿನಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ ವಿಚಾರವಾಗಿ ಗೃಹಬಳಕೆ ಸಿಲಿಂಡರ್ ಕೊರತೆ ಇಲ್ಲ ಎಂದು ಜಿಲ್ಲಾಧಿಕಾರಿ ಜಗದೀಶ್ ಸ್ಪಷ್ಟಪಡಿಸಿದ್ದಾರೆ. ಗೃಹ ಬಳಕೆದಾರರು ಯಾವುದೇ ಆತಂಕ ಪಡುವುದು ಬೇಡ ಸಾಕಷ್ಟು ಪ್ರಮಾಣದಲ್ಲಿ ಅಡುಗೆ ಅನಿಲದ ದಾಸ್ತಾನು ಇದೆ ಎಂದು ತಿಳಿಸಿದರು. ಹೀಗಾಗಿ ಎಲ್‌ಪಿಜಿ ಸಿಲಿಂಡರ್ ಬಗ್ಗೆ ಯಾರು ಆತಂಕಪಡಬಾರದು. ಏನಾದರೂ ಕುಂದು ಕೊರತೆ ಇದ್ದರೆ ಸಹಾಯವಾಣಿ ಸಂಪರ್ಕಿಸಿ ಸಹಾಯವಾಣಿ ಸಂಖ್ಯೆ 9611404384 ಗೆ ಕರೆ ಮಾಡಲು ಮನವಿ ಮಾಡಿದರು ಬೆಂಗಳೂರು ಡಿಸಿ ಜಗದೀಶ್ ಅವರು ಈ ಕುರಿತು ಮಾಧ್ಯಮ ಪ್ರಕಟಣೆ ಹೊರಡಿಸಿದ್ದಾರೆ.

Read More

ಬೆಂಗಳೂರು : ಇಸ್ರೇಲ್ ಹಾಗೂ ಇರಾನ್ ನಡುವೆ ಯುದ್ಧದ ಪರಿಣಾಮ ಇದೀಗ ಭಾರತದಾದ್ಯಂತ ಹಲವಾರು ರೀತಿಯಲ್ಲಿ ಪರಿಣಾಮ ಬೀರಿದ್ದು ಅದರಲ್ಲೂ ಪ್ರಮುಖವಾಗಿ ಸಿಲಿಂಡರ್ ಪೂರೈಕೆಯಲ್ಲಿ ವ್ಯತ್ಯಯ್ಯ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಸಿಲಿಂಡರ್ ವಿತರಕರ ಕಲಾಟ ನಡೆಯುತ್ತಿದೆಯಾ ಎಂದು ತನಿಖೆ ನಡೆಸಲು ರಾಜ್ಯಕ್ಕೆ ಸಿಬಿಐ ಎಂಟ್ರಿ ಕೊಟ್ಟಿದೆ. ಹೌದು ರಾಜ್ಯದ ಹಲವೆಡೆ ವಾಣಿಜ್ಯ ಸಿಲಿಂಡರ್ ಕೊರತೆ ಹಿನ್ನೆಲೆಯಲ್ಲಿ, ವಾಣಿಜ್ಯ ಸಿಲಿಂಡರ್ ಅಭಾವ ಸಂಬಂಧ ಸಿಬಿಐ ತನಿಖೆ ನಡೆಸುತ್ತಿದ್ದು, ಕಮರ್ಷಿಯಲ್ ಸಿಲಿಂಡರ್ ವಿತರಕರ ಕಳ್ಳಾಟ ನಡೆಸುತ್ತಿದ್ದಾರಾ? ಎಂದು ತನಿಖೆ ನಡೆಸಲು ಇದೀಗ ಸಿಬಿಐ ಎಂಟ್ರಿ ಕೊಟ್ಟಿದೆ. ಈಗಾಗಲೇ ಸಿಲಿಂಡರ್ ಪೂರೈಕೆ ವ್ಯತ್ಯಯ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಬಹುತೇಕ ಹೋಟೆಲ್ ಗಳು ಬಂದಾಗಿವೆ. ಇನ್ನು ಗ್ರಾಹಕರು ಸಿಲಿಂಡರ್ ಇಲ್ಲದೆ ಪರದಾಡುತ್ತಿದ್ದಾರೆ. ಸಿಲಿಂಡರ್ ಏಜೆನ್ಸಿ ಅಂಗಡಿಗಳ ಮುಂದೆ ನಿಂತು ವಾಗ್ವಾದ ನಡೆಸುತ್ತಿದ್ದಾರೆ. ಅಲ್ಲದೆ ಕೆಲವು ಸಿಲಿಂಡರ್ ವಿತರಕರು ಸಿಲಿಂಡರ್ ದರ ಒಮ್ಮೆಲೆ ಏರಿಕೆ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಸಿಬಿಐ ತನಿಖೆಗೆ ಇಳಿದಿದೆ. 1. ಅಕ್ರಮದ ಸ್ವರೂಪ ಏನು?…

Read More

ಬೆಂಗಳೂರು : ಬಂಡಿಪುರ ಹಾಗೂ ನಾಗರಹೊಳೆ ಸಫಾರಿ ಪುನರಂಭದ ಕುರಿತು ಸಚಿವ ಈಶ್ವರ ಕಂಡ್ರೆ ಸಮರ್ಥಿಸಿಕೊಂಡಿದ್ದರು. ಇದೀಗ ಪ್ರವಾಸಿಗರಿಗೆ ಸಚಿವ ಈಶ್ವರ ಕಂಡ್ರೆ ಸಿಹಿ ಸುದ್ದಿ ಒಂದನ್ನು ನೀಡಿದ್ದು, ಸುಬ್ರಹ್ಮಣ್ಯ – ಕುಮಾರ ಪರ್ವತದ ಚಾರಣವನ್ನು ಬೆಳಗ್ಗೆ 5.30 ಗಂಟೆಗೆ ಆರಂಭಿಸಲು ಅರಣ್ಯ ಸಚಿವ ಈಶ್ವರ್ ಖಂಡ್ರೆ ಒಪ್ಪಿಗೆ ಸೂಚಿಸಿದರು.‌ ಪ್ರಶ್ನೋತ್ತರ ಅವಧಿಯಲ್ಲಿ ವಿಷಯ ಪ್ರಸ್ತಾಪಿಸಿದ ಶಾಸಕಿ ಭಾಗೀರಥಿ ಮುರುಳ್ಯಾ, ಸುಬ್ರಹ್ಮಣ್ಯದಿಂದ, ಕುಮಾರ ಪರ್ವತಕ್ಕೆ ಚಾರಣ ಹೋಗಲು ವ್ಯವಸ್ಥೆ ಬದಲಾಗಿದೆ. ಬೆಳಗ್ಗೆ 5 ಗಂಟೆ ಬದಲಾಗಿ, ಬೆಳಗ್ಗೆ 6 ಗಂಟೆಗೆ ಚಾರಣಕ್ಕೆ ಹೋಗಲು ಬಿಡಲಾಗ್ತಿದೆ. ಇದರಿಂದ ಶಿಖರಕ್ಕೆ ತಲುಪಲು ಸಮಯ ವ್ಯತ್ಯಾಸ ಆಗುತ್ತಿದೆ. ಶೇಷಗಿರಿ ಪರ್ವತಕ್ಕೆ ಹೋಗಲು ಬಿಡುತ್ತಿಲ್ಲ. ಹಾಗಾಗಿ, ಮೊದಲಿನಂತೆ ವ್ಯವಸ್ಥೆ ಮಾಡಿಕೊಡಬೇಕು ಎಂದು ಮನವಿ ಮಾಡಿದರು. ಇದಕ್ಕೆ ಸಚಿವ ಈಶ್ವರ್ ಖಂಡ್ರೆ ಉತ್ತರಿಸುತ್ತಾ, ಸುಬ್ರಹ್ಮಣ್ಯದಿಂದ ಕುಮಾರ ಪರ್ವತ ಚಾರಣ ಮಾಡಿ ವಾಪಸಾಗಲು ಎರಡು ದಿನ ಬೇಕು. ಹೋದವರು ಅಲ್ಲಿ ವಾಸ್ತವ್ಯ ಮಾಡುತ್ತಿದ್ದರು. ಅಲ್ಲಿ ಹೋಗುವ ಪ್ರವಾಸಿಗರ ರಕ್ಷಣೆಗೆ ಸಮಸ್ಯೆ…

Read More

ಬೆಂಗಳೂರು : ಬೇಸಿಗೆಯ ಬಿಸಿಲಿನ ಬೇಗೆಯಿಂದ ತಪ್ಪಿಸಿಕೊಳ್ಳಲು ಅನೇಕರು ತಣ್ಣಗಿರುವ ಬಿಯರ್ ಮೊರೆ ಹೋಗುತ್ತಾರೆ. ಗಂಟಲು ಒಣಗಿದಾಗ ‘ಚಿಲ್ಡ್’ ಬಿಯರ್ ಕುಡಿದರೆ ಹಾಯ್ ಎನಿಸಬಹುದು, ಆದರೆ ಇದು ನಿಮ್ಮ ದೇಹದ ಮೇಲೆ ಅಂದುಕೊಂಡಿದ್ದಕ್ಕಿಂತ ಭಿನ್ನವಾದ ಪರಿಣಾಮ ಬೀರಬಹುದು. ಈ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ 1. ನಿರ್ಜಲೀಕರಣದ (Dehydration) ಅಪಾಯ ಬಿಯರ್ ಕುಡಿದರೆ ದಾಹ ತೀರುತ್ತದೆ ಎಂಬುದು ತಪ್ಪು ಕಲ್ಪನೆ. ಆಲ್ಕೋಹಾಲ್ ಒಂದು ‘ಡಯೂರೆಟಿಕ್’ (Diuretic) ಆಗಿ ಕಾರ್ಯನಿರ್ವಹಿಸುತ್ತದೆ. ಅಂದರೆ, ಇದು ನಿಮ್ಮ ದೇಹದಿಂದ ಮೂತ್ರದ ರೂಪದಲ್ಲಿ ಹೆಚ್ಚು ನೀರನ್ನು ಹೊರಹಾಕುವಂತೆ ಮಾಡುತ್ತದೆ. ಬೇಸಿಗೆಯಲ್ಲಿ ಈಗಾಗಲೇ ಬೆವರಿನ ಮೂಲಕ ನೀರು ನಷ್ಟವಾಗುತ್ತಿರುತ್ತದೆ, ಇದರ ಜೊತೆಗೆ ಬಿಯರ್ ಸೇವಿಸಿದರೆ ದೇಹವು ಬೇಗನೆ ನಿರ್ಜಲೀಕರಣಕ್ಕೆ ಒಳಗಾಗುತ್ತದೆ. 2. ದೇಹದ ಉಷ್ಣಾಂಶ ಏರಿಕೆ ನಮಗೆ ಕುಡಿಯುವಾಗ ತಣ್ಣಗೆ ಎನಿಸಿದರೂ, ಆಲ್ಕೋಹಾಲ್ ರಕ್ತನಾಳಗಳನ್ನು ವಿಸ್ತರಿಸುತ್ತದೆ (Vasodilation). ಇದರಿಂದ ಚರ್ಮದ ಮೇಲ್ಮೈಗೆ ರಕ್ತದ ಹರಿವು ಹೆಚ್ಚಾಗಿ ತಾತ್ಕಾಲಿಕವಾಗಿ ಬಿಸಿಯ ಅನುಭವವಾಗುತ್ತದೆ. ಇದು ದೇಹದ ಆಂತರಿಕ ಉಷ್ಣತೆಯನ್ನು ನಿಯಂತ್ರಿಸುವ ಸಾಮರ್ಥ್ಯವನ್ನು…

Read More