Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

SHOCKING: 18 ದಿನಗಳ ಹಿಂದಷ್ಟೇ ಮದುವೆಯಾಗಿದ್ದ ಕಾನ್ಸ್‌ಟೇಬಲ್ ಹೃದಯಾಘಾತದಿಂದ ನಿಧನ

ಯುಪಿಐ ಪೇಮೆಂಟ್‌ ವಿಫಲವಾಗಲು ಕೇವಲ ಬ್ಯಾಂಕ್ ಬ್ಯಾಲೆನ್ಸ್ ಕಾರಣವಲ್ಲ! ಅಸಲಿ ಕಾರಣಗಳು ಇಲ್ಲಿವೆ! | UPI payments fail

BREAKING: ಅಸ್ಸಾಂ ವಿಧಾನಸಭೆಯಲ್ಲಿ ಏಕರೂಪ ನಾಗರಿಕ ಸಂಹಿತೆ (UCC) ಮಸೂದೆ ಅಂಗೀಕಾರ!

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಸಾಗರದಲ್ಲಿ ಚಿಗುರು ಜಂಬೋಕಿಡ್ಸ್ ಬೇಸಿಗೆ ಶಿಬಿರ: ಆಧುನಿಕತೆಯ ನಡುವೆ ಹಳ್ಳಿಸೊಗಡಿನ ಪರಿಚಯ
KARNATAKA

ಸಾಗರದಲ್ಲಿ ಚಿಗುರು ಜಂಬೋಕಿಡ್ಸ್ ಬೇಸಿಗೆ ಶಿಬಿರ: ಆಧುನಿಕತೆಯ ನಡುವೆ ಹಳ್ಳಿಸೊಗಡಿನ ಪರಿಚಯ

By ವಸಂತ ಬಿ ಈಶ್ವರಗೆರೆ

ಶಿವಮೊಗ್ಗ: ಸಾಗರದ ಚಿಗುರು ಜಂಬೋಕಿಡ್ಸ್ ಸಂಸ್ಥೆಯು ಆಯೋಜಿಸಿದ್ದ ಒಂದು ತಿಂಗಳ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭವು ಗುರುವಾರ ಸಂಜೆ ಅತ್ಯಂತ ಅರ್ಥಪೂರ್ಣವಾಗಿ ಜರುಗಿತು. ಆಧುನಿಕ ತಂತ್ರಜ್ಞಾನದ ಪ್ರಭಾವದಿಂದ ಯಂತ್ರಗಳನ್ನೇ ಹೆಚ್ಚಾಗಿ ಅವಲಂಬಿಸುತ್ತಿರುವ ಇಂದಿನ ದಿನಗಳಲ್ಲಿ, ಮಕ್ಕಳಿಗೆ ನಮ್ಮ ದೇಶಿ ಸಂಸ್ಕೃತಿ, ಸಂಪ್ರದಾಯ ಹಾಗೂ ಪರಿಸರದ ಅರಿವು ಮೂಡಿಸುವ ಮೂಲಕ ಈ ಶಿಬಿರವು ಎಲ್ಲರ ಗಮನ ಸೆಳೆಯಿತು.

ಆಧುನಿಕತೆಯ ಸೆಳೆತ ಮತ್ತು ಗ್ರಾಮೀಣ ಬದುಕಿನ ಮಹತ್ವ

ಸಮಾರಾರಂಭದಲ್ಲಿ ಶಿಬಿರಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಿ ಮಾತನಾಡಿದ ನ್ಯಾಯವಾದಿ ಸಹನಾ ಜಿ. ಭಟ್, ಆಧುನಿಕತೆಯ ಭರಾಟೆಯಲ್ಲಿ ಮನುಷ್ಯನ ಬದುಕು ಬದಲಾಗುತ್ತಿರುವ ಬಗೆಯನ್ನು ವಿವರಿಸಿದರು. ಹಿಂದೆ ಅಡುಗೆ ಮನೆಯಲ್ಲಿ ಬಳಸುತ್ತಿದ್ದ ಒನಕೆ, ಬೀಸುವ ಕಲ್ಲು, ಮೊಸರು ಕಡೆಯುವ ಸಾಧನಗಳು ಮತ್ತು ದೈನಂದಿನ ಶ್ರಮದಾಯಕ ಕಾಯಕಗಳು ಇಂದು ಯಂತ್ರಗಳ ಪಾಲಾಗಿವೆ. ಎಲ್ಲದಕ್ಕೂ ಯಂತ್ರಗಳನ್ನೇ ಅವಲಂಬಿಸುತ್ತಿರುವ ಈ ಕಾಲಘಟ್ಟದಲ್ಲಿ, ಶ್ರಮದಾಯಕ ಕಾಯಕಗಳಿಂದ ದೂರ ಸರಿಯುತ್ತಿರುವುದು ಮಾನಸಿಕ ಒತ್ತಡ ಮತ್ತು ರೋಗಗಳಿಗೆ ದಾರಿಯಾಗುತ್ತಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು. ಬೇಸಿಗೆ ಶಿಬಿರಗಳು ಮಕ್ಕಳನ್ನು ಕೇವಲ ನಾಲ್ಕು ಗೋಡೆಗಳ ಶಿಕ್ಷಣದಿಂದ ಹೊರತಂದು ಬದುಕಿನ ವಿಭಿನ್ನ ಮುಖಗಳನ್ನು ಪರಿಚಯಿಸುತ್ತವೆ ಎಂದು ಶ್ಲಾಘಿಸಿದರು.

ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾದ ‘ಹಳ್ಳಿಸೊಗಡು’ ಶೀರ್ಷಿಕೆಯಡಿ ಮಕ್ಕಳಿಗೆ ಗ್ರಾಮೀಣ ಪ್ರದೇಶದ ಮಹತ್ವವನ್ನು ಪ್ರಾತ್ಯಕ್ಷಿಕೆಗಳ ಮೂಲಕ ಪರಿಚಯಿಸಲಾಯಿತು. ಬೀಸುವ ಕಲ್ಲು, ಒನಕೆ, ಮೊಸರು ಕಡಿಯುವುದು, ಭತ್ತದ ಗೊಣಬೆ ಮತ್ತು ಹಸೆಚಿತ್ತಾರದ ಹೂಜಿಗಳ ಪ್ರದರ್ಶನವು ಮಕ್ಕಳಲ್ಲಿ ಅಪಾರ ಕುತೂಹಲ ಮೂಡಿಸಿತು. ಆಧುನಿಕತೆಯ ಸೆಳೆತಕ್ಕೆ ಸಿಲುಕಿ ದೇಶಿ ಕಲೆಗಳಿಂದ ದೂರ ಸರಿಯುತ್ತಿರುವ ಇಂದಿನ ಪೀಳಿಗೆಗೆ ಜಾನಪದ ಸಾಹಿತ್ಯ ಮತ್ತು ಗೀತೆಗಳ ಮಹತ್ವವನ್ನು ತಿಳಿಸಿಕೊಡುವುದು ಅಗತ್ಯವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

ಪರಿಸರ ಪ್ರಜ್ಞೆ ಮತ್ತು ಸಂಸ್ಕಾರದ ಅರಿವು

ಸಮಾರಾರಂಭದಲ್ಲಿ ಶಿಬಿರದ ಸಂಚಾಲಕರಾದ ಶೈಲ ಎಸ್. ಅವರು ಮಾತನಾಡಿ, ಬೇಸಿಗೆ ಶಿಬಿರದಲ್ಲಿ ಕೇವಲ ಆಟೋಟಗಳಷ್ಟೇ ಅಲ್ಲದೆ, ಪ್ರಚಲಿತ ಜ್ವಲಂತ ಸಮಸ್ಯೆಗಳ ಬಗ್ಗೆಯೂ ಮಕ್ಕಳಿಗೆ ಅರಿವು ಮೂಡಿಸಲಾಗಿದೆ ಎಂದರು. ಪರಿಸರ ಸಂರಕ್ಷಣೆ, ನೀರಿನ ಮಿತಬಳಕೆ, ಪ್ಲಾಸ್ಟಿಕ್ ಮುಕ್ತ ಜೀವನದ ಮಹತ್ವ ಮತ್ತು ಕಾಗದದ ಚೀಲ ತಯಾರಿಕೆಯ ಬಗ್ಗೆ ತರಬೇತಿ ನೀಡಲಾಯಿತು. ಇದರೊಂದಿಗೆ, ಮಕ್ಕಳಿಂದಲೇ ಮಣ್ಣು ಮತ್ತು ವಿವಿಧ ಹಣ್ಣು ಹಾಗೂ ಸೊಪ್ಪುಗಳ ಬೀಜಗಳನ್ನು ಬಳಸಿ ಬೀಜದ ಉಂಡೆಗಳನ್ನು ತಯಾರಿಸಿ, ಅವರಿಗೇ ವಿತರಿಸಲಾಯಿತು. ಮಕ್ಕಳು ತಮ್ಮ ಮನೆಗಳ ಅಂಗಳದಲ್ಲಿ ಈ ಬೀಜಗಳನ್ನು ಬೆಳೆಸುವ ಮೂಲಕ ಪರಿಸರ ಪ್ರೇಮಿಗಳಾಗಲಿ ಎಂಬ ಆಶಯವನ್ನು ಅವರು ವ್ಯಕ್ತಪಡಿಸಿದರು. ಜೊತೆಗೆ, ರಸ್ತೆ ನಿಯಮಗಳ ಪಾಲನೆಯ ಕುರಿತು ಪ್ರಾತ್ಯಕ್ಷಿಕೆ ಹಾಗೂ ಸಮಾಜಮುಖಿ ಕಾರ್ಯಗಳನ್ನು ನಡೆಸಲಾಗಿದೆ ಎಂದು ತಿಳಿಸಿದರು.

ಸಮಾರಾರಂಭದ ಅಂಗವಾಗಿ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರದರ್ಶನಗೊಂಡವು. ಈ ಸಂದರ್ಭದಲ್ಲಿ ಹಿರಿಯ ಕಲಾವಿದ ಉದಯಕುಮಾರ್ ಕುಂಸಿ, ಸಂಸ್ಥೆಯ ಪದಾಧಿಕಾರಿಗಳಾದ ಹೂವಪ್ಪ, ಹೆಚ್. ಸಂತೋಷ್, ಮಲ್ಲಮ್ಮ ಹಾಗೂ ಶಿಕ್ಷಕರಾದ ಮೇಘನಾ, ನಂದಿನಿ, ಐಶ್ವರ್ಯ, ಸಹನಾ, ಜೀನಾ, ತೆರೇಜಾ ಮತ್ತು ಸಂತೋಷ್ ಹೆಚ್. ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಒಟ್ಟಾರೆಯಾಗಿ, ಚಿಗುರು ಜಂಬೋಕಿಡ್ಸ್‌ನ ಈ ಬೇಸಿಗೆ ಶಿಬಿರವು ಮಕ್ಕಳಲ್ಲಿ ಸಂಸ್ಕೃತಿ, ಸಂಸ್ಕಾರ ಮತ್ತು ಸಾಮಾಜಿಕ ಜವಾಬ್ದಾರಿಯನ್ನು ಬೆಳೆಸುವಲ್ಲಿ ಯಶಸ್ವಿಯಾಗಿದೆ.

Share. Facebook Twitter LinkedIn WhatsApp Email

Related Posts

SHOCKING: 18 ದಿನಗಳ ಹಿಂದಷ್ಟೇ ಮದುವೆಯಾಗಿದ್ದ ಕಾನ್ಸ್‌ಟೇಬಲ್ ಹೃದಯಾಘಾತದಿಂದ ನಿಧನ

1 Min Read

KPCC ಅಧ್ಯಕ್ಷ ಸ್ಥಾನಕ್ಕೆ ಡಿಕೆ ಶಿವಕುಮಾರ್ ರಾಜೀನಾಮೆ ಸಾಧ್ಯತೆ : ಅಧ್ಯಕ್ಷ ಸ್ಥಾನದ ಮೇಲೆ ಸತೀಶ್ ಜಾರಕಿಹೊಳಿ ಕಣ್ಣು!

1 Min Read

BREAKING: ಕಾಂಗ್ರೆಸ್‌ನಲ್ಲಿ ಡಿಕೆಶಿ ಬಿಗ್ ಸರ್ಜರಿ: ನಿಕೇತ್ ರಾಜ್, ಭಾವನಾ ರಾಮಣ್ಣ ಸೇರಿ ಹಲವು ಕೆಪಿಸಿಸಿ ಪದಾಧಿಕಾರಿಗಳು ಹುದ್ದೆಯಿಂದ ವಜಾ!

2 Mins Read
Recent News

SHOCKING: 18 ದಿನಗಳ ಹಿಂದಷ್ಟೇ ಮದುವೆಯಾಗಿದ್ದ ಕಾನ್ಸ್‌ಟೇಬಲ್ ಹೃದಯಾಘಾತದಿಂದ ನಿಧನ

ಯುಪಿಐ ಪೇಮೆಂಟ್‌ ವಿಫಲವಾಗಲು ಕೇವಲ ಬ್ಯಾಂಕ್ ಬ್ಯಾಲೆನ್ಸ್ ಕಾರಣವಲ್ಲ! ಅಸಲಿ ಕಾರಣಗಳು ಇಲ್ಲಿವೆ! | UPI payments fail

BREAKING: ಅಸ್ಸಾಂ ವಿಧಾನಸಭೆಯಲ್ಲಿ ಏಕರೂಪ ನಾಗರಿಕ ಸಂಹಿತೆ (UCC) ಮಸೂದೆ ಅಂಗೀಕಾರ!

KPCC ಅಧ್ಯಕ್ಷ ಸ್ಥಾನಕ್ಕೆ ಡಿಕೆ ಶಿವಕುಮಾರ್ ರಾಜೀನಾಮೆ ಸಾಧ್ಯತೆ : ಅಧ್ಯಕ್ಷ ಸ್ಥಾನದ ಮೇಲೆ ಸತೀಶ್ ಜಾರಕಿಹೊಳಿ ಕಣ್ಣು!

State News
KARNATAKA

SHOCKING: 18 ದಿನಗಳ ಹಿಂದಷ್ಟೇ ಮದುವೆಯಾಗಿದ್ದ ಕಾನ್ಸ್‌ಟೇಬಲ್ ಹೃದಯಾಘಾತದಿಂದ ನಿಧನ

By ವಸಂತ ಬಿ ಈಶ್ವರಗೆರೆ KARNATAKA 1 Min Read

ಶಿವಮೊಗ್ಗ: ಇಲ್ಲಿನ ಕರ್ನಾಟಕ ರಾಜ್ಯ ಮೀಸಲು ಪೊಲೀಸ್ 8ನೇ ಪಡೆಯ ಪೊಲೀಸ್ ಕಾನ್ಸ್‌ಟೇಬಲ್ ಆಗಿ ಸೇವೆ ಸಲ್ಲಿಸುತ್ತಿದ್ದ ಈರಣ್ಣ ಗುಡಾದಾರ್,…

KPCC ಅಧ್ಯಕ್ಷ ಸ್ಥಾನಕ್ಕೆ ಡಿಕೆ ಶಿವಕುಮಾರ್ ರಾಜೀನಾಮೆ ಸಾಧ್ಯತೆ : ಅಧ್ಯಕ್ಷ ಸ್ಥಾನದ ಮೇಲೆ ಸತೀಶ್ ಜಾರಕಿಹೊಳಿ ಕಣ್ಣು!

BREAKING: ಕಾಂಗ್ರೆಸ್‌ನಲ್ಲಿ ಡಿಕೆಶಿ ಬಿಗ್ ಸರ್ಜರಿ: ನಿಕೇತ್ ರಾಜ್, ಭಾವನಾ ರಾಮಣ್ಣ ಸೇರಿ ಹಲವು ಕೆಪಿಸಿಸಿ ಪದಾಧಿಕಾರಿಗಳು ಹುದ್ದೆಯಿಂದ ವಜಾ!

BIG NEWS: ಕ್ರಿಪ್ಟೋ ಕರೆನ್ಸಿ ಹೆಸರಲ್ಲಿ 13,000 ಜನರಿಗೆ ಕೋಟ್ಯಂತರ ವಂಚನೆ: ತಮಿಳುನಾಡು ಮೂಲದ ಕಿಂಗ್‌ಪಿನ್ ದಾವಣಗೆರೆಯಲ್ಲಿ ಅರೆಸ್ಟ್

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.