Author: kannadanewsnow05

ಚಿತ್ರದುರ್ಗ : ರಾಜ್ಯದಲ್ಲಿ ಮತ್ತೊಂದು ಅಕ್ರಮ ನಡೆದಿರುವುದು ಬೆಳಕಿಗೆ ಬಂದಿದ್ದು, ಜಿಲ್ಲಾಧಿಕಾರಿ ಹಾಗೂ ಎಡಿಸಿಯವರ ಡಿಜಿಟಲ್ ಸಹಿ ದುರುಪಯೋಗಪಡಿಸಿಕೊಂಡು 15 ಲಕ್ಷ ರೂ. ಮೌಲ್ಯದ ನಕಲಿ ಬಿಲ್ ಸೃಷ್ಟಿಸಿದ್ದ ಐವರು ನೌಕರರನ್ನು ಬಂಧಿಸಿರುವ ಘಟನೆ ಚಿತ್ರದುರ್ಗದಲ್ಲಿ ಬೆಳಕಿಗೆ ಬಂದಿದೆ. ನಗರಾಭಿವೃದ್ಧಿ ವಿಭಾಗದಲ್ಲಿ ಹೊರಗುತ್ತಿಗೆ ನೌಕರ ಸೈಯದ್ ಸಾದಿಕ್, ವಿನಯ್ ಶರ್ಮಾ, ವಿಜಯ್ ಕುಮಾರ್, ಬಸವರಾಜ, ಮಹೆಬೂಬ್ ಭಾಷಾ ಹಾಗೂ ವೆಂಕಟೇಶ್ ಎಂಬ ಆರು ಜನರ ವಿರುದ್ಧ ಪ್ರಕರಣ ದಾಖಲಾಗಿದೆ. ಸದ್ಯ ಎ1 ಆರೋಪಿ ಸೈಯದ್ ಪರಾರಿಯಾಗಿದ್ದು, ಇನ್ನುಳಿದ ಐವರನ್ನು ಬಂಧಿಸಿದ್ದಾರೆ. ಇನ್ನೂ ಡಿಸಿ ಕಚೇರಿಯಲ್ಲಿ ಡಿಸಿ ಹಾಗೂ ಎಡಿಸಿ ಅವರಿಗೆ ಸಂಬಂಧಿತ ಡಿಎಸ್‌ಸಿ ಕೀ ಕಳ್ಳತನ ಮಾಡಿದ್ದಾರೆ ಎಂದು ನೌಕರ ಸೈಯದ್ ಸಾದಿಕ್ ವಿರುದ್ಧ ಕಳ್ಳತನ ಆರೋಪ ಕೇಳಿಬಂದಿದೆ. ಸದ್ಯ ಗುತ್ತಿಗೆ ನೌಕರರನ್ನು ಕೆಲಸದಿಂದ ವಜಾಗೊಳಿಸಿದ್ದು, ಓರ್ವ ಸರ್ಕಾರಿ ನೌಕರನನ್ನು ಅಮಾನತುಗೊಳಿಸಿದ್ದಾರೆ. ಈ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸುವುದಾಗಿ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ತಿಳಿಸಿದ್ದಾರೆ. ಜಿಲ್ಲಾ ನಗರಾಭಿವೃದ್ಧಿ ವಿಭಾಗದ ಐವರು ಸಿಎಲ್‌ಟಿಸಿ ಸಿಬ್ಬಂದಿ…

Read More

ಬೆಂಗಳೂರು : ಜೈಲುಗಳಲ್ಲಿ ಮಾದಕ ವಸ್ತು ನಿರ್ಮೂಲನೆಗೆ ಕಾರಾಗೃಹ ಇಲಾಖೆ ಡಿಜಿಪಿ ಅಲೋಕ್ ಕುಮಾರ್ ಮುಂದಾಗಿದ್ದು ರಾಜ್ಯಾದ್ಯಂತ ಜೈಲಿನಲ್ಲಿ ಮಾದಕ ವಸ್ತು ಪತ್ತೆ ಪರೀಕ್ಷೆ ನಡೆಸಲಾಗುತ್ತಿದೆ. ಈ ಮೂಲಕ ಜೈಲುಗಳಲ್ಲಿ ಡ್ರಗ್ಸ್ ನೆಟ್ವರ್ಕ್ ಬ್ರೇಕ್ ಹಾಕಲು ಇದೀಗ ಅಲೋಕ್ ಕುಮಾರ್ ಹೊಸ ಪ್ರಯತ್ನಕ್ಕೆ ಕೈಹಾಕಿದ್ದಾರೆ. ನಿಮ್ಹಾನ್ಸ್ ಆಸ್ಪತ್ರೆ ಜೊತೆ ಸೇರಿ ಡ್ರಗ್ಸ್ ಮುಕ್ತ ಕಾರಾಗೃಹ ಮಾಡಲು ಪಣ ತೊಟ್ಟಿದ್ದಾರೆ. ರಾಜ್ಯದ ಜೈಲುಗಳಲ್ಲಿ ಕೈದಿಗಳಿಗೆ ವಿವಿಧ ಮಾದರಿ ಡ್ರಗ್ಸ್ ಪರೀಕ್ಷೆ ನಡೆಸಲಾಗುತ್ತದೆ. ಸದ್ಯ ರಾಜ್ಯದ ಎಲ್ಲಾ ಜೈಲುಗಳಲ್ಲಿ ಶೇಕಡ 10 ರಷ್ಟು ಕೈದಿಗಳಿಗೆ ಡ್ರಗ್ಸ್ ಮಾದರಿ ಪರೀಕ್ಷೆ ನಡೆಸಲಾಗಿದೆ. ಜೈಲು ವೈದ್ಯಾಧಿಕಾರಿಗಳಿಂದ ಕೈದಿಗಳಿಗೆ ಮಾದಕ ವಸ್ತು ಪರೀಕ್ಷೆ ನಡೆಸಲಾಗಿದೆ. ಕೈದಿಗಳು ಡ್ರಗ್ ಅಡಿಕ್ಟ್ ಆಗಿದ್ದರೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತದೆ.

Read More

ನವದೆಹಲಿ : ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು (NHAI) ಪ್ರತಿ ವರ್ಷದಂತೆ ಈ ವರ್ಷವೂ ಟೋಲ್ ದರಗಳನ್ನು ಪರಿಷ್ಕರಿಸುತ್ತಿದ್ದು, ಏಪ್ರಿಲ್ 1, 2026 ರಿಂದ ಹೊಸ ದರಗಳು ಜಾರಿಗೆ ಬರಲಿವೆ. ವಾರ್ಷಿಕ ಪಾಸ್ ದರವು ಸುಮಾರು ₹3,000 ರಿಂದ ₹3,075 ಕ್ಕೆ ಏರಿಕೆಯಾಗುವ ಸಾಧ್ಯತೆಯಿದೆ. ಇದು ಮುಖ್ಯವಾಗಿ ಫಾಸ್ಟ್ಯಾಗ್ (FASTag) ಹೊಂದಿರುವ ಖಾಸಗಿ ವಾಹನ ಸವಾರರಿಗೆ ಅನ್ವಯಿಸಲಿದೆ. ಹಣದುಬ್ಬರ ಮತ್ತು ಸಗಟು ಬೆಲೆ ಸೂಚ್ಯಂಕದ (WPI) ಆಧಾರದ ಮೇಲೆ ಈ ಏರಿಕೆ ಮಾಡಲಾಗುತ್ತಿದೆ ಎಂದು ವರದಿಯಾಗಿದೆ. 1. ಟೋಲ್ ವಾರ್ಷಿಕ ಪಾಸ್ ದರ ಏರಿಕೆ ಪ್ರತಿದಿನ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಚರಿಸುವವರಿಗಾಗಿ ನೀಡಲಾಗುವ ವಾರ್ಷಿಕ ಪಾಸ್ ದರದಲ್ಲಿ ಏರಿಕೆ ಮಾಡಲಾಗಿದೆ. ಹಳೆಯ ದರ: ₹3,000 ಹೊಸ ದರ: ₹3,075 ನಿಯಮ: ಈ ಪಾಸ್ ಒಂದು ವರ್ಷ ಅಥವಾ ಗರಿಷ್ಠ 200 ಟೋಲ್ ಕ್ರಾಸ್‌ಗಳಿಗೆ ಮಾತ್ರ ಮಾನ್ಯವಾಗಿರುತ್ತದೆ. ಇವೆರಡರಲ್ಲಿ ಯಾವುದು ಮೊದಲು ಪೂರ್ಣಗೊಳ್ಳುತ್ತದೆಯೋ ಅಲ್ಲಿಗೆ ಪಾಸ್ ಅವಧಿ ಮುಕ್ತಾಯವಾಗುತ್ತದೆ. 2. ಸಾಮಾನ್ಯ ಟೋಲ್ ದರಗಳ ಹೆಚ್ಚಳ…

Read More

ತಿರುಪತಿ : ರಾಜ್ಯ ಸೇರಿ ದೇಶಾದ್ಯಂತ ಗ್ಯಾಸ್ ಸಮಸ್ಯೆ ಇದೇ. ಇದರ ನಡುವೆ ಸಿಲಿಂಡರ್ ಕಳ್ಳ ಸಾಗಣೆ ನಡೆಯುತ್ತಿದೆ ತಿರುಪತಿಯಲ್ಲಿ 833 ಅಡುಗೆ ಸಿಲಿಂಡರ್ ಗಳನ್ನು ಸೀಜ್ ಮಾಡಿಕೊಳ್ಳಲಾಗಿದೆ. ಹೌದು ಅಕ್ರಮವಾಗಿ ಸಾಗಿಸುತ್ತಿದ್ದ 822 ಸಿಲಿಂಡರ್ ಗಳನ್ನು ಸೀಜ್ ಮಾಡಿಕೊಳ್ಳಲಾಗಿದೆ. ಮೊದಲೇ ಸಿಲಿಂಡರ್ ಇಲ್ಲದೆ ಜನರು, ಹೋಟೆಲ್ ಮಾಲೀಕರು ಪರದಾಡುತ್ತಿದ್ದರೆ, ಇನ್ನು ಇಲ್ಲಿ ಅಕ್ರಮವಾಗಿ 822 ಕ್ಕೂ ಹೆಚ್ಚು ಸಿಲಿಂಡರ್ ಗಳನ್ನು ಸಾಗಿಸುತ್ತಿದ್ದು ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಎಲ್ಲಾ ಸಿಲಿಂಡರ್ ಗಳನ್ನು ಸೀಜ್ ಮಾಡಿಕೊಂಡಿದ್ದು ಸಿಲಿಂಡರ್ ಸಾಗಿಸುತ್ತಿದ್ದವರ ವಿರುದ್ಧ ಕ್ರಮ ಕೈಗೊಂಡಿದ್ದಾರೆ ಎಂದು ತಿಳಿದುಬಂದಿದೆ.

Read More

ಬೆಂಗಳೂರು : ಬಿಕ್ಲು ಶಿವ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಿನ್ನೆ ಬಿಜೆಪಿ ಶಾಸಕ ಭೈರತಿ ಬಸವರಾಜಗೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿತ್ತು. ಇದೀಗ ಪ್ರಮುಖ ಆರೋಪಿಗಳಿಗೆ ಡೀಫಾಲ್ಟ್ ಜಾಮೀನು ಮಂಜೂರು ಮಾಡಲಾಗಿದೆ. ಪೊಲೀಸರ ಲೋಪದಿಂದ ಕೊಲೆ ಆರೋಪಿಗಳಿಗೆ ಜಾಮೀನು ಮಂಜೂರು ಮಾಡಲಾಗಿದೆ. ಚಾರ್ಜ್ ಶೀಟ್ ಸಲ್ಲಿಕೆಯಲ್ಲಿ ವಿಳಂಬವಾಗಿ ಆರೋಪ ಪಟ್ಟಿ ಸಲ್ಲಿಸಿದ ಕಾರಣಕ್ಕೆ ಜಾಮೀನು ನೀಡಲಾಗಿದೆ. ಜಗ್ಗ ಅಲಿಯಾಸ್ ಜಗದೀಶ್, ಕೆ ಕಿರಣ್, ಬಿ ವಿಮಲ್ ರಾಜ್ ಹಾಗೂ ಮದನ್ ಗೆ ಜಾಮೀನು ಮಂಜೂರು ಮಾಡಲಾಗಿದೆ. ನ್ಯಾಯಮೂರ್ತಿ ಸುನಿಲ್ ದತ್ ಯಾದವ್ ಅವರಿದ್ದ ಹೈಕೋರ್ಟ್ ಪೀಠ ಜಾಮೀನು ನೀಡಿದೆ. ಕೊಲೆ ಕೇಸ್ನಲ್ಲಿ 90 ದಿನಗಳಲ್ಲಿ ಚಾರ್ಜ್ ಶೀಟ್ ಸಲ್ಲಿಸಬೇಕಾಗಿತ್ತು. ಆದರೆ ಕೋಕಾ ಕಾಯ್ದೆ ಅನ್ವಯಿಸಿ ಪೊಲೀಸರು ಹೆಚ್ಚುವರಿ ಸಮಯ ಪಡೆದಿದ್ದರು. ಕೋಕ ಕಾಯಿದೆ ಅನ್ವಯಿಸಿದ್ದನ್ನು ಡಿಸೆಂಬರ್ 19 ರಂದು ಹೈಕೋರ್ಟ್ ರದ್ದು ಪಡಿಸಿತ್ತು. ಕೋಕ ಕಾಯ್ದೆ ಅಡಿ ಚಾರ್ಜ್ ಶೀಟ್ ಸಲ್ಲಿಸಲು ಹೆಚ್ಚುವರಿ ಸಮಯವೂ ರದ್ದಾಗಿತ್ತು ಡಿಸೆಂಬರ್ 22ರಂದು ಡಿಫಾಲ್ಟ್ ಜಮೀನಿಗೆ…

Read More

ಬೆಂಗಳೂರು : ನಗರದ ಪೊಲೀಸರ ಹೆಸರಿನಲ್ಲಿ ಮಹಿಳೆಯೊಬ್ಬರಿಗೆ ಡಿಜಿಟಲ್ ಅರೆಸ್ಟ್‌ಗೊಳ ಪಡಿಸಿ ಹಣ ಸುಲಿಗೆಗೆ ಕಿಡಿಗೇಡಿಗಳು ಯತ್ನಿಸಿರುವ ಘಟನೆ ನಡೆದಿದೆ. ಈ ಸಂಬಂಧ ಇ-ಮೇಲ್ ಮೂಲಕ ಪೊಲೀಸರಿಗೆ ಸಂತ್ರಸ್ತೆ ದೂರು ನೀಡಿದ್ದು, ನಗರ ಪೊಲೀಸ್‌ ಆಯುಕ್ತರ ಸಹಿ ಹಾಗೂ ಕಚೇರಿ ಸೀಲ್ ನಕಲು ಮಾಡಿ ಸಂತ್ರಸ್ತೆಗೆ ನೋಟಿಸ್‌ ನೀಡಿ ವಂಚನೆಗೆ ಯತ್ನಿಸಿದ್ದಾರೆ. ಅಕ್ರಮ ಹಣ ವರ್ಗಾವಣೆ ಕೃತ್ಯದಲ್ಲಿ ತೊಡಗಿರುವುದಾಗಿ ಸಂತ್ರಸ್ತೆ ತಾಯಿಗೆ ನಗರ ಪೊಲೀಸ್ ಸೋಗಿನಲ್ಲಿ ಅಪರಿಚಿತ ಕರೆ ಮಾಡಿದ್ದಾನೆ. ಬಳಿಕ ತಮ್ಮ ಮಗಳಿಗೆ ಅವರು ಮೊಬೈಲ್ ಕೊಟ್ಟಿದ್ದಾರೆ. ಆ ಕರೆ ಸ್ವೀಕರಿಸಿದ ಸಂತ್ರಸ್ತೆಗೆ ನಿಮ್ಮ ತಾಯಿ ವಿರುದ್ಧ ಕೇಳಿ ಬಂದಿರುವ ಆರ್ಥಿಕ ವಂಚನೆ ಕೃತ್ಯದ ತನಿಖೆಗೆ ನಗರ ಪೊಲೀಸ್‌ ಆಯುಕ್ತರ ಆದೇಶವಿದೆ ಎಂದಿದ್ದಾನೆ. ಅಲ್ಲದೆ ವಾಟ್ಸಪ್‌ನಲ್ಲಿ ಆಯುಕ್ತರ ಸಹಿಯುಳ್ಳ ಆದೇಶದ ಪ್ರತಿಯನ್ನು ಕಳುಹಿಸಿದ್ದಾನೆ. ಈ ಕರೆ ಬಗ್ಗೆ ಶಂಕೆಗೊಂಡ ಅವರು, ಕೂಡಲೇ ಕರೆ ಸ್ಥಗಿತಗೊಳಿಸಿ ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಇಷ್ಟು ದಿನ ಇಡಿ…

Read More

ಬೆಂಗಳೂರು : ಸಿಲಿಂಡರ್ ಅಭಾವದ ಸಂಕಷ್ಟದ ಬೆನ್ನಲ್ಲೇ ರಾಜಧಾನಿಯ ಜನತೆಗೆ ಹೋಟೆಲ್ ಉದ್ಯಮಿಗಳು ಮತ್ತೊಂದು ಶಾಕ್ ನೀಡಿದ್ದಾರೆ. ದಿನಬಳಕೆ ವಸ್ತುಗಳ ಬೆಲೆ ಏರಿಕೆ ಹಾಗೂ ವಾಣಿಜ್ಯ ಬಳಕೆಯ ಗ್ಯಾಸ್ ಸಿಲಿಂಡರ್ ಕೊರತೆಯಿಂದಾಗಿ ಹೈರಾಣಾಗಿರುವ ಹೋಟೆಲ್ ಮಾಲೀಕರು, ಈಗ ಅನಿವಾರ್ಯವಾಗಿ ತಿಂಡಿಗಳ ಬೆಲೆಯನ್ನು ಏರಿಕೆ ಮಾಡಲು ನಿರ್ಧರಿಸಿದ್ದಾರೆ. ಹೌದು ಗ್ಯಾಸ್ ಸಿಲಿಂಡರ್ ಕೊರತೆ ತೀವ್ರವಾಗಿದ್ದು, ಬೆಂಗಳೂರಿನ ಹೋಟೆಲ್ ಮಾಲೀಕರಿಗೂ ಇದರ ಬಿಸಿ ತಟ್ಟಿರುವುದು ಹೊಸ ವಿಷಯವೇನಲ್ಲ. ಹೀಗಿರುವಾಗ ಹೋಟೆಲ್ ಉದ್ಯಮವನ್ನು ಉಳಿಸಿಕೊಳ್ಳಲು ಕೆಲ ಹೋಟೆಲ್ ಮಾಲೀಕರು ಅನಿವಾರ್ಯವಾಗಿ ಕಾಳಸಂತೆಯಲ್ಲಿ ದುಬಾರಿ ಬೆಲೆಗೆ ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ ಖರೀದಿಸಲು ಮುಂದಾಗಿದ್ದಾರೆ. ಇದರಿಂದ ಆಹಾರ ಪದಾರ್ಥಗಳ ಬೆಲೆಯೂ ಹೆಚ್ಚಾಗಿದ್ದು, ಗ್ರಾಹಕ ಜೇಬಿಗೆ ಬಿಸಿ ಮುಟ್ಟಿಸಿವೆ. ಹೋಟೆಲ್ ವ್ಯವಹಾರವನ್ನು ನಿಲ್ಲಿಸಲು ಸಾಧ್ಯವಿಲ್ಲದ ಕಾರಣ ಹೆಚ್ಚುವರಿ ಹಣ ನೀಡಿ ಗ್ಯಾಸ್ ಖರೀದಿಸಿ ಹೋಟೆಲ್ ನಡೆಸಬೇಕಾದ ಅನಿವಾರ್ಯತೆ ಎದುರಾಗಿದೆ. ಈ ಹೆಚ್ಚುವರಿ ಖರ್ಚಿನ ಪರಿಣಾಮವಾಗಿ ಇದೀಗ ಗ್ರಾಹಕರಿಗೂ ಬಿಗ್ ಶಾಕ್ ಎದುರಾಗಿದೆ. ಗ್ಯಾಸ್ ಕೊರತೆಯ ಹಿನ್ನಲೆಯಲ್ಲಿ ಹಲವು ಹೋಟೆಲ್‌ಗಳಲ್ಲಿ ಆಹಾರ…

Read More

ಉಡುಪಿ : ರಾಜ್ಯದ ವಿವಿಧೆಡೆ ಏಕಕಾಲದಲ್ಲಿ ನಡೆದ ಲೋಕಾಯುಕ್ತ ದಾಳಿಯ ಭಾಗವಾಗಿ ಉಡುಪಿ ಜಿಲ್ಲಾ ಅಬಕಾರಿ ಡಿಸಿ ಶ್ರೀನಿವಾಸ್ ಟಿ.ಎಂ ಅವರಿಗೆ ಸಂಬಂಧಿಸಿದ ಸ್ಥಳಗಳ ಮೇಲೂ ಮಹತ್ವದ ಶೋಧ ಕಾರ್ಯಾಚರಣೆ ನಡೆಸಲಾಗಿದ್ದು, ಸುಮಾರು ರೂ.8 ಕೋಟಿ 69 ಲಕ್ಷ ಮೌಲ್ಯದ ಅಸಮತೋಲನ ಆಸ್ತಿ ಪತ್ತೆಯಾಗಿದೆ ಎಂದು ಲೋಕಾಯುಕ್ತ ಅಧಿಕಾರಿಗಳು ತಿಳಿಸಿದ್ದಾರೆ. ಲೋಕಾಯುಕ್ತ ಮಂಗಳೂರು ವಿಭಾಗದ ಎಸ್ಪಿ ದಿನೇಶ್ ಕುಮಾರ್ ಅವರ ನೇತೃತ್ವದಲ್ಲಿ ಮಾರ್ಚ್ 11ರಿಂದ ಮಾರ್ಚ್ 12ರವರೆಗೆ ಎರಡು ದಿನಗಳ ಕಾಲ ಈ ಶೋಧ ಕಾರ್ಯಾಚರಣೆ ನಡೆದಿತ್ತು. ಅಧಿಕಾರಿಗೆ ಸಂಬಂಧಿಸಿದಂತೆ ಒಟ್ಟು 15 ಸ್ಥಳಗಳಲ್ಲಿ ಅಧಿಕಾರಿಗಳು ದಾಳಿ ನಡೆಸಿದರು. ದಾಳಿಯ ವೇಳೆ ಅಧಿಕಾರಿಗಳಿಗೆ 11 ನಿವೇಶನಗಳು, 6 ವಾಸದ ಮನೆಗಳು ಹಾಗೂ 31 ಎಕರೆ ಕೃಷಿ ಜಮೀನು ಸೇರಿದಂತೆ ಒಟ್ಟು ರೂ.6,90,64,716 ಮೌಲ್ಯದ ಸ್ಥಿರಾಸ್ತಿಗಳು ಪತ್ತೆಯಾಗಿವೆ ಎಂದು ತಿಳಿದು ಬಂದಿದೆ. ಅಲ್ಲದೇ ವಿವಿಧ ರೂಪದಲ್ಲಿ ಭಾರಿ ಪ್ರಮಾಣದ ಚರಾಸ್ತಿಯೂ ಪತ್ತೆಯಾಗಿದೆ. ರೂ. 3,95,941 ನಗದು ರೂ. 1,47,50,506 ಮೌಲ್ಯದ ಚಿನ್ನಾಭರಣ, ರೂ.…

Read More

ಅವರು ಹೊಸದನ್ನು ಮಾಡಲು ಪ್ರಾರಂಭಿಸಿದಾಗ, ಅವರು ಅವರನ್ನು ಒಳ್ಳೆಯ ಇಚ್ಛೆಯ ವ್ಯಕ್ತಿಯಾಗಿ ನೋಡುತ್ತಾರೆ ಮತ್ತು ಅದನ್ನು ಪ್ರಾರಂಭಿಸಲು ಕೇಳುತ್ತಾರೆ. ಏಕೆಂದರೆ ಅವರು ಪ್ರಾರಂಭಿಸಿದ ಎಲ್ಲವೂ ಯಶಸ್ವಿಯಾಗುತ್ತದೆ. ಪ್ರತಿ ದಿನ ವ್ಯಾಪಾರ ಆರಂಭಿಸುವಾಗ ಒಳ್ಳೆಯವರಂತೆ ಕಾಣುತ್ತಾ ವ್ಯಾಪಾರ ಮಾಡಬೇಕು ಎಂದು ಅನಿಸುವ ಸಂದರ್ಭಗಳು ಎದುರಾಗುತ್ತವೆ. ಅದೇ ರೀತಿ ಶುಭ ಕಾರ್ಯಗಳಿಗೆ ಹೋಗುವಾಗ ಅದೃಷ್ಟವಂತರನ್ನು ನೋಡುವುದು ತುಂಬಾ ವಿಶೇಷ ಎಂದು ಹಲವರು ಹೇಳುತ್ತಾರೆ. ಅಧ್ಯಾತ್ಮದ ಕುರಿತಾದ ಈ ಪೋಸ್ಟ್‌ನಲ್ಲಿ, ನಾವು ರಾಶಿಚಕ್ರ ಚಿಹ್ನೆಯನ್ನು ಹೊಂದಿರುವವರನ್ನು ನೋಡುವ ಬದಲು ಆಂಜನೇಯನನ್ನು ಯಾವುದೇ ರೀತಿಯಲ್ಲಿ ಪೂಜಿಸಿದರೆ, ನಾವು ಅಂದುಕೊಂಡಿದ್ದೆಲ್ಲವೂ ಈಡೇರುತ್ತದೆ ಎಂದು ನಾವು ನೋಡಲಿದ್ದೇವೆ. ಶ್ರೀ ಸಿಗಂದೂರು ಚೌಡೇಶ್ವರಿ ಜ್ಯೋತಿಷ್ಯ ಪೀಠ ನಂ 1ಕೇರಳ ಕೊಳ್ಳೇಗಾಲದ ಮಹಾ ಮಾಂತ್ರಿಕ ಜ್ಯೋತಿಷ್ಯರು ವಿದ್ವಾನ್ ವಿದ್ಯಾಧರ್ ನಕ್ಷತ್ರಿ ತಂತ್ರಿ ನಂ:- 9686268564. ನಂ 1ವಶೀಕರಣ ಸ್ಪೆಷಲಿಸ್ಟ್ ಒಂದು ಕರೆಯಲ್ಲಿ ಪರಿಹಾರ ತಿಳಿಸುತ್ತಾರೆ ತಾವು ಎಷ್ಟೋ ಜ್ಯೋತಿಷ್ಯರಲ್ಲಿ ಕೇಳಿಯು ಪರಿಹಾರ ಸಿಗದೇ ಮನನೊಂದಿದ್ದರೆ ಪರಿಹಾರ ನಿಮ್ಮ ಸಮಸ್ಯೆಗಳಾದ ಅತ್ತೆ-ಸೊಸೆ ಕಿರಿಕಿರಿ, ಪ್ರೀತಿಯಲ್ಲಿ ನಂಬಿ ಮೋಸ, ಇಷ್ಟ ಪಟ್ಟವರು ನಿಮ್ಮಂತೆ ಆಗಲು,…

Read More

ನವದೆಹಲಿ : ಇರಾನ್ ಮೇಲೆ ಅಮೆರಿಕಾ ಅತಿದೊಡ್ಡ ದಾಳಿ ನಡೆಸಿದೆ. ದಾಳಿ ಬಳಿಕ ಟ್ವೀಟ್ ಮೂಲಕ ಇರಾನ್ಗೆ ಟ್ರಂಪ್ ಎಚ್ಚರಿಕೆ ನೀಡಿದ್ದಾರೆ. ಕೆಲವೇ ಸಮಯದ ಹಿಂದೆ ಶಕ್ತಿಶಾಲಿ ಬಾಂಬ್ ದಾಳಿ ನಡೆಸಿದೆ. ಯುನೈಟೆಡ್ ಸ್ಟೇಟ್ಸ್ ಸೆಂಟ್ರಲ್ ಕಮಾಂಡ್ ಬಾಂಬ್ ದಾಳಿ ನಡೆಸಿದೆ ಇದು ಮಧ್ಯಪ್ರಾಚ್ಯದ ಇತಿಹಾಸದಲ್ಲಿ ಅತ್ಯಂತ ಶಕ್ತಿಶಾಲಿ ಬಾಂಬ್ ದಾಳಿಯಾಗಿದೆ. ಇರಾನಿನ ಕಿರೀಟ ಪ್ರಾಯವಾದ ಖಾರ್ಗ ದ್ವೀಪದ ಮೇಲೆ ದಾಳಿ ನಡೆಸಿದ. ದ್ವೀಪದಲ್ಲಿರುವ ಪ್ರತಿಯೊಂದು ಮಿಲಿಟರಿ ಕೇಂದ್ರವನ್ನು ಸರ್ವನಾಶ ಮಾಡಿದ್ದೇವೆ. ಹಾಗಾಗಿ ಇರಾನ್ ತಮ್ಮ ಅಳಿಯುಳಿದ ದೇಶವನ್ನು ಉಳಿಸಿಕೊಳ್ಳಬೇಕು ಎಂದು ಕೊನೆ ಎಚ್ಚರಿಕೆ ನೀಡಿದ್ದಾರೆ. ಸ್ವಲ್ಪ ಸಮಯದ ಹಿಂದೆ ನನ್ನ ನಿರ್ದೇಶನದಂತೆ ಯುನೈಟೆಡ್ ಸ್ಟೇಟ್ಸ್ ಸೆಂಟ್ರಲ್ ಕಮಾಂಡ್ ಮಧ್ಯಪ್ರಾಚ್ಯದ ಇತಿಹಾಸದಲ್ಲಿ ಅತ್ಯಂತ ಶಕ್ತಿಶಾಲಿಗಳಲ್ಲಿ ಒಂದನ್ನು ನಡೆಸಿದೆ ಇರಾನ್ನ ಕಿರೀಟ ಪ್ರಾಯವಾದ ಖಾರ್ಗ ದ್ವೀಪದಲ್ಲಿರುವ ಪ್ರತಿಯೊಂದು ಮಿಲಿಟರಿ ಗುರಿಯನ್ನು ಸಂಪೂರ್ಣವಾಗಿ ದ್ವಂಸಗೊಳಿಸಿದೆ ನಮ್ಮ ಶಸ್ತ್ರಾಸ್ತ್ರಗಳು ಜಗತ್ತು ಇರುವವರೆಗೂ ಕಂಡಿರದ ಅತ್ಯಂತ ಶಕ್ತಿಶಾಲಿ ಮತ್ತು ಅತ್ಯಾಧುನಿಕ ಅಸ್ತ್ರಗಳಾಗಿವೆ. ಸೌಜನ್ಯಕ್ಕಾಗಿ ನಾನು ದೀಪದಲ್ಲಿರುವ ತೈಲ…

Read More