ವಾಷಿಂಗ್ಟನ್: ವಿಜ್ಞಾನಿಗಳು ನಡೆಸಿದ ಹೊಸ ಸಂಶೋಧನೆಯೊಂದು ಭೂಗರ್ಭದ ಬಗ್ಗೆ ಆತಂಕಕಾರಿ ವಿಷಯವನ್ನು ಹೊರಹಾಕಿದೆ. ಉತ್ತರ ಅಮೆರಿಕದ ಪಶ್ಚಿಮ ಕರಾವಳಿಯ ಭಾಗವಾದ ‘ಕ್ಯಾಸ್ಕೇಡಿಯಾ’ (Cascadia) ಸಬ್‌ಡಕ್ಷನ್ ವಲಯದ ಅಡಿಯಲ್ಲಿ ಭೂಮಿಯ ಮೇಲ್ಪದರ ಅಥವಾ ಭೂಕವಚ (Earth’s Crust) ಸೀಳಾಗುತ್ತಿರುವುದು ಪತ್ತೆಯಾಗಿದೆ.
ಇತ್ತೀಚಿನ ಭೂಕಂಪನ ದತ್ತಾಂಶಗಳನ್ನು (Seismic Data) ವಿಶ್ಲೇಷಿಸಿದಾಗ, ಕ್ಯಾಸ್ಕೇಡಿಯಾ ಭಾಗದಲ್ಲಿರುವ ‘ವಾನ್ ಡಿ ಫುಕಾ’ (Juan de Fuca) ಎಂಬ ಸಾಗರ ಫಲಕವು (Oceanic Plate) ಭೂಮಿಯ ಒಳಭಾಗಕ್ಕೆ ಕುಸಿಯುತ್ತಿದ್ದು, ಅಲ್ಲಿ ಭಾರಿ ಬಿರುಕುಗಳು ಕಾಣಿಸಿಕೊಂಡಿವೆ.
ಭೂಕವಚ ಈ ರೀತಿ ಒಡೆಯುತ್ತಿರುವುದು ಭವಿಷ್ಯದಲ್ಲಿ ಭೀಕರ ಭೂಕಂಪ ಅಥವಾ ಸುನಾಮಿಗೆ ನಾಂದಿಯಾಗಬಹುದು ಎಂದು ಭೂವಿಜ್ಞಾನಿಗಳು ಎಚ್ಚರಿಸಿದ್ದಾರೆ.
ಸಾಮಾನ್ಯವಾಗಿ ಭೂಫಲಕಗಳು ಒಂದರ ಕೆಳಗೆ ಒಂದು ಜಾರುತ್ತವೆ, ಆದರೆ ಈ ರೀತಿ ಫಲಕಗಳೇ ಸೀಳಾಗುತ್ತಿರುವುದು ಅಪರೂಪದ ವಿದ್ಯಮಾನವಾಗಿದೆ.
ಈ ಬಿರುಕಿನಿಂದಾಗಿ ಭೂಮಿಯ ಒಳಗಿನ ಒತ್ತಡದಲ್ಲಿ ಏರುಪೇರಾಗಬಹುದು. ಇದು ಅಮೆರಿಕದ ವಾಷಿಂಗ್ಟನ್ ಮತ್ತು ಒರೆಗಾನ್ ಪ್ರಾಂತ್ಯಗಳಲ್ಲಿ ದೊಡ್ಡ ಮಟ್ಟದ ಭೂಕಂಪನ ಅಪಾಯವನ್ನು (Mega-thrust earthquake) ಹೆಚ್ಚಿಸಿದೆ ಎಂದು ವರದಿಗಳು ಹೇಳುತ್ತಿವೆ.








