Subscribe to Updates
Get the latest creative news from FooBar about art, design and business.
Author: kannadanewsnow05
ಬೆಂಗಳೂರು : ಆರೋಗ್ಯ ಇಲಾಖೆಯ ಇತ್ತೀಚಿನ ದತ್ತಾಂಶಗಳ ಪ್ರಕಾರ, ರಾಜ್ಯದಲ್ಲಿ ಪ್ರತಿವರ್ಷ ಕ್ಯಾನ್ಸರ್ ಪೀಡಿತರ ಸಂಖ್ಯೆ ಹೆಚ್ಚುತ್ತಲೇ ಇದೆ. ಕಳೆದ ಆರು ತಿಂಗಳಲ್ಲೇ 50 ಸಾವಿರ ಜನರಲ್ಲಿ ಈ ರೋಗ ಕಾಣಿಸಿಕೊಂಡಿರುವುದು ಸಾರ್ವಜನಿಕರಲ್ಲಿ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಆತಂಕ ಮೂಡಿಸಿದೆ. ಹೌದು ರಾಜ್ಯದಲ್ಲಿ ಕಳೆದ 6 ತಿಂಗಳಲ್ಲಿ ಬಾಯಿ, ಗರ್ಭಕಂಠ, ಸ್ತನ ಕ್ಯಾನ್ಸರ್‌ಗಳಿಗೆ 45153 ಮಂದಿ ತುತ್ತಾಗಿರುವ ಶಂಕೆ (ಸಸ್ಪೆಕ್ವೆಡ್ ಕೇಸ್) ಇದ್ದು, ಈ ಪೈಕಿ 8894 ಜನರಲ್ಲಿ ಕ್ಯಾನ್ಸರ್ ಇರುವುದು ದೃಢಪಟ್ಟಿದೆ. ಇವರಲ್ಲಿ 8045 ಮಂದಿ ಚಿಕಿತ್ಸೆಗೆ ಒಳಗಾಗಿದ್ದಾರೆ. ರಾಜ್ಯ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಗೃಹ ಆರೋಗ್ಯ ಯೋಜನೆಯಡಿ ಕಳೆದ 6 ತಿಂಗಳಲ್ಲಿ ಆಶಾ ಕಾರ್ಯಕರ್ತೆಯರು ಮನೆ, ಮನೆಗೆ ತೆರಳಿ 88.84 ಲಕ್ಷ ಜನರಿಗೆ ಕ್ಯಾನ್ಸರ್ ತಪಾಸಣೆ ನಡೆಸಿದ್ದಾರೆ. 52 ಲಕ್ಷ ಜನರಿಗೆ ಬಾಯಿ ಕ್ಯಾನ್ಸರ್ ತಪಾಸಣೆ ನಡೆಸಿದಾಗ, 21157 ಮಂದಿಯಲ್ಲಿ ಇದರ ಲಕ್ಷಣ ಕಾಣಿಸಿಕೊಂಡಿದ್ದು, 3964 ಜನರಿಗೆ ದೃಢಪಟ್ಟಿದೆ. ಅದೇ ರೀತಿ 20.70 ಲಕ್ಷ…
ವಿಜಯನಗರ : ಆಸ್ತಿ ಆಸೆಗಾಗಿ ಹೆತ್ತ ಅಣ್ಣನನ್ನೇ ತಮ್ಮ ಮತ್ತು ಆತನ ಸ್ನೇಹಿತ ಸೇರಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನಲ್ಲಿ ನಡೆದಿದೆ. ಕೊಲೆಗೀಡಾದ ಯುವಕನನ್ನು ಹರಪನಹಳ್ಳಿ ತಾಲೂಕಿನ ಹಗರಿ ಶಿರನಹಳ್ಳಿ ಗ್ರಾಮದ ಮರಳುಸಿದ್ದೇಶ (26) ಎಂದು ಗುರುತಿಸಲಾಗಿದೆ. ಇನ್ನು ಕೊಲೆ ಮಾಡಿದ ಈತನ ಸ್ವಂತ ತಮ್ಮ ಹಗರಿಶಿರನಹಳ್ಳಿಯ ಪತ್ರಿಗೌಡ (24) ಹಾಗೂ ಈತನ ಸ್ನೇಹಿತ ಕಡಬಗೆರೆ ಗ್ರಾಮದ ಉತ್ತಂಗಿ ನಾರಪ್ಪ (29) ಎಂಬವರನ್ನು ಬಂಧಿಸಲಾಗಿದೆ. ಕೊಲೆ ಮಾಡಿದ ಬಳಿಕ ಇದೊಂದು ರಸ್ತೆ ಅಪಘಾತ ಎಂದು ಬಿಂಬಿಸಲು ಯತ್ನಿಸಿದ ಆರೋಪಿಗಳ ಬಣ್ಣ ಬಯಲಾಗಿದೆ. ಅರಸೀಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತ ಮರಳುಸಿದ್ದೇಶ ಮನೆಯ ಜವಾಬ್ದಾರಿ, ಜಮೀನು, ಟ್ರ್ಯಾಕ್ಟರ್ ನೋಡಿಕೊಳ್ಳುತ್ತಿದ್ದ. ಆದರೆ ಆಸ್ತಿಯಲ್ಲಿ ಪಾಲು ಬೇಕು, ಹಂಚಿ ಕೊಡಿ ಎಂದು ತಾಯಿ ಮತ್ತು ಅಣ್ಣನೊಂದಿಗೆ ಪತ್ರಿಗೌಡ ಜಗಳವಾಡಿದ್ದ. ಮಾ.13ರಂದು ಮಧ್ಯಾಹ್ನ ಇದೇ ವಿಚಾರವಾಗಿ ಜಗಳ ತೆಗೆದಿದ್ದ ಆರೋಪಿ ಪತ್ರಿಗೌಡ, ಪಾಲು ಕೊಡದಿದ್ದರೆ ನಾನು ದುಡಿಯಲು ಬೆಂಗಳೂರಿಗೆ ಹೋಗುತ್ತೇನೆ…
ದಕ್ಷಿಣಕನ್ನಡ : ಸಾಮಾನ್ಯವಾಗಿ ಸಂಚಾರ ನಿಯಮ ಉಲ್ಲಂಘನೆ ಮಾಡಿದ ಯಾವುದೇ ವ್ಯಕ್ತಿ ಇರಲಿ ಕೋರ್ಟ್ ದಂಡ ವಿಧಿಸುತ್ತೆ. ಆದರೆ ದಕ್ಷಿಣ ಕನ್ನಡದಲ್ಲಿ ಕೋರ್ಟ್ ಅಚ್ಚರಿಯ ಶಿಕ್ಷೆ ನೀಡಿದ್ದು ಯುವಕನೊಬ್ಬ ಸಂಚಾರಿ ನಿಯಮ ಉಲ್ಲಂಘಿಸಿದ್ದ ಈ ನೆಲೆಯಲ್ಲಿ ಆತನಿಗೆ ಕೋರ್ಟ್ ಸಾರ್ವಜನಿಕ ಸ್ಥಳದಲ್ಲಿ ಟ್ರಾಫಿಕ್ ರೂಲ್ಸ್ ಬಗ್ಗೆ ಜಾಗೃತಿ ಮೂಡಿಸುವ ಶಿಕ್ಷೆ ವಿಧಿಸಿದೆ. ಹೌದು ಸುಳ್ಯ ನಿವಾಸಿ ರಕ್ಷಿತ್ ಜಿ. ಎಂಬವರು ಸುಳ್ಯ ಪೇಟೆಯಲ್ಲಿ ಹಲವು ಬಾರಿ ಸಂಚಾರ ನಿಯಮಗಳನ್ನು ಉಲ್ಲಂಘಿಸಿದ್ದ. ಈ ಹಿನ್ನೆಲೆಯಲ್ಲಿ, ಸುಳ್ಯ ಪೊಲೀಸ್ ಠಾಣೆಯಲ್ಲಿ ಐಎಂವಿ ಕಾಯ್ದೆಯ ಕಲಂ 119 R/w 177, 184 ಹಾಗೂ 194(C) ಅಡಿಯಲ್ಲಿ ಮೂರು ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದವು. ಪ್ರಕರಣಗಳ ಸಂಬಂಧ ಸುಳ್ಯ ಠಾಣೆ ಪೊಲೀಸ್ ಉಪನಿರೀಕ್ಷಕ ಸಂತೋಷ್ ಬಿ.ಪಿ. ಸುಳ್ಯ ಎಸ್‌ಸಿಜೆ ಮತ್ತು ಜೆಎಂಎಫ್‌ಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪಿಗೆ ಎರಡು ಪ್ರಕರಣಗಳಲ್ಲಿ ಒಟ್ಟು 3,000 ರೂ. ದಂಡ ವಿಧಿಸಿದೆ. ಅಲ್ಲದೇ, ನ್ಯಾಯಾಲಯವು ಆರೋಪಿಗೆ ಮೂರೂ…
ಮಂಗಳೂರು : ರಾಜ್ಯಾದ್ಯಂತ ಗ್ಯಾಸ್ ಸಿಲಿಂಡರ್ ಇಲ್ಲದೆ ಜನರು ಪರದಾಡುತ್ತಿದ್ದಾರೆ. ಮತ್ತೊಂದು ಕಡೆ ಬೆಂಗಳೂರು ಮುಂಬೈ ಮಹಾನಗರಗಳಲ್ಲಿ ವಾಣಿಜ್ಯ ಸಿಲಿಂಡರ್ ಇಲ್ಲದೆ ಹೋಟೆಲ್ ಗಳು ಸಂಪೂರ್ಣವಾಗಿ ಬಂದ್ ಆಗಿವೆ. ಇದರ ಮಧ್ಯ ಇಂದು ಮಂಗಳೂರಿನಲ್ಲಿ ಗ್ಯಾಸ್ ಟ್ಯಾಂಕರ್ ಒಂದು ಮಗುಚಿಬಿದ್ದು ಸೋರಿಕೆ ಆಗಿರುವ ಘಟನೆ ವರದಿಯಾಗಿದೆ. ಹೌದು ಗ್ಯಾಸ್ ಸಮಸ್ಯೆ ಬಂದೇ ಟ್ಯಾಂಕರ್ ಒಂದು ಉರುಳಿ ಬಿದ್ದಿದೆ. ಮಂಗಳೂರಿನಿಂದ ಎಲ್ಪಿಜಿ ತರುತ್ತಿದ್ದ ಟ್ಯಾಂಕರ್ ಮಗುಚಿ ಬಿದ್ದಿದೆ. ಉಡುಪಿ ಕಟ್ಟಪಾಡಿಯಲ್ಲಿ ಗ್ಯಾಸ್ ಟ್ಯಾಂಕರ್ ಮಗುಚಿ ಬಿದ್ದಿದೆ. ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿಗಳು ಧಾವಿಸಿದ್ದಾರೆ. ವಾಹನಗಳ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ.
ಈ ವರ್ಷ ಶೋಭಕೃತ್ ನಾಮ ಸಂವತ್ಸರ ಸ್ವಾಗತಿಸಲಿದೆ. ಶೋಭಕೃತ್ ಎಂದರೆ ಲಾಭ, ಪ್ರಯೋಜನಗಳನ್ನು ತರುವುದು. ಈ ವರ್ಷ ಯುಗಾದಿ ದಿನದಂದು ಬುಧಾದಿತ್ಯ ಮತ್ತು ಗಜಕೇಸರಿ ಎಂಬ ಎರಡು ರಾಜಯೋಗಗಳು ರೂಪುಗೊಳ್ಳುತ್ತವೆ ಈ ಪರಾಭವ ನಾಮ ಸಂವತ್ಸರ ಯುಗಾದಿಯ ನಂತರ 2 ರಾಜಯೋಗ, ಈ 3 ರಾಶಿಯವರಿಗೆ ಶುಭ ಈ ವರ್ಷ ಯುಗಾದಿ ದಿನದಂದು ಬುಧಾದಿತ್ಯ ಮತ್ತು ಗಜಕೇಸರಿ ರಚನೆಯಾಗಲಿದೆ. ಮತ್ತೊಂದೆಡೆ ಮೀನ ರಾಶಿಯಲ್ಲಿ, ದೇವರ ಗುರು ಗುರು, ಗ್ರಹಗಳ ಆಡಳಿತಗಾರ ಸೂರ್ಯ, ಬುಧ, ಚಂದ್ರ ಮತ್ತು ರಾಹು ಸೇರಿದ್ದಾರೆ. ಈ ಅಪರೂಪದ ಸಂಯೋಜನೆಯೊಂದಿಗೆ, ಕೆಲವು ರಾಶಿಚಕ್ರ ಚಿಹ್ನೆಗಳು ಈ ಯುಗಾದಿಯಿಂದ ಎಲ್ಲಾ ಅದೃಷ್ಟವನ್ನು ಪಡೆಯುತ್ತವೆ. ಹಿಂದೂ ಪಂಚಾಂಗದ ಪ್ರಕಾರ ಹೊಸ ವರ್ಷ ಯುಗಾದಿಯ ದಿನದಿಂದ ಪ್ರಾರಂಭವಾಗುತ್ತದೆ. ಈ ಹಬ್ಬವನ್ನು ಚೈತ್ರ ಶುದ್ಧ ಪಾಡ್ಯಮಿಯಂದು ಆಚರಿಸಲಾಗುತ್ತದೆ. ಕನ್ನಡಿಗರು ಅತ್ಯಂತ ಅದ್ಧೂರಿಯಾಗಿ ಆಚರಿಸುವ ಯುಗಾದಿ ಹಬ್ಬ ಈ ವರ್ಷ ಮಾರ್ಚ್ 19 ರಂದು ಬಂದಿದೆ. ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ದೈವಜ್ಞ…
ಕರ್ನಾಟಕದ ಜನಪದ ಸಂಸ್ಕೃತಿಯ ತವರು ಉತ್ತರ ಕರ್ನಾಟಕದಲ್ಲಿ ಯುಗಾದಿ ಎಂದರೆ ಕೇವಲ ಹಬ್ಬವಲ್ಲ, ಅದು ಬದುಕಿನ ಹೊಸ ಪಯಣದ ಆರಂಭ. ಪ್ರಕೃತಿಯಲ್ಲಿನ ಬದಲಾವಣೆ, ರೈತಾಪಿ ವರ್ಗದ ಹೊಸ ಹರುಷ ಹಾಗೂ ಸಾವಿರಾರು ವರ್ಷಗಳ ಇತಿಹಾಸವನ್ನು ಮೈಗೂಡಿಸಿಕೊಂಡಿರುವ ಈ ಹಬ್ಬವು ಉತ್ತರ ಕರ್ನಾಟಕದ ಜನಜೀವನದಲ್ಲಿ ಅತ್ಯಂತ ಮಹತ್ವದ ಸ್ಥಾನ ಪಡೆದಿದೆ. ಬೇವಿನ ಕಹಿ, ಬೆಲ್ಲದ ಸಿಹಿಯನ್ನು ಸಮನಾಗಿ ಸ್ವೀಕರಿಸುವ ಈ ಪರ್ವಕಾಲದ ಸಂಪೂರ್ಣ ಮಾಹಿತಿ ಇಲ್ಲಿದೆ. ೧. ಐತಿಹಾಸಿಕ ಹಿನ್ನೆಲೆ ಯುಗಾದಿ ಎಂದರೆ ‘ಯುಗ’ ಮತ್ತು ‘ಆದಿ’ ಅಂದರೆ ಹೊಸ ಯುಗದ ಆರಂಭ ಎಂದರ್ಥ. ಪುರಾಣಗಳ ಪ್ರಕಾರ, ಬ್ರಹ್ಮದೇವನು ಸೃಷ್ಟಿ ಕಾರ್ಯವನ್ನು ಆರಂಭಿಸಿದ್ದು ಇದೇ ಚೈತ್ರ ಶುದ್ಧ ಪಾಡ್ಯಮಿಯ ದಿನ. ಉತ್ತರ ಕರ್ನಾಟಕದ ಇತಿಹಾಸವನ್ನು ಗಮನಿಸಿದರೆ, ಶಾತವಾಹನ ಅರಸನಾದ ಶಾಲಿವಾಹನನು ಶತ್ರುಗಳನ್ನು ಜಯಿಸಿ ಹೊಸ ಶಕೆಯನ್ನು (ಶಾಲಿವಾಹನ ಶಕೆ) ಆರಂಭಿಸಿದ್ದು ಇದೇ ದಿನ ಎಂಬ ಐತಿಹ್ಯವಿದೆ. ವಿಜಯನಗರದ ಅರಸರ ಕಾಲದಲ್ಲೂ ಯುಗಾದಿಯನ್ನು ಅತ್ಯಂತ ವೈಭವದಿಂದ ಆಚರಿಸಲಾಗುತ್ತಿತ್ತು ಎಂಬ ಉಲ್ಲೇಖಗಳಿವೆ. ೨. ಧಾರ್ಮಿಕ ಮತ್ತು…
ತುಮಕೂರು : ಇತ್ತೀಚೆಗೆ ಕಾಂಗ್ರೆಸ್ ನಾಯಕ ಈವಿಎಂ ಮಷೀನ್ ನಲ್ಲಿ ವೋಟ್ ಚೂರಿ ಆಗಿದೆ ಎಂದು ಗಂಭೀರವಾಗಿ ಆರೋಪ ಮಾಡಿದ್ದರು. ಆದರೆ ಕೇಂದ್ರ ಚುನಾವಣಾ ಆಯೋಗ ಇದಕ್ಕೆ ಸ್ಪಷ್ಟನೆ ನೀಡುತ್ತಾ ಆರೋಪಗಳನ್ನು ನಿರಾಕರಿಸುತ್ತಲೇ ಬಂದಿದೆ. ಇದೀಗ ತುಮಕೂರಿನಲ್ಲಿ ನಡೆದ ಸಹಕಾರಿ ಸಂಘದ ಚುನಾವಣೆಯಲ್ಲಿ ಚುನಾವಣಾ ಅಧಿಕಾರಿಯೇ ಬ್ಯಾಲೆಟ್ ಪೇಪರ್ ನಲ್ಲಿ ಅಕ್ರಮ ಎಸಗಿದ್ದು ಕಂಡು ಬಂದಿದೆ. ಹೌದು ತುಮಕೂರು ಜಿಲ್ಲೆಯ ವಿ.ಎಸ್.ಎಸ್.ಎನ್ ಸೊಸೈಟಿ ಚುನಾವಣೆಯಲ್ಲಿ ಅಕ್ರಮದ ಆರೋಪ ಕೇಳಿ ಬಂದಿದೆ. ಸಹಕಾರಿ ಸಂಘದ ಚುನಾವಣೆಯಲ್ಲಿ ಬ್ಯಾಲೇಟ್ ಪೇಪರ್ ಅಕ್ರಮ ನಡೆದಿದೆ ಎಂದು ಜೆಡಿಎಸ್ ಚುನಾವಣಾ ಏಜೆಂಟ್‌ಗಳು ಆರೋಪಿಸಿದ್ದಾರೆ. ತುಮಕೂರಿನ ಕುಣಿಗಲ್ ತಾಲೂಕಿನ ಸಂತೇಮಾವತ್ತೂರಿನ ನಿನ್ನೆ ನಡೆದ ವಿ.ಎಸ್.ಎಸ್.ಎನ್ ಸೊಸೈಟಿ ಚುನಾವಣೆಯಲ್ಲಿ ಸ್ವತಃ ಚುನಾವಣಾಧಿಕಾರಿಯೇ ಅಕ್ರಮವಾಗಿ ಬ್ಯಾಲೇಟ್ ಪೇಪರನ್ನು ಮತಪೆಟ್ಟಿಗೆಗೆ ತುಂಬಿಸಿದ್ದಾರೆ ಎಂದು ಜೆಡಿಎಸ್ ಆರೋಪಿಸಿದೆ. ನಿನ್ನೆ ಸಂತೇಮಾವತ್ತೂರಿನ ಸಾಲಗಾರರ 11 ಕ್ಷೇತ್ರಗಳಿಗೆ, 1 ಸಾಮಾನ್ಯ ಕ್ಷೇತ್ರಕ್ಕೆ ಚುನಾವಣೆ ನಡೆದಿತ್ತು. ಆದರೆ ಮತದಾನದ ನಡುವೆ ಒಂದಷ್ಟು ಮತಪತ್ರಗಳನ್ನು ಚುನಾವಣಾಧಿಕಾರಿ ಸುನೀಲ್ ಮತಪೆಟ್ಟಿಗೆಗೆ ಹಾಕಿದ್ದು,…
ಬೆಂಗಳೂರು: ರಾಜ್ಯದ ಖಾಸಗಿ ಆಸ್ಪತ್ರೆಗಳಲ್ಲಿ ಸಾಮಾನ್ಯ ಜನರಿಗೆ ಎಟುಕದಂತಾಗುತ್ತಿರುವ ದುಬಾರಿ ಚಿಕಿತ್ಸಾ ವೆಚ್ಚಕ್ಕೆ ಕಡಿವಾಣ ಹಾಕಲು ಸರ್ಕಾರ ನಿರ್ಧರಿಸಿದೆ. ಈ ನಿಟ್ಟಿನಲ್ಲಿ ಆಸ್ಪತ್ರೆಗಳ ಶುಲ್ಕವನ್ನು ವೈಜ್ಞಾನಿಕವಾಗಿ ನಿಯಂತ್ರಿಸಲು ಸರ್ಕಾರ ಹೊಸ ಕರಡು ಮಸೂದೆಯನ್ನು ಸಿದ್ಧಪಡಿಸಿದ್ದು, ಶೀಘ್ರದಲ್ಲೇ ಜಾರಿಗೆ ತರುವ ಸಾಧ್ಯತೆಯಿದೆ. ಖಾಸಗಿ ವೈದ್ಯಕೀಯ ಸಂಸ್ಥೆಗಳು ವಿಧಿಸುತ್ತಿರುವ ಭಾರಿ ಚಿಕಿತ್ಸಾ ಶುಲ್ಕಗಳು ಸಾರ್ವಜನಿಕರ ಟೀಕೆಗೆ ಒಳಗಾಗುತ್ತಲೇ ಬರುತ್ತಿದೆ. ದುಬಾರಿ ಶುಲ್ಕ ವಿಧಿಸುವ ಮೂಲಕ ಆರೋಗ್ಯ ಸೇವೆ ಕೈಗೆಟುಕದ ಪರಿಸ್ಥಿತಿ ಎದುರಾಗಿದೆ. ಅನಿರ್ಬಂಧಿತ ಚಿಕಿತ್ಸಾ ಶುಲ್ಕದ ಮೂಲಕ ಸಾರ್ವಜನಿಕರ ಮೇಲೆ ಭಾರಿ ಹೊರೆ ಬೀಳುತ್ತಿದೆ. ಬೇಕಾಬಿಟ್ಟಿ ಶುಲ್ಕ ವಸೂಲಿ ಮಾಡುವ ಮೂಲಕ ಖಾಸಗಿ ಆಸ್ಪತ್ರೆಗಳು ಬಡವರ ಕೈಗೆ ಸಿಗದಂತಾಗಿವೆ. ಖಾಸಗಿ ಆಸ್ಪತ್ರೆಗಳ ದುಬಾರಿ ಶುಲ್ಕಕ್ಕೆ ಕಡಿವಾಣ ಹಾಕಲು ಸಾರ್ವಜನಿಕರು ಪದೇ ಪದೆ ಆಗ್ರಹಿಸುತ್ತಿದ್ದರೂ ಸರ್ಕಾರಕ್ಕೆ ಅದರ ನಿಯಂತ್ರಣ ಸಾಧ್ಯವಾಗಿಲ್ಲ. 2016ರಲ್ಲಿ ರಮೇಶ್ ಕುಮಾರ್ ಆರೋಗ್ಯ ಸಚಿವರಾಗಿದ್ದಾಗ ಖಾಸಗಿ ಆಸ್ಪತ್ರೆಗಳ ಆಟಾಟೋಪಕ್ಕೆ ಕಠಿಣವಾಣ ಹಾಕಲು ಸರ್ಕಾರ ಮುಂದಾಗಿತ್ತು. ದುಬಾರಿ ಶುಲ್ಕಕ್ಕೆ ಕಡಿವಾಣ ಹಾಕುವುದು, ಪಾರದರ್ಶಕತೆ ತರುವುದು,…
ನವದೆಹಲಿ : ರಾಜ್ಯ ರಾಜಕೀಯದಲ್ಲಿ ಕುತೂಹಲ ಕೆರಳಿಸಿರುವ ಬಾಗಲಕೋಟೆ ಮತ್ತು ದಾವಣಗೆರೆ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಕೇಂದ್ರ ಚುನಾವಣಾ ಆಯೋಗವು ಇಂದು ದಿನಾಂಕವನ್ನು ಘೋಷಿಸಿದೆ. ಏಪ್ರಿಲ್ 9 ರಂದು ಮತದಾನ ನಡೆಯಲಿದ್ದು ಮೇ 4ಕ್ಕೆ ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ. ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯಲಿದೆ. ಎಚ್ ವೈ ಮೇಟಿ ಹಾಗೂ ಶಾಮನೂರು ಶಿವಶಂಕರಪ್ಪ ನಿಧನದ ಹಿನ್ನೆಲೆಯಲ್ಲಿ ಈ ಎರಡು ಕ್ಷೇತ್ರಗಳು ತೆರವಾಗಿವೆ. ಇಂದು ಈ ಕ್ಷೇತ್ರಗಳಿಗೆ ಉಪ ಚುನಾವಣೆ ಘೋಷಣೆ ಆಗಿದೆ. ಈ ಹಿನ್ನೆಲೆಯಲ್ಲಿ ಬಿರುಸಿದ ಸಿದ್ದತೆ ನಡೆಯುತ್ತಿದೆ. ಬಾಲಕೋಟೆ ಮತ್ತು ದಾವಣಗೆರೆ ದಕ್ಷಿಣಕ್ಕೆ ಟಿಕೆಟ್ ಫೈಟ್ ಜೋರಾಗಿದೆ. ಟಿಕೆಟ್ ವಿಚಾರವಾಗಿ ಕಾಂಗ್ರೆಸ್ ಮತ್ತು ಬಿಜೆಪಿಯಲ್ಲಿ ಪೈಪೋಟಿ ನಡೆಯುತ್ತಿದೆ. ದಾವಣಗೆರೆ ದಕ್ಷಿಣಕ್ಕೆ ಮುಸ್ಲಿಂ ಅಭ್ಯರ್ಥಿಯನ್ನು ಕಣಕ್ಕಿಳಿಸಬೇಕು ಎಂಬುವುದು ಕಾಂಗ್ರೆಸ್ ಮುಸ್ಲಿಂ ಮುಖಂಡರ ಬೇಡಿಕೆಯಾಗಿದೆ. ಆದರೆ ಇದಕ್ಕೆ ಸಚಿವ ಎಸ್ ಎಸ್ ಮಲ್ಲಕಾರ್ಜುನ ಅವರ ವಿರೋಧ ಇದೆ. ಇನ್ನು ಬಿಜೆಪಿಯಲ್ಲೂ ದಾವಣಗೆರೆ ದಕ್ಷಿಣ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಪೈಪೋಟಿ…
ಶ್ರೀನಗರ : ಜಮ್ಮು ಮತ್ತು ಕಾಶ್ಮೀರದ ಉರಿ ಸೆಕ್ಟರ್‌ನಲ್ಲಿ ಭಾರತೀಯ ಸೇನೆ ಪಾಕಿಸ್ತಾನದ ಉಗ್ರನನ್ನು ಹತ್ಯೆ ಮಾಡಿದ್ದು, ಒಳನುಸುಳುವಿಕೆಯನ್ನು ವಿಫಲಗೊಳಿಸಿದೆ. ಕೆಲ ಕಾಲ ಪಾಕಿಸ್ತಾನ ಉಗ್ರನ ಕಡೆಯಿಂದಲೂ ಗುಂಡಿನ ಚಿಕ್ಕಮಕಿ ನಡೆದಿತ್ತು ಆದರೆ ಭಾರತೀಯ ಸೇನೆ ಪಾಕಿಸ್ತಾನ ಉಗ್ರನನ್ನು ಹತ್ಯೆಗೈಯಲು ಸಫಲವಾಗಿದೆ. ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಶ್ರೀನಗರ ಮೂಲದ ಚಿನಾರ್ ಕಾರ್ಪ್ಸ್ ಪೋಸ್ಟ್ ಮಾಡಿದೆ. ಮಾರ್ಚ್ 14 ಹಾಗೂ 15ರ ರಾತ್ರಿ ಭಯೋತ್ಪಾದಕ ಒಳನುಸುಳುವಿಕೆಗೆ ಯತ್ನಿಸುತ್ತಾನೆ ಎಂಬ ಜಮ್ಮು ಕಾಶ್ಮೀರ ಪೊಲೀಸರ ನಿಖರ ಮಾಹಿತಿ ಆಧರಿಸಿ, ಕಾರ್ಯಾಚರಣೆ ನಡೆಸಲಾಯಿತು ಎಂದು ತಿಳಿಸಿದೆ. ಜಂಟಿ ಕಾರ್ಯಾಚರಣೆ ವೇಳೆ ಪೊದೆಯಲ್ಲಿ ಅನುಮಾನಾಸ್ಪದ ಚಲನವಲನ ಗಮನಿಸಿದ ಸೈನಿಕರು, ಭಯೋತ್ಪಾದಕನ್ನು ಸೆರೆಹಿಡಿಯಲು ಯತ್ನಿಸಿದರು. ಅಷ್ಟರಲ್ಲಿ ಭಯೋತ್ಪಾದಕ ಗುಂಡು ಹಾರಿಸಲು ಯತ್ನಿಸಿದ್ದಾನೆ. ಕೆಲಕಾಲ ಗುಂಡಿನಚಕಮಕಿ ನಡೆದಿದೆ. ಈ ವೇಳೆ ಒಬ್ಬ ಪಾಕಿಸ್ತಾನಿ ಉಗ್ರನನ್ನು ಹತ್ಯೆ ಮಾಡಲಾಗಿದೆ














