Author: KNN IT Team

ಮಣಿಪುರ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಐದನೇ ಸೆಮಿಸ್ಟರ್ ಕಂಪ್ಯೂಟರ್ ಇಂಜಿನಿಯರಿಂಗ್ ಓದುತ್ತಿರುವ ವಿದ್ಯಾರ್ಥಿ ಆಲ್ಬರ್ಟ್ ಸಾರಂಗ್ಥೆಮ್, ವಿಂಟೇಜ್ ಬಜಾಜ್-150 ಸ್ಕೂಟರ್ ಅನ್ನು ಪರಿಸರ ಸ್ನೇಹಿ ಎಲೆಕ್ಟ್ರಿಕ್ ವೆಹಿಕಲ್ (EV) ಆಗಿ ‘Samadon EV II’ ಎಂದು ಪರಿವರ್ತಿಸಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಈ ಹಿಂದೆ ಇದೇ ರೀತಿಯಲ್ಲಿ ಬೈಕನ್ನು ಮಾರ್ಪಡಿಸಿದ ಆಲ್ಬರ್ಟ್. ಪುರಾಣದ ದೈವಿಕ ಹಾರುವ ಕುದುರೆಯಿಂದ ಪ್ರೇರಿತರಾಗಿ ತನ್ನ ಎರಡೂ ಇ-ವಾಹನಗಳಿಗೆ ‘ಸಮಾಡಾನ್’ ಎಂದು ನಾಮಕರಣ ಮಾಡಿದ್ದಾನೆ. ಒಂದೇ ಎಲೆಕ್ಟ್ರಿಕ್ ಚಾರ್ಜ್‌ನಲ್ಲಿ 50 ಕಿ.ಮೀ ವರೆಗೆ ಚಲಿಸುವ ಇ-ಸ್ಕೂಟರ್ ಪೂರ್ಣ ಚಾರ್ಜ್‌ಗೆ ಸುಮಾರು 2.5 ಗಂಟೆಗಳ ಅಗತ್ಯವಿದೆ. ಐದು ದಶಕಗಳ ಹಿಂದೆ ಆಲ್ಬರ್ಟ್‌ನ ದಿವಂಗತ ತಾಯಿಯ ಅಜ್ಜನ ಮಾಲೀಕತ್ವದಲ್ಲಿ, ಬಜಾಜ್-150 ಸ್ಕೂಟರ್ ಇತ್ತು. ಸಂಬಂಧಿಕರ ಮನೆಯಲ್ಲಿ ತುಕ್ಕು ಹಿಡಿದಿತ್ತು. ಆಲ್ಬರ್ಟ್ ಸ್ಕೂಟರ್​ಗೆ ಮೇಕ್ ಓವರ್ ಮಾಡಬೇಕು ಎಂದು ನಿರ್ಧರಿಸಿದನು. ಆಲ್ಬರ್ಟ್, ಇಂಫಾಲ್‌ನಲ್ಲಿ ಇಂಟರ್ನೆಟ್ ಸಂಪನ್ಮೂಲಗಳು ಮತ್ತು ಕಾರ್ಯಾಗಾರಗಳ ಮೂಲಕ ತಮ್ಮ ಕೌಶಲ್ಯಗಳನ್ನು ಇನ್ನಷ್ಟು ಅಭಿವೃದ್ಧಿ ಪಡಿಸಿಕೊಂಡನು. ಅಲ್ಲಿ ಅವರು ಇ-ರಿಕ್ಷಾಗಳ ಕಾರ್ಯವಿಧಾನವನ್ನು…

Read More

ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾದಿಂದ ಅಧಿಕೃತವಾಗಿ ಮುದ್ರಿಸಲಾಗಿರುವ 10 ರೂಪಾಯಿ ನಾಣ್ಯಗಳು ಚಲಾವಣೆಯಲ್ಲಿದ್ದು, ಎಲ್ಲರೂ ತಮ್ಮ ದಿನನಿತ್ಯದ ವಹಿವಾಟುಗಳಲ್ಲಿ ಯಾವುದೇ ಸಂಶಯವಿಲ್ಲದೆ ಬಳಸಬಹುದಾಗಿದೆ. ಕೇಂದ್ರ ಸರಕಾರವಾಗಲಿ, ಆರ್‌.ಬಿ.ಐ ಯಾಗಲಿ 10 ರೂ. ನಾಣ್ಯಗಳನ್ನು ನಿಷೇಧಿಸಿಲ್ಲ ಹಾಗೂ ಚಲಾವಣೆ ಹಿಂಪಡೆದಿಲ್ಲ. ಸಾರ್ವಜನಿಕರು ಸುಳ್ಳು ವದಂತಿಯಮ್ಮು ನಂಬದೆ 10ರೂ. ನಾಣ್ಯಗಳನ್ನು ಸ್ವೀಕರಿಸಬಹುದು ಮತ್ತು ಬಳಸಬಹುದು. 10ರೂ. ನಾಣ್ಯಗಳನ್ನು ಬಳಸುವುದರಿಂದ ಚಿಲ್ಲರೆ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ. ಆರ್‌.ಬಿ.ಐ ಹಲವು ಬಾರಿ 10ರೂ. ನಾಣ್ಯಗಳನ್ನು ಚಲಾವಣೆಯಿಂದ ಹಿಂಪಡೆದಿಲ್ಲ. ಆದರೂ ಸಹ ಕೆಲವರು ಸಾಮಾಜಿಕ ಮಾಧ್ಯಮಗಳ ಮೂಲಕ ಜನರಲ್ಲಿತಪ್ಪು ಸಂದೇಶ ರವಾನಿಸುತ್ತಿದ್ದಾರೆ. ಈ ನಡುವೆ ಸಾರಿಗೆ ಸಂಸ್ಥೆಯ ಸಿಬ್ಬಂದಿಗಳು ರೂ.10/-ರ ನಾಣ್ಯಗಳನ್ನು ಕೂಡ ಪ್ರಯಾಣಿಕರಿಂದ ಸ್ವೀಕರ ಮಾಡುವಂತೆ ಸುತ್ತೋಲೆಯನ್ನು ಹೊರಡಿಸಿದೆ. ಇದೇ ವೇಳೇ ಸುತ್ತೋಲೆಯಲ್ಲಿ ರೂ.10/-ರ ನಾಣ್ಯಗಳ ಚಲಾವಣೆಗಾಗಿ ಪ್ರಯಾಣಿಕರಿಂದ ಸ್ವೀಕರಿಸುವ ಕುರಿತು ಸಂಬಂಧಿಸಿದ ಎಲ್ಲಾ ಸಿಬ್ಬಂದಿಗಳಿಗೆ ಮತ್ತೊಮ್ಮೆ ಸೂಕ್ತ ನಿರ್ದೇಶನ ನೀಡಲು ಕ್ರಮವಹಿಸುವಂತೆ ಕೋರಲು ನಿರ್ದೇಶಿಸಲ್ಪಟ್ಟಿದ್ದೇನೆ ಎಂದು ತಿಳಿಸಿದ್ದಾರೆ.

Read More

ಉಡುಪಿ : ರಾಜ್ಯದಲ್ಲಿ ಕರ್ನಾಟಕ ಸರ್ಕಾರ ಕೇಂದ್ರ ಸರ್ಕಾರದ ಯೋಜನೆಗಳಿಗೆ ಅಸಹಕಾರ ತೋರಿಸುತ್ತಿದ್ದು ಕೇಂದ್ರದ ಯೋಜನೆಗಳನ್ನು ಅನುಷ್ಠಾನ ಮಾಡಲು ಜಿಲ್ಲಾಧಿಕಾರಿಗಳು ಹಾಗೂ ಸಿಎಸ್ ಹೋಗಬಾರದು ಎಂದು ಮುಖ್ಯಮಂತ್ರಿ ಕಚೇರಿಯಿಂದ ಸೂಚನೆ ಬಂದಿದೆ. ಈ ಬಗ್ಗೆ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಕೂಡಲೇ ಮಧ್ಯ ಪ್ರವೇಶ ಮಾಡಬೇಕು ಎಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಕೋಟಾ ಶ್ರೀನಿವಾಸ್ ಪೂಜಾರಿ ಒತ್ತಾಯಿಸಿದ್ದಾರೆ. ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕೋಟಾ ವಿಕಸಿತ ಭಾರತದ ಯೋಜನೆ ಅನುಷ್ಠಾನವಾಗುತ್ತಿದೆ. ಜಿಲ್ಲಾಧಿಕಾರಿ ಹಾಗೂ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಭಾಗವಹಿಸಲು ಅವಕಾಶ ಕೊಡಬೇಕು ಎಂದು ಕೋರಿದ್ದೇನೆ. ಆದ್ರೆ ಮುಖ್ಯಮಂತ್ರಿಗಳು ಕೇಂದ್ರ ಸರ್ಕಾರದ ಬಗ್ಗೆ ಟೀಕೆ ಟಿಪ್ಪಣಿ ಮಾಡುತ್ತಾರೆ. ಕೇಂದ್ರ ಸರ್ಕಾರದ ಕಾರ್ಯ ಯೋಜನೆಗೆ ಅಡ್ಡಗಾಲು ಹಾಕುವುದು ಸರಿಯಲ್ಲ ಎಂದ ಅವರು ಬರ ಪರಿಹಾರಕ್ಕೆ ಕೇಂದ್ರ ಸರಕಾರವನ್ನು ನಂಬಿಕೂತರೆ ಆಗುವುದಿಲ್ಲ, ಕೇಂದ್ರ ಕಾಲಕಾಲಕ್ಕೆ ಅನುದಾನ ಕೊಡುತ್ತದೆ. ರಾಜ್ಯ ಸರ್ಕಾರ ಮೊದಲು ಕಾರ್ಯಕ್ರಮ ಅನುಷ್ಠಾನ ಮಾಡಬೇಕು. ಸಿದ್ದರಾಮಯ್ಯನವರೇ 33,000 ಕೋಟಿ ರೂಪಾಯಿ ನಷ್ಟವಾಗಿದ್ದು 42 ಲಕ್ಷ ರೈತರಿಗೆ…

Read More

ಕೇಂದ್ರ ಸರ್ಕಾರ ಭಾರತೀಯ ಔಷಧೀಯ ಕಂಪನಿಗಳಿಗೆ ಹೊಸ ಉತ್ಪಾದನಾ ಮಾನದಂಡಗಳನ್ನು ಪೂರೈಸಬೇಕೆಂದು ಅಧಿಸೂಚನೆಯಲ್ಲಿ ಸೂಚನೆ ನೀಡಿದೆ. ಔಷಧೀಯ ಉತ್ಪನ್ನಗಳು ತಮ್ಮ ಉದ್ದೇಶಿತ ಬಳಕೆಗೆ ಯೋಗ್ಯವಾಗಿವೆ ಎಂಬುದನ್ನು ಔಷಧ ತಯಾರಿಕಾ ಕಂಪೆನಿಗಳು ಖಾತ್ರಿ ಪಡಿಸಿಕೊಳ್ಳಬೇಕು. ಪದಾರ್ಥಗಳ ಪರೀಕ್ಷೆಗಳಲ್ಲಿ “ತೃಪ್ತಿಕರ ಫಲಿತಾಂಶಗಳನ್ನು” ಪಡೆದ ಬಳಿಕವೇ ಕಂಪನಿಗಳು ಸಿದ್ಧಪಡಿಸಿದ ಉತ್ಪನ್ನವನ್ನು ಮಾರಾಟ ಮಾಡಬೇಕು ಎಂದು ಸೂಚಿಸಲಾಗಿದೆ. ಡಿಸೆಂಬರ್ 2022 ರಿಂದ 162 ಔಷಧಿ ಕಾರ್ಖಾನೆಗಳ ತಪಾಸಣೆಯಲ್ಲಿ ಒಳಬರುವ ಕಚ್ಚಾ ವಸ್ತುಗಳ ಪರೀಕ್ಷೆಯ ಅನುಪಸ್ಥಿತಿ ಕಂಡುಬಂದಿದೆ ಎಂದು ಆರೋಗ್ಯ ಸಚಿವಾಲಯ ಆಗಸ್ಟ್ ನಲ್ಲಿ ಮಾಹಿತಿ ನೀಡಿದೆ. ಭಾರತದ 8,500 ಸಣ್ಣ ಔಷಧ ಕಾರ್ಖಾನೆಗಳಲ್ಲಿ ಕಾಲು ಭಾಗಕ್ಕಿಂತ ಕಡಿಮೆ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ನಿಗದಿ ಮಾಡಿದ ಅಂತರರಾಷ್ಟ್ರೀಯ ಔಷಧ ಉತ್ಪಾದನಾ ಮಾನದಂಡಗಳನ್ನು ಪೂರೈಸಿದೆ ಎಂದು ತಿಳಿಸಿದೆ. ಆರು ತಿಂಗಳೊಳಗೆ ಮತ್ತು ಸಣ್ಣ ತಯಾರಕರು 12 ತಿಂಗಳಲ್ಲಿ ಈ ಗೊಂದಲಗಳನ್ನು ಪರಿಹರಿಸಬೇಕು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆಯಾಗಿದೆ.

Read More

ಶಿವಮೊಗ್ಗ : ಹೊಸನಗರ ತಾಲ್ಲೂಕಿನ ಅರಮನೆಕೊಪ್ಪದ ಗ್ರಾಮ ವ್ಯಾಪ್ತಿಯ 18 ವರ್ಷದ ಯುವತಿಗೆ ಕೆಎಫ್‌ಡಿ (ಮಂಗನ ಕಾಯಿಲೆ) ಪಾಸಿಟಿವ್ ಬಂದಿದ್ದು ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದ ಯುವತಿಗೆ ಕೆಎಫ್‌ಡಿ ಟೆಸ್ಟ್ ಮಾಡಲಾಗಿತ್ತು. ಮೊದಲ ಟೆಸ್ಟ್ ನಲ್ಲಿ ನೆಗೆಟಿವ್, ಎರಡನೇ ಬಾರಿ ಆರ್‌ಟಿಸಿಪಿಆರ್ ಟೆಸ್ಟ್ ಮಾಡಿದಾಗ ಪಾಸಿಟಿವ್ ಬಂದಿದೆ. ಮೂರು ದಿನಗಳ ಕಾಲ ಮೆಗ್ಗಾನ್ ಆಸ್ಪತ್ರೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗಿದ್ದು ಶುಕ್ರವಾರ ಸಂಜೆ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅರಮನೆಕೊಪ್ಪ ವ್ಯಾಪ್ತಿಯಲ್ಲಿ ಈ ಹಿಂದೆ ಕೆಎಫ್‌ಡಿ ಪ್ರಕರಣಗಳು ವರದಿಯಾಗಿಲ್ಲ. ಈ ಬಾರಿ ಶರಾವತಿ ಹಿನ್ನೀರು ತಗ್ಗಿದ ಹಿನ್ನೆಲೆ ಪ್ರಾಣಿಗಳ ಮೂಲಕ ವೈರಸ್‌ಗಳು ವರ್ಗಾವಣೆಯಾಗಿರಬಹುದು ಎನ್ನಲಾಗಿದೆ. 2019ರಲ್ಲಿ ಮಂಗನ ಕಾಯಿಲೆ ಸ್ಫೋಟಗೊಂಡ ಹಿನ್ನೆಲೆ ರೋಗಿಗಳ ಚಿಕಿತ್ಸಾ ವೆಚ್ಚವನ್ನು ಸರಕಾರವೇ ಭರಿಸಿತ್ತು. ಎರಡು ಅವಧಿಯಿಂದ ಸರಕಾರ ಲಸಿಕೆ ಸಹ ನಿಲ್ಲಿಸಿರುವುದರಿಂದ ಉಚಿತ ಚಿಕಿತ್ಸೆಗೆ ವ್ಯವಸ್ಥೆ ಮಾಡಬೇಕಿದೆ. ಆಯುಷ್ಮಾನ್ ಭಾರತ್ ಕಾರ್ಡ್ನಲ್ಲಿ ಚಿಕಿತ್ಸೆ ಪಡೆಯಬಹುದಾದರೂ ಸ್ಕಾö್ಯನಿಂಗ್ ಇತರೆ ಖರ್ಚುಗಳನ್ನು ಸ್ವಂತವಾಗಿ ಭರಿಸಬೇಕಿದೆ. ಕಾಡಂಚಿನ ಬಡ…

Read More

ದೊಡ್ಡವರಾಗಿದ್ರೂ ಕೂಡ ಕೆಲವರು ಚಿಕ್ಕ ಮಕ್ಕಳ ಹಾಗೆ ಆಡುತ್ತಾರೆ. ಅವರ ನಡೆ, ಅವರಾಡುವ ಮಾತು, ಮಾಡೋ ಕೆಲಸ ಎಲ್ಲದೂ ಚಿಕ್ಕಮಕ್ಕಳ ಹಾಗೆಯೇ ಇರುತ್ತದೆ. ಇದನ್ನು ಕಂಡ ನಾವು ಓಹ್ ಕ್ಯೂಟ್… ಕ್ಯೂಟ್ನೆಸ್ ಅನ್ನುತ್ತಾ ಅವರನ್ನು ಮನಸಾರೆ ಮೆಚ್ಚುತ್ತೇವೆ. ಆದರೆ ಇದು ಕ್ಯೂಟ್ನೆಸ್ ಅಲ್ಲ, ಒಂದು ರೋಗವಾಗಿದೆ. ದೊಡ್ಡವರಾಗಿದ್ರೂ ಕೂಡ ಕೆಲವರು ತಾವು ಬಾಲ್ಯದಲ್ಲಿ ನೋಡುತ್ತಿದ್ದ ಕಾರ್ಟೂನ್‌ಗಳು, ಆಡುತ್ತಿದ್ದ ಗೊಂಬೆಗಳನ್ನು ಇಂದಿಗೂ ಎಂಜಾಯ್ ಮಾಡುತ್ತಾ ಮಕ್ಕಳಂತೆ ವರ್ತಿಸುತ್ತಿರಬಹುದು. ಹೀಗೆ ದೊಡ್ಡವರಾದರೂ ಸಣ್ಣವರಂತೆ ವರ್ತಿಸುವುದನ್ನು ಎಲ್ಲರೂ ಕ್ಯೂಟ್ನೆಸ್ ಅನ್ನುತ್ತಾರೆ. ಆದರೆ ಇದನ್ನು ಸೈಕಾಲಜಿಯಲ್ಲಿ ಒಂದು ಸಮಸ್ಯೆಯಾಗಿ ನೋಡಲಾಗುತ್ತದೆ. ಅದುವೇ ‘ಪೀಟರ್ ಪ್ಯಾನ್ ಸಿಂಡ್ರೋಮ್’. ಪೀಟರ್​ ಪ್ಯಾನ್​ ಸಿಂಡ್ರೋಮ್​ ಎಂಬುದು ಒಂದು ರೀತಿಯ ಮಾನಸಿಕ ಸ್ಥಿತಿ. ಮಹಿಳೆಯರಿಗಿಂತ ಪುರುಷರಲ್ಲಿ ಹೆಚ್ಚು ಕಂಡು ಬರುತ್ತದೆ. ಹೆಚ್ಚಿನ ಬಾರಿ ಅವರಿಗಿನ್ನೂ ಮೆಚುರಿಟಿ ಬಂದಿಲ್ಲ ಎಂದುಕೊಂಡು ಉಳಿದವರು ಸುಮ್ಮನಾಗುತ್ತಾರೆ. ಆದರೆ, ನಿಜವಾಗಿ ಅವರಿಗೆ ತಜ್ಞರಿಂದ ವಿಶೇಷ ಕಾಳಜಿ ಮತ್ತು ಗಮನದ ಅಗತ್ಯವಿರುತ್ತದೆ. ಬೆಳವಣಿಗೆಯು ಕುಂಠಿತಗೊಳ್ಳುವ ಅಥವಾ ಬೆಳವಣಿಗೆ ಸರಿಯಾಗಿ ಆಗದೇ…

Read More

ಹೈದರಾಬಾದ್​ : ಅಯೋಧ್ಯೆಯಲ್ಲಿ ನಿರ್ಮಾಣವಾಗಿರುವ ಭವ್ಯವಾದ ರಾಮ ಮಂದಿರ ಉದ್ಘಾಟನೆಗೆ ಇನ್ನೂ ಕೆಲವೇ ದಿನಗಳು ಬಾಕಿ ಇದೆ. ಈ ಐತಿಹಾಸಿಕ ಕ್ಷಣವನ್ನು ಕಣ್ತುಂಬಿಕೊಳ್ಳಲು ದೇಶದ ಅಸಂಖ್ಯಾತ ಹಿಂದುಗಳು ದಿನಗಣನೆ ಮಾಡುತ್ತಿದ್ದಾರೆ. ರಾಮಲಲ್ಲಾ ವಿಗ್ರಹ ಸ್ಥಾಪನೆಗೆ ಸಾಕ್ಷಿಯಾಗಲು ಸಹಸ್ರಾರು ಜನರು ಕಾಯುತ್ತಿದ್ದಾರೆ. ಇದರ ನಡುವೆ ಹರಕೆಯೊತ್ತ ಕೆಲವರು ಈಗಾಗಲೇ ಅಯೋಧ್ಯೆಯತ್ತ ಸಾಗುತ್ತಿದ್ದಾರೆ. ಇತ್ತೀಚೆಗಷ್ಟೇ ಮುಸ್ಲಿಂ ಮಹಿಳೆಯೊಬ್ಬರು ಅಯೋಧ್ಯೆಗೆ ಪಾದಯಾತ್ರೆ ಕೈಗೊಂಡ ಸುದ್ದಿಯನ್ನು ಓದಿದ್ದೆವು. ಇದೀಗ 64 ವರ್ಷದ ವ್ಯಕ್ತಿಯೊಬ್ಬರು ಹೊರಕೆಯನ್ನು ಹೊತ್ತು ಅಯೋಧ್ಯೆಗೆ ಪಾದಯಾತ್ರೆ ಹೊರಟಿದ್ದಾರೆ. ಅಯೋಧ್ಯೆ ರಾಮ ಮಂದಿರಕ್ಕೆ ಉಡುಗೊರೆ ನೀಡಲು ಚಿನ್ನದ ಲೇಪಿತ ಪಾದರಕ್ಷೆಯನ್ನು ತಲೆಯ ಮೇಲೆ ಹೊತ್ತು ಹೈದರಾಬಾದ್​ ಮೂಲದ ಚಾರ್ಲ ಶ್ರೀನಿವಾಸ್​ ಶಾಸ್ತ್ರಿ ಎಂಬುವರು ಪಾದಯಾತ್ರೆ ಹೊರಟಿದ್ದಾರೆ. ಜನವರಿ 22 ರಂದು ಉದ್ಘಾಟನಾ ಸಮಾರಂಭಕ್ಕೂ ಮೊದಲು ಶ್ರೀನಿವಾಸ್​ ಅವರು ಚಿನ್ನದ ಲೇಪಿತ ಪಾದರಕ್ಷೆಗಳನ್ನು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಹಸ್ತಾಂತರಿಸಲಿದ್ದಾರೆ. ಚಾರ್ಲ ಶ್ರೀನಿವಾಸ್​ ಶಾಸ್ತ್ರಿ ಅವರು ಅಕ್ಟೋಬರ್ 28 ರಂದು ಆಂಧ್ರಪ್ರದೇಶದ ಪೂರ್ವ ಗೋದಾವರಿ…

Read More

ಹೈದರಾಬಾದ್ : ಆನ್​ಲೈನ್ ಗೇಮ್ ಪಬ್​ಜಿ ಚಟಕ್ಕೆ ಬಿದ್ದು ವಿದ್ಯಾರ್ಥಿಯೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹೈದರಾಬಾದ್​​​ನ ಪಂಜಾಗುಟ್ಟ ಪೊಲೀಸ್​ ಠಾಣೆಯಲ್ಲಿ ವ್ಯಾಪ್ತಿಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಅಮ್ಮ ಐ ಲವ್​ ಯೂ….ಹುಷಾರಾಗಿರು ಎಂದು ವಾಟ್ಸ್​ಆ್ಯಪ್​​ನಲ್ಲಿ ಅವರ ತಾಯಿಗೆ ಮೆಸೇಜ್ ಮಾಡಿ ಅಖಿಲ್​ (21) ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೃತ ಅಖಿಲ್​ ತಂದೆ ಮರಣಹೊಂದಿದ ನಂತರ ತಾಯಿ ಜೊತೆ ಸೇರಿ ಅಪಾರ್ಟ್​ಮೆಂಟ್​​ನಲ್ಲಿ ವಾಸವಾಗಿದ್ದರು. ಅಮೀರ್​ಪೇಟ್ ಸಮೀಪದ ಸಿದಾರ್ಥ ಕಾಲೇಜಿನಲ್ಲಿ ದ್ವಿತೀಯ ವರ್ಷದ ಬಿಕಾಂ ವ್ಯಾಸಾಂಗ ಮಾಡುತ್ತಿದ್ದ. ಕಳೆದ ಮೂರು ತಿಂಗಳಿನಿಂದ ಕಾಲೇಜಿಗೂ ಹೋಗದೆ ಪಬ್​ಜಿಗೆ ಜೋತು ಬಿದ್ದು ಹಗಲು ರಾತ್ರಿ ಗೇಮ್ ಆಡುತ್ತಿದ್ದ. ಕುಟುಂಬದವರು ಬುದ್ಧಿಮಾತು ಹೇಳಿದರೂ ಕೇಳದ ಅಖಿಲ್​ ಆಟಕ್ಕಾಗಿ ಊಟ ಬಿಟ್ಟು ಪಬ್​ಜಿ ಗೇಮ್​ನಲ್ಲಿ ನಿರತನಾಗಿದ್ದ. ಕೊನೆಗೆ ಪಬ್​ಜಿ ಆಟವೇ ಆತನ ಜೀವಕ್ಕೆ ಮುಳುವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅಖಿಲ್​ ತಾಯಿ ಪಿ. ಜಯ ತನ್ನ ಗೆಳತಿ ಮನೆಗೆ ಹೋಗಿದ್ದಳು. ಮನೆಯಲ್ಲಿ ಇದ್ದ ಅಖಿಲ್ ಅಮ್ಮ ಐ ಲವ್​…

Read More

ಬಿಹಾರ ವಿಶ್ವವಿದ್ಯಾಲಯದ ಪ್ರಾಧ್ಯಾಪಕರೊಬ್ಬರು ತಮ್ಮ ಸಾಮಾಜಿಕ ಮಾಧ್ಯಮಗಳ ಪೋಸ್ಟ್ ಮೂಲಕ “ಮುಸ್ಲಿಮರಿಗೆ ಪ್ರತ್ಯೇಕ ದೇಶ ಬೇಕು ” ಎಂದು ವಿವಾದಾತ್ಮಕ ಪೋಸ್ಟ್ ಮಾಡಿದ್ದು, ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಖುರ್ಷಿದ್ ಆಲಂ ಬಿಹಾರದ ಜೈ ಪ್ರಕಾಶ್ ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ ಎನ್ನಲಾಗಿದೆ. ಖುರ್ಷಿದ್ ಆಲಂ ಅವರು ಅವರು ಎರಡು ಭಾರತ ವಿರೋಧಿ ಬರಹಗಳನ್ನು ಬರೆದಿದ್ದಾರೆ ಎನ್ನಲಾಗಿದೆ. ಒಂದು ಪೋಸ್ಟ್ನಲ್ಲಿ , “ಯುನೈಟೆಡ್ ಪಾಕಿಸ್ತಾನ ಮತ್ತು ಬಾಂಗ್ಲಾದೇಶ #Zindabad” ಎಂದು ಬರೆದುಕೊಂಡಿದ್ದಾರೆ. ಮತ್ತೊಂದರಲ್ಲಿ ಭಾರತೀಯ ಮುಸ್ಲಿಮರು ಪಾಕಿಸ್ತಾನ ಮತ್ತು ಬಾಂಗ್ಲಾದೇಶಕ್ಕೆ ಹೊಂದಿಕೊಂಡಿರುವ ಪ್ರತ್ಯೇಕ ತಾಲ್ನಾಡನ್ನು ಬಯಸುತ್ತಾರೆ” ಎಂದು ಕೆಲವು ದಿನಗಳ ಹಿಂದೆ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದರಂತೆ. ಇವರ ಸಾಮಾಜಿಕ ಮಾಧ್ಯಮದ ಪೋಸ್ಟ್ ಗಮನಿಸಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿತ್ತು. ಇದಾದ ಬಳಿಕ ಕಾಲೇಜು ಆಡಳಿತ ಮಂಡಳಿ ರಾಷ್ಟ್ರ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಪ್ರೇರೇಪಣೆ ನೀಡುವ ಆರೋಪದ ಮೇರೆಗೆ ಖುರ್ಷಿದ್ ಆಲಂ ಅವರಿಗೆ ಶೋಕಾಸ್ ನೋಟಿಸ್ ನೀಡಿತ್ತು. ಹೀಗಾಗಿ, ಪ್ರೊಫೆಸರ್ ತಮ್ಮ ಹುದ್ದೆಗೆ…

Read More

ಮಂಗಳೂರು : ನಗರವನ್ನು ಡ್ರಗ್ಸ್ ಮುಕ್ತ ಮಾಡಲು ಮಂಗಳೂರು ನಗರ ಪೊಲೀಸರು ಪಣ ತೊಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ವತಿಯಿಂದ ಮಾದಕ ದ್ರವ್ಯ ವಿರೋಧಿ ಜಾಗೃತಿ ಅಭಿಯಾನವನ್ನು ಮಂಗಳೂರು ನಗರದಲ್ಲಿ ಆಯೋಜಿಸಲಾಗಿತ್ತು. ನಗರದ ಪುರಭವನದಲ್ಲಿ ನಗರ ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ಅವರು ವಾಕ್ ರನ್ ಸೈಕ್ಲೋಥಾನ್ ಗೆ ಚಾಲನೆ ನೀಡಿದರು. ಡಿಸಿಪಿ ದಿನೇಶ್ ಕುಮಾರ್ ಮತ್ತಿತರ ಅಧಿಕಾರಿ ಮತ್ತು ಶಿಕ್ಷಕ ವರ್ಗ ಸಾಥ್ ನೀಡಿದರು. ಎಂ ಜಿ ರಸ್ತೆಯ ಟಿಎಂಎ ಪೈ ರೆಗೂ ವಾಕಥಾನ್ ನಡೆದರೆ, ಸೈಕ್ಲೋಥಾನ್ ಟೌನ್‌ಹಾಲ್‌ನಿಂದ ಹೊರಟು-ಕ್ಲಾಕ್‌ಟವರ್-ಹಂಪನಕಟ್ಟೆ-ಎಲ್‌ಹೆಚ್‌ಹೆಚ್-ಮಿಲಾಗ್ರೀಸ್-ಫಳ್ನೀರ್-ಕಂಕನಾಡಿ-ಬೆಂದೂರ್‌ವೆಲ್-ಅಂಬೇಡ್ಕರ್ ವೃತ್ತ-ಬಂಟ್ಸ್ ಹಾಸ್ಟೆಲ್-ಪಿವಿಎಸ್ ವೃತ್ತ- ಟಿಎಂಎಪೈ ಕನ್ವೆನ್ಷನ್ ಹಾಲ್ ವರೆಗೆ 5 ಕಿ.ಮೀ ವರೆಗೆ ಸಾಗಿತು. ಈ ಕಾರ್ಯಕ್ರಮದಲ್ಲಿ ನಗರದ 24 ಕಾಲೇಜ್‌ಗಳ ವಿದ್ಯಾರ್ಥಿ- ವಿದ್ಯಾರ್ಥಿನಿಯರು ಸೇರಿದಂತೆ 2 ಸಾವಿರಕ್ಕೂ ಅಧಿಕ ಜನ ಈ ಮಾದಕ ವ್ಯಸನ ವಿರೋಧಿ ಅಭಿಯಾನದಲ್ಲಿ ಭಾಗವಹಿಸಿದ್ದರು.

Read More