KNN Desk – Kannada News Now


India

ನವದೆಹಲಿ: ಕೊರೊನಾ ಕಾರಣದಿಂದ ಕಳೆದ ಆರು ತಿಂಗಳಿನಿಂದ ಮುಚ್ಚಲಾಗಿದ್ದ ವಿಶ್ವ ವಿಖ್ಯಾತ ತಾಜ್‌ ಮಹಲ್ ಪ್ರವಾಸಿಗರಿಗೆ ಮುಕ್ತವಾಗಿದೆ. ಲಾಕ್‌ಡೌನ್‌ ತೆರವುಗೊಳಿಸಿದ್ರು ಸರ್ಕಾರ ಪ್ರವಾಸಿಗರ ತಾಜ್‌ ಭೇಟಿಯನ್ನ ನಿಷೇಧಿಸಲಾಗಿತ್ತು. ಇನ್ನೂ ಅತ್ತ ಆಗ್ರಾ ಕೋಟೆಯನ್ನೂ ಮುಚ್ಚಲಾಗಿತ್ತು. ಇದನ್ನು ಲಾಕ್‌ಡೌನ್‌ಗಿಂತ ಮುನ್ನ ಅಂದರೆ ಮಾರ್ಚ್ 17ರಂದೇ ಮುಚ್ಚಲಾಗಿತ್ತು. ಇದಾದ ಬಳಿಕ ಬರೋಬ್ಬರಿ 188 ದಿನಗಳು ಕಳೆದಿದ್ದು, ಸಧ್ಯ ತಾಜ್ ಹಾಗೂ ಆಗ್ರಾ ಕೋಟೆಯನ್ನು ಮತ್ತೆ ತೆರೆಯಲಾಗಿದೆ.

ಟಿಕ್ ಟಾಕ್ ನಿಷೇಧದ ಬೆನ್ನಲ್ಲೇ ಕನ್ನಡಿಗರ ಈ ʼಆ್ಯಪ್ʼಗೆ ಭಾರಿ ಬೇಡಿಕೆ: ಮೂರೇ ತಿಂಗಳಲ್ಲಿ 30 ಮಿಲಿಯನ್‌ ಡೌನ್ ಲೋಡ್..!

ಪ್ರೇಮಸೌಧಕ್ಕೆ ಭೇಟಿ ನೀಡಲು ಬಯಸುವ ಪ್ರವಾಸಿಗರು ಕಡಖಂಡಿತವಾಗಿ ಸರ್ಕಾರ ರೂಪಿಸಲಾದ ಕೋವಿಡ್ 19 ಮಾರ್ಗಸೂಚಿಗಳನ್ನಪಾಲಿಸಲೇಬೇಕು. ಸದ್ಯ ತಾಜ್‌ ಗೇಟ್ ಬಳಿ ಪ್ರವಾಸಿಗರ ಥರ್ಮಲ್ ಸ್ಕ್ರೀನಿಂಗ್ ನಡೆಸಲಾಗುತ್ತದೆ. ಇದಾದ ಬಳಿಕವೇ ಒಳ ಪ್ರವೇಶಿಸಲು ಬಿಡಲಾಗುತ್ತದೆ. ಹೊಸ ಮಾರ್ಗಸೂಚಿ ಅನ್ವಯ ತಾಜ್‌ ಮಹಲ್‌ಗೆ ಒಂದು ದಿನ ಗರಿಷ್ಟ ಐದ ಸಾವಿರ ಮಂದಿ ಭೇಟಿ ನೀಡಬಹುದು. ಅತ್ತ ಆಗ್ರಾ ಕೋಟೆಗೆ ಗರಿಷ್ಟ 2,500 ಪ್ರವಾಸಿಗರಿಗಷ್ಟೇ ಭೇಟಿ ನೀಡಲು ಅವಕಾಶ ನೀಡಲಾಗುತ್ತದೆ. ಇನ್ನು ಎರಡೂ ಸ್ಮಾರಕಗಳ ಬಳಿ ಇರುವ ಟಿಕೆಟ್‌ ಕೌಂಟರ್‌ ತೆರೆದಿರುವುದಿಲ್ಲ. ಹಾಗಾಗಿ ಪ್ರವಾಸಿಗರು ಎಎಸ್‌ಐ ವೆಬ್‌ಸೈಟ್‌ನಲ್ಲಿ ಆನ್‌ಲೈನ್ ಟಿಕೆಟ್ ಬುಕ್ ಮಾಡಬೇಕು. ಇನ್ನು ಶಾಹ್‌ಜಹಾನ್‌ ಹಾಗೂ ಮುಮ್ತಾಜ್ ಮಹಲ್‌ರವರ ಗೋರಿ ಇರುವ ಮುಖ್ಯ ಕೋಣೆಗೆ ಒಂದು ಬಾರಿ ಕೇವಲ ಐದು ಮಂದಿಗಷ್ಟೇ ಪ್ರವೇಶ ನೀಡಲಾಗಿದೆ.

ಚಂದನವನದಲ್ಲಿ ʼಮಾದಕʼ ದಂಧೆ: ಖ್ಯಾತ ನಿರ್ದೇಶಕನ ಮಗನ್ನೇನೆಕೆ ಬಂಧಿಸಿಲ್ಲ: ಇಂದ್ರಜಿತ್‌ ಪ್ರಶ್ನೆ..!

India

ಡಿಜಿಟಲ್‌ಡೆಸ್ಕ್‌: ವಾಟ್ಸಾಪ್ ಬಹಳ ಸಮಯದಿಂದ ಬಹು ಸಾಧನಬೆಂಬಲದ ಮೇಲೆ ಕೆಲಸ ಮಾಡುವ ಅವೃತ್ತಿ ಬಗ್ಗೆ ಸಂಶೋಧನೆ ನಡೆಸುತ್ತಿದೆ. ಈ ಫೀಚರ್ ಹಲವು ಡಿವೈಸ್ ಗಳಲ್ಲಿ ಒಂದು ವಾಟ್ಸಾಪ್ ಖಾತೆಯನ್ನು ಬಳಸಲು ಅನುಮತಿಸುತ್ತದೆ. ಬಹು ಸಾಧನಬೆಂಬಲವನ್ನು ಪರೀಕ್ಷಿಸುವ ಅಂತಿಮ ಹಂತದಲ್ಲಿ ವಾಟ್ಸ್ ಆಪ್ ಇರುವುದರಿಂದ ಈ ಫೀಚರ್ ಅನ್ನು ನಾವು ಶೀಘ್ರವೇ ಅನುಭವಿಸಲಿದ್ದೇವೆ ಎಂದು ತಿಳಿದು ಬಂದಿದೆ.

ಈ ಬಗ್ಗೆ WABetaInfo ಹಂಚಿಕೊಂಡ ಸ್ಕ್ರೀನ್ ಶಾಟ್ ಗಳ ಮೂಲಕ ನಾವು ಈಗಾಗಲೇ ವಾಟ್ಸಾಪ್ ನ ಬಹು-ಸಾಧನಬೆಂಬಲದ ಭಾಗಗಳ ಒಂದು ನೋಟವನ್ನು ಪಡೆದಿದ್ದೇವೆ. ಇದೀಗ ವಾಟ್ಸಾಪ್ ತನ್ನ ಸಾರ್ವಜನಿಕ ಬೀಟಾ ಪರೀಕ್ಷಕರಿಗೆ ಈ ಫೀಚರ್ ಅನ್ನು ಸಕ್ರಿಯಗೊಳಿಸಲು ಸಿದ್ಧತೆ ನಡೆಸುತ್ತಿದೆ ಎಂದು ವರದಿಯಾಗಿದೆ. ಹಾಗಾಗಿ ವಾಟ್ಸ್ ಆಪ್ ನ ಸಾರ್ವಜನಿಕ ಬೀಟಾ ಪ್ರೋಗ್ರಾಂನಲ್ಲಿ ಇರುವ ಬಳಕೆದಾರರು ಅದನ್ನು ಶೀಘ್ರವೇ ಪರೀಕ್ಷಿಸಲು ಸಾಧ್ಯವಾಗುತ್ತದೆ. ವಾಟ್ಸ್ ಆಪ್ ಯಾವಾಗ ಎಲ್ಲಾ ಬಳಕೆದಾರರಿಗೆ ಸಿಗಲಿದೆ ಎನ್ನುವುದು ಇನ್ನೂ ತಿಳಿದು ಬಂದಿಲ್ಲ.

WABetaInfo ಈ ವೈಶಿಷ್ಟ್ಯದ ಬಗ್ಗೆ ಇನ್ನಷ್ಟು ವಿವರಗಳನ್ನು ಹಂಚಿಕೊಂಡಿದೆ. ಈ ಫೀಚರ್ ಬಳಕೆದಾರರಿಗೆ ಒಂದೇ ಬಾರಿಗೆ ನಾಲ್ಕು ವಿಭಿನ್ನ ಡಿವೈಸ್ ಗಳಲ್ಲಿ ಒಂದೇ ವಾಟ್ಸಾಪ್ ಖಾತೆಯನ್ನು ಬಳಸಲು ಅವಕಾಶ ನೀಡುತ್ತದೆ. ನಿಮ್ಮ ಮುಖ್ಯ ಸಾಧನವು ವಾಟ್ಸಾಪ್ ವೆಬ್ ನೊಂದಿಗೆ ಮಾಡುವಂಹಾಗೆ ಸಕ್ರಿಯ ಇಂಟರ್ನೆಟ್ ಸಂಪರ್ಕವನ್ನು ಹೊಂದಿರಬೇಕಾದ ಅಗತ್ಯವಿರುವುದಿಲ್ಲ. ಆದ್ದರಿಂದ ನಿಮ್ಮ ಪ್ರಾಥಮಿಕ ಫೋನ್ ಆಫ್ ಆಗಿದ್ದರೂ ಸಹ ನೀವು ವೆಬ್ ಅಥವಾ ಇತರ ಸಾಧನಗಳಲ್ಲಿ ನಿಮ್ಮ ವಾಟ್ಸಾಪ್ ಖಾತೆಯನ್ನು ಬಳಸಲು ಸಾಧ್ಯವಾಗುತ್ತದೆ ಅಂತ ತಿಳಿಸಿದೆ.

ಈ ಮಲ್ಟಿ ಡಿವೈಸ್ ಸಪೋರ್ಟ್ ಫೀಚರ್ ಗಾಗಿ ವಾಟ್ಸಾಪ್ ತನ್ನ ಡೆಸ್ಕ್ ಟಾಪ್ ಆವೃತ್ತಿಗಾಗಿ ಹೊಸ UI ಅನ್ನು ಸಹ ಬಿಡುಗಡೆ ಮಾಡಲಿದೆ. ಆ್ಯಪ್ ನಲ್ಲಿ ಈ ಫೀಚರ್ ‘ಲಿಂಕ್ಡ್ ಡಿವೈಸ್’ ಅಡಿಯಲ್ಲಿ ಲಭ್ಯವಾಗಲಿದೆ. ಇಲ್ಲಿ, ನೀವು ನಿಮ್ಮ ವಾಟ್ಸಾಪ್ ಖಾತೆಯನ್ನು ಹೊಸ ಸಾಧನಕ್ಕೆ ಲಿಂಕ್ ಮಾಡಬಹುದು, ಮತ್ತು ಲಿಂಕ್ ಮಾಡಿದ ಸಾಧನಗಳ ಪಟ್ಟಿಯನ್ನು ಸಹ ನೀವು ನೋಡುತ್ತೀರಿ. ಇದು ವಾಟ್ಸ್ ಆಪ್ ವೆಬ್ ಡೆಸ್ಕ್ ಟಾಪ್ ಇಂಟರ್ಫೇಸ್ ನ ಇಂಟರ್ಫೇಸ್ ಅನ್ನು ಹೋಲುತ್ತದೆ. ಫೀಚರ್ ಅನ್ನು ಪ್ರಯತ್ನಿಸಲು ನೀವು ಆನ್/ಆಫ್ ಟಾಗಲ್ ಮಾಡಬಹುದಾದ ‘ಮಲ್ಟಿ ಡಿವೈಸ್ ಬೀಟಾ’ ಆಯ್ಕೆಯೂ ಇದೆ. ಮಲ್ಟಿ ಡಿವೈಸ್ ಬೆಂಬಲದಲ್ಲಿ ಎಲ್ಲಾ ವೈಶಿಷ್ಟ್ಯಗಳು ಲಭ್ಯವಿರುವುದಿಲ್ಲ ಎಂದು ಸಹ ಉಲ್ಲೇಖಿಸಲಾಗಿದೆ. WABetaInfo, ಚಾಟ್ ಇತಿಹಾಸವನ್ನು ಸಿಂಕ್ ಮಾಡುವುದು, ಸ್ಟಾರ್ ಟಿಂಗ್/ಸಂದೇಶಗಳನ್ನು ನೀಡುವುದು, ಮ್ಯೂಟಿಂಗ್ ಚಾಟ್ ಗಳಂತಹ ವೈಶಿಷ್ಟ್ಯಗಳು ಲಭ್ಯವಿದೆ ಎಂದು ಸೂಚಿಸುತ್ತದೆ.

State

ಹಾಸನ : ಜಿಲ್ಲೆಯಲ್ಲಿ ಕೊರೋನಾ ಸೋಂಕಿನ ಪ್ರಕರಣಗಳ ಸಂಖ್ಯೆ ಇಂದು ಕೂಡ ಮುಂದುವರೆದಿದೆ. ಇಂದು ಜಿಲ್ಲೆಯಲ್ಲಿ ಹೊಸದಾಗಿ 259 ಜನರಿಗೆ ಕೊರೋನಾ ಪಾಸಿಟಿವ್ ಎಂಬುದಾಗಿ ದೃಢಪಟ್ಟಿದೆ. ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 13,742ಕ್ಕೆ ಏರಿಕೆಯಾಗಿದೆ.

ಈ ಕುರಿತಂತೆ ಜಿಲ್ಲಾಡಳಿತ ಕೊರೋನಾ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದ್ದು, ಜಿಲ್ಲೆಯಲ್ಲಿ ಇಂದು 259 ಜನರಿಗೆ ಕೊರೋನಾ ಪಾಸಿಟಿವ್ ಎಂಬುದಾಗಿ ದೃಢಪಟ್ಟಿದೆ. ಹೀಗಾಗಿ ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 13,742ಕ್ಕೆ ಏರಿಕೆಯಾಗಿದೆ. ಇವರಲ್ಲಿ ಇದುವರೆಗೆ 10,823 ಸೋಂಕಿತರು ಸಂಪೂರ್ಣವಾಗಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇದರಿಂದಾಗಿ ಜಿಲ್ಲೆಯಲ್ಲಿ 2,650 ಸಕ್ರೀಯ ಸೋಂಕಿತರಿರುವುದಾಗಿ ತಿಳಿಸಿದೆ.

ಇನ್ನೂ ಇಂದು ಕಿಲ್ಲರ್ ಕೊರೋನಾಗೆ ಜಿಲ್ಲೆಯಲ್ಲಿ ನಾಲ್ವರು ಸೋಂಕಿತರು ಸಾವನ್ನಪ್ಪಿದ್ದಾರೆ. ಈ ಮೂಲಕ ಜಿಲ್ಲೆಯಲ್ಲಿ ಕೊರೋನಾ ಸೋಂಕಿನಿಂದಾಗಿ ಸಾವನ್ನಪ್ಪಿದವರ ಸಂಖ್ಯೆ 269ಕ್ಕೆ ಏರಿಕೆಯಾಗಿದೆ ಎಂಬುದಾಗಿಯೂ ಮಾಹಿತಿ ನೀಡಿದೆ.

State

ಬೆಂಗಳೂರು: ಸ್ಯಾಂಡಲ್‌ವುಡ್‌ ಡ್ರಗ್ಸ್‌ ದಂಧೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಪ್ಪನ ಅಗ್ರಹಾರದಲ್ಲಿ ವಿಚಾರಣಧೀನಾ ಖೈದಿಯಾಗಿ ಶಿಕ್ಷೆ ಅನುಭವಿಸುತ್ತಿರುವ ನಟಿ ರಾಗಿಣಿ ಮತ್ತು ನಟಿ ಸಂಜನಾ  ಅವ್ರ ಜಾಮೀನು ಅರ್ಜಿ ಮತ್ತೆ ಮುಂದೂಡಿಕೆಯಾಗಿದ್ದು, ಸೆ.24ವರೆಗೆ ಮುಂದೂಡಿ ಎಂದು ಕೋರ್ಟ್‌ ಅದೇಶ ಹೊರಡಿಸಿದೆ.

ನಟಿ ರಾಗಿಣಿ ಮತ್ತು ನಟಿ ಸಂಜನಾ ಅರ್ಜಿಯನ್ನ ವಿಚಾರಣೆ ನಡೆಸಿದ ಎನ್‌ಡಿಪಿಎಸ್‌ ಕೋರ್ಟ್‌ ಸೆ.24ವರೆಗೆ ಮುಂದೂಡಿ ಎಂದು ಕೋರ್ಟ್‌ ಅದೇಶ ನೀಡಿದೆ. ಹಾಗಾಗಿ ನಟಿಮಣಿಯರು ಇನ್ನೂ 3 ದಿನಗಳ ಕಾಲ ಪರಪ್ಪನ ಅಗ್ರಹಾರದಲ್ಲಿಯೇ ಇರಬೇಕಾಗುತ್ತೆ.

 

State

ಮಡಿಕೇರಿ : ಜಿಲ್ಲೆಯಲ್ಲಿ ಕಳೆದ ನಾಲ್ಕು ದಿನಗಳಿಂದ ವ್ಯಾಪಕ ಮಳೆಯಾಗುತ್ತಿದೆ. ಭಾಗಮಂಡಲ, ಶಾಂತಳ್ಳಿ, ಮಡಿಕೇರಿ ಭಾಗದಲ್ಲಿ ಹೆಚ್ಚಿನ ಮಳೆಯಾಗುತ್ತಿದ್ದು, ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿದೆ.

ನಾಡಿನ ಜೀವನಾಡಿ ಕಾವೇರಿ ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿದೆ. ಇದರೊಂದಿಗೆ ಕಾವೇರಿ ಭಾಗದ ಪ್ರಮುಖ ಜಲಾಶಯಗಳಲ್ಲಿ ಒಂದಾದ ಹಾರಂಗಿ ಜಲಾಶಯಕ್ಕೂ ಸಹ ಹೆಚ್ಚಿನ ಒಳಹರಿವು ಹರಿದು ಬರುತ್ತಿದೆ.

ಆಗಸ್ಟ್ ಮೊದಲ ವಾರದಲ್ಲಿ ಜಿಲ್ಲೆಯಲ್ಲಿ ಸುರಿದ ಭಾರಿ ಮಳೆಯಿಂದಾಗಿ ಹೆಚ್ಚು ಹಾನಿ ಸಂಭವಿಸಿತ್ತು. ಬಳಿಕ ಕೆಲ ದಿನಗಳಿಂದ ಬಿಡುವು ಪಡೆದಿದ್ದ ಮಳೆ. ಮತ್ತೆ ಬಿರುಸುಗೊಂಡಿದೆ. ಜೊತೆಗೆ ವಿಪರೀತ ಶೀತ ಗಾಳಿ ಬೀಸುತ್ತಿದೆ.

ಸೆಪ್ಟೆಂಬರ್, 19 ರ ಶನಿವಾರದಂದು ಜಿಲ್ಲಾ ಸರಾಸರಿ ಮಳೆಯ ಪ್ರಮಾಣವು 19.73 ಮಿಲಿ ಮೀಟರ್ ಆಗಿದ್ದು, ಸೆ.20 ರಂದು 66.75 ಮಿಲಿ ಮೀಟರ್ ಮಳೆಯಾಗಿದೆ. ಸೆ.21 ರಂದು ಜಿಲ್ಲಾ ಸರಾಸರಿ ಮಳೆಯ ಪ್ರಮಾಣವು 64.19 ಮಿ.ಮೀ. ಆಗಿದೆ.
ಭಾಗಮಂಡಲ ಹೋಬಳಿ ವ್ಯಾಪ್ತಿಯಲ್ಲಿ ಸೋಮವಾರದಂದು 135 ಮಿ.ಮೀ., ಶಾಂತಳ್ಳಿ ಹೋಬಳಿ ವ್ಯಾಪ್ತಿಯಲ್ಲಿ 131.20 ಮಿ.ಮೀ., ಮಡಿಕೇರಿ ಕಸಬಾ ಹೋಬಳಿ ವ್ಯಾಪ್ತಿಯಲ್ಲಿ 96.40 ಮಿ.ಮೀ. ಗರಿಷ್ಟ ಮಳೆಯಾಗಿದೆ.

ಅಲ್ಲದೆ ಅಜ್ಜಲ್ಲಿ-ಶನಿವಾರಸಂತೆ ಮಾರ್ಗದ ರಸ್ತೆಯಲ್ಲಿ ಮರ ಬಿದ್ದಿದ್ದು, ಮರವನ್ನು ಅರಣ್ಯ ಇಲಾಖೆಯ ಸಿಬ್ಬಂದಿಗಳು ತೆರವುಗೊಳಿಸಿ, ಸಾರ್ವಜನಿಕರ ಸಂಚಾರಕ್ಕೆ ಅನುವು ಮಾಡಲಾಗಿದೆ.

ಇನ್ನು ಕಳೆದ 3 ದಿನಗಳಿಂದ ಹಾರಂಗಿ ಜಲಾಶಯದಲ್ಲಿ ನೀರಿನ ಒಳ ಹರಿವು ಹೆಚ್ಚಿದೆ. ಸೆ.19 ರಂದು ಜಲಾಶಯಕ್ಕೆ 2,981 ಕ್ಯುಸೆಕ್ ನೀರಿನ ಒಳಹರಿವಿದ್ದು, ಸೆ.20 ರಂದು ಒಳಹರಿವಿನ ಪ್ರಮಾಣ 5,819 ಕ್ಯುಸೆಕ್ ಗೆ ಏರಿಕೆಯಾಗಿದೆ. ಸೆ.21 ರಂದು 8666 ಕ್ಯುಸೆಕ್ ನಷ್ಟು ನೀರು ಜಲಾಶಯಕ್ಕೆ ಹರಿದು ಬಂದಿದೆ. ಈ ಮೂಲಕ ಸೋಮವಾರದಂದು ನದಿಗೆ ಹೆಚ್ಚುವರಿಯಾಗಿ 11,854 ಕ್ಯುಸೆಕ್ ನೀರನ್ನು ಹರಿಬಿಡಲಾಗಿದೆ.

ಜಿಲ್ಲೆಯಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ಕಳೆದ ಕೆಲವು ದಿನಗಳಲ್ಲಿ 40 ರಿಂದ 50 ವಿದ್ಯುತ್ ಕಂಬಗಳು ಧರೆಗುರುಳಿದ್ದು, ಹೆಚ್ಚಿನ ಹಾನಿ ಸಂಭವಿಸಿಲ್ಲ. ಅಲ್ಲದೆ ಯಾವುದೇ ಟ್ರಾನ್ಸ್ ಫಾರ್ಮರ್ ಗಳಿಗೂ ಹಾನಿ ಸಂಭವಿಸಿಲ್ಲ ಎಂದು ಸೆಸ್ಕ್ ಕಾರ್ಯನಿರ್ವಾಹಕ ಅಧಿಕಾರಿ ಸೋಮಶೇಖರ್ ಅವರು ಮಾಹಿತಿ ನೀಡಿದ್ದಾರೆ.

ವಿದ್ಯುತ್ ಕಂಬ ಬಿದ್ದು ಹಾನಿಗೀಡಾದ ಸ್ಥಳಕ್ಕೆ ತಕ್ಷಣವೇ ಭೇಟಿ ನೀಡಿ, ಸೆಸ್ಕ್ ತಂಡ ಅಲ್ಲಿನ ಹಾನಿಯನ್ನು ಸರಿಪಡಿಸುವ ಕಾರ್ಯದಲ್ಲಿ ತೊಡಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಅಲ್ಲದೆ ಜಿಲ್ಲೆಯ ಜನರು ಯಾವುದೇ ಆತಂಕಕ್ಕೆ ಒಳಗಾಗುವ ಅಗತ್ಯ ಇಲ್ಲ. ಜಿಲ್ಲಾಡಳಿತ ಪರಿಸ್ಥಿತಿ ನಿಭಾಯಿಸಲು ಸಜ್ಜಾಗಿದ್ದು, ತುರ್ತು ಸಂದರ್ಭಗಳಲ್ಲಿ ಜಿಲ್ಲಾಧಿಕಾರಿಗಳ 24*7 ಕಂಟ್ರೋಲ್ ರೂಂ ಸಂಖ್ಯೆ 0827-221077, ವ್ಯಾಟ್ಸ್‍ಆಪ್ ಸಂಖ್ಯೆ 8550001077 ನ್ನು ಸಂಪರ್ಕಿಸಬಹುದು.

State

ಬೆಂಗಳೂರು: ಸ್ಯಾಂಡಲ್‌ವುಡ್‌ ಡ್ರಗ್ಸ್‌ ದಂಧೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಪ್ಪನ ಅಗ್ರಹಾರದಲ್ಲಿ ವಿಚಾರಣಧೀನಾ ಖೈದಿಯಾಗಿ ಶಿಕ್ಷೆ ಅನುಭವಿಸುತ್ತಿರುವ ನಟಿ ರಾಗಿಣಿ ಅವ್ರ ಜಾಮೀನು ಅರ್ಜಿ ಮತ್ತೆ ಮುಂದೂಡಿಕೆಯಾಗಿದ್ದು, ಸೆ.24ವರೆಗೆ ಮುಂದೂಡಲಾಗಿದೆ.

ನಟಿ ರಾಗಿಣಿ ಅರ್ಜಿಯನ್ನ ವಿಚಾರಣೆ ನಡೆಸಿದ ಎನ್‌ಡಿಪಿಎಸ್‌ ಕೋರ್ಟ್‌ ಸೆ.24ವರೆಗೆ ಮುಂದೂಡಿ ಎಂದು ಕೋರ್ಟ್‌ ಅದೇಶ ನೀಡಿದೆ.

ಇನ್ನು ರಾಗಿಣಿ ಪರ ವಕೀಲರು ನ್ಯಾಯಧೀಶರ ಮುಂದೆ “ಡ್ರಗ್‌ ಪ್ಲೇಡರ್‌ ವೈಭವ್‌ನಿಂದ ಡ್ರಗ್ಸ್‌ ಪಡೆದಿದ್ದಾರೆ ನಿಜ. ಆದ್ರೆ, ಅದರ ಪ್ರಮಾಣ ತುಂಬಾ ಕಮ್ಮಿ ಅಂದ್ರೆ 0.004 ರಷ್ಟಿದೆ. ಇದು ಅಪರಾಧವಲ್ಲ ಎಂದು ವಾದಿಸಿದ್ರು. ಅಲ್ಲದೇ ರಾಗಿಣಿಯ ಮನೆಯಲ್ಲಿ ಯಾವುದೇ ಮಾದಕ ವಸ್ತು ಸಿಕ್ಕಿಲ್ಲ. ಆಕೆಯಿಂದ ಕೇವಲ 3 ಅರ್ಗೇನಿಕ್‌ ಸಿಗಟೇಟ್‌ ಮತ್ತೆ 2 ಮೊಬೈಲ್‌ ವಶಪಡಿಸಿಕೊಂಡಿದ್ದಾರೆ. ಸಿಸಿಬಿ ಅಧಿಕಾರಿಗಳು ಉದ್ದೇಶಪೂರ್ವಕವಾಗಿ ಬಂಧಿಸಿದ್ದಾರೆ. ಅಧಿಕಾರ ಪೂರ್ವ ನಿಯೋಜಿತ ಪ್ಲ್ಯಾನ್‌‌ ಇದಾಗಿದ್ದು, ಎಫ್‌ಐಆರ್‌ನಲ್ಲಿ ಯಾವ ಕಾರಣಕ್ಕೆ ಬಂಧಿಸಿದ್ದೇವೆ ಎನ್ನುವುದನ್ನ ಕೂಡ ನಮೂದಿಸಿಲ್ಲ. ರಾಗಿಣಿ ಸಂಪೂರ್ಣ ಅಮಾಯಕರು ಹಾಗಾಗಿ ಅವ್ರಿಗೆ ಜಾಮೀನು ನೀಡುವಂತೆ” ನ್ಯಾಯಾಧೀಶರ ಮುಂದೆ ವಾದ ಮಂಡಿಸಿದ್ದರು.

ಇನ್ನು ರಾಗಿಣಿ ಜಾಮೀನಿಗೆ ಸಿಸಿಬಿ ಆಕ್ಷೇಪಣೆ ಸಲ್ಲಿಸಿದ್ದು, ಕ್ರಿಮಿನಲ್‌ ಆರೋಪಿಗಳ ಜೊತೆ ನಟಿ ರಾಗಿಣಿ ಸಂಬಂಧ ಹೊಂದಿದ್ದಾರೆ. ಅಲ್ಲದೇ ವಿಚಾರಣೆಯ ಸಂದರ್ಭದಲ್ಲಿ ಅವ್ರು ಒಂದಿಷ್ಟು ಮಂದಿಯ ಹೆಸ್ರು ಹೇಳಿದ್ದಾರೆ. ರಾಗಿಣಿಗೆ ಜಾಮೀನು ನೀಡಿದ್ದೇ ಆದ್ರೆ, ಆರೋಪಿಗಳನ್ನ ಎಚ್ಚರಿಸುತ್ತಾರೆ ಮತ್ತು ಸಾಕ್ಷ್ಯ ನಾಶ ಮಾಡುವ ಸಾಧ್ಯತೆ ಇದೆ. ಇನ್ನು ಅವ್ರು ಡ್ರಗ್ಸ್‌ ದಂಧೆಯಿಂದ ಹಣ ಗಳಿಸಿದ ದಾಖಲೆ ನಮ್ಮಲ್ಲಿದೆ. ರಾಗಿಣಿ ಡ್ರಗ್ಸ್ ಸೇವಿಸುವುದರ ಜೊತೆಗೆ ಸಪ್ಲೈ  ಮಾಡಿದ್ದಾರೆ‌ ಹಾಗಾಗಿ ಅವ್ರಿಗೆ ಜಾಮೀನು ನೀಡಬಾರದು ಎಂದು ಸಿಸಿಬಿ ಅಪೇಕ್ಷಣೆ ಸಲ್ಲಿಸಿತ್ತು.

State

ಮಡಿಕೇರಿ :-ಜಿಲ್ಲೆಯಲ್ಲಿ ಸೋಮವಾರ ಬೆಳಗ್ಗೆ 8 ಗಂಟೆ ವೇಳೆಗೆ 12 ಮತ್ತು ಮಧ್ಯಾಹ್ನ 2 ಗಂಟೆ ವೇಳೆಗೆ 25 ಸೇರಿದಂತೆ ಒಟ್ಟು 37 ಹೊಸ ಕೋವಿಡ್-19 ಪ್ರಕರಣಗಳು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.

ರ್ಯಾಪಿಡ್ ಆಂಟಿಜನ್ ಪರೀಕ್ಷೆಯ ಮೂಲಕ ಮೈಸೂರಿನ 20 ವರ್ಷದ ಮಹಿಳೆ ಮತ್ತು 35 ವರ್ಷದ ಪುರುಷ. ಸೋಮವಾರಪೇಟೆ ಶಿರಂಗಾಲ ಸರ್ಕಾರಿ ಶಾಲೆ ಸಮೀಪದ 53 ವರ್ಷದ ಪುರುಷ. ಕುಶಾಲನಗರ ರಾಧಾ ಕೃಷ್ಣ ಲೇಔಟಿನ ಸೋಮೇಶ್ವರ ಬ್ಲಾಕ್ ನ 34 ವರ್ಷದ ಮಹಿಳೆ, 41 ವರ್ಷದ ಪುರುಷ ಮತ್ತು 9 ವರ್ಷದ ಬಾಲಕ. ಹಾಸನ ಅರಕಲಗೂಡುವಿನ 34 ವರ್ಷದ ಪುರುಷ. ಮಡಿಕೇರಿ ವೈದ್ಯಕೀಯ ಕಾಲೇಜ್‍ನ ಭೋಧಕೇತರ ಸಿಬ್ಬಂದಿ ವಸತಿಗೃಹದ 27 ವರ್ಷದ ಪುರುಷ. ಮಡಿಕೇರಿ ಕಾಲೇಜು ರಸ್ತೆಯ ಉಡುಪಿ ಹೊಟೇಲ್ ಸಮೀಪದ 53 ವರ್ಷದ ಪುರುಷ. ಸೋಮವಾರಪೇಟೆ ಸುಗ್ಗಿಕಟ್ಟೆ ಚೌಡ್ಲುವಿನ 45 ವರ್ಷದ ಮಹಿಳೆ. ಸೋಮವಾರಪೇಟೆ ಬಿಳಿಗಿರಿಯ ಕುಂಬೂರು ಅಂಚೆಯ 28 ವರ್ಷದ ಮಹಿಳೆ.

ಮಡಿಕೇರಿ ಚೈನ್ ಗೇಟ್‍ನ ಪಿ.ಡಬ್ಲ್ಯೂ. ಡಿ ವಸತಿ ಗೃಹದ 43 ವರ್ಷದ ಪುರುಷನಿಗೆ ಸೋಂಕು ದೃಢಪಟ್ಟಿದೆ.
ಸೋಮವಾರಪೇಟೆ ಬಸವನಹಳ್ಳಿ ಗ್ರಾಮ ಮತ್ತು ಅಂಚೆಯ ಮೊರಾರ್ಜಿ ಶಾಲೆ ಸಮೀಪದ 25 ವರ್ಷದ ಮಹಿಳೆ. ನಾಪೆÇೀಕ್ಲು ಕೈಕಾಡುವಿನ 42 ವರ್ಷದ ಪುರುಷ. ವಿರಾಜಪೇಟೆ ಸಿದ್ದಾಪುರ ಗ್ರಾಮದ ಹೈ ಸ್ಕೂಲ್ ಸಮೀಪದ 40 ವರ್ಷದ ಮಹಿಳೆ. ವಿರಾಜಪೇಟೆ ಐಮಂಗಲ ಕೊಮೆತಾಡು ಸೇತುವೆಯ 57 ವರ್ಷದ ಮಹಿಳೆ. ವಿರಾಜಪೇಟೆ ತಿಮ್ಮಯ್ಯ ಲೇಔಟಿನ 27 ವರ್ಷದ ಪುರುಷ. ಶನಿವಾರಸಂತೆ ಗೋಪಾಲಪುರ ಬನಶಂಕರಿ ದೇವಾಲಯ ಸಮೀಪದ 32 ವರ್ಷದ ಪುರುಷ. ಶನಿವಾರಸಂತೆ ಹಿತ್ತಲಕೇರಿಯ 22 ವರ್ಷದ ಪುರುಷ. ಸೋಮವಾರಪೇಟೆ ಆಲೂರು ಸಿದ್ಧಾಪುರ ಅಂಚೆಯ 45 ವರ್ಷದ ಮಹಿಳೆ.

ಮಡಿಕೇರಿ ನಾಪೋಕ್ಲುವಿನ ಬಸ್ ನಿಲ್ದಾಣ ಸಮೀಪದ 50 ವರ್ಷದ ಮಹಿಳೆ. ಸೋಮವಾರಪೇಟೆ ನೆಲ್ಲಿಹುದಿಕೇರಿಯ ಮಣಪುರಂ ಫೈನಾನ್ಸ್ ಸಮೀಪದ 29 ವರ್ಷದ ಪುರುಷ. ವಿರಾಜಪೇಟೆ ಮೀನುಪೇಟೆಯ ಭಾರತ್ ಪೆಟ್ರೋಲ್ ಪಂಪ್ ಸಮೀಪದ 68 ವರ್ಷದ ಪುರುಷ. ಮಡಿಕೇರಿ ಪೆರಾಜೆ ಗ್ರಾಮ ಮತ್ತು ಅಂಚೆಯ 46 ಮತ್ತು 25 ವರ್ಷದ ಮಹಿಳೆಯರು. ಶನಿವಾರಸಂತೆ ವಿಘ್ನೇಶ್ವರ ಕಲ್ಯಾಣ ಮಂಟಪ ಸಮೀಪದ 44 ವರ್ಷದ ಪುರುಷ. ಶನಿವಾರಸಂತೆ ಹುಲ್ಸೆಯ ವಾಟರ್ ಟ್ಯಾಂಕ್ ಸಮೀಪದ 34 ವರ್ಷದ ಪುರುಷ.

ಕುಶಾಲನಗರ ಹೌಸಿಂಗ್ ಬೋರ್ಡ್ ಸಮೀಪದ ಆರ್.ಆರ್.ಆರ್ ಲೇಔಟಿನ 69 ವರ್ಷದ ಪುರುಷ. ಸೋಮವಾರಪೇಟೆ ಆಲೂರು ಸಿದ್ದಾಪುರ ಸರ್ಕಾರಿ ಶಾಲೆ ಸಮೀಪದ 20 ವರ್ಷದ ಪುರುಷ. ಕುಶಾಲನಗರ ರಾಧಾಕೃಷ್ಣ ಬಡಾವಣೆಯ 4ನೇ ಬ್ಲಾಕ್‍ನ 58 ವರ್ಷದ ಪುರುಷ. ರ್ಯಾಪಿಡ್ ಆಂಟಿಜನ್ ಪರೀಕ್ಷೆಯ ಮೂಲಕ ಕುಶಾಲನಗರ ಬೈಚನಹಳ್ಳಿಯ ಅಂಬೇಡ್ಕರ್ ಬಡಾವಣೆಯ 40 ವರ್ಷದ ಪುರುಷ. ಸೋಮವಾರಪೇಟೆ ದೊಡ್ಡಹನಕೋಡು ಗ್ರಾಮದ 54 ವರ್ಷದ ಪುರುಷ. ಸುಂಟಿಕೊಪ್ಪ ಪಂಪ್ ಹೌಸ್ ಸಮೀಪದ 75 ವರ್ಷದ ಪುರುಷ. ಪಿರಿಯಾಪಟ್ಟಣ ಬೆಟ್ಟದಪುರ ಪಂವಾಯತಿ ಕಚೇರಿ ಹಿಂಭಾಗದ 50 ವರ್ಷದ ಪುರುಷ. ಸೋಮವಾರಪೇಟೆ ನೆಲ್ಲಿಹುದಿಕೇರಿಯ ನಲವತ್ತೆಕ್ರೆ ಚಾಮುಂಡೇಶ್ವರಿ ದೇವಾಲಯ ಸಮೀಪದ 48 ವರ್ಷದ ಪುರುಷ. ಮಡಿಕೇರಿ ದೇಚೂರು ಚಾಮರಾಜ ಬಂಗಲೆ ಸಮೀಪದ 30 ವರ್ಷದ ಪುರುಷ. ಮಡಿಕೇರಿ ತ್ಯಾಗರಾಜ ಕಾಲೋನಿಯ 67 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದೆ.

ಜಿಲ್ಲೆಯಲ್ಲಿ ಒಟ್ಟು ಕೋವಿಡ್-19 ಪ್ರಕರಣಗಳ ಸಂಖ್ಯೆ 2308 ಆಗಿದ್ದು, 1872 ಮಂದಿ ಗುಣಮುಖರಾಗಿದ್ದಾರೆ. 406 ಸಕ್ರಿಯ ಪ್ರಕರಣಗಳಿದ್ದು, 30 ಮರಣ ಪ್ರಕರಣಗಳು ವರದಿಯಾಗಿದೆ. ಜಿಲ್ಲೆಯಲ್ಲಿನ ಕಂಟೈನ್ ಮೆಂಟ್ ವಲಯಗಳ ಸಂಖ್ಯೆ 355 ಆಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.

Jobs State

ಮಡಿಕೇರಿ :-ಜನ ಆರೋಗ್ಯ ಕೇಂದ್ರ, ಎಪಿಡೀಮಿಯಾಲಜಿ ವಿಭಾಗ, ನಿಮ್ಹಾನ್ಸ್, ಬೆಂಗಳೂರು ಇವರಿಂದ ಅನುಷ್ಠಾನಗೊಂಡಿರುವ ಇಲಾಖೆಯ ಯೋಜನೆಯಾದ ‘ಯುವ ಸ್ಪಂದನ’ ದಲ್ಲಿ ಯುವ ಪರಿವರ್ತಕರ ಹುದ್ದೆಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಅರ್ಹತೆ;-ಪದವೀಧರ ಯುವಕರು ಅವಶ್ಯವಿರುವ ಕೌಶಲ್ಯ, ಸ್ಥಳೀಯ ಭಾಷೆ, ಕನ್ನಡವನ್ನು ಸ್ಪಷ್ಟವಾಗಿ ಮಾತನಾಡುವುದು, ಸಮುದಾಯದಲ್ಲಿ ಕೆಲಸ ಮಾಡಲು ಆಸಕ್ತಿ ಹಾಗೂ ಉತ್ತಮ ಅಂತರ್ ವ್ಯಕ್ತಿಯ ಸಂವಹನ ಕೌಶಲ್ಯ ಜೊತೆಗೆ ಸಂವಾದ ಕೌಶಲ್ಯಗಳನ್ನು ಹೊಂದಿರಬೇಕು. ಸಮುದಾಯದಲ್ಲಿ ಯುವಜನರಿಗೆ ತರಬೇತಿಯಂತಹ ಹಾಗೂ ಯುವ ಜನ ಸಂಬಂಧಿ ವಿಷಯಗಳ ಕುರಿತು ಅರಿವು ಕಾರ್ಯಕ್ರಮಗಳನ್ನು ನಡೆಸಬೇಕು. 21 ರಿಂದ 35 ವರ್ಷ ವಯೋಮಿತಿ ಹೊಂದಿರಬೇಕು.

ಆಸಕ್ತಿಯುಳ್ಳವರು ಸಹಾಯಕ ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಜನರಲ್ ತಿಮ್ಮಯ್ಯ ಕ್ರೀಡಾಂಗಣ ಮ್ಯಾನ್ಸ್ ಕಾಂಪೌಂಡ್ ಕೊಡಗು ಇವರಿಗೆ ಸೆಪ್ಟೆಂಬರ್, 25 ರೊಳಗೆ ಅರ್ಜಿ ತಲುಪಿಸಬೇಕು. ಸಂದರ್ಶನದ ದಿನಾಂಕವನ್ನು ದೂರವಾಣಿ ಮೂಲಕ ತಿಳಿಸಲಾಗುವುದು.

ಹೆಚ್ಚಿನ ಮಾಹಿತಿಗೆ ಯುವ ಸ್ಪಂದನದ ಕ್ಷೇತ್ರ ಸಂಪರ್ಕಾಧಿಕಾರಿಗಳಾದ ವೆಂಕೋಬ ದೂ.ಸಂ: 9611069973 ಮತ್ತು ಯುವ ಸಮಾಲೋಚಕರಾದ ಹರ್ಷಿತ ದೂ.ಸಂ. 7760911250 ನ್ನು ಸಂಪರ್ಕಿಸಬಹುದು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ಜಯಲಕ್ಷ್ಮಿಬಾಯಿ ಅವರು ತಿಳಿಸಿದ್ದಾರೆ.

India

ಬೆಂಗಳೂರು : ಮೇಡ್ ಇನ್ ಇಂಡಿಯಾ ಕಿರು ವಿಡಿಯೋ ಹಂಚಿಕೆ ವೇದಿಕೆಯಾದ ಚಿಂಗಾರಿ ಅಪ್ಲಿಕೇಶನ್‌ ದಿನದಿಂದ ದಿನಕ್ಕೆ ಭಾರೀ ಸದ್ದು ಮಾಡ್ತಿದ್ದು, ಕೇವಲ ಮೂರು ತಿಂಗಳಲ್ಲಿ 30 ಮಿಲಿಯನ್‌ಗೂ ಹೆಚ್ಚು ಡೌನ್ ಲೋಡ್‌ಗಳನ್ನು ದಾಟಿದೆ.

ಸಾಮಾಜಿಕ ಆ್ಯಪ್ ಹೇಳಿಕೆಯೊಂದನ್ನ ಬಿಡುಗಡೆ ಮಾಡಿದ್ದು, ಮೂರು ತಿಂಗಳಲ್ಲಿ ಈ ಸಾಧನೆ ಮಾಡಿದೆ. ಕಂಟೆಂಟ್ ಕ್ರಿಯೇಟರ್‌ಗಳಿಗೆ ಹೆಚ್ಚು ಸುಧಾರಿತ ಮುಂಭಾಗ ಮತ್ತು ರಿಯರ್ ಕ್ಯಾಮೆರಾ ಟೂಲ್‌ಗಳನ್ನು ನೀಡಲು ನಮ್ಮ ಪ್ಲಾಟ್ ಫಾರ್ಮ್ ನಲ್ಲಿ AR (ಆಗ್ಮೆಂಟೆಡ್ ರಿಯಾಲಿಟಿ) ಫಿಲ್ಟರ್‌ಗಳನ್ನು ಸೇರಿಸಿದ್ದೇವೆʼ” ಎಂದು ಬರೆಯಲಾಗಿದೆ.

ಚಂದನವನದಲ್ಲಿ ʼಮಾದಕʼ ದಂಧೆ: ಖ್ಯಾತ ನಿರ್ದೇಶಕನ ಮಗನ್ನೇನೆಕೆ ಬಂಧಿಸಿಲ್ಲ: ಇಂದ್ರಜಿತ್‌ ಪ್ರಶ್ನೆ..!

ಇನ್ನು ಈ ಚಿಂಗಾರಿ ಬಳಕೆದಾರರಲ್ಲಿ ಅತ್ಯಧಿಕ ಮಂದಿ 18-35 ರ ವಯೋಮಾನದವರಿದ್ದಾರೆ ಎಂದಿದ್ದು, ಇಂಗ್ಲಿಷ್ ಮತ್ತು ಸ್ಪ್ಯಾನಿಷ್ ಭಾಷೆಗಳ ಜೊತೆಗೆ ಚಿಂಗಾರಿ ಹಿಂದಿ, ಬಾಂಗ್ಲಾ, ಗುಜರಾತಿ, ಮರಾಠಿ, ಕನ್ನಡ, ಪಂಜಾಬಿ, ಮಲಯಾಳಂ, ತಮಿಳು, ಒಡಿಯಾ ಮತ್ತು ತೆಲುಗು ಭಾಷೆಗಳಲ್ಲಿ ಲಭ್ಯವಿದೆ ಎಂದು ಪ್ರಕಟಣೆ ತಿಳಿಸಿದೆ.

ಭಾರತವಲ್ಲದೆ ಯುಎಇ, ಅಮೆರಿಕ, ಕುವೈತ್, ಸಿಂಗಾಪುರ, ಸೌದಿ ಅರೇಬಿಯಾ ಮತ್ತು ವಿಯೆಟ್ನಾಂಗಳಲ್ಲಿ ಚಿಂಗಾರಿ ಆಪ್ ತನ್ನ ಬಳಕೆದಾರರ ಸಂಖ್ಯೆಯನ್ನ ನಿರಂತರವಾಗಿ ಹೆಚ್ಚಿತ್ತಿದ್ದಾರೆ ಎಂದು ತಿಳಿಸಿದೆ.

ಈ ʼಯೋಜನೆʼಯಡಿ ಪ್ರತಿದಿನ ಜಸ್ಟ್‌ 2 ರೂಪಾಯಿ ಉಳಿಸಿ, ನಿವೃತ್ತಿ ನಂತರ ಯಾವುದೇ ಟೆನ್ಷನ್‌ ಇರಲ್ಲ..!

State

ಬೆಂಗಳೂರು: ಸ್ಯಾಂಡಲ್‌ವುಡ್‌ ಡ್ರಗ್ಸ್ ದಂಧೆ ಪ್ರಕರಣಕ್ಕೆ ಸಂಬಂಧಿಸಿದ ಸ್ಫೋಟಕ ಮಾಹಿತಿಯನ್ನ ಬಹಿರಂಗ ಪಡಿಸಿದ್ದ ನಿರ್ದೇಶಕ ಇಂದ್ರಜೀತ್‌ ಲಂಕೇಶ್‌ ಮತ್ತೊಂದು ಹೊಸ ಬಾಂಬ್‌ ಸಿಡಿಸಿದ್ದು, ಇಷ್ಟು ದಿನವಾದ್ರು ಆ ನಿರ್ದೇಶಕನ ಮಗನನ್ನ ಯಾಕೆ ಬಂಧಿಸಿಲ್ಲ ಎಂದು ಪ್ರಶ್ನಿಸಿದ್ದಾರೆ.

ಸಿಸಿಬಿ ಅಧಿಕಾರಿಗಳ ಮೇಲೆ ನನಗೆ ತುಂಬಾನೇ ನಂಬಿಕೆ ಇತ್ತು. ಆದ್ರೆ, ಅವ್ರು ಮಾಡುತ್ತಿರುವವುದನ್ನ ನೋಡ್ತಿದ್ರೆ ಕೇವಲ ನಾಮಕವಸ್ತೆಗೆ ವಿಚಾರಣೆ ನಡೆಸುತ್ತಿದ್ದಾರೆ ಅನ್ನಿಸುತ್ತಿದೆ. ಅಧಿಕಾರಿಗಳಿಗೆ ತುಂಬಾ ಮಾಹಿತಿ ನೀಡಿದ್ದೇ. ಇನ್ನೂ ಖ್ಯಾತ ನಿರ್ದೇಶಕನ ಮಗ ಮತ್ತು ಸರ್ಕಾರಿ ಅಧಿಕಾರಿಯ ಮಗ ಕೂಡ ಈ ದಂಧೆಯಲ್ಲಿದ್ದಾರೆ. ಆದ್ರೆ, ಅವ್ರನ್ನ ಇದುವರೆಗೂ ಬಂಧಿಸಿಲ್ಲ ಎಂದು ಅಸಮಾಧಾನ ವ್ಯಕ್ತ ಪಡಿಸಿದ್ದಾರೆ ಇಂದ್ರಜೀತ್‌.

ಇನ್ನು ಲವ್‌ ಜಿಹಾದ್‌ ಅನ್ನೋ ಹೆಸ್ರಿನಿಂದ ಈ ಪ್ರಕರಣವನ್ನ ತಿರುಚಿವ ಪ್ರಯತ್ನ ನಡೆಯುತ್ತಿದೆ. ಇದಕ್ಕೂ ಅದಕ್ಕೂ ಯಾವುದೇ ಸಂಬಂಧವಿಲ್ಲ ಮತ್ತು ರಾಗಿಣಿಯ ಕೇಸು ಮುಚ್ಚಿಹಾಕಲು ಪ್ರಯಶ್ನಿಸುತ್ತಿರುವ ಆ ಪ್ರಭಾವಿ ರಾಜಕಾರಣಿಯನ್ನೂ ಕೂಡ ಬಂಧಿಸಬೇಕು ಎಂದು ನಿರ್ದೇಶಕ ಇಂದ್ರಜೀತ್‌ ಲಂಕೇಶ್‌ ಹೇಳಿದ್ದಾರೆ.