Author: KNN IT Team

ಮಂಗಳೂರು : ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ರಸ್ತೆಗಳ ಬದಿಗಳಲ್ಲಿ ಮತ್ತು ವಿದ್ಯುತ್‌ ಕಂಬಗಳಲ್ಲಿ ಪರವಾನಗಿ ಪಡೆಯದೇ ಕೇಬಲ್ ವಯರ್ ಗಳನ್ನು ಅಳವಡಿಸಿದ್ದರೆ ಎಲ್ಲವನ್ನೂ ತೆರವು ಮಾಡಬೇಕೆಂದು ಪಾಲಿಕೆ ಸೂಚಿಸಿದೆ. ಮಹಾನಗರ ಪಾಲಿಕೆಯ ಅನುಮತಿ ಪಡೆದು ಕೇಬಲ್ ವಯರ್ ಅಳವಡಿಸಿಕೊಂಡಿದ್ದರೆ ಈ ಕೂಡಲೇ ಉಪ ಆಯುಕ್ತರು ಅಥವಾ ಕಂದಾಯ ಅಧಿಕಾರಿಗೆ ಪರವಾನಗಿಯನ್ನು ಪರಿಶೀಲನೆಗೆ ನೀಡಬೇಕು. ಪಾಲಿಕೆಯ ವ್ಯಾಪ್ತಿಯಲ್ಲಿನ ರಸ್ತೆಗಳ ಬದಿಯಲ್ಲಿ ಮಣ್ಣಿನ ಒಳಗೆ ಕೇಬಲ್ ವಯರ್ ಗಳನ್ನು ಅನುಮತಿ ಪಡೆಯದೆ ಅಳವಡಿಸಿಕೊಂಡಿದ್ದರೆ ಅವನ್ನೆಲ್ಲ ನಿರ್ದಾಕ್ಷಿಣ್ಯವಾಗಿ ಪಾಲಿಕೆಯೇ ತೆಗೆದು ಹಾಕಿ ದಂಡ ವಿಧಿಸಲಾಗುವುದು ಎಂದು ಪಾಲಿಕೆಯ ಪ್ರಕಟಣೆಯಲ್ಲಿ ತಿಳಿಸಲಾಗಿದೆಯಾಗಿದೆ.

Read More

ಮನಿ ಪ್ಲಾಂಟ್‌ ಹೆಸರೇ ಹೇಳುವಂತೆ ನಮ್ಮ ಮನೆಯಲ್ಲಿ ಲಕ್ಷ್ಮಿ ನೆಲೆಸಲು ಈ ಗಿಡಗಳು ಪರೋಕ್ಷವಾಗಿ ಕಾರಣವಾಗುತ್ತವೆ ಎಂಬ ಬಲವಾದ ನಂಬಿಕೆಯಿದೆ. ಮನಿ ಪ್ಲಾಂಟ್ ಗಳಿರುವ ಮನೆಯಲ್ಲಿ ಹಣದ ಕೊರತೆ ಎದುರಾಗದು. ಅಷ್ಟೇ ಅಲ್ಲದೆ, ಸಕಾರಾತ್ಮಕತೆ ಮತ್ತು ಸಂತೋಷ ಮತ್ತು ಸಮೃದ್ಧಿ ವೃದ್ದಿಯಾಗುತ್ತದೆ ಎಂಬ ನಂಬಿಕೆಯಿದೆ. ಮನಿ ಪ್ಲಾಂಟ್ ಕೇವಲ ನೋಡುವುದಕ್ಕೆ ಮಾತ್ರವಲ್ಲದೇ, ವಾಸ್ತುವಿನ ದೃಷ್ಟಿಯಿಂದಲೂ ವಿಶೇಷ ಪ್ರಾಮುಖ್ಯತೆಯನ್ನು ಹೊಂದಿದೆ. ಹೀಗಾಗಿ ಬಹುತೇಕ ಮನೆಗಳಲ್ಲಿ ಮನಿ ಪ್ಲಾಂಟ್ ಬೆಳೆಸಲಾಗುತ್ತದೆ. ವಾಸ್ತು ಶಾಸ್ತ್ರದಲ್ಲಿ ಮನಿಪ್ಲಾಂಟ್‌ಗೆ ವಿಶೇಷವಾದ ಸ್ಥಾನಮಾನವಿದೆ. ಇದನ್ನು ಸರಿಯಾದ ದಿಕ್ಕಿನಲ್ಲಿ ಇರಿಸಿದರೆ ಮನೆಗೆ ಹಣದ ಹೊಳೆ ಹರಿದು ಬರಲು ಪೂರಕವಾಗುತ್ತದೆ. ಮನಿ ಪ್ಲಾಂಟ್ ಬಳ್ಳಿಗಳಿಗೆ ಸಮರ್ಪಕ ನೀರು ಮತ್ತು ಮಣ್ಣು ಹಾಕಿ ನೆಡಬೇಕಾಗುತ್ತದೆ. ಮನಿ ಪ್ಲಾಂಟ್ 15 ರಿಂದ 24 ಡಿಗ್ರಿ ಸೆಲ್ಸಿಯಸ್ನಲ್ಲಿ ಉತ್ತಮವಾಗಿ ಬೆಳೆಯುತ್ತದೆ. ಹೀಗಾಗಿ, ಬೇಸಿಗೆ ಕಾಲದಲ್ಲಿ ಅದರ ಎಲೆಗಳ ಮೇಲೆ ನೀರನ್ನು ಸಿಂಪಡಿಸಬೇಕಾಗುತ್ತದೆ. ಹೀಗೆ ಮಾಡಿದರೆ ಸಾಕಷ್ಟು ಪ್ರಮಾಣದ ತೇವಾಂಶವನ್ನು ನಿರ್ವಹಿಸಲು ಸಾಧ್ಯವಾಗುತ್ತದೆ. ಪ್ರತಿಯೊಂದು ಗಿಡಕ್ಕೂ ವಿಭಿನ್ನ ಪ್ರಮಾಣದ…

Read More

ದಕ್ಷಿಣ ಕನ್ನಡ ಜಿಲ್ಲೆ ಸೇರಿದಂತೆ ಕರಾವಳಿಯ ವಿವಿಧೆಡೆ ನಿನ್ನೆ ರಾತ್ರಿ ಮತ್ತು ಇಂದು ಬೆಳಗ್ಗೆ ಮಳೆ ಸುರಿಯುತ್ತಿದ್ದು, ಸೆಕೆಯಿಂದ ಬಳಲುತ್ತಿದ್ದ ಜನರಿಗೆ ಈ ದಿಢೀರ್‌ ಮಳೆ ತಂಪೆರೆದಿದೆ. ಅರಬ್ಬಿ ಸಮುದ್ರದಲ್ಲಿ ಉಂಟಾದ ವಾಯುಭಾರ ಕುಸಿತ ಹಿನ್ನೆಲೆಯಲ್ಲಿ ಈ ಮಳೆ ಬಂದಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಬಂಟ್ವಾಳ, ಪುತ್ತೂರು, ಸುಳ್ಯ, ಕಡಬ, ಬೆಳ್ತಂಗಡಿ ತಾಲೂಕುಗಳ ಹಲವೆಡೆ ನಿನ್ನೆ ರಾತ್ರಿಯಿಂದಲೇ ಗುಡುಗು ಮಿಂಚು ಸಹಿತ ಎಡೆಬಿಡದೆ ಸುರಿದಿದೆ. ಬಂಟ್ವಾಳ ತಾಲೂಕಿನ ಸಜಿಪ, ಇರಾ, ಮಂಚಿ, ಮುಡಿಪು ಭಾಗದಲ್ಲಿ ಭಾರೀ ಮಳೆಯಾಗಿದೆ. ಉಳ್ಳಾಲ ತಾಲೂಕಿನ ಕೊಣಾಜೆ, ಬೀರಿ, ತಲಪಾಡಿ, ಕೋಟೆಕಾರ್‌, ತೊಕ್ಕೊಟ್ಟು ಪ್ರದೇಶಗಳಲ್ಲಿ ಇಂದು ಉತ್ತಮ ಮಳೆ ಬಂದಿದೆ. ಮಂಗಳೂರು ನಗರದಲ್ಲಿಯೂ ಸಾಧಾರಣ ಮಳೆಯಾಗಿದೆ. ಜಿಲ್ಲೆಯಲ್ಲಿ ನಿನ್ನೆಯಿಂದಲೇ ಮೋಡ ಕವಿದ ವಾತಾವರಣವಿದ್ದು, ಇವತ್ತು ಕೂಡಾ ಅದೇ ಪರಿಸ್ಥಿತಿ ಇದೆ. ಮೋಡ ಕವಿದ ವಾತಾವರಣದಿಂದಾಗಿ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂದು ಬೆಳಗ್ಗೆ ವಿಮಾನಗಳು ಇಳಿಯಲು ಕಷ್ಟ ಸಾಧ್ಯವಾಗಿತ್ತು. ಹವಾಮಾನ ಇಲಾಖೆಯು ಮುಂದಿನ 3-4…

Read More

ಕೆಜಿಎಫ್ ನಂತರ ರಾಕಿಂಗ್ ಸ್ಟಾರ್ ಯಶ್ ಸಿನಿಮಾ ಆಯ್ಕೆಯಲ್ಲಿ ಬಹಳ ಹುಷಾರಾಗಿದ್ದಾರೆ. ಹೆಚ್ಚಿನ ಅವಸರ ಮಾಡದೆ ಒಳ್ಳೆಯ ಸಿನಿಮಾಗಳನ್ನು ಕೈಗೆತ್ತಿಕೊಳ್ಳುತ್ತಿದ್ದಾರೆ. ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಕೆಜಿಎಫ್ ಆದ ಮೇಲೆ ಒಂದೂವರೆ ವರ್ಷಗಳ ನಂತರ, ಅವರು ತಮ್ಮ ಮುಂದಿನ ಚಿತ್ರ ‘ಟಾಕ್ಸಿಕ್’ ಎಂದು ಘೋಷಿಸಿದರು. ಗೀತು ಮೋಹನ್ ದಾಸ್ ಈ ಚಿತ್ರವನ್ನು ನಿರ್ದೇಶಿಸಲಿದ್ದು, ಶೀಘ್ರದಲ್ಲೇ ಚಿತ್ರೀಕರಣ ಪ್ರಾರಂಭವಾಗಲಿದೆ. ಹಿಂದಿ ಚಲನಚಿತ್ರ ವಲಯಗಳಿಂದ ಕೇಳಿಬರುತ್ತಿರುವ ವದಂತಿಗಳ ಪ್ರಕಾರ, ಈ ಸಿನಿಮಾದಲ್ಲಿ ನಟಿಸುವಂತೆ ಬಾಲಿವುಡ್ ಬ್ಯೂಟಿ ಕರೀನಾ ಕಪೂರ್ ಖಾನ್ ಅವರನ್ನು ಚಿತ್ರತಂಡ ಸಂಪರ್ಕಿಸಿದ್ದು, ನಟಿ ಸಕಾರಾತ್ಮಕ ಒಪ್ಪಿಗೆಯೊಂದಿಗೆ ಪ್ರತಿಕ್ರಿಯಿಸಿದ್ದಾರೆಂದು ಮಾಹಿತಿ ದೊರಕಿದೆ. ಕರೀನಾ ಯಶ್​​​​ಗೆ ಜೋಡಿಯಾಗಿದ್ದಾರೆಯೇ ಅಥವಾ ಟಾಕ್ಸಿಕ್‌ನಲ್ಲಿ ಪ್ರಮುಖ ಪಾತ್ರಕ್ಕಾಗಿ ಅವರನ್ನು ಸಂಪರ್ಕಿಸಲಾಗಿದೆಯೇ ಎಂಬುದು ಸದ್ಯಕ್ಕೆ ಸ್ಪಷ್ಟವಾಗಿ ತಿಳಿದುಬಂದಿಲ್ಲವಾಗಿದೆ. ಶೀಘ್ರದಲ್ಲೇ ಈ ಬಗ್ಗೆ ನಿರ್ಮಾಪಕರು ಘೋಷಣೆ ಮಾಡಲಿದ್ದಾರೆ. ಸದ್ಯ ಪ್ರಕಟಣೆಯ ಜೊತೆಗೆ, ಚಿತ್ರದ ಥೀಮ್ ಅನ್ನು ಬಹಿರಂಗಪಡಿಸುವ ಕಿರು ವಿಡಿಯೋಬೈಟ್ ಅನ್ನು ಅನಾವರಣಗೊಳಿಸಲಾಗಿದೆ. ‘ಟಾಕ್ಸಿಕ್’ ಗೋವಾ ಹಿನ್ನಲೆಯುಳ್ಳ ಚಿತ್ರವಾಗಿದ್ದು, ಕಥೆಯು ಡ್ರಗ್ಸ್ ಸುತ್ತ…

Read More