Author: KNN IT Team

ಎಲ್.ಪಿ. ಜಿ ಸಿಲಿಂಡರ್‌ ಸ್ಫೋಟಗೊಳ್ಳುವ ಅನೇಕ ಪ್ರಕರಣಗಳು ವರದಿಯಾಗುತ್ತಲೇ ಇರುತ್ತದೆ. ಇಂಥಹುದಕ್ಕೆ ಇನ್ಶೂರೆನ್ಸ್‌ ಕವರೇಜ್‌ ಬೇಕಾಗುತ್ತದೆ. ಪೆಟ್ರೋಲಿಯಂ ಕಂಪನಿಗಳೇ ತಮ್ಮ ಎಲ್ಲಾ ಎಲ್‌ಪಿಜಿ ಗ್ರಾಹಕರಿಗೆ ಉಚಿತವಾಗಿ ಅಪಘಾತ ವಿಮಾ ಕವರೇಜ್‌ ಸೌಲಭ್ಯ ನೀಡುತ್ತದೆ. 50 ಲಕ್ಷ ರೂ. ಮೊತ್ತದ ಆಕ್ಸಿಡೆಂಟ್‌ ಇನ್ಶೂರೆನ್ಸ್‌ ಕವರೇಜ್‌ ಇದರಲ್ಲಿ ದೊರೆಯುತ್ತದೆ. ಇದಕ್ಕೆ ಎಲ್‌ಪಿಜಿ ಗ್ರಾಹಕರು ಪ್ರತ್ಯೇಕ ಪ್ರೀಮಿಯಂ ಕಟ್ಟಬೇಕಾಗಿಲ್ಲ. ಪೆಟ್ರೋಲಿಯಂ ಕಂಪನಿ ಈ ಕವರೇಜ್‌ ಉಚಿತವಾಗಿ ನೀಡುತ್ತದೆ. ಗ್ಯಾಸ್‌ ಸೋರಿಕೆ, ಸ್ಫೋಟ ಇತ್ಯಾದಿ ಅಪಘಾತ ಘಟನೆಗಳಿಗೆ ಈ ವಿಮೆ ಲಭ್ಯವಿದೆ. ಈ ಸೌಲಭ್ಯಕ್ಕಾಗಿ ಪೆಟ್ರೋಲಿಯಂ ಕಂಪನಿಗಳು ವಿವಿಧ ವಿಮಾ ಸಂಸ್ಥೆಗಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುತ್ತದೆ. ಎಲ್‌ಪಿಜಿ ಗ್ರಾಹಕ ಹಾಗೂ ಕುಟುಂಬ ವರ್ಷಕ್ಕೆ ಐವತ್ತು ಲಕ್ಷ ರೂ.ವರೆಗೆ ಕಾಂಪನ್ಶೇಶನ್‌ ಅವಕಾಶ ಇದೆ. ಒಬ್ಬ ಸದಸ್ಯರಿಗೆ ಹತ್ತು ಲಕ್ಷ ರೂ. ಪರಿಹಾರ ದೊರಕುತ್ತದೆ. ಗ್ಯಾಸ್‌ ಸ್ಫೋಟ ದುರಂತ ಸಂಭವಿಸಿದರೆ ನೀವು ಸಮೀಪದ ಪೊಲೀಸ್‌ ಸ್ಟೇಷನ್‌ಗೆ ಹಾಗೂ ಎಲ್‌ಪಿಜಿ ಡಿಸ್ಟ್ರಿಬ್ಯೂಟರ್‌ಗೆ ಮಾಹಿತಿ ನೀಡಬೇಕು. ಇದಕ್ಕಾಗಿ ನೀವು ಇನ್ಶೂರೆನ್ಸ್‌ ಕಂಪನಿಯನ್ನು ಸಂಪರ್ಕಿಸುವ ಅಗತ್ಯ…

Read More

ಮಹಾರಾಷ್ಟ್ರದ ಏಕನಾಥ್ ಶಿಂಧೆ ಅವರ ಸರ್ಕಾರವು ಹಳೆಯ ಪಿಂಚಣಿ ಯೋಜನೆಯನ್ನು ಅಂದರೆ ಒಪಿಎಸ್ ಅನ್ನು ಅನುಮೋದಿಸಿದೆ. 2005 ರ ನಂತರ ಉದ್ಯೋಗದಲ್ಲಿರುವ ರಾಜ್ಯ ಉದ್ಯೋಗಿಗಳು ಈ ಆಯ್ಕೆಯನ್ನು ಆರಿಸಿಕೊಳ್ಳಬಹುದು. ಕೆಲವು ದಿನಗಳ ಹಿಂದೆ ಹಳೆ ಪಿಂಚಣಿ ಯೋಜನೆಯನ್ನು ಮರುಸ್ಥಾಪಿಸುವಂತೆ ಒತ್ತಾಯಿಸಿ ಸರ್ಕಾರಿ ಮತ್ತು ಅರೆ ಸರ್ಕಾರಿ ನೌಕರರು ಮುಷ್ಕರ ನಡೆಸಿದ್ದರು. ಇದೀಗ ಸರ್ಕಾರ ಈ ನಿರ್ಧಾರ ಕೈಗೊಂಡಿದೆ. ವಾಸ್ತವವಾಗಿ ಈ ವರ್ಷ ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ನಡೆಯಬೇಕಿದೆ. ಲೋಕಸಭೆ ಚುನಾವಣೆಗೆ ಇನ್ನು ಕೆಲವೇ ದಿನಗಳು ಬಾಕಿ ಇವೆ. ಇಂತಹ ಪರಿಸ್ಥಿತಿಯಲ್ಲಿ ರಾಜ್ಯ ಸರ್ಕಾರ ಯಾವುದೇ ರೀತಿಯ ಅಸಮಾಧಾನದಿಂದ ದೂರ ಉಳಿಯಲು ಬಯಸಿದೆ. ಸುದ್ದಿ ಸಂಸ್ಥೆ ಪಿಟಿಐ ಜೊತೆ ಮಾತನಾಡಿದ ಮಹಾರಾಷ್ಟ್ರ ರಾಜ್ಯ ನೌಕರರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ವಿಶ್ವಾಸ್ ಕಾಟ್ಕರ್, ಸರ್ಕಾರದ ಈ ನಿರ್ಧಾರವು 2005 ರ ನಂತರ ಉದ್ಯೋಗ ಪಡೆದ ರಾಜ್ಯದ ಸುಮಾರು 26,000 ಉದ್ಯೋಗಿಗಳಿಗೆ ಪ್ರಯೋಜನವಾಗಲಿದೆ ಎಂದು ಹೇಳಿದ್ದಾರೆ. ಸರಿಸುಮಾರು 9.5 ಲಕ್ಷ ರಾಜ್ಯ ನೌಕರರು ನವೆಂಬರ್ 2005…

Read More

ತುಂಬಾಜನರು ಆಗಾಗ್ಗೆ ಗ್ಯಾಸ್ ತಲೆನೋವಿನಿಂದ ಬಳಲುತ್ತಿದ್ದಾರೆ. ಈ ತಲೆನೋವನ್ನು ಹೋಗಲಾಡಿಸಲು ನಾವು ಆಸ್ಪತ್ರೆಗೆ ಹೋಗುವ ಅಗತ್ಯವಿಲ್ಲ. ನಮ್ಮಲ್ಲಿ ಹಲವರು ಸಾಮಾನ್ಯವಾಗಿ ಗ್ಯಾಸ್ ತಲೆನೋವಿನಿಂದ ಬಳಲುತ್ತಿದ್ದಾರೆ. ಈ ತಲೆನೋವನ್ನು ಹೋಗಲಾಡಿಸಲು ನಾವು ಆಸ್ಪತ್ರೆಗೆ ಹೋಗುವ ಅಗತ್ಯವಿಲ್ಲ. ಈ ವಾತ ತಲೆನೋವನ್ನು ನಮ್ಮ ಮನೆಯಲ್ಲಿ ಇರುವ ವಸ್ತುಗಳಿಂದ ಸರಳವಾಗಿ ಗುಣಪಡಿಸಬಹುದು. ನಮ್ಮ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳಿಂದ ತಲೆನೋವು ಉಂಟಾಗುತ್ತದೆ ಎಂದು ವಿವಿಧ ಅಧ್ಯಯನಗಳು ಸೂಚಿಸುತ್ತವೆ. ನಮ್ಮ ಜಠರಗರುಳಿನ ಆರೋಗ್ಯವು ನಮ್ಮ ಪ್ರತಿರಕ್ಷಣಾ ವ್ಯವಸ್ಥೆಗೆ ನಿಕಟ ಸಂಬಂಧ ಹೊಂದಿದೆ. ಉರಿಯೂತದ ಕರುಳಿನಿಂದ ಕೆಲವು ರಾಸಾಯನಿಕಗಳು ರಕ್ತಪ್ರವಾಹಕ್ಕೆ ಸಾಗುತ್ತವೆ ಮತ್ತು ಮೆದುಳಿನ ಮೇಲೆ ಪರಿಣಾಮ ಬೀರುತ್ತವೆ. ಇದರಿಂದ ತಲೆನೋವು ಉಂಟಾಗುತ್ತದೆ. ಕೆಲವರಿಗೆ ವಾಕರಿಕೆ ಮತ್ತು ವಾಂತಿ ಕೂಡ ಉಂಟಾಗಬಹುದು. ಸರಿಯಾದ ಆಹಾರದ ಕೊರತೆಯು ಅಜೀರ್ಣ ಮತ್ತು ವಾಯು ಉಂಟಾಗುತ್ತದೆ. ಮಲಬದ್ಧತೆ ಗ್ಯಾಸ್ ತಲೆನೋವಿಗೆ ಕಾರಣವಾಗಬಹುದು. ಹೊಟ್ಟೆಯ ಸಮಸ್ಯೆಗಳು ನಮಗೆ ಅನಿಲ ಮತ್ತು ಅನಾನುಕೂಲತೆಯನ್ನು ಉಂಟುಮಾಡಬಹುದು. ಗ್ಯಾಸ್ ತಲೆನೋವನ್ನು ನೈಸರ್ಗಿಕವಾಗಿ ಮನೆಮದ್ದುಗಳಿಂದ ಗುಣಪಡಿಸಬಹುದು. ನಿಂಬೆ ರಸವು ಗ್ಯಾಸ್ ತಲೆನೋವನ್ನು…

Read More

ಕಲ್ಯಾಣ ಕರ್ನಾಟಕ ಭಾಗದಲ್ಲಿ ರಾಜ್ಯ ಸರಕಾರದ 46 ಇಲಾಖೆಗಳಲ್ಲಿ ಖಾಲಿ ಇರುವ 14,771 ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಆರಂಭ ಮಾಡಲು ಸೂಚನೆ ನೀಡಲಾಗಿದೆ ಎಂದು ಸಚಿವ ಪ್ರಿಯಾಂಕ್‌ ಹೆಳಿದ್ದಾರೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ 37 (J) ಅಡಿ ರಾಜ್ಯದ ಸರಕಾರದ 46 ಇಲಾಖೆಗಳಲ್ಲಿ ಖಾಲಿ ಇರುವ 14,771 ಹುದ್ದೆಗಳ ನೇಮಕಾತಿ ಹಾಗೂ ಪ್ರಾದೇಶಿಕ ಮತ್ತು ರಾಜ್ಯ ಮಟ್ಟದ ಹುದ್ದೆಗಳಲ್ಲಿ ಶೇ.8 ರಷ್ಟು ಮೀಸಲಾತಿಯ ಅನುಸಾರ 8,278 ಹುದ್ದೆಗಳಿಗೆ ಮುಂಬಡ್ತಿ ನೀಡಿ ಸರಕಾರದ ವಿವಿಧ ಇಲಾಖೆಗಳಲ್ಲಿ ನೇಮಕಾತಿ ಸೂಚನೆ ನೀಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

Read More

ನೀವು ಇನ್ನೇನಾದರೂ ಬ್ಯಾಂಕ್‌ ಅಥವಾ ಎನ್‌ಬಿಎಫ್‌ಸಿಯಲ್ಲಿ ಕೆಲಸಕ್ಕೆ ಪ್ರಯತ್ನ ಪಡುತ್ತಿದ್ದರೆ, ಇನ್ನು ಮುಂದೆ ಈ ಉದ್ಯೋಗಕ್ಕಾಗಿ, CIBIL ಸ್ಕೋರ್‌ ಅಥವಾ ಕ್ರೆಡಿಟ್‌ ಸ್ಕೋರ್‌ ಕೂಡಾ ಉತ್ತಮವಾಗಿರಬೇಕು. ಬ್ಯಾಂಕಿಂಗ್‌ ವಲಯದ ನೇಮಕಾತಿ ಏಜೆನ್ಸಿಯಾದ IBPS, ಕೆಲಸಕ್ಕೆ ಬೇಕಾದ ಅರ್ಹತೆಗಳಲ್ಲಿ ಉತ್ತಮ ಕ್ರೆಡಿಟ್‌ ಸ್ಕೋರ್‌ ಅನ್ನು ಕೂಡಾ ಸೇರಿಸಿದೆ. CIBIL ಅಥವಾ ಕ್ರೆಡಿಟ್ ಸ್ಕೋರ್ ಅನ್ನು ದೇಶದಲ್ಲಿ ಕ್ರೆಡಿಟ್ ಇನ್ಫರ್ಮೇಷನ್ ಬ್ಯೂರೋ (ಇಂಡಿಯಾ) ಲಿಮಿಟೆಡ್ ನೀಡುತ್ತದೆ. ಇದು ಮೂರು ಅಂಕಿಗಳ ಸ್ಕೋರ್ ಆಗಿದೆ. ಇದು 300 ರಿಂದ 900 ರ ನಡುವೆ ಇರುತ್ತದೆ. ಇದು ಸಾಲವನ್ನು ಮರುಪಾವತಿ ಮಾಡುವ ವ್ಯಕ್ತಿಯ ಸಾಮರ್ಥ್ಯವನ್ನು ಹೇಳುತ್ತದೆ. IBPS RRB ಮತ್ತು IBPS ಕ್ಲರ್ಕ್ ಮತ್ತು PO ನೇಮಕಾತಿ ಅಧಿಸೂಚನೆಯಲ್ಲಿ ಹೊಸ ನಿಬಂಧನೆಯನ್ನು ಸೇರಿಸಿದೆ. ಇದರಲ್ಲಿ ಬ್ಯಾಂಕ್‌ನಲ್ಲಿ ಉದ್ಯೋಗಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಉತ್ತಮ ಕ್ರೆಡಿಟ್ ಸ್ಕೋರ್ ಹೊಂದಿರಬೇಕು ಎಂದು ಹೇಳಿದೆ. ಅಭ್ಯರ್ಥಿಗಳ ಕ್ರೆಡಿಟ್ ಸ್ಕೋರ್ 650 ಕ್ಕಿಂತ ಹೆಚ್ಚಿರಬೇಕು. IBPS ಮತ್ತು ಇತರ ಬ್ಯಾಂಕ್ ನೇಮಕಾತಿ ಪರೀಕ್ಷೆಗಳಿಗೆ…

Read More

ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (ಬಿಇಎಲ್) ಭಾರತ ಸರ್ಕಾರದ ವ್ಯಾಪ್ತಿಗೆ ಒಳಪಟ್ಟ, ಸಾರ್ವಜನಿಕ ರಂಗದ ಸಂಸ್ಥೆಯಾಗಿದ್ದು, ಭಾರತದ ಸೇನೆಗೆ ಸಂಬಂಧಪಟ್ಟ ಎಲೆಕ್ಟ್ರಾನಿಕ್ಸ್ ಉಪಕರಣಗಳ ತಯಾರಿಕೆ ಮತ್ತು ಸರಬರಾಜಿಗಾಗಿ 1954ರಲ್ಲಿ ಸ್ಥಾಪಿಸಲಾಗಿದೆ. ಪ್ರಸ್ತುತ ಈ ಸಂಸ್ಥೆಯು ಅಪ್ರೆಂಟಿಸ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ಜನವರಿ 10ರಂದು ನೇರ ಸಂದರ್ಶನಕ್ಕೆ ಹಾಜರಾಗಬಹುದು. ಗ್ರ್ಯಾಜುಯೆಟ್ ಅಪ್ರೆಂಟಿಸ್ 63, ಟೆಕ್ನಿಷಿಯನ್(ಡಿಪ್ಲೊಮಾ)ಅಪ್ರೆಂಟಿಸ್ 10, ಬಿ.ಕಾಂ ಅಪ್ರೆಂಟಿಸ್ 08, ಹೀಗೆ ಒಟ್ಟು 81 ಹುದ್ದೆಗಳಿವೆ. ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಗ್ರ್ಯಾಜುಯೆಟ್ ಅಪ್ರೆಂಟಿಸ್ ಹುದ್ದೆಗೆ ಗ್ರ್ಯಾಜುಯೆಟ್ ಇನ್ ಇಂಜಿನಿಯರಿಂಗ್, ಟೆಕ್ನಿಷಿಯನ್ ಅಪ್ರೆಂಟಿಸ್ ಹುದ್ದೆಗೆ ಡಿಪ್ಲೊಮಾ, ಬಿ.ಕಾಮ್ ಅಪ್ರೆಂಟಿಸ್ ಹುದ್ದೆಗೆ ಬಿ.ಕಾಮ್ ಪೂರ್ಣಗೊಳಿರಬೇಕು. ಅಭ್ಯರ್ಥಿಯ ಗರಿಷ್ಠ ವಯಸ್ಸು 25 ವರ್ಷದೊಳಗಿರಬೇಕು. ಒಬಿಸಿ ಅಭ್ಯರ್ಥಿಗಳಿಗೆ 3ವರ್ಷ, ಎಸ್ಸಿ/ಎಸ್ಟಿ ಅಭ್ಯರ್ಥಿಗಳಿಗೆ 5ವರ್ಷ, ಪಿಡಬ್ಲ್ಯುಡಿ ಅಭ್ಯರ್ಥಿಗಳಿಗೆ 10ವರ್ಷ ವಯೋಸಡಿಲಿಕೆ ಅನ್ವಯವಾಗಲಿದೆ. ಗ್ರ್ಯಾಜುಯೆಟ್ ಅಪ್ರೆಂಟಿಸ್ ಹುದ್ದೆಗೆ 17500ರೂ., ಟೆಕ್ನಿಷಿಯನ್ ಅಪ್ರೆಂಟಿಸ್ ಹುದ್ದೆಗೆ 12500ರೂ., ಬಿ.ಕಾಮ್ ಅಪ್ರೆಂಟಿಸ್ ಹುದ್ದೆಗೆ 10500ರೂ.…

Read More

ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಮುಂಬೈಯಲ್ಲಿ 2023-24ರ ಪ್ಲೇಸ್‌ಮೆಂಟ್ ಸೀಸನ್‌ನ ಮೊದಲ ಹಂತವು 388 ದೇಶೀಯ ಮತ್ತು ಅಂತರಾಷ್ಟ್ರೀಯ ಸಂಸ್ಥೆಗಳ ಭಾಗವಹಿಸುವಿಕೆಯೊಂದಿಗೆ ಮುಕ್ತಾಯವಾಯಿತು. ವಿಶೇಷವೆಂದರೆ 85 ವಿದ್ಯಾರ್ಥಿಗಳು 1 ಕೋಟಿ ರೂ.ಗಿಂತ ಹೆಚ್ಚಿನ ವಾರ್ಷಿಕ ವೇತನದೊಂದಿಗೆ ಉದ್ಯೋಗ ಪಡೆದುಕೊಂಡಿದ್ದಾರೆ. ಭಾರತದಲ್ಲಿ ಐಐಟಿ ಪಡೆದ ಪದವೀಧರರು ಜಗತ್ತಿನಾದ್ಯಂತ ದೊಡ್ಡ ಕಂಪನಿಗಳಲ್ಲಿ ಉದ್ಯೋಗಿಗಳಾಗಿದ್ದಾರೆ. ಹಲವರು ಕಂಪೆನಿಗಳನ್ನೂ ಮುನ್ನಡೆಸುತ್ತಿದ್ದಾರೆ. ನಡೆಸುತ್ತಿದ್ದಾರೆ. ಇನ್ನು ಐಐಟಿ ಬಾಂಬೆ ವಿಶೇಷವಾಗಿ ವ್ಯಾಪಾರ ಗತ್ತಿನಲ್ಲಿ ಹೆಸರು ಮಾಡಿದ ಹಳೆಯ ವಿದ್ಯಾರ್ಥಿಗಳ ದೊಡ್ಡ ಪಟ್ಟಿಯನ್ನು ಹೊಂದಿದೆ. ಐಐಟಿ ಬಾಂಬೆ ಪದವೀಧರರು ತಮ್ಮ ಪದವಿಯ ನಂತರ ಹೆಚ್ಚಿನ ಸಂಬಳದ ಉದ್ಯೋಗಗಳನ್ನು ಪಡೆಯಲು ಹೆಸರುವಾಸಿಯಾಗಿದ್ದಾರೆ. ಇದರ ಖ್ಯಾತಿ ಇಷ್ಟಕ್ಕೇ ನಿಂತಿಲ್ಲ. ಪ್ರಸ್ತುತ ಬ್ಯಾಚ್‌ನಲ್ಲಿ 85 ವಿದ್ಯಾರ್ಥಿಗಳು 1ಕೋಟಿ ರೂ.ಗೂ ಅಧಿಕ ಸಂಬಳದ ಪ್ಯಾಕೇಜ್‌ನೊಂದಿಗೆ ಉದ್ಯೋಗವನ್ನು ಪಡೆದಿದ್ದಾರೆ. ಮನಿ ಕಂಟ್ರೋಲ್‌ನ ವರದಿಯ ಪ್ರಕಾರ, ರಿಲಯನ್ಸ್ ಇಂಡಸ್ಟ್ರೀಸ್, ಟಾಟಾ ಗ್ರೂಪ್, ಆಪಲ್, ಮೈಕ್ರೋಸಾಫ್ಟ್, ಬಜಾಜ್, ಬಾರ್ಕ್ಲೇಸ್, ಮರ್ಸಿಡಿಸ್ ಬೆಂಜ್ ಮತ್ತು ಇತರ ಕಂಪನಿಗಳು ಈ ಋತುವಿನಲ್ಲಿ ಐಐಟಿ…

Read More

ಲೈಬೀರಿಯಾ ಧ್ವಜ ಇರುವ ಸರಕು ಹಡಗನ್ನು ಸೊಮಾಲಿಯಾ ಕರಾವಳಿಯ ಬಳಿ ಅಪಹರಿಸಲಾಗಿದ್ದು, ಇದರಲ್ಲಿ 15 ಭಾರತೀಯ ಸಿಬ್ಬಂದಿ ಇದ್ದಾರೆ. ಭಾರತೀಯ ನೌಕಾಪಡೆಯು ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡಲು ಮತ್ತು ಸಿಬ್ಬಂದಿಯ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಯುದ್ಧನೌಕೆ ಐಎನ್​ಎಸ್​ ಚೆನ್ನೈ ಅನ್ನು ನಿಯೋಜಿಸಿದೆ. ಭಾರತೀಯ ನೌಕಾಪಡೆಯು ಅಪಹರಣಕ್ಕೊಳಗಾಗಿದ್ದ ಹಡಗಿನ ‘MV LILA NORFOLK’ (ಎಂವಿ ಲಿಲಾ ನಾರ್ಫೋಕ್​) ಅನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ. ಭಾರತೀಯ ನೌಕಾಪಡೆಯ ವಿಮಾನಗಳು ಹಡಗಿನ ಮೇಲೆ ನಿಗಾ ಇರಿಸಿದ್ದು, ಹಡಗಿನಲ್ಲಿನ ಸಿಬ್ಬಂದಿಯೊಂದಿಗೆ ಸಂಪರ್ಕ ಸ್ಥಾಪಿಸಲಾಗಿದೆ ಎಂದು ಮಿಲಿಟರಿ ಅಧಿಕಾರಿಗಳು ತಿಳಿಸಿದ್ದಾರೆ. ಹಡಗು ಅಪಹರಣಕ್ಕೆ ಒಳಗಾದ ತಕ್ಷಣವೇ ತ್ವರಿತವಾಗಿ ಪ್ರತಿಕ್ರಿಯಿಸಿದ ಭಾರತೀಯ ನೌಕಾಪಡೆಯು ಸಹಾಯ ಮಾಡಲು ಕಡಲ ಭದ್ರತಾ ಕಾರ್ಯಾಚರಣೆಗಳಿಗಾಗಿ ನಿಯೋಜಿಸಲಾದ ಐಎನ್​ಎಸ್​ ಚೆನ್ನೈ ಯುದ್ಧನೌಕೆಯನ್ನು ಕಳುಹಿಸಿಕೊಟ್ಟಿದೆ. ಇಂದು ಬೆಳಗ್ಗೆ ವಿಮಾನವು ಹಡಗಿನ ಮೇಲೆ ಹಾರಾಟ ನಡೆಸಿದ್ದು, ಸಿಬ್ಬಂದಿಯ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುವ ಮೂಲಕ ಹಡಗಿನ ಸಂಪರ್ಕವನ್ನು ಸ್ಥಾಪಿಸಿದೆ. ನೌಕಾಪಡೆಯ ವಿಮಾನಗಳು ನಿರಂತರವಾಗಿ ಚಲನೆಯನ್ನು ಮೇಲ್ವಿಚಾರಣೆ ಮಾಡುತ್ತಿವೆ. ಅಲ್ಲದೆ, ಐಎನ್​ಎಸ್​ ಚೆನ್ನೈ ಯುದ್ಧನೌಕೆಯು ಹಡಗನ್ನು ಸಮೀಪಿಸಿದೆಯಾಗಿದೆ.

Read More

ನವದೆಹಲಿ : ದೆಹಲಿ ಸರ್ಕಾರಿ ಆಸ್ಪತ್ರೆಗಳಲ್ಲಿ ಕಳಪೆ ಗುಣಮಟ್ಟದ ಔಷಧಗಳ ಪೂರೈಕೆ ಕುರಿತು ಕೇಂದ್ರ ಗೃಹ ಸಚಿವಾಲಯವು ಕೇಂದ್ರೀಯ ತನಿಖಾ ದಳ (ಸಿಬಿಐ) ತನಿಖೆಗೆ ಆದೇಶಿಸಿದೆ ಎಂದು ಮೂಲಗಳು ಇಂದು ತಿಳಿಸಿವೆ. ಈ ಪ್ರಕರಣದಲ್ಲಿ ಸಿಬಿಐ ತನಿಖೆ ಮಾಡುವಂತೆ ಡಿಸೆಂಬರ್‌ನಲ್ಲಿ ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿ.ಕೆ. ಸಕ್ಸೇನಾ ಅವರು ಗೃಹ ಸಚಿವಾಲಯಕ್ಕೆ ಶಿಫಾರಸು ಮಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ದೆಹಲಿಯ ಆರೋಗ್ಯ ಸಚಿವ ಸೌರಭ್ ಭಾರದ್ವಾಜ್ ಅವರು ನಗರದ ಆಸ್ಪತ್ರೆಗಳಿಗೆ ಕಳಪೆ ಔಷಧಗಳನ್ನು ಸರಬರಾಜು ಮಾಡುತ್ತಿದ್ದಾರೆ ಎಂಬ ಆರೋಪದ ಮೇಲೆ ತನಿಖೆ ನಡೆಸುತ್ತಿರುವ ಜನರನ್ನು “ಅವರು” ಆಯ್ಕೆ ಮಾಡಿದ್ದಾರೆಯೇ ಹೊರತು ಅವರ ನಮ್ಮ ಪಕ್ಷದ ಸರ್ಕಾರವಲ್ಲ ಎಂದು ಹೇಳಿದ್ದಾರೆ. ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಭಾರದ್ವಾಜ್ ಅವರು, “ಮೊಹಲ್ಲಾ ಕ್ಲಿನಿಕ್‌ಗಳಲ್ಲಿ ಭ್ರಷ್ಟಾಚಾರ ನಡೆದಿದ್ದರೆ, ಆರೋಗ್ಯ ಕಾರ್ಯದರ್ಶಿ ಅಮಾನತು ಮಾಡಿ” ಎಂದು ಹೇಳಿದ್ದಾರೆ. ಲೆಫ್ಟಿನೆಂಟ್ ಗವರ್ನರ್ ವಿ ಕೆ ಸಕ್ಸೇನಾ ಅವರು “ಗುಣಮಟ್ಟದ ಪರೀಕ್ಷೆಯಲ್ಲಿ ವಿಫಲವಾದ ಔಷಧಗಳ ಪೂರೈಕೆಯ ಕುರಿತು ಸಿಬಿಐ ತನಿಖೆಗೆ ಆದೇಶಿಸಿದ್ದಾರೆ.…

Read More

ಮಂಗಳೂರು : ಮದುವೆಯ ವೇಳೆ ಮದುಮಗನ ಮಾಜಿ ಪ್ರೇಯಸಿ ಪೊಲೀಸರೊಂದಿಗೆ ಎಂಟ್ರಿ ಕೊಟ್ಟು ಹೈಡ್ರಾಮಾ ಕ್ರಿಯೆಟ್ ಮಾಡಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ತಾಲೂಕಿನ ಬೀರಿ ಬಳಿ ನಡೆದಿದೆ. ಕೇರಳ ಮೂಲದ ಅಕ್ಷಯ್ ಎಂಬಾತನ ಮದುವೆ ಮಂಗಳೂರು ಮೂಲದ ಯುವತಿ ಜೊತೆ ನಡೆಯುತ್ತಿದ್ದಾಗ ಮೈಸೂರು ಮೂಲದ ಮಾಜಿ ಪ್ರೇಯಸಿ ಕಲ್ಯಾಣ ಮಂಟಪಕ್ಕೆ ಎಂಟ್ರಿಕೊಟ್ಟು ಹೈಡ್ರಾಮ ನಡೆಸಿದ್ದಾಳೆ. ಕೇರಳದ ಕೊಝಿಕ್ಕೋಡ್ ಮೂಲದ ಅಕ್ಷಯ್ ಎಂಬಾತ ಒಂದೂವರೆ ವರ್ಷದ ಹಿಂದೆ ಮೈಸೂರಿನ ಯುವತಿಯನ್ನು ಶಾದಿ ಡಾಟ್ ಕಾಮ್ ಮೂಲಕ ಪರಿಚಯ ಮಾಡಿಕೊಂಡಿದ್ದನು. ನಂತರ ವಿವಾಹವಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ನಡೆಸಿದ್ದಾನೆ. ನಂತರ ವರಸೆ ಬದಲಾಯಿಸಿದ್ದಾನೆ ಎಂದು ಯುವತಿ ಆರೋಪಿಸಿದ್ದಾಳೆ. ಈ ನಡುವೆ ಯುವತಿ ಡಿಸೆಂಬರ್ 26 ರಂದು ಅಕ್ಷಯ್ ವಿರುದ್ಧ ಕೇರಳದ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರದ ದೂರು ದಾಖಲಿಸಿದ್ದಾಳೆ. ಇನ್ನು ಪ್ರಕರಣ ಸಂಬಂಧ ಅರೋಪಿ ಅಕ್ಷಯ್​ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ನ್ಯಾಯಾಲಯವು ವಜಾಗೊಳಿಸಿತ್ತು. ಈ ನಡುವೆ ಮಂಗಳೂರನ ಯುವತಿ ಜೊತೆ ಅಕ್ಷಯ್​ಗೆ…

Read More