Kannada news, Kannadanewsnow, News in Kannada, Kannada, ಕನ್ನಡ ವಾರ್ತೆಗಳು, ಕನ್ನಡ ಸುದ್ದಿಗಳು, kannada online news portal, Kannada news online, Movie News in Kannada, Sports News in Kannada, Business . politics News in Kannada, jobs News in Kannada, education News in Kannada, tourism News in Kannada, lifestyle News in Kannada, business News in Kannada
suvarna news live, public tv kannada news live, news18 kannada live, public news live, public tv news, tv5 kannada news live, yupptv kannada public tv live, btv kannada live, ಕನ್ನಡ ವಾರ್ತೆಗಳು, kannada online news, Kannada news online portal, Movie News in Kannada, Sports News in Kannada, Business news, politics News in Kannada, jobs News in Kannada, education News in Kannada, tourism News in Kannada, lifestyle News in Kannada, business News in Kannada
kannada news now, kannada news 24x7, online Kannada Newspaper, Online Kannada news portal, kannada live news updates, latest sandalwood cinema News, controversial news, gossips coverage in karnataka, gossips news in Kannada, all Kannada News updates, current Affairs in Karnataka, political news in kannada, news from india in Kannada language, Insurance, Gas/Electricity, Loans, Mortgage, Attorney, Lawyer , Donate, , Conference Call, Degree, Credit, credit card, car loans, home appliances, flipkart home appliances, flipkart , amazon home appliances, online shoping, cricket, onlinegame, medicare, weight loss, hairloss, helthtips, weight loss, online classes, Snapdeal., eBay, Myntra. Shopclues.
breaking news, kannada latest news, kannada news, kannada news live, kannada online news, kannadanewsnow.com, kannadanewsnowdotcom, kanndanew newsnow dot com, karnataka latest news, karnataka news, latest news. indianews. Narendra Damodardas Modi, india breaking news, coronavirus, covid 19 india, yeddyurappa, siddaramaiah, Politicians in India, Current affairs, Elections, Political News, Current Affairs politics, Rahul Gandhi, Indian National Congress, Amit Shah, Bharatiya Janata Party, Priyanka Gandhi, Mamata Banerjee
All India Trinamool Congress, Arvind Kejriwal, Aam Aadmi Party, Asaduddin Owaisi, All India Majlis-e-Ittehadul Muslimeen, Follow, H D Deve Gowda, Janata Dal (Secular), Harsh Vardhan, Bharatiya Janata Party, KCR, Telangana Rashtra Samithi, Kamal Hassan, Makkal Neethi, MaiamLal, Krishna, Advani, Bharatiya Janata Party, Mamata Banerjee All India Trinamool Congress, Manmohan Singh, Congress, mallikarjun kharge, Indian National Congress, Nirmala Sitharaman, Bharatiya Janata Party, Nitin Gadkari, Bharatiya Janata Party, Raj Thackeray, Maharashtra Navnirman Sena, Uma Bharti, Shivsena, V K Singh, General VK Singh, Sourav Ganguly, MS Dhoni , Virat Kohli, yogi, Adithyanath
ಓಂ ಶ್ರೀ ಮಹಾ ಗಣಪತಿ ಜ್ಯೋತಿಷ್ಯ ಕೇಂದ್ರ ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಗಣಪತಿ ಭಟ್ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳು ನಿಮ್ಮನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ.
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ಮೇಷ ರಾಶಿ : ಇಂದು ದೊಡ್ಡ ದೊಡ್ಡ ವಿಷಯಗಳನ್ನು ಬಿಟ್ಟುಕೊಂಡು ಸಣ್ಣವಿಷಯಗಳನ್ನು ದೊಡ್ಡದು ಮಾಡುವುದು ತರವಲ್ಲ. ಕೆಲವೊಮ್ಮೆ ಅಗತ್ಯಕ್ಕಿಂತ ಹೆಚ್ಚು ಕುತೂಹಲವು ನಿಮಗೆ ಭ್ರಮ ನಿರಶನ ಮಾಡುವುದು. ಋಣಾತ್ಮಕ ಚಿಂತನೆಗಳು ದೈಹಿಕ ಆರೋಗ್ಯದ ಮೇಲೆ ಪರಿಣಾಮ ಬೀರುವುದು. ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ವೃಷಭ ರಾಶಿ : ಮನಸ್ಸಿನ ಸಮತೋಲನ ಕಾಪಾಡುವ ದೃಷ್ಟಿಯಿಂದ ಶಾಂತತೆ ಇರಲಿ.ಪರಾಕ್ರಮ ಹಾಗೂ ಧೈರ್ಯದ ಕೆಲಸದಲ್ಲಿ ಪ್ರಚಂಡ ದೊರೆಯುವುದು. ಬಂಧುಪ್ರೇಮ ಸ್ವಜನಪ್ರೇಮದಿಂದ ಉದ್ಯೋಗದಲ್ಲಿ ಪ್ರಗತಿ ಕಂಡುಬರುವುದು. ಮನೆಯ ಶುಭಕಾರ್ಯಗಳಿಗೆ ಇಂದು ಮುಹೂರ್ತ ಉತ್ತಮವಿದೆ. ಶುಭ ಸುದ್ದಿಯೊಂದನ್ನು ಕೇಳುವಿರಿ. ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ಮಿಥುನ ರಾಶಿ : ಮಹತ್ವಾಕಾಂಕ್ಷೆಯು ಬಹು ಪ್ರಯಾಸದಿಂದ ಈಡೇರುವುದು. ಸಮಾಜದಲ್ಲಿ ಕೆಲಸ ಕಾರ್ಯದಲ್ಲಿ ಮುಂದಾಳುತನ ವಹಿಸಿಕೊಳ್ಳುವಿರಿ. ಜನಾನುಕೂಲತೆಯಿಂದ ಉದ್ಯೋಗದಲ್ಲಿ ಪ್ರಗತಿ ಕಂಡು ಬರುವುದು. ಆರ್ಥಿಕ ಸಂಕಷ್ಠ ಪರಿಹಾರವಾಗುವುದು. ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ಕರ್ಕಾಟಕ ರಾಶಿ : ಭಾಗ್ಯಬರುವ ಸಮಯದಲ್ಲಿ ಕೈಕೊಡುವುದರಿಂದ ಮಾನಸಿಕ ಜಿಗುಪ್ಸೆ ಉಂಟಾಗುವದು. ಧಾರ್ಮಿಕ ಮನೋಭಾವನೆಗಳನ್ನು ಬೆಳೆಸಿಕೊಳ್ಳುವುದು ಒಳ್ಳೆಯದು. ಕತ್ತಲಾದ ಮೇಲೆ ಬೆಳಕು ಆಗುವುದು ನಿರಾಶರಾಗಬೇಡಿರಿ. ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ಸಿಂಹ ರಾಶಿ : ಮನಸ್ಸಿನ ಭಾವನೆಗಳಿಗೆ ಪೆಟ್ಟು ಬೀಳುವುದರಿಂದ ಭಾವಾವೇಶಕ್ಕೆ ಒಳಗಾಗುವಿರಿ. ಆಮೂಲಕ ನೀವು ಪ್ರತಿಕ್ರಿಯಿಸುವ ರೀತಿಯು ಬಂಧುಬಾಂಧವರ ನಡುವಿನ ಸಂಬಂಧಕ್ಕೆ ತೊಂದರೆ ಆಗುವುದು. ಆದಷ್ಟು ಮನಸ್ಸನ್ನು ನಿಯಂತ್ರಣದಲ್ಲಿಟ್ಟುಕೊಂಡು ಕೌಟುಂಬಿಕ ನೆಮ್ಮದಿ ತನ್ನಿರಿ. ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ಕನ್ಯಾ ರಾಶಿ : ವ್ಯಾಪಾರ-ವ್ಯವಹಾರದಲ್ಲಿ ನಿರೀಕ್ಷೆಗೆ ತಕ್ಕಂತೆ ಹಣಕಾಸು ಒದಗಿ ಬರುವುದು. ಅದಾಗ್ಯೂ ಗುರುವಿನ ಅವಕೃಪೆಯಿಂದ ಸಣ್ಣಪುಟ್ಟ ಅಡೆತಡೆಗಳು ಎದುರಾಗುವ ಸಂಭವವಿರುತ್ತದೆ. ಕುಲದೇವರ ಪ್ರಾರ್ಥನೆ ಮಾಡಿ. ಮನೆಯ ಹಿರಿಯರ ಸಲಹೆಯನ್ನು ಅಂಗೀಕರಿಸಿರಿ. ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ತುಲಾ ರಾಶಿ : ಇಂದು ಉತ್ತಮ ದಿನವನ್ನಾಗಿ ಕಳೆಯುವಿರಿ. ಪ್ರತಿಯೊಂದು ಕಾರ್ಯದಲ್ಲೂ ಯಶಸ್ಸು ನಿಮ್ಮದಾಗುವುದು. ಹಣಕಾಸಿನ ಪರಿಸ್ಥಿತಿಯು ಉತ್ತಮವಾಗಿದ್ದು ಪ್ರಖ್ಯಾತ ಜನರ ಭೇಟಿ ಆಗಲಿದೆ. ಮನೋಕಾಮನೆಗಳು ಪೂರ್ಣಗೊಳ್ಳುವವು. ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ವೃಶ್ಚಿಕ ರಾಶಿ : ಶಾರೀರಿಕ ಅಸ್ವಸ್ಥತೆಯು ಮನಸ್ಸಿನ ದುಗುಡವನ್ನು ಹೆಚ್ಚಿಸುವುದು. ಸಂಪಾದನೆಗಿಂತ ವೆಚ್ಚ ಹೆಚ್ಚಾಗುವುದು. ಮಾನಹಾನಿಯಾಗುವ ಸಾಧ್ಯತೆಗಳು ಅಧಿಕ. ತಾಳ್ಮೆಯಿಂದ ಇರುವುದು ಒಳ್ಳೆಯದು. ಹನುಮಾನ್ ಚಾಲೀಸ್ ಪಠಣ ಮಾಡಿ. ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ಧನಸ್ಸು ರಾಶಿ : ನಿಮ್ಮ ಬಾಳಸಂಗಾತಿಯು ನಿಮಗೆ ಎಲ್ಲ ದೃಷ್ಟಿಯಿಂದಲೂ ನೆರವಾಗುತ್ತಾರೆ, ಕಚೇರಿಯಲ್ಲಿ ನಿಮ್ಮ ಕೈಕೆಳಗೆ ಕೆಲಸ ಮಾಡುವವರು ಅಸಹಕಾರ ತೋರುವರು ಇಲ್ಲವೆ ನಿಮಗೆ ತೊಂದರೆ ಕೊಡುವ ಸಾಧ್ಯತೆ ಇರುತ್ತದೆ. ಲಕ್ಷ್ಮೀನಾರಸಿಂಹನ ಸ್ಮರಣೆ ಮಾಡಿ. ಬಂದ ದುರಿತಗಳು ನಶಿಸಿ ಹೋಗುವುದು. ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ಮಕರ ರಾಶಿ : ಹಿರಿಯರೊಬ್ಬರ ಸಕಾಲಿಕ ಹಿತನುಡಿಗಳಿಂದ ಮನೆಯಲ್ಲಿನ ಪತಿ, ಪತ್ನಿಯರ ನಡುವಿನ ಭಿನ್ನಾಭಿಪ್ರಾಯಕ್ಕೆ ಅಂತ್ಯ ಕಾಣುವುದು. ಕಚೇರಿಯ ಕೆಲಸಗಳು ಸರಾಗವಾಗಿ ನಡೆಯುವುದರಿಂದ ನೆಮ್ಮದಿಯ ವಾತಾವರಣ ಕಾಣುವಿರಿ, ಪ್ರಯಾಣದಲ್ಲಿ ಕೂಡಾ ಎಚ್ಚರದಿಂದ ಇರುವುದು ಒಳ್ಳೆಯದು. ಮಾಡದೆ ಇರುವ ತಪ್ಪಿಗೆ ನೀವು ನಿಂದನೆಗೆ ಒಳಗಾಗುವಿರಿ. ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ಕುಂಭ ರಾಶಿ : ಮನಸ್ಸು ಅತ್ಯಂತ ಚಂಚಲತೆಯಿಂದ ಕೂಡಿರುವುದರಿಂದ ಕಾರ್ಯಗಳಲ್ಲಿ ಹಿನ್ನಡೆಯನ್ನು ಅನುಭವಿಸುವಿರಿ. ಗ್ರಹಸ್ಥಿತಿಗಳು ಉತ್ತಮವಾಗಿಲ್ಲ, ಹಣಕಾಸಿನ ಸ್ಥಿತಿ ಉತ್ತಮವಾಗಿದ್ದು ಬಹುದಿನಗಳಿಂದ ಬರಬೇಕಾಗಿದ್ದ ಹಣವು ನಿಮ್ಮ ಕೈಸೇರುವುದು. ಆಕಾಶಕ್ಕೆ ಏಣಿ ಹಾಕುವ ವ್ಯರ್ಥ ಪ್ರಯತ್ನ ಬೇಡ. ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ಮೀನಾ ರಾಶಿ : ನಿಮ್ಮ ಕಾರ್ಯಕ್ಷೇತ್ರದಲ್ಲಿನ ಕೆಲಸವು ಮಂದಗತಿಯಿಂದ ಆರಂಭವಾದರೂ ಒಳಿತಾಗುವುದು. ಸಂಗಾತಿಯೊಂದಿಗೆ ಮನೆಯಲ್ಲಿ ಅಧಿಕ ಖರ್ಚು ಮಾಡುವುದು. ವ್ಯಾಪಾರ ವ್ಯವಹಾರದಲ್ಲಿ ಶತ್ರುಗಳ ಅಡೆ ತಡೆ ಗಳು ಬರಬಹುದು. ಆಂಜನೇಯಸ್ವಾಮಿ ದೇವಸ್ಥಾನಕ್ಕೆ ಹೋಗಿ ಪೂಜೆ ಸಲ್ಲಿಸಿ. ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ಡಿಜಿಟಲ್ ಡೆಕ್: ಭಯೋತ್ಪಾದನೆಯ ಹಣಕಾಸು ಮತ್ತು ಹಣ ವರ್ಗಾವಣೆಯನ್ನ ನಿಗ್ರಹಿಸುವ ಪ್ರಯತ್ನಗಳನ್ನ ಪರಿಶೀಲಿಸಿದ ಫೈನಾನ್ಷಿಯಲ್ ಆಕ್ಷನ್ ಟಾಸ್ಕ್ ಫೋರ್ಸ್ (ಎಫ್ ಎಟಿಎಫ್) ಪಾಕಿಸ್ತಾನವನ್ನ ‘ಗ್ರೇ ಪಟ್ಟಿಯಲ್ಲಿಯೇ ಉಳಿಸಿದೆ. ಗುರುವಾರ ನಡೆದ ಬಹುಪಕ್ಷೀಯ ವಾಚ್ ಡಾಕ್ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಈ ಕುರಿತು ಪ್ರಕರಣೆ ಹೊರಡಿಸಿರುವ FATF “ತನ್ನ ಕಾರ್ಯತಂತ್ರಾತ್ಮಕವಾಗಿ ಪ್ರಮುಖ ನ್ಯೂನತೆಗಳನ್ನ ಪರಿಹರಿಸಲು ತನ್ನ ಕ್ರಿಯಾ ಯೋಜನೆಯಲ್ಲಿ ಉಳಿದ ಮೂರು ಅಂಶಗಳನ್ನ ಅನುಷ್ಠಾನಗೊಳಿಸುವಲ್ಲಿ ಪಾಕಿಸ್ತಾನ ಕೆಲಸ ಮುಂದುವರಿಸಬೇಕು ಎಂದಿದೆ.
ಡಿಜಿಟಲ್ ಡೆಸ್ಕ್: ದೇಶವು 2ನೇ ಹಂತದ ಕೋವಿಡ್-19 ಲಸಿಕೆ ಹಂಚಿಕೆಗೆ ಸಜ್ಜಾಗುತ್ತಿದ್ದಂತೆ, ಮಾರ್ಚ್ 1ರಿಂದ ಫಲಾನುಭವಿಗಳು ಸಹ-WIN ವೇದಿಕೆಯಲ್ಲಿ ತಮ್ಮನ್ನ ನೋಂದಾಯಿಸಿಕೊಳ್ಳಬಹುದು ಎಂದು ಅಧಿಕೃತ ಮೂಲಗಳು ತಿಳಿಸಿವೆ. ಇದರ ಜೊತೆಗೆ ಅಧಿವೇಶನದ ಸ್ಥಳಗಳಲ್ಲಿಯೂ ಫಲಾನುಭವಿಗಳು ತಮ್ಮ ಹೆಸರನ್ನ ನೋಂದಣಿ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.
2ನೇ ಹಂತದಲ್ಲಿ 60 ವರ್ಷ ಮೇಲ್ಪಟ್ಟವರು ಮತ್ತು 45 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲಾಗುತ್ತೆ.
ಕೋವಿಡ್-19 ಲಸಿಕೆ ಆಡಳಿತದ ಮೇಲಿನ ಸಬಲೀಕರಣ ಗುಂಪಿನ ಅಧ್ಯಕ್ಷ ಆರ್.ಎಸ್.ಶರ್ಮಾ ಅವರು, “60 ವರ್ಷ ಮೇಲ್ಪಟ್ಟವರು ಮತ್ತು 45 ವರ್ಷ ಮೇಲ್ಪಟ್ಟವರು ಮಾರ್ಚ್ 1 ರಿಂದ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಮತ್ತು ಹಲವಾರು ಖಾಸಗಿ ಆಸ್ಪತ್ರೆಗಳಲ್ಲಿಯೂ ಕೋವಿಡ್-19 ಲಸಿಕೆಯನ್ನ ಪಡೆಯಬಹುದು” ಎಂದರು.
ಮಾರ್ಚ್ 1ರಿಂದ ಅರ್ಹ ಫಲಾನುಭವಿಗಳು ಕೋ-ವಿನ್ ವೇದಿಕೆಯಲ್ಲಿ ತಮ್ಮ ಹೆಸರು ನೋಂದಾಯಿಸಿಕೊಳ್ಳಬಹುದು ಎಂದು ಹೇಳಿದರು.ಕೋ-ವಿನ್ ಅಪ್ಲಿಕೇಶನ್ ನ ಹೊಸ ಆವೃತ್ತಿಯು GPS-ಸಕ್ರಿಯಗೊಳಿಸಲ್ಪಟ್ಟಿದ್ದು, ಇದರ ಮೂಲಕ ಫಲಾನುಭವಿಗಳು ಸರ್ಕಾರಿ ಮತ್ತು ಖಾಸಗಿ ಸೌಲಭ್ಯಗಳಲ್ಲಿ ಇನಾಕ್ಯುಲೇಷನ್ ಸೆಷನ್ ಸೈಟ್ʼಅನ್ನ ಆಯ್ಕೆ ಮಾಡಲು ಸಾಧ್ಯವಾಗುತ್ತದೆ.
ದಾವಣಗೆರೆ: ರಾಜ್ಯದಲ್ಲಿ ಸ್ಫೋಟ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಕಟ್ಟುನಿಟ್ಟಿನ ಕ್ರಮಗಳನ್ನ ತೆಗೆದುಕೊಳ್ಳಲು ಮುಂದಾಗಿದ್ದು, ಇನ್ಮುಂದೆ ಗಣಿಗಳಲ್ಲಿ ಸ್ಫೋಟಕಗಳನ್ನ 15 ದಿನಗಳಿಗೊಮ್ಮೆ ತಪಾಸಣೆ ನಡೆಸಲಾಗುತ್ತೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.
ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, “ರಾಜ್ಯದ ಗಣಿಗಳಲ್ಲಿ ನಿಯಮ ಬಾಹಿರವಾಗಿ ಸ್ಫೋಟಕಗಳನ್ನ ಬಳಸುವವರ ವಿರುದ್ಧ ಶಿಸ್ತುಕ್ರಮ ಜರುಗಿಸುತ್ತೇವೆ. ಈ ಹಿಂದೆ ಮೂರು ತಿಂಗಳಿಗೆ ಒಮ್ಮೆ ಗಣಿಗಳಲ್ಲಿ ಸ್ಫೋಟಕಗಳನ್ನು ಪರಿಶೀಲಿಸಲಾಗುತ್ತಿತ್ತು. ಮುಂದಿನ ದಿನಗಳಲ್ಲಿ 15 ದಿನಗಳಿಗೊಮ್ಮೆ ತಪಾಸಣೆ ನಡೆಸುತ್ತೇವೆ” ಎಂದರು.
ಇನ್ನು ಈ ಕುರಿತು ಈಗಾಗಲೇ ಖನಿಜ ಸಚಿವ ಮುರುಗೇಶ್ ನಿರಾಣಿ ಅವರೊಂದಿಗೆ ಚರ್ಚೆ ನಡೆಸಿರುವ ಸಚಿವರು, “ಗಣಿಗಾರಿಕೆಗೆ ಸ್ಫೋಟಕಗಳನ್ನ ಬಳಸುವ ಪ್ರದೇಶಗಳ ಮೇಲೆ ನಿಯಮಿತವಾಗಿ ದಾಳಿ ನಡೆಸಲಾಗುವುದು. ಗಣಿ ಮತ್ತು ಭೂವಿಜ್ಞಾನ ಇಲಾಖೆ ಹಾಗೂ ಪೊಲೀಸರು ತಪಾಸಣೆ ನಡೆಸುತ್ತಾರೆ” ಎಂದು ಮಾಹಿತಿ ನೀಡಿದರು.
ಇನ್ನು ಇದೇ ವೇಳೆ ಸ್ಫೋಟಕಗಳ ಬಳಕೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ರೂಪಿಸಿರುವ ಕಾಯ್ದೆಯನ್ನ ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚನೆ ನೀಡಲಾಗಿದೆ. ಅಕ್ರಮವಾಗಿ ಸ್ಫೋಟಕಗಳನ್ನ ಬಳಸುವವರ ವಿರುದ್ಧ ಸೂಕ್ತ ಕ್ರಮ ಜರುಗಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.
ನವದೆಹಲಿ : ಇಂಧನ ಬೆಲೆ ಏರಿಕೆ ಖಂಡಿಸಿ ಕೇಂದ್ರ ಸರ್ಕಾರದ ವಿರುದ್ಧ ಪಶ್ವಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಪ್ರತಿಭಟನೆ ನಡೆಸಿದ್ದಾರೆ.
ಹೌದು, ಎಲೆಕ್ಟ್ರಿಕ್ ಸ್ಕೂಟಿ ಓಡಿಸುವ ಮೂಲಕ ಬಿಜೆಪಿ ವಿರುದ್ಧ ವಿನೂತವಾಗಿ ಪ್ರತಿಭಟನೆ ನಡೆಸಿದ ಮಮತಾ ಬ್ಯಾನರ್ಜಿ ಗಮನ ಸೆಳೆದರು. ಆದರೆ ಬೈಕ್ ಚಲಾಯಿಸುವ ವೇಳೆ ಆಯತಪ್ಪಿದ್ದಾರೆ.
ಸುಮಾರು 3 ನಿಮಿಷಗಳ ಕಾಲ ಸ್ಕೂಟಿ ಓಡಿಸಿದ ಮಮತಾ ಕೊನೆಗೆ ಆಯತಪ್ಪಿ ಬೀಳುವ ಹಂತಕ್ಕೆ ಮುಂದಾದರು. ಆದರೆ ಕೂಡಲೇ ಅವರ ನೆರವಿಗೆ ಬಂದ ಸಹಾಯಕರು ದೀದಿ ಬೀಳದಂತೆ ತಡೆದರು, ಕೇಂದ್ರ ಸರ್ಕಾರದ ವಿರುದ್ಧ ವಾಗ್ಧಾಳಿ ಮುಂದುವರೆಸಿರುವ ಮಮತಾ ಬ್ಯಾನರ್ಜಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಖಂಡಿಸಿ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ.
ಡಿಜಿಟಲ್ ಡೆಸ್ಕ್ : ಕೇವಲ 100 ರೂಗೆ ಲಾಟರಿ ಟಿಕೆಟ್ ಕೊಂಡುಕೊಂಡು ಮಹಿಳೆಯೊಬ್ಬರು ಕೋಟ್ಯಾಧಿಪತಿಯಾದ ಘಟನೆ ಚಂಡೀಘರ್ ನಲ್ಲಿ ನಡೆದಿದೆ.
ರೇಣು ಚೌಹಾನ್ ಎಂಬ ಮಹಿಳೆಯೇ ಲಾಟರಿ ಗೆದ್ದ ಅದೃಷ್ಟವಂತ ಮಹಿಳೆ. ಇವರು ಅಮೃತಸರದಲ್ಲಿ ಬಟ್ಟೆ ಅಂಗಡಿಯೊಂದನ್ನು ನಡೆಸುತ್ತಿದ್ದು, ಫೆಬ್ರವರಿ 11 ರಂದು ಲಾಟರಿ ಗೆದ್ದಿದ್ದಾರೆ. ಈ ಬಗ್ಗೆ ಪಂಜಾಬ್ ರಾಜ್ಯ ಲಾಟರಿ ಇಲಾಖೆಯ ಅಧಿಕೃತ ವಕ್ತಾರರು ಮಾಹಿತಿ ನೀಡಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಚೌಹಾನ್ ಭಗವಂತನ ಆಶೀರ್ವಾದದಿಂದ ಲಾಟರಿ ಗೆದ್ದಿದ್ದೇನೆ, ಮಧ್ಯಮ ವರ್ಗದ ಕುಟುಂಬಕ್ಕೆ ಬಹಳ ಸಹಾಯಕಾರಿಯಾಗಿದೆ ಎಂದಿದ್ದಾರೆ.
ಚಿತ್ರದುರ್ಗ: ಮಠದಲ್ಲಿ ಹೆದರಿಸಿ ಮಠದ ಹಣ, ಆಸ್ತಿ ದೋಚಲು ಕೆಲವರು ಷಡ್ಯಂತ್ರ ರೂಪಿಸಿದ್ದಾರೆ. ಗುಂಡಾಗಳನ್ನು ಕರೆತಂದು ಮಠದಲ್ಲಿ ದಾಂಧಲೆ ಮಾಡಿದ್ದಾರೆ ಎಂದು ಕೂಡಲಿ ಶೃಂಗೇರಿ ಮಠದ ಪೀಠಾಧಿಪತಿ ವಿಧ್ಯಾಭಿನವ ವಿದ್ಯಾರಣ್ಯ ಭಾರತೀ ಶ್ರೀಗಳು ಹೇಳಿದ್ದಾರೆ.
ಚಿತ್ರದುರ್ಗದಲ್ಲಿ ಮಾತನಾಡಿದ ಶ್ರೀಗಳು, “ಮಠದಲ್ಲಿ ಆತಂಕ ಸೃಷ್ಟಿಸುವ ಕೆಲಸ ಆಗುತ್ತಿದ್ದು, ಶ್ರೀ ಮದ್ಜಗದ್ಗುರು ಕೂಡಲಿ ಶೃಂಗೇರಿ ಶಂಕರಾಚಾರ್ಯ ಮಹಾಸಂಸ್ಥಾನಮ್ನ ಹಳೇ ಸಮಿತಿಯವರು ಬೆದರಿಕೆ ಹೊಡ್ಡುತ್ತಿದ್ದಾರೆ. ಪೂಜೆ, ಅನುಷ್ಠಾನ ಮಾಡಲು ತಡೆ ಮಾಡಿ ಕಿರುಕುಳ ನೀಡುತ್ತಿದ್ದಾರೆ. ಕಳೆದ ಶನಿವಾರ ದಾಂಧಲೆ ನಡೆಸಿ ನಮ್ಮ ಶಿಷ್ಯಂದಿರು, ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದಾರೆ. ಈ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿದ್ದೇವೆ ” ಎಂದರು.
ಇನ್ನು ಮನನೊಂದು ಚಿತ್ರದುರ್ಗದ ಶಾಖಾ ಮಠಕ್ಕೆ ಬಂದಿರುವ ಶ್ರೀಗಳು “ಪೀಠದಿಂದ ಇಳಿದು ನಡೆಯುವಂತೆ ನಮ್ಮ ಮೇಲೆ ದಬ್ಬಾಳಿಕೆ ಮಾಡಿದ್ದು, ಒತ್ತಡದಿಂದ ಯಾರನ್ನಾದರೂ ಪೀಠಾಧಿಪತಿ ಮಾಡಿಕೊಳ್ಳಿ ಅಂದಿದ್ದೆ. ಅದಕ್ಕೆ ಹೊಸ ಪೀಠಾಧಿಪತಿ ಆಯ್ಕೆಗೆ ಶ್ರೀಗಳ ಸಮ್ಮತಿಯೆಂದು ಸುಳ್ಳು ಸುದ್ದಿ ಹಬ್ಬಿಸಿದ್ದಾರೆ” ಎಂದು ಬೇಸರ ವ್ಯಕ್ತ ಪಡಿಸಿದರು.
ಬೆಂಗಳೂರು : ಅಲ್ಪಸಂಖ್ಯಾತ ( ಮುಸ್ಲಿಂ, ಕ್ರಿಶ್ಚಿಯನ್, ಸಿಖ್ಖರು ,ಜೈನರು, ಬೌದ್ದ, ಪಾರ್ಸಿ) ಸಮುದಾಯದ ವಿದ್ಯಾರ್ಥಿಗಳಿಗೆ 2020-21 ನೇ ಸಾಲಿನ ವಿದ್ಯಾರ್ಥಿ ವೇತನಕ್ಕಾಗಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿತ್ತು. ಇದೀಗ ಮುಂದುವರೆದು ಎನ್ ಎಸ್ ಪಿ ಸ್ಕಾಲರ್ ಶಿಪ್ ಪೋರ್ಟಲ್ ನಲ್ಲಿ ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳು ಮತ್ತೆ ಎಸ್ ಎಸ್ ಪಿ ಸ್ಕಾಲರ್ ಶಿಪ್ ಪೋರ್ಟಲ್ ನಲ್ಲಿ ಅರ್ಜಿ ಸಲ್ಲಿಸಲು ಸೂಚನೆ ನೀಡಲಾಗಿದೆ.
ಹೌದು, (Post-matric and Merit-cum-means Scholarship) ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳು ಎನ್ ಎಸ್ ಪಿ ಸ್ಕಾಲರ್ ಶಿಪ್ ಪೋರ್ಟಲ್ ನಲ್ಲಿ ಅರ್ಜಿ ಸಲ್ಲಿಸಿದ್ದರು. ಇದೀಗ SSP ( state scholarship portal ) ನಲ್ಲಿ ಅರ್ಜಿ ಸಲ್ಲಿಸಲು ಸೂಚನೆ ನೀಡಲಾಗಿದೆ.ವಿದ್ಯಾರ್ಥಿಗಳು ವಿದ್ಯಾರ್ಥಿ ವೇತನಕ್ಕೆ ಸಲ್ಲಿಸಿದ ದಾಖಲೆಗಳನ್ನು ಪರಿಶೀಲನೆ ಮಾಡುವಂತೆ ಆಯಾ ಕಾಲೇಜಿನ ‘E attestation’ ಆಫೀಸರ್ ಗಳಿಗೆ ಸೂಚನೆ ನೀಡಲಾಗಿದೆ.
ಅರ್ಹ ವಿದ್ಯಾರ್ಥಿಗಳು ಧೃಡೀಕೃತ ದಾಖಲೆಗಳೊಂದಿಗೆ https://ssp.postmatric.karnataka.gov.in/ portal ಮೂಲಕ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಿ, ಅರ್ಜಿ ಸಲ್ಲಿಸಿದ ಪ್ರತಿಯನ್ನು ಕಾಲೇಜು ಕಛೇರಿಗೆ ಸಲ್ಲಿಸಲು ಸೂಚಿಸಲಾಗಿದೆ. ಹೆಚ್ಚಿನ ಮಾಹಿತಿಗೆ ವಿದ್ಯಾರ್ಥಿಗಳು ಆಯಾ ತಾಲೂಕಿನ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ, ಶಾಲಾ/ಕಾಲೇಜು ಕಛೇರಿಯನ್ನು ಸಂಪರ್ಕಿಸಬಹುದಾಗಿದೆ.
ಸಿನಿಮಾ ಡೆಸ್ಕ್ : ಕಿಚ್ಚ ಸುದೀಪ್ ನಿರೂಪಣೆಯ ಬಿಗ್ ಬಾಸ್ 8ನೇ ಆವೃತ್ತಿ ಆರಂಭಕ್ಕೆ ಪ್ರೇಕ್ಷಕರು ಕಾಯುತ್ತಿದ್ದಾರೆ. ದಿನದಿಂದ ದಿನಕ್ಕೆ ಕುತೂಹಲ ಹೆಚ್ಚಾಗುತ್ತಿದೆ. ಈ ಬಾರಿ ಬಿಗ್ ಬಾಸ್ ಮನೆ ಹೇಗಿರಲಿದೆ, ಯಾರೆಲ್ಲಾ ಬಿಗ್ ಬಾಸ್ ಮನೆಗೆ ಬರಲಿದ್ದಾರೆ ಎಂಬ ಕುತೂಹಲ ಎಲ್ಲರಲ್ಲಿದೆ.
ಈ ಬಾರಿ ಬಿಗ್ ಬಾಸ್ ಮನೆಯಲ್ಲಿ ಕಿರಣ್ ಶ್ರೀನಿವಾಸ್ ಇರಲಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿದೆ. ಬಿಗ್ ಬಾಸ್ ತಂಡ ಕಿರಣ್ ಅವರನ್ನು ಸಂಪರ್ಕಿಸಿ ಮಾತುಕತೆ ನಡೆಸಿದೆ ಎನ್ನಲಾಗುತ್ತಿದೆ. ಆದರೆ ಕಿರಣ್ ಬಿಗ್ ಬಾಸ್ ಮನೆಗೆ ಬರ್ತಾರಾ ಇಲ್ಲವಾ ಎನ್ನುವುದು ಫೆಬ್ರವರಿ 28ರಂದು ಗೊತ್ತಾಗಲಿದೆ.
ಹಾಗೆ ಸುಮ್ಮನೆ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಗೆ ಕಾಲಿಟ್ಟ ನಟ ಕಿರಣ್ ಬಳಿಕ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಸದ್ಯ ಕಿರುತೆರೆಯಲ್ಲಿ ಬ್ಯುಸಿಯಾಗಿರುವ ಕಿರಣ್ ಈ ಬಾರಿಯ ಬಿಗ್ ಬಾಸ್ ಮನೆಗೆ ಪ್ರವೇಶಿಸಲಿದ್ದಾರೆ ಎನ್ನಲಾಗಿದೆ.
ಅಂತೆಯೇ, ಹಾಸ್ಯ ನಟ ತಬಲಾ ನಾಣಿ, ಸರಿಗಮಪ ಖ್ಯಾತಿಯ ಹನುಮಂತ, ತರಂಗ ವಿಶ್ವ , ಸುದ್ದಿವಾಹಿನಿ ನಿರೂಪಕ ಅಮರ್ ಪ್ರಸಾದ್, ವಿನಯ್ ಪ್ರಸಾದ್ ಹೆಸರು ಕೂಡ ಕೇಳಿಬಂದಿದೆ. ಯಶಸ್ವಿಯಾಗಿ ಏಳು ಸೀಸನ್ ಗಳನ್ನು ಪೂರೈಸಿರುವ ಬಿಗ್ ಬಾಸ್ ಇದೀಗ ಎಂಟನೇ ಸೀಸನ್ ಅನ್ನು ಶುರು ಮಾಡುತ್ತಿದೆ.. ಬಿಗ್ ಬಾಸ್ ಮನೆಯೊಳಗೆ ಯಾರೆಲ್ಲಾ ಹೋಗಲಿದ್ದಾರೆ ಎಂಬ ಕುತೂಹಲ ಎಲ್ಲರಲ್ಲಿದ್ದು, ಬಿಗ್ ಬಾಸ್ ಪ್ರಾರಂಭವಾಗುವವರೆಗೂ ಕಾಯಬೇಕು.
ನವದೆಹಲಿ: ಭಾರತೀಯ ರೈಲ್ವೆ ಪ್ರಯಾಣಿಕರಿಗೆ ಸಿಹಿ ಸುದ್ದಿ ನೀಡಿದ್ದು, ಯುಟಿಎಸ್ ಆನ್ ಮೊಬೈಲ್ ಆ್ಯಪ್ ಮೂಲಕ ಸಾಮಾನ್ಯ ಟಿಕೆಟ್ ಕಾಯ್ದಿರಿಸುವ ಸೌಲಭ್ಯವನ್ನ ಪುನರಾರಂಭಿಸಿದೆ. ಇನ್ನು ಕೌಂಟರ್ʼಗಳಲ್ಲಿಯೂ ಟಿಕೆಟ್ ಬುಕಿಂಗ್ ಆರಂಭಿಸಿದ್ದು, ಪ್ರಯಾಣಿಕರು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದು ಭಾರತೀಯ ರೈಲ್ವೇ ಹೇಳಿದೆ.
ಈಗ ಸಾಮಾನ್ಯ ಟಿಕೆಟ್ ಪಡೆಯಲು ಒಬ್ಬರು ದೀರ್ಘ ಸರತಿ ಸಾಲಿನಲ್ಲಿ ನಿಲ್ಲಬೇಕಾಗಿಲ್ಲ. ಮೊಬೈಲ್ನಿಂದ ಸಾಮಾನ್ಯ ಟಿಕೆಟ್ಗಳನ್ನು ಕಾಯ್ದಿರಿಸುವ ಮೂಲಕ ನೀವು ಕಾಯ್ದಿರಿಸದ ವಿಭಾಗದಲ್ಲಿ ಪ್ರಯಾಣಿಸಲು ಸಾಧ್ಯವಾಗುತ್ತೆ.
ರೈಲ್ವೆ ಏನು ಹೇಳಿದೆ..?
ರೈಲ್ವೆ ಸಚಿವಾಲಯ ಹೇಳಿಕೆಯಲ್ಲಿ, “ಭಾರತೀಯ ರೈಲ್ವೆ ಹಂತ ಹಂತವಾಗಿ ಕಾಯ್ದಿರಿಸದ ರೈಲು ಸೇವೆಗಳನ್ನು ಒದಗಿಸುತ್ತಿದೆ. ಕಾಯ್ದಿರಿಸದ ಟಿಕೆಟ್ ಕಾಯ್ದಿರಿಸುವಲ್ಲಿ ಪ್ರಯಾಣಿಕರಿಗೆ ಯಾವುದೇ ಅನಾನುಕೂಲತೆ ಉಂಟಾಗಬಾರದು ಮತ್ತು ಟಿಕೆಟ್ ಖರೀದಿಸುವಾಗ ಕೌಂಟರ್ಗಳಲ್ಲಿ ಸಾಮಾಜಿಕ ಅಂತರವನ್ನ ಕಾಯ್ದುಕೊಳ್ಳಬೇಕು” ಎಂದಿದೆ. ಮೊಬೈಲ್ ಅಪ್ಲಿಕೇಶನ್ ವೈಶಿಷ್ಟ್ಯಕ್ಕೆ ಯುಟಿಎಸ್ʼನ್ನ ಸೇರ್ಪಡೆ ಮಾಡಿದ್ದು, ಪ್ರಾದೇಶಿಕ ರೈಲ್ವೆಯ ಉಪನಗರವಲ್ಲದ ವಿಭಾಗಗಳಲ್ಲಿಯೂ (ಉಪನಗರವಲ್ಲದ ವಿಭಾಗಗಳು) ಪುನರಾರಂಭಿಸಬಹುದು” ಎಂದು ಸ್ಪಷ್ಟಪಡಿಸಿದೆ.
ಟಿಕೆಟ್ ಕಾಯ್ದಿರಿಸುವುದು ಹೇಗೆ..?
>> ಗೂಗಲ್ ಪ್ಲೇಸ್ಟೋರ್ನಿಂದ ಯುಟಿಎಸ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ.
>> ನಿಮ್ಮ ಹೆಸರು, ಮೊಬೈಲ್ ಸಂಖ್ಯೆ, ಗುರುತಿನ ಚೀಟಿ ಸಂಖ್ಯೆಯನ್ನ ಭರ್ತಿ ಮಾಡಿ, ನೋಂದಾಯಿಸಿಕೊಳ್ಳಿ.
>> ನೋಂದಾಯಿಸುವಾಗ, ನಿಮ್ಮ ಮೊಬೈಲ್ ಸಂಖ್ಯೆಯಲ್ಲಿ ಒಟಿಪಿ ಕಾಣಿಸುತ್ತೆ. ಇದರ ನಂತರ ನೀವು ಸೈನ್ ಅಪ್ ಮಾಡಬಹುದು.
>> ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಲ್ಲಿ ಐಡಿ ಮತ್ತು ಪಾಸ್ವರ್ಡ್ ಬರುತ್ತದೆ.
>> ನಂತ್ರ ಯುಟಿಎಸ್ ಲಾಗ್ ಇನ್ ಆಗಿ ಸಾಮಾನ್ಯ ಟಿಕೆಟ್ ಬುಕ್ ಮಾಡ್ಬೋದು.
ಅಹಮದಾಬಾದ್: ನರೇಂದ್ರ ಮೋದಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆಯುತ್ತಿರುವ ಪಿಂಕ್ ಬಾಲ್ ಟೆಸ್ಟ್ ಪಂದ್ಯದ ಭಾರತ ತಂಡ ಇತಿಹಾಸ ನಿರ್ಮಿಸಿದೆ. ಎರಡನೇ ದಿನದಂದು ಟೀಂ ಇಂಡಿಯಾ 10 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ.
ಹೌದು. ತವರು ನೆಲದಲ್ಲಿ ಭಾರತದ ಅತ್ಯಂತ ಯಶಸ್ವಿ ಟೆಸ್ಟ್ ನಾಯಕ ಎಂಬ ದಾಖಲೆಗೆ ವಿರಾಟ್ ಕೊಹ್ಲಿ ಭಾಜನರಾಗಿದ್ದಾರೆ.
ಅಹಮದಾಬಾದ್ ನಲ್ಲಿ ನಡೆದ ಮೂರನೇ ಹಾಗೂ ಪಿಂಕ್ ಬಾಲ್ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ 10 ವಿಕೆಟ್ ಅಂತರದ ಭರ್ಜರಿ ಗೆಲುವು ದಾಖಲಿಸುವುದರೊಂದಿಗೆ ಕೊಹ್ಲಿ ದಾಖಲೆ ಪುಟ ಸೇರಿದರು.
ಟೀಂ ಇಂಡಿಯಾ ಪರ ಬೌಲಿಂಗ್ನಲ್ಲಿ ಮಿಂಚಿದ ಅಕ್ಷರ್ ಪಟೇಲ್ 2 ಇನ್ನಿಂಗ್ಸ್ ಸೇರಿ 11 ವಿಕೆಟ್ ಪಡೆದರೆ, ಅಶ್ವಿನ್ 7 ವಿಕೆಟ್ ಪಡೆದು ಮಿಂಚಿದರು. ಇನ್ನು ಇಂಗ್ಲೆಂಡ್ ನೀಡಿದ 49 ರನ್ಗಳ ಸುಲಭ ಗುರಿಯನ್ನ ಟೀಂ ಇಂಡಿಯಾ ಯಾವುದೇ ವಿಕೆಟ್ ನಷ್ಟವಿಲ್ಲದೆ ಬೆನ್ನತ್ತಿತ್ತು. ರೂಟ್ ಓವರ್ನಲ್ಲಿ 2 ಬೌಂಡರಿ ಹಾಗೂ 1 ಭರ್ಜರಿ ಸಿಕ್ಸರ್ನೊಂದಿಗೆ ರೋಹಿತ್ ಶರ್ಮಾ ಭಾರತಕ್ಕೆ ಗೆಲುವು ತಂದುಕೊಟ್ಟರು. ಹಗಲು-ರಾತ್ರಿ ನಡೆಯುತ್ತಿರುವ ಪಿಂಕ್ ಬಾಲ್ ಟೆಸ್ಟ್ ಪಂದ್ಯದ ಎರಡನೇ ದಿನದಂದು ವಿಕೆಟ್ ಮಳೆಯ ಮಧ್ಯೆ ಇಂಗ್ಲೆಂಡ್ ಸಂಪೂರ್ಣವಾಗಿ ಭಾರತದ ಮುಂದೆ ಶರಣಾಯಿತು.
ಮುಂಬೈ : ಮುಂಬೈನಲ್ಲಿ ಜಿಲೆಟಿನ್ ತುಂಬಿದ್ದ ಕಾರೊಂದು ಪತ್ತೆಯಾಗಿದ್ದು, ಸ್ಥಳಕ್ಕೆ ಬಾಂಬ್ ಸ್ಕ್ವಾಡ್ ಆಗಮಿಸಿ ಪರಿಶೀಲನೆ ನಡೆಸಿದೆ.
ಮುಂಬೈನ ಆಲ್ಟಾ ಮೌಂಟ್ ರಸ್ತೆಯ ಮುಂಬೈನ ಬಿಲಿಯನೇರ್ ಮುಖೇಶ್ ಅಂಬಾನಿ ಅವರ ನಿವಾಸ ಆಂಟಿಲಿಯಾ ಹೊರಗೆ 20 ಜೆಲಾಟಿನ್ ತುಂಡುಗಳನ್ನು ಹೊಂದಿರುವ ಅನುಮಾನಾಸ್ಪದ ಕಾರು ಗುರುವಾರ ಪತ್ತೆಯಾಗಿದೆ. ಈ ಹಿನ್ನೆಲೆ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಜಿಲೆಟಿನ್ ತುಂಬಿದ್ದ ಸ್ಕಾರ್ಪಿಯೋ ಕಾರು ಆಂಟಿಲಿಯಾ ಬಳಿ ಗುರುತಿಸಲಾಗಿದೆ.ಮಾಹಿತಿ ದೊರೆತ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು. ಸ್ಥಳದಲ್ಲಿಯೇ ಬಾಂಬ್ ಸ್ಕ್ವಾಡ್ ಅನ್ನು ಕರೆಯಲಾಯಿತು. ವಾಹನವನ್ನು ಪರಿಶೀಲಿಸಿದ ನಂತರ, ಅಧಿಕಾರಿಗಳು ಅದರೊಳಗೆ ಸುಮಾರು 20 ಜೆಲಾಟಿನ್ ತುಂಡುಗಳನ್ನು ವಶಪಡಿಸಿಕೊಂಡರು.
ನವದೆಹಲಿ: 20 ಜಿಲೆಟಿನ್ ಕಡ್ಡಿಗಳನ್ನು ಹೊಂದಿರುವ ಎಸ್ ಯುವಿ ಕಾರೊಂದು ಗುರುವಾರ ಸಂಜೆ ಮುಂಬೈನ ಬಿಲಿಯನೇರ್ ಮುಖೇಶ್ ಅಂಬಾನಿ ಅವರ ನಿವಾಸ ಆಂಟಿಲಿಯಾ ದಲ್ಲಿ ಪತ್ತೆಯಾಗಿದೆ.
ಜಿಲೆಟಿನ್ ಕಡ್ಡಿಗಳನ್ನು ಹೊಂದಿರುವ ಸ್ಕಾರ್ಪಿಯೋ ಪೆದ್ದರ್ ರಸ್ತೆಯ ಪ್ರಸಿದ್ಧ ಆಂಟಿಲಿಯಾ ಬಳಿ ಈ ಕಾರು ಪತ್ತೆಯಾಗಿದೆ ಎನ್ನಲಾಗಿದೆ. ಗುರುವಾರ ಸಂಜೆ ಅಂಬಾನಿಗಳ ಭದ್ರತಾ ವಿವರದಿಂದ ಈ ವಾಹನ ವು ಪತ್ತೆಯಾಯಿತು ಮತ್ತು ಕೂಡಲೇ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಮಾಹಿತಿ ತಿಳಿದ ಕೂಡಲೇ ಸ್ಥಳಕ್ಕೆ ಧಾವಿಸಿದ ಪೊಲೀಸರು ಎಸ್ ಯುವಿ ಯನ್ನು ತಪಾಸಣೆ ನಡೆಸುತ್ತಿದ್ದಾರೆ.
A suspicious vehicle was found on Carmichael Rd this evening under limits of Gamdevi Pstn. BDDS & other Police teams reached the spot immediately, examined & found some explosive material Gelatin inside. It’s not an assembled explosive device. Further investigation is going on.
ಲಖನೌ: ವೆಬ್ ಸೀರಿಸ್ ‘ತಾಂಡವ್’ ನಿರ್ಮಾಪಕರ ವಿರುದ್ಧ ನೋಯ್ಡಾದಲ್ಲಿ ದಾಖಲಾಗಿದ್ದ ಪ್ರತ್ಯೇಕ ಪ್ರಕರಣದಲ್ಲಿ ಅಮೆಜಾನ್ ಪ್ರೈಮ್ ಇಂಡಿಯಾ ಡೈರೆಕ್ಟರ್ ಅಪರ್ಣಾ ಪುರೋಹಿತ್ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನ ಅಲಹಾಬಾದ್ ಹೈಕೋರ್ಟ್ ತಿರಸ್ಕರಿಸಿದೆ.
ಮೂರು ದಿನಗಳ ಹಿಂದೆ ಲಖನೌದ ಹಜರತ್ ಗಂಜ್ ಪೊಲೀಸರು ದಾಖಲಿಸಿದ್ದ ಮತ್ತೊಂದು ಪ್ರಕರಣದಲ್ಲಿ ಮಾರ್ಚ್ 9ರ ತನಕ ಬಂಧನದಿಂದ ಅಪರ್ಣಾʼಗೆ ರಕ್ಷಣೆ ನೀಡಲಾಗಿತ್ತು.
ಆದರೆ, ಅಲಹಾಬಾದ್ ಹೈಕೋರ್ಟ್ʼನ ಏಕಸದಸ್ಯ ಪೀಠ, ನೊಯ್ಡಾ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ತಿರಸ್ಕರಿಸಿದೆ. ಅರ್ಜಿದಾರರ ನಡವಳಿಕೆಯು ನೆಲದ ಕಾನೂನಿಗೆ ಗೌರವವನ್ನು ನೀಡಿಲ್ಲ ಎಂದು ನ್ಯಾಯಮೂರ್ತಿ ಸಿದ್ಧಾರ್ಥ ತಮ್ಮ 20 ಪುಟಗಳ ಆದೇಶದಲ್ಲಿ ತಿಳಿಸಿದ್ದಾರೆ.
ಸಿನಿಮಾ ಡೆಸ್ಕ್ : ನಟಿ ಶ್ರೀಮುಖಿ ಟಾಲಿವುಡ್ ನ ಜನಪ್ರಿಯ ಆಂಕ್ ಕೂಡ ಒಬ್ಬರು, ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯವಾಗಿರುವ ನಟಿ ಶ್ರೀಮುಖಿ ತಮ್ಮ ಅಭಿಮಾನಿಗಳಿಗೆ ಮನರಂಜನೆ ನೀಡುತ್ತಲೇ ಬಂದಿದ್ದಾರೆ.
ಇತ್ತೀಚೆಗೆ ಇನ್ ಸ್ಟಾಗ್ರಾಂ ನಲ್ಲಿ ಲೈವ್ ಚಾಟ್ ನಡೆಸುವಾಗ ನೆಟ್ಟಿಗನೊಬ್ಬ ಶ್ರೀಮುಖಿ ಬಳಿ ಪ್ರಶ್ನೆಯೊಂದನ್ನು ಕೇಳಿದ್ದಾನೆ, ಅದಕ್ಕೆ ಶ್ರೀಮುಖಿ ಕೂಡ ಸರಿಯಾದ ಉತ್ತರವನ್ನೇ ನೀಡಿದ್ದಾನೆ.
ಹೌದು, ಬೆತ್ತಲೆ ಫೋಟೋ ಕಳುಹಿಸುವಂತೆ ನಟಿ ಶ್ರೀಮುಖಿ ನೆಟ್ಟಿಗನೊಬ್ಬ ಕೇಳಿದ್ದಾನೆ, ಅದಕ್ಕೆ ಉತ್ತರಿಸಿದ ನಟಿ ‘ ರಾಮ್ ಗೋಪಾಲ್ ವರ್ಮಾ ನಿರ್ದೇಶನದ ‘ನೇಕೆಡ್’ ಚಿತ್ರದ ಪೋಸ್ಟರ್ ಕಳುಹಿಸಿದ ತಕ್ಕ ಉತ್ತರ ನೀಡಿದ್ದಾರೆ.
ಅಹಮದಾಬಾದ್: ನರೇಂದ್ರ ಮೋದಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆಯುತ್ತಿರುವ ಪಿಂಕ್ ಬಾಲ್ ಟೆಸ್ಟ್ ಪಂದ್ಯದ ಭಾರತ ತಂಡ ಇತಿಹಾಸ ನಿರ್ಮಿಸಿದೆ. ಎರಡನೇ ದಿನದಂದು ಟೀಂ ಇಂಡಿಯಾ 10 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ.
ಟೀಂ ಇಂಡಿಯಾ ಪರ ಬೌಲಿಂಗ್ನಲ್ಲಿ ಮಿಂಚಿದ ಅಕ್ಷರ್ ಪಟೇಲ್ 2 ಇನ್ನಿಂಗ್ಸ್ ಸೇರಿ 11 ವಿಕೆಟ್ ಪಡೆದರೆ, ಅಶ್ವಿನ್ 7 ವಿಕೆಟ್ ಪಡೆದು ಮಿಂಚಿದರು. ಇನ್ನು ಇಂಗ್ಲೆಂಡ್ ನೀಡಿದ 49 ರನ್ಗಳ ಸುಲಭ ಗುರಿಯನ್ನ ಟೀಂ ಇಂಡಿಯಾ ಯಾವುದೇ ವಿಕೆಟ್ ನಷ್ಟವಿಲ್ಲದೆ ಬೆನ್ನತ್ತಿತ್ತು. ರೂಟ್ ಓವರ್ನಲ್ಲಿ 2 ಬೌಂಡರಿ ಹಾಗೂ 1 ಭರ್ಜರಿ ಸಿಕ್ಸರ್ನೊಂದಿಗೆ ರೋಹಿತ್ ಶರ್ಮಾ ಭಾರತಕ್ಕೆ ಗೆಲುವು ತಂದುಕೊಟ್ಟರು. ಹಗಲು-ರಾತ್ರಿ ನಡೆಯುತ್ತಿರುವ ಪಿಂಕ್ ಬಾಲ್ ಟೆಸ್ಟ್ ಪಂದ್ಯದ ಎರಡನೇ ದಿನದಂದು ವಿಕೆಟ್ ಮಳೆಯ ಮಧ್ಯೆ ಇಂಗ್ಲೆಂಡ್ ಸಂಪೂರ್ಣವಾಗಿ ಭಾರತದ ಮುಂದೆ ಶರಣಾಯಿತು.
ಚಾಮರಾಜನಗರ : ತಮಿಳುನಾಡಿನಲ್ಲಿ ಕಾವೇರಿ ನದಿ ಜೋಡಣೆ ಯೋಜನೆಯನ್ನು ವಿರೋಧಿಸಿ ಇಂದು ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಪ್ರತಿಭಟನೆ ನಡೆಸಿದ್ದಾರೆ.
ನಂತರ ಸುದ್ದಿಗಾರರ ಜೊತೆ ಮಾತನಾಡಿದ ವಾಟಾಳ್ ನಾಗರಾಜ್ ಪ್ರಧಾನಿ ಮೋದಿ ವಿರುದ್ಧ ವಾಗ್ಧಾಳಿ ನಡೆಸಿದ್ದಾರೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಓರ್ವ ಬಕಾಸುರ, ಅವರಿಗೆ ತಮಿಳುನಾಡಿನಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರುವ ಉದ್ದೇಶವಿದೆ. ಹಾಗಾಗಿ ತಮಿಳುನಾಡಿಗೆ ಸಾವಿರಾರು ಕೋಟಿ ರೂ ಹಣ ಬಿಡುಗಡೆ ಮಾಡುತ್ತಾರೆ ಎಂದು ಕಿಡಿಕಾರಿದರು.
ತಮಿಳುನಾಡು ಸರ್ಕಾರ ಕೂಡ ಆರ್ ಎಸ್ ಎಸ್,ಪ ಬಿಜೆಪಿ ಸರ್ಕಾರದ ಏಜೆಂಟ್ ಎಂದು ಕಿಡಿಕಾರಿದ ವಾಟಾಳ್ , ಪಶ್ಚಿಮ ಬಂಗಾಳವನ್ನು ತುಳಿದು ಹಾಕಲು ಮೋದಿ ಯೋಜನೆ ರೂಪಿಸಿದ್ದಾರೆ ಎಂದರು. ಗುಜರಾತ್ ನ ಕ್ರಿಕೆಟ್ ಸ್ಟೇಡಿಯಂಗೆ ಮೋದಿಯವರ ಹೆಸರಿಟ್ಟ ಹಿನ್ನೆಲೆ ಕ್ರಿಕೆಟ್ ಸ್ಟೇಡಿಯಂಗೆ ಮಹಾತ್ಮಾ ಗಾಂಧಿ ಎಂದು ಹೆಸರಿಡಬೇಕಿತ್ತು ಎಂದು ಹೇಳಿದರು.
ಡಿಜಿಟಲ್ ಡೆಸ್ಕ್ : ತಮಿಳುನಾಡಿನ ಶಿವಕಾಶಿಯಲ್ಲಿನ ಪಟಾಕಿ ಕಾರ್ಖಾನೆಯಲ್ಲಿ ಗುರುವಾರ ಸಂಭವಿಸಿದ ಸ್ಫೋಟದಲ್ಲಿ ಕನಿಷ್ಠ ಐದು ಜನರು ಸಾವನ್ನಪ್ಪಿದ್ದಾರೆ ಮತ್ತು ಹಲವಾರು ಮಂದಿ ಗಾಯಗೊಂಡಿದ್ದಾರೆ.
ತಮಿಳುನಾಡಿನ ಶಿವಕಾಶಿಯಲ್ಲಿನ ಕಲೈಯಾರ್ಕುರಿಚಿ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ ಸಂಭವಿಸಿದ್ದು, ಹಲವಾರು ಕಾರ್ಮಿಕರು ತೀವ್ರವಾಗಿ ಗಾಯಗೊಂಡಿದ್ದಾರೆ.
ಸ್ಫೋಟದ ನಂತರ ಅಗ್ನಿಶಾಮಕ ದಳದವರು ಹಾಗೂ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ, ಗಾಗಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಚಾಮರಾಜನಗರ: ತಮಿಳುನಾಡು ಕಾವೇರಿ ಯೋಜನೆ ಖಂಡಿಸಿ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಪ್ರತಿಭಟನೆ ನಡೆಸಿದ್ದು, 27 ರಂದು ಬೆಂಗಳೂರಿನಲ್ಲಿ ಕನ್ನಡಪರ ಸಂಘಟನೆಗಳ ಸಭೆ ಕರೆಯಲಾಗಿದೆ. ಅಷ್ಟರೊಳಗೆ ತಡೆಹಿಡಿಯದಿದ್ದಲ್ಲಿ ಕರ್ನಾಟಕ ಬಂದ್ಗೆ ಮಾಡಬೇಕಾಗುತ್ತೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಇಂದು ಚಾಮರಾಜನಗರದ ಜಿಲ್ಲಾಡಳಿತ ಭವನದ ಮುಂದೆ ಪ್ರತಿಭಟನೆ ನಡೆಸಿದ ವಾಟಾಳ್ ನಾಗರಾಜ್, “ಜಯಲಲಿತಾ ಸಾವನ್ನಪ್ಪಿದ ನಂತರ ತಮಿಳುನಾಡು ಸರ್ಕಾರ ಬಿಜೆಪಿ ಏಜೆಂಟ್ ಆಗಿದ್ದು, ಕೇಂದ್ರದ ಮೋದಿ ಸರ್ಕಾರ ಈ ಯೋಜನೆಗೆ 6,800 ಕೋಟಿ ರೂ. ಬಳುವಳಿ ನೀಡಿದೆ. ಇನ್ನು ರಾಜ್ಯ ಗುಪ್ತಚರ ಇಲಾಖೆ ನದಿ ಜೋಡಣೆ ವಿಚಾರ ಮಾಹಿತಿ ಕಲೆ ಹಾಕುವಲ್ಲಿ ಸಂಪೂರ್ಣ ವಿಫಲವಾಗಿದೆ” ಎಂದರು.
ಇದೇ ಮುಖ್ಯಮಂತ್ರಿ ಯಡಿಯೂರಪ್ಪ ಅವ್ರ ವಿರುದ್ಧ ಹರಿಹಾಯ್ದ ವಾಟಾಳ್ ನಾಗರಾಜ್, “ಮುಖ್ಯಮಂತ್ರಿಯಾಗಿ ಉಳಿಯಲು ಯಡಿಯೂರಪ್ಪನವ್ರಿಗೆ ನೈತಿಕತೆ ಇಲ್ಲ. ಇನ್ನು ಇದೇ 27 ರಂದು ಬೆಂಗಳೂರಿನಲ್ಲಿ ಕನ್ನಡಪರ ಸಂಘಟನೆಗಳ ಸಭೆ ಕರೆಯಲಾಗಿದೆ. ಅಷ್ಟರೊಳಗೆ ತಡೆಹಿಡಿಯದಿದ್ದಲ್ಲಿ ಕರ್ನಾಟಕ ಬಂದ್ಗೆ ತೀರ್ಮಾನಿಸುತ್ತೇವೆ ಎಂದಿದ್ದಾರೆ.
ಮುಂಬೈ: ಕೊರೊನಾ ಭೀತಿ ಹಿನ್ನೆಲೆ ಫೆ.26 ರಿಂದ ಓವಲ್ ಮೈದಾನವನ್ನು ಅನಿರ್ದಿಷ್ಟಾವಧಿವರೆಗೆ ಮುಚ್ಚಲು ಬಿಎಂಸಿ ತೀರ್ಮಾನಿಸಿದೆ.
ಬಹುತೇಕ ದಿನಗಳಲ್ಲಿ ಕ್ರಿಕೆಟ್, ಫುಟ್ಬಾಲ್ ಪಂದ್ಯಗಳು ನಡೆಯುತ್ತಿದ್ದ ಓವಲ್ ಮೈದಾನವನ್ನು ಅನಿರ್ದಿಷ್ಟಾವಧಿವರೆಗೆ ಮುಚ್ಚಲು ಬಿಎಂಸಿ ತೀರ್ಮಾನಿಸಿದೆ.
ದಕ್ಷಿಣ ಮುಂಬೈನ ಓವಲ್ ಮೈದಾನವನ್ನು ನಾಳೆಯಿಂದ ಬಂದ್ ಮಾಡಲಾಗುತ್ತಿದ್ದು, ಕ್ರೀಡೆಗೆ ಅತಿಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರುತ್ತಿರುವುದರಿಂದ, ಕೊರೊನಾ ಭೀತಿ ಹಿನ್ನೆಲೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದ್ದು, .ಮುಂದಿನ ಆದೇಶದವರೆಗೂ ಇಲ್ಲಿಗೆ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಲಾಗಿದೆ ಎಂದು ಬಿಎಂಸಿ ಸ್ಪಷ್ಟಪಡಿಸಿದೆ.
ಬೆಂಗಳೂರು : ಇಂದು ಹೊಸಕೋಟೆ ಕ್ಷೇತ್ರದ ಪಕ್ಷೇತರ ಶಾಸಕ ಶರತ್ ಬಚ್ಚೇಗೌಡ ಕಾಂಗ್ರೆಸ್ ಪಕ್ಷದ ಸಹ ಸದಸ್ಯರಾಗಿ ಸೇರ್ಪಡೆಗೊಂಡಿದ್ದು, ವೇಳೆ ಮಾಜಿ ಸಿಎಂ ಸಿದ್ದರಾಮಯ್ಯ ಪರ ಅಭಿಮಾನಿಗಳು ಘೋಷಣೆ ಕೂಗಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ಎದುರಲ್ಲೇ ಮುಂದಿನ ಸಿಎಂ ಸಿದ್ದರಾಮಯ್ಯ ಅವರಿಗೆ ಜೈ ಎಂದು ಘೋಷಣೆ ಕೂಗಿದ್ದಾರೆ.
ಸಿದ್ದರಾಮಯ್ಯನವರ ಸರ್ಕಾರಿ ನಿವಾಸದಲ್ಲಿ ಇಂದು ಕಾರ್ಯಕ್ರಮ ಆಯೋಜಿಸಲಾಗಿತ್ತು, ಈ ಸಂದರ್ಭದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಮಾಜಿ ಸಚಿವ ರಮೇಶ್ ಕುಮಾರ್, ಕೃಷ್ಣ ಭೈರೇಗೌಡ ಮತ್ತಿತರರು ಇದ್ದಾರೆ. ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಭಾಷಣ ಮಾಡಿ ಮುಗಿಸಿದ ಸಂದರ್ಭದಲ್ಲಿ ಅಭಿಮಾನಿಗಳು ಮುಂದಿನ ಸಿಎಂ ಸಿದ್ದರಾಮಯ್ಯ ಎಂದು ಘೋಷಣೆ ಕೂಗಿದ್ದು, ಬಳಿಕ ಮುಖಂಡರು ಹಾಗೆಲ್ಲಾ ಘೋಷಣೆ ಕೂಗಬಾರದು ಎಂದು ಅಭಿಮಾನಿಗಳನ್ನು ತಡೆಹಿಡಿದಿದ್ದಾರೆ.
ಬೆಂಗಳೂರು: ಹೊಸಕೋಟೆ ಕ್ಷೇತ್ರದ ಪಕ್ಷೇತರ ಶಾಸಕ ಶರತ್ ಬಚ್ಚೇಗೌಡ ಕಾಂಗ್ರೆಸ್ ಪಕ್ಷದ ಸಹ ಸದಸ್ಯರಾಗಿ ಸೇರ್ಪಡೆಯಾಗುವ ಕಾರ್ಯಕ್ರಮ ನಡೆಯುತ್ತಿತ್ತು. ಇದ್ರಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಉಪಸ್ಥಿತಿಯಲ್ಲೇ ಸಿದ್ದರಾಮಯ್ಯ ಅಭಿಮಾನಿಗಳು, ʼಮುಂದಿನ ಸಿಎಂ ಸಿದ್ದರಾಮಯ್ಯ ಅವರಿಗೆ ಜೈʼ ಎಂದು ಘೋಷಣೆ ಕೂಗಿದ್ದಾರೆ.
ಈ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯನ್ವರು ಭಾಷಣ ಮಾಡಿ ಮುಗಿಸುತ್ತಿದ್ದಂತೆ, ಅಭಿಮಾನಿಗಳು ಘೋಷಣೆ ಕೂಗಲು ಶುರು ಮಾಡಿದ್ರು. ಆದ್ರೆ, ಸಿದ್ದರಾಮಯ್ಯ ಕೂಡಲೇ ಅಭಿಮಾನಿಗಳನ್ನ ತಡೆದು, ಏ ಸುಮ್ಮನಿರಿ. ಆಗೆಲ್ಲಾ ಕೂಗಬಾರದು ಎಂದರು. ಆ ಬಳಿಕ ವೇದಿಕೆಯಲ್ಲಿದ್ದ ಎಲ್ಲ ನಾಯಕರೂ ಘೋಷಣೆ ಕೂಗದಂತೆ ತಡೆದರು.
ಅಂದ್ಹಾಗೆ, ಕಾಂಗ್ರೆಸ್ ಪಕ್ಷದಲ್ಲಿ ಮುಂದಿನ ಸಿಎಂ ಯಾರು ಅನ್ನೋ ಬಗ್ಗೆ ತೀವ್ರ ಚರ್ಚೆವಾಗ್ತಿದೆ. ಹಲವು ನಾಯಕರು ಸಿದ್ದರಾಮಯ್ಯ ಮುಂದಿನ ಸಿಎಂ ಎಂದು ಹೇಳಿದ್ರೆ, ಮತ್ತೆ ಹಲವರು ಡಿ.ಕೆ. ಶಿವಕುಮಾರ್ ಎನ್ನುತ್ತಿದ್ರು. ಈ ಬೆಳವಣಿಗೆಗಳ ಬೆನ್ನಲ್ಲೇ ಯಾರೂ ಇಂತಹ ಹೇಳಿಕೆ ನೀಡಬಾರದು ಎಂದು ಕಾಂಗ್ರೆಸ್ ಶಿಸ್ತು ಸಮಿತಿ ನೋಟಿಸ್ ಕೂಡ ನೀಡಿತ್ತು.
ಡಿಜಿಟಲ್ ಡೆಸ್ಕ್: ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಗುರುವಾರ ಟೆಸ್ಟ್ ಕ್ರಿಕೆಟ್ʼನಲ್ಲಿ ಐತಿಹಾಸಿಕ ಸಾಧನೆ ಮಾಡಿದ್ದು, 400 ವಿಕೆಟ್ʼಗಳನ್ನ ಗಳಿಸಿದ ನಾಲ್ಕನೇ ಭಾರತೀಯ ಎನ್ನುವ ಹೆಗ್ಗಳಿಗೆ ಪಾತ್ರರಾಗಿದ್ದಾರೆ. ಅಲ್ಲದೇ ಈ ಸಾಧನೆ ಮಾಡಿದ 2ನೇ ವೇಗದ ಬೌಲರ್ (ಶ್ರೀಲಂಕಾದ ಮುತ್ತಯ್ಯ ಮುರಳೀಧರನ್ ನಂತರ) ಬೌಲರ್ ಎನ್ನುವ ಕೀರ್ತಿಗೆ ಭಾಜನರಾಗಿದ್ದಾರೆ.
ಅಶ್ವಿನ್ ತಮ್ಮ 77ನೇ ಟೆಸ್ಟ್ʼನಲ್ಲಿ 400ನೇ ವಿಕೆಟ್ ಕಬಳಿಸಿದ್ದು, ರಿಚರ್ಡ್ ಹ್ಯಾಡ್ಲಿ (80 ಟೆಸ್ಟ್), ಡೇಲ್ ಸ್ಟೇನ್ (80 ಟೆಸ್ಟ್), ರಂಗನಾ ಹೆರಾತ್ (84 ಟೆಸ್ಟ್) ಮತ್ತು ಅನಿಲ್ ಕುಂಬ್ಳೆ (84 ಟೆಸ್ಟ್) ಅವರಂತೆ ದಾಖಲೆಗೆ ಸರಿಸಾಟಿಯಾಗಿ ನಿಂತಿದ್ದಾರೆ.
ಇಂಗ್ಲೆಂಡ್ ವಿರುದ್ಧ ಅಹಮದಾಬಾದ್ನಲ್ಲಿ ನಡೆಯುತ್ತಿರುವ ಮೂರನೇ ಹಾಗೂ ಪಿಂಕ್ ಬಾಲ್ ಟೆಸ್ಟ್ ಪಂದ್ಯದಲ್ಲಿ ಆರ್. ಅಶ್ವಿನ್ ಈ ಮಹಾನ್ ಸಾಧನೆ ಮಾಡಿದ್ದಾರೆ.
ಭಾರತದ ಪರ ಅತಿ ಹೆಚ್ಚು ವಿಕೆಟ್ ಕಬಳಿಸಿದ ಬೌಲರ್ಗಳ ಪಟ್ಟಿಯಲ್ಲಿ ಮಾಜಿ ಲೆಗ್ ಸ್ಪಿನ್ ದಿಗ್ಗಜ ಅನಿಲ್ ಕುಂಬ್ಳೆ ಮೊದಲ ಸ್ಥಾನದಲ್ಲಿದ್ದು, 619 ವಿಕೆಟ್ಗಳನ್ನು ಕಬಳಿಸಿದ್ದಾರೆ. ಎರಡನೇ ಸ್ಥಾನದಲ್ಲಿರುವ ಮಾಜಿ ದಿಗ್ಗಜ ಕಪಿಲ್ ದೇವ್ 434 ಮತ್ತು ಮೂರನೇ ಸ್ಥಾನದಲ್ಲಿರುವ ಹರಭಜನ್ ಸಿಂಗ್ 417 ವಿಕೆಟ್ಗಳನ್ನ ಪಡೆದಿದ್ದಾರೆ.
ಆರ್. ಅಶ್ವಿನ್ ತಮ್ಮ 77ನೇ ಟೆಸ್ಟ್ ಪಂದ್ಯದ 144ನೇ ಇನ್ನಿಂಗ್ಸ್ನಲ್ಲಿ ಇಂಗ್ಲೆಂಡ್ ಬ್ಯಾಟ್ಸ್ಮನ್ ಜೋಫ್ರಾ ಆರ್ಚರ್ ವಿಕೆಟ್ ಪಡೆಯುವ ಮೂಲಕ 400 ವಿಕೆಟ್ಗಳ ದಾಖಲೆ ಬರೆದರು.
ಈ ಆಫ್ ಸ್ಪಿನ್ನರ್ 107 ಇನ್ನಿಂಗ್ಸ್ ಗಳಲ್ಲಿ 2,626 ರನ್ ಗಳನ್ನು ಬಾರಿಸಿ, ಐದು ಶತಕಗಳನ್ನು ಬಾರಿಸಿ ಭಾರತೀಯ ಟೆಸ್ಟ್ ತಂಡಕ್ಕೆ ಪ್ರಮುಖ ಪಾತ್ರವಹಿಸಿದ್ದರು.
ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಸರಣಿಯಲ್ಲಿ ಅಶ್ವಿನ್ ಅವರು ಚೆನ್ನೈನಲ್ಲಿ ನಡೆಯುತ್ತಿರುವ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಅದ್ಭುತ ಆಲ್ ರೌಂಡ್ ಪ್ರದರ್ಶನ ನೀಡಿ ಭಾರತಕ್ಕೆ 317 ರನ್ʼಗಳ ಗೆಲುವಿನ ಗುರಿ ನೀಡಿದರು.
ಶ್ರೀನಗರ : ಜಮ್ಮುವಿನಲ್ಲಿ ನಡೆಯುತ್ತಿರುವ ಸೇನಾ ನೇಮಕಾತಿ ರ್ಯಾಲಿಯಲ್ಲಿ ದಿನನಿತ್ಯ ಕನಿಷ್ಠ 2,000 ಯುವಕರು ಉತ್ಸಾಹದಿಂದ ಪಾಲ್ಗೊಳ್ಳುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
“ಜಮ್ಮುವಿನ ಸುದೀರ್ಘ ಲಾಕ್ ಡೌನ್ ಮತ್ತು ಕೋವಿಡ್-19 ನಿರ್ಬಂಧಗಳ ನಂತರ ಈ ಪ್ರದೇಶದಲ್ಲಿ ಇದೇ ಮೊದಲ ಬಾರಿಗೆ ಸೇನಾ ನೇಮಕಾತಿ ರ್ಯಾಲಿಯನ್ನು ಹಮ್ಮಿಕೊಳ್ಳಲಾಗಿದೆ. ಯುವಜನರಿಂದ ಅಭೂತಪೂರ್ವ ಪ್ರತಿಕ್ರಿಯೆ ಕಂಡು ಬಂದಿದೆ ಮತ್ತು ಸುಮಾರು 40,000 ಅಭ್ಯರ್ಥಿಗಳು ಭಾರತೀಯ ಸೇನೆಗೆ ಸೇರಲು ಆನ್ಲೈನ್ ನಲ್ಲಿ ನೋಂದಣಿ ಮಾಡಿಕೊಂಡಿದ್ದಾರೆ” ಎಂದು ಪಿಆರ್ ಒ ಡಿಫೆನ್ಸ್ ಜಮ್ಮುವಿನ ಲೆಫ್ಟಿನೆಂಟ್ ಕರ್ನಲ್ ದೇವಿಂದರ್ ಆನಂದ್ ಹೇಳಿದ್ದಾರೆ.
‘ಪ್ರತಿದಿನ 2 ಸಾವಿರ ಯುವಕರು ರ್ಯಾಲಿಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಸುಲಭವಾಗಿ ನಡೆಯುವಂತೆ ಸ್ಪರ್ಧಿಗಳನ್ನು ಜಿಲ್ಲಾವಾರುಗಳಾಗಿ ವಿಂಗಡಿಸಿದ್ದೇವೆ’ ಎಂದರು.
ಡಿಜಿಟಲ್ ಡೆಸ್ಕ್ : ಮಾರ್ಚ್ 1ರಿಂದ ಹಲವು ನಿಯಮಗಳು ಬದಲಾಗಲಿದ್ದು, ಇದು ಸಾಮಾನ್ಯ ಜನರ ಜೀವನದ ಮೇಲೆ ಪರಿಣಾಮ ಬೀರಲಿದೆ. ಕೆಲವು ಬ್ಯಾಂಕ್ʼಗಳಿಗೆ ಸಂಬಂಧಿಸಿದ ನಿಯಮಗಳು ಬದಲಾಗುತ್ತಿವೆ. ಬ್ಯಾಂಕ್ ಖಾತೆಗಳಿಗೆ ಸಂಬಂಧಿಸಿದ ಬದಲಾವಣೆಗಳನ್ನ ಸರಿಯಾದ ಸಮಯಕ್ಕೆ ಮಾಡದಿದ್ರೆ, ನಿಮ್ಮ ಖಾತೆಯನ್ನೂ ಮುಚ್ಚಬಹುದು. ಈ ಬಗ್ಗೆ ಬ್ಯಾಂಕ್ʼಗಳು ತನ್ನ ಗ್ರಾಹಕರಿಗೆ ಎಚ್ಚರಿಕೆ ನೀಡಿದೆ.
ಇ-ವಿಜಯಾ ಮತ್ತು ಇ-ದೇನಾ ಸಂಸ್ಥೆಯ ಐಎಫ್ ಎಸ್ ಸಿ ಕೋಡ್ʼಗಳು 2021ರ ಮಾರ್ಚ್ 1ರಿಂದ ಮುಚ್ಚಲಾಗುವುದು ಎಂದು ಬ್ಯಾಂಕ್ ಆಫ್ ಬರೋಡಾ ತನ್ನ ಗ್ರಾಹಕರಿಗೆ ಎಚ್ಚರಿಕೆ ನೀಡಿದೆ. ಇನ್ನು ಹೊಸ IFSC ಕೋಡ್ ಪಡೆಯುವುದು ಕೂಡ ತುಂಬಾ ಸುಲಭ ಎಂದಿದೆ. ಅದ್ರಂತೆ, ಗ್ರಾಹಕರು ಹೊಸ ಕೋಡ್ʼಗಳಿಗಾಗಿ ಬ್ಯಾಂಕಿನ ವೆಬ್ ಸೈಟ್ʼಗೆ ಹೋಗಿ ಅಥವಾ ಮೆಸೇಜ್ʼಗೆ ಮೊರೆ ಹೋಗುವಂತೆ ಗ್ರಾಹಕನಿಗೆ ಸೂಚಿಸಿದ್ದಾರೆ. ಇದಕ್ಕೆ 18002581700 ಟೋಲ್ ಫ್ರೀ ನಂಬರ್ ಕೂಡ ಬ್ಯಾಂಕ್ ನೀಡಿದೆ. ಹೊಸ IFSC ಕೋಡ್ʼಗಾಗಿ ಬ್ಯಾಂಕ್ʼನಿಂದ 8422009988 ಮೊಬೈಲ್ ಸಂಖ್ಯೆಯನ್ನ ನೀಡಲಾಗಿದೆ.
ಈ ಬ್ಯಾಂಕ್ʼಗಳ ನಿಯಮಗಳಲ್ಲಿ ಬದಲಾವಣೆ..!
ಬ್ಯಾಂಕ್ ಆಫ್ ಬರೋಡಾ ಅಲ್ಲದೆ ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್ ಬಿ) ಐಎಫ್ ಎಸ್ ಸಿ ಗೆ ಸಂಬಂಧಿಸಿದ ನಿಯಮಗಳಲ್ಲಿ ಬದಲಾವಣೆ ಮಾಡುತ್ತಿದೆ. ಪಂಜಾಬ್ ನ್ಯಾಷನಲ್ ಬ್ಯಾಂಕ್ ತನ್ನ ಸಹವರ್ತಿ ಬ್ಯಾಂಕ್ʼಗಳ ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್ ಮತ್ತು ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾದ ಹಳೆಯ ಚೆಕ್ ಬುಕ್ ಮತ್ತು IFSC ಅಥವಾ MICR ಕೋಡ್ʼನ್ನ ಬದಲಿಸಲಿದೆ. ಅದ್ರಂತೆ, ಮಾರ್ಚ್ 31ರೊಳಗೆ ಗ್ರಾಹಕರಿಗೆ ಹೊಸ ಕೋಡ್ʼಗಳನ್ನ ಪಡೆಯಿರಿ, ಇಲ್ಲದಿದ್ದರೆ ಮುಂದೆ ಸಮಸ್ಯೆ ಉಂಟಾಗಬಹುದು. ಮಾರ್ಚ್ 31ರ ವರೆಗೆ ಹೊಸ IFSC ಕೋಡ್ ಮತ್ತು ಚೆಕ್ ಬುಕ್ ಪಡೆಯಲು ಪಿಎನ್ ಬಿ ಗ್ರಾಹಕರಿಗೆ ಒಂದು ಟ್ವೀಟ್ ಕಳುಹಿಸಿದೆ.
ಮಾರ್ಚ್ʼನಲ್ಲಿ ಅನೇಕ ರಜೆಗಳು..!
ರಜಾ ದಿನಗಳ ಬಗ್ಗೆ ರಿಸರ್ವ್ ಬ್ಯಾಂಕ್ ಕ್ಯಾಲೆಂಡರ್ ಬಿಡುಗಡೆ ಮಾಡಿದೆ. ಈ ಹಿನ್ನೆಲೆಯಲ್ಲಿ ಬ್ಯಾಂಕಿನ ಪ್ರಮುಖ ಕೆಲಸಗಳನ್ನ ನಿರ್ವಹಿಸಬೇಕಾದವರು ರಜಾ ದಿನದ ಈ ದಿನಗಳ ಬಗ್ಗೆ ಸಂಪೂರ್ಣ ನಿಗಾ ವಹಿಸಬೇಕು. ಮಾರ್ಚ್ 5, 11 ಮಾರ್ಚ್, 22 ಮಾರ್ಚ್, 29 ಮಾರ್ಚ್ ಮತ್ತು 30 ಮಾರ್ಚ್ ನಲ್ಲಿ ರಜೆಗಳು ಇರುತ್ತವೆ. ಇದರ ಹೊರತಾಗಿ ಮಾರ್ಚ್ ತಿಂಗಳಲ್ಲಿ 4 ಭಾನುವಾರ ಮತ್ತು 2 ಶನಿವಾರಗಳು ಇರುವುದರಿಂದ ಯಾವುದೇ ಅಧಿಕೃತ ಕೆಲಸ ಇರುವುದಿಲ್ಲ. ಒಟ್ಟಾರೆ ಮಾರ್ಚ್ 11 ದಿನದ ರಜೆಯಾಗಿದ್ದು, ಮಾರ್ಚ್ 1 ರಿಂದ 5ರವರೆಗೆ ಜನರು ಎಲ್ಲಾ ಅಗತ್ಯ ಕೆಲಸಗಳನ್ನು ಪೂರ್ಣಗೊಳಿಸಬೇಕು. ಹೋಳಿ ಮತ್ತು ಮಹಾಶಿವರಾತ್ರಿಯೂ ಮಾರ್ಚ್ ತಿಂಗಳು ಬರೋದ್ರಿಂದ ಆ ದಿನವೂ ರಜೆ ಇರುತ್ತದೆ.
ಆಧಾರ್-ಖಾತೆ ಲಿಂಕ್ ಮಾಡುವುದು..!
2021ರ ಮಾರ್ಚ್ 31ರೊಳಗೆ ಎಲ್ಲ ಬ್ಯಾಂಕ್ʼಗಳು ತಮ್ಮ ಆಧಾರ್ ಕಾರ್ಡ್ʼನೊಂದಿಗೆ ಲಿಂಕ್ ಮಾಡುವುದು ಅಗತ್ಯ ಎಂದು ಹಣಕಾಸು ಸಚಿವಾಲಯ ಸ್ಪಷ್ಟಪಡಿಸಿದೆ. ಹಣಕಾಸು ಸೇರ್ಪಡೆಗೆ ಆಧಾರ್ ಮತ್ತು ಬ್ಯಾಂಕ್ ಖಾತೆಗಳನ್ನು ಲಿಂಕ್ ಮಾಡುವುದು ಮತ್ತು ಸರ್ಕಾರದ ಯೋಜನೆಗಳ ಪ್ರಯೋಜನವನ್ನ ಜನರಿಗೆ ನೀಡಲು ಅಗತ್ಯ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಮಾರ್ಚ್ 31ರವರೆಗೆ ಎಲ್ಲ ಬ್ಯಾಂಕ್ ಖಾತೆಗಳಿಗೆ ಮತ್ತು ಆಧಾರ್ ಲಿಂಕ್ ಮಾಡಬೇಕು ಎಂದು ಹಣಕಾಸು ಸಚಿವಾಲಯ ಸೂಚನೆ ನೀಡಿದೆ.
ನವದೆಹಲಿ: ಭಾರತೀಯ ರೈಲ್ವೆ ತನ್ನ ಪ್ರಯಾಣಿಕರ ಪ್ರಯಾಣದ ಅನುಭವವನ್ನ ಸ್ಮರಣೀಯ ಮತ್ತು ಆರಾಮದಾಯಕ ಆಗಿಸೋಕೆ ಕಾಲಕಾಲಕ್ಕೆ ಹೊಸ ಸೌಲಭ್ಯಗಳನ್ನ ತರುತ್ತಿದೆ. ಸಧ್ಯ ರೈಲ್ವೇ ವಿಸ್ಟಾಡೋಮ್ ಬೋಗಿಗಳನ್ನ ಪರಿಚಯಿಸಿದ್ದು, ಇದು ಯುರೋಪಿಯನ್ ಶೈಲಿಯಲ್ಲಿ ತಯಾರಾಗಿದೆ. ಇದರಲ್ಲಿ ಪ್ರಯಾಣಿಕರು ಆರಾಮದಾಯಕವಷ್ಟೇ ಅಲ್ಲ ಹೈಟೆಕ್ ಪ್ರಯಾಣವನ್ನೂ ಆನಂದಿಸ್ಬೋದು.
ಹೊಸ ವಿಸ್ಟಾಡೊಮ್ʼನ್ನ ಚೆನ್ನೈನ ಇಂಟಿಗ್ರಲ್ ಕೋಚ್ ಫ್ಯಾಕ್ಟರಿ (ಐಸಿಎಫ್) ನಿರ್ಮಿಸಿದ್ದು, ವಿಸ್ಟಾಡೊಮ್ ಪ್ರವಾಸಿ ತರಬೇತುದಾರರು ಯುರೋಪಿಯನ್ ಶೈಲಿಯ ತರಬೇತುದಾರರಾಗಿದ್ದಾರೆ. ಪ್ರಯಾಣಿಕರ ಅನುಕೂಲಕ್ಕಾಗಿ ತಾಂತ್ರಿಕವಾಗಿ ಸುಧಾರಿತ ಸೌಲಭ್ಯಗಳನ್ನ ಒದಗಿಸಿದ್ದು, ರೈಲು ಪ್ರಯಾಣದ ಸಮಯದಲ್ಲಿ ವಿಹಂಗಮ ನೋಟಗಳನ್ನ ಅನುಭವಿಸ್ಬೋದು.
ಈ ಹೊಸ ಸೌಲಭ್ಯದ ವೀಡಿಯೋವನ್ನ ರೈಲು ಸಚಿವಾಲಯ ಟ್ವೀಟ್ ಮಾಡಿದ್ದು, ವಿಸ್ಟಾಡೋಮ್ ಕೋಚ್ʼಗಳು ಅನೇಕ ಪ್ರಯಾಣಿಕರ ಪ್ರಯಾಣದ ಅನುಭವವನ್ನ ಶ್ರೀಮಂತಗೊಳಿಸಿವೆ. ವಿಸ್ಟಾಡೋಮ್ ಕೋಚ್ʼಗಳಲ್ಲಿ ಪ್ರಯಾಣವನ್ನ ಆನಂದಿಸಿ ಮತ್ತು ನಿಮ್ಮ ಪ್ರಯಾಣದ ಅನುಭವವನ್ನ ಸ್ಮರಣೀಯವನ್ನಾಗಿಸಿಕೊಳ್ಳಿ. ಎಂದಿದೆ.
Take a tour of Vistadome Coach!!!
Vistadome Coaches have enriched travel experiences of many travellers. Enjoy the ride in Vistadome coaches & make your travel experience a memorable one. pic.twitter.com/FqWGUT3MZm
ಬೆಂಗಳೂರು: ಪಂಚಮಸಾಲಿ ಸಮುದಾಯವನ್ನ ಪ್ರವರ್ಗ 2ಎ ಸೇರಿಸಬೇಕು ಎಂದು ಆಗ್ರಹಿಸಿ ಬಸವ ಜಯಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಹೋರಾಟ ಮುಂದುವರೆದಿದೆ. ಈ ಮಧ್ಯೆ ರಾಜ್ಯ ಸರ್ಕಾರ ಶಾಕ್ ಪಂಚಮಸಾಲಿ ಸಮುದಾಯಕ್ಕೆ ಬಿಗ್ ಶಾಕ್ ನೀಡಿದ್ದು, ಮೀಸಲಾತಿ ಕಲ್ಪಿಸಲು ಸಾಧ್ಯವಿಲ್ಲ ಎಂದು ಸಚಿವರ ಮೂಲಕ ಸ್ಪಷ್ಟ ಸಂದೇಶ ರವಾನಿಸಿದೆ.
ಹೌದು, ಸರ್ಕಾರದ ನಿಲುವನ್ನ ಧರಣಿ ನಿರತ ಮುಖಂಡರಿಗೆ ತಿಳಿಸಿದ್ದು, ನೀವು ಪಟ್ಟು ಕದಿಲಿಸದೇ ಈ ರೀತಿ ಹೋರಾಟ ಮಾಡಿದ್ರೆ ಪ್ರಯೋಜನೆ ಇಲ್ಲ. ಹೋರಾಟ ವ್ಯರ್ಥ ಪ್ರಯತ್ನವಾಗಲಿದೆ. ಸಧ್ಯಕೆ ಮೀಸಲಾತಿ ನೀಡಲು ಸಾಧ್ಯವೇ ಇಲ್ಲ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಬಸವ ಜಯಮೃತ್ಯುಂಜಯ ಸ್ವಾಮೀಜಿ, ” ನಾವು ಹೋರಾಟ ಮಾಡುವುದು ನಮ್ಮ ಕರ್ತವ್ಯ. ನಮ್ಮ ಹೋರಾಟ ಮುಂದುವರೆಯುತ್ತೆ. ಅವ್ರಿಗೆ ಕರುಣೆ ಬಂದಾಗ ಮೀಸಲಾತಿ ನೀಡಲಿ” ಎಂದಿದ್ದಾರೆ.
ಹರಿಯಾಣ:ಹರಿಯಾಣದ ಕರ್ನಾಲ್ ನಗರದ ಹೊರವಲಯದಲ್ಲಿರುವ ಪಟಾಕಿ ಕಾರ್ಖಾನೆಯಲ್ಲಿ ಮಂಗಳವಾರ ತಡರಾತ್ರಿ ಸಂಭವಿಸಿದ ಸ್ಫೋಟದಲ್ಲಿ ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾನೆ ಮತ್ತು ಇತರ ಮೂವರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಾರ್ನಾಲ್ ಪೊಲೀಸ್ ವರಿಷ್ಠಾಧಿಕಾರಿ ಗಂಗಾ ರಾಮ್ ಪುನಿಯಾ ಮಾತನಾಡಿ, ಒಬ್ಬರು ಸಾವನ್ನಪ್ಪಿದ್ದು ಮತ್ತು ಮೂವರು ಗಾಯಗೊಂಡಿದ್ದು, ಅವರ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗಿದೆ. ಸ್ಫೋಟದ ಕಾರಣಗಳನ್ನು ಕಂಡುಹಿಡಿಯಲು ತನಿಖೆ ನಡೆಯುತ್ತಿದೆ.
ರಾತ್ರಿ 9.30 ರ ಸುಮಾರಿಗೆ ಘೋಗ್ರಿಪುರ ರಸ್ತೆಯಲ್ಲಿರುವ ಕಾರ್ಖಾನೆಯೊಳಗೆ ಕಾರ್ಮಿಕರು ಇದ್ದಾಗ ಸ್ಫೋಟ ಸಂಭವಿಸಿದೆ. ಸ್ಫೋಟವು ಎಷ್ಟು ಪ್ರಬಲವಾಗಿದೆಯೆಂದರೆ ಅದು ಕಾರ್ಖಾನೆಯ ಪ್ರಮುಖ ಭಾಗವನ್ನು ಹಾನಿಗೊಳಿಸಿತು ಎಂದು ಸ್ಥಳೀಯರು ಹೇಳಿದ್ದಾರೆ.
ಮೃತರನ್ನು ಇನ್ನೂ ಗುರುತಿಸಲು ಸಾಧ್ಯವಾಗಲಿಲ್ಲ ಮತ್ತು ಗಾಯಾಳುಗಳನ್ನು ಶಿವಂ ಕುಮಾರ್ (28), ವಿಜಯ್ ಪಾಲ್ (22) ಮತ್ತು ವಿಜಯ್ ಕುಮಾರ್ (25) ಎಂದು ಗುರುತಿಸಲಾಗಿದೆ. ಇವರೆಲ್ಲರೂ ಕ್ರ್ಯಾಕರ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ವಲಸೆ ಕಾರ್ಮಿಕರಾಗಿದ್ದರು.
ಲಂಡನ್: 14 ಸಾವಿರ ಕೋಟಿ ರೂ.ಗಳ ಪಂಜಾಬ್ ನ್ಯಾಷಿನಲ್ ಬ್ಯಾಂಕ್ (ಪಿಎನ್ ಬಿ) ಹಗರಣದಲ್ಲಿ ವಂಚನೆ ಮತ್ತು ಹಣ ವರ್ಗಾವಣೆ ಪ್ರಕರಣದಲ್ಲಿ ಆರೋಪಿಯಾಗಿರುವ ವಜ್ರ ಉದ್ಯಮಿ ನೀರವ್ ಮೋದಿಯನ್ನ ಭಾರತಕ್ಕೆ ಹಸ್ತಾಂತರಿಸಬಹುದು ಎಂದು ಇಂಗ್ಲೆಂಡ್ ನ್ಯಾಯಾಲಯ ಹೇಳಿದೆ.
ಲಂಡನ್ ಜಿಲ್ಲಾ ನ್ಯಾಯಾಧೀಶ ಸ್ಯಾಮ್ಯುಯೆಲ್ ಗೂಸಿ ಅವರು ಭಾರತ ಸರ್ಕಾರದ ಅರ್ಜಿಗಳನ್ನ ಒಪ್ಪಿಕೊಂಡಿದ್ದು, ಗಡಿಪಾರು ಆದೇಶವನ್ನ ಹೊರಡಿಸಿದ್ದಾರೆ. ಲಂಡನ್ ಜೈಲಿಗಿಂತ ಮಹಾರಾಷ್ಟ್ರದ ಅರ್ಥರ್ ಜೈಲು ಚನ್ನಾಗಿದೆ ನೀರವ್ ಮೋದಿ ಅಲ್ಲಿಯೇ ಚಿಕಿತ್ಸೆ ಪಡೆಯಬೋದು ಎಂದಿದ್ದಾರೆ.
ಭಾರತದಲ್ಲಿ ವಿಚಾರಣೆ ಎದುರಿಸಲು ಉನ್ನತ ಮಟ್ಟದ ಜ್ಯುವೆಲರ್ʼಗೆ ಸಂಬಂಧಿಸಿದ ಪ್ರಕರಣವು ಪ್ರಬಲವಾಗಿದೆ ಎಂದು ನ್ಯಾಯಾಧೀಶರು ಹೇಳಿದ್ದು, ನೀರವ್ ಮೋದಿ ಮತ್ತು ಬ್ಯಾಂಕ್ ಅಧಿಕಾರಿಗಳು ಸೇರಿದಂತೆ ಇತರ ಕಾನ್ನಿವರ್ಸ್ʼಗಳ ನಡುವೆ ಸಂಪರ್ಕವಿದೆ ಎಂದರು.
ಇನ್ನು 49 ವರ್ಷದ ನೀರವ್ ಮೋದಿ ವೆಸ್ಟ್ ಮಿನಿಸ್ಟರ್ ಮ್ಯಾಜಿಸ್ಟ್ರೇಟ್ ಕೋರ್ಟ್ʼನಲ್ಲಿ ನೈಋತ್ಯ ಲಂಡನ್ʼನ ವಾಂಟ್ಸ್ ವರ್ತ್ ಜೈಲಿನಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಹಾಜರಾಗಿದ್ರು. ತೀರ್ಪು ನೀಡಿದ ನ್ಯಾಯಧೀಶರು ಭಾರತದಿಂದ ತಮಗೆ 16 ಸಂಪುಟಗಳ ಸಾಕ್ಷ್ಯಗಳು ಬಂದಿವೆ ಎಂದು ಹೇಳಿದರು.
ಬೆಂಗಳೂರು: ಇನ್ಮುಂದೆ ನಗರದ ಫೂಟ್ಪಾತ್, ರಸ್ತೆಗಳು, ಮರಗಳು ಸೇರಿದಂತೆ ಎಲ್ಲೆಂದರಲ್ಲಿ ಕೇಬಲ್ ವೈರ್ಗಳು ತೂಗಾಡುತ್ತಿದ್ರೆ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು ಎಂದು ರಾಜ್ಯ ಹೈಕೋರ್ಟ್ ಎಚ್ಚರಿಕೆ ನೀಡಿದೆ.
ಎಲೆಕ್ಟ್ರಿಕ್ ವೈರ್, ಟೆಲಿಪೋನ್ ವೈರ್ ಮತ್ತು ಟಿವಿ ಕೇಬಲ್ ವೈರ್ ಗಳ ಪಾದಚಾರಿಗಳಿಗೆ ಹಾಗೂ ವಾಹನ ಸವಾರರಿಗೆ ಅಪಾಯ. ಹೀಗಾಗಿ ಇಂತವರ ವಿರುದ್ಧ ಕ್ರಮ ಕೈಗೊಳ್ಳುವುದು ಬಿಬಿಎಂಪಿ ಕರ್ತವ್ಯವಾಗಿದೆ ಎಂದು ಕೋರ್ಟ್ ತಿಳಿಸಿದೆ.
ಈ ಕುರಿತು ವಕೀಲ ಎನ್ ಪಿ ಅಮೃತೇಶ್ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಇಂದು ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ಮತ್ತು ಮಗದುಮ್ ಅವರನ್ನೊಳಗೊಂಡ ವಿಭಾಗೀಯ ಪೀಠ, 1995ರ ಕೇಬಲ್ ನೆಟ್ ವರ್ಕ್ ಕಾಯಿದೆ ಪ್ರಕಾರ ಕ್ರಿಮಿನಲ್ ಕೇಸ್ ದಾಖಲಿಸುವಂತೆ ಬಿಬಿಎಂಪಿಗೆ ಸೂಚಿಸಿದೆ.
ನವದೆಹಲಿ : ಪ್ರವಾಸಿಗರ ಗುಂಪು ಜೀಪಿನಲ್ಲಿ ಕುಳಿತು ಆನೆಗಳ ಸಣ್ಣ ಹಿಂಡಿನ ವೀಡಿಯೊವನ್ನು ರೆಕಾರ್ಡ್ ಮಾಡುವುದನ್ನು ಕಾಣಬಹುದು. ಆನೆಯೊಂದು ಅವರ ಕಡೆಗೆ ನಡೆಯುತ್ತಿದ್ದಂತೆ ಚಾಲಕ ನಿಧಾನವಾಗಿ ಜೀಪನ್ನು ಹಿಂದೆ ಓಡಿಸುತ್ತಾನೆ. ವೀಡಿಯೊ ರೆಕಾರ್ಡಿಂಗ್ ಮಾಡುವ ಮಹಿಳೆ, “ಏನೂ ಆಗುವುದಿಲ್ಲ” ಎಂದಾಗ ಚಾಲಕ ಕೂಡ ಹೂಂಗುಡುತ್ತಾನೆ.
ಆ ಮಾತನ್ನು ಆಡಿದ ತಕ್ಷಣ, , ದೈತ್ಯ ಆನೆ ಅವರ ಕಡೆಗೆ ಓಡಿ ಬೆಲು ಪ್ರಾರಂಭಿಸುತ್ತದೆ, ಮತ್ತು ಗುಂಪು “ರನ್, ರನ್” ಎಂದು ಉದ್ಗರಿಸುತ್ತದೆ. ಆನೆಯಿಂದ ಜೋರಾಗಿ ಕಹಳೆಯೊಂದಿಗೆ ವೀಡಿಯೊ ಕೊನೆಗೊಳ್ಳುತ್ತದೆ.
ಕಾಡಿನಲ್ಲಿ ಆನೆಯನ್ನು ಎದುರಿಸುವಾಗ ಸುರಕ್ಷಿತವಾಗಿರಲು ನೆಟಿಜನ್ಗಳಿಗೆ ವಿನಂತಿಸುವ ಕ್ಲಿಪ್ ಅನ್ನು ಐಎಫ್ಎಸ್ ಅಧಿಕಾರಿ ಹಂಚಿಕೊಂಡಿದ್ದಾರೆ. ಪ್ರಾಣಿಗಳನ್ನು ಕಾಡಿನಲ್ಲಿ ಎದುರಾದಾಗ ಅವುಗಳ ಹಾದಿಗೆ ತೊಂದರೆ ಕೊಡಬೇಡಿ ಎಂದಿದ್ದಾರೆ.
ಬೆಂಗಳೂರು: ದಿನನಿತ್ಯದ ವಸ್ತುಗಳ ದರ ಏರಿಕೆಯಿಂದ ಕಂಗಾಲಾದ ಸಾರ್ವಜನಿಕರ ಮೇಲೆ ರಾಜ್ಯ ಸರ್ಕಾರ ಮತ್ತೊಂದು ಬರೆ ಎಳೆಯಲು ಸಿದ್ದತೆ ನಡೆಸಿದೆ. ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಬಿಎಂಟಿಸಿ ಬಸ್ ಪ್ರಯಾಣ ದರ ಏರಿಕೆ ಮಾಡಲು ಚಿಂತನೆ ನಡೆಸಿದೆ.
ಹೌದು, ಇದಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳಿಗೆ ಬಿಎಂಟಿಸಿ ಪ್ರಸ್ತಾವನೆ ಸಲ್ಲಿಸಿದ್ದು, ಬೆಲೆ ಏರಿಕೆಯಾಗುವ ಸಾಧ್ಯತೆ ಹೆಚ್ಚಿದೆ. ಇನ್ನು ಈ ಬಗ್ಗೆ ಮಾತನಾಡಿದ ಸಾರಿಗೆ ಸಚಿವ ಲಕ್ಷ್ಮಣ ಸವದಿ, ಪ್ರಸ್ತಾವನೆ ಸಲ್ಲಿಸಿದ್ದೇವೆ. ಮುಖ್ಯಮಂತ್ರಿಯವರೇ ಅಂತಿಮ ತೀರ್ಮಾನ ತೆಗೆದುಕೊಳ್ಳಲಿದ್ದಾರೆ. ಅವ್ರ ನಿರ್ಣಾಯವೇ ಅಂತಿಮ” ಎಂದಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತು ಮುಂದುವರೆಸಿದ ಸಚಿವರು, “ಬಿಎಂಟಿಸಿ ಶೇ 18 ರಿಂದ ಶೇ 20 ರಷ್ಟು ಏರಿಕೆ ಮಾಡಬೇಕು ಎಂದು ಪ್ರಸ್ತಾವನೆ ಸಲ್ಲಿಸಿದೆ. ಆ ಪ್ರಮಾಣದಲ್ಲಿ ಮಾಡಿ ಪ್ರಯಾಣಿಕರ ಮೇಲೆ ಹೊರೆ ಹಾಕುವುದಿಲ್ಲ. ಅಲ್ಪ ಪ್ರಮಾಣದಲ್ಲಿ ಏರಿಕೆ ಮಾಡಲು ಉದ್ದೇಶಿಸಲಾಗಿದೆ. ಮುಖ್ಯಮಂತ್ರಿಯವರು ಒಪ್ಪಿಗೆ ನೀಡಿದರೆ ಅಧಿವೇಶನದ ಸಂದರ್ಭದಲ್ಲಿ ಏರಿಕೆ ಮಾಡಲಾಗುವುದು” ಎಂದರು.
ಜಮ್ಮುಕಾಶ್ಮೀರ:ಜಮ್ಮು ಮತ್ತು ಕಾಶ್ಮೀರದಲ್ಲಿ ವಿಶ್ವದ ಅತಿ ಎತ್ತರದ ರೈಲ್ವೆ ಸೇತುವೆಗೆ ಹೊಂದಿಸಲಾಗಿರುವ ಅಪ್ರತಿಮ ಮುಖ್ಯ ಕಮಾನು ಬಹುತೇಕ ಸಿದ್ಧವಾಗಿದೆ. ಇದನ್ನು “ಮೂಲಸೌಕರ್ಯ ತಯಾರಿಕೆಯಲ್ಲಿ ಅದ್ಭುತ” ಎಂದು ಕರೆದ ರೈಲ್ವೆ ಸಚಿವ ಪಿಯೂಷ್ ಗೋಯಲ್ ಅವರು ಜಮ್ಮು ಮತ್ತು ಕಾಶ್ಮೀರದ ರಿಯಾಸಿ ಜಿಲ್ಲೆಯ ಚೆನಾಬ್ ನದಿಯ ಮೇಲೆ ಇರುವ ರೈಲ್ವೆ ಸೇತುವೆಯ 476 ಮೀಟರ್ ಉದ್ದದ ಉಕ್ಕಿನ ಕಮಾನುಗಳ ಫೋಟೋವನ್ನು ಹಂಚಿಕೊಂಡಿದ್ದಾರೆ.
“ಇನ್ಫ್ರಾಸ್ಟ್ರಕ್ಚರಲ್ ಮಾರ್ವೆಲ್ ಇನ್ ಮೇಕಿಂಗ್. ಚೆನಾಬ್ ಸೇತುವೆಯ ಉಕ್ಕಿನ ಕಮಾನು ಭಾರತೀಯ ರೈಲ್ವೆ ಎಂಜಿನಿಯರಿಂಗ್ ಗೆ ಮತ್ತೊಂದು ಮೈಲಿಗಲ್ಲನ್ನು ಸಾಧಿಸುವ ಹಾದಿಯಲ್ಲಿದೆ. ಇದು ವಿಶ್ವದ ಅತಿ ಎತ್ತರದ ರೈಲ್ವೆ ಸೇತುವೆಯಾಗಿದೆ” ಎಂದು ಗೋಯಲ್ ಟ್ವೀಟ್ ಮಾಡಿದ್ದಾರೆ. ರೈಲ್ವೆ ಸಚಿವಾಲಯವು ಉಕ್ಕಿನ ಕಮಾನು ಪೂರ್ಣಗೊಳ್ಳುವ ಫೋಟೋವನ್ನು ಹಂಚಿಕೊಂಡಿದೆ.
ಕಮಾನು ಸೇತುವೆ ಕಾಶ್ಮೀರವನ್ನು ಭಾರತದ ಉಳಿದ ಭಾಗಗಳಿಗೆ ಸಂಪರ್ಕಿಸುವ ಮಹತ್ವಾಕಾಂಕ್ಷೆಯ ರೈಲ್ವೆ ಯೋಜನೆಯ ಒಂದು ಭಾಗವಾಗಿದೆ. ಮುಖ್ಯ ಕಮಾನು ಹಾಕುವ ಕೆಲಸ 2017 ರ ನವೆಂಬರ್ನಲ್ಲಿ ಪ್ರಾರಂಭವಾಯಿತು.
ರೈಲ್ವೆ ಸೇತುವೆಯು 8 ತೀವ್ರತೆಯ ಭೂಕಂಪಗಳು ಮತ್ತು ಹೆಚ್ಚಿನ ತೀವ್ರತೆಯ ಸ್ಫೋಟಗಳನ್ನು ತಡೆದುಕೊಳ್ಳಬಲ್ಲದು ಎಂದು ರೈಲ್ವೆ ಅಧಿಕಾರಿಗಳು ಯೋಜನೆ ಪ್ರಾರಂಭಿಸುವ ಸಮಯದಲ್ಲಿ ತಿಳಿಸಿದ್ದರು. ಸಂಭವನೀಯ ಭಯೋತ್ಪಾದಕ ಬೆದರಿಕೆಗಳು ಮತ್ತು ಭೂಕಂಪಗಳ ವಿರುದ್ಧ ಇದು “ಭದ್ರತಾ ಸೆಟಪ್” ಅನ್ನು ಹೊಂದಿರುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಸೇತುವೆಯ ಒಟ್ಟಾರೆ ಉದ್ದ 1,315 ಮೀಟರ್.
ರೂ. 1,250 ಕೋಟಿಗಳ ಸೇತುವೆ ಚೆನಾಬ್ ನದಿಯ ದಡದಿಂದ 359 ಮೀಟರ್ ಎತ್ತರದಲ್ಲಿರುತ್ತದೆ ಮತ್ತು ಪ್ಯಾರಿಸ್ನ ಐಕಾನಿಕ್ ಐಫೆಲ್ ಟವರ್ಗಿಂತ 35 ಮೀಟರ್ ಎತ್ತರವಿದೆ.
ಕಾಶ್ಮೀರ ರೈಲ್ವೆ ಯೋಜನೆಯ ಉಧಂಪುರ್-ಶ್ರೀನಗರ-ಬಾರಾಮುಲ್ಲಾ ವಿಭಾಗದ ಭಾಗವಾಗಿರುವ ಕತ್ರ ಮತ್ತು ಬನಿಹಾಲ್ ನಡುವಿನ 111 ಕಿ.ಮೀ ವಿಸ್ತಾರದಲ್ಲಿ ಪ್ರಮುಖ ಕೊಂಡಿಯಾಗಲಿದೆ.
ನಿರ್ಮಾಣವು 2004 ರಲ್ಲಿ ಪ್ರಾರಂಭವಾಯಿತು, ಆದರೆ ಈ ಪ್ರದೇಶದಲ್ಲಿ ಆಗಾಗ್ಗೆ ಹೆಚ್ಚಿನ ವೇಗದ ಗಾಳಿಯಿಂದಾಗಿ ರೈಲು ಪ್ರಯಾಣಿಕರ ಸುರಕ್ಷತೆಯ ದೃಷ್ಟಿಯಿಂದ 2008-09ರಲ್ಲಿ ಕೆಲಸವನ್ನು ನಿಲ್ಲಿಸಲಾಯಿತು.
ಚೆನ್ನೈ: ಕೊರೊನಾ ಹವಾಳಿ ಹೆಚ್ಚಾಗಿರೋದ್ರಿಂದ 9, 10 ಮತ್ತು 11ನೇ ತರಗತಿಯ ವಿದ್ಯಾರ್ಥಿಗಳು ಪರೀಕ್ಷೆ ಬರೆಯುವ ಅಗತ್ಯವಿಲ್ಲ. ಸರ್ಕಾರ ಎಲ್ಲರನ್ನೂ ಉತ್ತೀರ್ಣ ಮಾಡಲು ನಿರ್ಧರಿಸಿದೆ ಎಂದು ತಮಿಳುನಾಡು ಮುಖ್ಯಮಂತ್ರಿ ಎಡಪ್ಪಡಿ ಕೆ. ಪಳನಿಸ್ವಾಮಿ ಹೇಳಿದ್ದಾರೆ.
ವೈದ್ಯಕೀಯ ತಜ್ಞರು ಸಲಹೆಯ ಮೇರೆಗೆ ಈ ನಿರ್ಧಾರ ತೆಗೆದುಕೊಂಡಿದ್ದು, ಇಂಟರ್ನಲ್ ಪರೀಕ್ಷೆಯಲ್ಲಿ ಲಭಿಸಿದ ಅಂಕಗಳ ಆಧಾರದ ಮೇಲೆ ವಿದ್ಯಾರ್ಥಿಗಳ ಕಲಿಕೆಯ ಮೌಲ್ಯಮಾಪನ ಮಾಡಲಾಗುವುದು. ಇನ್ನು ಕಾಲುವಾರ್ಷಿಕ ಮತ್ತು ಅರ್ಧವಾರ್ಷಿಕ ಪರೀಕ್ಷೆಗಳಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ ವಿದ್ಯಾರ್ಥಿಗಳಿಗೆ ಶೇಕಡಾ 80 ಅಂಕ ಮತ್ತು ಹಾಜರಾತಿಯನ್ನು ಪರಿಗಣಿಸಿ ಶೇಕಡಾ 20 ಅಂಕಗಳನ್ನ ನೀಡಲಾಗುವುದು ಎನ್ನಲಾಗ್ತಿದೆ. ಆದ್ರೆ, ಈ ಬಗ್ಗೆ ಇನ್ನೂ ಶಾಲೆಗಳಿಗೆ ತಮಿಳುನಾಡು ಶಿಕ್ಷಣ ಇಲಾಖೆ ಸುತ್ತೋಲೆ ಕಳುಹಿಸಿಲ್ಲ.
ನವದೆಹಲಿ: ಸಾಮಾಜಿಕ ಜಾಲತಾಣಗಳಿಗೆ ಮುಗುದಾರ ಹಾಕಲು ಮುಂದಾಗಿರುವ ಕೇಂದ್ರ ಸರ್ಕಾರ, ಸೋಷಿಯಲ್ ಮೀಡಿಯಾಗಳಿಗೆ ಹೊಸ ಮಾರ್ಗಸೂಚಿಗಳನ್ನ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಬಿಡುಗಡೆ ಮಾಡಿದ್ದಾರೆ.
ಡಿಜಿಟಲ್ ಕಂಟೆಂಟ್ ಮತ್ತು ಸ್ಟ್ರೀಮಿಂಗ್ ವೇದಿಕೆಗಳನ್ನ ನಿಯಂತ್ರಿಸಲು ಹೊಸ ನಿಯಮಗಳನ್ನ ಒಳಗೊಂಡ ಒಂದು ಕಟ್ಟುನಿಟ್ಟಾದ ಮೇಲ್ವಿಚಾರಣಾ ವ್ಯವಸ್ಥೆಯನ್ನ ಸರ್ಕಾರ ಜಾರಿಗೆ ತಂದಿದೆ.
“ಭಾರತದ ಸಾರ್ವಭೌಮತೆ ಮತ್ತು ಸಮಗ್ರತೆಯ ಮೇಲೆ ಪರಿಣಾಮ ಬೀರುವ ವಿಷಯಗಳನ್ನ ನಿಷೇಧಿಸುವ ಮತ್ತು ರಾಷ್ಟ್ರೀಯ ಭದ್ರತೆಗೆ ಅಪಾಯವನ್ನುಂಟು ಮಾಡುವಂತಹ ನೀತಿ ಸಂಹಿತೆಯನ್ನ ಒಳಗೊಂಡಿರುತ್ತವೆ. ಮಾಹಿತಿ ತಂತ್ರಜ್ಞಾನ (ಮಧ್ಯವರ್ತಿಗಳು ಮತ್ತು ಡಿಜಿಟಲ್ ಮೀಡಿಯಾ ನೀತಿ ಸಂಹಿತೆ) ನಿಯಮಗಳು, 2021, ಮೊದಲ ಬಾರಿಗೆ, ಡಿಜಿಟಲ್ ಸುದ್ದಿ ಸಂಸ್ಥೆಗಳು, ಸಾಮಾಜಿಕ ಜಾಲತಾಣಗಳು ಮತ್ತು ಒಟಿಟಿ ಸ್ಟ್ರೀಮಿಂಗ್ ಸೇವೆಗಳನ್ನು ಸರ್ಕಾರ ಹೇಗೆ ನಿಯಂತ್ರಿಸಲಿದೆ ಎಂಬುದನ್ನ ನಿಯಮಿಸುತ್ತದೆ.
ಹೊಸ ಮಾರ್ಗಸೂಚಿಗಳು ಇಂತಿವೆ..!
ಹೊಸ ಮಾರ್ಗಸೂಚಿಗಳು ಇಂತಿವೆ..!
* ಮುಖ್ಯ ದೂರು ಸ್ವೀಕಾರ ಅಧಿಕಾರಿ ಭಾರತದಲ್ಲಿರಬೇಕು.
* ನೋಡಲ್ ಅಫೀಸರ್ ಇರಬೇಕು
* ಪ್ರತಿ ತಿಂಗಳು ದೂರಿನ ಅನುಪಾಲನಾ ವರದಿ ಪ್ರಕಟಿಸಬೇಕು
* ದೂರುಗಳು 15 ದಿನಗಳಲ್ಲಿ ಬಗೆಹರಿಯಬೇಕು
* ತಪ್ಪು ಟ್ವೀಟ್ ಸಂದೇಶ ಸೃಷ್ಟಿಸಿದವರ ಬಗ್ಗೆ ಹೇಳಬೇಕು.
* ದೇಶದ ಸರ್ವಭೌಮತ್ವದ, ಶಾಂತಿ, ವಿದೇಶದ ಜೊತೆಗಿನ ಸಂಬಂಧಕ್ಕೆ ದಕ್ಕೆ ತಂದರೆ ಶಿಕ್ಷೆ
* ಸ್ವಯಂ ಪ್ರೇರಿತವಾಗಿ ಪರಿಶೀಲನೆ ಮಾಡಬೇಕು
* ಸಾಮಾಜಿಕ ಜಾಲತಾಣಗಳಿಗೆ ಮೆಸೇಜ್ ಸೆಂಡ್ ಮಾಡಿದರೆ, ಮೊದಲು ಮೇಸೇಜ್ ಸೆಂಡ್ ಮಾಡಿದವರೇ ಜವಾಬ್ದಾರಿ
* ಅಶ್ಲೀಲ, ಅಶ್ಲೀಲ, ಜನಾಂಗೀಯ, ಅಪ್ರಾಪ್ತ ವಯಸ್ಕರಿಗೆ ಹಾನಿಯುಂಟು ಮಾಡುವ, ಭಾರತದ ಏಕತೆ, ಸಮಗ್ರತೆ, ರಕ್ಷಣೆ, ಭದ್ರತೆ ಅಥವಾ ಸಾರ್ವಭೌಮತೆಗೆ ಧಕ್ಕೆ ಯುಂಟು ಮಾಡುವಂತಹ ವಿಷಯಗಳನ್ನ ಹಾಕುವಂತಿಲ್ಲ.
* ನೋಟಿಸ್ ನೀಡಿದ 36 ಗಂಟೆಗಳ ಒಳಗೆ ಅಥವಾ ನ್ಯಾಯಾಲಯದ ಆದೇಶದಿಂದ ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನ ತೆಗೆದುಹಾಕಬೇಕು ಅಥವಾ ನಿಷ್ಕ್ರಿಯಗೊಳಿಸಬೇಕಾಗುತ್ತೆ.
* ಸೈಬರ್ ಭದ್ರತಾ ಪ್ರಕರಣಗಳು ಮತ್ತು ಕಾನೂನು ಉಲ್ಲಂಘನೆಯ ಬಗ್ಗೆ ತನಿಖೆ ನಡೆಸಲು ಅಧಿಕಾರ ಹೊಂದಿರುವ ಸರ್ಕಾರಿ ಸಂಸ್ಥೆಗೆ ಮಧ್ಯವರ್ತಿಯು 72 ಗಂಟೆಗಳ ಒಳಗೆ ಮಾಹಿತಿ ಒದಗಿಸಬೇಕು.
* ಕಂಪನಿಗಳು ದೂರುಗಳನ್ನು ಸ್ವೀಕರಿಸಲು, ಸ್ವೀಕರಿಸಲು ಮತ್ತು ಒಂದು ತಿಂಗಳೊಳಗೆ ಪರಿಹರಿಸಲು ಕುಂದುಕೊರತೆ ಅಧಿಕಾರಿಯನ್ನು ನೇಮಿಸಬೇಕು.
* ಒಬ್ಬ ಮಧ್ಯವರ್ತಿಯು ದೂರು ನೀಡಿದ 24 ಗಂಟೆಗಳ ಒಳಗೆ, ಕಾನೂನುಬಾಹಿರ ಅಥವಾ ಆಕ್ರಮಣಕಾರಿ ಯಾದ ವಿಷಯದ ಪ್ರವೇಶವನ್ನ ತೆಗೆದು ಹಾಕಬೇಕಾಗುತ್ತದೆ ಅಥವಾ ನಿಷ್ಕ್ರಿಯಗೊಳಿಸಬೇಕಾಗುತ್ತದೆ.
* ನೀತಿ ಸಂಹಿತೆಯನ್ನ ಜಾರಿಗೆ ತರಲು ಮೂರು ಹಂತದ ಕಾರ್ಯವಿಧಾನ: ಸ್ವಯಂ ನಿಯಂತ್ರಣ; ಸ್ವಯಂ ನಿಯಂತ್ರಣ ಸಂಸ್ಥೆಗಳಿಂದ ಸ್ವಯಂ ನಿಯಂತ್ರಣ; ಮತ್ತು ಸರಕಾರದ ಮೇಲುಸ್ತುವಾರಿ ವ್ಯವಸ್ಥೆ.
ನವದೆಹಲಿ:ಡಿಜಿಟಲ್ ವಿಷಯವನ್ನು ನಿಯಂತ್ರಿಸಲು ಮತ್ತು ನೀತಿ ಸಂಹಿತೆ ಮತ್ತು ಸುದ್ದಿ ತಾಣಗಳು ಮತ್ತು ಒಟಿಟಿ ಪ್ಲಾಟ್ಫಾರ್ಮ್ಗಳಿಗೆ ಮೂರು ಹಂತದ ಕುಂದುಕೊರತೆ ಪರಿಹಾರ ಚೌಕಟ್ಟನ್ನು ಒಳಗೊಂಡ, ಸರ್ಕಾರ ಇಂದು ಹೊಸ ನಿಯಮಗಳನ್ನು ಪ್ರಕಟಿಸಿದೆ. ಈ ನಿಯಮಗಳು ಸಾಮಾಜಿಕ ಮಾಧ್ಯಮ ಬಳಕೆದಾರರಿಗೂ ಅಧಿಕಾರ ಅನ್ವಯಿಸುತ್ತದೆ ಎಂದು ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಹೇಳಿದ್ದಾರೆ.
ನಿಯಮಗಳಲ್ಲಿ ಹಲವಾರು ಸಚಿವಾಲಯಗಳು ಮತ್ತು “ಭಾರತದ ಸಾರ್ವಭೌಮತ್ವ ಮತ್ತು ಸಮಗ್ರತೆಗೆ” ಪರಿಣಾಮ ಬೀರುವ ವಿಷಯವನ್ನು ನಿಷೇಧಿಸುವ ಮತ್ತು ರಾಷ್ಟ್ರೀಯ ಭದ್ರತೆಗೆ ಧಕ್ಕೆ ತರುವಂತಹ ನೀತಿ ಸಂಹಿತೆಯನ್ನು ಒಳಗೊಂಡ ಕಟ್ಟುನಿಟ್ಟಾದ ಮೇಲ್ವಿಚಾರಣಾ ಕಾರ್ಯವಿಧಾನವಿದೆ.
ಮಾಹಿತಿ ತಂತ್ರಜ್ಞಾನ (ಮಧ್ಯವರ್ತಿಗಳು ಮತ್ತು ಡಿಜಿಟಲ್ ಮೀಡಿಯಾ ಎಥಿಕ್ಸ್ ಕೋಡ್ ಮಾರ್ಗದರ್ಶಿ) ನಿಯಮಗಳು, 2021 ಮೊದಲ ಬಾರಿಗೆ ಡಿಜಿಟಲ್ ಸುದ್ದಿ ಸಂಸ್ಥೆಗಳು, ಸಾಮಾಜಿಕ ಮಾಧ್ಯಮ ವೇದಿಕೆಗಳು ಮತ್ತು ಒಟಿಟಿ ಸ್ಟ್ರೀಮಿಂಗ್ ಸೇವೆಗಳನ್ನು ಸರ್ಕಾರ ಹೇಗೆ ನಿಯಂತ್ರಿಸುತ್ತದೆ ಎಂದು ಸೂಚಿಸುತ್ತದೆ.
ಮೇಲ್ವಿಚಾರಣಾ ಕಾರ್ಯವಿಧಾನವು ರಕ್ಷಣಾ, ವಿದೇಶಾಂಗ ವ್ಯವಹಾರಗಳು, ಗೃಹ, ಐ ಮತ್ತು ಬಿ, ಕಾನೂನು, ಐಟಿ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯಗಳ ಪ್ರತಿನಿಧಿಗಳನ್ನು ಒಳಗೊಂಡ ಸಮಿತಿಯನ್ನು ಒಳಗೊಂಡಿರುತ್ತದೆ.
ಈ ಸಮಿತಿಯು ಬಯಸಿದಲ್ಲಿ ನೀತಿ ಸಂಹಿತೆಯ ಉಲ್ಲಂಘನೆಯ ದೂರುಗಳ ಮೇಲೆ ವಿಚಾರಣೆಯನ್ನು ಕರೆಯಲು “ಸುಯೋ ಮೋಟು ಅಧಿಕಾರ” ಗಳನ್ನು ಹೊಂದಿರುತ್ತದೆ. ಸಮಿತಿಯು ಉಲ್ಲಂಘಿಸುವವರಿಗೆ ಎಚ್ಚರಿಕೆ ನೀಡಬಹುದು, ಶಿಕ್ಷಿಸಬಹುದು, ಎಚ್ಚರಿಸಬಹುದು ,ಅಥವಾ ಕ್ಷಮೆ ನೀಡಬಹುದು.
ಪ್ರಮುಖ ಸಾಮಾಜಿಕ ಮಾಧ್ಯಮ ಸೈಟ್ಗಳಲ್ಲಿ ಸಂದೇಶಗಳ ಮೂಲವನ್ನು ಪತ್ತೆಹಚ್ಚುವಿಕೆಯನ್ನು ನಿಯಮಗಳು ಕಡ್ಡಾಯಗೊಳಿಸುತ್ತವೆ, ಇದು ವಾಟ್ಸಾಪ್ ಮತ್ತು ಸಿಗ್ನಲ್ನಂತಹ ಮೆಸೇಜಿಂಗ್ ಪ್ಲಾಟ್ಫಾರ್ಮ್ಗಳಲ್ಲಿ ಕೊನೆಯಿಂದ ಎನ್ಕ್ರಿಪ್ಟ್ಗೆ ವಿರುದ್ಧವಾಗಿರುತ್ತದೆ.
ನೀತಿ ಸಂಹಿತೆಯು ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ ಅಡಿಯಲ್ಲಿ ಪತ್ರಿಕೋದ್ಯಮ ನಡವಳಿಕೆಯ ನಿಯಮಗಳನ್ನು ಒಳಗೊಂಡಿರುತ್ತದೆ.
ಹೊಸ ವೆಬ್ಸೈಟ್ಗಳನ್ನು ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಸೈಟ್ನಲ್ಲಿ ನೋಂದಾಯಿಸಬೇಕಾಗುತ್ತದೆ.
ಪ್ರಮುಖ ಅಂಶಗಳು ಇಲ್ಲಿವೆ:
ಅಪವಿತ್ರ, ಅಶ್ಲೀಲ, ಮಾನಹಾನಿಕರ, ವರ್ಣಭೇದ ನೀತಿಯ, ಅಪ್ರಾಪ್ತ ವಯಸ್ಕರಿಗೆ ಹಾನಿಕಾರಕವಾದ ಬಾರ್ಗಳ ವಿಷಯವು, ಭಾರತದ ಏಕತೆ, ಸಮಗ್ರತೆ, ರಕ್ಷಣೆ, ಭದ್ರತೆ ಅಥವಾ ಸಾರ್ವಭೌಮತ್ವಕ್ಕೆ ದಕ್ಕೆ
ಸಾಮಾಜಿಕ ಮಾಧ್ಯಮ ಸೈಟ್ಗಳು ಅಧಿಸೂಚನೆ ಅಥವಾ ನ್ಯಾಯಾಲಯದ ಆದೇಶದ 36 ಗಂಟೆಗಳ ಒಳಗೆ ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ತೆಗೆದುಹಾಕಬೇಕು ಅಥವಾ ನಿಷ್ಕ್ರಿಯಗೊಳಿಸಬೇಕು.
ಸೋಶಿಯಲ್ ಮೀಡಿಯಾ ಮೆಸೇಜಿಂಗ್ ಸೈಟ್ಗಳು ಮಾಹಿತಿಯ ಮೊದಲ ಮೂಲದವರ ಟ್ರ್ಯಾಕಿಂಗ್ ಅನ್ನು ಸಕ್ರಿಯಗೊಳಿಸಬೇಕು.
ಸೈಬರ್ ಭದ್ರತಾ ಘಟನೆಗಳು ಮತ್ತು ಕಾನೂನು ಉಲ್ಲಂಘನೆಯ ಬಗ್ಗೆ ತನಿಖೆ ನಡೆಸಲು ಅಧಿಕಾರ ಹೊಂದಿರುವ ಸರ್ಕಾರಿ ಸಂಸ್ಥೆಗೆ ಮಧ್ಯವರ್ತಿ 72 ಗಂಟೆಗಳ ಒಳಗೆ ಮಾಹಿತಿಯನ್ನು ಒದಗಿಸಬೇಕು.
ದೂರುಗಳನ್ನು ಸ್ವೀಕರಿಸಲು, ಅಂಗೀಕರಿಸಲು ಮತ್ತು ಒಂದು ತಿಂಗಳೊಳಗೆ ಪರಿಹರಿಸಲು ಕಂಪನಿಗಳು ಕುಂದುಕೊರತೆ ಅಧಿಕಾರಿಯನ್ನು ನೇಮಿಸಬೇಕಾಗುತ್ತದೆ.
ಮಧ್ಯವರ್ತಿಯು ದೂರಿನ 24 ಗಂಟೆಗಳ ಒಳಗೆ, ಕಾನೂನುಬಾಹಿರ ಅಥವಾ ಆಕ್ರಮಣಕಾರಿ ವಿಷಯಕ್ಕೆ ಪ್ರವೇಶವನ್ನು ತೆಗೆದುಹಾಕಬೇಕು ಅಥವಾ ನಿಷ್ಕ್ರಿಯಗೊಳಿಸಬೇಕು.
ನೀತಿ ಸಂಹಿತೆಯನ್ನು ಜಾರಿಗೊಳಿಸಲು ಮೂರು ಹಂತದ ಕಾರ್ಯವಿಧಾನ: ಸ್ವಯಂ ನಿಯಂತ್ರಣ; ಸ್ವಯಂ-ನಿಯಂತ್ರಿಸುವ ಸಂಸ್ಥೆಗಳಿಂದ ಸ್ವಯಂ ನಿಯಂತ್ರಣ; ಸರ್ಕಾರದ ಮೇಲ್ವಿಚಾರಣಾ ಕಾರ್ಯವಿಧಾನ.
ನೀತಿ ಸಂಹಿತೆಯ ಯಾವುದೇ ಉಲ್ಲಂಘನೆಯ ಕುರಿತು ಸಾರ್ವಜನಿಕರಿಂದ ಎಲ್ಲ ಕುಂದುಕೊರತೆಗಳನ್ನು ಸ್ವೀಕರಿಸಲು ಮತ್ತು ಪ್ರಕ್ರಿಯೆಗೊಳಿಸಲು ಆನ್ಲೈನ್ ಕುಂದುಕೊರತೆ ಪೋರ್ಟಲ್. ಕುಂದುಕೊರತೆಯನ್ನು 15 ದಿನಗಳಲ್ಲಿ ಪರಿಹರಿಸಬೇಕಾಗಿದೆ.
ಟೆಕ್ ದೈತ್ಯರು ಇದಕ್ಕಾಗಿ ಅಧಿಕಾರಿಗಳನ್ನು ನೇಮಿಸಬೇಕಾಗುತ್ತದೆ.
ನವದೆಹಲಿ: ಕೇಂದ್ರ ಸರ್ಕಾರ ವು ಅಂತರ್ಜಾಲ ಆಧಾರಿತ ಉದ್ಯಮಗಳು ಮತ್ತು ಸಂಸ್ಥೆಗಳನ್ನು ನಿಯಂತ್ರಿಸುವ ನಿಯಮಗಳನ್ನು ಅಂತಿಮಗೊಳಿಸಿದೆ- ಸಾಮಾಜಿಕ ಮಾಧ್ಯಮ ಕಂಪೆನಿಗಳು, OTT ಸ್ಟ್ರೀಮಿಂಗ್ ಸೇವೆಗಳು ಮತ್ತು ಡಿಜಿಟಲ್ ಸುದ್ದಿ ಔಟ್ ಲೆಟ್ ಗಳು, ಮತ್ತು ಇತರ- ಪ್ರಬಲ ಬಿಗ್ ಟೆಕ್ ಸಂಸ್ಥೆಗಳ ಮೇಲೆ ಹೆಚ್ಚಿನ ನಿಯಂತ್ರಣವನ್ನು ಪ್ರತಿಪಾದಿಸಲು ಶಾಸನದಲ್ಲಿ ಒಂದು ಸಮುದ್ರ ಬದಲಾವಣೆಯನ್ನು ಜಾರಿಗೆ ತರಲು ಯೋಜಿಸಿದೆ.
ಈ ಬಗ್ಗೆ ಇಂದು ಮಾಧ್ಯಮ ಗೋಷ್ಠಿಯಲ್ಲಿ ಐಟಿ ಸಚಿವ ರವಿಶಂಕರ್ ಪ್ರಸಾದ್ ಅವರು ಹೊಸ ಮಾರ್ಗಸೂಚಿಗಳು ಸಾಮಾಜಿಕ ಜಾಲತಾಣ ಸೇರಿದಂತೆ ವಿವಿಧ ಸಮೂಹ ಸಂವಹನ ಮಾಧ್ಯಮಗಳ ವಿಷಯದ ಮೇಲೆ ನಿಗಾ ಇಡುತ್ತವೆ ಎಂದು ಹೇಳಿದರು. ಹೊಸ ಮಾಹಿತಿ ತಂತ್ರಜ್ಞಾನ (ಮಧ್ಯವರ್ತಿಗಳು ಮತ್ತು ಡಿಜಿಟಲ್ ಮೀಡಿಯಾ ನೀತಿ ಸಂಹಿತೆ) ನಿಯಮಗಳು 2021ರ ಪ್ರಕಾರ, ಫೇಸ್ ಬುಕ್ ಮತ್ತು ಟ್ವಿಟರ್ ನಂತಹ ಸಾಮಾಜಿಕ ಮಾಧ್ಯಮ ಕಂಪನಿಗಳು ಆದಷ್ಟು ಬೇಗ ವಿವಾದಾತ್ಮಕ ವಿಷಯವನ್ನು ಪತ್ತೆ ಮಾಡಲು, ಈ ಬಗ್ಗೆ ಸರ್ಕಾರ ಅಥವಾ ಕಾನೂನು ಆದೇಶದ ನಂತರ 36 ಗಂಟೆಗಳಿಗಿಂತ ಕಡಿಮೆ ಅವಧಿಯಲ್ಲಿ, ಸಾಮಾಜಿಕ ಮಾಧ್ಯಮ ಕಂಪನಿಗಳು ಅಂತ ಮಾಹಿತಿಯನ್ನು ತೆಗೆದು ಹಾಕುವ ಬಗ್ಗೆ ಕೂಡ ಮಾರ್ಗಸೂಚಿಯಲ್ಲಿ ಹೇಳಲಿದೆ.
ಕಂಪನಿಗಳಿಗೆ ಅಧಿಕಾರಿಗಳು ಮನವಿ ಮಾಡಿದ 72 ಗಂಟೆಗಳ ಒಳಗಾಗಿ ತನಿಖೆ ನಡೆಸಿ, ಕ್ರಮವನ್ನು ತೆಗದುಕೊಳ್ಳಬೇಕು ಎಂದು ಕರಡು ನಿಯಮಾವಳಿಯಲ್ಲಿ ಹೇಳಿದ್ದು, ವ್ಯಕ್ತಿಯು ಯಾವುದೇ ಲೈಂಗಿಕ ಕ್ರಿಯೆ ಅಥವಾ ನಡವಳಿಕೆಯಲ್ಲಿ ಚಿತ್ರಿಸಿದರೆ, ದೂರು ಸ್ವೀಕರಿಸಿದ ಒಂದು ದಿನದೊಳಗೆ ಅಂತಹ ವಿಷಯವನ್ನು ಕಂಪನಿಗಳು ನಿಷ್ಕ್ರಿಯಗೊಳಿಸಬೇಕು ಅಥವಾ ತೆಗೆದುಹಾಕಬೇಕು ಎಂದು ನಿಯಮಗಳಲ್ಲಿ ತಿಳಿಸಲಾಗಿದೆ.
ಟ್ವಿಟರ್ ಸೇರಿದಂತೆ ಇತರೆ ಸಮೂಹ ಸಂವಹನ ಮಾಧ್ಯಮಗಳು ದೆಹಲಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಗಳ ಬಗ್ಗೆ ಇರುವ ಕೆಲ ಮಾಹಿತಿಗಳನ್ನು ಕೇಂದ್ರ ಸರ್ಕಾರ ತೆಗೆದುಹಾಕಲು ಆದೇಶಗಳನ್ನು ನಿರ್ಲಕ್ಷಿಸಿದ ನಂತರ, ಟ್ವಿಟರ್ ನೊಂದಿಗೆ ಸರ್ಕಾರವು ನಡೆಸಿದ ವಾದಗಳ ವಾರಗಳ ನಂತರ- ಕಾನೂನು ಬದ್ಧವಾಗಿ ಜಾರಿಗೆ ತರಬಹುದಾದ ಇತ್ತೀಚಿನ ಕರಡು ನಿಯಮಗಳನ್ನು ಬಿಡುಗಡೆ ಮಾಡಲಾಗಿದೆ. ಹೊಸ ಮಾರ್ಗಸೂಚಿಗಳು 2011ರ ನಿಯಮಗಳನ್ನು ಮೀರಿದ್ದು, ಈ ಬದಲಾವಣೆಗಳು ಕೇವಲ ನಿಯಮಗಳಲ್ಲಿ ಮಾತ್ರ ಇರುವುದರಿಂದ ಮತ್ತು ಮಾಹಿತಿ ಮಾಹಿತಿ ಕಾಯ್ದೆಯ ಲ್ಲವಾದ್ದರಿಂದ ಸಂಸತ್ತಿನ ಹಸ್ತಕ್ಷೇಪದ ಅಗತ್ಯವಿಲ್ಲ ಎಂದು ಸರ್ಕಾರದ ಮೂಲಗಳು ತಿಳಿಸಿವೆ.
ಐಟಿ ಸಚಿವ ರವಿ ಶಂಕರ್ ಪ್ರಸಾದ್ ಮತ್ತು ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಪ್ರಕಾಶ್ ಜಾವಡೇಕರ್ ಅವರು ಬಿಡುಗಡೆ ಮಾಡಿರುವ ಕರಡು ನಿಯಮಗಳ ಕರಡು ಪ್ರತಿಯನ್ನು ಇಂಟರ್ನೆಟ್ ಫ್ರೀಡಂ ಫೌಂಡೇಶನ್ (ಐಎಫ್ ಎಫ್) ಪ್ರಕಟಿಸಿದ್ದಾರೆ.
ಮೇಲ್ವಿಚಾರಣಾ ಕಾರ್ಯವಿಧಾನವು ರಕ್ಷಣಾ, ವಿದೇಶಾಂಗ ವ್ಯವಹಾರಗಳು, ಗೃಹ, ಐ ಮತ್ತು ಬಿ, ಕಾನೂನು, ಐಟಿ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯಗಳ ಪ್ರತಿನಿಧಿಗಳನ್ನು ಒಳಗೊಂಡ ಸಮಿತಿಯನ್ನು ಒಳಗೊಂಡಿರುತ್ತದೆ. ಈ ಸಮಿತಿಯು ಬಯಸಿದಲ್ಲಿ ನೀತಿ ಸಂಹಿತೆಯ ಉಲ್ಲಂಘನೆಯ ದೂರುಗಳ ಮೇಲೆ ವಿಚಾರಣೆಯನ್ನು ಕರೆಯಲು “ಸುಯೋ ಮೋಟು ಅಧಿಕಾರ” ಗಳನ್ನು ಹೊಂದಿರುತ್ತದೆ. ಸಮಿತಿಯು ಉಲ್ಲಂಘಿಸುವವರಿಗೆ ಎಚ್ಚರಿಕೆ ನೀಡಬಹುದು, ಖಂಡಿಸಬಹುದು, ಎರಡನ್ನು ಮಾಡಬಹುದಾಗಿದೆ.
ಇದೇ ವೇಳೆ ಮಾತನಾಡಿದ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಒಟಿಟಿ ಪ್ಲಾಟ್ಫಾರ್ಮ್ಗಳು ಮತ್ತು ಡಿಜಿಟಲ್ ಪೋರ್ಟಲ್ಗಳಲ್ಲಿ ಕುಂದುಕೊರತೆ ನಿವಾರಣಾ ವ್ಯವಸ್ಥೆ ಇರಬೇಕು. ಒಟಿಟಿ ಪ್ಲಾಟ್ಫಾರ್ಮ್ಗಳು ಸ್ವಯಂ-ನಿಯಂತ್ರಿಸುವ ಒಂದು ಸಂಸ್ಥೆ ಬೇಕಾಗಿದ್ದು, ಇದಕ್ಕೆ , ನಿವೃತ್ತ ಸುಪ್ರೀಂ ಕೋರ್ಟ್ ಅಥವಾ ಹೈಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ಅಥವಾ ಈ ವಿಭಾಗದಲ್ಲಿ ಅತ್ಯಂತ ಶ್ರೇಷ್ಠ ವ್ಯಕ್ತಿಯು ಇರಬೇಕಾಗಿದೆ ಅಂತ ಹೇಳಿದರು. ಇದೇ ವೇಳೆ ಅವರು ಈ ಬಗ್ಗೆ ಸರಕಾರದ ಮಟ್ಟದಲ್ಲಿ ಯೂ ಮೇಲ್ವಿಚಾರಣಾ ವ್ಯವಸ್ಥೆ ಯೂ ಇರಲಿದೆ ಅಂತ ಅವರು ಹೇಳಿದರು.
ನವದೆಹಲಿ: ಕೇಂದ್ರ ಸರ್ಕಾರ ವು ಅಂತರ್ಜಾಲ ಆಧಾರಿತ ಉದ್ಯಮಗಳು ಮತ್ತು ಸಂಸ್ಥೆಗಳನ್ನು ನಿಯಂತ್ರಿಸುವ ನಿಯಮಗಳನ್ನು ಅಂತಿಮಗೊಳಿಸಿದೆ- ಸಾಮಾಜಿಕ ಮಾಧ್ಯಮ ಕಂಪೆನಿಗಳು, OTT ಸ್ಟ್ರೀಮಿಂಗ್ ಸೇವೆಗಳು ಮತ್ತು ಡಿಜಿಟಲ್ ಸುದ್ದಿ ಔಟ್ ಲೆಟ್ ಗಳು, ಮತ್ತು ಇತರ- ಪ್ರಬಲ ಬಿಗ್ ಟೆಕ್ ಸಂಸ್ಥೆಗಳ ಮೇಲೆ ಹೆಚ್ಚಿನ ನಿಯಂತ್ರಣವನ್ನು ಪ್ರತಿಪಾದಿಸಲು ಶಾಸನದಲ್ಲಿ ಒಂದು ಸಮಗ್ರವಾದ ಬದಲಾವಣೆಯನ್ನು ಜಾರಿಗೆ ತರಲು ಯೋಜಿಸಿದೆ.
Social media platforms upon being asked either by a court order or a govt authority will be required to disclose the first originator of mischievous tweet or message as the case may be: Union Electronics and Information Technology Minister Ravi Shankar Prasad (1/2) pic.twitter.com/PLIxLJdVtg
ಈ ಬಗ್ಗೆ ಇಂದು ಮಾಧ್ಯಮ ಗೋಷ್ಠಿಯಲ್ಲಿ ಐಟಿ ಸಚಿವ ರವಿಶಂಕರ್ ಪ್ರಸಾದ್ ಅವರು ಹೊಸ ಮಾರ್ಗಸೂಚಿಗಳು ಸಾಮಾಜಿಕ ಜಾಲತಾಣ ಸೇರಿದಂತೆ ವಿವಿಧ ಸಮೂಹ ಸಂವಹನ ಮಾಧ್ಯಮಗಳ ವಿಷಯದ ಮೇಲೆ ನಿಗಾ ಇಡುತ್ತವೆ ಎಂದು ಹೇಳಿದರು. ಹೊಸ ಮಾಹಿತಿ ತಂತ್ರಜ್ಞಾನ (ಮಧ್ಯವರ್ತಿಗಳು ಮತ್ತು ಡಿಜಿಟಲ್ ಮೀಡಿಯಾ ನೀತಿ ಸಂಹಿತೆ) ನಿಯಮಗಳು 2021ರ ಪ್ರಕಾರ, ಫೇಸ್ ಬುಕ್ ಮತ್ತು ಟ್ವಿಟರ್ ನಂತಹ ಸಾಮಾಜಿಕ ಮಾಧ್ಯಮ ಕಂಪನಿಗಳು ಆದಷ್ಟು ಬೇಗ ವಿವಾದಾತ್ಮಕ ವಿಷಯವನ್ನು ಪತ್ತೆ ಮಾಡಲು, ಈ ಬಗ್ಗೆ ಸರ್ಕಾರ ಅಥವಾ ಕಾನೂನು ಆದೇಶದ ನಂತರ 36 ಗಂಟೆಗಳಿಗಿಂತ ಕಡಿಮೆ ಅವಧಿಯಲ್ಲಿ, ಸಾಮಾಜಿಕ ಮಾಧ್ಯಮ ಕಂಪನಿಗಳು ಅಂತ ಮಾಹಿತಿಯನ್ನು ತೆಗೆದು ಹಾಕುವ ಬಗ್ಗೆ ಕೂಡ ಮಾರ್ಗಸೂಚಿಯಲ್ಲಿ ಹೇಳಲಿದೆ.
ಕಂಪನಿಗಳಿಗೆ ಅಧಿಕಾರಿಗಳು ಮನವಿ ಮಾಡಿದ 72 ಗಂಟೆಗಳ ಒಳಗಾಗಿ ತನಿಖೆ ನಡೆಸಿ, ಕ್ರಮವನ್ನು ತೆಗದುಕೊಳ್ಳಬೇಕು ಎಂದು ಕರಡು ನಿಯಮಾವಳಿಯಲ್ಲಿ ಹೇಳಿದ್ದು, ವ್ಯಕ್ತಿಯು ಯಾವುದೇ ಲೈಂಗಿಕ ಕ್ರಿಯೆ ಅಥವಾ ನಡವಳಿಕೆಯಲ್ಲಿ ಚಿತ್ರಿಸಿದರೆ, ದೂರು ಸ್ವೀಕರಿಸಿದ ಒಂದು ದಿನದೊಳಗೆ ಅಂತಹ ವಿಷಯವನ್ನು ಕಂಪನಿಗಳು ನಿಷ್ಕ್ರಿಯಗೊಳಿಸಬೇಕು ಅಥವಾ ತೆಗೆದುಹಾಕಬೇಕು ಎಂದು ನಿಯಮಗಳಲ್ಲಿ ತಿಳಿಸಲಾಗಿದೆ.
ಟ್ವಿಟರ್ ಸೇರಿದಂತೆ ಇತರೆ ಸಮೂಹ ಸಂವಹನ ಮಾಧ್ಯಮಗಳು ದೆಹಲಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಗಳ ಬಗ್ಗೆ ಇರುವ ಕೆಲ ಮಾಹಿತಿಗಳನ್ನು ಕೇಂದ್ರ ಸರ್ಕಾರ ತೆಗೆದುಹಾಕಲು ಆದೇಶಗಳನ್ನು ನಿರ್ಲಕ್ಷಿಸಿದ ನಂತರ, ಟ್ವಿಟರ್ ನೊಂದಿಗೆ ಸರ್ಕಾರವು ನಡೆಸಿದ ವಾದಗಳ ವಾರಗಳ ನಂತರ- ಕಾನೂನು ಬದ್ಧವಾಗಿ ಜಾರಿಗೆ ತರಬಹುದಾದ ಇತ್ತೀಚಿನ ಕರಡು ನಿಯಮಗಳನ್ನು ಬಿಡುಗಡೆ ಮಾಡಲಾಗಿದೆ. ಹೊಸ ಮಾರ್ಗಸೂಚಿಗಳು 2011ರ ನಿಯಮಗಳನ್ನು ಮೀರಿದ್ದು, ಈ ಬದಲಾವಣೆಗಳು ಕೇವಲ ನಿಯಮಗಳಲ್ಲಿ ಮಾತ್ರ ಇರುವುದರಿಂದ ಮತ್ತು ಮಾಹಿತಿ ಮಾಹಿತಿ ಕಾಯ್ದೆಯಲ್ಲವಾದ್ದರಿಂದ ಸಂಸತ್ತಿನ ಹಸ್ತಕ್ಷೇಪದ ಅಗತ್ಯವಿಲ್ಲ ಎಂದು ಸರ್ಕಾರದ ಮೂಲಗಳು ತಿಳಿಸಿವೆ.
ಐಟಿ ಸಚಿವ ರವಿ ಶಂಕರ್ ಪ್ರಸಾದ್ ಮತ್ತು ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಪ್ರಕಾಶ್ ಜಾವಡೇಕರ್ ಅವರು ಬಿಡುಗಡೆ ಮಾಡಿರುವ ಕರಡು ನಿಯಮಗಳ ಕರಡು ಪ್ರತಿಯನ್ನು ಇಂಟರ್ನೆಟ್ ಫ್ರೀಡಂ ಫೌಂಡೇಶನ್ (ಐಎಫ್ ಎಫ್) ಪ್ರಕಟಿಸಿದ್ದಾರೆ.
ಮೇಲ್ವಿಚಾರಣಾ ಕಾರ್ಯವಿಧಾನವು ರಕ್ಷಣಾ, ವಿದೇಶಾಂಗ ವ್ಯವಹಾರಗಳು, ಗೃಹ, ಐ ಮತ್ತು ಬಿ, ಕಾನೂನು, ಐಟಿ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯಗಳ ಪ್ರತಿನಿಧಿಗಳನ್ನು ಒಳಗೊಂಡ ಸಮಿತಿಯನ್ನು ಒಳಗೊಂಡಿರುತ್ತದೆ. ಈ ಸಮಿತಿಯು ಬಯಸಿದಲ್ಲಿ ನೀತಿ ಸಂಹಿತೆಯ ಉಲ್ಲಂಘನೆಯ ದೂರುಗಳ ಮೇಲೆ ವಿಚಾರಣೆಯನ್ನು ಕರೆಯಲು “ಸುಯೋ ಮೋಟು ಅಧಿಕಾರ” ಗಳನ್ನು ಹೊಂದಿರುತ್ತದೆ. ಸಮಿತಿಯು ಉಲ್ಲಂಘಿಸುವವರಿಗೆ ಎಚ್ಚರಿಕೆ ನೀಡಬಹುದು, ಖಂಡಿಸಬಹುದು, ಎರಡನ್ನು ಮಾಡಬಹುದಾಗಿದೆ.
ಇದೇ ವೇಳೆ ಮಾತನಾಡಿದ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಒಟಿಟಿ ಪ್ಲಾಟ್ಫಾರ್ಮ್ಗಳು ಮತ್ತು ಡಿಜಿಟಲ್ ಪೋರ್ಟಲ್ಗಳಲ್ಲಿ ಕುಂದುಕೊರತೆ ನಿವಾರಣಾ ವ್ಯವಸ್ಥೆ ಇರಬೇಕು. ಒಟಿಟಿ ಪ್ಲಾಟ್ಫಾರ್ಮ್ಗಳು ಸ್ವಯಂ-ನಿಯಂತ್ರಿಸುವ ಒಂದು ಸಂಸ್ಥೆ ಬೇಕಾಗಿದ್ದು, ಇದಕ್ಕೆ , ನಿವೃತ್ತ ಸುಪ್ರೀಂ ಕೋರ್ಟ್ ಅಥವಾ ಹೈಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ಅಥವಾ ಈ ವಿಭಾಗದಲ್ಲಿ ಅತ್ಯಂತ ಶ್ರೇಷ್ಠ ವ್ಯಕ್ತಿಯು ಇರಬೇಕಾಗಿದೆ ಅಂತ ಹೇಳಿದರು. ಇದೇ ವೇಳೆ ಅವರು ಈ ಬಗ್ಗೆ ಸರಕಾರದ ಮಟ್ಟದಲ್ಲಿ ಯೂ ಮೇಲ್ವಿಚಾರಣಾ ವ್ಯವಸ್ಥೆ ಯೂ ಇರಲಿದೆ ಅಂತ ಅವರು ಹೇಳಿದರು.
ಕೆಎನ್ಎನ್ಡಿಜಿಟಲ್ಡೆಸ್ಕ್: ಘಮ್ ಎನ್ನುವ ಪೀಸ್ ಲೆಸ್ ಅಂಡ್ ಟೇಸ್ಟಿ ಕುಷ್ಕ ತಿನ್ನೋದಿಕ್ಕೆ ನೀವ್ ರೆಡಿನಾ…? ಹಾಗಿದ್ರೆ ಮಿಸ್ ಮಾಡ್ದೆ ನಾಳೆ ಥಿಯೇಟರ್ ಅಂಗಳಕ್ಕೆ ಬರ್ತಿರೋ ಕುಷ್ಕ ಸವಿಯೋದಿಕ್ಕೆ ಬನ್ನಿ. ಈಗಾಗ್ಲೇ ಒಂದಷ್ಟು ನಿರೀಕ್ಷೆ ಹುಟ್ಟುಹಾಕಿರುವ ಕುಷ್ಕ ಸಿನಿಮಾ ನಾಳೆ ರಿಲೀಸ್ ಆಗ್ತಿದೆ.
ಒಳ್ಳೆ ಕಂಟೆಂಟ್ ಜೊತೆಗೆ ಮನರಂಜನೆ ನೀಡುವ ಕುಷ್ಕ ಸಿನಿಮಾಕ್ಕೆ ವಿಕ್ರಮ್ ಯೋಗನಂದ್ ಆ್ಯಕ್ಷನ್ ಕಟ್ ಹೇಳೋದ್ರ ಜೊತೆಗೆ ಸಂಕಲನ ಹಾಗೂ ಛಾಯಾಗ್ರಹಣವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ.
ಕೋಟ್ಯಂತರ ರೂಪಾಯಿ ಬೆಲೆ ಬಾಳುವ ವಜ್ರ ವಶಪಡಿಸಿಕೊಳ್ಳು ಹಿಂದೆ ಬೀಳುವ ಅಂತರಾಷ್ಟ್ರೀಯ ಸ್ಮಗ್ಲರ್ ಗಳು, ಭೂಗತ ಪಾತಕಿಗಳ ಸುತ್ತ ಕುಷ್ಕ ಸಿನಿಮಾದ ಕಥೆ ಎಣೆಯಾಲಾಗಿದ್ದು, ಕಿರುತೆರೆ ನಟ ಚಂದುಗೌಡ, ಸಂಜನಾ ಆನಂದ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಗುರುಪ್ರಸಾದ್ ಕಾಮಿಡಿ ವಿಲನ್ ರೋಲ್ ಪ್ಲೇ ಮಾಡಿದ್ರೆ, ಉಳಿದಂತೆ ಶೋಭರಾಜ್, ಕೈಲಾಶ್ ಪಾಲ್, ಜೀವನ್ ಮತ್ತಿತರ ಕಲಾವಿದರ ಬಳಗ ಸಿನಿಮಾದಲ್ಲಿದೆ.
ಇನ್ನು, ಕುಷ್ಕ ಚಿತ್ರಕ್ಕೆ ಪ್ರತಾಪ್ ರೆಡ್ಡಿ, ಮಧು ಗೌಡ ಬಂಡವಾಳ ಹೂಡಿದ್ದು, ಸ್ಮಾರ್ಟ್ ಸ್ಕ್ರೀನ್ ಪ್ರೊಡಕ್ಷನ್ಸ್ ಹಾಗೂ ಪಿಎಂ ಪ್ರೊಡಕ್ಷನ್ ಬ್ಯಾನರ್ ನಡಿ ಸಿನಿಮಾ ಮೂಡಿ ಬರ್ತಿದ್ದು, ಬಾಲರಸಜ್ ಚಿತ್ರಕಥೆ, ಅಭಿಲಾಶ್ ಗುಪ್ತ ಸಂಗೀತ ಸಂಯೋಜನೆ, ಅಲ್ಟಿಮೇಟ್ ಶಿವು ಸಾಹಸ ಚಿತ್ರಕ್ಕಿದೆ. ಇನ್ನು ನಾಳೆ ರಾಜ್ಯಾದ್ಯಂತ ರಿಲೀಸ್ ಆಗ್ತಿರುವ ಕುಷ್ಕ ಸಿನಿಮಾವನ್ನು ಖ್ಯಾತ ನಿರ್ಮಾಣ ಸಂಸ್ಥೆ ಐರಾ ವಿತರಣೆ ಮಾಡ್ತಿದೆ.
ನವದೆಹಲಿ : ಮಹತ್ವದ ಬೆಳವಣಿಗೆಯೊಂದರಲ್ಲಿ ಫೆಬ್ರವರಿ 24 ರಿಂದ 25ರ ಮಧ್ಯರಾತ್ರಿವರೆಗೆ ಗಡಿ ನಿಯಂತ್ರಣ ರೇಖೆಯಲ್ಲಿ ಗುಂಡಿನ ದಾಳಿಯನ್ನು ನಿಲ್ಲಿಸಬೇಕೆಂದು ಭಾರತ ಮತ್ತು ಪಾಕಿಸ್ತಾನ ಸೇನೆಗಳು ಒಪ್ಪಿವೆ ಎಂದು ರಕ್ಷಣಾ ಸಚಿವಾಲಯ ಗುರುವಾರ ತಿಳಿಸಿದೆ.
ಎರಡೂ ದೇಶಗಳ ಸೇನಾ ಕಾರ್ಯಾಚರಣೆಗಳ ಮಹಾನಿರ್ದೇಶಕರು ಕದನ ವಿರಾಮವನ್ನು ಪಾಲಿಸಲು ಸಮ್ಮತಿಸಿದರು ” ಗಡಿಗಳಲ್ಲಿ ಪರಸ್ಪರ ಪ್ರಯೋಜನಕಾರಿ ಮತ್ತು ಸುಸ್ಥಿರ ಶಾಂತಿಯನ್ನು ಸಾಧಿಸುವ ಹಿತದೃಷ್ಟಿಯಿಂದ” ಕದನ ವಿರಾಮವನ್ನು ಆಚರಿಸಲು ಸಮ್ಮತಿಸಿದರು.
ಹಾಟ್ ಲೈನ್ ಕುರಿತು ಭಾರತ ಮತ್ತು ಪಾಕಿಸ್ತಾನದ ಡಿಜಿಎಂಒಗಳು ಈ ಕುರಿತು ಮಾತುಕತೆ ನಡೆಸಿದ್ದು, ಈ ಸಂಬಂಧ ಗುರುವಾರ ಜಂಟಿ ಹೇಳಿಕೆ ನೀಡಿದ್ದಾರೆ. “ಎರಡೂ ಕಡೆಯವರು ಗಡಿ ನಿಯಂತ್ರಣ ರೇಖೆ ಮತ್ತು ಇತರ ಎಲ್ಲ ವಲಯಗಳ ಪರಿಸ್ಥಿತಿಯನ್ನು ಮುಕ್ತ, ಮತ್ತು ಸೌಹಾರ್ದಯುತ ವಾತಾವರಣದಲ್ಲಿ ಪರಿಶೀಲಿಸಿದರು.”
“ಗಡಿಗಳಲ್ಲಿ ಪರಸ್ಪರ ಪ್ರಯೋಜನಕಾರಿ ಮತ್ತು ಸುಸ್ಥಿರ ಶಾಂತಿಯನ್ನು ಸಾಧಿಸುವ ಸಲುವಾಗಿ, ಶಾಂತಿಯನ್ನು ಕದಡುವ ಮತ್ತು ಹಿಂಸಾಚಾರಕ್ಕೆ ಕಾರಣವಾಗುವ ಪ್ರಮುಖ ವಿಷಯಗಳು ಮತ್ತು ಕಳವಳಗಳನ್ನು ಬಗೆಹರಿಸಲು ಇಬ್ಬರು DGsMO ಒಪ್ಪಿಕೊಂಡರು” ಎಂದು ಅದು ಹೇಳಿದೆ.
ಫೆ. 24ರ ಮಧ್ಯರಾತ್ರಿಯಿಂದ 25 ರ ಮಧ್ಯರಾತ್ರಿಯಿಂದ ಜಾರಿಗೆ ಬರುವ ಎಲ್ಲಾ ಒಪ್ಪಂದಗಳು, ತಿಳುವಳಿಕೆಗಳು ಮತ್ತು ಗಡಿ ನಿಯಂತ್ರಣ ರೇಖೆ ಮತ್ತು ಇತರ ವಲಯಗಳ ಮೇಲೆ ಗುಂಡಿನ ದಾಳಿಗಳನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲು ಉಭಯ ದೇಶಗಳು ಸಮ್ಮತಿಸಿವೆ” ಎಂದು ಜಂಟಿ ಹೇಳಿಕೆ ತಿಳಿಸಿದೆ.
“ಯಾವುದೇ ಅನಿರೀಕ್ಷಿತ ಸನ್ನಿವೇಶ ಅಥವಾ ತಪ್ಪು ಗ್ರಹಿಕೆಯನ್ನು ಪರಿಹರಿಸಲು ಅಸ್ತಿತ್ವದಲ್ಲಿರುವ ಹಾಟ್ ಲೈನ್ ಸಂಪರ್ಕ ಮತ್ತು ಗಡಿ ಧ್ವಜ ಸಭೆಗಳ ಕಾರ್ಯವಿಧಾನಗಳನ್ನು ಬಳಸಲಾಗುವುದು ಎಂದು ಉಭಯ ಪಕ್ಷಗಳು ಪುನರುಚ್ಚರಿಸಿವೆ ಎಂದು ಹೇಳಿಕೆ ತಿಳಿಸಿದೆ.
2020ರಲ್ಲಿ ಪಾಕಿಸ್ತಾನ 5,133 ಕದನ ವಿರಾಮ ಉಲ್ಲಂಘನೆ ಗಳನ್ನು ಮಾಡಿದೆ, ಇದರಲ್ಲಿ 46 ಭದ್ರತಾ ಪಡೆಗಳ ಸಿಬ್ಬಂದಿ ಮೃತಪಟ್ಟಿದ್ದಾರೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಈ ಹಿಂದೆ ಹೇಳಿದ್ದರು.
ಕೋಲ್ಕತಾ: ಭಾರತೀಯ ಜನತಾ ಪಕ್ಷ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಪಶ್ಚಿಮ ಬಂಗಾಳದ ಬಿಜೆಪಿ ಕಚೇರಿಯಲ್ಲಿ ಸಾಮಾನ್ಯ ಜನರ ಸಲಹೆಗಳನ್ನು ಪಡೆಯಲು ‘ಲೋಖೋ ಸೋನಾರ್ ಬಾಂಗ್ಲಾ’ ಪ್ರಣಾಳಿಕೆ ಕ್ರೌಡ್ ಸೋರ್ಸಿಂಗ್ ಅಭಿಯಾನವನ್ನು ಪ್ರಾರಂಭಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ನಡ್ಡಾ, “ನಾವು ಜನರಿಂದ 2 ಕೋಟಿ ಸಲಹೆಗಳನ್ನು ಸ್ವೀಕರಿಸುತ್ತೇವೆ. ಪಶ್ಚಿಮ ಬಂಗಾಳದಾದ್ಯಂತ ಅಂದಾಜು 30,000 ಸಲಹಾ ಪೆಟ್ಟಿಗೆಗಳನ್ನು ಅಳವಡಿಸುತ್ತೇವೆ. 294 ವಿಧಾನಸಭಾ ಕ್ಷೇತ್ರಗಳಲ್ಲಿ ಸುಮಾರು 100 ಪೆಟ್ಟಿಗೆಗಳನ್ನು ಇಡಲಾಗುವುದು” ಎಂದರು.
“ಸ್ವಾಮಿ ವಿವೇಕಾನಂದರು, ರವೀಂದ್ರನಾಥ ಠಾಗೋರ್, ಬಂಕಿಮ್ ಚಂದ್ರ ಚಟರ್ಜಿ, ನೇತಾಜಿ ಸುಭಾಷ್ ಚಂದ್ರ ಬೋಸ್, ಶ್ಯಾಮಾ ಪ್ರಸಾದ್ ಮುಖರ್ಜಿ, ಈಶ್ವರ್ ಚಂದ್ರ ವಿದ್ಯಾಸಾಗರ್ ಅವರು ನೀಡಿದ ಕೊಡುಗೆಯ ನಾಡಿನಲ್ಲಿ ‘ಸೋನಾರ್ ಬಾಂಗ್ಲಾ’ ತಯಾರಿಸಲು ನಾವು ಪ್ರಯತ್ನಗಳನ್ನು ಮಾಡುತ್ತಿದ್ದೇವೆ” ಎಂದರು.
ಬೇವು ಅನೇಕ ಅದ್ಭುತ ಔಷಧೀಯ ಗುಣಗಳನ್ನು ಹೊಂದಿದೆ. ರಕ್ತವನ್ನು ಶುದ್ಧೀಕರಿಸುವಲ್ಲಿ ಬೇವಿನ ಚಹಾ ಚೆನ್ನಾಗಿ ಕೆಲಸ ಮಾಡುತ್ತದೆ.
ಬೇವಿನ ಟೀ ದೇಹದಲ್ಲಿ ಬೆಳೆಯುವ ಕ್ಯಾನ್ಸರ್ ಕೋಶಗಳನ್ನು ನಿವಾರಿಸುತ್ತದೆ. ಒಂದು ಕಪ್ ಚಹಾ ಕುಡಿಯುವುದರಿಂದ ಕ್ಯಾನ್ಸರ್ ನಿಂದ ನಿಮ್ಮನ್ನು ರಕ್ಷಿಸಬಹುದು.
ನಿಮಗೆ ತಲೆಹೊಟ್ಟು ಸಮಸ್ಯೆ ಇದ್ದರೆ .. ಸ್ವಲ್ಪ ಕುದಿಯುವ ನೀರು ಸೇರಿಸಿ ಬೇವನ್ನು ಹಾಕಿ ಚೆನ್ನಾಗಿ ಕುದಿಸಿ. ಅದನ್ನು ತಣ್ಣಗಾಗಲು ಬಿಡಿ. ತಣ್ಣಗಾದ ಮೇಲೆ ಅದನ್ನು ತಲೆಗೆ ಹಾಕಿ ಶಾಂಪೂವಿನಿಂದ ನೀರಿನಿಂದ ತೊಳೆಯಿರಿ. ಹಾಗೆ ಮಾಡುವುದರಿಂದ ತಲೆಹೊಟ್ಟು ಸಮಸ್ಯೆ ಕಡಿಮೆಯಾಗುತ್ತದೆ.
ಬೇವಿನ ಚಹಾ ಆರೋಗ್ಯಕ್ಕೆ ಒಳ್ಳೆಯದು. ಆದರೆ ಕೆಲವರು ಇದನ್ನು ಕುಡಿಯಬಾರದು. ಗರ್ಭಿಣಿಯರು ವೈದ್ಯರನ್ನು ಸಂಪರ್ಕಿಸಿದ ನಂತರವೇ ಈ ಚಹಾ ಕುಡಿಯಬೇಕು.
ಮಕ್ಕಳಿಗೆ ಹಾಲುಣಿಸುವ ಮಹಿಳೆಯರು ಕೂಡ ಬೇವಿನ ಚಹಾವನ್ನು ಕುಡಿಯಬಾರದು. ಅಂಗಾಂಗ ಕಸಿ ಮಾಡಿಸಿಕೊಂಡವರು ಮತ್ತು ಇತ್ತೀಚೆಗೆ ಶಸ್ತ್ರಚಿಕಿತ್ಸೆಗೆ ಒಳಗಾದವರು ಸಹ ಬಿಸಿ ಚಹಾವನ್ನು ಸೇವಿಸಬಾರದು.
ಬೇವಿನ ಟೀ ತಯಾರಿಸುವುದು ಹೇಗೆ .. ಎರಡು ಕಪ್ ನೀರಿನಲ್ಲಿ 6-10 ಬೇವಿನ ಎಲೆಗಳನ್ನು ಕುದಿಸಿ. ಅದರಲ್ಲಿ ಬೆಲ್ಲ ಅಥವಾ ಸಕ್ಕರೆಯನ್ನು ಸೇರಿಸುವುದರಿಂದ ಅದು ಕಹಿಯಾಗಿ ಕಾಣುವುದಿಲ್ಲ. ನೀರು ತಿಳಿ ಹಸಿರು ಬಣ್ಣಕ್ಕೆ ತಿರುಗಿದಾಗ ಒಲೆ ಆಫ್ ಮಾಡಿ. ಅದರ ನಂತರ ಅದನ್ನು ಬಿಸಿಯಾಗಿ ಕುಡಿಯುವುದು ಉತ್ತಮ.
ನವದೆಹಲಿ: ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವ ಇಂಧನ ಬೆಲೆ ಕಡಿಮೆ ಮಾಡಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೂಡಿ ಕೆಲಸ ಮಾಡಬೇಕಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸೂಕ್ತ ಕ್ರಮ ಕೈಗೊಳ್ಳುತ್ತವೆ ಎಂಬ ವಿಶ್ವಾಸ ಇದೆ ಎಂದು ಭರವಸೆ ವ್ಯಕ್ತಪಡಿಸಿದರು.
ಆರ್ ಬಿಐ ಗವರ್ನರ್, ಕೋವಿಡ್ ನಿಂದ ಆದ ಒತ್ತಡವನ್ನು ಕಡಿಮೆಗೊಳಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪರೋಕ್ಷ ತೆರಿಗೆ ಹೆಚ್ಚಳ ಮಾಡಿವೆ. ಹೀಗಾಗಿ ಇಂಧನ ಬೆಲೆಯಲ್ಲಿ ನಿರಂತರ ಹೆಚ್ಚಳವಾಗುತ್ತಿದೆ. ಇದನ್ನು ಇಳಿಕೆ ಮಾಡಿ ಜನರ ಮೇಲಿನ ಬಾರ ಕಡಿಮೆ ಮಾಡಲು ಒಗ್ಗೂಡಿ ಕ್ರಮ ಕೈಗೊಳ್ಳಬೇಕು ಎಂದು ಆರ್ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಹೇಳಿದ್ದಾರೆ.
ಡೀಸೆಲ್ ಮತ್ತು ಪೆಟ್ರೋಲ್ ಬೆಲೆಗಳು ಇತರ ಎಲ್ಲಾ ದರ ಹೆಚ್ಚಳಕ್ಕೆ ಕಾರಣವಾಗುತ್ತದೆ. ಹೀಗಾಗಿ ಎಲ್ಲ ವಸ್ತುಗಳ ಬೆಲೆ ಏರಿಕೆಗೆ ಇಂಧನ ದರ ಹೆಚ್ಚಳ ಕಾರಣವಾಗುತ್ತಿದೆ. ಹೆಚ್ಚಿನ ಇಂಧನ ಬೆಲೆಗಳು ಉತ್ಪಾದನಾ ವೆಚ್ಚ, ಸಾರಿಗೆ ಮತ್ತು ಇತರ ಅಂಶಗಳ ಮೇಲೆ ಪರಿಣಾಮ ಬೀರುತ್ತವೆ ಎಂದು ಆರ್ಬಿಐ ಗವರ್ನರ್ ಕಳವಳ ವ್ಯಕ್ತಪಡಿಸಿದ್ದಾರೆ.
ನವದೆಹಲಿ:ನಿರುದ್ಯೋಗಿಗಳಿಗೆ ಒಳ್ಳೆಯ ಸುದ್ದಿ. ದೆಹಲಿ ವಿಶ್ವವಿದ್ಯಾಲಯದಲ್ಲಿ ಬೋಧಕೇತರ ಸಿಬ್ಬಂದಿ ಹುದ್ದೆಗಳ ನೇಮಕಾತಿಗಾಗಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್ಟಿಎ) ಅಧಿಸೂಚನೆ ಹೊರಡಿಸಿದೆ. ಒಟ್ಟು 1145 ಹುದ್ದೆಗಳನ್ನು ಪ್ರಕಟಿಸಿದೆ. ಇದರಲ್ಲಿ ಜೂನಿಯರ್ ಎಂಜಿನಿಯರ್, ಜೂನಿಯರ್ ಅಸಿಸ್ಟೆಂಟ್, ಲೈಬ್ರರಿ ಅಟೆಂಡೆಂಟ್, ಪರ್ಸನಲ್ ಅಸಿಸ್ಟೆಂಟ್, ಟೆಕ್ನಿಕಲ್ ಅಸಿಸ್ಟೆಂಟ್, ಸೀನಿಯರ್ ಟೆಕ್ನಿಕಲ್ ಅಸಿಸ್ಟೆಂಟ್, ಸ್ಟೆನೊಗ್ರಾಫರ್ ಮುಂತಾದ ಹುದ್ದೆಗಳು ಸೇರಿವೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಪ್ರಾರಂಭವಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮಾರ್ಚ್ 16, 2021. ಆಸಕ್ತ ಅಭ್ಯರ್ಥಿಗಳು ಹೆಚ್ಚಿನ ವಿವರಗಳಿಗಾಗಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ-ಎನ್ಟಿಎ ಅಧಿಕೃತ ನೇಮಕಾತಿ ವೆಬ್ಸೈಟ್ https://recruitment.nta.nic.in/ ಅಥವಾ ದೆಹಲಿ ವಿಶ್ವವಿದ್ಯಾಲಯದ ಅಧಿಕೃತ ವೆಬ್ಸೈಟ್ http://www.du.ac.in/ ಗೆ ಭೇಟಿ ನೀಡಬಹುದು. ಅರ್ಜಿ ಸಲ್ಲಿಸುವ ಮೊದಲು, ಅಧಿಸೂಚನೆಯನ್ನು ಪೂರ್ಣವಾಗಿ ಓದಿ ಮತ್ತು ಅರ್ಹತೆಗಳ ವಿವರಗಳನ್ನು ತಿಳಿದುಕೊಳ್ಳಿ.
ಎನ್ಟಿಎ ಡಿಯು ನೇಮಕಾತಿ 2021: ಖಾಲಿ ಹುದ್ದೆಗಳ ವಿವರಗಳು …
ಕಿರಿಯ ಸಹಾಯಕ – 236
ದೂರವಾಣಿ ಆಪರೇಟರ್ – 08
ಸಹಾಯಕ – 80
ಸ್ಟೆನೋಗ್ರಾಫರ್ – 77
ಯೋಗ ಸಂಘಟಕ – 01
ಹಿರಿಯ ವೈಯಕ್ತಿಕ ಸಹಾಯಕ – 05
ನರ್ಸ್ – 07
ಸಹಾಯಕ ವ್ಯವಸ್ಥಾಪಕ ಅತಿಥಿ ಗೃಹ – 01
ಜೂನಿಯರ್ ಎಂಜಿನಿಯರ್ ಸಿವಿಲ್ – 05
ಜೂನಿಯರ್ ಎಂಜಿನಿಯರ್ ಎಲೆಕ್ಟ್ರಿಕಲ್ – 05
ಸಹಾಯಕ ಭದ್ರತಾ ಅಧಿಕಾರಿ – 04
ಹಿರಿಯ ಸಹಾಯಕ – 45
ಹಿಂದಿ ಅನುವಾದಕ – 02
ವೈಯಕ್ತಿಕ ಸಹಾಯಕ – 09
ವೃತ್ತಿಪರ ಸಹಾಯಕ – 16
ಸಾಮಾಜಿಕ ಕಾರ್ಯಕರ್ತ- 03
ಭೌತಚಿಕಿತ್ಸಕ – 02
ಎಕ್ಸ್-ರೇ ತಂತ್ರಜ್ಞ – 02
ತೋಟಗಾರಿಕೆ ತಜ್ಞ- 01
ಹಿರಿಯ ತಾಂತ್ರಿಕ ಸಹಾಯಕ ವಿಭಾಗ – 58
ಸಹಾಯಕ ಆರ್ಕೈವಿಸ್ಟ್ – 01
ಸ್ಪೋರ್ಟ್ ಕೋಚ್ – 01
ಅರೆ ವೃತ್ತಿಪರ ಸಹಾಯಕ – 17
ತಾಂತ್ರಿಕ ಸಹಾಯಕ ಕಂಪ್ಯೂಟರ್ – 19
ತಾಂತ್ರಿಕ ಸಹಾಯಕ ಆರೋಗ್ಯ ಕೇಂದ್ರ – 02
ಸಂಖ್ಯಾಶಾಸ್ತ್ರೀಯ ಸಹಾಯಕ – 2
ತಾಂತ್ರಿಕ ಸಹಾಯಕ ವಿಭಾಗ – 51
ನೈರ್ಮಲ್ಯ ನಿರೀಕ್ಷಕರು – 01
ತಬಲಾ ಸಹಚರರು – 12
ಪಖಾವಾಜ್ ಆಟಗಾರ – 01
ಸಾರಂಗಿ ಸಹಾಯಕರು – 02
ಪಿಟೀಲು ಸಹಾಯಕರು – 02
ಮೃದಂಗಂ ಸಹೋದ್ಯೋಗಿಗಳು – 01
ಹಾರ್ಮೋನಿಯಂ ಸಹಾಯಕ – 01
ತನ್ಪುರಾ ಸಹೋದ್ಯೋಗಿಗಳು – 04
ಪ್ರಯೋಗಾಲಯ ಸಹಾಯಕ – 53
ಕೆಲಸದ ಸಹಾಯಕ – 03
ಸಹಾಯಕ ಅಂಗಡಿ – 02
ಸೇಲ್ಸ್ಮ್ಯಾನ್ ಡಿಎಚ್ಎಂಐ -02
ಗ್ರಂಥಾಲಯ ಸಹಾಯಕ -05
ಖಾಸಗಿ ಕಾರ್ಯದರ್ಶಿ – 02
ಭದ್ರತಾ ಅಧಿಕಾರಿ – 01
ಕಿರಿಯ ಸಹಾಯಕ ಅಂಗಡಿ – 1
ಜೂನಿಯರ್ ವರ್ಕ್ ಅಸಿಸ್ಟೆಂಟ್ (ಎಂಜಿನಿಯರಿಂಗ್ ಸೇವೆ) – 35
ಲೈಬ್ರರಿ ಅಟೆಂಡೆಂಟ್ – 109
ಆರೋಗ್ಯ ಅಟೆಂಡೆಂಟ್ – 18
ಪ್ರಯೋಗಾಲಯದ ಅಟೆಂಡೆಂಟ್ – 152
ಎಂಜಿನಿಯರಿಂಗ್ ಅಟೆಂಡೆಂಟ್ – 52
ವೈದ್ಯಕೀಯ ಅಧಿಕಾರಿ – 15
ಸಹಾಯಕ ರಿಜಿಸ್ಟ್ರಾರ್ – 06
ನ್ಯೂಸ್ ಡೆಸ್ಕ್ : ಅರಿಜೋನಾದಲ್ಲಿ ಕುಟುಂಬವೊಂದು ತಮ್ಮ ಮಗುವಿಗಾಗಿ ಕೊಂದಂತಹ ಗೊಂಬೆಯೊಳಗೆ ಫೆಂಟಾನಿಲ್ ಎಂದು ನಂಬಲಾದ 5,000ಕ್ಕಿಂತ ಹೆಚ್ಚು ಮಾತ್ರೆಗಳನ್ನು ಪತ್ತೆ ಮಾಡಿದ್ದು, ಅವರು ಪಾವತಿಸಿದ ಆಟಿಕೆಗಿಂತ ಹೆಚ್ಚು ಮೌಲ್ಯದ ಆಟಿಕೆಯನ್ನು ಖರೀದಿಸಿದರು.
ಅರಿಜೋನಾದ ಎಲ್ ಮಿರೇಜ್ ನ ಒಂದು ಸ್ಟೋರ್ ನಿಂದ ಮಗುವಿನ ಪೋಷಕರು ಮಿಂಚು ಹುಳದ ಗೊಂಬೆಯನ್ನು ತಮ್ಮ ಮಗುವಿಗಾಗಿ ಖರೀದಿಸಿದ್ದಾರೆ ಎಂದು ಫೀನಿಕ್ಸ್ ಪೊಲೀಸರು ಶನಿವಾರ ತಿಳಿಸಿದ್ದಾರೆ. ಪೋಷಕರು ಆಟಿಕೆಯನ್ನು ಶುಚಿಗೊಳಿಸುತ್ತಿದ್ದಾಗ ಮಾದಕ ವಸ್ತುತುಂಬಿದ್ದ ಸ್ಯಾಂಡ್ ಬ್ಯಾಗ್ ಸಿಕ್ಕಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ತಕ್ಷಣ ಮನೆಯವರು ಮಾಹಿತಿ ನೀಡಿ, ಔಷಧಗಳನ್ನು ಅಧಿಕಾರಿಗಳಿಗೆ ಒಪ್ಪಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಫೆಂಟಾನಿಲ್ ಎಂಬುದು ಅನೇಕ ವೇಳೆ ಇತರ ಅಕ್ರಮ ಔಷಧಗಳಾದ ಹೆರಾಯಿನ್ ಮತ್ತು ಕೊಕೇನ್ ನೊಂದಿಗೆ ಮಿಶ್ರಣಗೊಂಡ ಒಂದು ಸಂಶ್ಲೇಷಿತ ಓಪಿಯಾಯ್ಡ್ ಆಗಿದ್ದು, ಇದು ಯುಫಾರಿಕ್ ರೀತಿಯ ಪರಿಣಾಮಗಳನ್ನು ಉಂಟುಮಾಡುತ್ತದೆ ಎಂದು ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ ತಿಳಿಸಿದೆ.
ಸಿಂಥಿಕ್ ಓಪಿಯಾಡ್ ಗಳನ್ನು ಒಳಗೊಂಡ ಓವರ್ ಡೋಸ್ ಸಾವುಗಳು 2018 ರಿಂದ 2019ರ ಅವಧಿಯಲ್ಲಿ 16 ಪ್ರತಿಶತದಷ್ಟು ಹೆಚ್ಚಾಗಿದೆ ಎಂದು CDC ತಿಳಿಸಿದೆ.
ಕಾನೂನು ಜಾರಿ ಅಧಿಕಾರಿಗಳು ಈ ಘಟನೆಯನ್ನು ಪೋಷಕರಿಗೆ ಜ್ಞಾಪನಾ ರೂಪದಲ್ಲಿ ಬಳಸಿದ್ದು, ತೆರೆದ ಮತ್ತು ಬಳಸಿದ ಆಟಿಕೆಗಳನ್ನು ಪರೀಕ್ಷಿಸಲು ತಿಳಿಸಿದ್ದಾರೆ. ಮಕ್ಕಳ ಆಟಿಕೆಗಳ ಒಳಗೆ ಅಕ್ರಮ ಮಾದಕ ವಸ್ತುಗಳು ಪತ್ತೆಯಾಗಿರುತ್ತಿತ್ತು ಎಂಬುದು ಇದೇ ಮೊದಲಲ್ಲ. 2015ರಲ್ಲಿ, ನ್ಯೂಜೆರ್ಸಿಯ ತಾಯಿ ಎಟ್ಸಿಯಿಂದ ಕೊಕೇನ್ ತುಂಬಿದ $500 “ಹ್ಯಾಂಡ್ ಮೇಡ್” ಮರ್ಮೇಡ್ ಗೊಂಬೆಯನ್ನು ಖರೀದಿಸಿದಳು. ನಂತರ ತನಿಖಾಧಿಕಾರಿಗಳು ಅಲಬಾಮಾ ಮೂಲದ ಎಟ್ಸಿ ಅಂಗಡಿಯು ಮರ್ ಬೇಬಿ ಗೊಂಬೆಗಳನ್ನು ಮಾದಕ ದ್ರವ್ಯಗಳ ಕಳ್ಳಸಾಗಣೆಯ ಮುಂಚೂಣಿಯಾಗಿ ಬಳಸುತ್ತಿದ್ದರು ಎಂದು ಪತ್ತೆ ಮಾಡಿದ್ದಾರೆ.
ಚೆನೈ:9, 10 ಮತ್ತು 11 ನೇ ತರಗತಿ ವಿದ್ಯಾರ್ಥಿಗಳು ಪರೀಕ್ಷೆಯಿಲ್ಲದೆ ಉತ್ತೀರ್ಣರಾಗುತ್ತಾರೆ ಎಂದು ತಮಿಳುನಾಡು ಸಿಎಂ ಪಳನಿಸ್ವಾಮಿ ಪ್ರಕಟಿಸಿದ್ದಾರೆ. ಇವರೆಲ್ಲರೂ ನೇರವಾಗಿ ಮುಂದಿನ ತರಗತಿಗೆ ಹೋಗುತ್ತಾರೆ ಎಂದಿದ್ದಾರೆ.
ಮತ್ತೊಂದೆಡೆ ಪಳನಿ ಸ್ವಾಮಿ ರಾಜ್ಯ ಸರ್ಕಾರಿ ನೌಕರರಿಗೂ ಗುಡ್ ನ್ಯೂಸ್ ಕೊಟ್ಟಿದ್ದಾರೆ. ನಿವೃತ್ತಿ ವಯಸ್ಸನ್ನು 59 ರಿಂದ 60 ವರ್ಷಕ್ಕೆ ಏರಿಸುವುದಾಗಿ ವಿಧಾನಸಭೆ ಪ್ರಕಟಿಸಿತು. ಸಿಎಂ ನಿರ್ಧಾರದಿಂದ ಈ ವಿದ್ಯಾರ್ಥಿಗಳು ಪೋಷಕರು ಹಾಗೂ ನೌಕರರು ಸಂತೋಷಗೊಂಡಿದ್ದಾರೆ.
ತಮಿಳುನಾಡು ವಿಧಾನಸಭೆಗೆ ಶೀಘ್ರದಲ್ಲೇ ಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿಯೇ ಎಐಎಡಿಎಂಕೆ ಸರ್ಕಾರ ಜನರಿಗೆ ವಿವಿಧ ರೀತಿಯ ಆಶ್ವಾಸನೆ ನೀಡುತ್ತಿದೆ. ಇದರ ಭಾಗವಾಗಿಯೇ ನೌಕರರ ನಿವೃತ್ತಿ ವಯಸ್ಸು ಹೆಚ್ಚಳ, ಹಾಗೂ 9 ರಿಂದ 11 ತರಗತಿಯರವರೆಗೆ ಪರೀಕ್ಷೆ ಇಲ್ಲದೇ ಉತ್ತೀರ್ಣವಾಗುವ ಅವಕಾಶ ನೀಡಿದೆ.
ಆಲಪ್ಪುಳ: ಕೇರಳದ ಆಲಪ್ಪುಳದಲ್ಲಿ ಆರ್ ಎಸ್ ಎಸ್ ಕಾರ್ಯಕರ್ತನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ ಡಿಪಿಐನ 8 ಮಂದಿಯನ್ನು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.
ನಂದು (23) ಎಂಬ ಯುವಕನನ್ನು ಹತ್ಯೆ ಮಾಡಿರುವ ಆರೋಪ ಎಸ್ ಡಿಪಿಐ ವಿರುದ್ಧ ಕೇಳಿಬಂದಿದೆ. ಚೆರ್ತಲಾದ ಬಳಿ ಇರುವ ನಾಗಮಕುಲಂಗರದಲ್ಲಿ ಎರಡು ಗುಂಪಿನ ನಡುವೆ ಉಂಟಾದ ಘರ್ಷಣೆಯ ನಂತರ ಈ ಕೊಲೆ ನಡೆದಿದೆ.
ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ ಘರ್ಷಣೆಯಲ್ಲಿ ಎಸ್ ಡಿಪಿಐ ಹಾಗೂ ಆರ್ ಎಸ್ ಎಸ್ ನ 6 ಮಂದಿ ಗಾಯಗೊಂಡಿದ್ದರು. ಗಾಯಾಳುಗಳಿಗೆ ಆಲಪ್ಪುಳ, ಎರ್ನಾಕುಲಮ್ ನ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಓರ್ವ ಆರ್ ಎಸ್ಎಸ್ ನ ಕಾರ್ಯಕರ್ತನ ಸ್ಥಿತಿ ಗಂಭೀರವಾಗಿದೆ. ಕಾರ್ಯಕರ್ತನ ಸಾವು ಖಂಡಿಸಿ ಬಿಜೆಪಿ, ಬಂದ್ ಗೆ ಕರೆ ನೀಡಿದೆ.
ತನಿಖಾಧಿಕಾರಿಗಳು ಅವನನ್ನು ಬಂಧಿಸಿದ್ದು ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದಾರೆ.
ಒಕ್ಲಹೋಮದ ಚಿಕಶಾದಲ್ಲಿರುವ ಲಾರೆನ್ಸ್ ಪಾಲ್ ಆಂಡರ್ಸನ್ ತನ್ನ ನೆರೆಹೊರೆಯ ಆಂಡ್ರಿಯಾ ಲಿನ್ ಬ್ಲಾಂಕೆನ್ಶಿಪ್ ಳನ್ನು ತನ್ನ ಮನೆಯಲ್ಲಿ ಕೊಂದಿದ್ದಾನೆ. ಅವಳ ಹೃದಯವನ್ನು ಆಲೂಗಡ್ಡೆಯಂತೆ ಕತ್ತರಿಸಿ ಬೇಯಿಸಿ ತಿಂದಿದ್ದಾನೆ.ಆಕೆಯನ್ನು ಕೊಂದ ಕಾರಣ ಪೋಲಿಸರು ಬಹಿರಂಗಪಡಿಸಿಲ್ಲ.
ಅದೇ ರಾತ್ರಿ ತನ್ನ ಮನೆಯಲ್ಲಿ ತನ್ನ ಚಿಕ್ಕಪ್ಪ, ಲಿಯಾನ್ ಪೈ ಮತ್ತು 4 ವರ್ಷದ ಬಾಲಕಿಯಾದ ಕೆಯೋಸ್ ಯೇಟ್ಸ್ನನ್ನು ತನ್ನ ಮನೆಯಲ್ಲಿ ಕೊಂದ ಆರೋಪವೂ ಇದೆ. ಅವರ ಚಿಕ್ಕಮ್ಮ ಡೆಲ್ಸಿ ಪೈಚಾಕುವಿನಿಂದ ಇರಿದರೂ ಬದುಕುಳಿದರು.
ಆಂಡರ್ಸನ್ ಮನೆಯ ಮತ್ತೊಂದು ಕೋಣೆಯಲ್ಲಿ ದಿಂಬುಗಳ ಮೇಲೆ ವಾಂತಿ ಮಾಡಿಕೊಂಡಿದ್ದು, ಘಟನಾ ಸ್ಥಳದಲ್ಲಿ ಅಧಿಕಾರಿಗಳು ಅವರನ್ನು ಬಂಧಿಸಿದ್ದಾರೆ.