Author: KNN IT Team

ಈಗ ಮೊಬೈಲ್ ಪ್ರತಿಯೊಬ್ಬರ ಜೀವನದಲ್ಲಿ ಅವಿಭಾಜ್ಯ ಅಂಗವಾಗಿ ಮಾರ್ಪಟ್ಟಿದೆ. ನಾವು ಬಳಸುವ ಸ್ಮಾರ್ಟ್‌ಫೋನ್‌ಗೆ ಚಾರ್ಜರ್ ಅತ್ಯಗತ್ಯವಾಗಿದ್ದು, ನಕಲಿ ಚಾರ್ಜರ್ ಬಳಕೆಯಿಂದ ಫೋನ್‌ನ ಬ್ಯಾಟರಿ ಬೇಗನೆ ಹಾಳಾಗಬಹುದು. ಚಾರ್ಜರ್ ಅಸಲಿಯೇ, ನಕಲಿಯೇ, ಎಂದು ತಿಳಿಯಬಹುದು. ಹೆಚ್ಚಿನ ಮಂದಿ ಬೆಲೆ ಕಮ್ಮಿಯಿದೆ ಎಂದು ನಕಲಿ ಚಾರ್ಜರ್‌ಗಳನ್ನು ಖರೀದಿಸುತ್ತಾರೆ. ಇದರಿಂದ ಸ್ಮಾರ್ಟ್‌ಫೋನ್‌ಗೆ ಹಾನಿಯಾಗುವ ಅದರಲ್ಲಿಯೂ ಬ್ಯಾಟರಿ ಮೇಲೆ ಪರಿಣಾಮ ಬೀರುತ್ತದೆ. ನಿಜವಾದ ಚಾರ್ಜರ್‌ನಲ್ಲಿರುವ ಬ್ರ್ಯಾಂಡ್ ಹೆಸರು ಯಾವಾಗಲೂ ಸರಿಯಾಗಿರುತ್ತದೆ. ನಕಲಿ ಚಾರ್ಜರ್‌ನಲ್ಲಿರುವ ಬ್ರ್ಯಾಂಡ್ ಹೆಸರು ತಪ್ಪಾಗಿರುತ್ತದೆ. ಇಲ್ಲವೇ ಅದರ ಟೈಪಿಂಗ್ ತಪ್ಪಾಗಿರುವ ಸಾಧ್ಯತೆಯಿದೆ. ಇದನ್ನು ಸೂಕ್ಷ್ಮವಾಗಿ ಗಮನಿಸಿಕೊಳ್ಳಿ. ಮೂಲ ಚಾರ್ಜರ್ ಕಡಿಮೆ ಶಕ್ತಿಯನ್ನು ಬಳಸುತ್ತದೆ. ನಕಲಿ ಚಾರ್ಜರ್ ಹೆಚ್ಚಿನ ವಿದ್ಯುತ್ ಅನ್ನು ಬಳಕೆ ಮಾಡುತ್ತದೆ. ನಿಜವಾದ ಚಾರ್ಜರ್ ನಕಲಿ ಚಾರ್ಜರ್‌ಗಿಂತ ಹೆಚ್ಚು ತೂಕವಿರುತ್ತದೆ. ಮೂಲ ಚಾರ್ಜರ್ನಲ್ಲಿ ಫೋನ್ ವೇಗವಾಗಿ ಚಾರ್ಜ್ ಆಗುತ್ತದೆ. ಆದರೆ, ನಕಲಿ ಚಾರ್ಜರ್ ಫೋನ್ ನಲ್ಲಿ ಚಾರ್ಜ್ ಬೇಗ ಆಗುವುದಿಲ್ಲ. ಅಷ್ಟೆ ಅಲ್ಲದೇ, ನಕಲಿಯಲ್ಲಿ ಸಾಮಾನ್ಯವಾಗಿ ಕನೆಕ್ಟರ್‌ಗಳು ಮತ್ತು ಪೋರ್ಟ್‌ಗಳು ಸಡಿಲವಾಗಿರುತ್ತವೆ. ನಿಜವಾದ…

Read More

ಇಸ್ರೋದ ಹೈದರಾಬಾದ್ ಮೂಲದ ನ್ಯಾಷನಲ್ ರಿಮೋಟ್ ಸೆನ್ಸಿಂಗ್ ಸೆಂಟರ್ ಬಾಹ್ಯಾಕಾಶದಿಂದ ಅಯೋಧ್ಯೆಯಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಭವ್ಯ ರಾಮಮಂದಿರದ ಒಂದು ಉಪಗ್ರಹ ಚಿತ್ರವನ್ನು ಬಿಡುಗಡೆ ಮಾಡಿದೆ. ಬಾಹ್ಯಾಕಾಶದಿಂದ ಭಾರತೀಯ ರಿಮೋಟ್ ಸೆನ್ಸಿಂಗ್ ಉಪಗ್ರಹದಿಂದ ಡಿಸೆಂಬರ್ 16 ರಂದು ಫೋಟೋ ಕ್ಲಿಕ್ಕಿಸಲಾಗಿದ್ದು, ಇಂದು ಇಸ್ರೋ ಹಂಚಿಕೊಂಡಿದೆ. ಚಿತ್ರದಲ್ಲಿ ದಶರಥ ಮಹಲ್, ಅಯೋಧ್ಯೆ ರೈಲು ನಿಲ್ದಾಣ ಮತ್ತು ಸರಯೂ ನದಿಯನ್ನು ಸಹ ತೋರಿಸುತ್ತಿದೆಯಾಗಿದೆ. ನಾಳೆ ಪ್ರಧಾನಮಂತ್ರಿ ನರೇಂದ್ರ ಮೋದಿ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೇರಿದಂತೆ ಇತರರ ಸಮ್ಮುಖದಲ್ಲಿ ವೈದಿಕ ಸ್ತೋತ್ರಗಳ ನಡುವೆ ಮಧ್ಯಾಹ್ನ ರಾಮಲಲ್ಲಾ ವಿಗ್ರಹಕ್ಕೆ ಪ್ರಾಣ ಪ್ರತಿಷ್ಠಾಪನೆ ನಡೆಸಿದ ಬಳಿಕ ಮಹಾಮಸ್ತಕಾಭಿಷೇಕ ನಡೆಯಲಿದೆ. ಈಗಾಗಲೇ ಸಾವಿರಾರು ಮಂದಿ ಯತಿಗಳು, ಸಾಧುಗಳು, ಗಣ್ಯಾತೀಗಣ್ಯರು ಅಯೋಧ್ಯೆಗೆ ಆಗಮಿಸಿದ್ದಾರೆ. ಹಿಂದೆಂದೂ ಕಾಣದ ರೀತಿಯಲ್ಲಿ ಅಯೋಧ್ಯೆಯಲ್ಲಿ ವಿದ್ಯುದೀಪಾಲಂಕಾರ ಮತ್ತು ಪುಷ್ಪಾಲಂಕಾರ ಮಾಡಲಾಗಿದೆಯಾಗಿದೆ.

Read More

ಮಂಗಳೂರು : ಹಣವನ್ನು ಪಣವಾಗಿಟ್ಟು ಅಂದರ್-ಬಾಹರ್ ಜೂಜಾಟವಾಡುತ್ತಿದ್ದ ಇಸ್ಪೀಟ್ ಅಡ್ಡೆಗೆ ಸಿಸಿಬಿ ಪೊಲೀಸರು ದಾಳಿ ನಡೆಸಿ 29 ಜನರನ್ನು ಬಂಧಿಸಿದ್ದಾರೆ. ಬಂಧಿತರಿಂದ ಜೂಜಾಟಕ್ಕೆ ಉಪಯೋಗಿಸಿದ ಒಟ್ಟು 1,75,450 ರೂ. ನಗದು ಹಣವನ್ನು ವಶಕ್ಕೆ ಪಡೆಯಲಾಗಿದೆಯಾಗಿದೆ. ಮೂಲ್ಕಿ ಪೊಲೀಸ್ ಠಾಣಾ ಸರಹದ್ದಿನ ಮಂಗಳೂರು ತಾಲೂಕು ಕಿಲ್ಪಾಡಿ ಗ್ರಾಮದ ಬಂಡಸಾಲೆ ಎಂಬಲ್ಲಿ ಮನೆಯೊಂದರಲ್ಲಿ ಕೆಲವು ಜನರು ಸೇರಿ ಹಣವನ್ನು ಪಣವಾಗಿಟ್ಟು ಇಸ್ಪೀಟು ಎಲೆಗಳಿಂದ ಅಂದರ್-ಬಾಹರ್ ಜೂಜಾಟ ಆಡುತ್ತಿದ್ದಾರೆಂದು ಬಂದ ಖಚಿತ ಮಾಹಿತಿ ಮೇರೆಗೆ ಬೆಳಗಿನ ಜಾವವೇ ಸ್ಥಳಕ್ಕೆ ದಾಳಿ ನಡೆಸಿದ ಮಂಗಳೂರು ಸಿಸಿಬಿ ಪೊಲೀಸರು 29 ಜನರನ್ನು ಬಂಧಿಸಿದ್ದಾರೆ. ಈ ಜೂಜಾಟವನ್ನು ನಿತ್ಯಾನಂದ ,ವಿಲ್ಫ್ರೇಡ್ ಮತ್ತು ರೆಹಮಾನ್ ಎಂಬವರು ತಮ್ಮ ಲಾಭಕ್ಕೋಸ್ಕರ ಆಡಿಸುತ್ತಿದ್ದರು. ಕಾರ್ಯಾಚರಣೆಯ ವೇಳೆ ನಿತ್ಯಾನಂದ ಮತ್ತು ರೆಹಮಾನ್ ಪರಾರಿಯಾಗಿದ್ದಾರೆ. ಈ ಪತ್ತೆ ಕಾರ್ಯವನ್ನು ಮಂಗಳೂರು ನಗರ ಪೊಲೀಸ್ ಆಯುಕ್ತರಾದ ಅನುಪಮ್ ಅಗರ್ವಾಲ್ ಐಪಿಎಸ್ ರವರ ಮಾರ್ಗದರ್ಶನದಂತೆ ಕಾನೂನು ಮತ್ತು ಸುವ್ಯವಸ್ಥೆಯ ಡಿಸಿಪಿ ಸಿದ್ದಾರ್ಥ ಗೋಯಲ್ ಐಪಿಎಸ್ ಮತ್ತು ಅಪರಾಧ ಮತ್ತು ಸಂಚಾರ…

Read More

ದಕ್ಷಿಣ ಕನ್ನಡ ಜಿಲ್ಲೆಯ ಬೈಕಂಪಾಡಿಯ ಕೆನರಾ ಇಂಡಸ್ಟ್ರೀಸ್ ಅಸೋಸಿಯೇಷನ್ ಸಭಾಂಗಣದಲ್ಲಿ ಇತ್ತೀಚೆಗೆ ನಡೆದ ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕೆಗಳ ಆರ್ಥಿಕ ಸಾಕ್ಷರತೆ ಕುರಿತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ.ಜಯಪ್ರಕಾಶ್ ಹೆಗ್ಡೆ, ಸೂಕ್ಷ್ಮ ಮತ್ತು ಸಣ್ಣ ಉದ್ಯಮಗಳ ಸಮಸ್ಯೆಗಳನ್ನು ಪರಿಹರಿಸಿದಾಗ ಮಾತ್ರ ಕೈಗಾರಿಕಾ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿ ಸಾಧ್ಯ ಎಂದು ಹೇಳಿದರು. ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕೆಗಳಿಗೆ ಆರ್ಥಿಕ ನೆರವು ನೀಡಿದಾಗ ಮತ್ತು ಅವರ ಸಮಸ್ಯೆಗಳನ್ನು ಪರಿಹರಿಸಿದಾಗ ಬೆಳೆಯಲು ಸಾಧ್ಯವಾಗುತ್ತದೆ. ಸಣ್ಣ ಕೈಗಾರಿಕೆಗಳ ಸಮಸ್ಯೆಗಳ ಬಗ್ಗೆ ಚರ್ಚಿಸಲು ಕೈಗಾರಿಕಾ ಸಚಿವರೊಂದಿಗೆ ಸಭೆ ನಡೆಸುತ್ತೇನೆ ಎಂದು ಭರವಸೆ ನೀಡಿದರು. ಯುವಜನರು ಉದ್ಯೋಗ ಪಡೆಯುವತ್ತ ಮಾತ್ರ ಗಮನ ಹರಿಸದೆ ಕೈಗಾರಿಕೆಗಳನ್ನು ಸ್ಥಾಪಿಸುವತ್ತಲೂ ಹೆಜ್ಜೆ ಇಡಬೇಕು. ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘವನ್ನು ಶ್ಲಾಘಿಸಿದ ಹೆಗ್ಡೆ, ಸಂಘವು ಆಯೋಜಿಸಿರುವ ಕಾರ್ಯಕ್ರಮವು ಜಾಗೃತಿ ಮೂಡಿಸುವುದಲ್ಲದೆ, ಕೈಗಾರಿಕೆಗಳಿಗೆ ಬ್ಯಾಂಕುಗಳಿಂದ ಆರ್ಥಿಕ ನೆರವು ಪಡೆಯಲು ಸಹಾಯ ಮಾಡುತ್ತದೆ ಎಂದು ಹೇಳಿದರಾಗಿದೆ.

Read More

ಹಿಂದೂಗಳ ಐದು ಶತಮಾನಗಳ ಕನಸು ಅಯೋಧ್ಯೆ ಶ್ರೀರಾಮ ಮಂದಿರ ನಾಳೆ ಲೋಕಾರ್ಪಣೆಗೊಳ್ಳಲಿದೆ. ರಾಮ ಮಂದಿರ ಲೋಕಾರ್ಪಣೆ ಹಿನ್ನೆಲೆ ಅಯೋಧ್ಯೆಯಲ್ಲಿ ಸಂಭ್ರಮದ ವಾತಾವರಣ ಮನೆ ಮಾಡಿದೆಯಾಗಿದೆ. ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನಾ ಸಮಾರಂಭದಲ್ಲಿ ಬೆಳಿಗ್ಗೆ 10 ರಿಂದ ಮಂಗಳ ವಾದ್ಯ ಮೊಳಗಲಿದೆ. ಉತ್ತರ ಪ್ರದೇಶದ ಆದಿವಾಸಿ ಜನಾಂಗದವರ ಜಾನಪದ ವಾದ್ಯಮೇಳ, ಬುಡಕಟ್ಟು ಜನಾಂಗದವರು ಭಾರಿಸುವ ವಾದ್ಯ ಸೇರಿದಂತೆ ವಿವಿಧ ರಾಜ್ಯಗಳ 50ಕ್ಕೂ ಹೆಚ್ಚು ಮನಮೋಹಕ ಸಂಗೀತ ವಾದ್ಯ ತಂಡಗಳು ಭಾಗಿಯಾಗಲಿದ್ದು, ಸುಮಾರು ಎರಡು ಗಂಟೆಗಳ ಕಾಲ ಮಂಗಳ ವಾದ್ಯ ಮೊಳಗಲಿದೆ. ಗರ್ಭಗುಡಿಯಲ್ಲಿ ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆ ನಡೆಯಲಿದ್ದು, ರಾಮಲಲ್ಲಾ ಮೂರ್ತಿ ಪ್ರಾಣ ಪ್ರತಿಷ್ಠಾಪನೆಯ ಶುಭ ಮುಹೂರ್ತ 12.29 ರಿಂದ 12.30 ರ ವರೆಗೆ (32 ಸೆಕೆಂಡುಗಳು) ಇರಲಿದ್ದು, ಪ್ರಾಣ ಪ್ರತಿಷ್ಠಾಪನೆಯ ಶುಭ ಸಮಯ ಕೇವಲ 84 ಸೆಕೆಂಡುಗಳು ಮಾತ್ರ ಇರಲಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಪೂಜಾ ವಿಧಿವಿಧಾನಗಳನ್ನು ನೆರವೇರಿಸಲಿದ್ದು, ಶ್ರೀರಾಮಲಲ್ಲಾ ಮೂರ್ತಿ ಪ್ರಾಣ ಪ್ರತಿಷ್ಠಾಪನೆಯನ್ನೂ ನೆರವೇರಿಸಲಿದ್ದಾರೆ. ಕಾಶಿಯ ಹೆಸರಾಂತ ವೈದಿಕ ಆಚಾರ್ಯ ಗಣೇಶ್ವರ್ ದ್ರಾವಿಡ್ ಹಾಗೂ…

Read More

ಮಂಗಳೂರು : ನಾಳೆ ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರದ ನೂತನ ಕಟ್ಟಡದಲ್ಲಿ ಶ್ರೀರಾಮನ ಮೂರ್ತಿ ಪ್ರಾಣ ಪ್ರತಿಷ್ಟಾಪನೆ ಪ್ರಯುಕ್ತ ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದ ರೀತಿಯಲ್ಲಿ ವ್ಯಾಪಕ ಬಂದೋಬಸ್ತ್ ಯೋಜನೆಯನ್ನು ಕೈಗೊಳ್ಳಲಾಗಿದೆಯಾಗಿದೆ. ಮಂಗಳೂರು ನಗರದಲ್ಲಿ ದೇವಸ್ಥಾನ ಮತ್ತು ಮಂದಿರಗಳಲ್ಲಿ ಒಟ್ಟು 196 ಕಡೆಗಳಲ್ಲಿ ಪೂಜೆ, ಧಾರ್ಮಿಕ ಕಾರ್ಯಕ್ರಮ ನಡೆಯುವ ಸ್ಥಳಗಳನ್ನು ಗುರುತಿಸಲಾಗಿದೆ. ಸಾರ್ವಜನಿಕ ಹಿತದೃಷ್ಟಿಯಿಂದ ಮತ್ತು ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ಸಲುವಾಗಿ ಈ ಕೆಳಕಂಡ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಲಾಗಿದೆಯಾಗಿದೆ. – 131 ಸುಕ್ಷ್ಮ ಪ್ರದೇಶಗಳಲ್ಲಿ ಹಗಲು ರಾತ್ರಿ ಪಿಕೆಟಿಂಗ್ ನೇಮಿಸಿ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. – ನಗರದಾದ್ಯಂತ 57 ಸೆಕ್ಟರ್ ಮೊಬೈಲ್ಗಳನ್ನು 24 ಗಂಟೆ ಹಗಲು ರಾತ್ರಿ ಗಸ್ತಿನಲ್ಲಿರುವ ವ್ಯವಸ್ಥೆಯನ್ನು ಮಾಡಲಾಗಿದೆ. – 14 ಸ್ಥಳಗಳಲ್ಲಿ ಚೆಕ್ಪಾಯಿಂಟ್ಗಳನ್ನು ನಿಯೋಜಿಸಲಾಗಿದೆ. – 9 ಸಿ.ಎ.ಆರ್ ಮತ್ತು 3 ಕೆ.ಎಸ್.ಆರ್.ಪಿ ತುಕಡಿಗಳನ್ನು ನಿಯೋಜಿಸಲಾಗಿದೆ. – ತಡರಾತ್ರಿ ಮತ್ತು ಮುಂಜಾನೆ ವಿಶೇಷ ಗಸ್ತುಗಳನ್ನು ಆಯೋಜಿಸಲಾಗಿದೆ. – ಮಂಗಳೂರು ನಗರದ ಎಲ್ಲಾ ಸಾರ್ವಜನಿಕ…

Read More

ಪುತ್ತೂರು : ಆರ್ಯಾಪು ಗ್ರಾಮದ ಕಮ್ಮಾಡಿ ಎಂಬಲ್ಲಿ 12 ವರ್ಷದ ಹಿಂದೆ ಅಮೃತ ಆಚಾರಿ ಎಂಬುವರಿಗೆ ಆಸಿಡ್ ಎರಚಿದ ಪ್ರಕರಣಕ್ಕೆ ಸಂಬಂಧಿಸಿ ಶಿಕ್ಷೆಗೊಳಗಾಗಿದ್ದ ಹಾಗೂ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ‘ಕನ್ವಿಕ್ಷನ್ ವಾರಂಟ್’ ಆರೋಪಿಗಳಿಬ್ಬರನ್ನು ಸಂಪ್ಯ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಪುತ್ತೂರು ತಾಲೂಕಿನ ಚಿಕ್ಕಮುಡ್ನೂರು ಗ್ರಾಮದ ತಾರಿಗುಡ್ಡೆ ನಿವಾಸಿ ಮೋಹನ್‌ಕುಮಾರ್‌ ಹೆಗ್ಡೆ ಯಾನೆ ಮೋಹನ್ ಮತ್ತು ನರಿಮೊಗರು ಗ್ರಾಮದ ಪ್ರಶಾಂತ್ ಬಂಧಿತರಾಗಿದ್ದಾರೆ. 2012ರಲ್ಲಿ ಆರ್ಯಾಪು ಗ್ರಾಮದ ಕಮ್ಮಾಡಿ ಬಳಿ ಆರೋಪಿಗಳು ಅಮೃತ ಆಚಾರಿ ಎಂಬುವರಿಗೆ ಆಸಿಡ್ ಎರಚಿದ್ದರು. ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪಿಗಳಿಬ್ಬರಿಗೂ ಶಿಕ್ಷೆ ವಿಧಿಸಿತ್ತು. ಶಿಕ್ಷೆ ಅವಧಿ ಮುಗಿದರೂ ಈ ನಡುವೆ ಪಿರ್ಯಾದಿದಾರರು ನ್ಯಾಯಾಲಯಕ್ಕೆ ಅಪೀಲು ಸಲ್ಲಿಸಿದ್ದರಿಂದ ನ್ಯಾಯಾಲಯ ಮತ್ತೆ ಆರೋಪಿಗಳಿಗೆ ಶಿಕ್ಷೆ ವಿಧಿಸಿತ್ತು. ಆದರೆ, ಆರೋಪಿಗಳು ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದರು. ಈ ಕಾರಣದಿಂದ ನ್ಯಾಯಾಲಯ ಅವರಿಬ್ಬರ ವಿರುದ್ಧ ‘ಕನ್ವಿಕ್ಷನ್ ವಾರಂಟ್’ ಆದೇಶ ಹೊರಡಿಸಿತ್ತು. ಸಂಪ್ಯ ಗ್ರಾಮಾಂತರ ಠಾಣೆ ಇನ್‌ಸ್ಪೆಕ್ಟರ್‌ ರವಿ ಬಿ.ಎಸ್.,…

Read More

ಫೆಬ್ರವರಿ 1ರಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡಿಸುತ್ತಿದ್ದಾರೆ. ೨೦೨೪ ರ ಚುನಾವಣೆಗಿಂತ ಮೊದಲಿನ ಬಜೆಟ್, ಇದು ಮಧ್ಯಂತರ ಬಜೆಟ್ ಆಗಿರುತ್ತದೆ. ಬಜೆಟ್ನಲ್ಲಿ ದೊಡ್ಡ ಘೋಷಣೆ, ಸುಧಾರಣಾ ಕ್ರಮಗಳ ಸಾಧ್ಯತೆ ಕಡಿಮೆಯಾದರೂ ಸಂಬಳದಾರರಿಗೆ ಕೆಲವಿಷ್ಟು ನಿರೀಕ್ಷೆಗಳಿವೆಯಾಗಿದೆ. ಆದಾಯ ತೆರಿಗೆ ಪಾವತಿದಾರರಿಗೆ 50,000 ರೂ ಆದಾಯಕ್ಕೆ ಪ್ರಮಾಣಿತ ಕಡಿತವಿದೆ. ಇದನ್ನು ಇನ್ನಷ್ಟು ಹೆಚ್ಚಿಸಬೇಕು ಎಂಬ ಅನಿಸಿಕೆ ಜೋರಾಗಿದೆ. ಹಳೆಯ ತೆರಿಗೆ ಪದ್ಧತಿಯಲ್ಲಿ ಹೆಲ್ತ್ ಇನ್ಷೂರೆನ್ಸ್, ಎನ್ಪಿಎಸ್ ಹಣಕ್ಕೆ ತೆರಿಗೆ ಕಡಿತ ಸೌಲಭ್ಯವಿದೆ. ಇದನ್ನು ಹೊಸ ರಿಜೈಮ್ಗೂ ಕೊಡಬೇಕು ಎನ್ನುವ ನಿರೀಕ್ಷೆಯಿದೆ. ಹೆಲ್ತ್ ಇನ್ಷೂರೆನ್ಸ್ನ ಪ್ರೀಮಿಯಮ್ ಮೊತ್ತ ಈಗ ಬಹಳ ಹೆಚ್ಚಾಗಿದೆ. ಹೀಗಾಗಿ, ಸದ್ಯ ವರ್ಷಕ್ಕೆ 25,000 ರೂ ಮೊತ್ತಕ್ಕೆ ನೀಡಲಾಗುವ ವಿನಾಯಿತಿ ಮಿತಿ ಹೆಚ್ಚಿಸಬೇಕು. ಹೌಸ್ ರೆಂಟ್ ಅಲೋಯನ್ಸ್ ನ ಮೊತ್ತಕ್ಕೆ ತೆರಿಗೆ ವಿನಾಯಿತಿ ಸೌಲಭ್ಯ ಇದೆ. ಆದರೆ, ಇದು ಕೇವಲ ನಾಲ್ಕು ಮೆಟ್ರೋ ನಗರಗಳಿಗೆ ಮಾತ್ರ ಸೀಮಿತವಾಗಿದೆ. ಬೆಂಗಳೂರು, ಹೈದರಾಬಾದ್, ಪುಣೆ, ಅಹ್ಮದಾಬಾದ್ ಮೊದಲಾದ ನಗರಗಳಿಗೂ ಎಚ್ಆರ್ಎ ತೆರಿಗೆ ವಿನಾಯಿತಿ…

Read More

ತಮಿಳುನಾಡು ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆಯು ರಾಮಮಂದಿರ ಉದ್ಘಾಟನೆ ಕಾರ್ಯಕ್ರಮ ವೀಕ್ಷಣೆಯನ್ನು ನಿಷೇಧಿಸಿಲ್ಲ. ಈ ರೀತಿಯ ಯಾವುದೇ ಆದೇಶಗಳನ್ನು ನಾವು ಜಾರಿ ಮಾಡಿಲ್ಲ. ರಾಮಮಂದಿರಗಳಲ್ಲಿ ಚಟುವಟಿಕೆ ನಡೆಸಲು ಯಾವುದೇ ಅಡ್ಡಿಮಾಡಿಲ್ಲ ಎಂದು ಸ್ಪಷ್ಟಪಡಿಸಿದೆ. ಈ ಮೂಲಕ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಆರೋಪವನ್ನು ತಮಿಳುನಾಡು ಸರ್ಕಾರ ತಳ್ಳಿಹಾಕಿದೆ. ರಾಮಮಂದಿರ ಉದ್ಘಾಟನೆ ಸಹಿತ ನಾನಾ ಧಾರ್ಮಿಕ ಚಟುವಟಿಕೆಗಳ ನೇರ ವೀಕ್ಷಣೆಗೆ ತಮಿಳುನಾಡು ಸರ್ಕಾರ ಅವಕಾಶ ನೀಡುತ್ತಿಲ್ಲ. ಕೇಬಲ್‌ ಕಡಿತಗೊಳಿಸಿ ಕಾರ್ಯಕ್ರಮ ವೀಕ್ಷಿಸದಂತೆ ಮಾಡಲಾಗುತ್ತಿದೆ. ತಮಿಳುನಾಡು ಹಿಂದೂ ವಿರೋಧಿ ಹಾಗೂ ದ್ವೇಷದ ಪ್ರಕ್ರಿಯೆ ಎಂದು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌ ಗಂಭೀರ ಆರೋಪ ಮಾಡಿದ್ದಾರೆ. ತಮಿಳುನಾಡಿನ ಸೇಲಂನಲ್ಲಿ ಆಯೋಜಿಸಿರುವ ಡಿಎಂಕೆ ಯುವ ಸಮಾವೇಶದ ಯಶಸ್ಸನ್ನು ದಿಕ್ಕುತಪ್ಪಿಸುವ ನಿಟ್ಟಿನಲ್ಲಿಯೇ ರಾಮಮಂದಿರ ಕಾರ್ಯಕ್ರಮ ವೀಕ್ಷಣೆಗೆ ಅಡ್ಡಿಪಡಿಸುತ್ತಿದ್ದಾರೆ ಎನ್ನುವ ಸುಳ್ಳು ಸುದ್ದಿಯನ್ನು ಹಬ್ಬಿಸಲಾಗುತ್ತಿದೆ ಎಂದು ತಮಿಳುನಾಡು ಹಿಂದೂ ಧಾರ್ಮಿಕ ದತ್ತಿ ಇಲಾಖೆ ಸಚಿವ ಸೇಕರ ಬಾಬು ಹೇಳಿದ್ದಾರೆಯಾಗಿದೆ. .

Read More

ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಇದೀಗ ಮತ್ತೊಮ್ಮೆ ಸಿಡಿದಿದ್ದಾರೆ. ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರಮೇಶ್ ಜಾರಕಿಹೊಳಿ, ಸಿಡಿ ಪ್ರಕರಣದಲ್ಲಿ ನನಗೆ ಶಿಕ್ಷೆ ಮಾಡಿಸಬೇಕು ಅಂದುಕೊಂಡಿದ್ದರು,  ಆದರೆ ಆಗಲಿಲ್ಲವಾಗಿದೆ. ಸಿಡಿ ಪ್ರಕರಣದಲ್ಲಿ ವಿಫಲನಾಗಿ ಈಗ 420 ಕೇಸ್ ದಾಖಲು ಮಾಡಿಸಿ ಮಾಧ್ಯಮಗಳಲ್ಲಿ ನನ್ನ ಹೆಸರು ನೋಡಿ ಸಮಾಧಾನ ಮಾಡಿಕೊಳ್ಳುತ್ತಿದ್ದಾರೆ. ಅವರ ಅಪ್ಪ ಬಂದ್ರೂ ನನ್ನನ್ನು ಹತ್ತಿಕ್ಕಲು ಆಗಲ್ಲ ಎಂದು ಮತ್ತೆ ಡಿಸಿಎಂ ಡಿ.ಕೆ ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆಯಾಗಿದೆ. ಸಿದ್ದರಾಮಯ್ಯರವರು ಒಳ್ಳೆಯ ಸಿಎಂ ಆದ್ರೆ 2018ರಲ್ಲಿದ್ದಂತೆ ಈಗ ಹಾಗಿಲ್ಲ. ಕೊತ್ವಾಲ್‌ ಶಿಷ್ಯ ಡಿಸಿಎಂ ಆಗಿದ್ದಾರೆ. ಹೀಗಾಗಿ ಸಿದ್ದರಾಮಯ್ಯರವರಿಗೆ ಬೆಲೆ ಇಲ್ಲ. ಕೊತ್ವಾಲ್‌ ಶಿಷ್ಯ ಸಿಎಂ ಆಗಿದ್ದರೆ ನಮ್ಮ ಆಸ್ತಿ ಎಲ್ಲಾ ಅವರ ಹೆಸರಿಗೆ ಆಗುತಿತ್ತು. ದೇವರು ದೊಡ್ಡವನು ಮುಖ್ಯಮಂತ್ರಿ ಆಗಿ ಸಿದ್ದರಾಮಯ್ಯ ಆಗಿದ್ದಾರೆ. ಕೊತ್ವಾಲ್‌ ಶಿಷ್ಯ ನನ್ನ ವಿರುದ್ಧ 420 ಕೇಸ್ ಹಾಕಿಸಿದ್ದಾರೆ ಎಂದು ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಹೆಸರು ಹೇಳದೇ ಡಿಕೆ ಶಿವಕುಮಾರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಮುಂದಿನ ದಿನಗಳಲ್ಲಿ…

Read More