ಕೆಎನ್ಎನ್ ಡಿಜಿಟಲ್ ಡೆಸ್ಕ್ : ಅನಿಶ್ಚಿತ ಆರ್ಥಿಕತೆ, ಕೋವಿಡ್ ಹೊಡೆತದಿಂದಾಗಿ ಆನ್ ಲೈನ್ ಶಾಂಪಿಂಗ್ ದೈತ್ಯ ಕಂಪನಿ ಅಮೆಜಾನ್ ಸುಮಾರು 18 ಸಾವಿರಕ್ಕೂ ಹೆಚ್ಚು ಉದ್ಯೋಗಿಗಳನ್ನು ಕಡಿತಗೊಳಿಸಲು ಮುಂದಾಗಿದೆ.
ಈ ಕುರಿತಂತೆ ಸಿಇಒ ಆಂಡಿ ಜಾಸ್ಸಿ ತನ್ನ ವೆಬ್ಸೈಟ್ನಲ್ಲಿ ಪ್ರಕಟಿಸಿದ್ದು, ನಾವು ನವೆಂಬರ್ನಲ್ಲಿ ಮಾಡಿದ ಕಡಿತಗಳ ಬಳಿಕ ಇಂದು 18,000 ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕಲು ಯೋಚಿಸಿದ್ದೇವೆ ಎಂದು ಹೇಳಿದ್ದಾರೆ.
ಉದ್ಯೋಗ ಕಡಿತದ ನಿರ್ಧಾರ ಸಾವಿರಾರು ಉದ್ಯೋಗಿಗಳ ಮೇಲೆ ಪರಿಣಾಮ ಬೀರುತ್ತದೆ ಎಂಬುದು ನಮ್ಮ ಅರಿವಿಗೆ ಇದೆ. ಇದೇ ಕಾರಣಕ್ಕೆ ನಾವು ಈ ನಿರ್ಧಾರಗಳನ್ನು ಲಘುವಾಗಿ ಪರಿಗಣಿಸುವುದಿಲ್ಲ ಎಂದು ಅಮೆಜಾನ್ ಸಿಇಒ ಸ್ಪಷ್ಟಪಡಿಸಿದ್ದಾರೆ.
Our CEO Andy Jassy just shared a message to Amazon employees. https://t.co/cw5Dl6WY84
— Amazon News (@amazonnews) January 5, 2023
ನಮ್ಮ ನಿರ್ಣಯದಿಂದ ತೊಂದರೆಗೆ ಸಿಲುಕುವ ಉದ್ಯೋಗಿಗಳನ್ನು ನಾವು ಬೆಂಬಲಿಸುವ ಕೆಲಸ ಮಾಡುತ್ತಿದ್ದೇವೆ. ಪ್ರತ್ಯೇಕ ಪಾವತಿ, ಪರಿವರ್ತನೆಯ ಆರೋಗ್ಯ ವಿಮೆ ಪ್ರಯೋಜನಗಳು ಮತ್ತು ಬಾಹ್ಯ ಉದ್ಯೋಗ ನಿಯೋಜನೆ ಬೆಂಬಲವನ್ನು ಒಳಗೊಂಡಿರುವ ಪ್ಯಾಕೇಜ್ಗಳನ್ನು ಒದಗಿಸುತ್ತಿದ್ದೇವೆ ಎಂದು ಹೇಳಿದ್ದಾರೆ.
ನಮ್ಮ ವಾರ್ಷಿಕ ಯೋಜನಾ ಪ್ರಕ್ರಿಯೆಯನ್ನು ನಾವು ಪೂರ್ಣಗೊಳಿಸಿಲ್ಲ, 2023 ರ ಆರಂಭದಲ್ಲಿ ಹೆಚ್ಚಿನ ಪಾತ್ರವನ್ನು ಕಡಿತಗೊಳಿಸಲಾಗುವುದು ಎಂದು ನಾನು ನಿರೀಕ್ಷಿಸಿದ್ದೇನೆ ಎಂದು ಸಿಇಒ ಹೇಳಿದ್ದಾರೆ.
ಅಮೆಜಾನ್ ಹೋದ ನವೆಂಬರ್ನಲ್ಲಿ 10,000 ಉದ್ಯೋಗಿಗಳ ವಜಾಗಳನ್ನು ಘೋಷಿಸಿತ್ತು. ಕಂಪನಿಯು ವಿವಿಧ ವಿಭಾಗದಲ್ಲಿನ ಉದ್ಯೋಗಿಗಳನ್ನು ತೆಗೆದು ಹಾಕಲು ಮುಂದಾಗಿದೆ.
BIGG NEWS : ಮಾಜಿ IPS ಅಧಿಕಾರಿ ಅಣ್ಣಾಮಲೈ ಮೇಲೆ ತಮಿಳು ನಟಿಯಿಂದ ಗಂಭೀರ ಆರೋಪ
ಕೋಪಗೊಂಡ ಹೆಂಡತಿ ಜೊತೆ ಬದುಕೋದು ಜೀವಮಾನದ ಚಿತ್ರಹಿಂಸೆ ; ಪತಿ ವಿಚ್ಛೇದನ ಅರ್ಜಿ ಅಂಗೀಕರಿಸಿದ ಹೈಕೋರ್ಟ್
BIGG NEWS: ಆಫ್ರಿಕಾದ ಮಲಾವಿಯಲ್ಲಿ ಕಾಲರಾ ಹೆಚ್ಚಳ : ರೋಗಕ್ಕೆ 643 ಜನರು ಸಾವು | Cholera outbreak in Malawi